in

ಶ್ರೀಮಂತ ದೇವತೆ ಕುಬೇರ

ಕುಬೇರ ದೇವತೆ
ಕುಬೇರ ದೇವತೆ

ಕುಬೇರ ಹಿಂದೂ ಪುರಾಣಗಳ ಪ್ರಕಾರ ಯಕ್ಷ ಮತ್ತು ಹಣದ ದೇವತೆ. ಅಷ್ಟದಿಕ್ಪಾಲಕರಲ್ಲೊಬ್ಬ. ಉತ್ತರ ದಿಕ್ಕಿನ ಅಧಿಪತಿ. ಇವರ ಮುಖ್ಯನಗರ ಅಲಕಾಪುರಿ. ಕುಬೇರ ಮಿಶ್ರವಶುವಿನ ಮಗ. ಮಿಶ್ರವಸು ಬ್ರಹ್ಮಪುತ್ರನಾಗಿದ್ದ ಪುಲಸ್ತ್ಯನ ಮಗ. ಕೃತಯುಗದಲ್ಲಿ ಬ್ರಹ್ಮಪುತ್ರ ಮತ್ತು ಬ್ರಹ್ಮರ್ಷಿಯಾದ ಪುಲಸ್ತ್ಯ ಇದ್ದನು. ಇವನು ಮೇರು ಪರ್ವತ ಪ್ರಾಂತ್ಯದಲ್ಲಿನ ತೃಣಬಿಂದುವಿನ ಆಶ್ರಮದಲ್ಲಿದ್ದು, ವೇದಾಧ್ಯಯನ ಮಾಡುತ್ತಿದ್ದನು.

ಆಶ್ರಮದ ಪ್ರದೇಶ ಬಹಳ ಸುಂದರ, ರಮಣೀಯವಾಗಿದ್ದುದರಿಂದ, ವಿಹಾರಕ್ಕೆ ಆ ಪ್ರದೇಶಕ್ಕೆ ದೇವಕನ್ಯೆಯರು, ಋಷಿ ಕನ್ಯೆಯರು, ರಾಜರ್ಷಿಕನ್ಯೆಯರು, ಎಲ್ಲರೂ ಬರುತ್ತಿದ್ದರು. ಇವರಿಂದ ತನಗೆ ತಪೋಭಂಗವಾಗುವುರಿಂದ, ಅಲ್ಲಿಗೇ ಯಾರು ಬರಬಾರದೆಂದು ಹೇಳಿದರು. ಬಂದು ಋಷಿಕನ್ಯೆಯರೇನಾದರೂ ನೋಡಿದರೆ ಅವರು ಗರ್ಭಿಣಿಯಾಗುತ್ತಾರೆಂದು ಶಾಪ ಕೊಟ್ಟನು. ಈ ವಿಷಯ ಗೊತ್ತಿಲ್ಲದೇ ತೃಣಬಿಂದುವಿನ ಮಗಳು ಒಂದು ದಿನ ಆಶ್ರಮಕ್ಕೆ ಬಂದು ಪುಲಸ್ತ್ಯನನ್ನ ನೋಡಿದುದರಿಂದ ಬಸುರಿ ಆಗುತ್ತಾಳೆ. ಇದನ್ನು ತಿಳಿದುಕೊಂಡ ತೃಣಬಿಂದು, ಮಗಳ ಜೊತೆ ಋಷಿ ಹತ್ತಿರ ಹೋಗಿ ನಡೆದುದನ್ನೆಲ್ಲಾ ತಿಳಿಸಿ, ತನ್ನ ಮಗಳನ್ನು ಮದುವೆ ಮಾಡಿಕೊಳ್ಳಬೇಕೆಂದು ಬೇಡಿಕೊಳ್ತಾನೆ. ಋಷಿ ಅದಕ್ಕೆ ಒಪ್ಪುತ್ತಾನೆ. ಇವರಿಗೆ ಮಿಶ್ರವಸು ಹುಟ್ಟುತ್ತಾನೆ. ಮಿಶ್ರವಸುವೆಂಬ ಬ್ರಹ್ಮನಿಂದ ಇಲಬಿಲೆ/ಇಲಾಬಿದಳ ಮಗ ಕುಬೇರ ಎಂದು ಹೇಳಲಾಗುತ್ತದೆ. ಸೋಮನೆಂಬುದು ಇವನ ಹೆಸರು. ಈ ಕಾರಣದಿಂದ ಉತ್ತರ ದಿಕ್ಕಿಗೆ ಸೌಮ್ಯೆಯೆಂದು ಹೆಸರು. ಇವನು ನರವಾಹನ, ನವನಿಧಿಗಳು ಇವನ ವಶವರ್ತಿಗಳು. ಇವನ ಹೆಂಡತಿ ವೃದ್ದಿ/ಭದ್ರೆ. ಅಗಸ್ತ್ಯ ಋಷಿಯ ಮೂಲಕ ಇವನಿಗೆ ಮನುಷ್ಯನಿಂದ ಕಷ್ಟವೂ, ಮಾನಭಂಗ ಲಭಿಸುವಂತೆ ಶಾಪ ಪ್ರಾಪ್ತಿ. ಇವನ ಮಲತಾಯಿ ಮಕ್ಕಳಾದ ರಾವಣ, ಕುಂಭಕರ್ಣರು ಇವನನ್ನು ಸೋಲಿಸಿ ಲಂಕಾಧಿಪತ್ಯವನ್ನೂ, ಪುಷ್ಪಕವಿಮಾನವನ್ನೂ ಕಸಿದುಕೊಂಡ ಬಳಿಕ, ಕುಬೇರ ಶಿವನ ಅನುಮತಿಯಂತೆ ಕೈಲಾಸ ಪರ್ವತದಲ್ಲಿ ‘ಅಲಕಾನಗರಿ’ ನಿರ್ಮಿಸಿಕೊಂಡು, ಯಕ್ಷರಿಗೆ ಅಧಿಪತಿಯಾದನು. ಇವನ ಮಂತ್ರಿ ಪ್ರಹಾಸ, ಮಣಿಭದ್ರ, ಮಣಿಮಂತ, ಮಣಿಕಂಧರ, ಮಣಿಭೂಷ ಮುಂತಾದವರು. ಇವನು ಅತುಲೈಶ್ವರ್ಯ ಸಂಪನ್ನನಾಗಿದ್ದಾನೆ. ಕುಬೇರನ ವಾಹನ ಮುಂಗುಸಿ.

ಕುಬೇರನು ಬಹಳ ಕುರೂಪಿಯಾಗಿದ್ದ. ಆತ ಕುಳ್ಳನಾಗಿದ್ದು, ಎಣ್ಣೆಗೆಂಪು ಬಣ್ಣದವನೂ, ದೊಡ್ಡ ಹೊಟ್ಟೆಯವನೂ ಆಗಿದ್ದ. ಅವನಿಗೆ ಹುಟ್ಟುವಾಗಲೇ ಕೆಲ ದೈಹಿಕ ನ್ಯೂನತೆಗಳಿದ್ದವು. ಅವನಿಗಿದ್ದದ್ದು ಎಂಟೇ ಹಲ್ಲು, ಒಂದು ಕಣ್ಣು ಹಾಗೂ ಮೂರು ಕಾಲುಗಳು. ಅವನ ಈ ರೂಪದಿಂದ ಕೆಟ್ಟ ಶಕ್ತಿಗಳ ನಾಯಕ ಎಂದು ಅವನನ್ನು ಕರೆಯಲಾಗುತ್ತಿತ್ತು. ಮೈತುಂಬಾ ಆಭರಣಗಳನ್ನು ಹೇರಿಕೊಂಡೇ ಓಡಾಡುತ್ತಿದ್ದ ಕುಬೇರ ಒಂದು ಕೈಲಿ ಆಯುಧವನ್ನೂ ಮತ್ತೊಂದರಲ್ಲಿ ಹಣದ ಚೀಲವನ್ನೂ ಇಟ್ಟುಕೊಂಡಿರುತ್ತಿದ್ದ.

ಶ್ರೀಮಂತ ದೇವತೆ ಕುಬೇರ
ಕುಬೇರ ದೇವತೆ

ದುಷ್ಟ ಶಕ್ತಿಗಳ ಮುಖ್ಯಸ್ಥನೆಂದೇ ಬಿಂಬಿತನಾದವನು ಕುಬೇರ. ಆದರೆ, ಬ್ರಹ್ಮನ ವರದಿಂದಾಗಿ ಈತನಿಗೆ ಜಗತ್ತಿನ ಸಂಪತ್ತೆಲ್ಲ ಸಿಗುವುದಲ್ಲದೆ, ದೇವರ ಸ್ಥಾನವೂ ಸಿಗುತ್ತದೆ. ಬ್ರಹ್ಮನು ಪುಷ್ಪಕ ವಿಮಾನವನ್ನು ಉಡುಗೊರೆಯಾಗಿ ಕುಬೇರನಿಗೆ ನೀಡುತ್ತಾನೆ. ಈ ಶಕ್ತಿಗಳನ್ನು ಬಳಸಿಕೊಂಡು ಕುಬೇರ ಲಂಕೆಯನ್ನಾಳುತ್ತಾನೆ. ಆದರೆ, ನಂತರದಲ್ಲಿ ಲಂಕೆ ಹಾಗೂ ಪುಷ್ಪಕ ವಿಮಾನವನ್ನು ಕಸಿದುಕೊಳ್ಳುವ ರಾವಣ, ಕುಬೇರನನ್ನು ಲಂಕೆಯಿಂದ ಹೊರಗಟ್ಟುತ್ತಾನೆ. ನಂತರ ಕುಬೇರ ಕೈಲಾಸದ ಬಳಿಯಿದ್ದ ಗಂಧಮದನ ಪರ್ವತದ ಬಳಿ ನೆಲೆಸುತ್ತಾನೆ. ಇಲ್ಲಿ ಕುಬೇರನ ಸ್ವಂತದ ಕಾಡಿರುತ್ತದೆ. ಈ ಕಾಡಿನ ಮರದ ಎಲೆಗಳೆಲ್ಲ ಬಂಗಾರದ್ದಾಗಿದ್ದಲ್ಲದೆ, ಅಪ್ಸರೆಯರೇ ಇಲ್ಲಿನ ಹಣ್ಣುಗಳಾಗಿರುತ್ತಾರೆ. ಇಲ್ಲಿರುವ ಸುಂದರ ಕೊಳ ನಳಿನಿ. ಕುಬೇರನ ಅರಮನೆಯ ಸೌಂದರ್ಯವನ್ನು ಶಿವ ಪಾರ್ವತಿಯರೇ ಮೆಚ್ಚಿ ಕೊಂಡಾಡುತ್ತಾರೆ. ಗಂಧರ್ವರು ಹಾಗೂ ಅಪ್ಸರೆಯರಿಂದ ಈ ಅರಮನೆಯಲ್ಲಿ ಸದಾ ಮನರಂಜನೆ ನಡೆಯುತ್ತಿರುತ್ತದೆ.

ಮಹಾಭಾರತದ ಪ್ರಕಾರ ಕುಬೇರ ಪುಲಸ್ತ್ಯ ಮಹರ್ಷಿ ಮತ್ತು ಗೋ ಎಂಬುವವರ ಮಗ. ಅರ್ಜುನ ಇಂದ್ರಕೀಲ ಪರ್ವತದಲ್ಲಿ ತಪಸ್ಸು ಮಾಡುತ್ತಿದ್ದಾಗ ಅಲ್ಲಿಗೆ ಬಂದು ಅನೇಕ ದಿವ್ಯಾಸ್ತ್ರಗಳನ್ನು ಅವನಿಗೆ ಕೊಟ್ಟು ಹೋದ. ಭೀಮ ಸೌಗಂಧಿಕಾಪಹರಣಾರ್ಥವಾಗಿ ಹೋದಾಗ ಅವನಿಗೂ ಕುಬೇರನ ಅನುಚರರಿಗೂ ಯುದ್ಧವಾಗಿ ಕುಬೇರನ ಅನುಚರರೆಲ್ಲರೂ ಮಡಿದರು. ಈ ಸಮಾಚಾರ ತಿಳಿದ ಕುಬೇರ ಭೀಮನಲ್ಲಿಗೆ ಬಂದು ಸೌಗಂಧಿಕಪುಷ್ಪವನ್ನು ಕೊಂಡೊಯ್ಯಲು ಅನುಮತಿ ನೀಡಿದ. ಸಮುದ್ರಮಥನ ಕಾಲದಲ್ಲಿ ಬಂದ ರಂಭೆ ಇವನ ಹೆಂಡತಿ.

ಕುಬೇರ ಹೆಸರಿನಲ್ಲಿ ಕು ಎಂದರೆ ಭೂಮಿಯೆಂದೂ ವೇರ ಎಂದರೆ ನಾಯಕತ್ವ ಎಂದೂ ಸೂಚಿಸಲಾಗುತ್ತದೆ. ಶಿವ ಹಾಗೂ ಪಾರ್ವತಿಯ ಕಡೆಗೆ ಹೊಟ್ಟೆಕಿಚ್ಚು ಪಟ್ಟಿದ್ದರಿಂದ ಅವನು ತನ್ನ ಒಂದು ಕಣ್ಣು ಕಳೆದುಕೊಂಡ. ಆ ಕಣ್ಣು ಪಾರ್ವತಿಯ ಶಾಪದಿಂದ ಹಳದಿಯಾಯಿತು ಎನ್ನಲಾಗುತ್ತದೆ. ಹೀಗೆ ಹಳದಿ ಕಣ್ಣು ಹೊಂದಿರುವ ಇವನಿಗೆ ಎಕಕ್ಸಿಪಿಂಗಲ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಕುಬೇರನನ್ನು ರಾಕ್ಷಸರ ದೇವರೆಂದು ಹೇಳಲಾಗುವುದರಿಂದ ಈತನಿಗೆ ಭೂತೇಶ ಎಂದೂ ಕರೆಯಲಾಗುತ್ತದೆ. ಈತ ಮನುಷ್ಯನನ್ನೇ ವಾಹನವಾಗಿ ಬಳಸುವುದರಿಂದ ನರ ವಾಹನ ಎಂಬ ಹೆಸರೂ ಕುಬೇರನಿಗಿದೆ.

ಅಸುರ ಮುರನ ಮಗಳಾದ ಭದ್ರ ಕುಬೇರನ ಪತ್ನಿ. ಇವರಿಗೆ ನಾಲ್ಕು ಮಕ್ಕಳಿದ್ದು ನಲಕುವರ, ಮನಿಗ್ರೀವ, ಮಯೂರಜ ಹಾಗೂ ಮೀನಾಕ್ಷಿ ಅವರ ಹೆಸರು.

ವಕ್ರತುಂಡ ಕುಬೇರನ ಗರ್ವ ಭಂಗ ಮಾಡಿದ ಕಥೆ

ಮೂರು ಲೋಕಗಳಲ್ಲಿ ಎಲ್ಲರಿಗಿಂತಲೂ ಹೆಚ್ಚು ಶ್ರೀಮಂತ ತಾನೇ ಎಂಬ ಗರ್ವ ಕುಬೇರನಿಗಿತ್ತು. ಮೂರು ಲೋಕದಲ್ಲಿರುವವರಿಗೆ ತನ್ನ ಶ್ರೀಮಂತಿಕೆಯನ್ನು ಪ್ರದರ್ಶಿಸಲು ಭೂಲೋಕದ ರಾಜ ಮಹಾರಾಜರುಗಳನ್ನೂ ಹಾಗೂ ದೇವತೆಗಳನ್ನೂ ಆಗಾಗ್ಗೆ ಊಟಕ್ಕೆ ಕರೆಯುತ್ತಿದ್ದ. ಹೀಗೆ ಒಂದೊಮ್ಮೆ ಜಗದೊಡಯ ಶಿವನನ್ನು ಭೋಜನ ಕೂಟಕ್ಕೆ ಆಹ್ವಾನಿಸಲು ಕುಬೇರನಿಗೆ ಮನಸ್ಸಾಯಿತು.

ಶ್ರೀಮಂತ ದೇವತೆ ಕುಬೇರ
ವಕ್ರತುಂಡ ಕುಬೇರನ ಗರ್ವ ಭಂಗ ಮಾಡಿದ

ಕುಬೇರನ ಒಳಗಿನ ಶ್ರೀಮಂತಿಕೆ ಅಹಂ ಬಲ್ಲವನಾಗಿದ್ದ ಶಿವನು ನಕ್ಕು, ನನಗೆ ತುಂಬಾ ಕೆಲಸವಿದೆ ಕುಬೇರ. ಬರಲಾಗುವುದಿಲ್ಲ ಎಂದನು. ಆಗ ಕುಬೇರ, ಹಾಗಾದರೆ ಪಾರ್ವತೀದೇವಿಯನ್ನು ಕರೆದೊಯ್ಯುತ್ತೇನೆ ಎಂದು ಹೇಳಿದನು. ತಕ್ಷಣ ಈಶ್ವರನು ನಾನು ಬರದೇ ಪಾರ್ವತಿ ಎಲ್ಲಿಯೂ ಬರುವುದಿಲ್ಲ. ಬೇಕಾದರೇ, ಗಣೇಶನನ್ನು ಕರೆದುಕೊಂಡು ಹೋಗು ಎಂದು ಹೇಳಿದನು. ಕುಬೇರ ಅದಕ್ಕೆ ಒಪ್ಪಿ ಸಂತೋಷದಿಂದ ತನ್ನ ಮನೆಗೆ ಹೋದ.

ಮರುದಿನ ಕುಬೇರನ ಅರಮನೆಗೆ ದಿವ್ಯಾಲಂಕಾರ ಆಯಿತು. ಸಾವಿರ ಅತಿಥಿಗಳಿಗಾಗುವಷ್ಟು ಬಗೆಬಗೆಯ ಭಕ್ಷ್ಯ ಭೋಜ್ಯಗಳು ಸಿದ್ಧವಾದುವು, ಅತಿಥಿಗಳೆಲ್ಲರೂ ಬಂದು ಗಣಪತಿಯ ಬರವಿಗೆ ಕಾದು ನಿಂತರು.

ಕುಬೇರನ ಕಡೆಗೆ ಗಣಪತಿಯ ಆಗಮನವಾಯಿತು. ಗಣೇಶ ಇಲ್ಲಿ ಬಾ ಅತಿಥಿಗಳ ಪರಿಚಯ ಮಾಡಿಕೊಡುತ್ತೇನೆ ಎಂದು ಕುಬೇರನಿಗೆ ಗಣೇಶನು, ನನಗೆ ತುಂಬಾ ಹಸಿವಾಗಿದೆ. ಮೊದಲು ಊಟ ಹಾಕು ಆಮೇಲೆ ಪರಿಚಯ ಮಾಡಿಕೊಡುವೆಯಂತೆ ಎಂದು ಹೇಳಿದನು. ಕುಬೇರ ಗಣಪತಿಯನ್ನು ಊಟದ ಮನೆಗೆ ಕರೆದುಕೊಂಡು ಹೋಗಿ ಚಿನ್ನದ ತಟ್ಟೆಯಲ್ಲಿ ಊಟಕ್ಕಿಟ್ಟ.
ಮಗು ಗಣೇಶ ಉಟ ಮಾಡಲು ಆರಂಭಿಸಿದನು .

ಅಲ್ಲಿದ್ದ ಊಟವನ್ನು ಖಾಲಿ ಮಾಡಿದರೂ ಗಣೇಶನಿಗೆ ತೃಪ್ತಿಯಾಗಲಿಲ್ಲ. ನಂತರ ಕೆಲ ಅತಿಥಿಗಳು ಉಟಕ್ಕೆಂದು ಬಂದು ನೋಡಿದಲ್ಲಿ ಎಲ್ಲ ತಟ್ಟೆಗಳು ಹಾಗೂ ವಿವಿಧ ಭಕ್ಷ್ಯಗಳು ಖಾಲಿಯಾಗಿದ್ದವು ಅರೇ ಅದೇನು ಅಚ್ಚರಿ..‍‍! ಅಲ್ಲಿದ್ದ ಭಕ್ಷ್ಯಗಳನ್ನು ಖಾಲಿ ಮಾಡಿದ ಗಣೇಶ ಅಲ್ಲಿದ್ದ ಪಾತ್ರೆಪಡಗ, ಪೀಠೋಪಕರಣಗಳು ಮತ್ತು ಕುಬೇರನ ಮುಖ್ಯ ನಗರವಾದ ಅಲಕಾಪುರಿಯನ್ನು ಕಬಳಿಸಲು ಪ್ರಾರಂಭಿಸಿದನು.

ಎಲ್ಲವನ್ನು ತಿಂದು ಮುಗಿಸಿದ ಗಣೇಶ ಕುಬೇರನನ್ನು ತಿನ್ನುವುದಾಗಿ ಹೇಳಿ ಕುಬೇರನನ್ನು ಅಟ್ಟಿಸಿಕೊಂಡು ಬಂದನು. ಹೆದರಿದ ಕುಬೇರ ಈಶ್ವರನಲ್ಲಿಗೆ ಬಂದು ಪಾದವನ್ನು ಹಿಡಿದು ಗಣೇಶನ ಹಸಿವು ನಿಯಂತ್ರಿಸುವಂತೆ ನನಗೆ ಸಹಾಯ ಮಾಡು ಎಂದು ಕಳಕಳಿಯಿಂದ ಪ್ರಾರ್ಥಿಸಿಕೊಂಡನು. ಪರಿಹಾರ ಬಹಳ ಸರಳ ಎಂದ ಶಿವ ಕೈತುಂಬಾ ದ್ವಿದಳಧಾನ್ಯವನ್ನು ಪುತ್ರ ಗಣೇಶನಿಗೆ ನೀಡಿದನು. ತಂದೆ ನೀಡಿದ ಧಾನ್ಯವನ್ನು ತಿಂದ ಗಣೇಶನಿಗೆ ಆಶ್ಚರ್ಯಕರವೆಂಬಂತೆ ಕೂಡಲೇ ಹಸಿವು ನೀಗಿತು.

ಹೀಗೆ ಕುಬೇರನ ಅಹಂಕಾರವನ್ನು ಗಣೇಶ ಕರಗಿಸಿದ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕೆಳದಿಯ ಶಿವಪ್ಪ ನಾಯಕ

ಕೆಳದಿಯ ಶಿವಪ್ಪ ನಾಯಕ

ಕಣ್ಣಿನ ಆರೋಗ್ಯಕ್ಕೆ ಕ್ಯಾರೆಟ್

ಕಣ್ಣಿನ ಆರೋಗ್ಯಕ್ಕೆ ಕ್ಯಾರೆಟ್ ತಿನ್ನಿ