in

ನಮ್ಮ ರಾಷ್ಟೀಯ ಪ್ರಾಣಿ ಹುಲಿ

ರಾಷ್ಟೀಯ ಪ್ರಾಣಿ ಹುಲಿ
ರಾಷ್ಟೀಯ ಪ್ರಾಣಿ ಹುಲಿ

ಹುಲಿ ಪ್ರಾಣಿ ಶಾಸ್ತ್ರದ ಪ್ರಕಾರ ಫೆಲಿಡೇ ಕುಟುಂಬಕ್ಕೆ ಸೇರಿದ ಒಂದು ಜೀವಿ. ಪ್ಯಾಂಥೆರಾ ವಂಶಕ್ಕೆ ಸೇರಿದ ೪ ದೊಡ್ಡ ಬೆಕ್ಕುಗಳ ಪೈಕಿ ಹುಲಿ ಅತ್ಯಂತ ದೊಡ್ಡ ಪ್ರಾಣಿ. ದಕ್ಷಿಣ ಮತ್ತು ಪೂರ್ವ ಏಷ್ಯಾಗಳಲ್ಲಿ ವ್ಯಾಪಕವಾಗಿ ಕಾಣಬರುವ ಹುಲಿ ತನ್ನ ಆಹಾರವನ್ನು ಬೇಟೆಯಾಡಿ ಮಾಂಸ ಸಂಪಾದಿಸುವ ಪ್ರಾಣಿಗಳ ಗುಂಪಿಗೆ ಸೇರಿದೆ. ಹುಲಿಯು ೪ ಮೀ. ವರೆಗೆ (೧೩ ಅಡಿ) ಉದ್ದವನ್ನು ಹಾಗೂ ೩೦೦ ಕಿ.ಗ್ರಾಂ ವರೆಗೆ ತೂಕವನ್ನು ಹೊಂದಬಹುದು. ದೊಡ್ಡ ದೇಹ ಮತ್ತು ಅಪಾರ ಬಲ ಹೊಂದಿರುವ ಹುಲಿಯ ಕಣ್ಸೆಳೆಯುವ ಲಕ್ಷಣವೆಂದರೆ ಬಿಳೀ ಅಥವಾ ಹಳದಿ ಯಾ ಕೇಸರಿ ಬಣ್ಣದ ಮೈ ಮೇಲೆ ನೀಳವಾಗಿ ಮೇಲಿನಿಂದ ಕೆಳಗೆ ಇರುವ ಗಾಢ ಬಣ್ಣದ ಪಟ್ಟೆಗಳು. ಸಾಮಾನ್ಯವಾಗಿ ಹುಲಿಯ ದೇಹದ ಅಡಿಯ ಭಾಗ ತೆಳು ಬಣ್ಣದ್ದಾಗಿರುತ್ತದೆ. ಹುಲಿಗಳ ಜಾತಿಗಳ ಪೈಕಿ ಸೈಬೀರಿಯಾದ ಹುಲಿ ಅತ್ಯಂತ ದೊಡ್ಡ ಕಾಯವನ್ನು ಹೊಂದಿರುತ್ತದೆ.

ಹುಲಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಮತ್ತು ಹುಲಿಗಳ ಸಂರಕ್ಷಣೆಯನ್ನು ಮಾಡಲು ಪ್ರತಿ ವರ್ಷದ ಜುಲೈ 29ನ್ನು ‘ವಿಶ್ವ ಹುಲಿ ದಿನ’ ವನ್ನಾಗಿ ಆಚರಿಸಲಾಗುತ್ತದೆ. ಈ ಆಚರಣೆಯ ಹಿಂದಿನ ಪ್ರಮುಖ ಉದ್ದೇಶ ಅಪಾಯದಂಚಿನಲ್ಲಿರುವ ಹುಲಿಗಳ ಸಂರಕ್ಷಣೆಗಾಗಿ ಜನರಲ್ಲಿ ಅರಿವು ಮೂಡಿಸುವುದು.

ಪ್ರಕೃತಿಯೊಂದಿಗೆ ಸುಲಭವಾಗಿ ಹೊಂದಾಣಿಕೆ ಮಾಡಿಕೊಂಡು ಜೀವಿಸುವ ಹುಲಿಗಳು ಸೈಬೀರಿಯಾದ ಟೈಗಾ ಕಾಡುಗಳಲ್ಲಿ, ತೆರೆದ ಹುಲ್ಲುಗಾವಲುಗಳಲ್ಲಿ ಮತ್ತು ಉಷ್ಣವಲಯದ ಕಾಡುಗಳಲ್ಲಿ ನೆಲೆಸಿವೆ. ಹುಲಿಗಳು ತಮ್ಮ ತಮ್ಮ ಭೂಮಿತಿಯೊಳಗೆಯೇ ಜೀವಿಸುವ ಪ್ರಾಣಿಗಳು. ಸಾಮಾನ್ಯವಾಗಿ ಅವು ಒಂಟಿಜೀವಿ ಸಹ. ತನ್ನ ಪರಿಸರದಲ್ಲಿ ಲಭ್ಯವಿರುವ ಆಹಾರದ ಪ್ರಾಣಿಗಳ ಸಂಖ್ಯೆಗನುಗುಣವಾಗಿ ಪ್ರತಿ ಹುಲಿಯು ತನ್ನ ಸರಹದ್ದನ್ನು ಗುರುತಿಸಿಟ್ಟುಕೊಳ್ಳುತ್ತದೆ.

ನಮ್ಮ ರಾಷ್ಟೀಯ ಪ್ರಾಣಿ ಹುಲಿ
ರಾಷ್ಟೀಯ ಪ್ರಾಣಿ ಹುಲಿ

ವಿಶಾಲ ಪ್ರದೇಶದ ಮೇಲೆ ಒಡೆತನ ಸಾಧಿಸಬಯಸುವ ಮತ್ತು ಕೆಲ ಪ್ರದೇಶಗಳಲ್ಲಿ ಅಲ್ಪ ಸ್ಥಳದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಕಾರಣದಿಂದಾಗಿ ಹುಲಿಗಳು ಬಹಳಷ್ಟು ಬಾರಿ ಮಾನವನೊಡನೆ ಸಂಘರ್ಷಕ್ಕಿಳಿಯುತ್ತವೆ. ಇಂದಿನ ಯುಗದ ಹುಲಿಗಳ ೮ ಉಪತಳಿಗಳ ಪೈಕಿ ೨ ಈಗಾಗಲೇ ನಶಿಸಿಹೋಗಿದ್ದು ಉಳಿದ ೬ ತೀವ್ರ ಅಪಾಯದಲ್ಲಿರುವ ಜೀವತಳಿಗಳೆಂದು ಗುರುತಿಸಲ್ಪಟ್ಟಿವೆ. ನೆಲೆಗಳ ನಾಶ ಮತ್ತು ಬೇಟೆಯಾಡುವಿಕೆಗಳು ಹುಲಿಗೆ ದೊಡ್ಡ ಕುತ್ತಾಗಿವೆ.

ಇಂದು ವಿಶ್ವದಲ್ಲಿರುವ ಎಲ್ಲಾ ಹುಲಿ ಪ್ರಭೇದಗಳು ಸಂರಕ್ಷಣೆಗೊಳಪಟ್ಟಿದ್ದರೂ ಸಹ ಹುಲಿಗಳ ಕಳ್ಳಬೇಟೆ ಮುಂದುವರಿದೇ ಇದೆ. ತನ್ನ ಆಕರ್ಷಕ ರೂಪ, ಬಲ ಮತ್ತು ಸಾಹಸಪ್ರವೃತ್ತಿಗಳಿಂದಾಗಿ ಹುಲಿ ವನ್ಯಜೀವಿಗಳ ಪೈಕಿ ಮಾನವನಿಂದ ಅತಿ ಹೆಚ್ಚು ಗೌರವಿಸಲ್ಪಟ್ಟಿದೆ. ಹುಲಿಯು ಅನೇಕ ಧ್ವಜಗಳಲ್ಲಿ ಕಾಣಬರುತ್ತದೆ. ಅಲ್ಲದೆ ಏಷ್ಯಾದ ಹಲವು ರಾಷ್ಟ್ರಗಳ ರಾಷ್ಟ್ರೀಯ ಪ್ರಾಣಿ ಎಂಬ ಸ್ಥಾನವನ್ನು ಸಹ ಪಡೆದಿದೆ.

ಕಾಡಿನ ಹುಲಿಗಳು ಸಾಮಾನ್ಯವಾಗಿ ದೊಡ್ಡ ಮತ್ತು ಮಧ್ಯಮ ಗಾತ್ರದ ಪ್ರಾಣಿಗಳನ್ನು ಬೇಟೆಯಾಡಿ ಆಹಾರ ಪಡೆಯುತ್ತವೆ. ಭಾರತದಲ್ಲಿ ಹುಲಿಗಳಿಗೆ ಸಾಂಬಾರ ಜಿಂಕೆ, ಕಾಡುಕೋಣ, ಚೀತಾಲ್ ಜಿಂಕೆ, ಕಾಡುಹಂದಿ ಮತ್ತು ನೀಲಗಾಯ್ ಮುಖ್ಯ ಆಹಾರ. ಅಪರೂಪವಾಗಿ ಹುಲಿಗಳು ಚಿರತೆ, ಕರಡಿ, ಹೆಬ್ಬಾವು ಮತ್ತು ಮೊಸಳೆಗಳನ್ನು ಸಹ ಬೇಟೆಯಾಡುವುದಿದೆ.
ಸೈಬೀರಿಯಾದ ಹುಲಿಗಳ ಮುಖ್ಯ ಆಹಾರ ಎಲ್ಕ್, ಮತ್ತು ಜಿಂಕೆಗಳು. ಆದರೆ ಹುಲಿಗಳು ಸನ್ನಿವೇಶದೊಂದಿಗೆ ಉತ್ತಮ ರಾಜಿ ಮಾಡಿಕೊಳ್ಳುವ ಸ್ವಭಾವವುಳ್ಳವಾಗಿದ್ದು ಸಮಯಕ್ಕೆ ತಕ್ಕಂತೆ ಕೋತಿ, ನವಿಲು, ಮೊಲ ಮತ್ತು ಮೀನುಗಳನ್ನು ಸಹ ಆಹಾರವಾಗಿ ಬಳಸುತ್ತವೆ. ಆನೆಗಳು ಹುಲಿಗಳಿಗೆ ಮೀರಿದ ಪ್ರಾಣಿಗಳಾದ್ದರಿಂದ ಹುಲಿ ಸಾಮಾನ್ಯವಾಗಿ ಹುಲಿ ಆನೆಯ ಗೊಡವೆಗೆ ಹೋಗುವುದಿಲ್ಲ. ಆದರೆ ಒಮ್ಮೊಮ್ಮೆ ಆನೆಮರಿಗಳು ಮತ್ತು ಘೇಂಡಾ ಮರಿಗಳನ್ನು ಹುಲಿ ಬೇಟೆಯಾಡುವುದಿದೆ.

ಮುದಿಹುಲಿಗಳು ಮತ್ತು ತೀವ್ರ ಗಾಯಗೊಂಡು ಬೇಟೆಯಾಡಲು ಅಸಮರ್ಥವಾದ ಹುಲಿಗಳು ನರಭಕ್ಷಕವಾಗುತ್ತವೆ. ಭಾರತದಲ್ಲಿ ಈ ಸನ್ನಿವೇಶ ಸಾಮಾನ್ಯ.

ಸುಂದರ ಬನದಲ್ಲಿ ಬೆಸ್ತರು ಮತ್ತು ಇತರ ವಾಸಿಗಳು ಹುಲಿಗಳಿಗೆ ತುತ್ತಾಗುವುದು ಆಗಾಗ ಘಟಿಸುತ್ತದೆ. ಶರೀರಕ್ಕೆ ಬೇಕಾದ ನಾರನ್ನು ಪಡೆಯಲು ಹುಲಿಗಳು ಒಮ್ಮೊಮ್ಮೆ ಸಸ್ಯಾಹಾರಿಗಳಾಗುವುದು ಸಹ ಇದೆ. ಹುಲಿಗಳು ಸಾಮಾನ್ಯವಾಗಿ ರಾತ್ರಿಯ ಹೊತ್ತು ಬೇಟೆಯಾಡುತ್ತವೆ. ಒಂಟಿಯಾಗಿ ಬೇಟೆಯಾಡುವ ಹುಲಿ ತನ್ನ ಬೇಟೆಯನ್ನು ಕೆಳಗೆ ಕೆಡವುದರ ಮೂಲಕ ವಶಕ್ಕೆ ತೆಗೆದುಕೊಳ್ಳುತ್ತದೆ. ತನ್ನ ಭಾರೀ ದೇಹತೂಕದ ಹೊರತಾಗಿಯೂ ಹುಲಿಯು ಗಂಟೆಗೆ ೫೦ ರಿಂದ ೬೫ ಕಿ.ಮೀ. ವರೆಗಿನ ಓಟದ ವೇಗವನ್ನು ತಲುಪಬಲ್ಲುದು.

ನಮ್ಮ ರಾಷ್ಟೀಯ ಪ್ರಾಣಿ ಹುಲಿ
ಹುಲಿಯು ದೊಡ್ಡ ಜಿಗಿತಕ್ಕೆ ಹೆಸರಾಗಿದೆ


ಆದರೆ ಇಂತಹ ಓಟವು ಬಲು ಕಡಿಮೆ ದೂರದ್ದಾಗಿರುವುದು. ಹುಲಿಯು ದೊಡ್ಡ ಜಿಗಿತಕ್ಕೆ ಹೆಸರಾಗಿದೆ. ಹಲವು ಬಾರಿ ಹುಲಿ ೧೦ ಮೀ. ದೂರಕ್ಕೆ ಸಹ ಜಿಗಿಯಬಲ್ಲುದು. ಹುಲಿಯು ನಡೆಸುವ ಪ್ರತಿ ೨೦ ಬೇಟೆಯಾಡುವಿಕೆಯಲ್ಲಿ ಒಂದು ಮಾತ್ರ ಯಶ ನೀಡುವುದೆಂದು ಅಂದಾಜು ಮಾಡಲಾಗಿದೆ. ದೊಡ್ಡ ಗಾತ್ರದ ಪ್ರಾಣಿಯನ್ನು ಬೇಟೆಯಾಡುವಾಗ ಹುಲಿಯು ತನ್ನ ಮುಂಗಾಲುಗಳಿಂದ ಬೇಟೆಯನ್ನು ಹಿಡಿದು ಅದರ ಕೊರಳನ್ನು ಕಚ್ಚಿ ಹಿಡಿಯುತ್ತದೆ. ಬಲಿಯು ಉಸಿರುಗಟ್ಟಿ ಪ್ರಾಣ ನೀಗುವವರೆಗೆ ಹುಲಿಯು ಅದರ ಕೊರಳನ್ನು ಕಚ್ಚಿಕೊಂಡೇ ಇರುತ್ತದೆ. ಈ ವಿಧಾನದಿಂದಾಗಿ ಹುಲಿಯು ತನಗಿಂತ ಗಣನೀಯವಾಗಿ ದೊಡ್ಡವಾದ ಪ್ರಾಣಿಗಳನ್ನು ಸಹ ಸಾಯಿಸಬಲ್ಲುದು. ಸಣ್ಣ ಪ್ರಾಣಿಗಳನ್ನು ಬೇಟೆಯಾಡುವಾಗ ಹುಲಿಯು ಬಲಿಯ ಬೆನ್ನುಹುರಿ, ಶ್ವಾಸನಾಳ ಮತ್ತು ಮುಖ್ಯ ರಕ್ತನಾಳಗಳನ್ನು ಛೇದಿಸುವ ಮೂಲಕ ಕೊಲ್ಲುವುದು.

2018 ರ ಗಣತಿಯಂತೆ ಹುಲಿಗಳ ಸಂಖ್ಯೆ ಜಗತ್ತಿನಲ್ಲಿ 3980 ಇದೆ. ಅವುಗಳ ಸಂಖ್ಯೆಯಲ್ಲಿ ಸ್ವಲ್ಪ ಏರಿಕೆಯಾಗಿದೆ. ಹೆಚ್ಚು ಹುಲಿಗಳನ್ನು ಹೊಂದಿರುವುದು ಭಾರತ -ಭಾರತದಲ್ಲಿ 2264 ಹುಲಿಗಳಿರುವುದಾಗಿ ತಿಳಿದು ಬಂದಿದೆ. ಅವು 90,000 ಚದರ ಕಿ.ಮೀಟರ್ ಪ್ರದೇಶದಲ್ಲಿ ಹರಡಿಕೊಂಡಿವೆ. ಆದರೆ ಕಾಡಿನಲ್ಲಿ ಅವುಗಳಿಗೆ ಆಹಾರಕ್ಕೆ ಬೇಕಾದ ಪ್ರಾಣಿಗಳ ಕೊರತೆಯಿಂದ ಕಾಡಿನ ಪಕ್ಕದ ಊರುಗಳಿಗೆ ಪ್ರವೇಶ ಮಾಡುತ್ತಿವೆ. ಸುಮಾತ್ರಾದಲ್ಲಿ 400; ಥಾಯ್ಲೆಂಡ್ ಪ್ರದೇಶದಲ್ಲಿ 340; ರಷ್ಯಾ, ಚೀನಾಗಳಲ್ಲಿ ಸೈಬೀರಿಯಾದ ದೊಡ್ಡ ಜಾತಿಯ ಹುಲಿ 540; ಥಾಯ್ಲೆಂಡ್ ಮ್ಯನ್ಮಾರ್ ಗಡಿ ಪ್ರದೇಶದಲ್ಲಿ 250 ಹುಲಿಗಳು ಇರುವುದಾಗಿ ತಿಳಿದು ಬಂದಿದೆ. ಭಾರತ ದೇಶದಲ್ಲಿ 2967 ಹುಲಿಗಳು ಇರುವುದಾಗಿ 2018ರ ಹುಲಿ ಗಣತಿ ವರದಿಯಿಂದ ತಿಳಿದು ಬಂದಿದೆ. ಕರ್ನಾಟಕದಲ್ಲಿರುವ ಹುಲಿಗಳ ಸಂಖ್ಯೆ 524 ಎಂದು ಲೆಕ್ಕಹಾಕಲಾಗಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಕಾಗೆನೂ ಕಪ್ಪು, ಕೋಗಿಲೇನೂ ಕಪ್ಪು

ಕಾಗೆನೂ ಕಪ್ಪು, ಕೋಗಿಲೇನೂ ಕಪ್ಪು ಆದರೆ ಗುಣ ಬೇರೆ ಬೇರೆ

ವಾಲ್ಮೀಕಿ ಮತ್ತು ವೇದವ್ಯಾಸರು

ಹಿಂದೂ ಋಷಿಗಳು ವಾಲ್ಮೀಕಿ ಮತ್ತು ವೇದವ್ಯಾಸರು