in

ಸಮುದ್ರವಾಸಿ ಮೊಸಳೆ ಗುಣಲಕ್ಷಣ

ಮೊಸಳೆ ಗುಣಲಕ್ಷಣ
ಮೊಸಳೆ ಗುಣಲಕ್ಷಣ

ಸಮುದ್ರವಾಸಿ ಅಥವಾ ನದೀಮುಖದಲ್ಲಿರುವ ಮೊಸಳೆಯು ಎಲ್ಲಾ ಜೀವಂತ ಸರೀಸೃಪಗಳ ಪೈಕಿ ಅತಿದೊಡ್ಡದು ಎನಿಸಿಕೊಂಡಿದೆ. ಆಸ್ಟ್ರೇಲಿಯಾದ ಉತ್ತರಭಾಗ, ಭಾರತದ ಪೂರ್ವಭಾಗದ ಕರಾವಳಿ ಮತ್ತು ಆಗ್ನೇಯ ಏಷ್ಯಾದ ಭಾಗಗಳಲ್ಲಿನ ತನಗೆ ಸರಿಹೊಂದುವ ಆವಾಸಸ್ಥಾನಗಳಲ್ಲಿ ಇದು ಕಂಡುಬರುತ್ತದೆ. ತಾನು ವಾಸಿಸುವ ಪ್ರದೇಶಗಳ ಸುತ್ತ ಮುತ್ತ ವಾಸಿಸುವ ಮನುಷ್ಯರ ಪಾಲಿಗೆ ಸಮುದ್ರವಾಸಿ ಮೊಸಳೆ ಅತ್ಯಂತ ಅಪಾಯಕಾರಿ ಎನ್ನಲಾಗಿದೆ. ಮನುಷ್ಯರನ್ನು ಕೊಂದು ತಿಂದ ಹಲವು ಘಟನೆಗಳು ಆಸ್ಟ್ರೇಲಿಯಾದ ಕ್ವೀನ್ಸ್ಲೆಂಡ್, ನಾರ್ದರ್ನ್ ಟೆರಿಟರಿ ಹಾಗೂ ವೆಸ್ಟರ್ನಆಸ್ಟ್ರೇಲಿಯಾ ರಾಜ್ಯಗಳ ಉತ್ತರ ಕಡಲತೀರ ಪ್ರದೇಶಗಳಿಂದ ವರದಿಗಳು ಬಂದದ್ದುಂಟು.

ಸಮುದ್ರವಾಸಿ ಮೊಸಳೆಯು ಒಂದು ಉದ್ದನೆಯ ಮುಸುಡಿಯನ್ನು ಹೊಂದಿದ್ದು, ಅದು ಅಗಲ ಮುಸುಡಿಯ ಮೊಸಳೆಯದಕ್ಕಿಂತ ಉದ್ದವಾಗಿರುತ್ತದೆ: ಇದರ ಉದ್ದವು ತಳಭಾಗದಲ್ಲಿನ ಅದರ ಅಗಲಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿರುತ್ತದೆ. ಮೊಸಳೆ ಜಾತಿಗೆ ಸೇರಿದ ಇತರ ಪ್ರಾಣಿಗಳಿಗೆ ಹೋಲಿಸಿದಾಗ, ಸಮುದ್ರವಾಸಿ ಮೊಸಳೆಯು ಅಲ್ಪವೇ ಎನ್ನಬಹುದಾದ ರಕ್ಷಾಕವಚಗಳನ್ನು ತನ್ನ ಕುತ್ತಿಗೆಯ ಮೇಲೆ ಹೊಂದಿರುತ್ತದೆ. ಇದರ ಅಗಲವಾದ ಶರೀರವು ಬಹುಪಾಲು ಇತರ ತೆಳ್ಳಗಿನ ಮೊಸಳೆಗಳ ಶರೀರಕ್ಕೆ ತದ್ವಿರುದ್ಧವಾಗಿದ್ದು, ಸದರಿ ಸರೀಸೃಪವು ಒಂದು ನೆಗಳು ಆಗಿತ್ತು ಎಂಬಂಥ, ದೃಢಪಡಿಸಲ್ಪಡದ ಆರಂಭಿಕ ಊಹೆಗಳಿಗೆ ಕಾರಣವಾಗುತ್ತದೆ.

ಸಮುದ್ರವಾಸಿ ಮೊಸಳೆಯು ಭಾರತದಲ್ಲಿ ಕಂಡುಬರುವ ಮೂರು ಮೊಸಳೆ ಜಾತಿಗೆ ಸೇರಿದ ಪ್ರಾಣಿಗಳ ಪೈಕಿ ಒಂದೆನಿಸಿದ್ದು, ಅಗಲ ಮುಸುಡಿಯ ಮೊಸಳೆ ಮತ್ತು ಏಷ್ಯಾದ ಉದ್ದಮೂತಿಯ ಮೊಸಳೆ ಉಳಿದೆರಡು ಬಗೆಗಳಾಗಿವೆ. ಭಾರತದ ಪೂರ್ವಭಾಗದ ಕರಾವಳಿಯನ್ನು ಹೊರತುಪಡಿಸಿ, ಈ ಮೊಸಳೆಯು ಭಾರತೀಯ ಉಪಖಂಡದಲ್ಲಿ ಅತ್ಯಂತ ಅಪರೂಪವಾಗಿದೆ. ಸಮುದ್ರವಾಸಿ ಮೊಸಳೆಗಳ (7 ಮೀಟರು ಉದ್ದದ ಒಂದು ಗಂಡು ಮೊಸಳೆಯೂ ಸೇರಿದಂತೆ ಅನೇಕ ದೊಡ್ಡ ವಯಸ್ಕ ಮೊಸಳೆಗಳನ್ನು ಒಳಗೊಂಡಿರುವ) ಒಂದು ಬೃಹತ್‌ ಸಂಖ್ಯೆಯು ಒಡಿಶಾದ ಭಿತರ್‌ಕನಿಕಾ ವನ್ಯಜೀವಿಕುಲ ಅಭಯಾರಣ್ಯದ ವ್ಯಾಪ್ತಿಯೊಳಗೆ ಅಸ್ತಿತ್ವದಲ್ಲಿದೆ ಮತ್ತು ಅವು ಸುಂದರಬನಗಳ ಭಾರತೀಯ ಭಾಗ ಮತ್ತು ಬಾಂಗ್ಲಾದೇಶ ಭಾಗಗಳಾದ್ಯಂತವೂ ಸಣ್ಣ ಸಂಖ್ಯೆಗಳಲ್ಲಿ ಇವೆ ಎಂದು ಹೇಳಲಾಗುತ್ತದೆ.

ಸಮುದ್ರವಾಸಿ ಮೊಸಳೆ ಗುಣಲಕ್ಷಣ
ಮೊಸಳೆ ಗುಣಲಕ್ಷಣ

ಐತಿಹಾಸಿಕವಾಗಿ ಹೇಳುವುದಾದರೆ, ಸಮುದ್ರವಾಸಿ ಮೊಸಳೆಯು ಆಗ್ನೇಯ ಏಷ್ಯಾದ ಉದ್ದಗಲಕ್ಕೂ ಕಂಡುಬಂದಿತ್ತಾದರೂ, ಅದರ ಬಹುಪಾಲು ಶ್ರೇಣಿಯು ಈಗ ನಿರ್ನಾಮವಾಗಿದೆ. ಇಂಡೋಚೈನಾದ ಬಹುತೇಕ ಭಾಗಗಳಲ್ಲಿ ಈ ಜಾತಿಯು ಕಾಡುಸ್ಥಿತಿಯಲ್ಲಿರುವುದು ದಶಕಗಳಿಂದಲೂ ವರದಿಮಾಡಲ್ಪಟ್ಟಿಲ್ಲ ಮತ್ತು ಥೈಲೆಂಡ್‌, ಲಾವೋಸ್‌, ವಿಯೆಟ್ನಾಂಗಳಲ್ಲಿ, ಹಾಗೂ ಪ್ರಾಯಶಃ ಕಾಂಬೋಡಿಯಾದಲ್ಲಿಯೂ ಇದು ನಿರ್ನಾಮವಾಗಿದೆ. ಮ್ಯಾನ್ಮಾರ್‌‌ನ ಬಹುತೇಕ ಭಾಗಗಳಲ್ಲಿ ಈ ಜಾತಿಯ ಸ್ಥಿತಿಗತಿಯು ವಿಷಮಸ್ಥಿತಿಯನ್ನು ತಲುಪಿದೆಯಾದರೂ, ಇರಾವ್ಯಾಡಿ ನದೀ ಮುಖಜ ಭೂಮಿಯಲ್ಲಿ ಅಸ್ತಿತ್ವದಲ್ಲಿರುವ ಅನೇಕ ದೊಡ್ಡ ವಯಸ್ಕ ಮೊಸಳೆಗಳಿಂದಾಗಿ ಅಲ್ಲೊಂದು ಸ್ಥಿರವಾದ ಸಮೂಹವಿದೆ ಎಂದು ತಿಳಿದುಬರುತ್ತದೆ. ಮ್ಯಾನ್ಮಾರ್‌ ದೇಶವು ಈ ಜಾತಿಯ ಕಾಡುಪ್ರಭೇದದ ಸಮೂಹಕ್ಕೆ ಈಗಲೂ ಆಶ್ರಯ ಕೊಟ್ಟಿರುವ ಇಂಡೋಚೈನಾ ವಲಯದ ಏಕೈಕ ದೇಶವಾಗಿರುವ ಸಂಭವವಿದೆ. ಮೆಕಾಂಗ್‌ ನದೀ ಮುಖಜ ಭೂಮಿಯಲ್ಲಿ (1980ರ ದಶಕದಲ್ಲಿ ಈ ಪ್ರದೇಶದಿಂದ ಅವು ಕಣ್ಮರೆಯಾದವು) ಮತ್ತು ಇತರ ನದಿ ವ್ಯವಸ್ಥೆಗಳಲ್ಲಿ ಸಮುದ್ರವಾಸಿ ಮೊಸಳೆಗಳು ಹಿಂದೊಮ್ಮೆ ಅತ್ಯಂತ ಸಾಮಾನ್ಯವಾಗಿದ್ದವಾದರೂ, ಇಂಡೋಚೈನಾದಲ್ಲಿನ ಈ ಜಾತಿಯ ಭವಿಷ್ಯವು ಈಗ ಕರಾಳವಾಗಿ ಕಾಣಿಸುತ್ತಿದೆ. ಆದಾಗ್ಯೂ, ಮೊಸಳೆ ಜಾತಿಗೆ ಸೇರಿದ ಪ್ರಾಣಿಗಳ ವ್ಯಾಪಕ ಹರಡಿಕೆಯ ಕಾರಣದಿಂದಾಗಿ ಮತ್ತು ಆಸ್ಟ್ರೇಲಿಯಾದ ಉತ್ತರಭಾಗ ಹಾಗೂ ನ್ಯೂಗಿನಿಯಾಗಳಲ್ಲಿನ ಹೆಚ್ಚೂಕಮ್ಮಿ ವಸಾಹತಿನ-ಪೂರ್ವದ ಸಂಖ್ಯಾಗಾತ್ರಗಳ ಕಾರಣದಿಂದಾಗಿ, ಈ ಪ್ರಾಣಿಗಳು ಜಾಗತಿಕವಾಗಿ ನಿರ್ನಾಮವಾಗುವ ಸ್ಥಿತಿಯನ್ನು ತಲುಪುವ ಸಾಧ್ಯತೆ ಕಡಿಮೆ ಎನ್ನಬಹುದು.

ಸಮುದ್ರವಾಸಿ ಮೊಸಳೆಗಳು ವಿಪರೀತಕಾವಿನ ಮಳೆಯ ಋತುವನ್ನು ಸಿಹಿನೀರಿನ ಜವುಗು ಪ್ರದೇಶಗಳು ಮತ್ತು ನದಿಗಳಲ್ಲಿ ಸಾಮಾನ್ಯವಾಗಿ ಕಳೆಯುತ್ತವೆ; ಶುಷ್ಕ ಋತುವಿನಲ್ಲಿ ಅವು ನದಿಯ ಹರಿವಿನ ದಿಕ್ಕಿನಲ್ಲಿ ನದೀಮುಖಗಳಿಗೆ ಚಲಿಸುತ್ತವೆ ಮತ್ತು ಕೆಲವೊಮ್ಮೆ ಬಹಳ ದೂರಕ್ಕೆ ಸಮುದ್ರದೆಡೆಗೆ ಸಂಚರಿಸುತ್ತವೆ. ಅಸ್ತಿತ್ವದ ಪ್ರದೇಶಕ್ಕಾಗಿ ಮೊಸಳೆಗಳು ಪರಸ್ಪರರೊಂದಿಗೆ ಉಗ್ರವಾಗಿ ಪೈಪೋಟಿ ನಡೆಸುತ್ತವೆ. ಅದರಲ್ಲೂ ನಿರ್ದಿಷ್ಟವಾಗಿ, ಶಕ್ತಿಯುತ ಗಂಡು ಮೊಸಳೆಗಳು ಸಿಹಿನೀರಿನ ತೊರೆಗಳು ಮತ್ತು ಹೊಳೆಗಳ ಅತ್ಯಂತ ಯೋಗ್ಯವಾದ ವಿಸ್ತರಣಗಳನ್ನು ಆಕ್ರಮಿಸಿಕೊಳ್ಳುತ್ತವೆ. ಈ ರೀತಿಯಾಗಿ ಕಿರಿಯ ಮೊಸಳೆಗಳು ಎಲ್ಲೆಗೆ ಅತಿ ಸಮೀಪವಿರುವ ನದಿ ವ್ಯವಸ್ಥೆಗಳಿಗೆ ಮತ್ತು ಕೆಲವೊಮ್ಮೆ ಸಾಗರದೊಳಗೆ ತಳ್ಳಲ್ಪಡುತ್ತವೆ. ಈ ಪ್ರಾಣಿಯ ವಿಸ್ತೃತ ಹರಡಿಕೆಯನ್ನು (ಭಾರತದ ಪೂರ್ವ ಕರಾವಳಿಯಿಂದ ಆಸ್ಟ್ರೇಲಿಯಾದ ಉತ್ತರಭಾಗದವರೆಗೆ ವ್ಯಾಪಿಸುವಿಕೆ) ಮಾತ್ರವೇ ಅಲ್ಲದೇ ಒಮ್ಮೊಮ್ಮೆ ಊಹಿಸಲಾಗದ ಸ್ಥಳಗಳಲ್ಲಿನ (ಜಪಾನ್‌ನ ಸಮುದ್ರದಂಥದು) ಕಾಣಿಸಿಕೊಳ್ಳುವಿಕೆಯನ್ನೂ ಇದು ವಿವರಿಸುತ್ತದೆ.

ಸಮುದ್ರವಾಸಿ ಮೊಸಳೆಯು ಸಮಯಸಾಧಕತನದ ಒಂದು ಪರಮಾವಧಿಯ ಪರಭಕ್ಷಕನಾಗಿದ್ದು, ನೀರಿನಲ್ಲಿನ ಅಥವಾ ಶುಷ್ಕ ಭೂಮಿಯ ಮೇಲಿನ ತನ್ನ ಪ್ರದೇಶವನ್ನು ಪ್ರವೇಶಿಸುವ ಬಹುತೇಕವಾಗಿ ಯಾವುದೇ ಪ್ರಾಣಿಯನ್ನು ಎಳೆದುಕೊಂಡು ಹೋಗುವಷ್ಟು ಸಮರ್ಥವಾಗಿರುತ್ತದೆ. ಮೊಸಳೆಗಳ ಪ್ರಾಣಿ ಪ್ರದೇಶಕ್ಕೆ ಪ್ರವೇಶಿಸುವ ಮಾನವರ ಮೇಲೆ ಅವು ದಾಳಿಮಾಡುವುದು ಚಿರಪರಿಚಿತ ಸಂಗತಿಯೇ ಆಗಿದೆ. ಎಳೆ ಹರೆಯದ ಮೊಸಳೆಗಳು ಸಣ್ಣ ಗಾತ್ರದ ಪ್ರಾಣಿಗಳ ಮೇಲೆ ಮಾತ್ರವೇ ದಾಳಿಮಾಡುತ್ತವೆ. ಅವುಗಳೆಂದರೆ, ಕೀಟಗಳು, ನೆಲೆಜಲವಾಸಿಗಳು, ಕಠಿಣಚರ್ಮಿಗಳು, ಸಣ್ಣ ಸರೀಸೃಪಗಳು, ಮತ್ತು ಮೀನುಗಳು. ಮೊಸಳೆಯ ದೊಡ್ಡದಾದಷ್ಟೂ ಅದು ತನ್ನ ಆಹಾರಕ್ರಮದಲ್ಲಿ ಸೇರ್ಪಡೆಮಾಡಿಕೊಳ್ಳುವ ಪ್ರಾಣಿಗಳ ವೈವಿಧ್ಯತೆಯು ಮಹತ್ತರವಾಗಿರುತ್ತದೆಯಾದರೂ, ತುಲನಾತ್ಮಕವಾಗಿ ಸಣ್ಣಗಾತ್ರದಲ್ಲಿರುವ ಬೇಟೆಯು ವಯಸ್ಕ ಮೊಸಳೆಗಳಲ್ಲಿಯೂ ಸಹ ಆಹಾರಕ್ರಮದ ಒಂದು ಪ್ರಮುಖ ಭಾಗವೆನಿಸಿಕೊಳ್ಳುತ್ತದೆ. ದೊಡ್ಡದಾದ ಸಮುದ್ರವಾಸಿ ವಯಸ್ಕ ಮೊಸಳೆಗಳು ತಮ್ಮ ವ್ಯಾಪ್ತಿಯೊಳಗೆ ಬರುವ ಯಾವುದೇ ಪ್ರಾಣಿಗಳನ್ನು ಸಮರ್ಥವಾಗಿ ತಿನ್ನಬಲ್ಲವು. ಅಂಥ ಪ್ರಾಣಿಗಳೆಂದರೆ: ಕೋತಿಗಳು, ಕಾಂಗರೂಗಳು, ಕಾಡು ಹಂದಿ, ಕಾಡುನಾಯಿಗಳು, ವರನಸ್‌ ಕುಲದ ದೊಡ್ಡ ಹಲ್ಲಿಗಳು, ಪಕ್ಷಿಗಳು, ಸಾಕಿದ ಜಾನುವಾರು, ಮುದ್ದಿನ ಪ್ರಾಣಿಗಳು, ಮಾನವರು, ನೀರೆಮ್ಮೆ, ವನವೃಷಭಗಳು, ಬಾವಲಿಗಳು, ಮತ್ತು ಅಷ್ಟೇ ಏಕೆ ಶಾರ್ಕ್‌ಗಳೂ ಸಹ ಈ ಪಟ್ಟಿಯಲ್ಲಿ ಸೇರಿವೆ. ಒಂದು ಟನ್ನಿಗಿಂತಲೂ ಹೆಚ್ಚು ತೂಗುವ ಸಾಕಿದ ದನ, ಕುದುರೆಗಳು, ನೀರೆಮ್ಮೆ, ಮತ್ತು ವನವೃಷಭ ಇವೇ ಮೊದಲಾದ ಪ್ರಾಣಿಗಳು ಅತಿದೊಡ್ಡ ಬೇಟೆ ಎಂದು ಪರಿಗಣಿಸಲ್ಪಟ್ಟಿದ್ದು, ಗಂಡು ಮೊಸಳೆಗಳು ಇವನ್ನು ಸರಾಗವಾಗಿ ಎಳೆದುಕೊಂಡು ಹೋಗುತ್ತವೆ. ಸಮುದ್ರವಾಸಿ ಮೊಸಳೆಯು ಸಾಮಾನ್ಯವಾಗಿ ಅತ್ಯಂತ ಆಲಸಿಯಾಗಿರುತ್ತದೆ; ಕೆಲವೊಮ್ಮೆ ಆಹಾರವಿಲ್ಲದೆಯೇ ತಿಂಗಳುಗಟ್ಟಲೇ ಅದು ಉಳಿದಿರುವಲ್ಲಿ ಈ ವಿಶೇಷ ಲಕ್ಷಣವು ನೆರವಾಗುತ್ತದೆ. ತನ್ನ ಜಡಸ್ವಭಾವದಿಂದಾಗಿ ಇದು ಸೋಮಾರಿಯಂತೆ ನೀರಿನಲ್ಲಿ ಅಲ್ಲಲ್ಲೇ ಸುತ್ತಾಡುತ್ತಾ ವಿಶಿಷ್ಟವಾಗಿ ಕಾಲ ಕಳೆಯುತ್ತದೆ ಅಥವಾ ದಿನದ ಬಹುಭಾಗದಲ್ಲಿ ಸೂರ್ಯನ ಬೆಳಕಿನಲ್ಲಿ ಬಿಸಿಲು ಕಾಯಿಸಿಕೊಳ್ಳುತ್ತದೆ, ಮತ್ತು ರಾತ್ರಿ ವೇಳೆಯಲ್ಲಿ ಬೇಟೆಯಾಡುವುದಕ್ಕೆ ಆದ್ಯತೆ ನೀಡುತ್ತದೆ. ನೀರಿನಲ್ಲಿದ್ದುಕೊಂಡು ಅಲ್ಲಿಂದ ಒಂದು ದಾಳಿಗೆ ಚಾಲನೆ ನೀಡುವ ಸಂದರ್ಭ ಬಂದಾಗ, ಸ್ಫೋಟಕವೆಂಬಂಥ ವೇಗದ ಕ್ಷಣಕಾಲದ ರಭಸಗಳನ್ನು ಹೊಮ್ಮಿಸುವ ಸಾಮರ್ಥ್ಯವನ್ನು ಸಮುದ್ರವಾಸಿ ಮೊಸಳೆಗಳು ಹೊಂದಿರುತ್ತವೆ. ಮೈದಾನದಲ್ಲಿನ ಅಲ್ಪ ಅಂತರಗಳನ್ನು ದಾಟುವ ಸಂದರ್ಭದಲ್ಲಿ ಮೊಸಳೆಗಳು ಒಂದು ರೇಸಿನ ಕುದುರೆಗಿಂತಲೂ ವೇಗವಾಗಿರುತ್ತವೆ ಎಂಬಂಥ ಕಥೆಗಳು ನಗರ ಪ್ರದೇಶದ ದಂತಕಥೆಗಿಂತಲೂ ಸ್ವಲ್ಪವೇ ಹೆಚ್ಚೆನಿಸುತ್ತದೆ. ಆದಾಗ್ಯೂ, ಪಾದಗಳು ಮತ್ತು ಬಾಲ ಈ ಎರಡರಿಂದಲೂ ಮುನ್ನೂಕುವಿಕೆಯನ್ನು ಅವು ಸಂಯೋಜಿಸಬಲ್ಲಂಥ ನೀರಿನ ಅಂಚಿನಲ್ಲಿ, ಪ್ರತ್ಯಕ್ಷದರ್ಶಿ ದಾಖಲೆಗಳು ಅಪರೂಪವಾಗಿವೆ.

ಸಮುದ್ರವಾಸಿ ಮೊಸಳೆ ಗುಣಲಕ್ಷಣ
ಮೊಸಳೆಯ ದಾಳಿ

ಸಮುದ್ರವಾಸಿ ಮೊಸಳೆಯು ದಾಳಿಮಾಡುವುದಕ್ಕೆ ಮುಂಚಿತವಾಗಿ ತನ್ನ ಬೇಟೆಯು ನೀರಿನ ಅಂಚಿಗೆ ನಿಕಟವಾಗಿ ಬರಲಿ ಎಂದು ಸಾಮಾನ್ಯವಾಗಿ ಕಾಯುತ್ತದೆ; ನಂತರ ಬೇಟೆಯನ್ನು ನೀರಿಗೆ ಮರಳಿ ಎಳೆದುಕೊಂಡು ಹೋಗುವಲ್ಲಿ ಅದರ ಮಹಾನ್‌ ಬಲವು ಈ ನಿಟ್ಟಿನಲ್ಲಿ ಅದಕ್ಕೆ ನೆರವಾಗುತ್ತದೆ. ಬಹುತೇಕ ಪ್ರಾಣಿಗಳು ಮೊಸಳೆಯು ಹೊಂದಿರುವ ಮಹತ್ತರವಾದ ದವಡೆಯ ಒತ್ತಡದಿಂದಲೇ ಸಾಯಿಸಲ್ಪಡುತ್ತವೆಯಾದರೂ, ಕೆಲವೊಂದು ಪ್ರಾಣಿಗಳನ್ನು ಮೊಸಳೆಯು ಪ್ರಾಸಂಗಿಕವಾಗಿ ಮುಳುಗಿಸಿ ಉಸಿರುಕಟ್ಟಿ ಸಾಯಿಸುತ್ತದೆ. ಇದೊಂದು ಶಕ್ತಿಯುತ ಪ್ರಾಣಿಯಾಗಿದ್ದು, ಸಂಪೂರ್ಣವಾಗಿ ಬೆಳೆದ ನೀರೆಮ್ಮೆಯೊಂದನ್ನು ಒಂದು ನದಿಯೊಳಗೆ ಎಳೆದುಕೊಂಡು ಹೋಗುವುದಕ್ಕೆ ಬೇಕಿರುವ ಬಲವನ್ನು ಹೊಂದಿರುತ್ತದೆ, ಅಥವಾ ಸಂಪೂರ್ಣವಾಗಿ-ಬೆಳೆದ ಕಾಡೆತ್ತಿನ ತಲೆಬುರುಡೆಯನ್ನು ತನ್ನ ದವಡೆಗಳ ನಡುವೆ ಸಿಕ್ಕಿಸಿಕೊಂಡು ಪುಡಿಮಾಡಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತದೆ. ವಿಶಿಷ್ಟವೆನಿಸಿರುವ ಇದರ ಬೇಟೆಯಾಡುವಿಕೆಯ ಕೌಶಲವು “ಸಾವಿನ ಉರುಳಾಟ” ಎಂದು ಕರೆಯಲ್ಪಟ್ಟಿದೆ: ಪ್ರಾಣಿಯ ಮೇಲೆ ಗಬಕ್ಕನೇ ಹಾರಿ ಇದು ಥಟ್ಟನೆ ಹಿಡಿದುಕೊಳ್ಳುತ್ತದೆ ಹಾಗೂ ಶಕ್ತಿಯುತವಾಗಿ ಅದನ್ನು ಸುರಳಿ ಸುತ್ತಿದಂತೆ ಸುತ್ತಿ ಉರುಳಿಸುತ್ತದೆ. ಇದರಿಂದಾಗಿ, ಹೆಣಗಾಡುತ್ತಿರುವ ಯಾವುದೇ ದೊಡ್ಡದಾದ ಪ್ರಾಣಿಯು ತನ್ನ ಸಮತೋಲನವನ್ನು ಕಳೆದುಕೊಳ್ಳುವಂತಾಗುತ್ತದೆ ಮತ್ತು ಆ ಬೇಟೆಯನ್ನು ನೀರಿನೊಳಗೆ ಎಳೆದುಕೊಂಡು ಹೋಗುವ ಕಾರ್ಯವು ಸರಾಗವಾಗಿ ಪರಿಣಮಿಸುತ್ತದೆ. ದೊಡ್ಡಗಾತ್ರದ ಪ್ರಾಣಿಗಳು ಸತ್ತ ನಂತರ ಅವನ್ನು ಹರಿದು ಚಿಂದಿಮಾಡುವುದಕ್ಕಾಗಿಯೂ ಈ “ಸಾವಿನ ಉರುಳಾಟ”ದ ತಂತ್ರವು ಬಳಸಲ್ಪಡುತ್ತದೆ.

ಮೊಸಳೆ ಸೂಚಕ ಹಲ್ಲಿಗಳು, ಪರಭಕ್ಷಕ ಮೀನುಗಳು, ಪಕ್ಷಿಗಳು, ಮತ್ತು ಇತರ ಅನೇಕ ಪರಭಕ್ಷಕ ಪ್ರಾಣಿಗಳಿಗೆ ಎಳೆಯವಯಸ್ಸಿನ ಸಮುದ್ರವಾಸಿ ಮೊಸಳೆಗಳು ಬೇಟೆಯಾಗಿ ಸಿಕ್ಕಿಬೀಳಬಹುದು. ಎಳೆ ಹರೆಯದ ಮೊಸಳೆಗಳು ಕೂಡಾ ಅವುಗಳ ವ್ಯಾಪ್ತಿಯಲ್ಲಿನ ನಿಶ್ಚಿತ ಭಾಗಗಳಲ್ಲಿರುವ ಬಂಗಾಳ ಹುಲಿಗಳು ಮತ್ತು ಚಿರತೆಗಳಿಗೆ ಬೇಟೆಯಾಗಿ ಸಿಕ್ಕಿಬೀಳಬಹುದಾದರೂ, ಇದು ಅಪರೂಪವೆನಿಕೊಂಡಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿದ ವಿರಾಟ್

ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿದ ವಿರಾಟ್

ಬೃಹದೀಶ್ವರ ದೇವಾಲಯ

ಅತ್ಯಮೌಲ್ಯವಾದ ವಾಸ್ತುಶಿಲ್ಪದ ಕಲಾತಾಣವಾಗಿದೆ ಬೃಹದೀಶ್ವರ ದೇವಾಲಯ