in

ಚೀತಾ ಗುಣಲಕ್ಷಣಗಳು

ಚೀತಾ ಗುಣಲಕ್ಷಣಗಳು
ಚೀತಾ ಗುಣಲಕ್ಷಣಗಳು

ಚೀತಾ ಫೆಲಿಡೆ ಎಂಬ ಬೆಕ್ಕಿನ ಜಾತಿಗೆ ಸೇರಿದ ಒಂದು ವಿಶಿಷ್ಟ ಪ್ರಾಣಿ. ಇದು ತನ್ನ ವೇಗಕ್ಕೆ ಹೆಸರುವಾಸಿಯಾಗಿದೆ, ಆದರೆ ಇದಕ್ಕೆ ಮರ ಏರುವ ಸಾಮರ್ಥ್ಯದ ಕೊರತೆ ಇದೆ. ಈ ಪ್ರಾಣಿ ವರ್ಗವು ಅಸಿನೋನಿಕ್ಸ್ ಎಂಬ ವಂಶವಾಹಿನಿಯ ಬದುಕಿರುವ ಏಕೈಕ ಸದಸ್ಯ.

ಇದು ಸೂಪರ್ ಕಾರ್ ಗಿಂತ ಅತ್ಯಂತ ವೇಗವಾಗಿ ಚಲಿಸುತ್ತದೆ. ಚೀತಾದ ಬಗೆಗಿನ ಇತ್ತೀಚಿನ ಸಂಶೋಧನೆಗಳು ಅದನ್ನು ಭೂಮಿಯ ಮೇಲೆ ಅತ್ಯಂತ ವೇಗವಾಗಿ ಓಡುವ ಪ್ರಾಣಿ ಎಂಬುದನ್ನು ಖಚಿತ ಪಡಿಸುತ್ತವೆ.

“ಚೀತಾ” ಎಂಬ ಪದವು ಸಂಸ್ಕೃತ ಪದದಿಂದ ವ್ಯುತ್ಪತ್ತಿ ಹೊಂದಿದೆ. ಇದು “ವಿವಿಧವರ್ಣದ ಶರೀರ” ಎಂಬ ಅರ್ಥವನ್ನು ನೀಡುತ್ತದೆ. ಈ ಪದದ ಮೂಲಕ ಹಿಂದಿಯ ಚೀತಾ ಎಂಬ ಪದವೂ ಸಹ ಹುಟ್ಟಿ ಬಂದಿದೆ.

ಚೀತಾಗಳು ಕಡಿಮೆ ಸಂತತಿಯ ವರ್ಗ ವ್ಯತ್ಯಾಸ ಹೊಂದಿರುವುದು ವಿಶೇಷವಾಗಿದೆ. ಜೊತೆಗೆ ಅತ್ಯಂತ ಕಡಿಮೆ ವೀರ್ಯ ಸಂಖ್ಯೆಯನ್ನು ಹೊಂದಿದೆ. ಇದು ಅತ್ಯಂತ ಕಡಿಮೆ ಚಲನಶೀಲತೆಯ ಜೊತೆಗೆ ಫ್ಲಜೆಲ್ಲಾ ಚಾಟಿಯಂತೆ ಆಡಿಸಬಹುದಾದ ಅಂಗ ವಿಶೇಷ/ಕಶಾಂಗದ ವಿಕಾರತೆಯಿಂದ ನರಳುತ್ತದೆ. ಬೇರೆ ತಳಿಗಳಿಂದ ಚರ್ಮ ಪಡೆದು ಕಸಿ ಮಾಡಿದರೂ ಸಹ ಚೀತಾಗಳು ಅದನ್ನು ನಿರಾಕರಿಸುವುದಿಲ್ಲವೆಂಬ ಅಂಶವನ್ನು ಇದು ವಿಶದಪದಿಸುತ್ತದೆ. ಇದು ಕಳೆದ ಹಿಮಯುಗದ ಸಂತತಿ ಪ್ರತಿಬಂಧಕದ ಪರಿಣಾಮವಾಗಿ ಒಂದು ಸುದೀರ್ಘಾವಧಿಯ ಅಂತಸ್ಸಂಬಂಧಕ್ಕೆ ಒಳಪಟ್ಟಿರಬಹುದೆಂದು ಅಂದಾಜಿಸಲಾಗಿದೆ. ಇದು ಏಶಿಯಾಕ್ಕೆ ವಲಸೆ ಬರುವ ಮೊದಲು ಬಹುಶಃ ಆಫ್ರಿಕಾದ ಮಿಅಸಿನ್ ಯುಗ ದಲ್ಲಿ (26 ಮಿಲಿಯನ್ – 7.5 ಮಿಲ್ಯನ್ ವರ್ಷಗಳ ಹಿಂದೆ) ವಿಕಸನ ಹೊಂದಿರಬಹುದು.

ಆದಾಗ್ಯೂ ಹಲವು ಮೂಲಗಳು ಚೀತಾದ ಆರಕ್ಕೂ ಹೆಚ್ಚು ಉಪಜಾತಿಗಳನ್ನು ಪಟ್ಟಿ ಮಾಡಿದೆ.

ಜೀವಿವರ್ಗೀಕರಣದ ಸ್ಥಿತಿಗತಿಯಲ್ಲಿ ಈ ಉಪಜಾತಿಗಳ ಬಗ್ಗೆ ಅನಿಶ್ಚಿತತೆಯಿದೆ. ಅಸಿನೋನಿಕ್ಸ್ ರೆಕ್ಸ್ -ದೊಡ್ಡ ಚೀತಾ ಇದು ಕೇವಲ ಒಂದು ಗೌಣವಾಗಿ ಸಂತತಿಯ ವ್ಯತ್ಯಾಸ ಹೊಂದಿರುವುದು ಪತ್ತೆಯಾದ ಮೇಲೆ ಇದನ್ನು ಪಟ್ಟಿಯಿಂದ ಕೈಬಿಡಲಾಯಿತು. ಅಸಿನೋನಿಕ್ಸ್ ಜುಬಾಟುಸ್ ಗುಟ್ಟಟುಸ್ ಎಂಬ ತುಪ್ಪಳವುಳ್ಳ ಚೀತಾದ ಉಪಜಾತಿಯೂ ಸಹ ಒಂದು ಗೌಣವಾದ ಸಂತತಿಯಿಂದಾಗಿ ವ್ಯತ್ಯಾಸ ಹೊಂದಿದೆ.

ಚೀತಾದ ಎದೆಯು ವಿಶಾಲವಾಗಿದೆ ಜೊತೆಗೆ ಅದರ ನಡುವು ಸಂಕುಚಿತವಾಗಿದೆ. ಚೀತಾದ ದಪ್ಪ ಹಾಗು ಉರುಟಾದ ಆದರೆ ಚಿಕ್ಕದಾದ ತುಪ್ಪಳವು ಗುಂಡಗಿನ ಕಪ್ಪು ಮಚ್ಚೆಗಳಿಂದ ಬಿಸಿಲುಗಂದು ಬಣ್ಣ ಹೊಂದಿದೆ. ಇದು 2 to 3 cm (0.79 to 1.18 in) ರಷ್ಟು ಅಳತೆಯನ್ನು ಸುತ್ತಲೂ ಹೊಂದಿರುತ್ತದೆ. ಇದು ಮರೆಯಲ್ಲಿನಿಂತು ಬೇಟೆಯಾಡಲು ಒತ್ತು ಕೊಡುತ್ತದೆ. ಅದರ ಬಿಳಿ ಕೆಳತಲದಲ್ಲಿ ಯಾವುದೇ ಮಚ್ಚೆಗಳಿಲ್ಲ. ಆದರೆ ಅದರ ಬಾಲದಲ್ಲಿ ಮಚ್ಚೆಗಳಿವೆ. ಇವು ಬಾಲದ ಅಂತ್ಯದಲ್ಲಿ ನಾಲ್ಕರಿಂದ ಆರು ದಟ್ಟ ವರ್ತುಲಗಳಿಂದ ಒಂದಾಗಿರುತ್ತವೆ. ಬಾಲವು ಸಾಮಾನ್ಯವಾಗಿ ಒಂದು ಬಿಳಿ ಪೊದೆಯಾಕಾರದ ಗೊಂಚಲಿನಿಂದ ಕೊನೆಯಾಗುತ್ತದೆ. ಚೀತಾ ಒಂದು ಸಣ್ಣ ತಲೆಯ ಜೊತೆಗೆ ತೀಕ್ಷ್ಣ ಕಣ್ಣುಗಳನ್ನು ಹೊಂದಿದೆ. ಕಪ್ಪು “ಕಣ್ಣೀರಿನ ಗುರುತು” ಅದರ ಕಣ್ಣುಗಳ ಅಂಚಿನಿಂದ ಕೆಳಗೆ ಮೂಗಿನಿಂದ ಹಿಡಿದು ಅದರ ಬಾಯಿಯವರೆಗೂ ಕಂಡುಬರುತ್ತದೆ. ಇದು ಅದರ ಕಣ್ಣುಗಳನ್ನು ಸೂರ್ಯನ ಬೆಳಕನ್ನು ತಡೆ ಹಿಡಿಯಲು ಹಾಗು ಬೇಟೆಯಲ್ಲಿ ಸಹಾಯಮಾಡುವುದರ ಜೊತೆಗೆ ದೂರ ದೃಷ್ಟಿ ಬೀರಲು ಸಹಾಯಕವಾಗಿದೆ. ಅದು ಅತಿ ವೇಗವನ್ನು ತಲುಪಬಹುದಾದರೂ, ಅದರ ದೇಹವು ದೂರದ ಓಟಕ್ಕೆ ಸಹಕರಿಸುವುದಿಲ್ಲ. ಅದು ಅತಿ ವೇಗದ ಓಟಗಾರ.

ಚೀತಾ ಗುಣಲಕ್ಷಣಗಳು
ಚೀತಾ

ಕೆಲವು ಚೀತಾಗಳಲ್ಲಿ ಒಂದು ಅಪರೂಪವಾದ ತುಪ್ಪಳದ ಮಾದರಿಯ ಮಾರ್ಪಾಡು ಕಂಡು ಬರುತ್ತದೆ. ದೊಡ್ಡದಾದ ಮಚ್ಚೆಗಳನ್ನು ಹೊಂದಿರುವ ಚೀತಾಗಳನ್ನು “ದೊಡ್ಡ ಚೀತಾ” ಎಂದು ಕರೆಯಲಾಗುತ್ತದೆ. ಇವುಗಳನ್ನು ಒಂದೊಮ್ಮೆ ಪ್ರತ್ಯೇಕವಾದ ಉಪಜಾತಿಗಳೆಂದು ಹೇಳಲಾಗುತ್ತಿತ್ತು. ಆದರೆ ಇವುಗಳು ಕೇವಲ ಆಫ್ರಿಕನ್ ಚೀತಾದ ಒಂದು ಮಾರ್ಪಾಡು. “ದೊಡ್ಡ ಚೀತಾ” ಗಳು ಹಲವು ಬಾರಿ ಅರಣ್ಯದಲ್ಲಿ ಮಾತ್ರ ಕಂಡು ಬಂದಿವೆ. ಆದರೆ ಇವುಗಳನ್ನು ಸೆರೆ ಹಿಡಿದ ಬಳಿಕವಷ್ಟೇ ಪೋಷಿಸಲಾಗುತ್ತದೆ.

ಚೀತಾದ ಪಂಜಗಳು ಪಾರ್ಶ್ವವಾಗಿ-ಮುದುರಿಕೊಳ್ಳಬಲ್ಲ ಕಾಲುಗುರುಗಳನ್ನು ಹೊಂದಿವೆ (ಇವುಗಳು ಮೂರು ಇತರ ಬೆಕ್ಕಿನ ಉಪಜಾತಿಗಳಲ್ಲಿ ಮಾತ್ರ ಕಾಣಸಿಗುತ್ತವೆ. ಫಿಶಿಂಗ್ ಕ್ಯಾಟ್ (ಒಂದು ಮಧ್ಯಮ ಗಾತ್ರದ ಬೆಕ್ಕು), ಫ್ಲಾಟ್-ಹೆಡೆಡ್ ಕ್ಯಾಟ್ (ಒಂದು ಚಿಕ್ಕ ಕಾಡು ಬೆಕ್ಕು) ಹಾಗು ಇರಿಒಮೊಟೆ ಕ್ಯಾಟ್ (ಒಂದು ಸಾಮಾನ್ಯ ಗಾತ್ರದ ಕಾಡು ಬೆಕ್ಕು). ಇವು ಚೀತಾಗಳು ಅತಿ-ವೇಗವಾಗಿ ಬೆನ್ನಟ್ಟಿ ಬೇಟೆಯಾಡಿದಾಗ ಅವುಗಳನ್ನು ಬಲವಾಗಿ ಹಿಡಿದುಕೊಳ್ಳಲು ಹೆಚ್ಚಿನ ಸಹಾಯ ಮಾಡುತ್ತದೆ. ಚೀತಾದ ಪಂಜಗಳ ಮೂಳೆಕಟ್ಟಿನ ರಚನೆಯು ಇತರ ಬೆಕ್ಕುಗಳ ಮಾದರಿಯಲ್ಲೇ ಇದೆ. ಇತರ ಜಾತಿಗಳಲ್ಲಿ ಕಂಡು ಬರುವಂತಹ ತುಪ್ಪಳ ಹಾಗು ಚರ್ಮದ ಕೋಶಗಳು ಇವುಗಳಲ್ಲಿ ಕಂಡುಬರುವುದಿಲ್ಲ. ಹೀಗಾಗಿ ಡ್ಯೂಕ್ಲಾ( (ಬೆಕ್ಕು ಅಥವಾ ನಾಯಿ ಮುಂತಾದ ಪ್ರಾಣಿಗಳ ಮುಂಭಾಗದ ಕಾಲುಗಳಲ್ಲಿ ಕಂಡು ಬರುವ ಪೂರ್ತಿ ಬೆಳವಣಿಗೆಯಾಗದ ಬೆರಳು) ದ ಹೊರತಾಗಿ ಇದರ ಪಂಜಗಳು ಯಾವಾಗಲೂ ಗೋಚರಿಸುತ್ತವೆ. ಈ ಡ್ಯೂಕ್ಲಾ (ಬೆಕ್ಕು ಅಥವಾ ನಾಯಿ ಮುಂತಾದ ಪ್ರಾಣಿಗಳ ಮುಂಭಾಗದ ಕಾಲುಗಳಲ್ಲಿ ಕಂಡು ಬರುವ ಪೂರ್ತಿ ಬೆಳವಣಿಗೆಯಾಗದ ಬೆರಳು) ಸಹ ಇತರ ಬೆಕ್ಕುಗಳಿಗಿಂತ ಚಿಕ್ಕದಾಗಿರುವುದರ ಜೊತೆಗೆ ಉದ್ದವಾಗಿರುತ್ತವೆ.

ಈ ಮಾರ್ಪಾಡುಗಳು ಚೀತಾಗೆ ವೇಗವಾಗಿ ಓಡಲು ಅನುಕೂಲ ಮಾಡಿಕೊಡುವುದರ ಜೊತೆಗೆ ಹೆಚ್ಚಿನ ಆಮ್ಲಜನಕವನ್ನು ತೆಗೆದುಕೊಳ್ಳಲು ಸಹಾಯಕವಾಗಿರುವ ದೊಡ್ಡ ಹೊಳ್ಳೆಗಳನ್ನು ಹೊಂದಿವೆ. ಒಂದು ವಿಸ್ತಾರವಾದ ಹೃದಯ ಹಾಗು ಶ್ವಾಸಕೋಶ ಎರಡೂ ಒಟ್ಟಾಗಿ ಆಮ್ಲಜನಕವನ್ನು ಯಶಸ್ವಿಯಾಗಿ ಪೂರೈಕೆ ಮಾಡುತ್ತವೆ. ವಿಶಿಷ್ಟವಾದ ಬೇಟೆಯನ್ನಾಡುವ ಸಂದರ್ಭದಲ್ಲಿ ಅವುಗಳ ಉಸಿರಾಟದ ವೇಗವು ಪ್ರತಿ ನಿಮಿಷಕ್ಕೆ 60 ರಿಂದ 150 ಬಾರಿ ಆಗಿರುತ್ತವೆ. ವೇಗವಾಗಿ ಓಡುವಾಗ, ಅವುಗಳ ಪಾರ್ಶ್ವವಾಗಿ-ಮುದುರಿಕೊಳ್ಳಬಲ್ಲ ಪಂಜಗಳ ಒಂದು ಒಳ್ಳೆಯ ಎಳೆತದ ಜೊತೆಗೆ, ಚೀತಾ ಅದರ ಬಾಲವನ್ನು ಒಂದು ಚುಕ್ಕಾಣಿಯ-ಮಾದರಿಯಲ್ಲಿ ಚಲನೆ ಮಾಡುತ್ತದೆ. ಇದು ಸಾಮಾನ್ಯವಾಗಿ ತಪ್ಪಿಸಿಕೊಳ್ಳುವ ಬೇಟೆಯನ್ನು ತೀಕ್ಷ್ಣವಾಗಿ ಬಾಲದಲ್ಲಿ ಸುತ್ತಿಕೊಳ್ಳಲು ಸಹಾಯ ಮಾಡುತ್ತವೆ.

ನಿಜವಾದ” ದೊಡ್ಡ ಬೆಕ್ಕುಗಳ ಮಾದರಿ, ಚೀತಾ ಉಸಿರೆಳೆದುಕೊಳ್ಳುವಾಗ ಪರ್ ಗುಟ್ಟುತ್ತದೆ, ಆದರೆ ಘರ್ಜನೆ ಮಾಡುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ದೊಡ್ಡ ಬೆಕ್ಕುಗಳು ಘರ್ಜಿಸುತ್ತವೆ. ಆದರೆ ಉಸಿರನ್ನು ಹೊರಬಿಡುವಾಗ ಬಿಟ್ಟು ಬೇರೆಯಾವಾಗಲೂ ಪರ್ ಗುಟ್ಟುವುದಿಲ್ಲ. ಆದಾಗ್ಯೂ, ಚೀತಾವನ್ನು ಕೆಲವರು ದೊಡ್ಡ ಬೆಕ್ಕುಗಳಲ್ಲಿ ಅತ್ಯಂತ ಚಿಕ್ಕದೆಂದು ಪರಿಗಣಿಸುತ್ತಾರೆ. ಇದನ್ನು ಸಾಮಾನ್ಯವಾಗಿ ಚಿರತೆ ಎಂದು ತಪ್ಪಾಗಿ ಅರ್ಥೈಸಲಾಗುತ್ತಾದರೂ, ಚೀತಾ ಕೆಲವು ವೈಶಿಷ್ಟ್ಯಗಳನ್ನು ಹೊಂದಿದೆ. ಉದಾಹರಣೆಗೆ ಮೇಲೆ ಉಲ್ಲೇಖಿಸಿದಂತೆ ಉದ್ದವಾದ “ಕಣ್ಣೀರಿನ-ಹಾಗೆ ಕಾಣುವ” ಗೆರೆಗಳನ್ನು ಹೊಂದಿದೆ. ಇವು ಅವುಗಳ ಕಣ್ಣಂಚಿನಿಂದ ಅದರ ಬಾಯಿಯವರೆಗೂ ಹಾದು ಹೋಗುತ್ತವೆ. ಚೀತಾದ ದೇಹ ರಚನೆಯೂ ಸಹ ಲೆಪರ್ಡ್ ಗಿಂತ ಬೇರೆಯಾಗಿದೆ. ಇದರಲ್ಲಿ ಗಮನಾರ್ಹವಾದುದೆಂದರೆ ಅದರ ತೆಳುವಾದ ಉದ್ದದ ಬಾಲ. ಲೆಪರ್ಡ್ ನ ಮಾದರಿಯ ಅವುಗಳ ಮಚ್ಚೆಗಳು ವ್ಯವಸ್ಥಿತವಾಗಿ ರಚನೆಯಾಗಿರುವುದಿಲ್ಲ.

ಚೀತಾ ಒಂದು ಆಕ್ರಮಣಕಾರಿ ಪ್ರಾಣಿ. ಇತರ ಎಲ್ಲ ದೊಡ್ಡ ಬೆಕ್ಕುಗಳಿಗಿಂತ, ಇದು ಹೊಸ ಪರಿಸರಕ್ಕೆ ಹೆಚ್ಚಾಗಿಹೊಂದಿಕೊಳ್ಳುವುದಿಲ್ಲ. ಇದನ್ನು ಸೆರೆಯಲ್ಲಿ ಪಾಲನೆ ಮಾಡುವುದು ಅತ್ಯಂತ ಕಷ್ಟದ ಕೆಲಸವೆಂದು ಸಾಬೀತಾಗಿದೆ. ಹೀಗಿದ್ದಾಗ್ಯೂ ಇತ್ತೀಚಿಗೆ ಕೆಲವು ಮೃಗಾಲಯಗಳು ಇವುಗಳನ್ನು ನಿರ್ವಹಣೆ ಮಾಡುವಲ್ಲಿ ಯಶಸ್ವಿಯಾಗಿವೆ. ಒಂದೊಮ್ಮೆ ಅದರ ತುಪ್ಪಳಕ್ಕೋಸ್ಕರ ವ್ಯಾಪಕವಾಗಿ ಬೇಟೆಗೆ ಈಡಾಗುತ್ತಿದ್ದ ಚೀತಾಗಳು ಈಗ ಬೇಟೆಗಾರರ ಕಾಟ ಹಾಗು ಸ್ವಾಭಾವಿಕ ನೆಲೆವಾಸವಿಲ್ಲದೇ ಅದಕ್ಕಿಂತ ಹೆಚ್ಚು ಸಂಕಷ್ಟ ಸ್ಥಿತಿಯಲ್ಲಿವೆ.

ಚೀತಾ ಗುಣಲಕ್ಷಣಗಳು
ಚೀತಾ ಒಂದು ಆಕ್ರಮಣಕಾರಿ ಪ್ರಾಣಿ

ಚೀತಾಗಳಲ್ಲಿ ದೊಡ್ಡ ಚೀತಾ ತನ್ನ ಒಂದು ಅಪರೂಪವಾದ ಮಾರ್ಪಾಡಿನಿಂದ ಹೆಸರುವಾಸಿಯಾಗಿದೆ. ಇದರ ತುಪ್ಪಳದ ಮಾದರಿ ವಿಶಿಷ್ಟವಾಗಿದೆ. ಇದನ್ನು 1926ರಲ್ಲಿ ಮೊದಲ ಬಾರಿಗೆ ಜಿಂಬಾಬ್ವೆಯಲ್ಲಿ ಗುರುತಿಸಲಾಯಿತು. ಕಳೆದ 1927ರಲ್ಲಿ, ಪರಿಸರವಾದಿ ರೆಜಿನಾಲ್ಡ್ ಇನ್ನೆಸ್ ಪೋಕಾಕ್ಕ್ ಇದು ಒಂದು ಪ್ರತ್ಯೇಕ ಪ್ರಾಣಿ ಪ್ರಬೇಧವೆಂದು ಘೋಷಿಸಿದ. ಆದರೆ ಸಾಕ್ಷ್ಯಾಧಾರದ ಕೊರತೆಯಿಂದಾಗಿ ಈ ನಿರ್ಧಾರವನ್ನು 1939ರಲ್ಲಿ ವಾಪಸು ಪಡೆದುಕೊಂಡ. ಆದರೆ 1928 ರಲ್ಲಿ ವಾಲ್ಟರ್ ರಾತ್ಸ್ಚಿಲ್ಡ್ ಖರೀದಿಸಿದ ಚರ್ಮವು ದೊಡ್ಡ ಚೀತಾ ಹಾಗು ಮಚ್ಚೆಯುಳ್ಳ ಚೀತಾಗಳ ಚರ್ಮದ ನಡುವಿನ ಮಾದರಿಯಲ್ಲಿತ್ತು. ಅಬೆಲ್ ಚಾಪ್ಮನ್ ಇದನ್ನು ಮಚ್ಚೆಯುಳ್ಳ ಚೀತಾ ಒಂದು ಬಣ್ಣ ಎಂದು ಪರಿಗಣಿಸಿದ. ಅದೇ ಮಾದರಿಯ ಇಪ್ಪತ್ತೆರಡು ಚರ್ಮಗಳು 1926 ರಿಂದ 1974ರ ಅವಧಿಯಲ್ಲಿ ದೊರೆಯಿತು. ಕಳೆದ 1927ರಿಂದೀಚೆಗೆ, ದೊಡ್ಡ ಚೀತಾ ಐದಕ್ಕಿಂತ ಹೆಚ್ಚು ಬಾರಿ ಅರಣ್ಯದಲ್ಲಿ ಕಂಡು ಬಂದಿರುವುದು ವರದಿಯಾಗಿದೆ. ಆದಾಗ್ಯೂ ವಿಲಕ್ಷಣವಾದ ಗುರುತಿನ ಚರ್ಮವಿರುವ ಇವುಗಳು ಆಫ್ರಿಕಾದಿಂದ ಬಂದಿವೆ. ದಕ್ಷಿಣ ಆಫ್ರಿಕಾದ ಕ್ರುಗೆರ್ ರಾಷ್ಟ್ರೀಯ ಉದ್ಯಾನವನದಲ್ಲಿ ಬದುಕಿರುವ ದೊಡ್ಡ ಚೀತಾದ ಒಂದು ಛಾಯಾಚಿತ್ರವನ್ನು 1974ರ ತನಕವೂ ತೆಗೆದಿರಲಿಲ್ಲ. ಗುಪ್ತಪ್ರಾಣಿವಿಜ್ಞಾನಿಗಳಾದ ಪಾಲ್ ಹಾಗು ಲಿನ ಬೋಟ್ರಿಎಲ್ 1975ರಲ್ಲಿ ತಮ್ಮ ವಿಶೇಷ ಸಾಧನಾಯಾತ್ರೆಯಲ್ಲಿ ಒಂದು ದೊಡ್ಡ ಚೀತಾದ ಛಾಯಾಚಿತ್ರ ತೆಗೆದರು. ಅವರು ಮಾದರಿಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾದರು. ಇದು ಮಚ್ಚೆಯುಳ್ಳ ಚೀತಾಗಿಂತ ದೊಡ್ಡದಾಗಿ ಕಂಡುಬರುತ್ತಿತ್ತು; ಜೊತೆಗೆ ಅದರ ತುಪ್ಪಳದ ರಚನೆಯೂ ಸಹ ವಿಶೇಷವಾಗಿತ್ತು. ಏಳು ವರ್ಷಗಳಲ್ಲ್ಲಿ ಮೊದಲ ಬಾರಿಗೆ 1986ರಲ್ಲಿ ಮತ್ತೊಂದು ಅರಣ್ಯದಲ್ಲಿ ಕಂಡು ಬಂದಿತು. ಕಳೆದ 1987ರ ಹೊತ್ತಿಗೆ, ಮೂವತ್ತೆಂಟು ಮಾದರಿಗಳು ಗುರುತಿಸಲಾಗಿದೆ. ಇವುಗಳಲ್ಲಿ ಹೆಚ್ಚಾಗಿ ಹದ ಮಾಡಿದ ಚರ್ಮದಿಂದ ಸಂಗ್ರಹಿಸಿದಂತವು.

ಭಾರತದ ಮೊಘಲ್ ಚಕ್ರವರ್ತಿ, ಜಹಂಗೀರ್, ಒಂದು ಬಿಳಿ ಚೀತಾವನ್ನು ಹೊಂದಿದ್ದನೆಂದು ದಾಖಲಿಸಲಾಗಿದೆ. ಇದನ್ನು ಅವನು 1608ರಲ್ಲಿ ಉಡುಗೊರೆ ಪಡೆದಿದ್ದ. ತುಜ್ಕ್-ಎ-ಜಹಂಗಿರಿ ಎಂಬ ಆತ್ಮ-ಚರಿತ್ರೆಯಲ್ಲಿ, ಚಕ್ರವರ್ತಿಯು ಹೇಳುವಂತೆ ತನ್ನ ಆಡಳಿತದ ಮೂರನೇ ವರ್ಷದಲ್ಲಿ: ರಾಜ ಬೀರ್ ಸಿಂಗ್ ದೇವ್ ಅವನಿಗೆ ತೋರಿಸುವ ಸಲುವಾಗಿ ಒಂದು ಬಿಳಿ ಚೀತಾವನ್ನು ತಂದಿದ್ದ. ಆದಾಗ್ಯೂ ಇತರ ಜೀವಿ ಪ್ರಬೇಧಗಳಲ್ಲಿ, ಪ್ರಾಣಿ ಹಾಗು ಪಕ್ಷಿ ಸಂಕುಲ ಎರಡರಲ್ಲೂ ಬಿಳಿಯ ಬಣ್ಣ ವೈವಿಧ್ಯತೆಗಳಿವೆ…. ನಾನು ಎಂದೂ ಬಿಳಿ ಚೀತಾ ನೋಡಿರಲಿಲ್ಲ. ಅದರ ಮಚ್ಚೆಗಳು, (ಸಾಮಾನ್ಯವಾಗಿ) ಕಪ್ಪಗಿರುತ್ತವೆ, ಆದರೆ ಇದರದು ನೀಲಿ ಬಣ್ಣದಿಂದ ಕೂಡಿತ್ತು, ಜೊತೆಗೆ ಅದರ ದೇಹದ ಬಿಳಿಯ ಬಣ್ಣವು ಸಹ ನೀಲಿಯ ಬಣ್ಣಕ್ಕೆ ಹೆಚ್ಚು ಒತ್ತುಕೊಟ್ಟಂತೆ ಕಂಡುಬರುತ್ತಿತ್ತು. ಈ ಚಿಂಚಿಲ್ಲಾ ರೂಪಾಂತರವು ಕೂದಲ ಬೆಳೆಯದಿರುವ ಕಡೆ ಬಣ್ಣದ ಪ್ರಮಾಣವನ್ನು ಕಡಿಮೆ ಮಾಡುವುದನ್ನು ಸೂಚಿಸುತ್ತದೆ. ಮಚ್ಚೆಗಳು ಕಪ್ಪು ಬಣ್ಣದಿಂದ ರೂಪುಗೊಂಡಿದ್ದರೂ, ಕಡಿಮೆ ಪ್ರಮಾಣದ ಸಹಜ ವರ್ಣವು ಒಂದು ಮಸುಕಾದ, ಬೂದುಬಣ್ಣದ ಸಂಯೋಜನೆಯನ್ನು ಒದಗಿಸುತ್ತವೆ. ಜೊತೆಗೆ ಆಗ್ರಾದಲ್ಲಿದ್ದ ಜಹಂಗೀರ್ ನ ಚೀತಾ, ಗುಗ್ಗಿಸ್ಬರ್ಗ್ ನ ಪ್ರಕಾರ ಬೆಯುಫೋರ್ಟ್ ಪಶ್ಚಿಮದಿಂದ ಬಂದ “ಪ್ರಥಮ ಬಿಳಿ ಬಣ್ಣದ ಚೀತಾ” ಎಂದು ವರದಿ ಮಾಡಲಾಗಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಹರ್ಮನ್‌ಪ್ರೀತ್ ಕೌರ್

ಹರ್ಮನ್‌ಪ್ರೀತ್ ಕೌರ್ ಐಸಿಸಿ ಮಹಿಳಾ ಏಕದಿನ ಆಟಗಾರ್ತಿ ಶ್ರೇಯಾಂಕದಲ್ಲಿ ಐದನೇ ಸ್ಥಾನ

ಶ್ರೀಕಾಳಹಸ್ತೀಶ್ವರ ದೇವಾಲಯ

ಪ್ರಸಿದ್ಧ ಶಿವದೇವಾಲಯಗಳಲ್ಲಿ ಒಂದು ಶ್ರೀಕಾಳಹಸ್ತೀಶ್ವರ ದೇವಾಲಯ