in

ಸರ್ದಾರ್ ವಲ್ಲಭಭಾಯ್ ಪಟೇಲ್ ಉಕ್ಕಿನ ಮನುಷ್ಯನ ಪುಣ್ಯ ಸ್ಮರಣೆ 

ಸರ್ದಾರ್ ವಲ್ಲಭಭಾಯ್ ಪಟೇಲ್ ಪುಣ್ಯ ಸ್ಮರಣೆ 
ಸರ್ದಾರ್ ವಲ್ಲಭಭಾಯ್ ಪಟೇಲ್ ಪುಣ್ಯ ಸ್ಮರಣೆ 

ಇಂದು ಡಿಸೆಂಬರ್ ೧೫, ಉಕ್ಕಿನ ಮನುಷ್ಯ, ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪುಣ್ಯ ಸ್ಮರಣೆಯ ದಿನ.

ವಲ್ಲಭಭಾಯ್ ಪಟೇಲ್, ಪ್ರೀತಿ ಬಳಸುವಲ್ಲಿ ಪ್ರೀತಿಯಿಂದ, ದಂಡಪ್ರಯೋಗ ಮಾಡಬೇಕಾದಲ್ಲಿ ದಂಡ ಅದರಿಂದ ಕೆಲಸ ಸಾಧಿಸಿದರು, ಒಕ್ಕೂಟ ಭಾರತವನ್ನು ಕಟ್ಟಿದರು. ಇಂದು ಭಾರತವೊಂದು ಒಕ್ಕೂಟವಾಗಿ ಉಳಿದಿದ್ದರೆ ಅದು ಅವರಿಂದಲೇ. ಅವರ ನೆನಪಿನಲ್ಲೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು 2014 ರಲ್ಲಿ ವಲ್ಲಭಾಯಿ ಪಟೇಲ್‌ ಅವರ ಜನ್ಮದಿನವನ್ನು ‘ರಾಷ್ಟ್ರೀಯ ಏಕತಾ ದಿವಸ್’ ಎಂದು ಘೋಷಿಸಿತು

ಸರ್ದಾರ್ ಪಟೇಲ್ ಎಂದೇ ಕರೆಯಲ್ಪಡುವ, ಭಾರತದ ಪ್ರಮುಖ ರಾಜಕೀಯ ವ್ಯಕ್ತಿಗಳಲ್ಲೊಬ್ಬರು. ಭಾರತದ ಪ್ರಪ್ರಥಮ ಉಪಪ್ರಧಾನ ಮಂತ್ರಿ ಹಾಗೂ ಗೃಹಸಚಿವರಾಗಿದ್ದರು. ಅವರೊಬ್ಬ ವಕೀಲ(ಬ್ಯಾರಿಸ್ಟರ್) ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಹಿರಿಯ ಮುಖಂಡರಾಗಿದ್ದರು. ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಮಾತ್ರವಲ್ಲದೇ, ಭಾರತದ ಗಣರಾಜ್ಯದ ಸ್ಥಾಪನೆ ಮತ್ತು ಸ್ವತಂತ್ರ ರಾಷ್ಟ್ರದೊಳಗಿನ ಏಕೀಕರಣದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದರು.

ಸರ್ದಾರ್ ವಲ್ಲಭಭಾಯ್ ಪಟೇಲ್ ಉಕ್ಕಿನ ಮನುಷ್ಯನ ಪುಣ್ಯ ಸ್ಮರಣೆ 
ಸರ್ದಾರ್ ವಲ್ಲಭಭಾಯ್ ಪಟೇಲ್

ಭಾರತ ಮತ್ತು ಇತರೆ ಕಡೆಗಳಲ್ಲಿ, ಅವರನ್ನು ಹೆಚ್ಚಾಗಿ ಸರ್ದಾರ್ ಎಂದು ಕರೆಯಲಾಗುತ್ತಿತ್ತು, ಇದರರ್ಥ ಹಿಂದಿ, ಉರ್ದು, ಮತ್ತು ಪರ್ಷಿಯನ್ ಭಾಷೆಗಳಲ್ಲಿ “ಮುಖ್ಯ”ವಾದ ವ್ಯಕ್ತಿ. 1947ರ ಇಂಡೋ-ಪಾಕಿಸ್ತಾನ ಯುದ್ಧದ ಅವಧಿಯಲ್ಲಿ ಅವರು ಭಾರತೀಯ ಸೈನ್ಯದ ಕಮಾಂಡರ್-ಇನ್-ಚೀಫ್ ಆಗಿ ಸಹ ಕಾರ್ಯ ನಿರ್ವಹಿಸಿದರು. ಇವರು ಕೈಗೊಂಡ ಕಠು ನಿರ್ಧಾರಗಳಿಂದ ಇವರಿಗೆ, ಉಕ್ಕಿನ ಮನುಷ್ಯ ಅಥವಾ ಲೋಹ ಪುರುಷ ಎಂಬ ಬಿರುದೂ ಪ್ರಜಾಮಾನಸದಲ್ಲಿ ದೊರೆತಿತ್ತು.

ವಲ್ಲಭಭಾಯ್ ಝವೇರಿಭಾಯ್ ಪಟೇಲ್ ಹುಟ್ಟಿದ್ದು ಗುಜರಾತಿನ ನಡಿಯಾದ್ ಎಂಬಲ್ಲಿನ ಅವರ ಸೋದರಮಾವನ ಮನೆಯಲ್ಲಿ. ಖೇಡಾ ಜಿಲ್ಲೆಯ ಕರಮಸಾಡ್ ಎಂಬ ಹಳ್ಳಿಯ ನಿವಾಸಿ ಝವೇರಭಾಯ್ ಮತ್ತು ಲಾಡಬಾ ಇವರ ನಾಲ್ಕನೆಯ ಮಗನಾಗಿ ಜನಿಸಿದ ವಲ್ಲಭಭಾಯಿಯ ಹುಟ್ಟಿದ ದಿನ, ಮುಂದೆ ಅವರು ಮ್ಯಾಟ್ರಿಕ್ ಪರೀಕ್ಷೆಯಲ್ಲಿ ಅಕ್ಟೋಬರ್ ೩೧ ಎಂದು ನಮೂದಿಸಿದರೂ, ನಿಖರವಾಗಿ ದಾಖಲಾಗಿಲ್ಲ. ಅವರು ಮಧ್ಯ ಗುಜರಾತ್‍‌ನ ಲೇವಾ ಪಟೇಲ್ ಪಾಟಿದಾರ ಸಮುದಾಯಕ್ಕೆ ಸೇರಿದವರಾಗಿದ್ದಾರೆ, ಆದಾಗ್ಯೂ ಲೇವಾ ಪಟೇಲ್‌ ಮತ್ತು ಕಡವ ಪಟೇಲ್‌ರ ಗುಂಪುಗಳು ಸರ್ದಾರ್ ಪಟೇಲ್‌ರನ್ನು ತಮ್ಮವರೆಂದು ಗುರುತಿಸುತ್ತಾರೆ.

ಸೋಮಾಭಾಯಿ, ನರಸೀಭಾಯಿ, ಮತ್ತು, ರಾಜಕೀಯದಲ್ಲಿ ಮುಂದೆ ಪ್ರಸಿದ್ಧರಾದ, ವಿಠ್ಠಲಭಾಯಿ ಇವರ ಅಣ್ಣಂದಿರುಗಳು. ಕಾಶೀಭಾಯಿ ಎಂಬ ತಮ್ಮ ಹಾಗೂ ದಹೀಬಾ ಎಂಬ ತಂಗಿ ಇವರ ಇತರ ಒಡಹುಟ್ಟಿದವರು. ಪಟೇಲ್‌ರು ನಡಿಯಾದ್, ಪೆಟ್ಲಾಡ್, ಮತ್ತು ಬೋರಸಾಡ್‌ನಲ್ಲಿ ಶಾಲೆಗಳಿಗೆ ಹಾಜರಾಗಲು, ಇತರ ಹುಡುಗರೊಂದಿಗೆ ಪ್ರಯಾಣಿಸುತ್ತಾ ಸ್ವಯಂ ಜೀವಿಸುತ್ತಿದ್ದರು. ಅವರು ಅಚಲ ಸಂಯಮ ಸ್ವಭಾವವನ್ನು ಬೆಳೆಸಿಕೊಂಡರು. ಒಂದು ಜನಪ್ರಿಯ ದಂತಕಥೆಯಂತೆ, ಒಮ್ಮೆ ಕ್ಷೌರಿಕನು ಒಂದು ಗುಳ್ಳೆಯ ಕಾರಣ ಅಳುಕುತಿದ್ದಾಗ, ತಾವೇ ಚಾಕುವನ್ನು ತೆಗೆದುಕೊಂಡು, ಕೆತ್ತಿಕೊಂಡರು. 

ಸರ್ದಾರ್ ವಲ್ಲಭಭಾಯ್ ಪಟೇಲ್ ಉಕ್ಕಿನ ಮನುಷ್ಯನ ಪುಣ್ಯ ಸ್ಮರಣೆ 
ಸರ್ದಾರ್ ಪಟೇಲ್ ರಾಷ್ಟ್ರೀಯ ಸ್ಮಾರಕದ ಸೆಂಟ್ರಲ್ ಹಾಲ್ ಸಭಾಂಗಣ.

ಪಟೇಲರು ೨೨ ವರ್ಷದವರಿದ್ದಾಗ, ಮ್ಯಾಟ್ರಿಕ್ ಪರೀಕ್ಷೆ ಕಟ್ಟಿದರು. ಈ ಘಟ್ಟದಲ್ಲಿ ಅವರ ಸರೀಕರ ಅಭಿಪ್ರಾಯದಲ್ಲಿ ಪಟೇಲರು ಯಾವುದೇ ಮಹತ್ವಾಕಾಂಕ್ಷೆಯಿಲ್ಲದ ಜನಸಾಮಾನ್ಯರಲ್ಲಿ ಒಬ್ಬರಾಗಿದ್ದರು. ಆದಾಗ್ಯೂ, ಪಟೇಲ್ ಸ್ವತಃ ವಕೀಲರಾಗಿ ಕೆಲಸ ಮಾಡಲು ಮತ್ತು ಹಣವನ್ನು ಉಳಿಸಲು, ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಲು ಮತ್ತು ನ್ಯಾಯವಾದಿಯಾಗಲು ಅಧ್ಯಯನ ಮಾಡಲು ಯೋಜನೆಯನ್ನು ರೂಪಿಸಿಕೊಂಡಿದ್ದರು. ಹಲವು ವರ್ಷಗಳ ಕಾಲ ತನ್ನ ಕುಟುಂಬದಿಂದ ದೂರವಿದ್ದು, ಇತರ ವಕೀಲರಿಂದ ಎರವಲು ಪಡೆದ ಪುಸ್ತಕಗಳೊಂದಿಗೆ ತನ್ನದೇ ಆದ ಅಧ್ಯಯನವನ್ನು ನಡೆಸಿ, ಎರಡು ವರ್ಷಗಳಲ್ಲಿ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದರು.

ಇಂಗ್ಲೆಂಡ್‌ಗೆ ತೆರಳಲು ಅವರು ಸಾಕಷ್ಟು ಹಣ ಉಳಿಸಿ, ಪಾಸ್ ಮತ್ತು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದಾಗ, “ವಿ.ಜೆ.ಪಟೇಲ್” ಎಂದು ನಮೂದಿಸಲಾಗಿತ್ತು. ಇವರದೇ ಹೆಸರಿನ ಮೊದಲಕ್ಷರ ಹೊಂದಿದ್ದ ಇವರ ಅಣ್ಣನಾದ ವಿಠಲ್‌ಭಾಯ್ ವಿಳಾಸವು ಸಹ ನಮೂದಾಗಿತ್ತು. ಇಂಗ್ಲೆಂಡ್ನಲ್ಲಿ ಅಧ್ಯಯನ ಮಾಡುವ ಆಶಯವನ್ನು ಹೊಂದಿದ್ದ ವಿಠಲ್‌ಭಾಯ್, ವಲ್ಲಭ್‌ಭಾಯಿ ಮೊದಲು ಹೋದರೆ, ಅಣ್ಣನಾದ ತಾನು ಅವನ ಹಿಂದೆ ಹೋಗಬೇಕಾಗಿ ಬರುತ್ತದೆ ಮತ್ತು ಅದು ತನ್ನ ಗೌರವಕ್ಕೆ ಕುಂದು ತರುವಿದೆಂದು ಅಭಿಪ್ರಾಯಪಟ್ಟರು. ಅವರ ಕುಟುಂಬದ ಗೌರವಾರ್ಥ, ಪಟೇಲ್ ವಿಠಲ್‌ಭಾಯ್ ಅವರನ್ನು ತಮ್ಮ ಜಾಗದಲ್ಲಿ, ತಮ್ಮ ಟಿಕೆಟ್‌ ಉಪಯೋಗಿಸಿಕೊಂಡು ಹೋಗಲು ಅನುಮತಿ ನೀಡಿದರು.

ಗುಜರಾತ್‌ನ ಗ್ರಾಮಾಂತರ ಭಾಗದಲ್ಲಿ ಬೆಳೆದ ಪಟೇಲ್, ಯಶಸ್ವಿ ವಕೀಲರಾಗಿದ್ದರು. ಅವರು ತರುವಾಯ ಗುಜರಾತ್‌ನ ಖೇಡಾ, ಬೊರ್ಸಾದ್ ಮತ್ತು ಬರ್ಡೋಲಿಗಳಿಂದ ರೈತರನ್ನು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಅಹಿಂಸಾತ್ಮಕ, ನಾಗರಿಕ ಅಸಹಕಾರ ಚಳುವಳಿಗಾಗಿ ಸಂಘಟಿಸಿದರು. ಈ ಮೂಲಕ ಗುಜರಾತ್‌ನ ಅತ್ಯಂತ ಪ್ರಭಾವಶಾಲಿ ನಾಯಕರಲ್ಲಿ ಒಬ್ಬರಾದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ 49ನೇ ಅಧ್ಯಕ್ಷರಾಗಿ ನೇಮಕಗೊಂಡರು. ಕ್ವಿಟ್ ಇಂಡಿಯಾ ಚಳವಳಿಯನ್ನು ಉತ್ತೇಜಿಸುವುದರ ಜೊತೆಯಲ್ಲೇ, ಕಾಂಗ್ರೆಸ್ ಪಕ್ಷವನ್ನು 1934 ಮತ್ತು 1937ರ ಚುನಾವಣೆಗಳಲ್ಲಿ ಮುನ್ನಡೆಸಿದರು.

ತಮ್ಮ ಚೆನ್ನಾಗಿ ನಡೆಯುತ್ತಿದ್ದ ವಕೀಲಿ ವೃತ್ತಿ, ಅದರ ಘನತೆ, ಗೌರವ, ದೊಡ್ಡ ಮನೆ,ಸಂಪತ್ತು ಎಲ್ಲವನ್ನೂ ತ್ಯಜಿಸಿ ಸ್ವಾತಂತ್ರ್ಯ ಹೋರಾಟದ ಸರಳ ಜೀವನ, ಕಷ್ಟಕಾರ್ಪಣ್ಯ ಗಳಿಗೆ ತಮ್ಮನ್ನು ಅರ್ಪಿಸಿಕೊಂಡರು. ಮೊದಮೊದಲು ತಮ್ಮ ಮಿತ್ರರೊಂದಿಗೆ ಗಾಂಧಿಯವರ ರೀತಿನೀತಿಗಳನ್ನೂ, ರಾಜಕೀಯ ನೀತಿಗಳನ್ನೂ ಲೇವಡಿ ಮಾಡಿದ್ದರೂ, ಅನ್ನಿ ಬೆಸಂಟರ ಬಂಧನಕ್ಕೆ ಸಹಿಹಾಕಿದ ಪಿಟಿಷನ್ ಬದಲು ಸಾರ್ವಜನಿಕ ಪ್ರತಿಭಟನೆಮಾಡಬೇಕು ಎಂದು ಗಾಂಧಿ ಸೂಚಿಸಿದಾಗ, ಅವರ ಮನಃಪರಿವರ್ತನೆಯಾಯಿತು.

ಸರ್ದಾರ್ ವಲ್ಲಭಭಾಯ್ ಪಟೇಲ್ ಉಕ್ಕಿನ ಮನುಷ್ಯನ ಪುಣ್ಯ ಸ್ಮರಣೆ 
೧೯೪೦ ರ ಬಾಂಬೆಯ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಅಜಾದ್, ಪಟೇಲ್ ಹಾಗು ಗಾಂಧೀಜಿ

ಗಾಂಧಿಯವರ ಚಂಪಾರಣ್ಯದ ಸತ್ಯಾಗ್ರಹದ ನಂತರ ಪಟೇಲರಿಗೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಜಯ ಗಳಿಸಲು ಗಾಂಧಿ ಸಮರ್ಥರು ಎಂದು ನಂಬಿಕೆಯುಂಟಾಯಿತು. ಆ ಹಿರಿಯ ವ್ಯಕ್ತಿ ಭಾರತೀಯ ಮೌಲ್ಯಗಳಲ್ಲಿಟ್ಟಿದ್ದ ಶ್ರದ್ಧೆ, ಅತಿ ಸರಳ ಜೀವನ ಇವುಗಳಿಂದ ಆಕರ್ಷಿತರಾದ ಪಟೇಲರು ಗಾಂಧಿಯವರ ಆಪ್ತರಾದರು.

ತಮ್ಮ ಎಪ್ಪತ್ತೆರಡನೆಯ ವಯಸ್ಸಿನಲ್ಲಿ, 565 ರಾಜ ಸಂಸ್ಥಾನಗಳನ್ನು ಭಾರತದಲ್ಲಿ ವಿಲೀನಗೊಳಿಸಿ, ಅಲ್ಲಿ ಪ್ರಜಾಪ್ರಭುತ್ವವನ್ನು ಜಾರಿಗೊಳಿಸುವ, ದೇಶದ ರಕ್ಷಣೆಯ ವ್ಯವಸ್ಥೆಯನ್ನು ರೂಪಿಸುವ ಹಾಗೂ ಭಾರತವನ್ನು ಒಗ್ಗಟ್ಟಾದ ದೇಶವನ್ನಾಗಿ ಕಟ್ಟುವ ಮಹತ್ತರ ಜವಾಬ್ದಾರಿಯನ್ನು ಪಟೇಲರು ಹೊತ್ತುಕೊಂಡರು.

ವಿಶ್ವದ ಅತೀ ಎತ್ತರದ ಪ್ರತಿಮೆ ಎಂಬ ಕೀರ್ತಿಗೆ ಭಾಜನವಾಗಿರುವ ಸರ್ದಾರ್ ವಲ್ಲಭಬಾಯಿ ಪಟೇಲರ ಏಕತಾ ಪ್ರತಿಮೆ ಲಂಡನ್ ಮೂಲದ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.

ಬರೊಬ್ಬರಿ 182 ಮೀಟರ್ ಎತ್ತರದ ‘ಏಕತಾ ಪ್ರತಿಮೆ’, ಬ್ರಿಟನ್ ಮೂಲದ ಇನ್ ಸ್ಟಿಟ್ಯೂಷನ್ ಆಫ್ ಸ್ಟ್ರಕ್ಚರಲ್ ಎಂಜಿನಿಯರ್ಸ್‌ ಸಂಸ್ಥೆಯ ಪ್ರಶಸ್ತಿ ಪಟ್ಟಿಯ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದು, ಈ ಸಂಸ್ಥೆ 2019ನೇ ಸಾಲಿಗೆ ನೀಡುವ ‘ದಿ ಸ್ಟ್ರಕ್ಚರಲ್ ಅವಾರ್ಡ್ಸ್‌’ಗೆ ಈ ಪ್ರತಿಮೆ ಕೂಡ ನಾಮನಿರ್ದೇಶನವಾಗಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಮೆಹಂದಿಯಲ್ಲಿ ಸಾಂಪ್ರದಾಯಿಕ ಪ್ರಯೋಜನಗಳು ಮತ್ತು ವೈಜ್ಞಾನಿಕ ಉಪಯೋಗಗಳು

ಮೆಹಂದಿಯಲ್ಲಿ ಸಾಂಪ್ರದಾಯಿಕ ಪ್ರಯೋಜನಗಳು ಮತ್ತು ವೈಜ್ಞಾನಿಕ ಉಪಯೋಗಗಳು ಕೂಡಾ ಇದೆ

ಕಣ್ಣಿನ ಸುತ್ತ ಕಪ್ಪು ತಡೆಗಟ್ಟಲು ಈ ಕ್ರಮಗಳನ್ನು ಅನುಸರಿಸಿ

ಕಣ್ಣಿನ ಸುತ್ತ ಕಪ್ಪು ತಡೆಗಟ್ಟಲು ಈ ಕ್ರಮಗಳನ್ನು ಅನುಸರಿಸಿ