ಮೆಹೆಂದಿಯಲ್ಲಿ ಸಾಂಸ್ಕೃತಿಕ ಹಿನ್ನೆಲೆ ಮತ್ತು ಅವುಗಳ ವೈಶಿಷ್ಟ್ಯಗಳಿಗೆ ಅನುಗುಣವಾಗಿ ವಿವಿಧ ರೀತಿಯ ವಿನ್ಯಾಸಗಳು ಲಭ್ಯವಿದೆ. ಅರೇಬಿಕ್, ಭಾರತೀಯ, ಆಫ್ರಿಕನ್ ಮತ್ತು ಪಾಕಿಸ್ತಾನಿ ಮೆಹೆಂದಿ ವಿನ್ಯಾಸಗಳು ಹೆಚ್ಚು ಪ್ರಸಿದ್ಧವಾಗಿವೆ. ಭಾರತದಲ್ಲಿ, ಮೆಹೆಂದಿ ವಧುವಿನ ಕೈಯಲ್ಲಿ ಹೆಚ್ಚು ಕಾಲ ಇರುವುದು ಶುಭ ಎಂದು ಹೇಳಲಾಗುತ್ತದೆ. ಅವಳ ಗಂಡ ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದು ನಂಬಲಾಗುತ್ತದೆ. ಒಂದು ವೇಳೆ ಮೆಹೆಂದಿ ಬೇಗನೆ ಮಸುಕಾದರೆ, ಅವಳ ಮದುವೆಯ ಜೀವನದಲ್ಲಿ ಸಂತೋಷ ಇರುವುದಿಲ್ಲ ಎಂದು ನಂಬುತ್ತಾರೆ.
ಭಾರತೀಯ ಮದುವೆಗಳಲ್ಲಿ ನಾವು ಸಾಕಷ್ಟು ಶಾಸ್ತ್ರಗಳನ್ನು ನೋಡಬಹುದು. ಇಲ್ಲಿನ ಮದುವೆಗಳಲ್ಲಿ ಮೆಹಂದಿ ಶಾಸ್ತ್ರ ಕೂಡ ಒಂದು. ಈ ಶಾಸ್ತ್ರ ಕೆಲವೆಡೆ ನಂಬಿಕೆಯಾದರೆ, ಕೆಲವೆಡೆ ಮೂಢನಂಬಿಕೆಯಾಗಿದೆ. ಮೆಹಂದಿ ಶಾಸ್ತ್ರದಲ್ಲಿನ ಮೂಢನಂಬಿಕೆಗಳು ಹೀಗಿವೆ:
ಭಾರತೀಯ ಮದುವೆ ಸಂಪ್ರದಾಯಗಳಲ್ಲಿ ಮದರಂಗಿ ಶಾಸ್ತ್ರ ಅಥವಾ ಮೆಹಂದಿ ಶಾಸ್ತ್ರ ಅರಶಿಣ ಶಾಸ್ತ್ರದಷ್ಟೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ವಧು-ವರರಿಗೆ ಮದರಂಗಿಯಿಲ್ಲದೇ ಭಾರತದಲ್ಲಿ ಮದುವೆಯೇ ನಡೆಯಲಾರದು. ಮೊದಲು ಕೇವಲ ಉತ್ತರ ಭಾರತದಲ್ಲಿ ಮಾತ್ರ ಆಚರಿಸಲಾಗುತ್ತಿದ್ದ ಮೆಹಂದಿ ಶಾಸ್ತ್ರ ದಿನಕಳೆದಂತೆ ಇದೀಗ ದಕ್ಷಿಣ ಭಾರತದಲ್ಲೂ ಕೂಡ ಆಚರಣೆಗೆ ಬಂದಿದೆ.

ಕೈಗೆ ಮೆಹಂದಿ ಹಚ್ಚೋದಂದ್ರೆ ಬಹುತೇಕ ಹುಡುಗೀರು ಇಷ್ಟಪಡ್ತಾರೆ. ಹೆನ್ನಾ ನೈಸರ್ಗಿಕ ಬಣ್ಣವಾಗಿದ್ದು, ಇದನ್ನು ‘ಲಾಸೋನಿಯಾ ಇನೆರ್ಮಿಸ್’ ಎಂಬ ವೈಜ್ಞಾನಿಕ ಹೆಸರಿರುವ ಸಸ್ಯದಿಂದ ತಯಾರಿಸಲಾಗುತ್ತದೆ. ಈ ಸಸ್ಯವನ್ನು ಮೆಹೆಂದಿ/ಗೋರಂಟಿ ಮರ ಎಂದೂ ಕರೆಯುತ್ತಾರೆ.
ಚರ್ಮದ ಮೇಲೆ ತಾತ್ಕಾಲಿಕವಾಗಿ ಬಣ್ಣ ಬಿಡುವ ಮೆಹಂದಿ, ಶುಭ ಸಮಾರಂಭದಲ್ಲಿ, ಹಬ್ಬ ಹರಿದಿನಗಳಲ್ಲಿ ಎಲ್ಲಾ ಮಹಿಳೆಯರು ಕೈ ಕಾಲುಗಳಿಗೆ ಹಚ್ಚಿಕೊಳ್ಳುತ್ತಾರೆ. ಭಾರತೀಯ ವಿವಾಹದ ಸಮಯದಲ್ಲಿ ವಧುವಿನ ಕೈ ಕಾಲುಗಳಿಗೆ ಹಚ್ಚುವುದರಿಂದ ಇದು ಸಾಕಷ್ಟು ಮಹತ್ವವನ್ನು ಹೊಂದಿದೆ. ಮೆಹೆಂದಿಯನ್ನು ಕ್ರಿ.ಪೂ 1200 ರ ಮುಂಚೆಯೂ ಬಳಸಲಾಗುತ್ತಿತ್ತು. ವಿಶೇಷ ಸಂದರ್ಭಗಳಲ್ಲಿ ಮಾತ್ರ ಬಳಸುತ್ತಿದ್ದ ಮೆಹೆಂದಿಯನ್ನು ಇತ್ತೀಚಿನ ದಿನಗಳಲ್ಲಿ, ಹುಡುಗಿಯರು ಮತ್ತು ಮಹಿಳೆಯರು ವೃತ್ತಿಪರರ ಸಹಾಯದಿಂದ ಸುಂದರವಾದ ವಿನ್ಯಾಸಗಳನ್ನು ತಮ್ಮ ಕೈಗಳಿಗೆ ಹಚ್ಚಿ ಸಂತೋಷ ಪಡುತ್ತಾರೆ.
ಮದುವೆಯಲ್ಲಿ ಮದುಮಗಳಿಗೆ ಮೆಹಂದಿಯನ್ನು ಏಕೆ ಹಾಕಲಾಗುತ್ತದೆ?
ಸಾಂಪ್ರದಾಯಿಕವಾಗಿಯೂ ಉತ್ತರ ಕೊಡಬಹುದು ಹಾಗೇ ವೈಜ್ಞಾನಿಕವಾಗಿಯೂ ಕೂಡ ಉತ್ತರ ನೀಡಬಹುದು. ಹೇಳಿರುವಂತೆ ಸುಖ, ಶಾಂತಿ, ಸಮೃದ್ಧಿಯು ಸಾಂಪ್ರಧಾಯಿಕ ಉತ್ತರವಾದರೆ, ಇನ್ನು ಮದುಮಗಳು ಮೆಹಂದಿ ಹಚ್ಚಿಕೊಳ್ಳಲು ಹಲವಾರು ವೈಜ್ಞಾನಿಕ ಕಾರಣಗಳೂ ಕೂಡ ಇವೆ. ವೈಜ್ಞಾನಿಕವಾಗಿ ಹೇಳುವುದಾದರೆ, ಮದುವೆ ಹತ್ತಿರ ಬರುತ್ತಿದ್ದಂತೆ ಮನೆಯವರಿಗೆ ಮಾತ್ರವಲ್ಲ, ಮದುಮಗಳೂ ಕೂಡ ಭಯ, ಆಯಾಸ, ಒತ್ತಡದಿಂದಿರುತ್ತಾಳೆ. ಒತ್ತಡ ಹೆಚ್ಚಾದಂತೆ ತಲೆನೋವು, ಜ್ವರ ಬರಬಹುದೆಂದು ತಿಳಿದು, ಇದನ್ನು ನಿವಾರಿಸಲು ಔಷಧೀಯ ಗುಣವುಳ್ಳ ಮೆಹಂದಿಯನ್ನು ಮದುಮಗಳಿಗೆ ಹಚ್ಚಲಾಗುತ್ತದೆ.

ಮೆಹಂದಿಯ ಔಷಧೀಯ ಪ್ರಯೋಜನ:
*ಬಿಳಿ ಕೂದಲು ಕಪ್ಪಾಗಲು
ಒಂದು ಹಿಡಿ ಹಸೀ ಗೋರಂಟಿ ಕಾಯಿಗಳನ್ನು ನುಣ್ಣಗೆ ಅರೆದು ಒಂದು ಲೀಟರ್ ನೀರಿಗೆ ಹಾಕಿ ಚೆನ್ನಾಗಿ ಕಾಯಿಸಿ ಚತುರಾಂಷ ಕಷಾಯ ಮಾಡುವುದು. ಚೆನ್ನಾಗಿ ಪಕ್ವವಾಗಿರುವ ೨೫ ಗ್ರಾಂ ನೀಲಿ ದ್ರಾಕ್ಷಿಯನ್ನು ತಂದು ಬೀಜಗಳನ್ನು ಬೇರ್ಪಡಿಸಿ ನುಣ್ಣಗೆ ರುಬ್ಬಿ ಮೇಲಿನ ಕಷಾಯಕ್ಕೆ ಸೇರಿಸುವುದು. ನಂತರ ಒಂದು ಬಟ್ಟಲು ಈ ಕಷಾಯಕ್ಕೆ ಕಾದಾರಿದ ನೀರು ಸ್ವಲ್ಪ ಸೇರಿಸಿ ಕೂದಲಿಗೆ ಹಚ್ಚುವುದು. ಬೆಳಿಗ್ಗೆ ಸೀಗೆಕಾಯಿ ಹಾಕಿ ಬಿಸಿ ನೀರಿನ ಸ್ನಾನ ಮಾಡುವುದು. ಹೀಗೆ ಮೂರು ನಾಲ್ಕು ತಿಂಗಳ ಉಪಚಾರದಿಂದ ಸಫಲತೆ ದೊರೆಯುವುದು.
*ಕೈಗಳಿಗೆ ಬಳಸುವ ಹೆನ್ನಾ ಸಂಧಿವಾತದ ನೋವನ್ನು ನಿವಾರಿಸುತ್ತದೆ. ಇದು ನರಗಳ ಮೇಲೆ ತಂಪು ಪರಿಣಾಮವನ್ನು ಬೀರುವುದರಿಂದ ದೇಹವನ್ನು ಸಡಿಲಗೊಳಿಸುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ.
*ಕಷಾಯದ ರೂಪದಲ್ಲಿ ಇಲ್ಲವೆ ಸರಿಯ ರೂಪದಲ್ಲಿ ಇವನ್ನು ಹುಣ್ಣು, ತರಚು ಹಾಗೂ ಸುಟ್ಟಗಾಯಗಳು ಮತ್ತು ಕೆಲವು ಚರ್ಮರೋಗಗಳಿಗೆ ಬಳಸುತ್ತಾರೆ.
*ಸುಟ್ಟಗಾಯ ಶಮನ
ಮೆಹೆಂದಿ ತೆರೆದ ಗಾಯಗಳನ್ನು ಮತ್ತು ಸುಟ್ಟಗಾಯಗಳನ್ನು ಶಮನಗೊಳಿಸುತ್ತದೆ. ಚರ್ಮದ ಸೋಂಕುಗಳನ್ನು ನಿವಾರಿಸಲು ಬಳಸಲಾಗುತ್ತದೆ. ಮೆಹೆಂದಿ ಹೂವುಗಳನ್ನು ವಿನೆಗರ್‌ನಲ್ಲಿ ನೆನೆಸಿ, ಚರ್ಮದ ಮೇಲೆ ಹಚ್ಚುವುದರಿಂದ, ಬ್ಯಾಕ್ಟೀರಿಯಾದಿಂದ ಹರಡುವ ಸೊಂಕುಗಳು ದೂರವಾಗುತ್ತದೆ.
*ಗೋರಂಟಿಯ ಹೂವನ್ನು ಆವಿ ಅಸವೀಕರಣಕ್ಕೊಳಪಡಿಸಿ ಒಂದು ಬಗೆಯ ಪರಿಮಳಯುಕ್ತ ಚಂಚಲ ತೈಲವನ್ನು ಪಡೆಯಬಹುದು. ಇದಕ್ಕೆ ಮೆಹಂದಿ ಎಣ್ಣೆ ಎಂದು ಹೆಸರು.

*ತಲೆಯಲ್ಲಿ ಹೇನು ಮತ್ತು ಸೀರು ನಿವಾರಣೆಗೆ
ಹಸಿ ಅಥವಾ ಒಣಗಿದ ಒಂದು ಹಿಡಿ ಗೋರಂಟಿ ಸೊಪ್ಪನ್ನು ಸ್ವಲ್ಪ ನೀರು ಸೇರಿಸಿ ನುಣ್ಣಗೆ ಅರೆದು ೨ಗ್ರಾಂ ಆರತಿ ಕರ್ಪೂರವನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ತಲೆಗೆ ಹಚ್ಚುವುದು. (ಅಥವಾ) ಹಸಿ ಅಥವಾ ಒಣಗಿದ ಒಂದು ಹಿಡಿ ಗೋರಂಟಿ ಸೊಪ್ಪನ್ನು ನುಣ್ಣಗೆ ಅರೆದು ಸ್ವಲ್ಪ ಕರ್ಪೂರ ಮತ್ತು ಆಲಿವ್ ಎಣ್ಣೆಯನ್ನು ಬೆರಿಸಿ ತಲೆ ಕೂದಲಿಗೆ ಹಚ್ಚುವುದು. ಇದರಿಂದ ಹೇನುಗಳು, ಸೀರುಗಳು ನಾಶವಾಗುವುವು.
*ಕಷಾಯ ಗಂಟಲುನೋವಿಗೆ ಒಳ್ಳೆಯ ಮದ್ದು. ಗೋರಂಟಿಯ ಚೌಬೀನೆಯನ್ನು ಉಪಕರಣಗಳ ಹಿಡಿ, ಗೂಟ ಮುಂತಾದವುಗಳ ತಯಾರಿಕೆಗೆ ಉಪಯೋಗಿಸುತ್ತಾರೆ. ಎಳೆಯ ಕಡ್ಡಿಗಳನ್ನು ಹಲ್ಲುಜ್ಜಲು ಇಂಡೋನೇಷ್ಯದಲ್ಲಿ ಬಳಸುತ್ತಾರೆ.ಗೋರಂಟಿಯನ್ನು ವಾಣಿಜ್ಯ ದೃಷ್ಟಿಯಿಂದ ದೆಹಲಿ, ಗುಜರಾತ್ ಮತ್ತು ಮಾಲ್ವ ಎಂಬ ಮೂರು ಬಗೆಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ದೆಹಲಿ ಗೋರಂಟಿ ಅತ್ಯುತ್ತಮವಾದ್ದು.
*ಅಂಗೈ ಅಂಗಾಲು ಉರಿ
ಹಸಿ ಗೋರಂಟಿ ಸೊಪ್ಪನ್ನು ನುಣ್ಣಗೆ ಅರೆದು ಸ್ವಲ್ಪ ನಿಂಬೆಹುಳಿ ಸೇರಿಸಿ ಚೆನ್ನಾಗಿ ಮಸೆದು ಅಂಗೈ ಅಂಗಾಲುಗಳಿಗೆ ಲೇಪಿಸುವುದು.
ಧನ್ಯವಾದಗಳು.
GIPHY App Key not set. Please check settings