in

ಮಕ್ಕಳಿಗೆ ಕೊಡುವ ಚುಚ್ಚುಮದ್ದುಗಳು ಏಷ್ಟು ಮುಖ್ಯವಾಗುತ್ತದೆ?

ಮಕ್ಕಳಿಗೆ ಕೊಡುವ ಚುಚ್ಚುಮದ್ದು
ಮಕ್ಕಳಿಗೆ ಕೊಡುವ ಚುಚ್ಚುಮದ್ದು

ಈಗಂತೂ ಮಕ್ಕಳು ಹುಟ್ಟುವುದಕ್ಕೂ ಮುಂಚೆ ಗರ್ಭದಲ್ಲಿ ಇರುವಾಗಲೇ ಹಲವಾರು ಚುಚ್ಚುಮದ್ದುಗಳು ಶುರುವಾಗಿದೆ. ಹಿಂದಿನ ಕಾಲದ ಹಿರಿಯರು ಹೇಳುವುದುಂಟು ಈಗ ಈಗ ಇದೆಲ್ಲಾ,ನಮ್ಮ ಕಾಲದಲ್ಲಿ ಇರಲ್ಲಿಲ್ಲ. ಹಾಗದರೆ ಮಕ್ಕಳಿಗೆ ನೀಡುವ ಚುಚ್ಚುಮದ್ದುಗಳು ಏಷ್ಟು ಮುಖ್ಯ ನೋಡೋಣ.

ಕೆಲವು ರೋಗಗಳು ಮಾರಣಾನ್ತಿಕವಾಗಿವೆ. ಉದಾ : ನಾಯಿ ಕಚ್ಚಿದಾಗ ಉಂಟಾಗುವ ರೇಬೀಸ್, ಡಿಪ್ತೀರಿಯ ಅದನ್ನು ತಡೆಗಟ್ಟಲು ಲಸಿಕೆಗಳು ಅತ್ಯಗತ್ಯ.

ಹುಟ್ಟಿದ ಮಕ್ಕಳಲ್ಲಿ ಸ್ವಲ್ಪ ರೋಗ ನಿರೋಧಕ ಶಕ್ತಿ ತಾಯಿಯ ಹಾಲಿನಿಂದ ಶಿಶುವಿಗೆ ಲಭ್ಯವಿರುತ್ತದೆ. ಆದರೆ ಇದು ಕ್ರಮೇಣ ಕಡಿಮೆಯಾಗುತ್ತದೆ. ಆಗ ರೋಗ ಉಂಟಾಗಲು ಸಾಧ್ಯ. ಆದ್ದರಿಂದ ರೋಗ ತಡೆಗಟ್ಟಲು ಲಸಿಕೆಗಳು ಅಗತ್ಯ. ರೋಗದಿಂದ ಮುಕ್ತಿ ಪಡೆಯಲು ಲಸಿಕೆಗಳು ಅಗ್ಗದ ವಿಧಾನವಾಗಿವೆ. ಜೀವಂತ ಅಥವಾ ನಿಶ್ಯಕ್ತಿಗೊಳಿಸಿದ ರೋಗಾಣುವನ್ನು ದೇಹದಲ್ಲಿ ಸೇರಿಸಿದಾಗ, ದೇಹದಲ್ಲಿ ಆ ರೋಗಾಣುವಿನ ವಿರುದ್ದ ಆಂಟಿ ಬಾಡೀಸ್ ಉತ್ಪತ್ತಿಯಾಗಿ ರೋಗಾಣುವಿನೊಂದಿಗೆ ಹೋರಾಡಿ, ರೋಗ ಬಾರದಂತೆ ತಡೆಗಟ್ಟುತ್ತದೆ.

ಭಾರತ ಸರ್ಕಾರ ರೋಗ ಪ್ರತಿಬಂದಿತ ಲಸಿಕಾ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಈ ಕಾರ್ಯಕ್ರಮದಲ್ಲಿ ಹಾಕುವ ಲಸಿಕೆಗಳು ಇಡೀ ಸಮಾಜದ ಮಕ್ಕಳ ರಕ್ಷಣೆಗೆ ಅನಿವಾರ್ಯವಾಗಿದೆ. ಈ ಲಸಿಕಾ ಕಾರ್ಯಕ್ರಮದ ಬಗ್ಗೆ ಜನರಿಗೆ ಮಾಹಿತಿಯನ್ನು ಕೊಡಲಾಗುತ್ತಿದೆ.

ಮಕ್ಕಳಿಗೆ ಕೊಡುವ ಚುಚ್ಚುಮದ್ದುಗಳು ಏಷ್ಟು ಮುಖ್ಯವಾಗುತ್ತದೆ?
ಮಕ್ಕಳಿಗೆ ಕೊಡುವ ಚುಚ್ಚುಮದ್ದು

ಹೆಚ್ಚಿನ ಲಸಿಕೆಗಳನ್ನು ಎರಡು ಬಾರಿ ಹಾಕಲಾಗುತ್ತದೆ. ರೋಗ ಪ್ರತಿಬಂಧಕ ಶಕ್ತಿಯನ್ನು ಉತ್ಪಾದಿಸಲು (ಆಂಟಿಬಾಡೀಸ್) ಪ್ರಥಮ ಅಥವಾ ಆರಂಭಿಕ ಲಸಿಕೆಯನ್ನು ಸಾಮಾನ್ಯವಾಗಿ ಒಂದು ಅಥವಾ ಎರಡು ಇಂಜೆಕ್ಷನ್ ರೂಪದಲ್ಲಿ, ಹಾಕಲಾಗುತ್ತದೆ. ಆರಂಭಿಕ ಸಮಯದ ನಂತರ ಈ ಇಂಜೆಕ್ಷನ್ ಗಳಿಂದ ತಯಾರಾದ ರೋಗ ಪ್ರತಿಬಂಧಕ ಶಕ್ತಿ ಅಲ್ಪ ಪ್ರಮಾಣದಲ್ಲಿ ಕಡಿಮೆಯಾದಾಗ ಇದನ್ನು ಹೆಚ್ಚಿಸುವ ಅಗತ್ಯತೆ ಉಂಟಾಗುತ್ತದೆ. ಆಗ ಬೂಸ್ಟರ್ ಡೋಸ್ (ಚುಚ್ಚು ಮದ್ದು / ಹನಿಗಳು) ನೀಡಲಾಗುವುದು.

ಮಕ್ಕಳು ಭೀಕರ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಕಾರಣ ಮಕ್ಕಳಲ್ಲಿ ರೋಗಗಳನ್ನು ತಡೆಗಟ್ಟುವ ಆಂಟಿ ಬಾಡೀಸ್ ಇರುವುದಿಲ್ಲ. ಲಸಿಕೆಗಳು ರಕ್ತದಲ್ಲಿ ಆಂಟಿ ಬಾಡಿ ತಯಾರಿಕೆಗೆ ಪ್ರಚೋದನೆ ನೀಡುತ್ತವೆ ಹಾಗೂ ವ್ಯಕ್ತಿ ರೋಗದಿಂದ ನರಳದೇ ಇರುವಂತೆ ಮಾಡುತ್ತವೆ. ನಿಗದಿತ ದಿನದಂದು ತಪ್ಪದೇ ಲಸಿಕೆ ಹಾಕಲು ಪ್ರಯತ್ನಿಸಬೇಕು. ಸಾಧ್ಯವಾಗದಿದ್ದರೆ ಎಂದು ಸಾಧ್ಯವಾಗುತ್ತದೆಯೋ, ಅಂದು ಲಸಿಕೆ ಹಾಕಿಸಬಹುದು.

ಮಗುವಿಗೆ ಕೆಮ್ಮು ಜ್ವರ ಇದ್ದರೂ ಲಸಿಕೆ ಹಾಕಬಹುದು. ಒಂದು ವರ್ಷದೊಳಗೆ ಎಲ್ಲ ಲಸಿಕೆಗಳನ್ನು ಹಾಕಿಸಲು ಪ್ರಯತ್ನಿಸಬೇಕು. ಲಸಿಕೆಗಳಿಂದ ಕೆಲವರಿಗೆ ಸಣ್ಣ ಪುಟ್ಟ ತೊಂದರೆಗಳಾಗಬಹುದು. ಈ ಕಾರಣಕ್ಕಾಗಿ ಲಸಿಕೆ ಹಾಕ್ಸದೆ ಬಿಡಬೇಡಿ. ತೊಂದರೆಗಳಾದಲ್ಲಿ ವೈದ್ಯರನ್ನು ಸಂಪರ್ಕಿಸಿ ಅವರು ಸರಿಪಡಿಸುತ್ತಾರೆ.

ಸ್ವಾಭಾವಿಕ ರೋಗ ಪ್ರತಿಬಂಧಕ ಶಕ್ತಿ ಹಾಗೂ ಲಸಿಕೆ ಹಾಕಿದಾಗ ಉಂಟಾಗುವ ಕೃತಕ ರೋಗ ಪ್ರತಿಬಂಧಕ ಶಕ್ತಿಯಲ್ಲಿ ಯಾವುದು ಪರಿಣಾಮಕಾರಿ? ಸಾಂಕ್ರಾಮಿಕ ರೋಗ ಉಂಟಾದಾಗ ಸ್ವಾಭಾವಿಕ ರೋಗ ಪ್ರತಿಬಂಧಕ ಶಕ್ತಿ ಉತ್ಪತ್ತಿಯಾಗುತ್ತದೆ. ಆದರೆ ರೋಗದಿಂದ ಸಾವೂ, ಊನತೆಯೂ ಆಗಬಹುದು. ಲಸಿಕೆಯಿಂದ ರೋಗ ಪ್ರತಿ ಬಂಧಕ ಶಕ್ತಿಯು ಹೆಚ್ಚುತ್ತದೆ. ಆದರೆ ಯಾವುದೇ ಅಪಾಯವೂ ಆಗುವುದಿಲ್ಲ ಹಾಗೂ ರೋಗ ಉಂಟಾಗುವುದೇ ಇಲ್ಲ. ಆದ್ದರಿಂದ ಕೃತಕ ರೋಗ ಪ್ರತಿಬಂಧಕ ಶಕ್ತಿ ಹೆಚ್ಚಿಸುವ ಲಸಿಕೆಯ ಉಪಯೋಗ ಹೆಚ್ಚು ಸುರಕ್ಷ ಹಾಗೂ ಪರಿಣಾಮಕಾರಿ. ಕೆಲವು ಬಾರಿ ಲಸಿಕೆ ಪಡೆದರೂ, ರೋಗ ಉಂಟಾಗಬಹುದು ಆದರೆ ರೋಗದ ಭೀಕರತೆ ಕಡಿಮೆ ಇರುತ್ತದೆ.

ಲಸಿಕೆ ಕೊಡಲು ಸ್ವಲ್ಪ ತಡವಾದರೆ ಎಲ್ಲ ಲಸಿಕೆಯನ್ನು ಮತ್ತೊಮ್ಮೆ ಕೊಡಿಸಬೇಕೆಂಬ ನಿಯಮವಿಲ್ಲ, ಇದರ ಬಗ್ಗೆ ವೈದ್ಯರ ಸಲಹೆ ಪಡೆಯಿರಿ. ಲಸಿಕೆಯಿಂದ ಪ್ರತಿಕ್ರಿಯೆ ಉಂಟಾದಲ್ಲಿ ವೈದ್ಯರನ್ನು ಸಂಪರ್ಕಿಸಿ.

ಮಕ್ಕಳಿಗ ಲಸಿಕೆ ಹಾಕಿಸಲೇಬಾರದ ಸಂದರ್ಭಗಳು :

ಹೆಚ್ಚು ಜ್ವರ ಇದ್ದಾರೆ (102 ಡಿಗ್ರಿ ಕ್ಕಿಂತ ಹೆಚ್ಚು)
ಹಿಂದಿನ ಬಾರಿ ಲಸಿಕೆ ಹಾಕಿದಾಗ ತೀವ್ರತರವಾದ ಅಡ್ಡ ಪರಿಣಾಮಗಳಾಗಿದ್ದರೆ ಮೆದುಳಿನ ರೋಗ, ಅಪಸ್ಮಾರವಿದ್ದರೆ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದರೆ ದೇಹದ ಪ್ರತಿಬಂಧಕ ಶಕ್ತಿ ಮೇಲೆ ಪರಿಣಾಮ ಬೀರುವ ಔಷಧಿಗಳನ್ನು ಉಪಯೋಗಿಸುತ್ತಿದ್ದರೆ ಸ್ಟೀರೊಯ್ಡ್ ಗಳನ್ನು ಬಳಸುತ್ತಿದ್ದರೆ ಲಸಿಕೆ ನೀಡುವ ವೇಳಾಪಟ್ಟಿ

ಗರ್ಭಿಣಿಯರಿಗೆ

ಮಕ್ಕಳಿಗೆ ಕೊಡುವ ಚುಚ್ಚುಮದ್ದುಗಳು ಏಷ್ಟು ಮುಖ್ಯವಾಗುತ್ತದೆ?
ಗರ್ಭವತಿಗೆ ಬಿ.ಸಿ.ಜಿ

ಗರ್ಭವತಿಗೆ ಸಾಧ್ಯವಾದಷ್ಟು ಬೇಗನೆ ಟೆಟನಸ್ -೧ ಹಾಕಿಸಬೇಕು. ಹಾಕಿಸಿದ ಒಂದು ತಿಂಗಳ ನಂತರ ಟೆಟನಸ್ -೨ ಹಾಕಿಸಿ. ಮೂರು ವರ್ಷದೊಳಗೆ ಮತ್ತೊಮ್ಮೆ ಗರ್ಭಿಣಿಯಾದರೆ ಒಂದು ಬೂಸ್ಟರ್ ಟೆಟನಸ್ ಇಂಜೆಕ್ಷನ್ ಹಾಕಿಸಿ.

ನಿಗದಿಪಡಿಸಿದ ಲಸಿಕಾ ಪಟ್ಟಿ ಹೀಗಿದೆ.

ಬಿ.ಸಿ.ಜಿ. : ಇದನ್ನು ಕ್ಷಯ ರೋಗ ನಿವಾರಣೆಗೆ ಕೊಡಲಾಗುತ್ತದೆ. ಇದು ಸುರಕ್ಷಿತ ಲಸಿಕೆ. ಇದು ಮಗುವಿನಲ್ಲಿ ಭಯಾನಕ ಮೆದುಳಿನ ಕ್ಷಯರೋಗವನ್ನು ತಡೆಯಲು ಸಾಧ್ಯ. ಮಗುವಿಗೆ ಮೆದುಳಿನ ಕ್ಷಯರೋಗ, ಮನೆಯ ಸದಸ್ಯರು ಹಾಗೂ ಇತರರ ಸಂಪರ್ಕದಿಂದ ಬರುತ್ತದೆ.

ಬಿಸಿಜಿ ಚುಚ್ಚುಮದ್ದನ್ನು ಮಗುವಿನ ಎಡಭುಜದ ಹೊರಭಾಗಕ್ಕೆ ಹಾಕಲಾಗುತ್ತದೆ. ಪ್ರತಿಕ್ರಿಯೆಯಾಗಿ ಮೂರು ವಾರಗಳಲ್ಲಿ ಚಿಕ್ಕ ಗಂಟಿನಂತಹ ಉಬ್ಬು ಕಾಣಿಸಿಕೊಳ್ಳುತ್ತದೆ. ಇದು ಕ್ರಮೇಣ ದೊಡ್ಡದಾಗಲು ಪ್ರಾರಂಭಿಸುತ್ತದೆ. ಆರರಿಂದ ಹನ್ನೆರಡು ವಾರದೊಳಗೆ ಚಿಕ್ಕ ಗುಳ್ಳೆಯಾಗಿ ಪರಿವರ್ತನೆಗೊಳ್ಳುತ್ತದೆ. ಗುಳ್ಳೆಯಿನ್ದ ನೀರು ಪಸರಿಸುತ್ತದೆ. ಅದನ್ನು ಸ್ಪಿರಿಟ್ ನಿಂದ ಸ್ವಚ್ಛಗೊಳಿಸಿ ಪಟ್ಟಿ ಹಾಕಿ, ಈ ಗುಳ್ಳೆ ಎರಡರಿಂದ ನಾಲ್ಕು ತಿಂಗಳೊಳಗೆ ಒಣಗಿ ಹೋಗುತ್ತದೆ. ಆದರೆ ಗಾಯದ ಗುರುತು ಉಳಿಯುತ್ತದೆ. ಈ ಗುರುತು ಅನೇಕ ವರ್ಷಗಳವರೆಗೂ ಇರಬಹುದು.

ಬಿಸಿಜಿ ಯೊಂದಿಗೆ ಕೆಲವು ಬಾರಿ ಡಿಟಿಪಿ ಪೋಲಿಯೋ ಹನಿಗಳನ್ನು ಹಾಕಬಹುದು.

ಪೋಲಿಯೋ ಲಸಿಕೆ

ಹನಿರೂಪದಲ್ಲಿ ಮಗುವಿಗೆ ಮೂರು ಬಾರಿ ಅಥವಾ ಐದು ಬಾರಿ ಪೋಲಿಯೊ ಲಸಿಕೆಯನ್ನು ಕೊಡಲಾಗುವುದು. ತೀವ್ರತರ ಭೇದಿ ಹಾಗೂ ಜ್ವರ ಇದ್ದಲ್ಲಿ ಈ ಲಸಿಕೆ ಹಾಕುವುದನ್ನು ಮುಂದೂಡಬೇಕು.

ಈ ಪೋಲಿಯೋ ಹನಿಯನ್ನು ಹಾಕುವ ಇನ್ನೊಂದು ಕಾರ್ಯಕ್ರಮವೇ ಪಲ್ಸ್ ಪೋಲಿಯೋ ಕಾರ್ಯಕ್ರಮ. ಈ ಕಾರ್ಯಕ್ರಮದಡಿಯಲ್ಲಿ ದೇಶಾದ್ಯಂತ ಎಲ್ಲ ಮಕ್ಕಳಿಗೂ ವಾರ್ಷಿಕವಾಗಿ ಎರಡುಬಾರಿ ಲಸಿಕೆಯನ್ನು ಹಾಕಲಾಗುತ್ತದೆ. ಈ ವಿಧಾನದಿಂದ ಅಪಾಯಕಾರಿ ವೈರಸ್ ನಿರ್ಮೂಲನೆ ಮಾಡಬಹುದಾಗಿದೆ. ಬ್ರೆಜಿಲ್,ಕ್ಯೂಬಾ, ಇಸ್ರೇಲಿನಲ್ಲಿ ಪೋಲಿಯೋ ರೋಗ ಈಗಾಗಲೇ ನಿರ್ಮೂಲನೆಯಾಗಿದೆ.

ಎದೆ ಹಾಲು ಕುಡಿಸಿದ ನಂತರವೂ ಎ ಹನಿಗಳನ್ನು ಹಾಕಬಹುದು. ದಡಾರದಿಂದ ಚೇತರಿಸಿಕೊಂಡ ಮಗುವಿಗೆ ಒಂದು ತಿಂಗಳ ನಂತರ ಈ ಲಸಿಕೆ ಹಾಕಬಹುದು.

ಮಕ್ಕಳಿಗೆ ಕೊಡುವ ಚುಚ್ಚುಮದ್ದುಗಳು ಏಷ್ಟು ಮುಖ್ಯವಾಗುತ್ತದೆ?
ಪೋಲಿಯೋ ಲಸಿಕೆ

ಜಗತ್ತಿನಾದ್ಯಂತ ಪೋಲಿಯೋ ಹನಿಗಳ (ಸೇಬಿನ್ ಟೈವ್ಯಾಲೆಂಟ್ ಓರಲ್ ಪೋಲಿಯೋ ) ಬದಲು ಇನ್ ಆಕ್ಟಿವೇಟೆಡ್ ಪೋಲಿಯೋ ವ್ಯಾಕ್ಸಿನ್ ಚುಚ್ಚುಮದ್ದು ರೂಪದಲ್ಲಿ ಕೊಡಲಾಗುವುದು. ಇದು ಹನಿರೂಪದ ಪೋಲಿಯೋ ಲಸಿಕೆಗಿಂತ ಹೆಚ್ಚು ಸುರಕ್ಷಿತ ಆದರೆ ದುಬಾರಿ.

ಟ್ರಿಪಲ್ ಆಂಟಿಜೆನ್ (ಡಿಟಿಪಿ ) ಮತ್ತು ಹೆಪಟೈಟಿಸ್-ಬಿ
ಡಿಪ್ತೀರಿಯಾ, ಪರ್ಟುಸಿಸ್ ( ನಾಯಿ ಕೆಮ್ಮು ರೋಗ ) ಟೆಟನಸ್ (ಧನುರ್ವಾಯು) ರೋಗಗಳನ್ನು ಹತೋಟಿಗೆ ತರುವ ಸಲುವಾಗಿ ಡಿಟಿಪಿ ಚುಚ್ಚುಮದ್ದು ನೀಡಲಾಗುತ್ತದೆ. ಈ ಚುಚ್ಚುಮದ್ದನ್ನು ಮೂರು ಬಾರಿ ಪೋಲಿಯೋ ಹನಿ ಕೊಡುವ ಸಮಯದಲ್ಲೇ ಅಂದರೆ ೧.೧/೨, ೨.೧/೨, ೩.೧/೨, ತಿಂಗಳಲ್ಲಿ ಕೊಡಲಾಗುವುದು.

ಒಂದು ವರ್ಷದ ನಂತರ ಅಂದರೆ ೧೬-೨೪ ತಿಂಗಳ ಸಮಯದಲ್ಲಿ ಬೂಸ್ಟರ್ ಚುಚ್ಚುಮದ್ದು ನೀಡಲಾಗುವುದು. ಯಾವ ಮಕ್ಕಳಿಗೆ ನರರೋಗ ತೊಂದರೆ ಇರುತ್ತದೆಯೋ ಅವರಿಗೆ ಟ್ರಿಪಲ್ ಆಂಟಿಜೆನ್ ಬದಲು ಡ್ಯುಯಲ್ ಆಂಟಿಜೆನ್ (ದಿಪ್ತೀರಿಯ, ಟೆಟನಸ್) ನೀಡಲಾಗುವುದು.

ಡಿಟಿಪಿ ಚುಚ್ಚುಮದ್ದಿನಿಂದ ಪ್ರತಿಕ್ರಿಯೆಯಾಗಿ ನೋವು ಹಾಗೂ ಇಂಜೆಕ್ಷನ್ ಕೊಟ್ಟ ಜಾಗದಲ್ಲಿ ಬಾವು ಕಾಣಿಸಿಕೊಳ್ಳುತ್ತದೆ. ಇದು ೨೪ ಗಂಟೆಗಳೊಳಗೆ ಕಡಿಮೆಯಾಗುತ್ತದೆ.

ಕೆಲವು ಮಕ್ಕಳಲ್ಲಿ ಚುಚ್ಚುಮದ್ದು ಕೊಟ್ಟ ಸ್ಥಳದಲ್ಲಿ ಗಂಟು ಉಂಟಾಗುತ್ತದೆ. ಅದು ಕ್ರಮೇಣ ಕಡಿಮೆಯಾಗುತ್ತದೆ. ಇನ್ನು ಕೆಲವರಲ್ಲಿ ಅಪಸ್ಮಾರ, ಆಘಾತ ಹಾಗೂ ಮೆದುಳು ಜ್ವರ ಕಂಡುಬರಬಹುದು, ಆದರೆ ಅದು ವಿರಳ.

ಹೆಪಟೈಟಿಸ್-ಬಿ : ಇದನ್ನು ೧. ೧/೨,೨೧/೨, ಮತ್ತು ೩. ೧/೨ ತಿಂಗಳುಗಳಲ್ಲಿ ನೀಡಲಾಗುತ್ತದೆ. ಹೆಪಟೈಟಿಸ್ -ಬಿ ಲಸಿಕೆ ಮಗುವಿಗೆ ರಕ್ತದಿಂದ ಮತ್ತು ದೇಹದ ದ್ರವಗಳಿಂದ ಹರಡುವ ಕಾಮಾಲೆ (ಜಾಂಡೀಸ್) ರೋಗ ಬರದಂತೆ ತಡೆಗಟ್ಟುತ್ತದೆ.

ದಡಾರ : ದಾದಾ ಹತೋಟಿಗೆ ೯ ನೇ ತಿಂಗಳಲ್ಲಿ ಮೀಸಲ್ಸ್ ಚುಚ್ಚುಮದ್ದು ಕೊಡಲಾಗುತ್ತದೆ. ಈ ಚುಚ್ಚುಮದ್ದು ಹಾಕಿದ ಏಳು ದಿನದಿಂದ ಹತ್ತು ದಿನದ ನಂತರ ಜ್ವರ, ನೆಗಡಿ ಕಂಡುಬರಬಹುದು.

ಲಸಿಕೆಗಳು ಮಗುವಿನ ಜೀವ ಕಾಪಾಡುವ ಸಾಧನಗಳು. ಭಾರತ ಸರ್ಕಾರ ಆದೇಶಿಸುವ ಲಸಿಕೆಗಳನ್ನು ಕಡ್ಡಾಯವಾಗಿ ಹಾಕಿಸಬೇಕು. ಅದನ್ನು ಸರ್ಕಾರಿ ಕೇಂದ್ರಗಳಲ್ಲಿ ಉಚಿತವಾಗಿ ಕೊಡುವರು. ಲಸಿಕೆಗಳಿಂದ ಅಡ್ಡ ಪರಿಣಾಮಗಳಾಗುತ್ತವೆ ಎಂದು ಹೆದರಿ ಲಸಿಕೆ ಹಾಕಿಸುವುದನ್ನು ನಿಲ್ಲಿಸಬೇಕಿಲ್ಲ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಇವತ್ತು ಭಾನುವಾರ ಬಾಡೂಟ ಮಗಳಿಗೆ ಸ್ಪೆಷಲ್ ಮಟನ್ ಅಡುಗೆ ಮಾಡಿಕೊಟ್ಟ ಅಶ್ವಿನಿ ಮೇಡಂ ನೋಡಿ.

ಇವತ್ತು ಭಾನುವಾರ ಬಾಡೂಟ ಮಗಳಿಗೆ ಸ್ಪೆಷಲ್ ಮಟನ್ ಅಡುಗೆ ಮಾಡಿಕೊಟ್ಟ ಅಶ್ವಿನಿ ಮೇಡಂ ನೋಡಿ.

ಇವತ್ತು ಸೋಮವಾರ ಅಶ್ವಿನಿ ಮೇಡಂ ಫುಲ್ ಬಿಜಿ ನೋಡಿ.

ಇವತ್ತು ಸೋಮವಾರ ಅಶ್ವಿನಿ ಮೇಡಂ ಫುಲ್ ಬಿಜಿ ನೋಡಿ.