in

ಹಾಸನ ಜಿಲ್ಲೆಯ, ಸಕಲೇಶಪುರದಲ್ಲಿ ಹವಮಾನವು ವರ್ಷವಿಡೀ ಹಿತಕರವಾಗಿರುತ್ತದೆ

ಸಕಲೇಶಪುರ
ಸಕಲೇಶಪುರ

ಸಕಲೇಶಪುರವು ಕರ್ನಾಟಕದ ಹಾಸನ ಜಿಲ್ಲೆಯ ಒಂದು ಗಿರಿಧಾಮ ಪಟ್ಟಣ ಮತ್ತು ಸಕಲೇಶಪುರವು ತಾಲ್ಲೂಕು ಕೇಂದ್ರವಾಗಿದೆ. ಸಕಲೇಶಪುರವು ಮಲೆನಾಡು ಪ್ರದೇಶವಾಗಿದೆ. ಜೀವವೈವಿಧ್ಯತೆಯ ಕೇಂದ್ರವೂ ಆಗಿದೆ. ಸದಾಕಾಲ ತುಂಬಿ ಹರಿಯುವ ಹೇಮಾವತಿ ನದಿಯನ್ನು ಹೊಂದಿದೆ. ಇಲ್ಲಿ ಸಕಲೇಶ್ವರ ದೇವರ ಸನ್ನಿಧಿ ಪ್ರಸಿದ್ಧಿಯಾಗಿದೆ. ಇದು ಪ್ರವಾಸಿಗರನ್ನು ಆಕರ್ಷಿಸುವಂತಹ ಮಲೆನಾಡಿನ ಸೌಂದರ್ಯಭರಿತವಾದ ಸ್ಥಳವಾಗಿದೆ.

ಪಶ್ಚಿಮ ಘಟ್ಟಗಳ ತಪ್ಪಲಲ್ಲಿದ್ದು ಮಲೆನಾಡ ಪ್ರದೇಶದಲ್ಲಿದೆ. ಇದು ಹಸಿರು ಬೆಟ್ಟಗಳ ನಡುವೆ ಕಾಫಿ, ಏಲಕ್ಕಿ, ಮೆಣಸು, ಅಡಕೆ, ತೆಂಗು, ಬಾಳೆಯ ತೋಟಗಳಿಂದ ಆವೃತವಾಗಿದ್ದು ಸಮಶೀತೋಷ್ಣ ಹವಾಮಾನವನ್ನು ಹೊಂದಿದೆ. ಮುಖ್ಯವಾಗಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮತ್ತು ಇಡೀ ತಾಲ್ಲೂಕಿನಲ್ಲಿ ಬೆಳೆಯಲಾಗುವ ವಾಣಿಜ್ಯ ಬೆಳೆಗಳನ್ನು ಮಾರಾಟ ಮಾಡಲು ಸಕಲೇಶಪುರ ನಗರಕ್ಕೆ ತರಲಾಗುತ್ತದೆ.

ಪಟ್ಟಣವು ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ಮಂಗಳೂರು ಬಂದರು ನಗರವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 48 (NH-48) ರಲ್ಲಿದೆ. ಹತ್ತಿರದ ವಿಮಾನ ನಿಲ್ದಾಣವು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ.ಸಕಲೇಶಪುರವು 12,97 ° ಉತ್ತರ ಅಕ್ಷಾಂಶ ಮತ್ತು 75,78 ° ಪೂರ್ವ ರೇಖಾಂಶದಲ್ಲಿ ಇದೆ. ಇದು ಸಮುದ್ರಮಟ್ಟದಿಂದ 949 ಮೀಟರ್ (3113 ಅಡಿ)ಎತ್ತರವಿದೆ. ಹೇಮಾವತಿ ನದಿಯು ಸಕಲೇಶಪುರ ಪಟ್ಟಣದಲ್ಲಿ ಹರಿಯುತ್ತದೆ.

ಸಕಲೇಶಪುರ ತಾಲೂಕು.. ಹಾಸನ ಜಿಲ್ಲೆ ಪಟ್ಟಣದ ಹವಮಾನವು ವರ್ಷವಿಡೀ ಹಿತಕರವಾಗಿರುತ್ತದೆ. ಬೇಸಿಗೆಯಲ್ಲಿ (ಏಪ್ರಿಲ್) ಗರಿಷ್ಠ ೩೨ ಡಿ ಗ್ರಿ ಉಷ್ಣಾಂಶವಿರುತ್ತದೆ. ಹಿತಕರವಾದ ತಂಗಾಳಿಯೂ ಇರುತ್ತೆ. ಮುಂಗಾರು ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುತ್ತದೆ. ಜೂನ್ ತಿಂಗಳಿನಿಂದ ಆರಂಭವಾಗುವ ಮುಂಗಾರು ಮಳೆಯೂ ಸೆಪ್ಟಂಬರ್ ನಡುವಿನವರೆಗೂ ಎಡಬಿಡದೆ ಸುರಿಯುತ್ತದೆ. ಈ ಸಮಯದಲ್ಲಿ ಪ್ರಕೃತಿಯು ಹಸಿರಿನಿಂದ ಕಂಗೊಳಿಸುತ್ತದೆ. ಅಕ್ಟೊಬರ್ ನಿಂದ ಮಾರ್ಚ್ ವರೆಗೂ ಚಳಿಗಾಲದ ವಾತವರಣವಿರುತ್ತದೆ. ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಹೆಚ್ಚು ಚಳಿ ಇರುತ್ತದೆ.

2011ರ ಭಾರತದ ಜನಗಣತಿಯ ಪ್ರಕಾರ ಸಕಲೇಶಪುರವು 23352 ಜನಸಂಖ್ಯೆಯನ್ನು ಹೊಂದಿದೆ. ಜನಸಂಖ್ಯೆಯಲ್ಲಿ ಪುರುಷರು ೪೯% ಮತ್ತು ಮಹಿಳೆಯರು ೫೧% ಇದ್ದಾರೆ. ಸಕಲೇಶಪುರವು 59.5% ನಷ್ಟಿರುವ ರಾಷ್ಟ್ರೀಯ ಸಾಕ್ಷರತಾ ಸರಾಸರಿಗಿಂತ ಹೆಚ್ಚಿನ ಅಂದರೆ, 74% ಸರಾಸರಿ ಸಾಕ್ಷರತಾ ಪ್ರಮಾಣ ಹೊಂದಿದೆ. ಪುರುಷರ ಸಾಕ್ಷರತೆ 78% ಮತ್ತು ಮಹಿಳೆಯರ ಸಾಕ್ಷರತೆ 69% ಇದೆ. ಸಕಲೇಶಪುರದಲ್ಲಿ, ಜನಸಂಖ್ಯೆಯು 12% ರಷ್ಟು 6 ವರ್ಷ ವಯೋಮಿತಿಗಿಂತ ಕೆಳಗಿನವರು.

ಹಾಸನ ಜಿಲ್ಲೆಯ, ಸಕಲೇಶಪುರದಲ್ಲಿ ಹವಮಾನವು ವರ್ಷವಿಡೀ ಹಿತಕರವಾಗಿರುತ್ತದೆ
ಕೃಷಿಗೆ ಪ್ರಧಾನವಾದ ಪ್ರದೇಶ

ಸಕಲೇಶಪುರವು ಕೃಷಿ ಪ್ರಧಾನ ಪ್ರದೇಶವಾಗಿದೆ. ಇಲ್ಲಿ ಪ್ರಮುಖವಾಗಿ ಬೆಳೆಯುವ ಬೆಳೆಗಳು ಕಾಫಿ, ಅಕ್ಕಿ, ಮೆಣಸು, ಏಲಕ್ಕಿ, ಶುಂಠಿ ಮತ್ತು ಚಹಾ. ಕಾಫೀ ತೋಟಗಳು ಹೆಚ್ಚಿನ ಪ್ರಮಾಣದಲ್ಲಿ ಇದೆ. ಈ ಪ್ರದೇಶವನ್ನು ಕಾಫೀಯ ನಾಡು ಎಂದೇ ಕರೆಯಲಾಗುತ್ತಿದೆ. ಬ್ರೆಜಿಲ್ ಮತ್ತು ಕೊಲಂಬೀಯಾದಲ್ಲಿ ಬೆಳೆಯುವ ಕಾಫಿಗಿಂತಲು ಇಲ್ಲಿಯ ಕಾಫೀಯು ಹೆಚ್ಚು ರುಚಿಯಾಗಿರುತ್ತದೆ. ಪಶ್ಚಿಮಘಟ್ಟಗಳ ಫಲವತ್ತಾದ ಮಣ್ಣೇ ಉತ್ತಮ ರುಚಿಗೆ ಕಾರಣ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಾಸನ ಜಿಲ್ಲೆಯ ಈ ಪ್ರದೇಶದ ಕಾಫಿಗೆ ಮುಖ್ಯ ಸ್ಥಾನವಿದೆ. ಸಕಲೇಶಪುರ ತಾಲ್ಲೂಕು ಭಾರತೀಯ ಏಲಕ್ಕಿ ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿದೆ.

ದೇವಸ್ಥಾನಗಳು : ಸಕಲೇಶಪುರ ಬಸ್ ನಿಲ್ದಾಣದಿಂದ 1.5 ಕಿ.ಮೀ ದೂರದಲ್ಲಿರುವ ಸಕಲೇಶ್ವರ ಸ್ವಾಮಿ ದೇವಾಲಯವು ಕರ್ನಾಟಕದ ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ನೆಲೆಗೊಂಡಿದೆ. ಇದು ಕರ್ನಾಟಕದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಸಕಲೇಶಪುರದಲ್ಲಿ ಭೇಟಿ ನೀಡುವ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ. ಹೇಮಾವತಿ ನದಿ ತೀರದಲ್ಲಿದೆ, ಸಕಲೇಶ್ವರ ದೇವಸ್ಥಾನವು ಶಿವನಿಗೆ ಅರ್ಪಿತವಾಗಿದೆ. 11 ನೇ ಮತ್ತು 14 ನೇ ಶತಮಾನದ ನಡುವೆ ನಿರ್ಮಾಣಗೊಂಡ ಸಕಲೇಶ್ವರ ದೇವಾಲಯವು ಹೊಯ್ಸಳ ಸಾಮ್ರಾಜ್ಯವು ದಕ್ಷಿಣ ಭಾರತದಲ್ಲಿ ಉತ್ತುಂಗಕ್ಕೇರಿದ ಸಮಯದ ಒಂದು ಮಹಾನ್ ವಾಸ್ತುಶಿಲ್ಪ. ಇದು ಹೊಯ್ಸಳ ವಾಸ್ತುಶೈಲಿಯ ಅತ್ಯುತ್ತಮ ಕಲೆಗಾರಿಕೆಗೆ ಸಾಕ್ಷಿಯಾಗಿ ನಿಂತಿದೆ. ಹೇಮಾವತಿ ನದಿ ತೀರದಲ್ಲಿದೆ, ಸಕಲೇಶ್ವರ ದೇವಸ್ಥಾನವು ಶಿವನಿಗೆ ಅರ್ಪಿತವಾಗಿದೆ. 11 ನೇ ಮತ್ತು 14 ನೇ ಶತಮಾನದ ನಡುವೆ ನಿರ್ಮಾಣಗೊಂಡ ಸಕಲೇಶ್ವರ ದೇವಾಲಯವು ಹೊಯ್ಸಳ ಸಾಮ್ರಾಜ್ಯವು ದಕ್ಷಿಣ ಭಾರತದಲ್ಲಿ ಉತ್ತುಂಗಕ್ಕೇರಿದ ಸಮಯದ ಒಂದು ಮಹಾನ್ ವಾಸ್ತುಶಿಲ್ಪ. ಇದು ಹೊಯ್ಸಳ ವಾಸ್ತುಶೈಲಿಯ ಅತ್ಯುತ್ತಮ ಕಲೆಗಾರಿಕೆಗೆ ಸಾಕ್ಷಿಯಾಗಿ ನಿಂತಿದೆ. ಪಟ್ಟಣದ ಪ್ರವೇಶದ್ವಾರದಲ್ಲಿ ಈ ದೇವಸ್ಥಾನವು ಯಾತ್ರಾರ್ಥಿಗಳಿಗೆ ಪ್ರಸಿದ್ಧವಾದ ಸ್ಥಳವಾಗಿದೆ ಮತ್ತು ಈ ದೇವಸ್ಥಾನದ ಕಾರಣದಿಂದ ಪಟ್ಟಣಕ್ಕೆ ಈ ಹೆಸರು ಬಂದಿದೆ. ಈ ದೇವಾಲಯವು ಶಿವನ ದೈವದ ಪ್ರತಿಮೆಯನ್ನು ಹೊಂದಿದೆ, ಅದು ಎಲ್ಲರ ಕಣ್ಣಿಗೆ ಬೀಳುವಂತೆ ಮಾಡುತ್ತದೆ.

ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ನಡೆಯುವ ಜಾತ್ರೆಗೆ ಈ ದೇವಾಲಯ ಪ್ರಸಿದ್ಧ ಶ್ರ್ರೀವಿರಭದ್ರ.” ಶ್ರೀ ವೀರಭದ್ರ ಸ್ವಾಮಿ ದೇವಾಲಯ ಹಲಸುಲಿಗೆ “ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮಿಗಳ ಅಮೃತ ಅಸ್ತದಿಂದ 15-5-1989 ರಲ್ಲಿ ಈ ದೇವಾಲಯ ಸ್ಥಾಪನೆ ಯಾಯಿತು. ಈ ದೇವಾಲಯವು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕ್ಕಿನ ಹಲಸು ಲಿಗೆ ಎಂಬ ಗ್ರಾಮದಲ್ಲಿ ನೋಡಬವುದಾಗಿದೆ. ಇಲ್ಲಿ ಪ್ರಮುಖವಾಗಿ ಮೂರು ದೇವಾಲಯಗಳನ್ನು ನೋಡಬಹುದಾಗಿದೆ. ಅವುಗಳೆಂದರೆ “ಶ್ರೀ ಉಧ್ಭುವ ಧೂರ್ಗಮ್ಮ “,” ಶ್ರೀ ಬ್ರಹ್ಮ ದೇವರು “,” ಶ್ರೀ ವೀರಭದ್ರ ದೇವಾಲಯ “ಇಲ್ಲಿ ಪ್ರತಿವರ್ಷ ಏಪ್ರಿಲ್ ತಿಂಗಳಲ್ಲಿ ಮಹಾಜಾತ್ರೆ ನಡೆಯುತ್ತೆದೆ ಕಣ್ಣು ಸೆಳೆಯುವಂತಹ ಕಾರ್ಯಕ್ರಮಗಳು ಇರುತ್ತೆದೆ ಮನೋಮೋಹಕವಾದ ಧೃಶ್ಯ ಇರುತ್ತದೆ. ಅನೇಕ ರೀತಿಯಲ್ಲಿ ಭಕ್ತದಿಗಳು ಬರುತ್ತಾರೆ ಕೆಂಡೋಸ್ತವ ಇರುತ್ತದೆ ಪಮುಖವಾಗಿ ಎರಡು ದಿನ ನಡೆಯುತ್ತದೆ. ಬಹಳ ವಿಜೃಂಭಣೆಇಂದ ನಡೆಯುತ್ತದೆ.

ಸಿಂಧೂ ಬ್ರಹ್ಮ ದೇವಸ್ಥಾನ : ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಹೆತ್ತುರು ಹೋಬಳಿ ಬೆಳ್ಳೂರು ಗ್ರಾಮ ದಲ್ಲಿ ಇದೆ ಈ ದೇವಸ್ಥಾನವು ಕಲ್ಲಿನಿಂದ ನಿರ್ಮಾಣ ವಾಗಿದ್ದು ಸುಂದರವಾದ ಕಲ್ಲಿನ ಕೇತನೆ ಕಾಣಸಿಗುತ್ತವೆ ಈ ದೇವಸ್ಥಾನವನ್ನು ಚೋಳರ ಕಾಲದಲ್ಲಿ ನಿರ್ಮಾಣ ಮಾಡಿರುವ ಬಗ್ಗೆ ಮಾಹಿತಿ ಇದೆ ಈ ದೇವಸ್ಥಾನದಲ್ಲಿ ನಾಲ್ಕು ಮುಕದ ಬ್ರಹ್ಮ ದೇವರ ಶಿಲೆ ಇದೆ ಇದಕ್ಕೆ ಚತುರು ಮುಖ ಬ್ರಹ್ಮ ಎಂಬುದಾಗಿಯು ಕರೆಯುತ್ತಾರೆ ಈ ದೇವಸ್ಥಾನದ ವ್ಯಷ್ಟಿತ್ಯ ಎಂದರೇ ಬ್ರಹ್ಮದೇವರ ದೇವಸ್ಥಾನ ಕೇವಲ ಬೆರಳಣಿಕೆಯಷ್ಟು ಮಾತ್ರ ಕಾಣಸಿಗುತ್ತವೆ ಈ ದೇವಸ್ಥಾನಕೆ ಪ್ರತಿ ಮಂಗಳ ವಾರ ದಂಡು ಪೂಜೆ ನಡೆಯುತ್ತದೆ ಕಾರ್ತಿಕ ಮಾಸದಲ್ಲಿ ಕಾರ್ತಿಪೂಜೆ ನೆಡೆಯುತ್ತದೆ ಏಪ್ರಿಲ್ ತಿಂಗಳಿ ನಲ್ಲಿ ಅದ್ದೂರಿ ಜಾತ್ರಾ ಮಹೋತ್ಸವ ನಡೆಯುತ್ತದೆ ಬೆಳ್ಳೂರು ಶೆಟ್ಟಿಹಳ್ಳಿ ಈಚಲಪುರ ಗ್ರಾಮಸ್ಥರು ದೇವಸ್ಥಾನದ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ.

ಹಾಸನ ಜಿಲ್ಲೆಯ, ಸಕಲೇಶಪುರದಲ್ಲಿ ಹವಮಾನವು ವರ್ಷವಿಡೀ ಹಿತಕರವಾಗಿರುತ್ತದೆ
ಸಕಲೇಶಪುರದಲ್ಲಿ ಇರುವ ಪ್ರಮುಖ ದೇವಾಲಯಗಳು

ಸಕಲೇಶಪುರವು ಗುಜರಾತ್ ನಿಂದ ಕೇರಳದವರೆಗೆ ಚಾಚಿಕೊಂಡಿರುವ ಪಶ್ಚಿಮಘಟ್ಟದ ಪರ್ವತ ಶ್ರೇಣಿಯಲ್ಲಿ ಇದೆ. ಸಕಲೇಶಪುರದ ಸುತ್ತಲಿನ ಪ್ರದೇಶವು ಬಿಸಿಲೆ ಮೀಸಲು ಅರಣ್ಯ ವ್ಯಾಪ್ತಿಯನ್ನು ಒಳಗೊಂಡಿದೆ. ಈ ದಕ್ಷಿಣ ಶ್ರೇಣಿಯನ್ನು ಸಸ್ಯ ಮತ್ತು ಪ್ರಾಣಿ ವೈವಿಧ್ಯತೆಯ ವಿಷಯದಲ್ಲಿ ವಿಶ್ವದ 18 ಅತ್ಯಂತ ವೈವಿಧ್ಯಮಯ ತಾಣಗಳಲ್ಲಿ ಒಂದೆಂದು ಪಟ್ಟಿಮಾಡಲಾಗಿದೆ. ಸದಾ ತೇವಾಂಶವಿರುವ ಉಪ ಉಷ್ಣವಲಯದ ಈ ಪ್ರದೇಶದಲ್ಲಿ ಬೀಳುವ ಉತ್ತಮ ಮಳೆಯು ಜೀವ ವೈವಿಧ್ಯತೆಯ ಏಳಿಗೆಗೆ ಸಹಾಯಕವಾಗಿದೆ.

ಪ್ರಕೃತಿಯ ರಮ್ಯ ಸೊಬಗನ್ನು ಅಕ್ಷರಶಃ ಸವಿಯಬೇಕಾದರೆ ಒಮ್ಮೆಯಾದರೂ ನೋಡಲೇಬೇಕು. ಈ ವನ್ಯ ಸಿರಿಯ ಸೊಬಗಿನ ರಾಶಿ ಮೊಗೆದಷ್ಟೂ ಮುಗಿಯದು ಒಂದೆಡೆ ಕಡಿದಾದ ಬೆಟ್ಟ ಇನ್ನೊಂದೆಡೆ ರಣಪ್ರಪಾತ ಜಲಪಾತದಿಂದ ಬೇಳುವ ನೀರಿನ ಭೋರ್ಗರೆತ, ಮೇಲೆ ಕಣ್ಣೆತ್ತಿ ನೋಡಿದರೆ ನಿಧಾನವಾಗಿ ಚಲಿಸುವ ಮೋಡಗಳು, ಬೆಟ್ಟದ ನಡುವಿನಿಂದ ಭುಗಿಲೆದ್ದ ಬೆಂಕಿಯ ದಟ್ಟ ಹೋಗೆಯಂತೆ ಮೇಲೇರುವ ಆವಿ, ಬೆಟ್ಟದ ನಡುವೆ ಕಿರಿದಾಗಿ ಹರಿಯುವ ನೂರಾರು ತೊರೆಗಳು, ಪ್ರಶಾಂತ ವಾತಾವರಣದಲ್ಲಿ ವ್ಯಯಾರದಿಂದ ಜೀವನ ಸಾಗಿಸುವ ಕಾಡು ಪ್ರಾಣಿಗಳು, ನೋಡಿದಷ್ಟೂ ಮತ್ತೆ ಮತ್ತೆ ನೋಡುವ ತವಕ. ಉತ್ತರಕ್ಕೆ, ಹೇರೂರು ಹಾಗೂ ನಗಭೌದ್ದರಹಳ್ಳಿ , ದಕ್ಷಿಣಕ್ಕೆ ಹುಲಗುತ್ಹೂರು ಒಡಳ್ಳಿ, ಪೂರ್ವಕ್ಕೆ ಉಚ್ಚಂಗಿ, ಪಶ್ಚಿಮಕ್ಕೆ, ಕೊಡಗು ಜಿಲ್ಲೆಗೆ ಕೇವಲ ೩ ಕಿ.ಮೀ ದೂರದ ಕೂತಿ, ಕುಂದಳ್ಳಿ ಗ್ರಾಮಗಳು ಈ ಎಲ್ಲ ಹಳ್ಳಿಗಳಿಂದ ಸುಮಾರು ೩೦೦೦ ಅಡಿ ಎತ್ತರದ ೫೦೦೦ ಎಕರೆ ಭೂ ಪ್ರದೇಶವುಳ್ಳ ಆಕಾಶಕ್ಕೆ ಮುತಿಕ್ಕುವತಿರುವಾಂತಹ ನಗಭೌದ್ಧರಹಳ್ಳಿಯ ಗವಿಬೆಟ್ಟ. ಸಕಲೇಶಪುರಕ್ಕೆ ಬಂದವರು ಈ ನಗಭೋದ್ಧರಹಳ್ಳಿಯ ಗವಿ ಬೆಟ್ಟವನ್ನು ನೋಡಲೇ ಬೇಕೆಂಬ ಮನಸ್ಸು ನಿಮ್ಮದಿದ್ದರೆ ಸಕಲೇಶಪುರದಿಂದ ೫೦ಕೀ.ಮಿ. ಬಿಸಲೆ ಘಾಟಿನಿಂದ ೨೦ ಕೀ.ಮೀ. (ಕೊಡಗು) ಸೋಮರಪೇಟೆಯಿಂದ ೩೦ ಕೀ.ಮೀ. ಶನಿವಾರಸಂತೆಯಿಂದ ೧೦ ಕೀ.ಮೀ., ಚಂಗಡಿಹಳ್ಳ – ಸುಬ್ರಹ್ಮಣ್ಯ ರಸ್ತೆ ಉಚ್ಚಂಗಿ ಸಮೀಪ ನಾಗಭೋದ್ಧರ ಹಳ್ಳಿಯಿಂದ ೨ ಕೀ.ಮೀ., ಶ್ರಮಿಸಿದರೆ ಕಾಡುಗಳ ಮಧ್ಯೆ ಸುತ್ತಲಿನ ರಮಣೀಯ ದೃಶ್ಯಗಳು ಧನ್ಯತೆಯ ಆಹ್ಲಾದ ನೀಡುತ್ತದೆ.

ಹಾಸನ ಜಿಲ್ಲೆಯ, ಸಕಲೇಶಪುರದಲ್ಲಿ ಹವಮಾನವು ವರ್ಷವಿಡೀ ಹಿತಕರವಾಗಿರುತ್ತದೆ
ಅಗ್ನಿ ಗುಡ್ಡ

‘ಅಗ್ನಿ ಗುಡ್ಡಾ’ ಎಂಬ ಹೆಸರಿನ ಅರ್ಥ ‘ಉರಿಯುತ್ತಿರುವ ಪರ್ವತ’ ಮತ್ತು ಈ ಪ್ರದೇಶದ ಈ ಬೆಟ್ಟದಲ್ಲಿ ತೀವ್ರ ಜ್ವಾಲಾಮುಖಿ ಸ್ವಭಾವದಿಂದಾಗಿ ಇದನ್ನು ಕರೆಯಲಾಗುತ್ತದೆ. ಚಾರಣ ಉತ್ಸಾಹಿಗಳು ಮತ್ತು ಹೊರಾಂಗಣ ಕ್ಯಾಂಪಿಂಗ್‌ನಲ್ಲಿ ಆಸಕ್ತಿ ಹೊಂದಿರುವ ಜನರು ಇದನ್ನು ಹೆಚ್ಚಾಗಿ ಭೇಟಿ ಮಾಡುತ್ತಾರೆ. ಪರ್ವತದಿಂದ, ಸುತ್ತಮುತ್ತಲಿನ ಭತ್ತದ ಗದ್ದೆಗಳ ನೋಟವನ್ನು ಪಡೆಯಬಹುದು. ಈ ಸ್ಥಾನವನ್ನು ದಕ್ಷಿಣ ಭಾರತದ ಮತ್ತು ಬಾಲಿವುಡ್‌ನ ವಿವಿಧ ಚಲನಚಿತ್ರಗಳಲ್ಲಿಯೂ ದಾಖಲಿಸಲಾಗಿದೆ.

ಧನ್ಯವಾದಗಳು.

.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕಂಪಿಲಿದೇವ

ಕಂಪಿಲಿದೇವ ಕಂಪಿಲಿ ಸಾಮ್ರಾಜ್ಯದ ಎರಡನೆಯ ಮತ್ತು ಕೊನೆಯ ಅಲ್ಪಾವಧಿಯ ರಾಜ

ಒಣ ಚರ್ಮಕ್ಕೆ ಸುಲಭ ಸಲಹೆಗಳು

ಒಣ ಚರ್ಮಕ್ಕೆ ಸುಲಭ ಸಲಹೆಗಳು