in

ಹಿಂದೂ ಋಷಿಗಳು ವಾಲ್ಮೀಕಿ ಮತ್ತು ವೇದವ್ಯಾಸರು

ವಾಲ್ಮೀಕಿ ಮತ್ತು ವೇದವ್ಯಾಸರು
ವಾಲ್ಮೀಕಿ ಮತ್ತು ವೇದವ್ಯಾಸರು

ವಾಲ್ಮೀಕಿ
ವಾಲ್ಮೀಕಿಯವರು ಒಬ್ಬ ಋಷಿ ಹಾಗೂ ಸಂಸ್ಕೃತ ಕವಿ. ರಾಮಾಯಣ ಮಹಾಕಾವ್ಯದ ಕರ್ತೃ. ವಾಲ್ಮೀಕಿಯವರನ್ನು ಆದಿಕವಿ ಎಂದು ಕರೆಯಲಾಗಿದೆ.

ವಾಲ್ಮೀಕಿಯ ಜೀವನದ ಕುರಿತಾಗಿ ಅನೇಕ ದಂತಕಥೆಗಳಿವೆ. ಅದರಲ್ಲಿ ಒಂದು ಕಥೆಯ ಪ್ರಕಾರ, ವಾಲ್ಮೀಕಿ ಋಷಿಯಾಗುವ ಮೊದಲು ರತ್ನಾಕರ. ನಾರದನ ಉಪದೇಶದಿಂದ ರತ್ನಾಕರನಿಗೆ ಜ್ಞಾನೋದಯವಾಯಿತೆಂದು ಹೇಳಲಾಗುತ್ತದೆ. ವಾಲ್ಮೀಕಿ ಮಹರ್ಷಿಗಳು ಪ್ರಚೇತಸ ಮುನಿಯ ಮಗ. ಹೀಗಾಗಿ ಅವರಿಗೆ ‘ಪ್ರಾಚೇತಸ’ ಎಂಬ ಹೆಸರಿದೆ. ಪರಮಾತ್ಮನನ್ನು ಕುರಿತು ಬಹಳ ವರ್ಷಗಳ ಕಾಲ ತಪಸ್ಸು ಮಾಡುತ್ತಿದ್ದಾಗ ಅವರ ಸುತ್ತ ಹುತ್ತ ಬೆಳೆದಿತ್ತು. ಹುತ್ತವನ್ನು ಭೇದಿಸಿಕೊಂಡು ಹೊರಗೆ ಬಂದಿದ್ದರಿಂದ ‘ವಾಲ್ಮೀಕಿ’ ಎಂಬ ಹೆಸರು ಬಂತು.

ವಾಲ್ಮೀಕಿ ಮಹರ್ಷಿಗಳು ತಮಸಾ ನದೀತೀರದಲ್ಲಿ ಸಂತೋಷವಾಗಿ ಹಾರಾಡುತ್ತಿದ್ದ ಕ್ರೌಂಚಪಕ್ಷಿ ಜೋಡಿಯನ್ನು ನೋಡುತ್ತಿದ್ದಾಗ, ಬೇಡನೊಬ್ಬನು ಬಂದು ಬಾಣ ಹೂಡಿ ಅವುಗಳಲ್ಲಿ ಗಂಡು ಹಕ್ಕಿಯನ್ನು ಕೊಂದು ಬಿಡುತ್ತಾನೆ. ಅದರ ಸಂಗಾತಿ ಹೆಣ್ಣು ಹಕ್ಕಿಯು ಸಂಕಟದಿಂದ ಕೂಗಲಾರಂಭಿಸುತ್ತದೆ. ಈ ಹೃದಯ ವಿದ್ರಾವಕ ಸನ್ನಿವೇಶವನ್ನು ನೋಡಿ, ಕರುಣೆ, ದುಃಖ, ಕೋಪದಿಂದ ಮಹರ್ಷಿಗಳು ಬೇಡನನ್ನು ಶಪಿಸುವಾಗ, ಶೋಕದಿಂದ ಕೆಳಕಂಡ ವಾಕ್ಯವನ್ನು ಶ್ಲೋಕ ರೂಪದಲ್ಲಿ ಉದ್ಗರಿಸುತ್ತಾರೆ.

ಹಿಂದೂ ಋಷಿಗಳು ವಾಲ್ಮೀಕಿ ಮತ್ತು ವೇದವ್ಯಾಸರು
ವಾಲ್ಮೀಕಿ ಮುನಿ

ರಾಮನು ಅಯೋಧ್ಯೆಯ ಕೆಲವು ಸಾಮಾನ್ಯ ಜನರು ಸೀತೆಯ ಬಗೆಗೆ ಅರೋಪ ಮಾಡುತ್ತಿರುವುದನ್ನು ಗೂಢಚಾರರ ಮೂಲಕ ತಿಳಿದು, ಅಗಸನ ಆರೋಪಣೆಗೆ ಎಂದು ಕನ್ನಡ ಜೈಮಿನಿ ಭಾರತದಲ್ಲಿ ಲಕ್ಷೀಶ ಕವಿಯು ನೊಂದು ತುಂಬು ಗರ್ಭಿಣಿ ಸೀತೆಯನ್ನು ಪರಿತ್ಯಾಗ ಮಾಡುತ್ತಾನೆ. ರಾಮನ ಆಜ್ಞೆಯಂತೆ ಲಕ್ಷಣನು ಸೀತೆಯನ್ನು, ಲಕ್ಷ್ಮಣ ತನ್ನ ವಿವೇಕವನ್ನು ಉಪಯೋಗಿಸಿ ವಾಲ್ಮೀಕಿ ಮುನಿಯ ಆಶ್ರಮದ ಹತ್ತಿರದ ಕಾಡಿನಲ್ಲಿ ಬಿಟ್ಟು ಹೋಗುತ್ತಾನೆ. ಅರಣ್ಯದಲ್ಲಿ ಶೋಕತಪ್ತಳಾಗಿದ್ದ ಸೀತೆಯನ್ನು ವಾಲ್ಮೀಕಿ ಮಹರ್ಷಿಗಳು ತಮ್ಮ ಆಶ್ರಮಕ್ಕೆ ಕರೆತಂದು, ಋಷಿಪತ್ನಿಯರ ಮೂಲಕ ಆಕೆಯನ್ನು ಉಪಚರಿಸಿ, ಆದರಿಸುತ್ತಾರೆ. ಅಲ್ಲೇ ಲವ-ಕುಶರ ಜನನವಾಗುತ್ತದೆ. ಆ ಅವಳಿ ಮಕ್ಕಳಿಗೆ ವಾಲ್ಮೀಕಿ ಮಹರ್ಷಿಗಳೇ ಗುರುಗಳು. ರಾಮಾಯಣ ಮಹಾಕಾವ್ಯದ ಗಾಯನವನ್ನು ಲವ-ಕುಶರಿಗೆ ಕಲಿಸಿಕೊಡುತ್ತಾರೆ. ವಾಲ್ಮೀಕಿ ಮಹರ್ಷಿಗಳು ಲವ-ಕುಶರ ಸಂಗಡ ರಾಮನಲ್ಲಿಗೆ ಬಂದು ರಾಮಾಯಣವನ್ನು ಗಾನ ಮಾಡುತ್ತಾರೆ. ರಾಮನಲ್ಲಿಗೆ ಸೀತೆಯನ್ನೂ ವಾಲ್ಮೀಕಿ ಮಹರ್ಷಿಗಳೇ ಕರೆತರುತ್ತಾರೆ..

ಕರ್ನಾಟಕ ಸರ್ಕಾರವು ವಾಲ್ಮೀಕಿ ಜಯಂತಿಗೆ ಸರ್ಕಾರಿ ರಜೆ ಘೋಷಿಸಿದೆ.

ವ್ಯಾಸ ಅಥವಾ ವೇದವ್ಯಾಸ

ವ್ಯಾಸ ಅಥವಾ ವೇದವ್ಯಾಸ ಹಿಂದೂ ಧರ್ಮ ಪರಂಪರೆ ಮತ್ತು ಸಾಹಿತ್ಯದಲ್ಲಿ ಬಹಳ ಪ್ರಮುಖರು. ಬ್ರಹ್ಮನ ಸಾರ್ಥಕತೆಯನ್ನು ತಿಳಿದ ಇವರನ್ನು ಆದರ್ಶ ಬ್ರಹ್ಮರ್ಷಿ ಎಂದು ಕರೆಯಲಾಗುತ್ತದೆ.

ವ್ಯಾಸರು ಬಹು ಮುಖ್ಯ ಹಿಂದೂ ಮಹಾಕಾವ್ಯವಾದ ಮಹಾಭಾರತದ ಕರ್ತೃ. ಶತಮಾನಗಳಷ್ಟು ಹಳೆಯದಾದ ಭಾರತದ ಚಾರಿತ್ರಿಕ ಘಟನೆಗಳನ್ನು ಆಧರಿಸಿ ಮಹಾಭಾರತವು ರಚಿತವಾಗಿದ್ದರೂ ಕೂಡ, ಇದು ಪ್ರಾಚೀನ ಭಾರತದ ದಂತಕಥೆಗಳು, ಪುರಾಣಗಳು, ದಾರ್ಶನಿಕತೆ ಮತ್ತು ಅರೆಚಾರಿತ್ರಿಕ ಘಟನೆಗಳ ಒಂದು ಬೃಹತ್ ಕಾವ್ಯ. ಈ ಕಾರಣದಿಂದ ಚಾರಿತ್ರಿಕವಾಗಿ ವ್ಯಾಸರ ಕಾಲ ಮತ್ತು ದೇಶಗಳನ್ನು ದಂತಕಥೆಗಳಿಂದ ಬೇರ್ಪಡಿಸುವುದು ಬಹಳ ಕಷ್ಟ. ಮಹಾಭಾರತದ ಪ್ರಕಾರ, ವ್ಯಾಸರು ಪರಾಶರ ಮುನಿ ಮತ್ತು ಮೀನುಗಾರನ ಮಗಳಾದ ಮತ್ಸ್ಯಗಂಧಿ ಅಥವಾ ಸತ್ಯವತಿಯ ಪುತ್ರ. ಜನ್ಮ ಯಮುನಾ ನದಿ ಯ ಒಂದು ದ್ವೀಪದಲ್ಲಿ. ಇದು ಈಗಿನ ಕಾಲದ ಉತ್ತರ ಪ್ರದೇಶದ ಜಲುವಾ ಜಿಲ್ಲೆಯ ‘ಕಲ್ಪಿ’ ಎನ್ನುವ ಸ್ಥಳದ ಬಳಿಯಿದೆ. ವ್ಯಾಸರ ಬಣ್ಣ ಕಪ್ಪಾಗಿದ್ದ ಕಾರಣ ‘ಕೃಷ್ಣ’ ಎಂದು ಕರೆಯಲಾಗುತ್ತಿತ್ತು. ದ್ವೀಪದಲ್ಲಿ ಜನಿಸಿದ ಕಾರಣ ‘ದ್ವೈಪಾಯನ’ ಎಂದೂ ಹೆಸರಿತ್ತು. ಈ ಕಾರಣದಿಂದ ಇವರನ್ನು “ಕೃಷ್ಣ-ದ್ವೈಪಾಯನ” ಎಂದೂ ಕರೆಯಲಾಗುತ್ತದೆ. ಮಗು ವಾಗಿ ಹುಟ್ಟಿದ ಕ್ಷಣವೇ ದೊಡ್ಡವರಾಗಿ ಬೆಳೆದು, ತಾಪಸ ಜೀವನ ನಡೆಸಿ ಅತಿ ಪ್ರಮುಖ ಋಷಿಗಳಲ್ಲಿ ಒಬ್ಬರಾಗಿ ಪರಿಗಣಿತರಾಗಿದ್ದಾರೆ. ಪುರಾಣಗಳಲ್ಲಿ ಇವರನ್ನು ವಿಷ್ಣುವಿನ ಒಂದು ಅವತಾರವೆಂದೇ ಪರಿಗಣಿಸಲಾಗಿದೆ. ಹಿಂದೂ ಪುರಾಣದ ಪ್ರಕಾರ ಇವರು ಏಳು ಚಿರಂಜೀವಿಗಳಲ್ಲಿ ಒಬ್ಬರು.

ಹಿಂದೂ ಋಷಿಗಳು ವಾಲ್ಮೀಕಿ ಮತ್ತು ವೇದವ್ಯಾಸರು
ವ್ಯಾಸ ಅಥವಾ ವೇದವ್ಯಾಸ

ಹಿಂದೂಗಳು ನಂಬುವ ಪ್ರಕಾರ ಇವರು ಪ್ರಾಚೀನ ಕಾಲದ ಒಂದು ವೇದವನ್ನು ನಾಲ್ಕು ವೇದಗಳನ್ನಾಗಿ ವಿಂಗಡಿಸಿದ ಕಾರಣ ವೇದವ್ಯಾಸ ಎಂಬ ಹೆಸರು ಬಂತು. ಈ ಹೆಸರಿನಲ್ಲಿಯೇ ಇವರು ಬಹಳ ಪರಿಚಿತರು. ವ್ಯಾಸರು ಒಬ್ಬ ವ್ಯಕ್ತಿಯೇ ಅಥವಾ ಮೇಧಾವಿಗಳ ಗುಂಪೇ ಎಂದು ತರ್ಕಿಸಲಾಗಿದೆ. ವಿಷ್ಣು ಪುರಾಣದಲ್ಲಿ ಇದರ ಬಗ್ಗೆ ಒಂದು ಕುತೂಹಲಕಾರೀ ವಿವರಣೆಯಿದೆ. ಇದರ ಪ್ರಕಾರ:

ಪ್ರತಿ ದ್ವಾಪರ ಯುಗದಲ್ಲಿ ವಿಷ್ಣು ವ್ಯಾಸರ ರೂಪದಲ್ಲಿ ಬಂದು ಮಾನವ ಕುಲದ ಉದ್ಧಾರಕಾಗಿ ವೇದವನ್ನು ವಿಂಗಡಿಸುತ್ತಾನೆ.

ಎರಡು ಜಾತಕ ಕಥೆಗಳಲ್ಲಿ ವ್ಯಾಸರು ಕಾನ್ಹಾದ್ವೈಪಾಯನ ಜಾತಕ ಮತ್ತು ಘಟ ಜಾತಕ ಎಂಬ ಹೆಸರಿನಲ್ಲಿ ಕಾಣಿಸುತ್ತಾರೆ.

ಚಾಣಕ್ಯನ ಅರ್ಥಶಾಸ್ತ್ರದಲ್ಲಿ ವ್ಯಾಸರ ಬಗ್ಗೆ ಕುತೂಹಲಕಾರೀ ಕಥೆಯಿದೆ. ಈ ಕಥೆಯು ಜಾತಕ ಕಥೆಯ ನಿರೂಪಣೆಯನ್ನು ಹೋಲುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ರಾಷ್ಟೀಯ ಪ್ರಾಣಿ ಹುಲಿ

ನಮ್ಮ ರಾಷ್ಟೀಯ ಪ್ರಾಣಿ ಹುಲಿ

ಸಾಕು ಪ್ರಾಣಿ ನಾಯಿ

ಸಾಕು ಪ್ರಾಣಿ ನಾಯಿಯ ಬಗ್ಗೆ