in

ಭಗವಂತ ಶ್ರೀ ಕೃಷ್ಣನ ಮೊಮ್ಮಗ ಅನಿರುದ್ಧ

ಶ್ರೀ ಕೃಷ್ಣನ ಮೊಮ್ಮಗ
ಶ್ರೀ ಕೃಷ್ಣನ ಮೊಮ್ಮಗ

ಅನಿರುದ್ಧ ಅಂದರೆ “ಅನಿಯಂತ್ರಿತ”, “ಅನಿರ್ಬಂಧಿತ” ಅಥವಾ “ಅಡೆತಡೆಗಳಿಲ್ಲದ” ಪ್ರದ್ಯುಮ್ನನ ಮಗ ಮತ್ತು ಕೃಷ್ಣನ ಮೊಮ್ಮಗ. ಅವನು ಬಹಳವಾಗಿ ತನ್ನ ಅಜ್ಜನಂತೆಯೇ ಇದ್ದನು ಎಂದು ಹೇಳಲಾಗಿದೆ, ಅನಿರುದ್ಧನು ಪರಮಾತ್ಮನಾಗಿ ಪ್ರತಿ ಆತ್ಮನಲ್ಲಿ ಇರುತ್ತಾನೆ.

ಪರಮಾತ್ಮ ಎಂದರೆ ಯಾರು?

ಹಿಂದೂ ತತ್ವಶಾಸ್ತ್ರದ ಪ್ರಕಾರ, ಪರಮಾತ್ಮನನ್ನು, ಸಕಲ ಜೀವಿಗಳ ಏಕಮೇವ-ಅದ್ವಿತೀಯ ಆತ್ಮನಾಗಿ ಪರಿಗಣಿಸಲಾಗುತ್ತದೆ. ಪರಮಾತ್ಮನು, ಸಕಲ ಜೀವಚರಗಳಲ್ಲು ವ್ಯಾಪ್ತನಾಗಿದ್ದಾನೆ.

ಉಪನಿಷದಗಳ ಪ್ರಕಾರ, ಆತ್ಮ ಹಾಗು ಪರಮಾತ್ಮ ನನ್ನು, ಮರದ ಮೇಲೆ ಕುಳಿತಿರುವ ಪಕ್ಷಿಗಳಿಗೆ ಹೊಲಿಸಿದರೆ, ಆತ್ಮವು ಮರದ ಹಣ್ಣುಗಳನ್ನು ತಿನ್ನುತಿದ್ದಾಗ ಕರ್ಮ, ಪರಮಾತ್ಮನು, ಇದನ್ನೆಲ್ಲಾ ಸಾಕ್ಷಿಯಂತೆ, ವೀಕ್ಷಿಸುತಿರುತ್ತಾನೆ.

ಎಷ್ಟರ ಮಟ್ಟಿಗೆ ಎಂದರೆ ಅವನು ಜನ ಅವತಾರ, ವಿಷ್ಣುವಿನ ಅವತಾರನಾಗಿರಬಹುದು. ನಾಲ್ಕನ್ನು ವಿಷ್ಣು ತತ್ತ್ವ ಎಂದು ಪರಿಗಣಿಸಲಾಗುತ್ತದೆ.

ವಿಷ್ಣು ತ್ರಿಮೂರ್ತಿಗಳಲ್ಲಿ ಒಬ್ಬನಾಗಿದ್ದು, ಸಕಲ ಲೋಕಗಳ ಪಾಲಕ ಎಂದು ಹಿಂದೂ ಧರ್ಮ ನಂಬುತ್ತದೆ. ಭಗವದ್ಗೀತೆಯಲ್ಲಿ ವರ್ಣಿಸಿದಂತೆ ‘ವಿಶ್ವರೂಪಿ’ ನಾರಾಯಣ ಎಂದೂ ಕರೆಯುತ್ತಾರೆ. ಧರ್ಮ ಸಂಸ್ಥಾಪನೆಗಾಗಿ ದಶಾವತಾರ ತಾಳಿ ಭೂಲೋಕವನ್ನು ರಕ್ಷಿಸಿದಾತ ಎಂದು ಪುರಾಣಗಳು ಕೊಂಡಾಡುತ್ತವೆ.

ವಿಷ್ಣು ಜನರನ್ನು ರಕ್ಷಿಸುವ ದೇವನಾದರೂ ಕೆಲವು ಶಾಪಗಳಿಗೆ ಒಳಗಾಗಿರುವುದನ್ನು ಪುರಾಣಗಳು ತಿಳಿಸುತ್ತವೆ. ಒಮ್ಮೆ ವಿಷ್ಣು ಮಹಾಲಕ್ಷ್ಮಿಯ ಮುಖವನ್ನು ನೋಡುತ್ತಾ ಕಾರಣವಿಲ್ಲದೆ ನಗಲಾರಂಭಿಸಿದ. ಇದನ್ನು ಕಂಡು ಲಕ್ಷ್ಮಿ ತನ್ನ ಬಗ್ಗೆತಮಾಷೆ ಮಾಡುತ್ತಿರುವನೆಂದು ಬಗೆದು ನಿನ್ನ ದೇಹದಿಂದ ತಲೆ ಬೇರ್ಪಡಲಿ ಎಂದು ಶಪಿಸಿದಳು. ಇದೇ ಸಂದರ್ಭದಲ್ಲಿ ಹಯಗ್ರೀವ ಎಂಬ ಅಸುರ ಒಂದು ಸಾವಿರ ವರ್ಷಕಾಲ ತಪಸ್ಸು ಮಾಡಿ ಅನೇಕ ವರಗಳ ಜೊತೆಗೆ ಕುದುರೆ ತಲೆಯುಳ್ಳ ಮಾನವನಿಂದ ಮಾತ್ರ ಸಾವೆಂದು ಮತ್ತೊಂದು ವರವನ್ನು ಪಡೆದುಕೊಂಡಿದ್ದ. ಹೀಗೆ ಅದ್ಭುತ ಶಕ್ತಿಯನ್ನು ಪಡೆದ ಹಯಗ್ರೀವ ದೇವಲೋಕಕ್ಕೆ ಮುತ್ತಿಗೆ ಹಾಕಿದ. ಲಕ್ಷ್ಮಿಯ ಶಾಪದಂತೆ ವಿಷ್ಣು ತನ್ನ ತಲೆಯನ್ನು ಕಳೆದುಕೊಂಡ. ಆಗ ವಿಶ್ವಕರ್ಮ ಕುದುರೆ ತಲೆಯನ್ನು ವಿಷ್ಣುವಿನ ದೇಹಕ್ಕೆ ಜೋಡಿಸಿದ. ಲಕ್ಷ್ಮಿಯ ಶಾಪದಿಂದ ವಿಷ್ಣು ಹಯಗ್ರೀವ ಅಸುರನನ್ನು ಕೊಲ್ಲಲು ಸಾಧ್ಯವಾಯಿತು.

ಭಗವಂತ ಶ್ರೀ ಕೃಷ್ಣನ ಮೊಮ್ಮಗ ಅನಿರುದ್ಧ
ವಿಷ್ಣುವಿನ ಹಯಗ್ರೀವ ಅವತಾರ

ದೇವಾಸುರರ ನಡುವೆ ಆಗಾಗ ನಡೆಯುತ್ತಿದ್ದ ಯುದ್ಧಗಳಲ್ಲಿ ಒಮ್ಮೆ ಅಸುರರಿಗೆ ಸೋಲುಂಟಾಯಿತು. ಆಗ ಅಸುರರು ಭೃಗುಮುನಿಯ ಹೆಂಡತಿಯಾದ ಪ್ರಲೋಮಳ ಬಳಿಗೆ ಹೋಗಿ ರಕ್ಷಣೆ ಬೇಡಿದರು. ಈಕೆ ದೇವತೆಗಳನ್ನು ನಾಶ ಮಾಡಲು ತಪಸ್ಸನ್ನಾರಂಭಿಸಿದಳು. ಇದನ್ನು ತಿಳಿದ ವಿಷ್ಣು ತನ್ನ ಸುದರ್ಶನ ಚಕ್ರವನ್ನು ಪ್ರಯೋಗಿಸಿ ಆಕೆಯನ್ನು ಕೊಂದ. ಇದರಿಂದ ಭೃಗು ಮುನಿ ಕೋಪಗೊಂಡು, ಮಾನವ ಜನ್ಮಪಡೆದು ಹೆಂಡತಿಯನ್ನು ಅಗಲಿ ವಿರಹ ವೇದನೆಯನ್ನು ಅನುಭವಿಸೆಂದು ವಿಷ್ಣುವಿಗೆ ಶಾಪ ನೀಡಿದ. ಈ ಶಾಪವೇ ರಾಮಾವತಾರಕ್ಕೆ ಕಾರಣ. ಹೀಗೆ ವಿಷ್ಣು ಹಲವು ಶಾಪಗಳನ್ನು ಪಡೆದು ದೇವತೆಗಳ ರಕ್ಷಣೆಗೆ ಕಾರಣನಾದ ಕಥೆಗಳು ಹಲವಾರಿವೆ.

ಅನಿರುದ್ಧ ಬಾಣಾಸುರನ ಮಗಳು, ಉಷೆ ಎಂಬ ಹೆಸರಿನ ದೈತ್ಯರ ರಾಜಕುಮಾರಿ ಅನಿರುದ್ಧನನ್ನು ಪ್ರೀತಿಸಿದಳು. ಅವನನ್ನು ಮಾಯಾ ಪ್ರಭಾವದಿಂದ ತನ್ನ ತಂದೆಯ ನಗರ ಅಸ್ಸಾಮ್‍ನ ಸೋನಿತ್‍ಪುರದಲ್ಲಿರುವ ತನ್ನ ವಸತಿಗೆ ಕರೆತರಸಿದಳು. ಆದರೆ, ಕೆಲವು ದಂತಕಥೆಗಳ ಪ್ರಕಾರ, ಶೋನಿತ್‍ಪುರವನ್ನು ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ ಸರಾಹನ್‍ನೊಂದಿಗೂ ಗುರುತಿಸಲಾಗಿದೆ. ಅವರ ದಂತಕಥೆಗಳ ಪ್ರಕಾರ ಹೋದರೆ, ಕೃಷ್ಣನು ಪ್ರದ್ಯುಮ್ನನನ್ನು ಶೋನಿತ್‍ಪುರ್‍ನ ರಾಜನನ್ನಾಗಿ ಮತ್ತು ಅನಂತರ ಬುಶಹರ್ ರಾಜ್ಯದ ರಾಜನನ್ನಾಗಿ ಮಾಡಿದನು. ಬಾಣನು ಅವನನ್ನು ವಶಪಡಿಸಿಕೊಳ್ಳಲು ಕಾವಲುಗಾರರನ್ನು ಕಳಿಸಿದನು, ಆದರೆ ಆ ಧೀರ ಯುವಕನು, ಕಬ್ಬಿಣದ ಗದೆಯ ಸಹಾಯದಿಂದ ತನ್ನ ಆಕ್ರಮಣಕಾರರನ್ನು ಸಂಹರಿಸಿದನು. ಬಾಣನು ನಂತರ ಮಾಯಾ ಶಕ್ತಿಗಳನ್ನು ಉಪಯೋಗಿಸಿ ಅವನನ್ನು ವಶಪಡಿಸಿಕೊಂಡನು.

ಭಗವಂತ ಶ್ರೀ ಕೃಷ್ಣನ ಮೊಮ್ಮಗ ಅನಿರುದ್ಧ
ಅನಿರುದ್ಧ ಮತ್ತು ಉಷೆ

ಅನಿರುದ್ಧನು ದೂರಕ್ಕೆ ಸಾಗಿಸಲ್ಪಟ್ಟಿರುವುದು ಗೊತ್ತಾದ ಮೇಲೆ, ಕೃಷ್ಣ, ಬಲರಾಮ, ಮತ್ತು ಪ್ರದ್ಯುಮ್ನರು ಅವನನ್ನು ರಕ್ಷಿಸಲು ಹೋದರು. ಬಾಣಾಸುರನು ಶಿವನ ಮಹಾಭಕ್ತನಾಗಿದ್ದು ೧೦೦೦ ತೋಳುಗಳನ್ನು ಹೊಂದಿದ್ದನು. ಈ ಕಾರಣದಿಂದ ಯಾರೂ ಅವನೊಡನೆ ಕಾದಾಡಲು ಮನಸ್ಸು ಮಾಡಿರಲಿಲ್ಲ. ತನ್ನ ಅಹಂಕಾರದಿಂದ ಕುರುಡನಾಗಿ, ತನ್ನಷ್ಟು ಬಲಶಾಲಿಯಾದ ಯಾರೊಡನೆಯಾದರೂ ಕಾದಾಡಲು ಅವಕಾಶ ನೀಡುವಂತೆ ಅವನು ಶಿವನನ್ನು ಕೇಳಿದನು. ಹಾಗಾಗಿ, ಶಿವನು ಅವನಿಗೆ ವಿಷ್ಣುವಿನ ಅವತಾರನಾದ ಕೃಷ್ಣನೊಂದಿಗಿನ ಯುದ್ಧದಲ್ಲಿ ಸೋಲಾಗಲಿ ಎಂದು ಶಾಪ ಕೊಟ್ಟನು.

ಕೆಲವು ತಿಂಗಳ ನಂತರವಷ್ಟೇ ಕೃಷ್ಣನಿಗೆ ತನ್ನ ಮೊಮ್ಮಗ ಎಲ್ಲಿದ್ದಾನೆಂದು ಗೊತ್ತಾಯಿತು ಮತ್ತು ದೊಡ್ಡ ಸೇನೆಯೊಂದಿಗೆ ಬಾಣಾಸುರನ ಮೇಲೆ ಆಕ್ರಮಣ ಮಾಡಿದನು. ಘೋರ ಯುದ್ಧ ನಡೆಯಿತು. ಕೃಷ್ಣನೇ ಸ್ವತಃ ಬಾಣಾಸುರನ ಅಸಂಖ್ಯಾತ ತೊಳುಗಳನ್ನು ಕತ್ತರಿಸಿದನು. ಆದರೆ ಶಿವನು ಬಾಣಾಸುರನಿಗೆ ಸಹಾಯ ಮಾಡಿದನು. ಬಾಣಾಸುರನ ನಾಲ್ಕು ಬಾಹುಗಳನ್ನು ಉಳಿಸುವುದಾಗಿ ಕೃಷ್ಣನು ಶಿವನಿಗೆ ಪ್ರಮಾಣ ಮಾಡಿದನು. ಬಾಣಾಸುರನು ಕೃಷ್ಣನಿಗೆ ಸಾಷ್ಟಾಂಗ ನಮಸ್ಕರಿಸಿ ಅನಿರುದ್ಧ ಮತ್ತು ಅವನ ವಧು ಉಷೆಯನ್ನು ಕರೆಸಿದನು. ಎಲ್ಲರೂ ದ್ವಾರಕೆಗೆ ಹಿಂದಿರುಗಿದರು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಬ್ರಹ್ಮಪುತ್ರ ನದಿ

ಏಷ್ಯಾದ ಪ್ರಮುಖ ನದಿಗಳಲ್ಲಿ ಒಂದು ಬ್ರಹ್ಮಪುತ್ರ ನದಿ

ತುಪ್ಪ

ಕೌರವರು ಕೂಡಾ ತುಪ್ಪದ ಮಡಿಕೆಯಲ್ಲಿ ಜನಿಸಿದರಂತೆ ಅಂತಹ ತುಪ್ಪದ ವಿಷಯ