ಮನೆಯಲ್ಲಿ ಸೊಳ್ಳೆಗಳು, ನೊಣಗಳು, ಜೇಡಗಳು ಸೇರಿ ಅನೇಕ ಕೀಟಗಳು ಕಿರಿಕಿರಿ ಉಂಟು ಮಾಡುತ್ತವೆ. ಕೀಟ ನಿವಾರಕ ಸಸ್ಯಗಳಿಂದ ಈ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬಹುದು. ಈ ಸಮಸ್ಯೆಯ ಪರಿಹಾರಕ್ಕೆ ಮನೆಯಂಗಳದಲ್ಲಿ ಅಥವಾ ಮನೆಯ ಒಳಗೆ ಕೆಲ ಕೀಟ ನಿವಾರಕ ಗಿಡಗಳಿದ್ದರೆ ಕೀಟಗಳ ಕಾಟಕ್ಕೆ ಗುಡ್ ಬೈ ಹೇಳಬಹುದು.
ಮಳೆಗಾಲದಲ್ಲಿ ಸಾಮನ್ಯವಾಗಿ ಕೀಟಗಳ ಕಿರಿಕಿರಿ ಹೆಚ್ಚಾಗಿರುತ್ತದೆ. ಸೊಳ್ಳೆಗಳು, ನೊಣಗಳು, ಜೇಡಗಳು ಸೇರಿ ಅನೇಕ ಕೀಟಗಳು ಮನೆಯ ಅತಿಥಿಯಾಗಿ ಉಳಿಯುತ್ತವೆ. ಇವುಗಳಿಂದ ಡೆಂಘೀ, ಚಿಕೂನ್‌ಗುನ್ಯಾ ಮತ್ತು ಮಲೇರಿಯಾ ರೋಗಗಳು ಬರುತ್ತವೆ. ಕೀಟ ನಿವಾರಕ ಅಥವಾ ಕೀಟ ವಿಕರ್ಷಕ ಸಸ್ಯಗಳು ಈ ಸಮಸ್ಯೆಯನ್ನು ನಿವಾರಿಸಲು ಉತ್ತಮ ಮಾರ್ಗವಾಗಿವೆ. ಕೆಲ ಸಸ್ಯಗಳು ಕೀಟಗಳಿಗೆ ಗೇಟ್ ಪಾಸ್ ಕೊಡುತ್ತವೆ. ಕೀಟಗಳನ್ನು ದೂರವಿಡುವ ಅನೇಕ ಸಸ್ಯಗಳಿವೆ.

ಸಹಜವಾಗಿ, ನೀವು ಮೊದಲ ಆಯ್ಕೆಯಾಗಿ ಕೀಟ ನಿವಾರಕಗಳನ್ನು ಬಳಸಬಹುದು. ಆದರೆ ಇವುಗಳು ತಮ್ಮದೇ ಆದ ಆರೋಗ್ಯಕ್ಕೆ ಮಾರಕವಾಗಬಹುದಾದ ಅಪಾಯಗಳೊಂದಿಗೆ ಬರುತ್ತವೆ. ಇದರ ಬದಲಿಗೆ ಇದೇ ಕೆಲಸವನ್ನು ಮಾಡುವಕೆಲವು ಕೀಟ ನಿವಾರಕ ಅಥವಾ ಕೀಟ ವಿಕರ್ಷಕ ಸಸ್ಯಗಳ ನೆರವನ್ನು ಪಡೆಯುವುದು ಈ ಸಮಸ್ಯೆಯನ್ನು ನಿವಾರಿಸಲು ಉತ್ತಮ ಮಾರ್ಗವಾಗಿದೆ. ಹೌದು, ಕೀಟಗಳನ್ನು ದೂರವಿಡುವ ಅನೇಕ ಸಸ್ಯಗಳಿವೆ. ಮತ್ತು ಇನ್ನೂ ಒಳ್ಳೆಯ ಅಂಶವೆಂದರೆ ಈ ಸಸ್ಯಗಳು ನಿಮ್ಮ ಮನೆಯ ಅಂದವನ್ನು ಹೆಚ್ಚಿಸುತ್ತವೆ ಮತ್ತು ಅದಕ್ಕೆ ಆಹ್ಲಾದಕರ ಕಂಪನಗಳನ್ನು ನೀಡುತ್ತದೆ.
ಲ್ಯಾವೆಂಡರ್

ಕೀಟನಾಶಕ ಸಸ್ಯಗಳಲ್ಲಿ ಲ್ಯಾವೆಂಡರ್ ಕೂಡ ಒಂದು. ಇದು ಸೊಳ್ಳೆ ಸೇರಿದಂತೆ ಅನೇಕ ಕೀಟಗಳನ್ನು ಓಡಿಸುವ ನಿಟ್ಟಿನಲ್ಲಿ ಒಂದು ಚಮತ್ಕಾರಿಕ ಸಸ್ಯವಾಗಿದೆ. ಇದರಿಂದ ರಾಸಾಯನಿಕಗಳಿಂದ ಮುಕ್ತವಾಗಿರುವ ಸೊಳ್ಳೆ ನಿವಾರಕ ದ್ರಾವಣವನ್ನು ಪಡೆಯಬಹುದು. ಲ್ಯಾವೆಂಡರ್ ಸಸಿಯಿಂದ ಪಡೆದ ಎಣ್ಣೆಯನ್ನು ನೀರಿನಲ್ಲಿ ಬೆರೆಸಿ ಅದನ್ನು ನೇರವಾಗಿ ತ್ವಚೆಯ ಮೇಲೆ ಲೇಪಿಸಿಕೊಳ್ಳಬಹುದು. ಸೊಳ್ಳೆಗಳನ್ನು ದೂರವಿರಿಸಲು, ಲ್ಯಾವೆಂಡರ್ ಸಸಿಯಿಂದ ಪಡೆದ ಎಣ್ಣೆಯನ್ನು ದೇಹಕ್ಕೆ ಹಚ್ಚಿಕೊಳ್ಳಬಹುದು. ಇದರಿಂದ ಕೀಟಗಳ ಕಾಟದಿಂದ ಮುಕ್ತಿ ಪಡೆಯಬಹುದು.
ಗೊಂಡೆಹೂವು

ಚೆಂಡು ಹೂವು ಎಂದೂ ಕರೆಯಲ್ಪಡುವ ಈ ಹೂವು ಸುಮಾರು ಚಿಕ್ಕ ಚೆಂಡಿನಷ್ಟೇ ದೊಡ್ಡದಿದ್ದು ಅಷ್ಟೊಂದು ಅಹ್ಲಾದಕರವಲ್ಲದ ಸುವಾಸನೆಯನ್ನು ಬೀರುತ್ತದೆ. ಆದರೆ ಈ ಆಕರ್ಷಕ ಚಿನ್ನದ ಬಣ್ಣದ ದಳಗಳ ಹೂವಿನ ಸುವಾಸನೆ ಸೊಳ್ಳೆ ಮತ್ತು ಅತಿ ಚಿಕ್ಕ ಹೇನುಗಳನ್ನು ವಿಕರ್ಷಿಸುತ್ತದೆ. ವಿಶೇಷವಾಗಿ ಮಳೆಗಾಲದಲ್ಲಿ ಈ ಹೇನುಗಳು ಎಲ್ಲಿಂದ ಬಂದು ತಲೆಗೆ ಸೇರಿಕೊಳ್ಳುತ್ತವೋ ಗೊತ್ತಾಗುವುದೇ ಇಲ್ಲ. ಇದನ್ನು ತಡೆಯಲು ಕೆಲವಾರು ಹೂಗಿಡಗಳನ್ನು ಮನೆಯಂಗಳದಲ್ಲಿ ವಿಶೇಷವಾಗಿ ಪ್ರಧಾನ ಬಾಗಿಲಿನ ಅಕ್ಕ ಪಕ್ಕದಲ್ಲಿ ಇರಿಸುವ ಮೂಲಕ ಈ ಸೊಳ್ಳೆ ಮತ್ತು ಹೇನುಗಳ ಕಾಟ ಇಲ್ಲವಾಗುತ್ತದೆ.
ನಿಮ್ಮ ಮನೆಯ ಹಿಂಭಾಗದ ಬಾಗಿಲುಗಳ ಬಳಿಯೂ ಇವುಗಳನ್ನು ಸುಲಭವಾಗಿ ನೆಡಬಹುದು. ಈ ಸಸ್ಯಗಳ ಉತ್ತಮ ವಿಷಯವೆಂದರೆ ನೀವು ಅವುಗಳನ್ನು ಕುಂಡಗಳಲ್ಲಿಯೂ ಬೆಳೆಯಬಹುದು. ಇವುಗಳನ್ನು ನಿರ್ವಹಿಸುವುದು ಸುಲಭ ಮತ್ತು ನೀವು ಮಾಡಬೇಕಾಗಿರುವುದು ಅವುಗಳನ್ನು ನಿಯಮಿತವಾಗಿ ನೀರುಹಾಕುತ್ತಿರುವುದು ಅಷ್ಟೇ. ಉಳಿದಂತೆ ಈ ಸಸ್ಯಗಳು ಕನಿಷ್ಟ ಆರೈಕೆ ಬೇಡುವ ಗಿಡಗಳಾಗಿದ್ದು ತಾವಾಗಿಯೇ ಸೊಂಪಾಗಿ ಬೆಳೆಯುತ್ತವೆ.
ಪುದಿನಾ

ಈ ರುಚಿಕಾರಕ ಎಲೆಗಳ ಬಳಕೆ ಕೇವಲ ಪಾನೀಪೂರಿಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಸೊಳ್ಳೆಗಳು, ನೊಣಗಳು ಮತ್ತು ಇರುವೆಗಳು ಸೇರಿದಂತೆ ಅನೇಕ ಕ್ರಿಮಿಗಳನ್ನು ಹಿಮ್ಮೆಟ್ಟಿಸುವಂತಹ ತೀವ್ರವಾದ ವಾಸನೆಯನ್ನು ಹೊಂದೆ. ಈ ಸಸ್ಯವು ಸಾರಭೂತ ತೈಲವನ್ನು ಹೊಂದಿದ್ದು ಅದು ಕೀಟಗಳ ಕಡಿತಕ್ಕೂ ಪರಿಹಾರ ನೀಡುತ್ತದೆ. ಆದರೆ ಈ ಪುಟ್ಟ ಗಿಡದ ಗೆಲ್ಲುಗಳನ್ನು ಎಸೆದಲ್ಲೆಲ್ಲಾ ದಟ್ಟವಾಗಿ ಬೆಳೆಯುವ ಕಾರಣ ಇದಕ್ಕಾಗಿ ಪ್ರತ್ಯೇಕ ಕುಂಡವನ್ನು ತಯಾರಿಸಿ ಕಾಂಡಗಳ ತುಂಡುಗಳನ್ನು ನೆಟ್ಟು ಬೆಳೆಸಿ.
ಇದನ್ನು ಇರಿಸಲು ಉತ್ತಮ ಸ್ಥಳವೆಂದರೆ ನಿಮ್ಮ ಮನೆಯೊಳಗೆ ಹೆಚ್ಚು ಗಾಳಿ ಒಳಬರುವ ಕಿಟಕಿಯ ಕಟ್ಟೆ. ಕಿಟಕಿಗಳ ಮೂಲಕವೇ ಇರುವೆಗಳು ಮನೆಗೆ ಬರುವ ಸಾಧ್ಯತೆ ಹೆಚ್ಚಿರುವ ಕಾರಣ ಪ್ರತಿ ಕಿಟಕಿಯ ಬಳಿಯೂ ಒಂದೊಂದು ಪುಟ್ಟ ಕುಂಡವನ್ನು ಇರಿಸುವುದು ಇನ್ನೂ ಉತ್ತಮ.
ಸಿಟ್ರೊನೆಲ್ಲಾ

ಸಿಟ್ರೊನೆಲ್ಲಾ ಸಸ್ಯ ಮನೆಯಲ್ಲಿದ್ದರೆ ಸೊಳ್ಳೆಗಳು, ನೊಣಗಳು ಹಾಗೂ ಇರುವೆಗಳು ಬರುವುದಿಲ್ಲ. ಇದರ ವಾಸನೆಗೆ ಕೀಟಗಳು ಓಡಿ ಹೋಗುತ್ತವೆ. ಈ ಸಸ್ಯವನ್ನು ಕಾಳಜಿ ವಹಿಸುವುದು ತುಂಬಾ ಸುಲಭ. ಉಷ್ಣವಲಯದ ಹವಾಮಾನದಲ್ಲಿ ಮಾತ್ರ ಸಿಟ್ರೊನೆಲ್ಲಾ ಅರಳುತ್ತದೆ. ಆ ಪರಿಸರವನ್ನು ನೀಡಲು ಸಮರ್ಥರಾದರೆ, ಪುಟ್ಟ ಹೂವುಗಳನ್ನು ಕೂಡ ನೀವು ಪಡೆಯಬಹುದು.
ತುಳಸಿ

ಸಾಮಾನ್ಯವಾಗಿ ತುಳಸಿಯಲ್ಲಿ ಔಷಧಿಯ ಗುಣಗಳಿದ್ದು, ಇದರಿಂದ ಹಲವು ಪ್ರಯೋಜನಗಳಿವೆ. ಇದು ಎಸ್ಟ್ರಾಗೋಲ್, ಸಿಟ್ರೊನೆಲ್ಲಾಲ್, ಲಿಮೋನೆನ್ ಮತ್ತು ನೆರೋಲಿಡಾಲ್ ಅಂಶಗಳನ್ನು ಒಳಗೊಂಡಿದೆ. ಇದು ಸೊಳ್ಳೆಗಳು, ಪತಂಗಗಳು ಮತ್ತು ನೊಣಗಳಂತಹ ಕೀಟಗಳನ್ನು ಓಡಿಸಲು ಸಹಾಯಕವಾಗಿದೆ. ಕೀಟಗಳಿಂದ ದೂರವಿರಲು ತುಳಸಿಯ ಎಲೆಗಳನ್ನು ಪುಡಿಮಾಡಿ ಮತ್ತು ನಿಮ್ಮ ಚರ್ಮದ ಮೇಲೆ ಉಜ್ಜಿಕೊಳ್ಳಬಹುದು. ಇನ್ನು ತುಳಸಿಯನ್ನು ಕೀಟ ನಿವಾರಕ ಸ್ಪ್ರೇ ಮಾಡಲು ಸಹ ಬಳಸಬಹುದು.
ಥೈಮ್

ಥೈಮ್ ಸಸ್ಯವು ಕೀಟನಾಶಕ್ಕೆ ಅತ್ಯಂತ ಸಹಾಯಕವಾಗಿದ್ದು, ಇದು ಶುಷ್ಕ, ಕಲ್ಲಿನ ಪ್ರದೇಶಗಳಲ್ಲಿ ಬೆಳೆಯುತ್ತದೆ. ಹೀಗಾಗಿ ತೋಟದಲ್ಲಿ ಮನೆ ಸುತ್ತಮುತ್ತ ಕೀಟಗಳಿಂದ ದೂರವಿಡಲು ಥೈಮ್ ಬೆಳಸಬಹುದು.
ಲಿಂಬೆ ಹುಲ್ಲು

ಲೆಮನ್ ಗ್ರಾಸ್ ಎಂದೂ ಕರೆಯಲ್ಪಡುವ ಸಿಟ್ರೋನೆಲ್ಲಾ ಗ್ರಾಸ್ ಹೆಸರಿನ ಲಿಂಬೆಹುಲ್ಲು ವಿಶೇಷವಾಗಿ ಸೊಳ್ಳೆಗಳನ್ನು ವಿಕರ್ಷಿಸುವ ಪ್ರಬಲ ಗುಣವನ್ನು ಹೊಂದಿದೆ. ಇದರ ಪರಿಮಳ ಮಾನವರಿಗೆ ಅತಿ ಆಹ್ಲಾದಕರವಾಗಿದ್ದರೂ ಸೊಳ್ಳೆಗಳ ಮಟ್ಟಿಗೆ ಅತ್ತ್ಯುತ್ತಮ ವಿಕರ್ಷಕವಾಗಿದೆ. ಈ ಹುಲ್ಲು ಗರಿಕೆಹುಲ್ಲಿನಂತೆಯೇ ಕುಂಡದಲ್ಲಿ ಸೊಂಪಾಗಿ ಬೆಳೆಯುತ್ತದೆ.
ಈ ಕುಂಡವನ್ನು ನೀವು ಹೆಚ್ಚು ಸಮಯ ಕಳೆಯುವ ಮನೆಯ ಭಾಗದಲ್ಲಿ ಕಿಟಕಿಗೆ ಹತ್ತಿರವಾಗಿ ಇರಿಸುವ ಮೂಲಕ ಸೊಳ್ಳೆಗಳು ಬಾರದಂತೆ ತಡೆಯುವ ಜೊತೆಗೇ ಇದರ ನವಿರಾದ ಪರಿಮಳ ಮನೆಯನ್ನೆಲ್ಲಾ ಸುವಾಸನೆಯಿಂದ ತುಂಬಿಸುತ್ತದೆ. ಇದರ ಲಿಂಬೆಯಂತಹ ಪರಿಮಳದಿಂದ ಕೇವಲ ಸೊಳ್ಳೆಗಳು ಮಾತ್ರವಲ್ಲ, ಇತರ ಕೀಟಗಳೂ ನಿಮ್ಮ ಮನೆಯೊಳಗೆ ಸುಳಿಯುವುದಿಲ್ಲ.
ಲಾರೆಲ್

ಲಾರೆಲ್ ಕೀಟ ನಿವಾರಕ ಸಸ್ಯಗಳಲ್ಲಿ ಒಂದು. ಇದು ಜಿರಳೆಗಳನ್ನು ಓಡಿಸಲು ಸಹಾಯಕಾರಿ. ಇದರ ಸುವಾಸನೆಯು ವಿಶಿಷ್ಟವಾಗಿದ್ದು, ಇದು ಕೀಟಗಳನ್ನು ದೂರವಿರಿಸುತ್ತದೆ. ಇದರ ಕಾಳಜಿ ವಹಿಸುವುದು ತುಂಬಾ ಸುಲಭ. ಇದನ್ನು ಒಳಾಂಗಣ ಮತ್ತು ಹೊರಾಂಗಣದಲ್ಲಿರಬಹುದು.
ಮಲ್ಲಿಗೆ
ಮಲ್ಲಿಗೆಯು ಅತ್ಯುತ್ತಮ ಕೀಟ ನಿವಾರಕ ಸಸ್ಯಗಳಲ್ಲಿ ಒಂದು. ಇದು ಎಲೆಗಳು ಮತ್ತು ಹೂವುಗಳಿಂದ ಆವರಿಸುತ್ತದೆ. ಇದರ ಪರಿಮಳವು ಕೀಟಗಳನ್ನು ದೂರ ಮಾಡುತ್ತದೆ.
ಈ ಮನೆಯಲ್ಲಿ ಇರುವ ಗಿಡಗಳಿಗೆ ಕೀಟ ಬಿದ್ದರೆ:
ಸಸ್ಯಗಳನ್ನು ಸುರಕ್ಷಿತವಾಗಿಡಲು ಬಯಸಿದರೆ ಮತ್ತು ಅವು ಯಾವಾಗಲೂ ಹಸಿರಾಗಿ ಬೆಳೆಯಬೇಕೆಂದು ಬಯಸಿದರೆ, ಅವುಗಳನ್ನು ಸ್ವಲ್ಪ ನೋಡಿಕೊಳ್ಳಬೇಕು. ಹೊರಗಿನಿಂದ ಯಾವುದೇ ರಾಸಾಯನಿಕ ವಸ್ತುಗಳನ್ನು ತರಬೇಕಾಗಿಲ್ಲ, ಅಡುಗೆ ಮನೆಯ ಸಾಮಾನುಗಳೊಂದಿಗೆ ಅವುಗಳನ್ನು ಸುಲಭವಾಗಿ ನೋಡಿಕೊಳ್ಳಬಹುದು.
ಸಾಮಾನ್ಯವಾಗಿ ಮನೆಗಳಲ್ಲಿ ಇರುವೆಗಳು ಇದ್ದಾಗ ಅರಿಶಿನ ಚಿಮುಕಿಸಿ ಓಡಿಸಲಾಗುತ್ತದೆ. ಸಸ್ಯಗಳ ಮೇಲೆ ಅರಿಶಿನ ಸಿಂಪಡಿಸಿದರೆ, ಕೀಟಗಳು ಓಡಿಹೋಗಿ, ಸಸ್ಯಗಳಿಗೆ ಹಾನಿ ಮಾಡುವುದನ್ನು ನಿಲ್ಲಿಸುತ್ತವೆ. 10 ಕೆಜಿ ಮಣ್ಣಿಗೆ ಸುಮಾರು 20-25 ಗ್ರಾಂ ಅರಿಶಿನ ಸೇರಿಸಿ ಗಿಡಗಳಿಗೆ ಹಾಕಿ. ಬೇರುಗಳವರೆಗೂ ಎಲ್ಲಾ ಕೀಟಗಳು ಸಾಯುತ್ತವೆ.
ಬೆಳ್ಳುಳ್ಳಿ ಎಸಳು ಪುಡಿ ಮಾಡಿ ಮತ್ತು ಅವುಗಳನ್ನು ಒಂದು ಲೀಟರ್ ನೀರಿನಲ್ಲಿ ಸೇರಿಸಿ. ಎರಡು ಗಂಟೆಗಳ ನಂತರ, ಈ ನೀರನ್ನು ಸೋಸಿ ಮತ್ತು ಅದನ್ನು ಸಸ್ಯಗಳ ಮೇಲೆ ಸಿಂಪಡಿಸಿ. ಸಸ್ಯಗಳು ಅರಳುತ್ತವೆ ಮತ್ತು ಎಲ್ಲಾ ಕೀಟಗಳು ಸಾಯುತ್ತವೆ.
1 ಲೀಟರ್ ನೀರಿಗೆ 1 ಚಿಟಿಕೆ ಬೇಕಿಂಗ್ ಪೌಡರ್ ಸೇರಿಸಿ, 3 ಹನಿ ಬೇವಿನ ಎಣ್ಣೆ ಮತ್ತು 1 ಟೀ ಚಮಚ ಶಾಂಪೂ ಸೇರಿಸಿ ಮತ್ತು ಈ ನೀರನ್ನು ಸಸ್ಯಗಳ ಮೇಲೆ ಸಿಂಪಡಿಸಿ. ಶೀಘ್ರದಲ್ಲೇ ಸಸ್ಯಗಳು ಅರಳುತ್ತವೆ ಮತ್ತು ಎಲ್ಲಾ ಕೀಟಗಳು ಸಾಯುತ್ತವೆ.
ಸಸ್ಯಗಳಲ್ಲಿನ ಕೀಟಗಳನ್ನು ಕೊಲ್ಲಲು ಬೇವು ಅತ್ಯಂತ ಉಪಯುಕ್ತವಾಗಿದೆ. ಬೇವಿನಲ್ಲಿ ಅನೇಕ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ನಿವಾರಕ ಅಂಶಗಳು ಒಳಗೊಂಡಿವೆ, ಅದು ಕೀಟಗಳನ್ನು ಸುಲಭವಾಗಿ ನಿವಾರಿಸುತ್ತದೆ. ಕೀಟನಾಶಕಗಳನ್ನು ಕೊಲ್ಲಲು ಬೇವಿನ ಎಲೆಯ ಪುಡಿಯನ್ನು ಮಾಡಿ ಮಣ್ಣಿನಲ್ಲಿ ಮಿಶ್ರಣ ಮಾಡಿ.
ಮಳೆಗಾಲದಲ್ಲಿ ಕಾಡುವ ಬಸವನ ಹುಳು, ಗಿಡಗಳನ್ನೆಲ್ಲಾ ನಾಶ ಮಾಡುತ್ತವೆ. ಇಂತಹ ಸಮಸ್ಯೆ ಕಾಡುತ್ತಿದ್ದರೆ ಉಪ್ಪನ್ನು ನೀರು ಮಾಡಿ, ಗಿಡದ ಮೇಲೆ ಸಿಂಪಡಿಸಿ, ಹುಳುಗಳು ಸಾಯುತ್ತವೆ. ಉಪ್ಪು ಸಿಂಪಡಿಸಿದ ಪ್ರದೇಶದ ಮೇಲೆ ಯಾವುದೇ ಕೀಟಗಳು, ಹುಳುಗಳು ಸುಳಿಯುವುದಿಲ್ಲ.
ದಾಲ್ಚಿನ್ನಿ ಪುಡಿಯು ಕೀಟಗಳನ್ನು ಕೊಲ್ಲಲು ಸಹ ಸಹಾಯ ಮಾಡುತ್ತದೆ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ನಿವಾರಕ ಅಂಶಗಳು ಒಳಗೊಂಡಿವೆ, ಇದು ಕೀಟಗಳನ್ನು ಸುಲಭವಾಗಿ ನಾಶಪಡಿಸುತ್ತದೆ. ಗಿಡ ಸೊಂಪಾಗಿ ಬೆಳೆಯುತ್ತದೆ.
ಮೊಟ್ಟೆ ಸಿಪ್ಪೆಗಳನ್ನು ಪುಡಿ ಮಾಡಿ, ಗಿಡಗಳ ಮೇಲೆ ಹಾಕಿದರೆ ಸಸ್ಯಗಳಿಂದ ತೆವಳುವ ಕೀಟಗಳು ಸುಲಭವಾಗಿ ಸಾಯುತ್ತವೆ. ಆದರೆ ಮೊಟ್ಟೆಯ ಸಿಪ್ಪೆಗಳನ್ನು ನೀರಿನಿಂದ ಚೆನ್ನಾಗಿ ತೊಳೆದು, ನಂತರ ಒಣಗಿಸಿ ಪುಡಿ ಮಾಡಬೇಕು ಆಗ ಮಾತ್ರ ಅವು ಪ್ರಯೋಜನಕಾರಿ.
ಧನ್ಯವಾದಗಳು.
GIPHY App Key not set. Please check settings