in

ರಂಗನತಿಟ್ಟು ಪಕ್ಷಿಧಾಮ

ರಂಗನತಿಟ್ಟು ಪಕ್ಷಿಧಾಮ
ರಂಗನತಿಟ್ಟು ಪಕ್ಷಿಧಾಮ

ರ೦ಗನತಿಟ್ಟು ಪಕ್ಷಿಧಾಮ ಇದನ್ನು ಕರ್ನಾಟಕದ ಪಕ್ಷಿಕಾಶಿ ಎ೦ದೂ ಕರೆಯುತ್ತಾರೆ. ಇದು ಕರ್ನಾಟಕ ರಾಜ್ಯದ, ಮಂಡ್ಯ ಜಿಲ್ಲೆಯಲ್ಲಿದ್ದು ರಾಜ್ಯದ ಅತಿದೊಡ್ಡ ಪಕ್ಷಿಧಾಮವಾಗಿದೆ. ಕೇವಲ 0.67 ಚದುರ ಕಿಲೋಮೀಟರ್ ವಿಸ್ತೀರ್ಣದ ಅಂದರೆ ಸುಮಾರು 40 ಎಕರೆ ವಿಸ್ತೀರ್ಣದ ಈ ಧಾಮ ಕಾವೇರಿ ನದಿಯ ಆರು ಚಿಕ್ಕ ದ್ವೀಪ ಸಮೂಹಗಳನ್ನೊಳ ಗೊ೦ಡಿದೆ. ರ೦ಗನತಿಟ್ಟು ಚರಿತ್ರಾಳ ಪಟ್ಟಣವಾದ ಶ್ರೀರ೦ಗಪಟ್ಟಣದಿ೦ದ ಮೂರು ಕಿ.ಮೀ ದೂರದಲ್ಲಿ ಮೈಸೂರಿನಿಂದ ೧೬ ಕಿ.ಮಿ ಉತ್ತರದಲ್ಲಿದೆ 2011-12 ನೇ ಸಾಲಿನಲ್ಲಿ 2.90 ಲಕ್ಷ ಪ್ರವಾಸಿಗರನ್ನು ಆಕರ್ಷಿಸಿರುವುದನ್ನು ಗಮನಿಸಿದರೆ ಭಾರತದಲ್ಲಿ ಇದರ ಮಹತ್ವದ ಸ್ಥಾನವನ್ನು ತಿಳಿಯಬಹುದು.

1648 ರಲ್ಲಿ ಆಗಿನ ಮೈಸೂರು ಸ೦ಸ್ಥಾನದ ಅರಸರಾದ ಕ೦ಠೀರವ ನರಸಿ೦ಹರಾಜ ಒಡೆಯರ್ ಅವರು ಕಾವೇರಿ ನದಿಗೆ ಅಡ್ಡಲಾಗಿ ಒಡ್ಡನ್ನು ಕಟ್ಟಿಸಿದಾಗ ಈ ದ್ವೀಪಗಳು ಅಸ್ಥಿತ್ವಕ್ಕೆ ಬ೦ದವು. 1940ರಲ್ಲಿ ಪಕ್ಷಿವಿಜ್ಞಾನ ತಜ್ಞರಾದ ಶ್ರೀ ಸಲೀ೦ ಅಲಿ ಅವರು ಈ ದ್ವೀಪ ಸಮೂಹಗಳು ಪಕ್ಷಿಗಳು ಗೂಡು ಕಟ್ಟಲು ಉತ್ತಮ ತಾಣವಾಗಿರುವದನ್ನು ಗಮನಿಸಿ ಮೈಸೂರು ಸ೦ಸ್ಥಾನದ ಆಗಿನ ರಾಜರಾದ ಒಡೆಯರ್ ಅವರನ್ನು ಈ ದ್ವೀಪ ಸಮೂಹಗಳನ್ನು ಅಭಯಧಾಮವೆ೦ದು ಘೋಷಿಸಲು ಮನಒಲಿಸಿದರು. ಕರ್ನಾಟಕ ರಾಜ್ಯದ ಅರಣ್ಯ ಇಲಾಖೆಯು ಈ ಪಕ್ಷಿಧಾಮದ ನಿರ್ವಹಣೆಯ ಜವಾಬ್ಧಾರಿಯನ್ನು ವಹಿಸಿದೆ ಅಲ್ಲದೆ ಇದರ ಪ್ರಗತಿಯ ದಿಟ್ಟಿನಲ್ಲಿ ಸುತ್ತಲಿನ ಖಾಸಗಿ ಭೂಪ್ರದೇಶಗಳನ್ನು ಕೊಂಡು ಕೊಂಡು, ಈ ಪಕ್ಷಿಧಾಮವನ್ನು ವಿಸ್ತರಿಸಿ, ರಕ್ಷಿಸಿ ಇದರ ಅಭಿವೃದ್ಧಿಗೂ ಪ್ರಯತ್ನಿಸುತ್ತಿದೆ.

ಮಳೆಗಾಲದಲ್ಲಿ, ಹತ್ತಿರದ ಕೃಷ್ಣರಾಜಸಾಗರ ಅಣೆಕಟ್ಟಿನಿ೦ದ ಅಧಿಕ ನೀರನ್ನು ಹೊರಬಿಟ್ಟಾಗ ಈ ದ್ವೀಪಸಮೂಹಗಳಿಗೆ ಅತಿಯಾದ ಪ್ರವಾಹದ ಭೀತಿಯಿರುತ್ತದೆ. ಅತಿಯಾದ ಪ್ರವಾಹವಿದ್ದಾಗ ಪ್ರವಾಸಿಗರನ್ನು ದೋಣಿಗಳ ಮೂಲಕ ಕರೆದೊಯ್ಯುವುದನ್ನು ನಿಷೇಧಿಸ ಲಾಗುತ್ತದೆ. ಕೇವಲ ದೂರದಿ೦ದಲೇ ಪಕ್ಷಿಗಳು ಗೂಡುಕಟ್ಟುವುದನ್ನು ವೀಕ್ಷಿಸಲು ಅನುಮತಿ ನೀಡಲಾಗುತ್ತದೆ. ಕಳೆದ ಕೆಲ ದಶಕಗಳಲ್ಲಿ ಆಗಾಗ ಉ೦ಟಾಗುವ ಪ್ರವಾಹಗಳಿ೦ದಾಗಿ ಮೂರು ದ್ವೀಪಗಳ ಕೆಲಭಾಗಗಳಿಗೆ ಧಕ್ಕೆಯಾಗಿದೆ.

ಧಾಮದ ನೈಸರ್ಗಿಕ ಇತಿಹಾಸ

ಈ ಧಾಮದ ಬಹುಪಾಲು ಇಂಡೋಮಲಯ ಪರಿಸರ ವಲಯ ದಡಿಯ ರಿಪಾರಿಯನ್ ಬಯೋಮ್ ನಡಿ ಬರುತ್ತದೆ. ದ್ವೀಪಗಳ ನದೀ ತೀರದಲ್ಲಿ ಜೊಂಡು ಸಸ್ಯಗಳು ಆವೃತವಾಗಿವೆ. ದ್ವೀಪದ ಒಳಗೆ ಅಗಲವಾದ ಎಲೆಗಳ ಜಾತಿಯ ಸಸ್ಯಗಳು, ಅರ್ಜುನ-ಮರಗಳು, ಬಿದುರಿನ ಗುಂಪು ಸಸ್ಯಗಳು ಮತ್ತು ಪಂಡನು ಮರಗಳಿವೆ. ಮೂಲ ಜಾತಿಯ ಮರಗಳಲ್ಲದ ನೀಲಗಿರಿ ಮತ್ತು ಜಾಲಿ ಜಾತಿ ಗಿಡಗಳನ್ನೂ ನೆಡಲಾಗಿದ್ದು, ಇವು ಇದೇ ಪ್ರದೇಶದ ಮೂಲ ಜಾತಿಯ ಸಸ್ಯಗಳ ಅವನತಿಗೆ ದಾರಿಮಾಡಿಕೊಡಬಹುದಾಗಿದೆ. ಇಫಿಗ್ನಿಯ ಮೈಸೊರೆನಿಸಿಸ್ ಜಾತಿಯ ನೈದಿಲೆ ಗಳೂ ಈ ಅಭಯಧಾಮದಲ್ಲಿ ಬೆಳೆಯುತ್ತವೆ.

ರಂಗನತಿಟ್ಟು ಪಕ್ಷಿಧಾಮ
ಪಕ್ಷಿಗಳು

ಹಲವು ವರ್ಷಗಳ ದಾಖಲೆಯ ಪ್ರಕಾರ ಸುಮಾರು 221ಕ್ಕೂ ಹೆಚ್ಚಿನ ಬಗೆಯ ಪಕ್ಷಿಗಳು ಇಲ್ಲಿ ಕಂಡುಬಂದಿವೆ. ಬಣ್ಣದ ಕೊಕ್ಕರೆ, ಚಮಚದ ಕೊಕ್ಕುಗಳು, ಕರಿ ಕೆಂಬರಲು, ಶಿಳ್ಳೆ ಬಾತುಕೋಳು, ಉದ್ದ ಕೊಕ್ಕಿನ ನೀರುಕಾಗೆ, ಹೆಮ್ಮಿಂಚುಳ್ಳಿ ನಂತಹ ವಿಶೇಷ ಪಕ್ಷಿಗಳು ಮತ್ತು ಬೆಳ್ಳಕ್ಕಿ ನೀರುಕಾಗೆ, ಹಾವಕ್ಕಿ, ಬಕ ಪಕ್ಷಿಗಳು ಈ ಪ್ರದೇಶದಲ್ಲಿ ಗೂಡು ಕಟ್ಟಿ ಮರಿಮಾಡಿ ಪೊಷಿಸುತ್ತವೆ. ಕಿರುಗತ್ತಿನ ಕವಲು ತೋಕೆಗಳೇ ಅಲ್ಲದೆ ಇನ್ನೂ ಹಲವು ಬಗೆಯ ಹಿಂದು ಪಕ್ಷಿಗಳಿಗೆ ಈ ಉದ್ಯಾನವನ ಮನೆಯಾಗಿದೆ. ಜನವರಿ ಮತ್ತು ಫಿಬ್ರವರಿ ತಿಂಗಳುಗಳಲ್ಲಿ ಸುಮಾರು 30 ಜಾತಿ ಪಕ್ಷಿಗಳು ಕಾಣಸಿಗುತ್ತವೆ. ಈ ಅಭಯಧಾಮದ ಋತು ನವೆಂಬರ್ ನಿಂದ ಜೂನ್ ವರೆಗಾಗಿದೆ. ಈ ಸಮಯದಲ್ಲಿ ಸುಮಾರು 50 ಬಗೆಯ ಹೆಜ್ಜಾರ್ಲೆಗಳು ರಂಗನತಿಟ್ಟು ಪಕ್ಷಿಧಾಮವನ್ನು ತಮ್ಮ ಶಾಶ್ವತ ಮನೆಯ ನ್ನಾಗಿಸಿಕೊಂಡಿವೆ.

ಚಳಿಗಾಲದ ತಿಂಗಳ ದಿನಗಳಲ್ಲಿ ಮಧ್ಯ ಡಿಸೆಂಬರ್ ನಿಂದ ಪ್ರಾರಂಭಿಸಿ ಕೆಲ ಋತುಗಳಲ್ಲಿ 40,000 ರಷ್ಟು ಪಕ್ಷಿಗಳು ಗುಂಪುಗಳಾಗಿ ಬರುತ್ತವೆ. ಕೆಲ ಪಕ್ಷಿಗಳು ಸೈಬೀರಿಯಾದಿಂದ, ಲ್ಯಾಟಿನ್ ಅಮೆರಿಕಾದಿಂದ ಮತ್ತು ಉತ್ತರ ಭಾರತದ ಕೆಲ ಭಾಗಗಳಿಂದ ಈ ಪಕ್ಷಿಧಾಮಕ್ಕೆ ಗುಂಪು ಗುಂಪುಗಳಾಗಿ ಬರುತ್ತವೆ. ರಂಗನತಿಟ್ಟು ಪಕ್ಷಿಗಳಿಗೆ ಒಂದು ಪ್ರಸಿದ್ಧ ಗೂಡು ಕಟ್ಟುವ ತಾಣವಾಗಿದೆ, ಮತ್ತು 2011 ವರ್ಷದಲ್ಲಿ ಸುಮಾರು 8,000 ಮರಿಹಕ್ಕಿಗಳನ್ನು ಜೂನ್ ತಿಂಗಳಿನಲ್ಲಿ ಕಾಣಲಾಗಿದೆ.

ಈ ದ್ವೀಪವು ಹಲವಾರು ಚಿಕ್ಕ ಚಿಕ್ಕ ಸಸ್ತನಿಗಳಿಗೂ ಆವಾಸ ಸ್ಥಾನವಾಗಿದೆ. ಇದರಲ್ಲಿ ಕೋತಿಗಳು ಬಾನೆಟ್ ಮಕಾಕ್ ಗುಂಪುಗಳು, ಪುನುಗು ಬೆಕ್ಕುಗಳು ಮತ್ತು ಹಿರಿ ಪಲ್ಲಿಗಳು ಸೇರಿವೆ. ಜೌಗು ಪ್ರದೇಶದ ಜೊಂಡಿನ ಮೊಸಳೆಗಳು ಈ ಪ್ರದೇಶದ ಸಾಮಾನ್ಯ ನಿವಾಸಿಗಳಾಗಿವೆ. ಕರ್ನಾಟಕ ರಾಜ್ಯದಲ್ಲಿಯೇ ರಂಗನತಿಟ್ಟು ಪ್ರದೇಶವು ಅತಿಹೆಚ್ಚು ಸಿಹಿನೀರಿನ ಮೊಸಳೆಗಳ ಸಂಖ್ಯೆಯನ್ನು ಹೊಂದಿದೆ.

ದಿನಪೂರ್ತಿ ಅರಣ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಈ ದ್ವೀಪಗಳಲ್ಲಿ ದೋಣಿ ಪ್ರವಾಸಗಳು ನಡೆಯುತ್ತವೆ. ಈ ಪ್ರವಾಸದಲ್ಲಿ ಪಕ್ಷಿಗಳನ್ನು, ಮೊಸಳೆಗಳನ್ನು, ನೀರು ನಾಯಿಗಳನ್ನು ಮತ್ತು ಬಾವಲಿಗಳನ್ನು ವೀಕ್ಷಿಸಬಹುದಾಗಿದೆ. ಈ ಚಿಕ್ಕ ಪಕ್ಷಿಧಾಮದಲ್ಲಿ ಪ್ರವಾಸಿಗರಿಗೆ ವಸತಿ ಸೌಲಭ್ಯವಿರುವುದಿಲ್ಲ. ಪ್ರವಾಸಿಗರು ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಉಳಿದುಕೊಳ್ಳಬೇಕಾಗುತ್ತದೆ.

ರಂಗನತಿಟ್ಟು ಪಕ್ಷಿಧಾಮ
ದೋಣಿ ಪ್ರವಾಸ

ಜೂನ್ ನಿಂದ ನವೆಂಬರಲ್ಲಿ ಹಲವು ಪಕ್ಷಿಗಳು ಸಂತಾನ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ತೊಡಗುವ ಕಾರಣ ಈ ಉದ್ಯಾನವನ್ನು ಸಂದರ್ಶಿಸಲು ಸೂಕ್ತ ಕಾಲವಾಗಿದೆ. ವಲಸೆ ಬರುವ ಪಕ್ಷಿಗಳನ್ನು ವೀಕ್ಷಿಸಲು ಸಾಮಾನ್ಯವಾಗಿ ಡಿಸೆಂಬರ್ ತಿಂಗಳು ಸೂಕ್ತವಾಗಿದೆ. ಆದರೂ ಈ ಅವಧಿ ವರ್ಷದಿಂದ ವರ್ಷಕ್ಕೆ ಬದಲಾಗಬಹುದಾಗಿದೆ.

ಸಂದರ್ಶನದ ಅವಧಿ ಬೆಳಗ್ಗೆ 8:30 ರಿಂದ ಸಂಜೆ 5:45 ರವರೆಗೆ. ಭಾರತೀಯರಿಗೆ ಪ್ರವೇಶ ಶುಲ್ಕ ರೂ 70.00 ಮತ್ತು ವಿದೇಶಿಯರಿಗೆ ರೂ 400.00 ಆಗಿದೆ. ವಿಶೇಷ ಆಸಕ್ತ ತಂಡಗಳಿಗೆ ಅರಣ್ಯ ಇಲಾಖೆಯ ವತಿಯಿಂದ ನಿರ್ವಹಿಸಲ್ಪಡುತ್ತಿರುವ ಸಲೀಂ ಆಲಿ ಅನುವಾದಕ ಕೇಂದ್ರದಲ್ಲಿ 45 ನಿಮಿಷಗಳ ಕಾಲದ ಮಾಹಿತಿ ಚಿತ್ರ ಪ್ರದರ್ಶನದ ವೀಕ್ಷಣಾ ಸೌಲಭ್ಯವಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

One Comment

ದೆಹಲಿಯ ಕೆಂಪು ಕೋಟೆ

ದೆಹಲಿಯ ಕೆಂಪು ಕೋಟೆ

ಮಾನಸಿಕ ಖಿನ್ನತೆ

ಮಾನಸಿಕ ಖಿನ್ನತೆ