in

ವೀರ ಅಭಿಮನ್ಯು

ಅಭಿಮನ್ಯು
ಅಭಿಮನ್ಯು

ಮಹಾಭಾರತ ಕಥೆಯಲ್ಲಿ ಬರುವ ವೀರರಲ್ಲೀ ಅಭಿಮನ್ಯು ಅಸಾಧಾರಣ ವೀರ. ಸಣ್ಣ ವಯಸ್ಸಿನಲ್ಲಿ ತನ್ನ ಪ್ರತಾಪವನ್ನು ಯುದ್ಧ ಭೂಮಿಯಲ್ಲಿ ತೋರಿಸಿದವ. ಅಭಿಮನ್ಯು ,ಅರ್ಜುನ ಮತ್ತು ಸುಭದ್ರೆಯರ ಮಗ. ಹುಟ್ಟಿದಾಗಿನಿಂದಲೂ ಮಾವ ಶ್ರೀ ಕೃಷ್ಣ ಹಾಗೂ ಬಲರಾಮರ ಆದರ್ಶ ಹಾಗೂ ತರಬೇತಿಯಲ್ಲಿ ಬೆಳೆದ ಅಭಿಮನ್ಯು ಅತ್ಯಂತ ಪರಾಕ್ರಮಿಯೂ ಹೌದು. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಯುದ್ಧ ಕಲೆಗಳನ್ನು ಕರಗತ ಮಾಡಿಕೊಂಡಿದ್ದ. ಮಹಾಭಾರತ ಯುದ್ಧದಲ್ಲಿ ದ್ರೋಣಾಚಾರ್ಯರು ರಚಿಸಿದ ಚಕ್ರವ್ಯೂಹವನ್ನು ಭೇದಿಸಿ ಒಳಗೆ ನುಗ್ಗಿ ಅನೇಕ ವೀರಾಧಿ-ವೀರರನ್ನು ಕೊಂದು, ದ್ರೋಣ, ಕರ್ಣ, ದುರ್ಯೋಧನ, ದುಶ್ಯಾಸನ ಮುಂತಾದ ಅತಿರಥ-ಮಹಾರಥರಿಗೆ ಸಮನಾಗಿ ಹೋರಾಡಿ ನಂತರ, ವಂಚನೆಗೊಳಗಾಗಿ ಚಕ್ರವ್ಯೂಹದಿಂದ ಹೊರಬರಲಾಗದೆ ವೀರಮರಣವನ್ನು ಹೊಂದಿದನು.

ಯುಧಿಷ್ಠಿರನು ದಾಳಗಳ ಆಟವನ್ನು ಕಳೆದುಕೊಂಡ ನಂತರ, ದ್ರೌಪದಿಯೊಂದಿಗೆ ಎಲ್ಲಾ ಪಾಂಡವರನ್ನು ದೇಶಭ್ರಷ್ಟಗೊಳಿಸಲಾಯಿತು. ಸುಭದ್ರಾ, ಈ ಅವಧಿಯಲ್ಲಿ ದ್ವಾರಕಾದಲ್ಲಿ ತನ್ನ ಸಹೋದರರೊಂದಿಗೆ ಉಳಿದುಕೊಂಡಳು, ಅಲ್ಲಿ ಅವಳು ಮತ್ತು ಅವಳ ಕುಟುಂಬ ಸದಸ್ಯರೊಂದಿಗೆ ಅಭಿಮನ್ಯುವನ್ನು ಬೆಳೆಸಿದಳು. ಪ್ರದ್ಯುಮ್ನಾ, ಬಲರಾಮ ಮತ್ತು ಕೃಷ್ಣರಿಂದ ಶಸ್ತ್ರಾಸ್ತ್ರ ಮತ್ತು ಯುದ್ಧದಲ್ಲಿ ತರಬೇತಿ ಪಡೆದರು. ಅಭಿಮನ್ಯುವಿಗೆ ಬಲರಾಮರಿಂದ ರೌದ್ರಾ ಬಿಲ್ಲು ನೀಡಲಾಯಿತು. ಪಾಂಡವರು ತಮ್ಮ ವನವಾಸವನ್ನು ಮುಗಿಸಿದ ನಂತರ, ದುರ್ಯೋಧನನು ತಮ್ಮ ಸಂಪತ್ತು ಮತ್ತು ಸಂಪತ್ತನ್ನು ಹಿಂದಿರುಗಿಸಲು ಒಪ್ಪಲಿಲ್ಲ. ಆದ್ದರಿಂದ, ಪಾಂಡವರು ತಮ್ಮ ಹಕ್ಕುಗಳನ್ನು ಮರಳಿ ಪಡೆಯಲು ಯುದ್ಧ ಮಾಡಬೇಕಾಯಿತು.ಕುರುಕ್ಷೇತ್ರ ಯುದ್ಧದ ಮೊದಲು ಪಾಂಡವರು ವಿರಾಟದಲ್ಲಿ ಇರುತ್ತಾರೆ.

ಶ್ರೀಕೃಷ್ಣನ ಸೋದರಳಿಯನಾದ ಅಭಿಮನ್ಯು ಕೃಷ್ಣನ ಮಾತಿನ ಪ್ರಕಾರ, ವಿರಾಟರಾಜನ ಮಗಳಾದ ಉತ್ತರೆಯನ್ನು ಮದುವೆಯಾದ. ಗರ್ಭದಲ್ಲಿರುವಾಗಲೇ, ಅಭಿಮನ್ಯು ಸುಭದ್ರೆಗೆ ಯುದ್ಧದಲ್ಲಿನ ಅಭೇದ್ಯವ್ಯೂಹಗಳ ಭೇದನೆಯನ್ನು ಕಥೆಯಾಗಿ ಹೇಳುವಾಗ ಕೇಳಿ ತಿಳಿದಿದ್ದ. ಧನುರ್ವಿದ್ಯಾಪಾರಂಗತನಾದ ಅಭಿಮನ್ಯುವಿನ ವೀರನೈಪುಣ್ಯ ಸ್ಪಷ್ಠವಾಗಿ ತೋರುವುದು ಪದ್ಮವ್ಯೂಹವೆಂಬ ಸೈನ್ಯರಚನೆಯನ್ನು ಭೇದಿಸುವಲ್ಲಿ, ಭಾರತಯುದ್ಧದಲ್ಲಿ ದ್ರೋಣಾಚಾರ್ಯರು ರಚಿಸಿದ ಪದ್ಮವ್ಯೂಹವನ್ನು ಭೇದಿಸುವಲ್ಲಿ. ಭಾರತ ಯುದ್ಧದಲ್ಲಿ ದ್ರೋಣಾಚಾರ್ಯರು ರಚಿಸಿದ ಪದ್ಮವ್ಯೂಹವನ್ನು ಭೇದಿಸುವ ರಹಸ್ಯ ತಂತ್ರ ಕೃಷ್ಣ, ಅರ್ಜುನ, ಪ್ರದ್ಯುಮ್ನ ಮತ್ತು ಅಭಿಮನ್ಯುವಿಗಲ್ಲದೆ ಮತ್ಯಾರಿಗೂ ಗೊತ್ತಿರಲಿಲ್ಲ. ಯುದ್ಧದ 13 ನೇ ದಿನದಂದು ಅರ್ಜುನನನ್ನು ಸುಶರ್ಮಾ ಮತ್ತು ಟ್ರಿಗಾರ್ಟಾಸ್ ದಕ್ಷಿಣಕ್ಕೆ ತಿರುಗಿಸಿದರು. ಅವನ ಅನುಪಸ್ಥಿತಿಯ ಲಾಭವನ್ನು ಪಡೆದುಕೊಂಡು, ದುರ್ಯೋಧನ ಮತ್ತು ಅವನ ಮಿತ್ರರು ಯುದ್ಧವನ್ನು ಸುಲಭವಾಗಿ ಮತ್ತು ಹೆಚ್ಚಿನ ಸೈನ್ಯವನ್ನು ಕಳೆದುಕೊಳ್ಳದೆ ಯುಧಿಷ್ಠಿರನನ್ನು ಬಲೆಗೆ ಬೀಳಿಸುವ ಯೋಜನೆಯನ್ನು ಮಾಡಿದರು. ದ್ರೋಣಾಚಾರ್ಯರ ಅಡಿಯಲ್ಲಿ ಕೌರವರ ಸೈನ್ಯವು ಚಕ್ರವ್ಯೂಹವನ್ನು ರಚಿಸಿತು.ಅಭಿಮನ್ಯು ಚಕ್ರವ್ಯೂಹವನ್ನು ಹೇಗೆ ಪ್ರವೇಶಿಸಬೇಕೆಂದು ತಿಳಿದಿದ್ದರೂ ನಿರ್ಗಮಿಸುವುದು ಹೇಗೆಂದು ತಿಳಿದಿರಲಿಲ್ಲ.

ವೀರ ಅಭಿಮನ್ಯು
ಮಹಾಭಾರತ

ಶ್ರೀಕೃಷ್ಣ ಅರ್ಜುನರು ಸಂಶಪ್ತಕರೊಡನೆ ಯುದ್ಧದಲ್ಲಿ ತೊಡಗಿದಾಗ ಧರ್ಮರಾಜನ ಅಪ್ಪಣೆಯಂತೆ ಅಭಿಮನ್ಯುವೇ ರಥವನ್ನೇರಿ ಎದುರಾದ ವೀರಯೋಧರನ್ನು ರಾಶಿರಾಶಿಯಾಗಿ ಸಂಹರಿಸಿ ಪದ್ಮವ್ಯೂಹವನ್ನು ತಾಂತ್ರಿಕಯುಕ್ತಿಸಾಹಸದಿಂದ ಭೇದಿಸಿ ಒಳನುಗ್ಗಿದ. ತನಗೆ ಬೆಂಬಲವಾಗಿದ್ದ ಪಾಂಡವ ಸೈನ್ಯವನ್ನು ಸೈಂಧವ ತಡೆಹಿಡಿದರೂ ಅಭಿಮನ್ಯು ಏಕೈಕವೀರನಾಗಿ ದುರ್ಯೋಧನನ ಮಗ ಲಕ್ಷ್ಮಣ ಮತ್ತು ಬೃಹದ್ಬಲ ಮುಂತಾದ ನೂರಾರು ರಾಜ, ರಾಜಕುಮಾರರನ್ನು ಸಂಹರಿಸಿದ. ದುರ್ಯೋಧನನ ರಕ್ಷಣೆಗೆ ಬಂದ ದ್ರೋಣ, ಅಶ್ವತ್ಥಾಮ, ಕರ್ಣ, ಶಲ್ಯ, ಕೃಪ, ಶಕುನಿ ಮುಂತಾದ ವಿರಾಧಿವೀರರನ್ನು ತನ್ನ ಚಾಪವಿದ್ಯಾಬಲದಿಂದ ಮೂರ್ಛೆಗೊಳಿಸಿದ. ಈತನ ಕವಚ ಅಭೇದ್ಯವೆಂದರಿತ ದ್ರೋಣಾಚಾರ್ಯರ ಸೂಚನೆಯಂತೆ ಕರ್ಣ ಹಿಂದಿನಿಂದ ಬಂದು ಅಭಿಮನ್ಯುವಿನ ಸಾರಥಿ ಸುಮಿತ್ರನನ್ನು ಕೊಂದು ಬಿಲ್ಲನ್ನು ಕತ್ತರಿಸಿದ. ಮುಂದಿನಿಂದ ದ್ರೋಣ ಈತನ ರಥ ಮತ್ತು ಕುದುರೆಗಳನ್ನು ತುಂಡರಿಸಿದ. ವೈರಿಗಳು ಬಾಣದ ಮಳೆಗರೆದರು. ಆಗಲೂ ಅಭಿಮನ್ಯು ಅಪ್ರತಿಭನಾಗಲಿಲ್ಲ. ರಥದಿಂದಿಳಿದು ಗದೆಯಿಂದ ಯುದ್ಧಮಾಡಿ ಕೊನೆಗೆ ವೀರಸ್ವರ್ಗವನ್ನು ಪಡೆದ.

ಅಭಿಮನ್ಯು ಅತೀ ಚಿಕ್ಕ ವಯಸ್ಸಲ್ಲಿ ಮರಣ ಹೊಂದಿದ ಕೆಲವೊಂದು ಕಥೆಗಳು:

ವೀರ ಅಭಿಮನ್ಯು
ಅಭಿಮನ್ಯು


ಶ್ರೀ ಕೃಷ್ಣನು ಯುದ್ಧದ ಬಗ್ಗೆ ಹೆಣ್ಣುಮಕ್ಕಳಲ್ಲಿ ಮಾತನಾಡಬಾರದೆಂದು, ಅವರು ಸೂಕ್ಷ್ಮವಾಗಿರುತ್ತಾರೆ, ಅದರಲ್ಲೂ ಸೌಭದ್ರೆ ಗರ್ಭಿಣಿಯಾಗಿರುವುದರಿಂದ ಗಾಬರಿಯಾಗುತ್ತಾಳೆ ಎಂದು ಹೇಳಿ ಚಕ್ರವ್ಯೂಹದ ಪಾಠವನ್ನು ಅರ್ಧದಲ್ಲೇ ನಿಲ್ಲಿಸುತ್ತಾನೆ. ಇದಕ್ಕೆ ಮುಖ್ಯ ಕಾರಣ ಅಭಿಮನ್ಯು ಚಂದ್ರನ ಅಂಶ. ಅವನು ಭೂಮಿಗೆ ಬರುವ ಮೊದಲು ಭೂಮಿಯಲ್ಲಿ ಕೇವಲ ಹದಿನಾರು ವರ್ಷಗಳ ಕಾಲ ಮಾತ್ರ ಬದುಕಲು ಅವಕಾಶ ಪಡೆದಿರುತ್ತಾನೆ. ಹಾಗಾಗಿ ಶ್ರೀ ಕೃಷ್ಣನು ಅಭಿಮನ್ಯುವಿನ ಮೃತ್ಯುವನ್ನು ತಡೆಯುವುದಿಲ್ಲ ಎಂದು ಹೇಳಲಾಗುತ್ತದೆ.

ಇನ್ನೊಂದು ಕಥೆಯ ಪ್ರಕಾರ ಕಂಸನ ಪ್ರಾಣ ಸ್ನೇಹಿತ ಅವಿಕಾಸುರ ತನ್ನ ಸ್ಣೆಹಿತನ ಸಾವಿಗೆ ಕಾರಣವಾದ ಶ್ರೀ ಕೃಷ್ಣನ ಮೇಲೆ ಸೇಡುತೀರಿಸಿಕೊಳ್ಳಲು ಬಂದಾಗ ಆತನನ್ನು ಒಂದು ಹುಳುವಾಗಿ ಮಾರ್ಪಡಿಸಿ ಒಂದು ಪೆಟ್ಟಿಗೆಯಲ್ಲಿಡುತ್ತಾನೆ ಕೃಷ್ಣ. ಆದರೆ ಸುಭದ್ರೆ ಒಮ್ಮೆ ಆ ಪೆಟ್ಟಿಗೆಯನ್ನು ತೆರೆದಾಗ ಅವಿಕಾಸುರ ಸುಭದ್ರೆಯ ಹೊಟ್ಟೆಯನ್ನು ಸೇರಿಕೊಂಡು ಅಭಿಮನ್ಯುವಾಗಿ ಜನ್ಮತಾಳುತ್ತಾನೆ. ಹೀಗೆ ಜನ್ಮ ತಾಳಿದ ಅವಿಕಾಸುರ ತನ್ನ ರಾಕ್ಷಸ ಪೃವೃತ್ತಿಯನ್ನು ಹೊರತರುವ ಸಾಧ್ಯತೆ ಇದ್ದುದರಿಂದ ಶ್ರೀ ಕೃಷ್ಣನು ಕುರುಕ್ಷೇತ್ರದಲ್ಲಿ ಅಭಿಮನ್ಯುವಾಗಿ ಮುಕ್ತಿ ಹೊಂದಲು ಸಹಕರಿಸುತ್ತಾನೆ.

ಇನ್ನೂ ಒಂದು ಕಾರಣ ಕೌರವರ ಭಾವ, ದುರ್ಯೋಧನನ ತಂಗಿ ದುಶ್ಶಲೆಯ ಗಂಡ ಜಯದ್ರಥ ಹಿಂದೆ ಪಾಂಡವರು ವನವಾಸದಲ್ಲಿದ್ದಾಗ, ದ್ರೌಪದಿಯ ಮೈಮೇಲೆ ಕೈಹಾಕಲು ಹೋಗಿ, ಪಾಂಡವರಿಂಧ ಏಟು ತಿಂದು ಅವಮಾನಿತನಾಗಿರುತ್ತಾನೆ. ಆ ಅಪಮಾನಕ್ಕೆ ಪ್ರತೀಕಾರ ತೀರಿಸಲು ಆತ ಶಿವನ ಕುರಿತು ಘೋರ ತಪಸ್ಸು ಮಾಡುತ್ತಾನೆ. ಶಿವನನ್ನು ಮೆಚ್ಚಿಸಿ, ಆತನಿಂದ, ಪಾಂಡವರ ಸೇನೆಯನ್ನು ಒಂದು ದಿನದ ಮಟ್ಟಿಗೆ ಪೂರ್ಣವಾಗಿ ಸೋಲಿಸುವ ವರವನ್ನು ಪಡೆಯುತ್ತಾನೆ. ಮುಂದೆ ಕುರುಕ್ಷೇತ್ರ ಯುದ್ಧದಲ್ಲಿ, ಆ ಒಂದು ದಿನದ ಮಟ್ಟಿಗೆ ಪಾಂಡವರನ್ನು ಸೋಲಿಸಲು ಸಂಕಲ್ಪ ಮಾಡುತ್ತಾನೆ. ಅದೇ ದಿನ ಗುರು ದ್ರೋಣಾಚಾರ್ಯರು ಚಕ್ರವ್ಯೂಹ ರಚಿಸುತ್ತಾರೆ. ಅಂದು ಎಲ್ಲಿಯಾದರೂ ಅರ್ಜುನ ಮತ್ತು ಶ್ರೀಕೃಷ್ಣ ಅಲ್ಲೇ ಇದ್ದು, ಚಕ್ರವ್ಯೂಹದ ಒಳಗೆ ಹೋಗಬೇಕಾಗಿ ಬಂದಿದ್ದರೆ, ಶಿವನ ವರದಿಂದಾಗಿ ಅವರೂ ಸೋಲಬೇಕಾಗಿತ್ತು. ಹೀಗಾಗಿ ಶ್ರೀಕೃಷ್ಣ ಮತ್ತು ಅರ್ಜುನ ಅಲ್ಲಿ ಇಲ್ಲದಂತೆ, ಸಮಸಪ್ತಕರೆಂಬ ರಾಕ್ಷಸರೊಂದಿಗೆ ಹೋರಾಡುತ್ತಾ ಕುರುಕ್ಷೇತ್ರದಿಂದ ದೂರ ಹೋಗುವಂತೆ ಕೃಷ್ಣ ಮಾಡುತ್ತಾನೆ. ಅರ್ಜುನನ ಬದಲು ಚಕ್ರವ್ಯೂಹದ ಒಳಬಂದ ಅಭಿಮನ್ಯು, ಗೆಲ್ಲಲಾಗದೆ, ಶಿವನ ವರಕ್ಕೆ ಬಲಿಯಾಗಬೇಕಾಗುತ್ತದೆ.


ಧನ್ಯವಾದಗಳು.

What do you think?

-1 Points
Upvote Downvote

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಮಕ್ಕಳ ಜ್ಞಾಪಕಶಕ್ತಿ ಹೆಚ್ಚಿಸಲು ಅನುಸರಿಸಬೇಕಾದ ಕ್ರಮಗಳು

ಮಕ್ಕಳ ಜ್ಞಾಪಕಶಕ್ತಿ ಹೆಚ್ಚಿಸಲು ಅನುಸರಿಸಬೇಕಾದ ಕ್ರಮಗಳು

ಒನಕೆ ಓಬವ್ವ

ವೀರವನಿತೆ ಒನಕೆ ಓಬವ್ವ