ಸರಸ್ವತಿ ಹಿಂದೂ ಧರ್ಮದಲ್ಲಿ ಜ್ಞಾನ ಮತ್ತು ಕಲೆಗಳ ದೇವತೆ. ಸರಸ್ವತಿಯನ್ನು ಬ್ರಹ್ಮದೇವರ ಪತ್ನಿಯೆಂದೂ, ಶ್ವೇತವಸ್ತ್ರಗಳನ್ನು ಧರಿಸಿದವಳೆಂದೂ ಪೂಜಿಸುವರು.
ಭಾರತೀಯ ಸಂಸ್ಕೃತಿಯಲ್ಲಿ ಸರಸ್ವತಿಯ ಪಾತ್ರ ಅತ್ಯಂತ ಮಹತ್ತರವಾದುದು.ನದಿ, ನದಿ ದೇವತೆ, ಶಾರದೆ, ವಾಗ್ದೇವತೆ, ವಿದ್ಯಾಧಿದೇವತೆ, ಜ್ಞಾನದೇವತೆ. ಹೀಗೆ ಹಲವಾರು ಸ್ವರೂಪಗಳಲ್ಲಿ ಸರಸ್ವತಿಯು ಪರಿಚಿತಳು. ಬ್ರಹ್ಮನ ಮಗಳೆಂದೂ, ಬ್ರಹ್ಮನ ಸೃಷ್ಟಿಯಾದ ವೇದಗಳಿಗೆ ಅಧಿದೇವತೆಯೆಂದೂ, ವೇದಮಾತೆಯೆಂದೂ ಸರಸ್ವತಿಯನ್ನು ಸ್ತುತಿಸಲಾಗಿದೆ. ಬ್ರಹ್ಮನ ಮಗಳು ಎಂಬ ಪರಿಕಲ್ಪನೆಯನ್ನು ಮೀರಿ, ಸರಸ್ವತಿಗೆ ‘ಬ್ರಹ್ಮನ ಶಕ್ತಿ’ ಎಂಬ ಸ್ವರೂಪವೂ ಬೆಳೆದು ಬಂದಿದೆ.
‘ಸರಸ್ವತಿ’ ಎಂದರೆ ಸಾಮಾನ್ಯವಾಗಿ ನಮ್ಮ ಕಣ್ಣಮುಂದೆ ನಿಲ್ಲುವ ರೂಪವೆಂದರೆ, ಚತುರ್ಭುಜಗಳು, ಎರಡು ಕೈಗಳಲ್ಲಿ ವೀಣೆ, ಇನ್ನೊಂದರಲ್ಲಿ ಅಕ್ಷಮಾಲೆ, ನಾಲ್ಕನೆಯದರಲ್ಲಿ ಪುಸ್ತಕ. ಬಿಳಿ ತಾವರೆಯ ಮೇಲೆ ಅಥವ ಬಂಡೆಯ ಮೇಲೆ ಆಸೀನಳಾಗಿರುವ ಶ್ವೇತವಸ್ತ್ರ ಧಾರಿಣಿ, ಶುಭ್ರವರ್ಣದ ಧವಳಕೀರ್ತಿಯ ಸರಸ್ವತಿ ಚಿತ್ರ.
ಬೌದ್ಧಧರ್ಮದ ‘ಕಾರಂಡ ವ್ಯೂಹ’ ಎಂಬ ಗ್ರಂಥದಲ್ಲಿ ದೇವತೆಗಳ ಸೃಷ್ಟಿಯನ್ನು ಕುರಿತು ಹೇಳಲಾಗಿರುವ ಪ್ರಕಾರ, ಆದಿಬುದ್ಧನ ಆದೇಶದ ಮೇರೆಗೆ ಪದ್ಮಪಾಣಿಯು ಮುಖ್ಯವಾಗಿ ಮೂರು ಗುಣಗಳನ್ನು ಅಂದರೆ ಬ್ರಹ್ಮ,ವಿಷ್ಣು,ಮತ್ತು ಮಹಾದೇವ ಇವರನ್ನು ಸೃಷ್ಟಿಸುತ್ತಾನೆ.
ಬೋಧಿಸತ್ವನಿಂದ ವಾಯು, ಭೂಮಿ, ನೀರು, ಮಳೆ, ಸೂರ್ಯ, ಚಂದ್ರ ಮೊದಲಾದವರು ಸೃಷ್ಟಿಯಾಗುತ್ತಾರೆ. ಇವರ ಜತೆಯಲ್ಲಿಯೇ ಸಂಗೀತ ಮತ್ತು ಕಾವ್ಯದ ದೇವತೆಯಾಗಿ ಸರಸ್ವತಿ ಹಾಗೂ ಸೌಂದರ್ಯ ಮತ್ತು ಸಂಪತ್ತಿನ ದೇವತೆಯಾಗಿ ಲಕ್ಷ್ಮಿಯರು ಸೃಷ್ಟಿಯಾಗುತ್ತಾರೆ.
ಆದರೆ ಬೌದ್ಧಧರ್ಮದ ಇನ್ನೊಂದು ಸೃಷ್ಟಿ ಪುರಾಣವಾದ ‘ಗುಣ-ಕಾರಂಡವ್ಯೂಹ’ ಪ್ರಕಾರ- ಪದ್ಮಪಾಣಿಯ ಭುಜಗಳ ನಡುವಿನಿಂದ ಬ್ರಹ್ಮ, ಆತನ ಎರಡು ಕಣ್ಣುಗಳಿಂದ ಸೂರ್ಯ ಚಂದ್ರರು, ಬಾಯಿಯಿಂದ ಗಾಳಿ, ಹಲ್ಲುಗಳಿಂದ ಸರಸ್ವತಿ, ಮಂಡಿಯಿಂದ ಲಕ್ಷ್ಮಿ, ಪಾದದಿಂದ ಭೂಮಿ, ನಾಭಿಯಿಂದ ನೀರು ಮೊದಲಾದವು ಸೃಷ್ಟಿಯಾಗುತ್ತವೆ. ಇದು ಹಿಂದೂ ಪುರಾಣಗಳಲ್ಲಿ ಬರುವ ಸರಸ್ವತಿಯ ಸೃಷ್ಟಿ ವಿಚಾರವನ್ನೇ ಅಲ್ಪಸ್ವಲ್ಪ ಹೋಲುತ್ತದೆ. ಆಸನ, ಭುಜಸಂಖ್ಯೆ, ಆಯುಧಗಳು, ಮುದ್ರೆಗಳು ಇವುಗಳನ್ನು ಆಧರಿಸಿ ವಜ್ರ ಸರಸ್ವತಿ, ಮಹಾ ಸರಸ್ವತಿ, ವಜ್ರವೀಣಾ ಸರಸ್ವತಿ, ವಜ್ರ ಶಾರದೆ, ಆರ್ಯಾ ಸರಸ್ವತಿ, ರಕ್ತ ಸರಸ್ವತಿ, ಸೀತಾ ಸರಸ್ವತಿ, ನೀಲ ಸರಸ್ವತಿ ಮೊದಲಾದ ಸ್ವರೂಪಗಳನ್ನು ಹೇಳಲಾಗಿದೆ.
ಆದಿಜಿನರ ಮುಖದಿಂದ ಉದಯಿಸಿ, ಜಿನರ ಮುಖದಲ್ಲಿ ನೆಲೆ ನಿಂತ ಸರಸ್ವತಿಯ ಉಗಮ ಮತ್ತು ಶ್ರೇಷ್ಠತೆಯನ್ನು ಜೈನರ ಪವಿತ್ರಗ್ರಂಥವಾದ ‘ಮಹಾಪುರಾಣ’ದಲ್ಲಿ ವಿವರವಾಗಿ ವರ್ಣಿಸಲಾಗಿದೆ. ಜೈನತತ್ವದ ಬಗ್ಗೆ ಭರತನಿಗುಂಟಾದ ಸಂಶಯವನ್ನು ನಿವಾರಿಸಲು ಆದಿಜಿನನಾದ ವೃಷಭದೇವನು ಮಾತನಾಡುತ್ತಾನೆ.
ಚತುರ್ವೇದಗಳಲ್ಲಿ ಅತ್ಯಂತ ಪ್ರಾಚೀನವಾದುದು ಋಗ್ವೇದ. ಕ್ರಿ.ಪೂ. ಸುಮಾರು ೩೫೦೦ ವರ್ಷಗಳಷ್ಟು ಸುದೀರ್ಘ ಪ್ರಾಚೀನತೆ ಋಗ್ವೇದಕ್ಕಿದೆ. ಸರಸ್ವತಿಯ ಮೂಲ ಸ್ವರೂಪವನ್ನು ಅರಿಯುವಲ್ಲಿ ಇರುವ ಅತ್ಯಂತ ಪ್ರಾಚೀನವಾದುದೂ, ಅಧಿಕೃತವೂ ಆದ ಆಕರವು ಋಗ್ವೇದವೇ ಆಗಿದೆ. ಇದರಲ್ಲಿ ಸರಸ್ವತಿಯು ಪ್ರಧಾನ ದೇವತೆಯಾಗಿಯೂ ಸ್ತುತಿಗೊಂಡಿದ್ದಾಳೆ. ಇಂದ್ರ, ಅಗ್ನಿ, ರುದ್ರ, ವಿಷ್ಣು ಮೊದಲಾದ ಪ್ರಧಾನ ದೇವತೆಗಳ ಜೊತೆಯಲ್ಲಿಯೂ ಸ್ತುತಿ ಗೊಂಡಿದ್ದಾಳೆ.
ಸುಮಾರು ತೊಂಬತ್ತಕ್ಕೂ ಹೆಚ್ಚು ಋಕ್ಕುಗಳಲ್ಲಿ ಸರಸ್ವತಿಯು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸ್ತುತಿ ಗೊಂಡಿದ್ದಾಳೆ. ಆರನೇ ಮಂಡಲದ ೬೧ನೆಯ ಸೂಕ್ತದ ಎಲ್ಲಾ ಹದಿನಾಲ್ಕು ಋಕ್ಕುಗಳೂ ಸರಸ್ವತಿಗೆ ಸಂಬಂಧಿಸಿದ್ದಾಗಿವೆ. ವೇದಗಳಲ್ಲಿ ಸರಸ್ವತಿಯನ್ನು ನದಿ ಮತ್ತು ನದೀ ದೇವತೆ, ದೇವತೆ ಅಥವಾ ಯಜ್ಞದೇವತೆ, ಇಳಾ, ಕಾಮಧೇನು, ವಾಗ್ದೇವತೆ, ಯುದ್ಧ ದೇವತೆ ಅಥವಾ ರಕ್ಷಣಾ ದೇವತೆ, ಶಾಂತಿ ದೇವತೆ, ಅಹಿಂಸಾ ದೇವತೆ, ಅನ್ನಪೂರ್ಣೆ, ಭಾಗ್ಯ ದೇವತೆ, ಆರೋಗ್ಯ ದೇವತೆಯಾಗಿ ಮಾತ್ರವಲ್ಲದೆ ತಾಯಿ, ಸಹೋದರಿ, ಮಗಳು, ಸ್ನೇಹಿತೆ, ಪತ್ನಿ, ಸ್ವರೂಪದಲ್ಲಿ ಸ್ತುತಿಸಲಾಗಿದೆ.
ಸರಸ್ವತೀ ರಹಸ್ಯೋಪನಿಷತ್ ಎಂಬ ಉಪನಿಷತ್ತು ಕೂಡಾ ಇದೆ. ಪುರಾಣಗಳಲ್ಲಿ ಬರುವ ಸರಸ್ವತಿಯ ವಿಷಯಗಳು ಒಂದಕ್ಕೊಂದು ಪೂರಕವಾಗಿರದೆ ತುಂಬಾ ಗೊಂದಲ ಮೂಡಿಸುತ್ತವೆ.
ಅವಳು ವೀಣಾ ವಾದಕಿ, ಸಂಗೀತ ಶಿಕ್ಷಕಿ, ಮಹಾ ಕವಯಿತ್ರಿ ಮತ್ತು ನ್ಯಾಯಧೀಶೆ. ಅಭಿನವ ಬ್ರಹ್ಮರಾದ ಕವಿಗಳ ಮುಖದಲ್ಲಿ ಸದಾ ನೆಲೆಸಿರುತ್ತಾಳೆ. ‘ಸರ್ವಭಾಷಾ ಸರಸ್ವತೀ’ ಎಂಬುದು ಮೀಮಾಂಸಕರ ಮತ್ತು ಕವಿಗಳ ಅಭಿಮತ. ಕಾಶ್ಮೀರದ ಅಧಿದೇವತೆಯಾಗಿರುವ ಶಾರದೆ, ಕಾಶ್ಮೀರದಲ್ಲಿ ಹಂಸರೂಪಿಯಾಗಿ ನೆಲೆನಿಂತಿದ್ದಾಳೆ ಎಂಬುದು ಕಾಶ್ಮೀರಿ ಮೂಲದ ಕವಿಗಳ ನಂಬಿಕೆ. ಹಂಸ ಅವಳ ವಾಹನ. ಸರ್ವಶುಕ್ಲೆಯಾದ ಆಕೆಯ ವಸ್ತ್ರಾಭರಣಗಳೂ ಶ್ವೇತವರ್ಣದವುಗಳು. ಆದಿಜಿನರ ಮುಖದಿಂದ ಉದಯಿಸಿದ ಸರಸ್ವತಿಯು ಸರ್ವಲೋಕವನ್ನೂ ವ್ಯಾಪಿಸಿದಳು ಎಂಬುದು ಜೈನಕವಿಗಳ ಅಭಿಪ್ರಾಯ.
ಕನ್ನಡದಲ್ಲಿ ಜೈನ, ವೈದಿಕ, ವೀರಶೈವ ಪರಂಪರೆಯ ಕವಿಗಳು ತಮ್ಮ ತಮ್ಮ ದರ್ಶನಗಳಿಗನುಗುಣವಾಗಿ ಸರಸ್ವತಿಯನ್ನು ಸ್ತುತಿಸಿದ್ದಾರೆ. ಎಲ್ಲಾ ಧರ್ಮಗಳನ್ನು ಮೀರಿದ ಮಾನವ ಧರ್ಮವೊಂದಿದೆ. ಆ ಹಿನ್ನೆಲೆಯಲ್ಲೂ ಸರಸ್ವತಿಯನ್ನು ಪ್ರತಿಭಾವಂತರಾದ ಕವಿಗಳು ಕಂಡಿದ್ದಾರೆ. ಸರಸ್ವತಿಯು ವಾಗ್ದೇವತೆ, ಕಾವ್ಯ ದೇವತೆ, ಜ್ಞಾನ ದೇವತೆ ಎಂಬ ಪ್ರಾರಂಭದ ಸೀಮಿತ ಚೌಕಟ್ಟನ್ನು ಮೀರಿ, ಸಂಸಾರ ಸಂಭಾವಿತಾತ್ಮೆ, ಕಾಮ ಸಂಜನನಿ, ಪ್ರೇಮ ಭೈರವಿ, ಶೃಂಗಾರ ಮೂರ್ತಿ, ರಸರಾಣಿ, ರಸ ಸರಸ್ವತಿ, ಕಲಾ ಸುಂದರಿ, ವಾಕ್ಸುಂದರಿ, ನುಡಿ ರಾಣಿ, ವಿಜ್ಞಾನ ನೇತ್ರಿ, ಸರ್ವ ಪಾರದರ್ಶಿಕೆ ಎಂದು ಮೊದಲಾದ ವಿಶೇಷಣಗಳನ್ನು ಧರಿಸಿ ಸರಸ್ವತಿಯು ಬೆಳೆದಿದ್ದಾಳೆ.
ಕಾವ್ಯವಾಸಿಯಾಗಿದ್ದ ಸರಸ್ವತಿಯು ವಿದ್ಯಾಲಯವಾಸಿಯೂ, ವಿದ್ಯಾಲಯೆಯೂ, ಕವಿದೇಹವಾಸಿಯೂ ಆಗಿದ್ದಾಳೆ. ಕಾವ್ಯರಂಗಸ್ಥಳದಲ್ಲಿ, ಕವಿಗಳ ನಾಲಗೆಯಲ್ಲಿ ಮಾತ್ರ ನಟಿಸುತ್ತಿದ್ದ ಸರಸ್ವತಿಯು ಕವಿ ಮನೋಮಂದಿರದಲ್ಲಿ, ಕವಿಯಾತ್ಮಜಿಹ್ವೆಯಲ್ಲಿ ನರ್ತಿಸಿದ್ದಾಳೆ. ಹಂಸವಾಹನೆ ಮಾತ್ರವ ಲ್ಲದೆ, ನವಿಲುವಾಹನೆಯಾಗಿಯೂ ದರ್ಶನವಿತ್ತಿದ್ದಾಳೆ. ಸರ್ವಭಾಷಾಮಯಿಯೂ, ವಿಶ್ವಮಾತೆಯೂ ಆಗಿ ಸರಸ್ವತಿಯ ದರ್ಶನ ಬೆಳೆದಿದೆ. ಬಹುಶಃ, ಬೇರಾವ ಭಾಷೆಗಳಲ್ಲೂ ಸಿಗದಿದ್ದ ‘ಅನಾದಿಕವಿ’ಯ ‘ಪಟ್ಟಗೌರವ’ ಕನ್ನಡ ಸಾಹಿತ್ಯದಲ್ಲಿ ಸರಸ್ವತಿಗೆ ಸಿಕ್ಕಿದೆ.
ಧನ್ಯವಾದಗಳು.
Как приобрести диплом техникума с минимальными рисками
Как правильно купить диплом колледжа и ВУЗа в России, подводные камни