in

ಶಿವನ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಮೊದಲಿಗೆ ನಂದಿಗೆ ಹೇಳಿದರೂ ಸಾಕು ಅದು ಪರಶಿವನಿಗೆ ತಲುಪುತ್ತದೆ

ಶಿವನ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಮೊದಲಿಗೆ ನಂದಿಗೆ ಹೇಳಿದರೂ ಸಾಕು
ಶಿವನ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಮೊದಲಿಗೆ ನಂದಿಗೆ ಹೇಳಿದರೂ ಸಾಕು

ಈ ಹಿಂದೆ ಹಿಂದೂ ದೇವರುಗಳು ಮತ್ತು ಅವರ ವಾಹನಗಳ ಬಗ್ಗೆ ತಿಳಿದ್ದಿದೇವೆ. ಅದರಲ್ಲಿ ಪರ ಶಿವನ ವಾಹನ ನಂದಿ ಎಂದು ಗೊತ್ತು. ಆದರೆ ನಂದಿ ಶಿವನ ವಾಹನ ಆಗಲು ಕಾರಣ ಇದೆ.

ಯಾವುದೇ ವಾಹನವಿಲ್ಲದೇ ಜಗತ್ತನ್ನು ಸುತ್ತುತ್ತಿದ್ದ ಪರಮೇಶ್ವರನನ್ನು ನೋಡಿ ಯಮನು ಮರುಗಿ ಶಿವನಿಗೆ ವಾಹನವಾಗಬೇಕೆಂದು ಯೋಚಿಸುತ್ತಾನೆ. ಆದರೆ ಅವನು ಹೇಗೆ ಶಿವನ ವಾಹನವಾಗುತ್ತಾನೆ, ಶಿವನು ಅವನನ್ನು ಏಕೆ ಮತ್ತು ಹೇಗೆ ಸ್ವೀಕರಿಸಿದನು? 

ಪ್ರತೀ ಶಿವನ ದೇವಸ್ಥಾನದಲ್ಲೂ ನಂದಿಯ ಮೂರ್ತಿ ಇದ್ದೇ ಇರುತ್ತದೆ. ರಾಮನಿದ್ದಲ್ಲಿ ಹನುಮನು ಇರುವುದು ಹೇಗೋ..? ಅದೇ ರೀತಿ ಶಿವ ಇದ್ದಲ್ಲಿ ನಂದಿ ಇದ್ದೇ ಇರ್ತಾನೆ.

ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈ ನಂದಿಗೆ ಹೇಳಿದರೂ ಸಾಕು ಅದು ಶಿವನಿಗೆ ತಲುಪುತ್ತದಂತೆ. ಇದೇ ಕಾರಣಕ್ಕೆ ನಂದಿ ಕಿವಿಯೊಳಗೆ ಭಕ್ತರು ತಮ್ಮ ಮನದ ಇಚ್ಛೆಯನ್ನು ತಿಳಿಸುತ್ತಾರೆ.

ಹಿಂದು ಸಂಪ್ರದಾಯಗಳಲ್ಲಿ ಅನೇಕ ದೇವರುಗಳಿವೆ. ಒಂದೊಂದು ದೇವರುಗಳಿಗೂ ಒಂದೊಂದು ಪ್ರಾಣಿ ಅಥವಾ ಪಕ್ಷಿ ವಾಹನಗಳಾಗಿರುತ್ತವೆ ಮತ್ತು ಅವರು ಆ ವಾಹನಗಳ ಮೇಲೆ ಕುಳಿತು ಜಗತ್ತನ್ನು ಸುತ್ತುತ್ತಾರೆ ಎನ್ನುವ ನಂಬಿಕೆಯಿದೆ. ಆದರೆ ಪರಮೇಶ್ವರನು ಇಡೀ ವಿಶ್ವವನ್ನು ಯಾವುದೇ ವಾಹನವಿಲ್ಲದೆ ಸುತ್ತಾಡುತ್ತಿದ್ದನು. ಇದನ್ನು ನೋಡಿದ ಯಮನು ಪರಮೇಶ್ವರನು ಹೀಗೆ ತಿರುಗಾಡುತ್ತಿದ್ದನ್ನು ಕಂಡು ಮರುಗಿ ಶಿವನಿಗೆ ವಾಹನವಾಗಬೇಕೆಂದು ಯೋಚಿಸುತ್ತಾನೆ.

ಶಿವನ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಮೊದಲಿಗೆ ನಂದಿಗೆ ಹೇಳಿದರೂ ಸಾಕು ಅದು ಪರಶಿವನಿಗೆ ತಲುಪುತ್ತದೆ
ಭಕ್ತರು ತಮ್ಮ ಇಷ್ಟಾರ್ಥಗಳನ್ನು ನಂದಿಗೆ ಹೇಳಿದರೂ ಸಾಕು

ಬಹಳ ಹಿಂದಿನ ಕಾಲದಲ್ಲಿ ಶಿಲದ ಎಂಬ ಋಷಿ ಇದ್ದನು. ಅವನು ದೇವರ ಆರಾಧನೆಯಲ್ಲಿ ಯಾರು ಸಂಪೂರ್ಣವಾಗಿ ಲೀನವಾಗಿ, ತನ್ನ ಕುಟುಂಬ ಸಾಮಾಜಿಕ ಜೀವನವನ್ನೆ ಮರೆತಿದ್ದನು. ಅಂತಹ ಪರಿಸ್ಥಿತಿಯಲ್ಲಿ, ಅವನ ಕುಟುಂಬ ಸದಸ್ಯರು ತಮ್ಮ ವಂಶಾವಳಿಯ ಬಗ್ಗೆ ಚಿಂತಿತರಾಗಿದ್ದರು. ಈ ಸಮಸ್ಯೆಯ ಕುರಿತು ಕುಟುಂಬಸ್ಥರು ಶಿಲದನ ಬಳಿ ಹೇಳಿ ಮನೆಗೆ ಮರಳುವಂತೆ ಕೇಳಿಕೊಳ್ಳುತ್ತಾರೆ. ಅದಕ್ಕೆ ಶಿಲದ ಒಪ್ಪುದಿಲ್ಲ ಆದರೆ ತನ್ನ ಕುಟುಂಬದ ಸಲುವಾಗಿ ದೇವರ ರಾಜ ಇಂದ್ರನನ್ನು ಕುರಿತು ಕಠಿಣ ತಪಸ್ಸು ಮಾಡುತ್ತಾನೆ. ಅವನ ತಪ್ಪಸ್ಸಿನಿಂದ ಪ್ರಸನ್ನನಾಗುವ ಇಂದ್ರ ಅವನ ಕೋರಿಕೆ ಏನು ಎಂದು ಕೇಳುತ್ತಾನೆ.. ಶಿಲದ ಮದುವೆ, ಹೆಂಡತಿ ಇಲ್ಲದೆ ಸಂತಾನೋತ್ಪತ್ತಿ ಕ್ರಿಯೆ ಇಲ್ಲದೆ, ತನಗೊಂದು ಮಗುವನ್ನು ಕೊಡಬೇಕೆಂದು ಕೇಳುತ್ತಾನೆ. ಆಗ ಇಂದ್ರ ತನ್ನಿಂದ ಅಂತಹ ಮಗುವನ್ನು ಪ್ರಸಾದಿಸಲು ಸಾಧ್ಯವಿಲ್ಲ ಎನ್ನುತ್ತಾನೆ.

ಇಂದ್ರದೇವನಿಂದ ಅವರ ಆಶಯಕ್ಕೆ ತಕ್ಕಂತೆ ಮಕ್ಕಳನ್ನು ಪಡೆಯುವ ಆಶೀರ್ವಾದ ಸಿಗದಿದ್ದಾಗ, ಶಿಲದ ಮುನಿ ಮಕ್ಕಳಿಗಾಗಿ ಶಿವನನ್ನು ಪೂಜಿಸುತ್ತಾನೆ. ಶಿವನು ಅವನ ಕಠಿಣ ತಪಸ್ಸಿಗೆ ಮೆಚ್ಚಿ ಶಿಲದ ಕೇಳಿದಂತೆಯೇ ಮಗುವನ್ನು ಅನುಗ್ರಹಿಸುವುದಾಗಿ ಹೇಳಿ ಹೋಗುತ್ತಾನೆ. ಕೆಲ ಸಮಯದ ನಂತರ ಒಂದು ದಿನ ಶಿಲದ ಮುನಿ ಹೊಲವನ್ನು ಉಳುಮೆ ಮಾಡುತ್ತಿದ್ದಾಗ, ಜಮೀನಿನಲ್ಲಿ ಒಂದು ಮಗು ಸಿಗುತ್ತದೆ. ಆ ಮಗುನ್ನೇ ಶಿವನ ಪ್ರಸಾದವೆಂದು ತಿಳಿದ ಶಿಲದ, ಆ ಮಗುವನ್ನು ಮನೆಗೆ ಕರೆತಂದು, ಮಗುವಿಗೆ ನಂದಿ ಎಂದು ಹೆಸರಿಟ್ಟು ಸಾಕಿದನು. ಹೀಗೆ ಕಾಲ ಉರುಳುತ್ತದೆ, ಒಮ್ಮೆ ಪರಮೇಶ್ವರನು ಮಿತ್ರ ಮತ್ತು ವರುಣ ಎಂಬ ಇಬ್ಬರು ಋಷಿಮುನಿಗಳನ್ನು ನಂದಿಯಲ್ಲಿಗೆ ಕಳುಹಿಸಿ . ಅವನು ನಂದಿಗೆ ಅಲ್ಪಾಯಸ್ಸು ಎಂದು ಹೇಳುವಂತೆ ಮತ್ತು ಅದಕ್ಕಾಗಿ ಪರಮೇಶ್ವರನನ್ನು ಪ್ರಾರ್ಥಿಸುವಂತೆ ಹೇಳಲು ಹೇಳಿಸುತ್ತಾನೆ. ಇದನ್ನು ಕೇಳಿದ ನಂದಿ ಮುನಿಗಳು ಹೇಳಿದಂತೆ ಕಾಡಿಗೆ ಹೋಗಿ ಮಹಾದೇವನನ್ನು ಪೂಜಿಸಲು ಪ್ರಾರ್ಥಿಸುತ್ತಾನೆ.

ನಂದಿ ಶಿವನನ್ನು ಕುರಿತು ತಪಸ್ಸು ಮಾಡುತ್ತಾನೆ. ಪ್ರತ್ಯಕ್ಷನಾದ ಶಿವನ ಮುಂದೆ ನನಗೆ ಧೀರ್ಘಾಯುಷ್ಯ ಕೊಡು ಎಂದು ಕೇಳುವುದನ್ನು ಬಿಟ್ಟು, ನಾನು ಸದಾ ನಿನ್ನ ಜೊತೆ ಇರುವಂತೆ ದಯೆ ಕರುಣಿಸು ಎಂದು ಕೇಳುತ್ತಾರೆ. ಅದಕ್ಕೆ ಶಿವ ತಥಾಸ್ಥು ಎನ್ನುತ್ತಾನೆ. ಹಾಗಾಗಿ ನಂದಿ ಆಯುಷ್ಯ ಮುಗಿದ ಬಳಿಕ, ಪರಶಿವನ ವಾಹನವಾಗಿ, ಸದಾ ಪರಶಿವನ ಬಳಿಯೇ ಇರುತ್ತಾನೆ. ಮತ್ತು ಪರಶಿವನ ಪರಮ ಭಕ್ತನೆನ್ನಿಸಿಕೊಳ್ತಾನೆ.

ಶಿವನ ಜೊತೆಯೇ ಸದಾ ಇರುವಂತೆ ವರ ನೀಡುವಂತೆ ಕೋರಿಕೊಂಡ. ಅಲ್ಲದೇ, ನಾನು ನನ್ನ ಈ ಜೀವನವನ್ನು ನಿಮ್ಮ ಜೊತೆಯಲ್ಲಿ ಕಳೆಯಲು ಬಯಸುತ್ತೇನೆ. ನಿನ್ನ ಸಾಮೀಪ್ಯವೇ ನಾನು ಇರಬೇಕು ಎಂದು ಕೋರಿಕೊಂಡ ಅವನ ಭಕ್ತಿಯನ್ನು ನೋಡಿದ ಶಿವನು ನಂದಿಯನ್ನು ಅಪ್ಪಿಕೊಂಡು ಗೂಳಿಯ ಮುಖವನ್ನು ಕೊಟ್ಟನು. ಅಲ್ಲದೇ ತನ್ನ ಗಣದಲ್ಲಿ ನಂದಿಯನ್ನು ಮುಖಂಡನಾಗಿ ಮಾಡಿದನು. ತಮ್ಮ ಗಣಗಳಲ್ಲಿ ಶಿವನಿಗೆ ಅತ್ಯಂತ ಪ್ರಿಯನಾದ ನಂದಿ ಶಿವನ ಪರಮ ಭಕ್ತ ಕೂಡ. ಅಂದಿನಿಂದ ನಂದಿಯು ಶಿವನ ವಾಹನವಾಯಿತು

ಶಿವನ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಮೊದಲಿಗೆ ನಂದಿಗೆ ಹೇಳಿದರೂ ಸಾಕು ಅದು ಪರಶಿವನಿಗೆ ತಲುಪುತ್ತದೆ
ಋಷಿ , ನಂದಿ

ನಂದಿಯನ್ನು ಸಾವಿನ ಭಯದಿಂದ ಮುಕ್ತರಾಗುವಂತೆ ಆಶೀರ್ವದಿಸಿನು ಅಲ್ಲದೆ ಅವನನ್ನು ತನ್ನ ಸೇನೆಯ ಮುಖ್ಯಸ್ಥನನ್ನಾಗಿ ಮಾಡಿದನು. ಅಸುರರು ಮತ್ತು ದೇವರುಗಳ ನಡುವೆ ಸಮುದ್ರ ಮಥನ ನಡೆಯುತ್ತಿರುವಾಗ ಅದರಿಂದ ವಿಷವು ಹೊರಬರುತ್ತದೆ. ಅದನ್ನು ಗಮನಿಸುವ ಶಿವನು ಲೋಕ ಕಲ್ಯಾಣಕ್ಕಾಗಿ ಆ ವಿಷವನ್ನು ಕುಡಿಯುತ್ತಾನೆ. ಹೀಗೆ ಕುಡಿಯುವಾಗ ವಿಷದ ಕೆಲವು ಹನಿಗಳು ನೆಲದ ಮೇಲೆ ಬಿದ್ದು ಬಿಡುತ್ತವೆ. ಆಗ ನಂದಿಯು ತನ್ನ ನಾಲಿಗೆಯಿಂದ ವಿಷವನ್ನು ನೆಕ್ಕಿದನು. ನಂದಿಯ ಈ ಕೆಲಸಕ್ಕೆ ದೇವತೆಗಳು ತುಂಬಾ ಸಂತೋಷಪಟ್ಟರು. ಈ ಘಟನೆಯ ನಂತರ ಶಿವ ನಂದಿಗೆ ತನ್ನ ಶ್ರೇಷ್ಠ ಭಕ್ತ ಎಂಬ ಬಿರುದನ್ನು ಕೊಟ್ಟನು. ಅಲ್ಲದೆ ತನಗೆ ಸಲ್ಲುವ ಗೌರವವೆಲ್ಲ ನಂದಿಗೂ ಸೇರಬೇಕೆಂದು ಘೋಷಿಸಿದನು.

ಶಿವ ನಂದಿಯನ್ನು ತನ್ನ ವಾಹನವಾಗಿ ಆಯ್ಕೆ ಮಾಡಿಕೊಳ್ಳಲು ಮುಖ್ಯ ಕಾರಣ ನಂದಿಯ ಮುಗ್ದತೆ, ಅವನು ಯಾವುದೇ ವಂಚನೆಯ ಯೋಚನೆಗಳನ್ನು ಮಾಡುವುದಿಲ್ಲ ಎಂಬ ನಂಬಿಕೆಯಿಂದ. ನಂದಿಯು ಶಿವನ ವಾಹನ ಮಾತ್ರವಲ್ಲದೆ, ಪರಮೇಶ್ವರನ ಗಣಗಳ ನಾಯಕನು ಆಗಿದ್ದಾನೆ ಎನ್ನಲಾಗುತ್ತದೆ. ಹಾಗಾಗಿ ನಂದಿಯ ಆಜ್ಞೆಯ ಮೇರೆಗೆ ಶಿವನ ಸೇನೆಯು ಕಾರ್ಯನಿರ್ವಹಿಸುತ್ತದೆ ಎಂದು ನಂಬಲಾಗುತ್ತದೆ.

ಶಿವನನ್ನು ಪೂಜಿಸುವ ಮೊದಲು ನಂದಿಯ ಆರಾಧನೆ ಮಾಡಲೇ ಬೇಕು ಎಂದು ಶಿವನು ಹೇಳಿದ ಕಾರಣದಿಂದಲೇ, ಎಲ್ಲಾ ಶಿವನ ದೇವಾಲಯದಲ್ಲೂ ನಾವು ನಂದಿಯ ವಿಗ್ರಹ ಕಾಣಬಹುದು ಎನ್ನಲಾಗುತ್ತದೆ. ಇದು ಮಾತ್ರವದೆ ನಾವು ಶಿವನನ್ನು ಏನನ್ನಾದರೂ ಕೇಳಲು ಬಯಸಿದರೆ ಅದನ್ನು ನಂದಿಯ ಕಿವಿಯಲ್ಲಿ ಪರಿಶುದ್ಧತೆಯ ಮನಸಿನಿಂದ ಅಚಲವಾದ ಪ್ರಾಮಾಣಿಕತೆಯಿಂದ ಹೇಳಿ ಕೊಂಡರೆ , ಅವನು ಖಂಡಿತವಾಗಿಯೂ ಭೋಲೆನಾಥನಿಗೆ ತಲುಪಿಸುತ್ತಾನೆ . ಅಲ್ಲದೆ ನಂದಿಯ ಬಳಿ ಹೇಳಿದ ಕೋರಿಕೆಗಳನ್ನು ಪರಮೇಶ್ವರ ಖಂಡಿತವಾಗಿಯೂ ಹೀಡೇರಿಸುತ್ತಾನೆ ಎಂಬ ನಂಬಿಕೆಯು ಚಾಲ್ತಿಯಲ್ಲಿದೆ.

 ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಪಾರಿವಾಳಗಳ ಬಗ್ಗೆ ಎಷ್ಟು ಗೊತ್ತು?

ನಮ್ಮ ಸುತ್ತಮುತ್ತ ಹೆಚ್ಚಾಗಿ ಕಾಣ ಸಿಗುವ ಪಾರಿವಾಳಗಳ ಬಗ್ಗೆ ಎಷ್ಟು ಗೊತ್ತು?

ಕಲ್ಪನಾ ಚಾವ್ಲಾ ಅವರ ನಿಧನರಾದ ದಿನ

ಫೆಬ್ರವರಿ 1 ರಂದು, ಭಾರತೀಯ ಮೂಲದ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ನಿಧನರಾದ ದಿನ