ವೈಯಕ್ತಿಕ ಸಾಲಗಳನ್ನು ಸಾಕಷ್ಟು ಉದ್ದೇಶಗಳಿಗಾಗಿ ಬಳಸಬಹುದು! ನೀವು ವಿಹಾರಕ್ಕೆ ಯೋಜಿಸುತ್ತಿರುವಾಗ, ನಿಮ್ಮ ಮನೆಯನ್ನು ನವೀಕರಿಸುವಾಗ ಅಥವಾ ನಿಮಗಾಗಿ ಅಥವಾ ಕುಟುಂಬದಲ್ಲಿ ವಿಶೇಷವಾದ ಯಾರಿಗಾದರೂ ಕನಸಿನ ವಿವಾಹವನ್ನು ಏರ್ಪಡಿಸುವಾಗ ಅವುಗಳನ್ನು ಪಡೆಯಬಹುದು.
ವೈಯಕ್ತಿಕ ಸಾಲ ಎಂದರೆ ಹೆಸರೇ ಸೂಚಿಸುವಂತೆ ವೈಯಕ್ತಿಕ ಬಳಕೆಗೆ ಬ್ಯಾಂಕಿನಿಂದ ತೆಗೆದುಕೊಳ್ಳುವ ಸಾಲ. ಇದು ಅತ್ಯಂತ ಸರಳವಾಗಿದ್ದು, ನಿಮ್ಮ ವೇತನ ಅಥವಾ ಆದಾಯವನ್ನು ಅವಲಂಬಿಸಿದೆ. ಇಲ್ಲಿ ನೀವು ಯಾವ ಉದ್ದೇಶಕ್ಕಾದರೂ ಸಾಲವನ್ನು ಬಳಸಬಹುದು. ಬ್ಯಾಂಕ್ ಕೇಳುವುದಿಲ್ಲ. ಮನೆಗೆ ಪೀಠೋಪಕರಣಗಳ ಖರೀದಿ, ಗೃಹ ಸಾಲದ ಡೌನ್‌ಪೇಮೆಂಟ್ ಅಥವಾ ಬಿಸಿನೆಸ್, ವಿವಾಹ ಇತ್ಯಾದಿ ವೆಚ್ಚಗಳಿಗೆ ಉಪಯೋಗಿಸಬಹುದು.
ಒಬ್ಬ ವೈಯಕ್ತಿಕ ಸಾಲವನ್ನು ಸುಲಭವಾಗಿ ಮರುಪಾವತಿ ಮಾಡುವ ಸಾಮರ್ಥ್ಯವನ್ನು ಹೊಂದಿದ್ದರೆ, ಸುಲಭವಾಗಿ ಸಾಲವನ್ನು ಪಡೆಯುತ್ತಾರೆ. ಅದಕ್ಕಾಗಿಯೇ ಕಂಪನಿಗಳು ವ್ಯಕ್ತಿಯ ವಾರ್ಷಿಕ ಆದಾಯವನ್ನು ಕಟ್ಟುನಿಟ್ಟಾಗಿ ನೋಡುತ್ತವೆ.
ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳುವಾಗ ಗ್ರಾಹಕರು ಯಾವುದೇ ಮೇಲಾಧಾರವನ್ನು ಹಾಕುವ ಅಗತ್ಯವಿಲ್ಲ. ಈ ಎರಡೂ ರೀತಿಯ ಸಾಲಗಳು ಅವುಗಳ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಹೊಂದಿವೆ. ಸುರಕ್ಷಿತ ಸಾಲಗಳ ಮೇಲಿನ ಬಡ್ಡಿ ದರವು ತುಂಬಾ ಕಡಿಮೆಯಿರುತ್ತದೆ ಆದರೆ ಅಸುರಕ್ಷಿತ ಸಾಲಗಳನ್ನು ಹೆಚ್ಚಿನ ಬಡ್ಡಿದರದಲ್ಲಿ ನೀಡಲಾಗುತ್ತದೆ. ವೈಯಕ್ತಿಕ ಸಾಲಗಳು ದುಬಾರಿಯಾಗಲು ಇದು ಕಾರಣವಾಗಿದೆ.
ಅರ್ಜೆಂಟ್ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಸಾಮಾನ್ಯ ಆನ್‌ಲೈನ್ ಸಾಲಕ್ಕೆ ಅರ್ಜಿ ಸಲ್ಲಿಸುವಂತೆಯೇ ಇರುತ್ತದೆ. ಪ್ರಸ್ತುತ ಬ್ಯಾಂಕ್ ಖಾತೆ ಮತ್ತು ನಿಯಮಿತ ವೇತನ ಅಥವಾ ಆದಾಯ ಹೊಂದಿದ್ದರೆ, ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.
ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಬ್ಯಾಂಕ್ ಪ್ರೀ ಅಪ್ರೂವ್ಡ್ ಸಾಲದ ಆಫರ್ ನೀಡುತ್ತದೆ. ಪ್ರೀ ಅಪ್ರೂವ್ಡ್ ಸಾಲಗಳಿಗೆ ಬ್ಯಾಂಕುಗಳಿಂದ ತ್ವರಿತ ಅನುಮೋದನೆ ಸಿಗುತ್ತದೆ. ಅಲ್ಲದೆ, ಇದಕ್ಕಾಗಿ ಯಾವುದೇ ಹೆಚ್ಚುವರಿ ದಾಖಲೆಗಳ ಅಗತ್ಯವಿಲ್ಲ. ಅನುಮೋದನೆಯ ಕೆಲವೇ ನಿಮಿಷಗಳಲ್ಲಿ ಸಾಲದ ವಿತರಣೆ ನಡೆಯುತ್ತದೆ.
ಗಮನಿಸಬೇಕಾದ ಸಂಗತಿಯೆಂದರೆ, ಉತ್ತಮ ಮರುಪಾವತಿ ಹಿಸ್ಟರಿಯನ್ನು ಹೊಂದಿರುವ ಮತ್ತು ಉತ್ತಮ ಕ್ರೆಡಿಟ್ ಸ್ಕೋರ್ ಇರುವ ಹಳೆಯ ಗ್ರಾಹಕರಿಗೆ ಈ ಸಾಲಗಳನ್ನು ಹೆಚ್ಚಾಗಿ ನೀಡಲಾಗುತ್ತದೆ.
ಮನೆ ಅಥವಾ ವಾಣಿಜ್ಯೋದ್ದೇಶದ ಸ್ವಂತ ಮಳಿಗೆ, ಕಟ್ಟಡ ಇದ್ದರೆ ಅದನ್ನು ಅಡಮಾನವಾಗಿಟ್ಟುಕೊಂಡು ಸಾಲ ಪಡೆಯಬಹುದು. ಇದನ್ನು ಪ್ರಾಪರ್ಟಿ ಮೇಲಿನ ಸಾಲ ಎನ್ನುತ್ತಾರೆ. ಪರ್ಸನಲ್ ಲೋನ್‌ನಲ್ಲಿರುವಂತೆ ಇಲ್ಲೂ ಗ್ರಾಹಕರು ಸಾಲವನ್ನು ಯಾವುದೇ ಉದ್ದೇಶಕ್ಕೆ ಬಳಸಲು ಸಾಧ್ಯವಾಗುವುದಿಲ್ಲ ಎಂಬ ಅಂಶವನ್ನು ಗಮನಿಸಬೇಕು. ವಿವಾಹ, ವೈದ್ಯಕೀಯ, ಶಿಕ್ಷಣ, ಬಿಸಿನೆಸ್, ಮನೆಯ ನವೀಕರಣ ಇತ್ಯಾದಿ ಉದ್ದೇಶಗಳಿಗೆ ಪ್ರಾಪರ್ಟಿ ಸಾಲವನ್ನು ಉಪಯೋಗಿಸಬಹುದು. ನಿಮ್ಮ ಬಳಿ ಸ್ವಂತ ಮನೆ ಇದ್ದು, ಅದರ ಆಧಾರದಲ್ಲಿ ಪ್ರಾಪರ್ಟಿ ಸಾಲ ತೆಗೆದುಕೊಳ್ಳುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಸಾಲದ ಮೊತ್ತವನ್ನು ಮತ್ತೊಂದು ಸೈಟ್ ಖರೀದಿಸಲು ಬಳಸಲು ಅಥವಾ ಬಂಗಾರ ಕೊಳ್ಳಲು ಇಲ್ಲವೇ ಷೇರುಗಳಲ್ಲಿ ಹೂಡಿಕೆ ಮಾಡಲು ಬರುವುದಿಲ್ಲ. ಇವುಗಳನ್ನೆಲ್ಲ ಸ್ಪೆಕ್ಯುಲೇಟಿವ್ ಪರ್ಪಸ್ ಎಂದು ಬ್ಯಾಂಕ್ ಪರಿಗಣಿಸುತ್ತದೆ. ಪ್ರಾಪರ್ಟಿಯ ಮೌಲ್ಯ, ಸಾಲ ಮರು ಪಾವತಿಸುವ ಸಾಮರ್ಥ್ಯ, ವಯಸ್ಸು ಇತ್ಯಾದಿಯನ್ನು ಅವಲಂಬಿಸಿ ಸಾಲದ ಮೊತ್ತ ನಿಗದಿಯಾಗುತ್ತದೆ.
ಪರ್ಸನಲ್ ಲೋನ್ ವ್ಯಾಪಕವಾಗಿ ಸಿಗುತ್ತದೆ. ಆದರೆ ಯಾವ ಬ್ಯಾಂಕಿನಲ್ಲಿ ನಿಮ್ಮ ವೇತನದ ಖಾತೆ ಇರುತ್ತದೆಯೋ, ಅಲ್ಲಿ ಅರ್ಜಿ ಸಲ್ಲಿಸುವುದು ಉತ್ತಮ. ಸಾಮಾನ್ಯವಾಗಿ ಬ್ಯಾಂಕ್‌ಗಳು ತಮ್ಮಲ್ಲಿ ಸ್ಯಾಲರಿ ಅಕೌಂಟ್ ಇರದ ಗ್ರಾಹಕರಿಗೆ ವೈಯಕ್ತಿಕ ಸಾಲ ಕೊಡುವುದಿಲ್ಲ. ಪ್ರಾಪರ್ಟಿಯ ದಾಖಲೆಗಳು ಸಮರ್ಪಕವಾಗಿದ್ದರೆ, ಕಾನೂನು ನಿಯಮಾವಳಿಗಳ ಪ್ರಕಾರ ಕಟ್ಟಿದ್ದರೆ, ಮನೆ ಅಥವಾ ಕಟ್ಟಡ ಹೆಚ್ಚು ಹಳೆಯದಲ್ಲದಿದ್ದರೆ ಸಾಲದ ಪ್ರಕ್ರಿಯೆ ಸುಗಮವಾಗುತ್ತದೆ. ಸಾಲದ ಮರು ಪಾವತಿ ಇತರ ಇಎಂಐಗಳಂತೆ ಇರುತ್ತದೆ. ವೈಯಕ್ತಿಕ ಸಾಲದ ಪ್ರಕ್ರಿಯೆ ಸರಳವಾಗಿದ್ದರೂ, ಪ್ರಾಪರ್ಟಿ ಆಧಾರಿತ ಸಾಲವನ್ನೂ ಮತ್ತೊಂದು ಆಯ್ಕೆಯಾಗಿ ಪರಿಗಣಿಸಬಹುದು.
ಆರೋಗ್ಯ ಮತ್ತು ವೈದ್ಯಕೀಯ ತುರ್ತು ಪರಿಸ್ಥಿತಿಗಳಂತಹ ಸಂದರ್ಭಗಳಲ್ಲಿ, ಜನರು ಒಂದು ದಿನದೊಳಗೆ ಹಣವನ್ನು ಹೊಂದಿಸಬೇಕಾದ ಅನಿವಾರ್ಯತೆ ಇರುತ್ತದೆ. ಈಗ ಹೆಚ್ಚಿನ ಖಾಸಗಿ ಬ್ಯಾಂಕುಗಳು ತಮ್ಮ ಕೆಲವು ಗ್ರಾಹಕರಿಗೆ ತ್ವರಿತ ಸಾಲ ಸೌಲಭ್ಯವನ್ನು ಒದಗಿಸುತ್ತವೆ, ಅಗತ್ಯವಾದ ಮೊತ್ತವನ್ನು ನಿಮಿಷಗಳಲ್ಲಿ ಪಡೆಯಲು ಈ ಸಾಲ ಸೌಲಭ್ಯ ಅನುವು ಮಾಡಿಕೊಡುತ್ತದೆ.
ವೈಯಕ್ತಿಕ ಸಾಲಕ್ಕೆ ಹೋಲಿಸಿದರೆ ಪ್ರಾಪರ್ಟಿ ಸಾಲದ ಬಡ್ಡಿ ದರಗಳು ಕಡಿಮೆ.
ಗ್ರಾಹಕರು ತಿಳಿದುಕೊಳ್ಳಬೇಕಾದ ಮತ್ತೊಂದು ವಿಷಯವೆಂದರೆ ಬಡ್ಡಿ ದರವನ್ನು ಹೇಗೆ ವಿಧಿಸಲಾಗುತ್ತದೆ ಎಂಬುದು. ಸಾಲದ ಮೊತ್ತಕ್ಕೆ ಫ್ಲ್ಯಾಟ್ ಬೇಸಿಸ್ ಆಧಾರದಲ್ಲಿ ಬಡ್ಡಿ ವಿಧಿಸಲಾಗುತ್ತದೋ ಅಥವಾ ಸಾಲದ ಕಂತು ಕಡಿಮೆಯಾದಂತೆ ಇಳಿಕೆಯಾಗುವ ಸಾಲದ ಅಸಲಿಗೆ ಬಡ್ಡಿ ವಿಧಿಸಲಾಗುತ್ತದೋ ಎಂಬುದನ್ನು ಗಮನಿಸಬೇಕಾಗುತ್ತದೆ. ಇದಲ್ಲದೇ ಬಡ್ಡಿ ದರವು ಫ್ಲೋಟಿಂಗ್ ಅಥವಾ ಫಿಕ್ಸೆಡ್ ಎಂಬುದನ್ನೂ ಖಚಿತಪಡಿಸಿಕೊಳ್ಳಿ. ಫ್ಲಾಟ್ ಬೇಸಿಸ್ ಆಧಾರದಲ್ಲಿ ಮರುಪಾವತಿ ಅವಧಿಯುದ್ದಕ್ಕೂ ಸಾಲದ ಅಸಲಿಗೆ ಒಂದೇ ರೀತಿಯ ಬಡ್ಡಿ ವಿಧಿಸಲಾಗುತ್ತದೆ. ಅಂದರೆ ಇಲ್ಲಿ ಸಾಲದ ಅವಧಿ ಪೂರ್ತಿಯೂ ಆರಂಭದಲ್ಲಿ ಅಸಲಿಗೆ ವಿಧಿಸಲಾಗುತ್ತಿದ್ದ ಬಡ್ಡಿಯನ್ನೇ ಮುಂದುವರಿಸಲಾಗುತ್ತದೆ. ಇನ್ನು ರೆಡ್ಯೂಸಿಂಗ್ ಬ್ಯಾಲೆನ್ಸ್ ಇಂಟರೆಸ್ಟ್ ಲೋನ್ ಪದ್ಧತಿಯಲ್ಲಿ ಕಂತಿನ ಮರುಪಾವತಿ ಬಳಿಕ ಕಡಿಮೆಯಾಗುತ್ತಾ ಬರುವ ಸಾಲದ ಅಸಲಿನ ಮೊತ್ತಕ್ಕೆ ಬಡ್ಡಿ ವಿಧಿಸಿಕೊಂಡು ಬರಲಾಗುತ್ತದೆ. ಫ್ಲೋಟಿಂಗ್ ಬಡ್ಡಿ ದರವು ರೆಪೊ ದರದ ಏರಿಳಿತದ ಮೇಲೆ ಅವಲಂಬಿತವಾಗಿದ್ದು, ಹೆಚ್ಚು ಅಥವಾ ಕಡಿಮೆ ಆಗುತ್ತಿರುತ್ತದೆ. ಇಲ್ಲಿ ಬಹುತೇಕ ಗ್ರಾಹಕರಿಗೆ ಸಾಲದ ಮೇಲಿನ ಬಡ್ಡಿ ದರ ಇಳಿಕೆಯ ಲಾಭವಾಗಿರುವುದು ಸ್ಪಷ್ಟವಾಗಿದೆ.
ಧನ್ಯವಾದಗಳು.
GIPHY App Key not set. Please check settings