in ,

ಮದರ್‌ ತೆರೇಸಾ

ಮದರ್‌ ತೆರೇಸಾ
ಮದರ್‌ ತೆರೇಸಾ

ಮದರ್‌ ತೆರೇಸಾಸುಮಾರು 45 ವರ್ಷಗಳಿಗೂ ಹೆಚ್ಚು ಕಾಲ ಇವರು ಬಡವರ, ರೋಗಿಗಳ, ಅನಾಥರ ಮತ್ತು ಮರಣ ಸಂಕಟದಲ್ಲಿರುವವರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡವರು. 1970ರ ವೇಳೆಗೆ ಇವರು ಒಬ್ಬ ಮಾನವತಾ ವಾದಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದರು. ಮದರ್‌ ತೆರೇಸಾ ಒಬ್ಬ ಮಹಾ ಮಾನವತಾವಾದಿಯಾಗಿ ಬಡವರ, ನಿರ್ಗತಿಕರ, ರೋಗಿಗಳ, ಅನಾಥರ, ವೃದ್ಧರ ಪರವಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಇವರಿಗೆ ವಿಶ್ವದ ಅತ್ಯುನ್ನತ ನೊಬೆಲ್‌ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಮದರ್‌ ತೆರೇಸಾ, 26 ಆಗಸ್ಟ್‌ 1910 ರಿಂದ 5 ಸೆಪ್ಟೆಂಬರ್‌ 1997. ಅಲ್ಬೇನಿಯಾದವರಾದ ಈ ರೋಮನ್‌ ಕ್ಯಾಥೊಲಿಕ್‌ ನ ಭಾರತದ ಪೌರತ್ವ ಪಡೆದಿದ್ದರು. ಇವರು 1950ರಲ್ಲಿ ಮಿಷನರೀಸ್‌ ಆಫ್‌ ಚಾರಿಟಿ ಎಂಬ ಸ್ವಯಂ ಸೇವಾ ಸಂಘವನ್ನು ಭಾರತದ ಕೋಲ್ಕೊತ್ತಾದಲ್ಲಿ ಸ್ಥಾಪಿಸಿದರು. ಮಿಷನರೀಷ್‌ ಆಫ್‌ ಚಾರಿಟೀಸ್‌ ಎಂಬ ಸ್ವಯಂ ಸೇವಾ ಸಂಸ್ಥೆಯನ್ನು ಮೊದಲು ಭಾರತಾದ್ಯಂತ ವಿಸ್ತರಿಸಲು ಮಾರ್ಗದರ್ಶಿಯಾಗಿ, ನಂತರ ವಿಶ್ವದ ಇತರೆ ರಾಷ್ಟ್ರಗಳಿಗೂ ಸಂಸ್ಥೆಯ ಕಾರ್ಯಾಚರಣೆಯನ್ನು ವ್ಯಾಪಿಸುವಂತೆ ಮೇಲ್ವಿಚಾರಣೆ ನಡೆಸಿದರು.

ಇವರ ಬಗ್ಗೆ ಸಾಕ್ಷ್ಯಚಿತ್ರ ಮತ್ತು ಮ್ಯಾಲ್ಕಮ್ ಮುಗ್ಗರಿಜ್‌ ಸಮ್‌ಥಿಂಗ್‌ ಬ್ಯೂಟಿಫುಲ್‌ ಫಾರ್‌ ಗಾಡ್‌ ಕೃತಿಯನ್ನು ರಚಿಸಿದ್ದಾರೆ ಮತ್ತು ಇದೇ ಕೃತಿಯನ್ನು ಆಧರಿಸಿ ಸಾಕ್ಷ್ಯ ಚಿತ್ರವೊಂದನ್ನು ನಿರ್ಮಿಸಿದ್ದಾರೆ. ಮದರ್‌ ತೆರೇಸಾ ಒಬ್ಬ ಮಹಾ ಮಾನವತಾವಾದಿಯಾಗಿ ಬಡವರ, ನಿರ್ಗತಿಕರ, ರೋಗಿಗಳ, ಅನಾಥರ, ವೃದ್ಧರ ಪರವಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಇವರಿಗೆ ವಿಶ್ವದ ಅತ್ಯುನ್ನತ ನೊಬೆಲ್‌ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಮದರ್‌ ತೆರೇಸಾ
ಮದರ್‌ ತೆರೇಸಾ

ಭಾರತ ಸರ್ಕಾರವೂ ಕೂಡ ಈ ಮಹಾಮಾತೆಗೆ ದೇಶದ ಅತ್ಯುನ್ನತ ಪೌರ ಪ್ರಶಸ್ತಿಯಾದ ಭಾರತ ರತ್ನಪ್ರಶಸ್ತಿ ನೀಡಿ ಗೌರವ ಸಲ್ಲಿಸಿದೆ. ಮದರ್‌ ತೆರೇಸಾ ಸ್ಥಾಪಿಸಿದ ಮಿಷನರೀಷ್‌ ಆಫ್‌ ಚಾರಿಟಿ ಸಂಸ್ಥೆ ತನ್ನ ಸೇವೆಯನ್ನು ವಿಸ್ತರಿಸುತ್ತಾ ಹೋಯಿತು ಇದು ಧರ್ಮಶಾಲೆಗಳು, HIV/AIDS ಪೀಡಿತರ ಸೇವೆ, ಕುಷ್ಠರೋಗಿಗಳ ಆರೈಕೆ, ಕ್ಷಯರೋಗಿಗಳ ಶುಶ್ರೂಶೆಯಲ್ಲಿ ತೊಡಗಿದ್ದರು.
ಇದರ ಜೊತೆ ಸಾರಿನ ಅರವಟ್ಟಿಗೆಗಳು, ಮಕ್ಕಳ ಮತ್ತು ಕೌಟುಂಬಿಕ ಆಪ್ತ ಸಲಹೆ, ಅನಾಥಾಶ್ರಮಗಳು ಮುಂತಾದ ವಿವಿಧ ಸೇವಾ ಸೌಲಭ್ಯಗಳನ್ನು ಇಲ್ಲದವರ ಪಾಲಿಗೆ ಉಂಟಾಗಿಸಿದರು. ತೆರೆಸಾ ನಿಧನದ ಹೊತ್ತಿಗೆ 123 ದೇಶಗಳಲ್ಲಿ 610 ಮಿಷನರಿ ಗಳು ಕಾರ್ಯಾಚರಣೆ ನಡೆಸುತ್ತಿತ್ತು. ಹಲವಾರು ಸರ್ಕಾರ, ಸಂಘ ಸಂಸ್ಥೆ ಹಾಗೂ ವ್ಯಕ್ತಿಗಳಿಂದ ಹೊಗಳಿಕೆಗೆ ಪಾತ್ರರಾಗಿದ್ದ ಇವರು ನಾನಾ ಬಗೆಯ ಟೀಕೆಗಳಿಗೂ ಗುರಿಯಾಗಿದ್ದರು.

ಸಾವಿನ ದವಡೆಯಲ್ಲಿರುವವರಿಗಾಗಿ ಚರ್ಚ್‌ಗೆ ಸೇರಿಸಿಕೊಳ್ಳುವಾಗ ಮಾಡಿಸಲಾಗುವ ಶುದ್ಧಿಸ್ನಾನ ಅಥವಾ ದೀಕ್ಷಾವಿಧಿ, ಗರ್ಭಪಾತದ ವಿರುದ್ಧದ ಇವರ ಬಲವಾದ ನಿಲುವು ಮೊದಲಾದವುಗಳ ಮೇಲೆ ಬೆಳಕು ಚೆಲ್ಲಿದ ಕೆಲವರು ಇವೆಲ್ಲಾ ಮತಾಂತರಕ್ಕೆ ಪ್ರೇರೇಪಿಸುವ ಕೃತ್ಯಗಳೆಂದು ಖಂಡಿಸಿದರು. ಕ್ರಿಸ್ಟೋಫರ್‌ ಹಿಚೆನ್ಸ್‌, ಮೈಕೇಲ್‌ ಪಾರೆಂತಿ,ಅರೌಪ್‌ ಚಟರ್ಜೀ, ವಿಶ್ವ ಹಿಂದೂ ಪರಿಷತ್‌ ಮುಂತಾದವರು-ಖಂಡಿಸಿದವರಲ್ಲಿ ಕೆಲವರು.

ಇವರ ಅನಾಥಾಲಯಗಳಲ್ಲಿನ ವೈದ್ಯಕೀಯ ಚಿಕಿತ್ಸೆಯ ಗುಣಮಟ್ಟವನ್ನು ವೈದ್ಯಕೀಯ ನಿಯತಕಾಲಿಕೆಗಳೂ ಟೀಕಿಸಿದ್ದವು ಮತ್ತು ಸಂಸ್ಥೆಗೆ ದಾನವಾಗಿ ಬಂದ ಹಣವನ್ನು ವ್ಯಯ ಮಾಡುವ ವಿಚಾರದಲ್ಲಿದ್ದ ಅಪಾರದರ್ಶಕತೆ ವಿರುದ್ಧ ಕಳವಳ ವ್ಯಕ್ತ ಮಾಡಿದ್ದವು. 1996ರಲ್ಲಿ ಮದರ್‌ತೆರೇಸಾ ಅವರನ್ನುಯುನೈಟೆಡ್‌ ಸ್ಟೇಟ್ಸ್‌ನ ಗೌರವ ಪ್ರಜೆಯಾಗಿ ನೇರವಾಗಿಆಕ್ಟ್‌ ಆಫ್‌ ಕಾಂಗ್ರೆಸ್‌ಮೊಲಕ ಅಧಿಕೃತವಾಗಿ ಪ್ರಕಟಿಸಲಾಯಿತು.

ಇವರ ಸಾವಿನ ನಂತರ ಪೋಪ್‌ ಜಾನ್‌ ಪಾಲ್‌ II ತೆರೇಸಾಗೆ ‘ಬ್ಲೆಸ್ಸ್ಡ್‌ ತೆರೇಸಾ ಆಫ್‌ ಕಲ್ಕತಾ’ ಎಂಬ ಬಿರುದನ್ನಿತ್ತು ಪರಮಪದ ಪ್ರಾಪ್ತಿಯನ್ನು ನೀಡಿದರು.

ಆಗ್ನೆಸೇ ಗೋನ್‌ಕ್ಸೆ ಬೋಜಕ್ಸಿಯು (ಗೋನ್‌ಕ್ಸೆಎಂದರೆ ಅಲ್ಬೇನಿಯಾದಲ್ಲಿ “ಗುಲಾಬಿ ಮೊಗ್ಗು” ಎಂದರ್ಥ). ಆಗಸ್ಟ್‌ 26 ರಂದು ಜನಿಸಿದ್ದರೂ ಸಹ ಇವರು ತಾವು ದೀಕ್ಷಾವಿಧಿ ಸ್ವೀಕರಿಸಿದ ಆಗಸ್ಟ್‌ 27ರ ದಿನಾಂಕವನ್ನೇ ತಮ್ಮ “ನೈಜ ಜನ್ಮ ದಿನಾಂಕ” ಎಂದು ಪರಿಗಣಿಸಿದ್ದರು.
ತೆರೇಸಾ ಅಲ್ಬೇನಿಯಾದ ಸ್ಕೋಡರ್‌ನಗರ ವಾಸಿಗಳಾದ ನಿಕೊಲ್ಲೇ ಮತ್ತು ಡ್ರಾನ ಬೋಜಕ್ಸಿಯು ದಂಪತಿಗಳಿಗೆ ಜನಿಸಿದ ಮಕ್ಕಳಲ್ಲೇ ಅತಿ ಕಿರಿಯಳು. ಅಲ್ಬೇನಿಯಾದ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಈಕೆಯ ತಂದೆ 1919ರಲ್ಲಿ ತೀರಿಕೊಂಡಾಗ ಅವಳಿನ್ನೂ ಎಂಟು ವರ್ಷದ ಹುಡುಗಿ. ತಂದೆ ನಿಧನದ ನಂತರ ತಾಯಿಯು ಈಕೆಯನ್ನು ರೋಮನ್‌ ಕ್ಯಾಥೊಲಿಕ್‌ ಚರ್ಚ್‌‌ನ ಅನುಯಾಯಿಯಾಗಿ ಬೆಳೆಸಿದರು.

ಮಿಷನರಿಗಳು ಮತ್ತು ಅವುಗಳ ಸೇವಾಕಾರ್ಯಗಳ ಕುರಿತು ಆಗ್ನೆಸ್‌ ಅಥವಾ ತೆರೇಸಾ ಆಕರ್ಷಿತಳಾಗಿದ್ದಳೆಂದು ತೆರೇಸಾ ಜೀವನ ಚರಿತ್ರೆಯನ್ನು ರಚಿಸಿರುವ ಗ್ಯ್ರಾಫ್‌ ಕ್ಲೂಕಾಸ್‌ ಬರೆಯುತ್ತಾರೆ. ಜೊತೆಗೆ ಅವಳು ತನ್ನ 12ನೇ ವಯಸ್ಸಿಗಾಗಲೇ ತನ್ನ ಉಳಿದ ಬದುಕನ್ನು ಧಾರ್ಮಿಕ ಸೇವೆಗೆ ಮುಡಿಪಾಗಿಡಬೇಕೆಂದು ತೀರ್ಮಾನಿಸಿದ್ದಳು. ತಮ್ಮ 18ನೇ ವಯಸ್ಸಿಗೆ ಮನೆ ತೊರೆದ ತೆರೇಸಾ ಸಿಸ್ಟರ್ಸ್ ಆಫ್‌ ಲೊರೇಟೋಮಿಷನರಿಯನ್ನು ಸೇರಿಕೊಂಡರು. ಮತ್ತೆ ಅವರ ತಾಯಿಯನ್ನಾಗಲೀ ಅಥವಾ ಸಹೋದರಿಯನ್ನಾಗಲೀ ಇವರು ಹಿಂತಿರುಗಿ ನೋಡಲೇ ಇಲ್ಲ.

ಮದರ್‌ ತೆರೇಸಾ
ಮದರ್‌ ತೆರೇಸಾ

ಇಂಗ್ಲಿಷ್‌ ಕಲಿಯುವ ಸಲುವಾಗಿ ಆಗ್ನೆಸ್‌ ಆರಂಭದಲ್ಲಿ ಐರ್ಲೆಂಡ್‌ನ ರಾಥ್‌ಫರ್ನ್‌‌ಹ್ಯಾಮ್‌ನಲ್ಲಿರುವ ಲೊರೇಟೋ ಆಬ್ಬೀ ಶಾಲೆಗೆ ಸೇರಿಕೊಂಡರು; ಆಗ ಸಿಸ್ಟರ್ಸ್ ಆಫ್‌ ಲೊರೇಟೋ ಮಿಷನರಿ ಭಾರತದಲ್ಲಿ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ ನೀಡುತ್ತಿತ್ತು. ಇವರು 1929ರಲ್ಲಿ ಭಾರತಕ್ಕೆ ಆಗಮಿಸಿ, ಹಿಮಾಲಯದ ತಪ್ಪಲಿನಲ್ಲಿರುವ ಡಾರ್ಜೀಲಿಂಗ್‌ನಲ್ಲಿ ತಮ್ಮ ದೀಕ್ಷಾ ತರಬೇತಿ ಅವಧಿಯನ್ನು ಆರಂಭಿಸಿದರು. ಕ್ರೈಸ್ತ ನನ್‌ ಆಗಿ ತಮ್ಮ ಮೊದಲ ಧಾರ್ಮಿಕ ದೀಕ್ಷಾ ಪ್ರತಿಜ್ಞೆಯನ್ನು ಇವರು 1931ರ ಮೇ 24ರಂದು ಸ್ವೀಕರಿಸಿದರು. ಕ್ರೈಸ್ತ ಮಿಷನರಿಗಳ ಪೋಷಕರಾಗಿದ್ದ ಥೇರೇಸೆ ಡಿ ಲಿಸಿಯುಕ್ಸ್‌ ಅವರ ಗೌರವಾರ್ಥ ಈ ಸಮಯದಲ್ಲಿ ಆಗ್ನೇಸ್‌ ತಮ್ಮ ಹೆಸರನ್ನು ತೆರೇಸಾ ಎಂದು ಬದಲಾಯಿಸಿಕೊಂಡರು.

ಪೂರ್ವ ಕಲ್ಕತ್ತಾದ ದಿ ಲೊರೇಟೋ ಕಾನ್ವೆಂಟ್‌ನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲಿ ಇವರು 1937ರ ಮೇ 14ರಂದು ವಿಧಿವತ್ತಾಗಿ ತಮ್ಮ ದೀಕ್ಷಾ ಪ್ರತಿಜ್ಞೆ ಸ್ವೀಕರಿಸಿದರು. ತೆರೇಸಾ ತಮ್ಮ ಶಿಕ್ಷಕ ವೃತ್ತಿಯಲ್ಲಿ ಸಂತೋಷದಿಂದಿದ್ದರೂ, ಕಲ್ಕತ್ತಾದಲ್ಲಿ ತಮ್ಮ ಸುತ್ತಮುತ್ತ ಇದ್ದ ಬಡತನವನ್ನು ಕಂಡು ತೀವ್ರವಾಗಿ ವಿಚಲಿತರಾದರಾದರು. 1943ರಲ್ಲಿ ಉಂಟಾದ ಕ್ಷಾಮ ಕಲ್ಕತ್ತಾ ನಗರವನ್ನು ದುಸ್ಥಿತಿಗೆ ತಳ್ಳಿತಲ್ಲದೆ ಸಾಕಷ್ಟು ಸಾವು-ನೋವುಗಳನ್ನು ತಂದೊಡ್ಡಿತು. ಇದರ ಜೊತೆಗೆ ಅದೇ ಸಮಯದಲ್ಲಿ ಎಂದರೆ ಆಗಸ್ಟ್‌ 1946ರಲ್ಲಿ ಭುಗಿಲೆದ್ದ ಹಿಂದೂ-ಮುಸ್ಲಿಂ ಗಲಭೆ ನಗರದ ಜನತೆಯನ್ನು ಹತಾಶೆ ಮತ್ತು ಭೀತಿಯಲ್ಲಿ ಮುಳುಗಿಸಿತು.

ಇತರರ ಸೇವೆಯಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಳ್ಳುವ ಶಕ್ತಿ ಮತ್ತು ದೃಢ ನಿಷ್ಠೆಯನ್ನು ಮದರ್‌ ತೆರೇಸಾ ಎಲ್ಲಿ ಕಂಡುಕೊಂಡರು? ದೇವರ ಪ್ರಾರ್ಥನೆಯಲ್ಲಿ ಮತ್ತು ಜೀಸಸ್‌ ಕ್ರಿಸ್ತನ ಮೌನ ಧ್ಯಾನ, ಅವನ ಪವಿತ್ರ ಮುಖ ದರ್ಶನ, ಅವನ ನಿರ್ಮಲ ಹೃದಯದಲ್ಲಿ ಅದನ್ನು ಅವರು ಕಂಡು ಕೊಂಡಿದ್ದರು ” ಎಂದು ಅವರ ಕಾರ್ಯ ಮತ್ತು ಸಾಧನೆಗಳನ್ನು ವಿಶ್ಲೇಷಣೆ ಮಾಡುತ್ತಾ,ಜಾನ್‌ ಪಾಲ್‌ II ಹೇಳಿದ್ದರು.

ಅವರ ಪಾಸ್ಟ್ಯುಲೇಟರ್‌ ರೆವರೆಂಡ್‌ ಬ್ರಿಯಾನ್‌ ಕೊಲೊಡೀಜಕ್‌ ಉಲ್ಲೇಖಿಸಿರುವಂತೆ “ಏನೇ ಆಗಲಿ ದೇವರ ಅಸ್ತಿತ್ವವಿಲ್ಲ ಎಂದು ಅವರಿಗನ್ನಿಸಿತ್ತು”, “ಪ್ರಭು ಭೋಜನ ಪ್ರಸಾದದಲ್ಲೂ ಇಲ್ಲ, ಹೃದಯದಲ್ಲೂ ಇಲ್ಲ” ಎಂದೆನಿಸಿದ್ದ ಸಮಯದಲ್ಲಿ ಮದರ್‌ ತೆರೇಸಾ ಖಾಸಗಿಯಾಗಿ ತಾವು ಸುಮಾರು ಐವತ್ತು ವರ್ಷಗಳ ಕಾಲ ಎಂದರೆ ಜೀವನದ ಕಡೆಯವರೆಗೂ ನಂಬಿದ್ದ ತಮ್ಮ ಧಾರ್ಮಿಕ ಅಥವಾ ಆಧ್ಯಾತ್ಮಿಕ ನಂಬಿಕೆಗಳಲ್ಲಿ ಸಂಶಯ ಕಂಡಿದ್ದರು, ಹೋರಾಟ ನಡೆಸಿದ್ದರು,
ದೇವರ ಅಸ್ತಿತ್ವದ ಬಗ್ಗೆ ಮತ್ತು ಈ ಸಂಬಂಧ ಅವರಿಗಿದ್ದ ನಂಬಿಕೆಯ ಕೊರತೆಯ ನೋವಿನ ಮೇಲೆ ಘನ ಅನುಮಾನಗಳನ್ನು ಮದರ್‌ ತೆರೇಸಾ ವ್ಯಕ್ತಪಡಿಸಿದ್ದರು.

ಮದರ್‌ ತೆರೇಸಾ ಒಬ್ಬ ಮಹಾ ಮಾನವತಾವಾದಿಯಾಗಿ ಬಡವರ, ನಿರ್ಗತಿಕರ, ರೋಗಿಗಳ, ಅನಾಥರ, ವೃದ್ಧರ ಪರವಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಇವರಿಗೆ ವಿಶ್ವದ ಅತ್ಯುನ್ನತ ನೊಬೆಲ್‌ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಮದರ್‌ ತೆರೇಸಾರ ಪರಮಪದ ಪ್ರಾಪ್ತಿ ಮತ್ತು ಸಂತ ಪದ ಗ್ರಹಣ ಪ್ರಕ್ರಿಯೆಯಲ್ಲಿ ಸಾಕ್ಷಿಯಾಗಿ ಭಾಗಿಯಾಗಲು ವ್ಯಾಟಿಕನ್‌ ಕ್ರಿಸ್ಟೋಫರ್‌ ಹಿಚೆನ್ಸ್‌ ಅವರನ್ನು ಆಹ್ವಾನಿಸಿತ್ತು. ಯುನೈಟೆಡ್‌ ಸ್ಟೇಟ್ಸ್‌ 1996ರ ನವೆಂಬರ್‌ 16ರಂದು ಇವರಿಗೆ ಗೌರವ ಪೌರತ್ವ ನೀಡಿತು.

*ಮದರ್‌ ತೆರೇಸಾರ ಮಾತೃ ಭೂಮಿಯಾದ ಅಲ್ಬೇನಿಯಾ ಇವರಿಗೆ 1994ರಲ್ಲಿ ಗೋಲ್ಡನ್‌ ಆನರ್‌ ಆಫ್ ದಿ ನೇಷನ್‌ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿತು.

*ಮದರ್‌ ತೆರೇಸಾರಿಗೆ 1962ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಭಾರತ ಸರ್ಕಾರ ತನ್ನ ಗೌರವ ಸಲ್ಲಿಸಿತು.

*ಅಂತಾರಾಷ್ಟ್ರೀಯ ಸಂವೇದನಾ ಶೀಲತೆಗೆ 1972ರಲ್ಲಿ ಜವಾಹರಲಾಲ್‌ ನೆಹರು ಪ್ರಶಸ್ತಿ,

*1980ರಲ್ಲಿ ಭಾರತದ ಅತ್ಯುನ್ನತ ಪೌರ ಪ್ರಶಸ್ತಿಯಾದ ಭಾರತ ರತ್ನ ಇವರ ಪಾಲಾದವು.

*ಇವರ ಅಂತರಾಷ್ಟ್ರೀಯ ಅರಿವು ಹಾಗೂ ದಕ್ಷಿಣ ಮತ್ತು ಪೂರ್ವ ಏಷ್ಯಾದಲ್ಲಿ ಸಲ್ಲಿಸಿದ ಸೇವೆಗೆ ಫಿಲಿಪ್ಪೈನ್ಸ್ ಮೂಲದ ರಾಮನ್‌ ಮ್ಯಾಗ್ಸೆಸೆ ಪ್ರಶಸ್ತಿ1962ರಲ್ಲಿ ಇವರ ಮುಡಿಗೇರಿತು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ರತ್ನಾಗಿರಿ ಬಂದರು

ರತ್ನಾಗಿರಿ ಬಂದರು ನಗರ

ಮಧುರೈ

ಮಧುರೈ ನಾಯಕ್ ರಾಜವಂಶ