in

ಶಿವನ ನಾನಾ ಅವತಾರಗಳು

ಶಿವನ ನಾನಾ ಅವತಾರಗಳು
ಶಿವನ ನಾನಾ ಅವತಾರಗಳು

ಪರಶಿವನನ್ನು ವಿವಿಧ ಹೆಸರುಗಳಲ್ಲಿ ಮಾತ್ರವಲ್ಲ, ನಾನಾ ರೂಪಗಳಲ್ಲೂ ಕೂಡ ಪೂಜಿಸಲಾಗುತ್ತದೆ. ಶಿವನ ನಾನಾ ರೂಪಗಳು ಒಂದೊಂದು ಪೌರಾಣಿಕ ಕಥೆಯನ್ನು ಆಧರಿಸಿದೆ. ಇಲ್ಲಿದೆ ಪರಶಿವನ ವಿವಿಧ ಅವತಾರಗಳು ಹಾಗೂ ಅದರ ಹಿಂದಿನ ರೋಚಕ ಕಥೆ.

ಪ್ರಕೃತಿಯ ಅಥವಾ ಪ್ರಪಂಚದ ಸಮತೋಲನ ಕಾಪಿಡಲು ಮಹಾಶಿವನು ವಿವಿಧ ಯುಗಗಳಲ್ಲಿಹಲವು ಅವತಾರಗಳನ್ನೆತ್ತಿದ್ದಾನೆ. ಸರ್ವಶಕ್ತನಾದ ಶಿವನು ಭಕ್ತರಿಗೆ ಸದಾ ಕಾಲ ಅಭಯವನ್ನೀಯುವಾತ. ಶಿವನ ಭಕ್ತಿಯಲ್ಲಿಕಾಶಿಗೆ ಬಂದ ಆದಿ ಶಂಕರಾಚಾರ್ಯರು ಶಿವನ ಮಹಿಮೆಯನ್ನು ಈ ರೀತಿ ಹೇಳುತ್ತಾರೆ, ”ಹೇ ಮಹಾದೇವಾ ನನ್ನ ಈ ಮೂರು ಪಾಪಗಳನ್ನು ಕ್ಷಮಿಸು, ನೀನು ಸರ್ವಾಂತರ್ಯಾಮಿ ಎಂಬುದನ್ನು ಮರೆತು ನಿನ್ನನು ಕಾಣಲು ಕಾಶಿಗೆ ಬಂದೆ, ನನ್ನ ಧ್ಯಾನಕ್ಕೂ ನಿಲುಕದಷ್ಟು ಎತ್ತರದಲ್ಲಿನೀನಿದ್ದಿಯೆಂಬುದನ್ನು ಮರೆತು, ಸದಾಕಾಲ ನಿನ್ನ ಧ್ಯಾನ ಮಾಡುತ್ತಿರುವೆ, ನನ್ನ ಪದಗಳಿಗೂ ಮಿಗಿಲಾಗಿ ನೀನಿದ್ದಿಯ ಎಂದು ತಿಳಿಯದೆ ನಿನ್ನನ್ನು ಸ್ತುತಿಸುತ್ತಿರುವೆ…”

1. ಪಿಪ್ಲಾದ ಅವತಾರ

ಮಹಾಶಿವನು ದಾಧಿಚಿ ಮುನಿಗಳ ಮನೆಯಲ್ಲಿ ಪಿಪ್ಲಾದ ಎಂಬ ಹೆಸರಿನ ಬಾಲಕನಾಗಿ ಜನಿಸಿದ. ಶನಿ ದೆಸೆಯಿಂದಾಗಿ ದಾಧಿಚಿ ಮುನಿಗಳಿಗೆ ಮನೆ ಬಿಟ್ಟುಹೋಗಬೇಕಾಗಿ ಬಂತು. ಇದರಿಂದ ಕೋಪಗೊಂಡ ಪಿಪ್ಲಾದನು ಶನಿಯನ್ನು ಶಪಿಸಿ, ಗ್ರಹಕಾಯ ಸ್ಥಾನದಿಂದ ಹೊರಗೆ ಹಾಕಿದನು. ಶನಿಯ ಪ್ರಾರ್ಥನೆಗೆ ಕೊನೆಗೂ ಕ್ಷಮಿಸಿದ ಪಿಪ್ಲಾದನು, 16 ವರ್ಷ ಪ್ರಾಯದೊಳಗಿನ ಯಾರಿಗೂ ತೊಂದರೆ ಕೊಡ ಕೂಡದೆಂದು ಶನಿಯಿಂದ ಮಾತು ಪಡೆದನು. ಪಿಪ್ಲಾದ ಅವತಾರವನ್ನು ನೆನಪಿಸಿಕೊಂಡ ನಂತರವೇ ಶನಿಯ ದೋಷ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ. 

2. ನಂದಿ ಅವತಾರ

ಶಿವನ ನಾನಾ ಅವತಾರಗಳು
ನಂದಿ ಅವತಾರ

ಗೂಳಿ ಮುಖ ಹೊಂದಿರುವ ಈ ಕಾಯಕ್ಕೆ ನಾಲ್ಕು ಕೈಗಳಿದ್ದು, ಅವುಗಳೆರಡರಲ್ಲಿ ಕೊಡಲಿ ಮತ್ತು ಹುಲ್ಲೆಗಳನ್ನು ಹಿಡಿದುಕೊಂಡು, ದನಗಾಹಿಗಳ ರಕ್ಷಕನಾಗಿದ್ದಾನೆ.

3. ವೀರಭದ್ರ ಅವತಾರ

ಭೈರವನನ್ನು ಭಗವಾನ್ ಶಂಕರನ ಸಂಪೂರ್ಣ ರೂಪವೆಂದು ಪರಿಗಣಿಸಲಾಗಿದೆ. ದಕ್ಷ ಯಜ್ಞದಲ್ಲಿ ಸತಿದೇವಿ ಬಲಿಯಾದಾಗ, ಉಗ್ರರೂಪ ತಳೆದ ಶಿವನು ಕೋಪದಿಂದ ತನ್ನ ಕೂದಲನ್ನು ಎಳೆಎಳೆಯಾಗಿ ಕಿತ್ತು ಬಿಸಾಡಿದನು. ಈ ರೀತಿ ಬಿದ್ದ ಕೂದಲ ಎಳೆಯಿಂದಲೇ ವೀರಭದ್ರ ಮತ್ತು ರುದ್ರಕಾಳಿ ಹುಟ್ಟಿಕೊಂಡರು. ಹೀಗೆ ಉಗ್ರರೂಪಿಯಾದ ಶಿವನು ದಕ್ಷನ ತಲೆಯನ್ನು ಕಡಿದನು. ತನ್ನ ಕೋಪದಿಂದ ಇಂದ್ರನನ್ನು ನಡುಗಿಸಿ, ಯಮನ ದಂಡನ್ನೇ ಮುರಿದು, ದೇವಲೋಕವನ್ನೇ ನಡುಗಿಸಿ, ಕೊನೆಗೆ ಶಾಂತನಾಗಿ ಕೈಲಾಸಕ್ಕೆ ಮರಳಿದನು.

4. ಶರಭ ಅವತಾರ

ವಿಷ್ಣುವಿನ ಅವತಾರವಾದ ಉಗ್ರನರಸಿಂಹನ ಕೋಪವನ್ನು ತಣಿಸಲು ಶಿವನು, ಸಿಂಹ ಮತ್ತು ಪಕ್ಷಿಯನ್ನೊಳಗೊಂಡ ಕಾಯದ ಶರಭ ಅವತಾರವನ್ನು ತಾಳಿದನು. ಹೀಗೆ ‘ಶರಭೇಶ್ವರ’ ಅಥವಾ ‘ಶರಭೇಶ್ವರಮೂರ್ತಿ’ ಎಂದೂ ಕರೆಯಲ್ಪಟ್ಟನು.

ವಿಷ್ಣುವಿನ ನರಸಿಂಹ ಅವತಾರದ ಕೋಪವನ್ನು ಸಮಾಧಾನಪಡಿಸಿದ ಶಂಕರನ ಆರನೇ ಅವತಾರವಾಗಿವೇ ಶರಭಾವತಾರ್. ಲಿಂಗ ಪುರಾಣದ ಪ್ರಕಾರ, ವಿಷ್ಣು ಹಿರಣ್ಯಕಶ್ಯಪ್ನನ್ನು ಕೊಲ್ಲಲು ನರಸಿಂಹನ ಅವತಾರ ತಾಳಿದನು. ಆದರೆ ಹಿರಣ್ಯಕಶ್ಯಪನ ವಧೆಯ ನಂತರವೂ ನರಸಿಂಹನ ಕೋಪವು ಶಾಂತವಾಗಲಿಲ್ಲ, ಆಗ ಶಿವನು ನರಸಿಂಹನಿಗೆ ಶರಬ್ ರೂಪದಲ್ಲಿ ಬಂದು ಅವನನ್ನು ಶಾಂತಗೊಳಿಸಲು ಪ್ರಯತ್ನಿಸಿದನು. ಆದರೆ ನರಸಿಂಹನ ಕೋಪ ಕಡಿಮೆಯಾಗಲಿಲ್ಲ. ನಂತರ ಶರಭನ ರೂಪದಲ್ಲಿ ಶಿವನು ನರಸಿಂಹನನ್ನು ತನ್ನ ಬಾಲದಲ್ಲಿ ಸುತ್ತಿ ಹಾರಿಹೋದನು, ನಂತರ ಭಗವಾನ್ ನರಸಿಂಹನ ಕೋಪ ತಣಿಸಿತು. 

4. ಅಶ್ವತ್ಥಾಮ

ಸಮುದ್ರ ಮಂಥನದ ನಂತರ ಹಾಲಾಹಲ ಕುಡಿದ ಶಿವನಿಂದ ಹೊರಹೊಮ್ಮಿದ ವಿಷ ಪುರುಷನೇ ನಂತರ ದುಷ್ಟ ಕ್ಷತ್ರೀಯರನ್ನು ಕೊಲ್ಲಲು ಆಶೀರ್ವಾದ ಪಡೆದು ಭಾರದ್ವಾಜರ ಮೊಮ್ಮಗನಾಗಿ ಜನಿಸಿದನು. ಇದೇ ವಿಷಪುರುಷನೇ ದ್ರೋಣ ಮತ್ತು ಕೃಪಿಗೆ ಮಗನಾಗಿ ಜನಿಸಿದ ಅಶ್ವತ್ಥಾಮ. ಅಶ್ವತ್ಥಾಮರ ಗುರು ದ್ರೋಣಾಚಾರ್ಯರ ಮಗನಾದ ಅಶ್ವತ್ಥಾಮ ಭಗವಾನ್ ಶಂಕರನ ಅವತಾರವಾಗಿದ್ದರಿಂದ ಶಿವನನ್ನು ತನ್ನ ಮಗನನ್ನಾಗಿ ಪಡೆಯಲು ದ್ರೋಣಾಚಾರ್ಯರು ತೀವ್ರ ತಪಸ್ಸು ಮಾಡಿದ್ದರು. ಅಶ್ವತ್ಥಾಮ ಅಮರ ಎಂದು ನಂಬಲಾಗಿದೆ.

5. ಭೈರವ ಅವತಾರ

ಶಿವನ ನಾನಾ ಅವತಾರಗಳು
ಭೈರವ ಅವತಾರ

ಬ್ರಹ್ಮನಿಗೆ ತಾನೇ ಶ್ರೇಷ್ಠನೆಂಬ ಅಹಂಕಾರ ತಲೆಗೆ ಹತ್ತಿದಾಗ, ಶಿವನು ಭೈರವ ಅವತಾರವೆತ್ತಿ ಬ್ರಹ್ಮನ ಐದನೇ ಶಿರಸ್ಸನ್ನು ಕಡಿದು ಹಾಕಿದ. ನಂತರ ಇದಕ್ಕೆ ಪರಿತಪಿಸಿದ ಶಿವನು ಬ್ರಹ್ಮ ಹತ್ಯೆಗೆ ಪ್ರಾಯಶ್ಚಿತವಾಗಿ ಬ್ರಹ್ಮನ ತಲೆಬುರುಡೆಯನ್ನು ಹಿಡಿದು ಹನ್ನೆರಡು ವರ್ಷಗಳ ಕಾಲ ಭಿಕ್ಷಾಟನೆ ಮಾಡಿದನು. ಭೈರವ ಅವತಾರದಲ್ಲಿಶಿವನು ಎಲ್ಲಾ ಶಕ್ತಿ ಪೀಠಗಳ ಸಂರಕ್ಷಣೆ ಮಾಡಿದನು.

ಬ್ರಹ್ಮನ ಐದನೇ ತಲೆಯನ್ನು ಕತ್ತರಿಸಿದ ನಂತರ, ಭೈರವನು ಬ್ರಹ್ಮನನ್ನು ಕೊಲ್ಲುವ ಪಾಪದಲ್ಲಿ ತಪ್ಪಿತಸ್ಥನೆಂದು ಭಾವಿಸಿದನು, ನಂತರ ಕಾಶಿಯಲ್ಲಿ ಭೈರವನು ಇದರಿಂದ ಮುಕ್ತಿ ಪಡೆದನು ಎಂಬ ನಂಬಿಕೆಯಿದೆ. 

6. ದೂರ್ವಾಸ ಅವತಾರ

ವಿಶ್ವದ ಶಿಸ್ತನ್ನು ಸಂರಕ್ಷಿಸಲು ಶಿವನು ಈ ಅವತಾರ ತಳೆದನು. ಮಹಾಮುನಿಯಾದ ದೂರ್ವಾಸರು ತನ್ನ ಕೋಪಕ್ಕೆ ಹೆಸರಾದವರು. ಶಿವನ ವಿವಿಧ ಅವತಾರಗಳಲ್ಲಿ ದುರ್ವಾಸ ಮುನಿ ಅವತಾರವನ್ನು ಪ್ರಮುಖವೆಂದು ಪರಿಗಣಿಸಲಾಗಿದೆ. ದುರ್ವಾಸ ರಿಷಿ ತುಂಬಾ ಕೋಪ ಹೊಂದಿದ್ದರು. ಅವರು ದೇವರಾಜ್ ಇಂದ್ರನನ್ನು ಶಪಿಸಿದರು, ಇದರಿಂದಾಗಿ ಸಮುದ್ರವನ್ನು ಮಥಿಸಬೇಕಾಯಿತು. ಇದಲ್ಲದೆ ಭಗವಾನ್ ಶ್ರೀ ರಾಮನ ಕಿರಿಯ ಸಹೋದರ ಲಕ್ಷ್ಮಣನ ಸಾವಿಗೆ ದುರ್ವಾಸ ರಿಷಿ ಕೂಡ ಕಾರಣ. ಭಗವಾನ್ ಶಂಕರ್ ವಿಷ್ಣುವಿನ ಪುತ್ರರನ್ನು ವೃಷಭ ಅವತಾರದಿಂದ ಕೊಂದನು. ಧಾರ್ಮಿಕ ಗ್ರಂಥಗಳ ಪ್ರಕಾರ, ಭಗವಾನ್ ವಿಷ್ಣು ರಾಕ್ಷಸರನ್ನು ಕೊಲ್ಲಲು ಪಾತಾಳ ಲೋಕಕ್ಕೆ ಹೋದಾಗ, ಅಲ್ಲಿ ಅನೇಕ ಗಂಡುಮಕ್ಕಳಿಗೆ ಜನ್ಮ ನೀಡಿದನು. ಅವರು ಪಾತಾಳದಿಂದ ಪೃಥ್ವಿಯವರೆಗೆ ಉಪದ್ರವ ಉಂಟುಮಾಡಿದರು. ಇದರಿಂದ ಭಯಗೊಂಡ ಬ್ರಹ್ಮ ಶಿವನ ಬಳಿಗೆ ಹೋಗಿ ರಕ್ಷಣೆಗಾಗಿ ಪ್ರಾರ್ಥಿಸಲು ಪ್ರಾರಂಭಿಸಿದ. ಆಗ ಭಗವಾನ್ ಶಂಕರ್ ವೃಷಭ ರೂಪವನ್ನು ತಾಳಿ ವಿಷ್ಣುವಿನ ಮಕ್ಕಳನ್ನು ಸಂಹಾರ ಮಾಡಿದರು ಎಂದು ನಂಬಲಾಗಿದೆ.

7. ಗ್ರಹಪತಿ ಅವತಾರ

ಶಿವನು ತನ್ನ ಪರಮಭಕ್ತನಾಗಿ, ಶಿವಭಕ್ತನೊಬ್ಬನ ಪತ್ನಿ ಸುಚಿಸ್ಮತ್ತಿಯ ಮಗನಾಗಿ ಗ್ರಹಪತಿ ಎಂಬ ಹೆಸರಿನಲ್ಲಿ ಜನಿಸಿದನು. ಭಗವಾನ್ ಶಂಕರನ ಏಳನೇ ಅವತಾರ ಗೃಹಪತಿ. ವಿಶ್ವನಾರ್ ಎಂಬ ಮುನಿ ಮತ್ತು ಅವರ ಪತ್ನಿ ಶುಚಿಶ್ಮತಿ ಅವರು ಶಿವನಂತಹ ಮಗನನ್ನು ಹೊಂದಬೇಕೆಂಬ ಮಹದಾಸೆಯನ್ನು ಹೊಂದಿದ್ದರು. ಇದಕ್ಕಾಗಿ ಅವರು ಕಠಿಣ ತಪ್ಪಸ್ಸನ್ನು ಮಾಡಿದ್ದರು. ಅವರ ಭಕ್ತಿ ಭಾವಕ್ಕೆ ಒಲಿದ ಭಗವಾನ್ ಶಂಕರ ಬುಕಿಮಾತಿಯ ಗರ್ಭದಿಂದ ಮಗನಾಗಿ ಜನಿಸಿದನು. ಅವನನ್ನು ಬ್ರಹ್ಮಜಿ ಎಂದು ಬ್ರಹ್ಮಪತಿ ಎಂದು ಹೆಸರಿಸಲಾಯಿತು.

ವೇದಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಈತನು ಗ್ರಹದೆಸೆಯಿಂದ ತನ್ನ ಚಿಕ್ಕ ವಯಸಿನಲ್ಲೇ ಮರಣ ಹೊಂದಬಹುದೆಂದು ತಿಳಿದು ಬಂತು. ಕಾಶಿ ಹೋಗಬೇಕೆಂಬ ಇವನಾಸೆ. ಇಂದ್ರನಿಂದಾಗಿ ಮೊಟಕುಗೊಂಡಾಗ ಸ್ವಯಂ ಶಿವನೇ ಇವನ ರಕ್ಷಣೆಗೆ ಬಂದು ಕಾಲವಜ್ರನೇ ಬಂದರೂ ಕೊಲ್ಲಲು ಸಾಧ್ಯವಿಲ್ಲಎಂದು ಆಶೀರ್ವದಿಸಿದನು. ಗ್ರಹಪತಿ ಆರಾಧಿಸುತ್ತಿದ್ದ ಶಿವಲಿಂಗವು ನಂತರ ಅಗ್ನೀಶ್ವರಲಿಂಗ ಎಂದು ಕರೆಯಲ್ಪಟ್ಟಿತು. ಶಿವನು ಗ್ರಹಪತಿಯನ್ನು ಎಲ್ಲಾ ದಿಕ್ಕುಗಳ ದೇವತೆಯನ್ನಾಗಿಸಿ, ಅನುಗ್ರಹಿಸಿದ.

9. ಹನುಮಾನ್ ಅವತಾರ

ಶಿವನ ನಾನಾ ಅವತಾರಗಳು
ಹನುಮಾನ್

ಸಮುದ್ರಮಂಥನದ ಕಾಲದಲ್ಲಿವಿಷ್ಣು ತಾಳಿದ ಮೋಹಿನಿ ಅವತಾರವನ್ನು ಬಹುವಾಗಿ ಮೆಚ್ಚಿಕೊಂಡ ಶಿವನ ವೀರ್ಯವು ನೆಲಕ್ಕೆ ಬಿದ್ದಾಗ ಅವನ ಅನುಮತಿಯಿಂದಲೇ ಸಪ್ತರಿಷಿಗಳು ಅದನ್ನು ಅಂಜನೀಯಳ ಗರ್ಭಪಾತ್ರೆಯಲ್ಲಿ ಸ್ಥಾಪಿಸಿದರು. ಹೀಗೆ ಹನುಮಾನನ ಜನನವಾಯಿತು. ಶಿವನ ಹನುಮಾನ್ ಅವತಾರವನ್ನು ಎಲ್ಲಾ ಅವತಾರಗಳಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಈ ಅವತಾರದಲ್ಲಿ ಭಗವಾನ್ ಶಂಕರ ಕೋತಿಯ ರೂಪವನ್ನು ಪಡೆದರು. ಭಗವಾನ್ ವಿಷ್ಣು ಶ್ರೀ ರಾಮನ ಅವತಾರವನ್ನು ತೆಗೆದುಕೊಂಡಾಗ, ತನ್ನ ಭಗವಂತನಿಗೆ ಸೇವೆ ಸಲ್ಲಿಸಲು ಮತ್ತು ಸಹಾಯ ಮಾಡಲು. ಶಿವನು ಮಹಾಬಲಶಾಲಿ ಹನುಮನ ಅವತಾರವನ್ನು ತಾಯಿಯ ಅಂಜನಿಯ ಗರ್ಭದಿಂದ ತೆಗೆದುಕೊಂಡನು ಎನ್ನಲಾಗಿದೆ.

10. ವೃಷಭ ಅವತಾರ

ಸಮುದ್ರ ಮಂಥನದ ಸಮಯದಲ್ಲಿ ವಿಷ್ಣುವು ರಾಕ್ಷಸರನ್ನು ಮೋಸಗೊಳಿಸಲು, ಅತಿ ಸುಂದರಿಯರಾದ ಮಾಯಾ ಮೋಹಿನಿಯನ್ನು ಸೃಷ್ಟಿಸಿದನು. ಈ ಸುಂದರಿಗೆ ಮಾರು ಹೋದ ರಾಕ್ಷಸರು ಅವರನ್ನೆಲ್ಲಕರೆದುಕೊಂಡು ಪಾತಾಳ ಲೋಕಕ್ಕೆ ಹೋದರು. ಕೆಲ ಕಾಲದ ನಂತರ ಅವರು ದೇವತೆಗಳಿಂದ ಅಮೃತವನ್ನು ವಶಪಡಿಸಲು ಬಂದಾಗ ವಿಷ್ಣುವು ಅವರನ್ನೆಲ್ಲ ಸಂಹರಿಸಲು ಪಾತಾಳಲೋಕಕ್ಕೆ ಹೋದನು. ಆದರೆ ಅಲ್ಲಿ ಅವನು ತನ್ನದೇ ಮಾಯಾ ಜಾಲಕ್ಕೆ ಬಿದ್ದುದರ ಫಲವಾಗಿ ಅವನಿಗೆ ಅನೈತಿಕವಾಗಿ ಹಲವು ಕ್ರೂರಿ ಮಕ್ಕಳು ಹುಟ್ಟಿದವು. ಇವು ದೇವತೆಗಳಿಗೆ ಇನ್ನಿಲ್ಲದಂತೆ ತೊಂದರೆ ಕೊಡಲಾರಂಭಿಸಿದವು. ಆಗ ಶಿವನು ವೃಷಭದ ಅವತಾರವೆತ್ತಿ ಈ ದುಷ್ಟ ಸಂತತಿಗಳನ್ನೆಲ್ಲಾ ನಾಶಮಾಡಿದ. ವಿಷ್ಣುವೂ ಈ ವೃಷಭದೊಂದಿಗೆ ಕಾಳಗಕ್ಕೆ ನಿಂತರೂ, ಕೊನೆಗೆ ಇದು ಮಹಾಶಿವನ ಅವತಾರವೆಂದು ತಿಳಿದನಂತರ ವೈಕುಂಟಕ್ಕೆ ಮರಳಿದ.

11. ಯತಿನಾಥನ ಅವತಾರ

ಆಹುಕನೆಂಬ ಪರಮ ಶಿವಭಕ್ತ ಆದಿವಾಸಿಯೊಬ್ಬ ತನ್ನ ಪತ್ನಿಯೊಂದಿಗೆ ಚಿಕ್ಕದೊಂದು ಗುಡಿಸಲಿನಲ್ಲಿ ವಾಸವಿದ್ದರು. ಒಂದು ದಿನ ಶಿವನು ಯತಿನಾಥನೆಂಬ ಹೆಸರಿನಲ್ಲಿ ಅವರ ಗುಡಿಸಲಿಗೆ ಭೇಟಿಯಿತ್ತನು. ಗುಡಿಸಲು ಚಿಕ್ಕದಾದುದರಿಂದ ಯತಿನಾಥರಿಗೆ ಒಳಗೆ ಮಲಗಲು ಹೇಳಿ ತಾನು ಗುಡಿಸಲಿನ ಹೊರಗೆ ಮಲಗಿದನು. ದುರಾದೃಷ್ಟವಶಾತ್‌ ಕ್ರೂರ ಮೃಗವೊಂದು ಹೊರಗೆ ಮಲಗಿದ್ದ ಅವನನ್ನು ಕೊಂದು ಹಾಕಿತು. ಬೇಸರ ತಾಳಲಾರದೆ ಪತ್ನಿಯೂ ಜೀವತ್ಯಾಗಕ್ಕೆ ಸಿದ್ಧಳಾದಾಗ ಯತಿನಾಥನು ತನ್ನ ನಿಜರೂಪ ತೋರಿಸಿ, ಮುಂದಿನ ಜನ್ಮದಲ್ಲಿ ಅವರಿಬ್ಬರೂ ನಳ ಮತ್ತು ದಮಯಂತಿ ಎಂಬ ಹೆಸರಿನಲ್ಲಿ ಸತಿಪತಿಯರಾಗಿ ಒಂದು ಸೇರುವಂತೆ ಅನುಗ್ರಹಿಸಿದನು.

12. ಕೃಷ್ಣ ದರ್ಶನ ಅವತಾರ

ವ್ಯಕ್ತಿಯ ಜೀವನದಲ್ಲಿಯಜ್ಞ ಧರ್ಮಾಚರಣೆಗಳ ಅನುಷ್ಠಾನ, ತನ್ಮೂಲಕ ಮೋಕ್ಷ ಪ್ರಾಪ್ತಿ ದಾರಿಯ ಮಹತ್ವವನ್ನು ಸುಗಮವಾಗಿಸುವ ತತ್ವಗಳನ್ನು ಜಗತ್ತಿಗೆ ಅರಿಯಪಡಿಸಲು ಶಿವನು ಈ ಅವತಾರವೆತ್ತಿದನು.

13. ಭಿಕ್ಷುವರ್ಯ ಅವತಾರ

ಮಾನವ ಸಂಕುಲವನ್ನು ಎಲ್ಲಾ ವಿಧದ ಸಂಕಷ್ಟ, ಅಪಾಯಗಳಿಂದ ಸಂರಕ್ಷಿಸಲು ಮಹಾದೇವನು ಈ ಅವತಾರವನ್ನೆತ್ತಿದನು.

14. ಸುರೇಶ್ವರ ಅವತಾರ

ವ್ಯಘ್ರಪಾದ ಮುನಿಯ ಮಗ ಶಿವಭಕ್ತನಾದ ಉಪಮನ್ಯುವಿನ ಭಕ್ತಿ ಪರೀಕ್ಷಿಸಲು ಶಿವ ಮತ್ತು ಪಾರ್ವತಿಯು ಇಂದ್ರ ಮತ್ತು ಇಂದ್ರಾಣಿಯ ರೂಪದಲ್ಲಿ ಬಂದು ಉಪಮನ್ಯುವಿನಲ್ಲಿ ಶಿವ ಭಕ್ತಿಯನ್ನು ತ್ಯಜಿಸಬೇಕೆಂದೂ, ಇಲ್ಲದ ಪಕ್ಷ ಘೋರ ಶಾಪಕ್ಕೊಳಗಾಗಬೇಕು ಎಂದು ಹೇಳಿದರು. ಇದಕ್ಕೆ ಹೆದರದೇ ಶಿವಭಕ್ತಿಯನ್ನು ತ್ಯಜಿಸಲಾರೆನೆಂದು ಉಪಮನ್ಯು ಹೇಳಿದಾಗ ಅವನ ಭಕ್ತಿಗೆ ಮೆಚ್ಚಿ, ಶಿವನು ಇನ್ನು ಮುಂದಕ್ಕೆ ಸದಾಕಾಲ ತಾನು ಉಪಮನ್ಯುವಿನ ಆಶ್ರಮ ಪರಿಸರದಲ್ಲೇ ಪಾರ್ವತಿಯೊಂದಿಗೆ ಇರುವೆನೆಂದು ಭರವಸೆಯನ್ನಿತ್ತು. ಹಾಗೆಯೇ ನಡೆದನು. ಇಂದ್ರನ ವೇಷದಲ್ಲಿಬಂದ ಕಾರಣ ಮಹಾಶಿವನಿಗೆ ‘ಸುರೇಶ್ವರ’ ಎಂಬ ಹೆಸರೂ ಬಂತು.

15. ಕಿರಾತೇಶ್ವರ ಅವತಾರ

ಅರ್ಜುನನು, ಹಂದಿಯ ರೂಪದಲ್ಲಿದ್ದ ಮೂಕಾಸುರನನ್ನು ಕೊಲ್ಲಲು ಧ್ಯಾನದಲ್ಲಿದ್ದಾಗ ಬೇಟೆಗಾರನ ರೂಪ ತಾಳಿ ಶಿವನು ಪ್ರತ್ಯಕ್ಷನಾದನು. ಹಂದಿಯ ಶಬ್ದದಿಂದಾಗಿ ಧ್ಯಾನ ಭಂಗ ಗೊಂಡ ಅರ್ಜುನನು ತನ್ನ ಬಾಣದಿಂದ ಅದನ್ನು ಹೊಡೆದುರುಳಿಸಿದ. ಅದೇ ಸಮಯದಲ್ಲೇ, ಕಿರಾತರೂಪದ ಶಿವನೂ ಅದನ್ನು ತನ್ನ ಬಾಣದಿಂದ ಬೀಳಿಸಿದ್ದ. ಇಬ್ಬರೂ ತಾನೇ ಮೊದಲು ಹೊಡೆದುರುಳಿಸಿದ್ದೆಂದು ವಾಗ್ವಾದಕ್ಕಿಳಿದರು. ಕೋಪಗೊಂಡ ಅರ್ಜುನನು ಶಿವನೊಂದಿಗೆ ಯುದ್ಧ ಮಾಡಿದ. ಅರ್ಜುನನ ಧೈರ್ಯ, ಸಾಹಸಕ್ಕೆ ಮೆಚ್ಚಿದ ಶಿವನು ಕೊನೆಗೆ ಅವನಿಗೆ ತನ್ನ ನಿಜ ರೂಪ ತೋರಿಸಿ ‘ಪಾಶುಪತಾಸ್ತ್ರ’ ವನ್ನಿತ್ತು ಅನುಗ್ರಹಿಸಿದ.

16. ಸುಂತಾಂತರ್ಕ ಅವತಾರ

ಪಾರ್ವತಿಯನ್ನು ತನಗೆ ವರಿಸಿ ಕೂಡುವಂತೆ ಅವಳ ತಂದೆ ಹಿಮಾಲಯನಲ್ಲಿ ಅಪೇಕ್ಷಿಸುವ ಸಲುವಾಗಿ ಶಿವನು ಈ ಅವತಾರವೆತ್ತಿದ್ದ.

17. ಬ್ರಹ್ಮಚಾರಿ ಅವತಾರ

ಶಿವನ ನಾನಾ ಅವತಾರಗಳು
ಬ್ರಹ್ಮಚಾರಿ ಮಹಾಶಿವ

ತನ್ನನ್ನು ವರಿಸಲು ತಯಾರಾದ ಪಾರ್ವತಿಯ ದೃಢ ನಿಶ್ಚಯವನ್ನು ಪರೀಕ್ಷಿಸಲು ಈ ಅವತಾರವೆತ್ತಿದ.

18. ಯಕ್ಷೇಶ್ವರ ಅವತಾರ

ಸಮುದ್ರ ಮಂಥನದ ತರುವಾಯ ಅಸುರರನ್ನೆಲ್ಲಾ ಸೋಲಿಸಿದ ಅಹಂಕಾರದಿಂದ ದೇವತೆಗಳು ಬೀಗುತ್ತಿದ್ದಾಗ, ದೇವತೆಗಳ ಅಹಂಕಾರ ಮುರಿಯಲು ಶಿವನು ಈ ಅವತಾರವೆತ್ತಿ, ದೇವತೆಗಳಿಗೆ ಹುಲ್ಲನ್ನು ಕೊಟ್ಟು, ಅದನ್ನು ಕತ್ತರಿಸಲು ಹೇಳಿದನು. ಶತಪ್ರಯತ್ನಗಳ ಹೊರತಾಗಿಯೂ ಅವರಿಗೆ ಅದನ್ನು ಕತ್ತರಿಸಲಾಗದೇ ಕೊನೆಗೆ ತಮ್ಮ ತಪ್ಪಿನ ಅರಿವಾಗಿ ಅಹಂಕಾರವನ್ನು ತ್ಯಜಿಸಿದರು.

19. ಅವಧೂತ ಅವತಾರ

ಇಂದ್ರನ ಸೊಕ್ಕನ್ನು ಮುರಿಯಲು ಮಹಾಶಿವನು ಈ ಅವತಾರವೆತ್ತಿದ್ದನು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

25 Comments

ಕಲ್ಪತರು ದಿನ

ಜನವರಿ 1, ಕಲ್ಪತರು ದಿನ

ಅಯ್ಯಪ್ಪನಿಗೆ ಕಟ್ಟುವ ಇರುಮುಡಿ

ಅಯ್ಯಪ್ಪನಿಗೆ ಕಟ್ಟುವ ಇರುಮುಡಿ ಎಂದರೆ ಏನು?