ಹಿಂದೂ ಧರ್ಮದ ಸಾಹಿತ್ಯವು ಸಂಸ್ಕೃತ ಗ್ರಂಥಗಳಲ್ಲಿರುವ ಸಂಸ್ಕೃತ ಸಾಹಿತ್ಯ, ಮತ್ತು ಪುರಾಣಗಳಲ್ಲಿರುವಂತೆ ಹಿಂದೂಗಳಿಗೆ ಸಂಬಂಧಿಸಿದ ಸಾಂಪ್ರದಾಯಿಕ ಹೇಳಿಕೆಗಳುಳ್ಳ ಬೃಹತ್ ಸಂಗ್ರಹವಾಗಿದೆ, ಇದು ಭಾರತೀಯ ಸಂಸ್ಕೃತಿಯ ಉಪವರ್ಗವೂ ಆಗಿದೆ.
ಶ್ರೇಷ್ಠವಾದ ಹಿಂದೂಧರ್ಮದಿಂದ ಹೊರತೆಗೆಯಲ್ಪಟ್ಟ ಧರ್ಮಶಾಸ್ತ್ರದ ಬೇರುಗಳು, ಪುರಾತನ ವೇದ ಧರ್ಮ ಕಾಲಗಳಿಂದ. ವೇದಗಳ ನಾಗರೀಕತೆಯ ಕಾಲದಿಂದ ಬಂದಿವೆ.
ಪುರಾತನ ವೈದಿಕ ಪುರಾಣಗಳು ರಚಿಸಿದ ಪಾತ್ರಗಳು, ಧರ್ಮಶಾಸ್ತ್ರ, ತತ್ವಶಾಸ್ತ್ರ ಮತ್ತು ಕಥೆಗಳು, ಹಿಂದು ನಂಬಿಕೆಗಳೊಂದಿಗೆ ಅಳಿಸಲಾಗದಂತೆ ತಳುಕುಹಾಕಿಕೊಂಡಿವೆ. ವೇದಗಳು ನಾಲ್ಕು ಎಂದು ಹೇಳಲ್ಪಟ್ಟಿದೆ, ಅವು ಯಾವುವೆಂದರೆ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ. ಇವುಗಳಲ್ಲಿ ಕೆಲವು ಪಠ್ಯಗಳು ಪೌರಾಣಿಕ ಮೂಲಮಾದರಿಯನ್ನು ತಿಳಿಸುತ್ತವೆ ಮತ್ತು ಯಂತ್ರಗಳು, ಸುಮಾರು ಆಧುನಿಕ ಕಾಲದ ವೈಜ್ಞಾನಿಕ ಸಿದ್ಧಾಂತಕ್ಕೆ ಸಮಾನವಾಗಿ ಇತ್ತೆಂದು ತಿಳಿಸುತ್ತದೆ.
ಎರಡು ಹಿಂದೂ ಧರ್ಮ ಗ್ರಂಥಗಳು ರಾಮಾಯಣ ಮತ್ತು ಮಹಾಭಾರತ, ಇವು ವಿಷ್ಣುವಿನ ಎರಡು ಮುಖ್ಯವಾದ ಅವತಾರಗಳ ರಾಮ ಮತ್ತು ಕೃಷ್ಣ ಕುರಿತು ತಿಳಿಸುತ್ತದೆ. ಈ ಎರಡೂ ಕೃತಿಗಳು ಇತಿಹಾಸದ ಕಥೆಗಳೆಂದು ಕರೆಯಲ್ಪಟ್ಟಿವೆ. ಮಹಾಭಾರತ ಮತ್ತು ರಾಮಾಯಣ ಗ್ರಂಥಗಳು ಹಿಂದೂಗಳಿಗೆ ಧಾರ್ಮಿಕ ಪವಿತ್ರ ಗ್ರಂಥವಾಗಿ ಮತ್ತು ತತ್ವಶಾಸ್ತ್ರ, ನೈತಿಕತೆಯ ಶ್ರೀಮಂತ ಆಧಾರಗ್ರಂಥಗಳಾಗಿ ಪರಿಣಮಿಸಲ್ಪಟ್ಟಿವೆ ಈ ಗ್ರಂಥಗಳು ಅಧ್ಯಾಯಗಳಾಗಿ ವಿಂಗಡಿಸಲ್ಪಟ್ಟಿವೆ ಮತ್ತು ಅನೇಕ ಸಣ್ಣ ಕಥೆಗಳನ್ನು ಮತ್ತು ನೀತಿಯುಕ್ತವಾದ ಸನ್ನಿವೇಶಗಳನ್ನು ಹೊಂದಿವೆ, ಇದರಲ್ಲಿರುವ ಪಾತ್ರಗಳು ಪರಿಪೂರ್ಣ ನೈತಿಕತೆಯ ಹಿಂದು ವಿಧಿ ನಿಯಮದಂತೆ ಮತ್ತು ನಿಯಮ ಸಂಹಿತೆಯಂತೆ ಕಾರ್ಯ ನಿರ್ವಹಿಸುತ್ತವೆ. ಈ ಅಧ್ಯಾಯಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದು ಮಹಾಭಾರತದ ಭಗವದ್ಗೀತೆ ಇದರಲ್ಲಿ ಭಗವಂತ ಕೃಷ್ಣನು, ನಿರ್ಣಾಯಕ ಯುದ್ಧಕ್ಕೆ ಮೊದಲು ನಾಯಕ ಅರ್ಜುನನಿಗೆ ಕರ್ತವ್ಯ ಮತ್ತು ಧರ್ಮದ ಬಗೆಗೆ ವಿವರಿಸುತ್ತಾನೆ. ಈ ಕಥೆಗಳು ಹಿಂದು ತತ್ವಶಾಸ್ತ್ರದಲ್ಲಿ ಆಳವಾಗಿ ಬೇರೂರಿದೆ ಮತ್ತು ನೀತಿಕಥೆಗಳಾಗಿ, ಹಿಂದೂಗಳ ಭಕ್ತಿಗೆ ಮೂಲಾಧಾರವಾಗಿದೆ. ಮಹಾಭಾರತವು ಜಗತ್ತಿನ ಅತಿದೊಡ್ಡ ಗ್ರಂಥವಾಗಿದ್ದು, 30,000 ಸಾಲುಗಳನ್ನು ,೧,೦೦,೦೦೦ ಶ್ಲೋಕಗಳನ್ನು ಹೊಂದಿದೆ.
ಹಿಂದೂ ಧರ್ಮವು ವಿಶ್ವದ ಮೂಲಕ್ಕೆ ಸಂಬಂಧಪಟ್ಟಂತೆ ಕೆಲವು ಸಿದ್ಧಾಂತಗಳನ್ನು ಮತ್ತು ಕೆಲವು ವಿವರಣೆಗಳನ್ನು ವಿಶ್ವದ ಮೂಲವಾಗಿ ಪರಿಚಯಿಸುತ್ತದೆ ಬ್ರಹ್ಮ, ಜಗತ್ತಿನ ಸೃಷ್ಠಿಕರ್ತ ಎನ್ನುವುದು ಅತ್ಯಂತ ಪ್ರಸಿದ್ಧವಾದ ನಂಬಿಕೆ, ಶ್ರೇಷ್ಠ ಆತ್ಮದ ಪ್ರತ್ಯಕ್ಷ ಸೃಷ್ಠಿಕರ್ತ. ಮೊದಲು ಬರಿಯ ಅವ್ಯಕ್ತ ಅಥವಾ ಸಂಧಿಗ್ಧವಿತ್ತು ಈ ಶೂನ್ಯದಲ್ಲಿ, ಸ್ಥಿತಿಕರ್ತ ಭಗವಂತ ವಿಷ್ಣುವು, ಶಿಶುವಿನ ರೂಪದಲ್ಲಿ ಆಲದ ಎಲೆಯ ಮೇಲೆ ಮಲಗಿದ್ದಂತೆ ಕಂಡುಬರುತ್ತಾನೆ. ಸಾವಿರ ದಳಗಳ ಕಮಲವೊಂದು ಅವನ ಹೊಕ್ಕುಳಿನಿಂದ ಉದ್ಭವಿಸುತ್ತದೆ, ಅದರಲ್ಲಿ ಬ್ರಹ್ಮನು ಉದಯಿಸುತ್ತಾನೆ. ಬ್ರಹ್ಮನು ಸಂಪೂರ್ಣವಾದ ಜಗತ್ತನ್ನು ಮತ್ತು ಅವುಗಳಲ್ಲಿರುವುದೆಲ್ಲವನ್ನೂ ಸೃಷ್ಟಿ ಮಾಡುತ್ತಾನೆ. ಅವನು ಈ ರೂಪದಲ್ಲಿ ಬರುತ್ತಿದ್ದಂತೆ ಅವನ ಮನಸ್ಸು ತನ್ನ ಗುರುತಿನ ಬಗ್ಗೆ ಸಂಧಿಗ್ಧಕ್ಕೊಳಗಾಗುತ್ತದೆ. ನಂತರ ಒಂದು ಅಶರೀರವಾಣಿಯಾಗುತ್ತದೆ. ಅದು ಅವನಿಗೆ ತಪಸ್ಸು ಮಾಡಲು ಸೂಚಿಸುತ್ತದೆ. ಅದರಂತೆ ಅವನು ಸಾವಿರಾರು ವರ್ಷ ತಪಸ್ಸು ಮಾಡುತ್ತಾನೆ. ರುದ್ರ ದೇವರು ಮಹೇಶ್ವರನೆಂದೂ ಕರೆಯಲ್ಪಡುತ್ತಾನೆ, ಇವನು ಲಯಕರ್ತ, ಇವನು ಬ್ರಹ್ಮನ ಮಗನೆಂದು ಕರೆಯಲ್ಪಡುತ್ತಾನೆ. ಈ ಮೂವರೂ ಬ್ರಹ್ಮ-ವಿಷ್ಣು-ಮಹೇಶ್ವರ ಎಂದು ಕರೆಯಲ್ಪಡುತ್ತಾರೆ. ಈ ಮೂರೂ ದೇವತೆಗಳನ್ನು ಅತ್ಯಂತ ಶ್ರೇಷ್ಠರಾದ ಪವಿತ್ರ ಮೂರ್ತಿಗಳೆಂದು ಹಿಂದೂಧರ್ಮದಲ್ಲಿ ಹೇಳಿದೆ.
ಮಾನವನ ಸಾಂಪ್ರದಾಯಿಕ ಆಯುಧಗಳಾದ ಕತ್ತಿಗಳು, ಕಠಾರಿಗಳು,ಭರ್ಜಿಗಳು, ಬೆತ್ತಗಳು, ಗುರಾಣಿಗಳು, ಬಿಲ್ಲುಗಳು, ಬಾಣಗಳು ಮತ್ತು ರಾಜದಂಡದ ಹೊರತಾಗಿ ದೇವತೆಗಳು ಉಪಯೋಗಿಸುವ ಶಸ್ತ್ರಗಳು, ಇಂದ್ರನ ವಜ್ರಾಯುಧ , ಶಾಸ್ತ್ರ ಗ್ರಂಥಗಳಲ್ಲಿ ಹೇಳಿರುವಂತೆ ಯಾವುದೇ ನಾಯಕನು ಬಳಸುವ ದೈವೀ ಅಸ್ತ್ರಗಳು, ಅದಕ್ಕೆ ಸಂಬಂಧಿಸಿದ ಅಭಿಮಾನಿ ದೇವತೆಗಳನ್ನು ಹೊಂದಿರುತ್ತವೆ. ಈ ಆಯುಧಗಳನ್ನು ಅವತಾರ ಪುರುಷರಿಗೆ, ಮಾನವರಿಗೆ ಅಥವಾ ರಾಕ್ಷಸರಿಗೆ ಅವರ ತಪಸ್ಸಿಗೆ ಮೆಚ್ಚಿ ದೇವತೆಗಳು ಕೊಡುವ ವರವಾಗಿದೆ.
ಹಿಂದು ಧರ್ಮಶಾಸ್ತ್ರದಲ್ಲಿ ತಿಳಿಸಿರುವಂತೆ ದೇವತೆಗಳು ಬಳಸುವ ಕೆಲವು ಅಸ್ತ್ರಗಳು, ಅಗ್ನೆಯಾಸ್ತ್ರ, ಬ್ರಹ್ಮಾಸ್ತ್ರ, ಚಕ್ರಂ, ಗರುಡಾಸ್ತ್ರ , ಕೌಮೊದಕಿ, ನಾರಾಯಣಾಸ್ತ್ರ, ಪಾಶುಪತ, ಶಿವ ಧನುಸ್ಸು, ಸುದರ್ಶನ ಚಕ್ರ, ತ್ರಿಶೂಲ, ವೈಷ್ಣವಾಸ್ತ್ರ, ವರುಣಾಸ್ತ್ರ, ಮತ್ತು ವಾಯವ್ಯಸ್ತ್ರ .
ಕೆಲವು ಅಸ್ತ್ರಗಳು ವಿಶೇಷವಾಗಿ ವಿಂಗಡಿಸಲ್ಪಟ್ಟಿವೆ
ಶಿವ ಧನುಸ್ಸು ಒಂದು ಬಿಲ್ಲು, ಸುದರ್ಶನ ಚಕ್ರ ಒಂದು ಚಕ್ರ ಮತ್ತು ತ್ರಿಶೂಲ ಒಂದು ಮೂರು ಮೊನೆಗಳುಳ್ಳ ಆಯುಧ, ಆದರೆ ಹಲವು ಅಸ್ತ್ರಗಳು ದೇವತೆಗಳು ವಿಶೇಷವಾಗಿ ವರವಾಗಿ ನೀಡಿದ ಶಸ್ತ್ರಗಳಾಗಿವೆ. ಉದಾಹರಣೆಗೆ ಅಗ್ನೆಯಾಸ್ತ್ರ, ಬ್ರಹ್ಮಾಸ್ತ್ರ ಮತ್ತು ಇತರ ಅಸ್ತ್ರಗಳು ಒಂದೇ ಬಾರಿ ಉಪಯೋಗಿಸುವ ಆಯುಧಗಳಾಗಿವೆ, ಇದನ್ನು ಬಳಸಲು ಸಂಕೀರ್ಣವಾದ ಜ್ಞಾನದ ಅವಶ್ಯಕತೆಯಿರುತ್ತದೆ, ಕಲೆ, ಸಾಹಿತ್ಯಗಳಲ್ಲಿ ಇದನ್ನು ದೈವೀ ಕೃಪೆಯಿಂದ ಗಳಿಸಿದ ಬಾಣಗಳೆಂದು ಚಿತ್ರಿಸಲಾಗಿದೆ.
ಕೆಲವೊಮ್ಮೆ ಅಸ್ತ್ರವು ಕ್ರಿಯೆಯ ಅಥವಾ ಅದು ಪ್ರಾರ್ಥನೆಯಿಂದುಂಟಾಗುವ ಶಕ್ತಿಯ ಸ್ವರೂಪವನ್ನು ನಿರೂಪಣೆ ಮಾಡುತ್ತದೆ ಮಹಾಭಾರತವು ನಾಗಾಸ್ತ್ರ ಪ್ರಯೋಗದಿಂದ ಶತ್ರುವಿನ ಮೇಲೆ ಆಕಾಶದಿಂದ ಹಾವುಗಳ ಸುರಿಮಳೆಯಾಗುವ ಸನ್ನಿವೇಶಗಳನ್ನು ವಿವರಿಸುತ್ತದೆ. ಅದೇ ರೀತಿ ಆಗ್ನೇಯಾಸ್ತ್ರ ವನ್ನು ಶತ್ರುವನ್ನು ಸುಡಲು, ವರುಣಾಸ್ತ್ರವನ್ನು ಬೆಂಕಿಯನ್ನು ನಿರ್ಮಿಸಲು ಅಥವಾ ಪ್ರವಾಹವನ್ನು ಉಂಟುಮಾಡಲು ಪ್ರಯೋಗಿಸುತ್ತಿದ್ದರು. ಬ್ರಹ್ಮಾಸ್ತ್ರದಂತಹ ಕೆಲವು ಅಸ್ತ್ರಗಳನ್ನು ಒಬ್ಬನೇ ವ್ಯಕ್ತಿಯ ಮೇಲೆ ಪ್ರಯೋಗಿಸಬಹುದು.
ಅಸ್ತ್ರಗಳಲ್ಲದೆ, ಇತರ ದೈವೀ ಅಥವಾ ಪೌರಾಣಿಕ ಅಸ್ತ್ರಗಳಿಗೆ ಸಂಬಂಧಿಸಿದ ಘಟನೆಯೆಂದರೆ, ಕಾಪು (ಕವಚ), ಕಿರೀಟಗಳು ಮತ್ತು ಶಿರಸ್ತ್ರಾಣಗಳು, ಕೋಲು ಮತ್ತು ಆಭರಣಗಳು(ಕುಂಡಲ)
ಹಿಂದೂ ಧರ್ಮಗ್ರಂಥಗಳಲ್ಲಿರುವ ಮಹಾ ಪ್ರಳಯದ ಕಥೆಯೊಂದನ್ನು ಹೇಳಲಾಗಿದೆ, ಶತಪಥ ಬ್ರಾಹ್ಮಣನ ಕಥೆ. ಇದು ಅನೇಕ ಧರ್ಮ ಮತ್ತು ಸಂಸ್ಕೃತಿಗಳಲ್ಲಿ ಕಂಡುಬರುವ ಪ್ರಳಯಕ್ಕೆ ಹೋಲಿಸಬಹುದಾಗಿದೆ. ತಲೆಯ ಮೇಲೆ ತೂಗುತ್ತಿರುವ ಪ್ರಳಯದ ವಿಷಯವನ್ನು ಮನುವಿಗೆ ತಿಳಿಸಲಾಗಿತ್ತು ಮತ್ತು ವಿಷ್ಣುವು ಮತ್ಸ್ಯ ಅವತಾರವನ್ನೆತ್ತಿ ಅವನನ್ನು ರಕ್ಷಿಸಿದನು, ಅವನು ಈ ರೂಪದಲ್ಲಿ ಜಗತ್ತಿನಲ್ಲಿರುವ ದುರ್ಜನರನ್ನು ನಾಶ ಮಾಡಿ ಸಜ್ಜನರನ್ನು, ಪ್ರಾಣಿಗಳು ಮತ್ತು ಸಸ್ಯಗಳನ್ನು ರಕ್ಷಿಸಿದನು.
ಪ್ರಳಯದ ನಂತರ ಭಗವಂತನು ಮನುಸ್ಮೃತಿಯನ್ನು ಬೋಧಿಸಿದನು, ಇದು ವೇದಗಳನ್ನು ಒಳಗೊಂಡಿದೆ, ಜೀವನದ ನೀತಿ ಸಂಹಿತೆಯ ವಿವರಗಳನ್ನು, ಮತ್ತು ವರ್ಣ ಪದ್ಧತಿಯಂತೆ ಸಮಾಜದ ವಿಂಗಡಣೆಯ ವ್ಯವಸ್ಥೆಯ ಬಗ್ಗೆ ವಿವರಿಸುತ್ತದೆ.
ಧನ್ಯವಾದಗಳು.
GIPHY App Key not set. Please check settings