ಕನ್ನಡ ಚಿತ್ರರಂಗದ ಮೊದಲ ಯಶಸ್ವಿ ನಾಯಕಿ ಎಂದೇ ಪರಿಗಣಿಸಲ್ಪಡುವ ನಟಿ ಪಂಡರಿಬಾಯಿ ಕನ್ನಡ, ಹಿಂದಿ, ತಮಿಳು ಮತ್ತು ತೆಲಗು ಸೇರಿ ಸುಮಾರು 1000 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕರ್ನಾಟಕದ ಕರಾವಳಿ ಪ್ರದೇಶ ಭಟ್ಕಳದಲ್ಲಿ ಜನಿಸಿದ ಇವರು ತಂದೆಯ ಪ್ರಭಾವದಿಂದ ಕೇವಲ ಹತ್ತು ವರ್ಷದವರಿದ್ದಾಗಲೆ ಹರಿಕಥೆ ಕಾರ್ಯಕ್ರಮಗಳನ್ನು ನೀಡಲು ಆರಂಭಿಸಿದರು.
ದಕ್ಷಿಣ ಭಾರತದ ಹೆಸರಾಂತ ಚಿತ್ರನಟಿಯಾಗಿದ್ದರು. ಸುಮಾರು ೬೦ ವರ್ಷಗಳ ಕಾಲ ಚಿತ್ರರಂಗದಲ್ಲಿ ಸೇವೆಸಲ್ಲಿಸಿದ್ದ ಇವರು ದಕ್ಷಿಣ ಭಾರತದ ಬಹುತೇಕ ನಟರೊಂದಿಗೆ ನಾಯಕಿಯಾಗಿ, ತಾಯಿಯಾಗಿ ನಟಿಸಿದ್ದಾರೆ. ಪಂಡರೀಬಾಯಿಯವರನ್ನು ಚಿತ್ರರಂಗದವರು “ಅಮ್ಮ” ಎಂದೇ ಗುರುತಿಸುತ್ತಾರೆ.

ಪಂಡರೀಬಾಯಿಯವರು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ದಲ್ಲಿ ಜನವರಿ ೨೯, ೧೯೨೯ ರಲ್ಲಿ ಜನಿಸಿದರು. ಇವರ ತಂಗಿ ಮೈನಾವತಿ ಯವರು ಕೂಡ ಹೆಸರಾಂತ ಚಿತ್ರ ತಾರೆ.
ಪೌರಾಣಿಕ ನಾಟಕಗಳ ಅಭಿನಯದಲ್ಲಿ ನಿರತರಾಗಿದ್ದ ಪಂಡರಿಬಾಯಿಯವರು 1943 ರಲ್ಲಿ ತೆರೆಕಂಡ ಪೀಟಿಲು ಚೌಡಯ್ಯ ನಿರ್ಮಾಣದ `ವಾಣಿ’ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದರು. ಇದೇ ಚಿತ್ರದ ಮೂಲಕವೇ ಹಾಸ್ಯನಟ ಮುಸುರಿ ಕೃಷ್ಣಮೂರ್ತಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದು. ಡಾ.ರಾಜಕುಮಾರ್‌ರ ಮೊದಲ ಚಿತ್ರ `ಬೇಡರ ಕಣ್ಣಪ್ಪ’ ಮತ್ತು ತಮಿಳು ನಟ ಶಿವಾಜಿ ಗಣೇಶನ್‌ರ ಮೊದಲ ಚಿತ್ರ `ಪರಶಕ್ತಿ’ಯಲ್ಲಿ ನಾಯಕಿಯಾಗಿದ್ದು ನಟಿಸಿದ್ದು ಪಂಡರಿಬಾಯಿಯವರು.
ಇದಾದ ನಂತರ ಪಂಡರೀಬಾಯಿ ಹಲವಾರು ಚಿತ್ರಗಳಲ್ಲಿ ರಾಜ್ ರೊಂದಿಗೆ ನಾಯಕಿಯಾಗಿ ನಟಿಸಿದರು. ಶ್ರೀಕೃಷ್ಣ ಚೈತನ್ಯ ಸಭಾ ಎಂಬ ರಂಗಭೂಮಿ ಬಳಗವನ್ನು ಕಟ್ಟಿದ ಪಂಡರೀಬಾಯಿಯವರು ಊರೂರು ಅಲೆದು ನಾಟಕಗಳನ್ನೂ ಮಾಡಿದ್ದರು. ರಾಯರ ಸೊಸೆ ಅನುರಾಧಾ ಮುಂತಾದ ಕನ್ನಡ ಸಿನಿಮಾಗಳನ್ನು ಪಾಂಡುರಂಗ ಪ್ರೊಡಕ್ಷನ್ಸ್ ಎಂಬ ಬ್ಯಾನರಿನ ಅಡಿಯಲ್ಲಿ ಇವರೇ ಸ್ವತಃ ನಿರ್ಮಿಸಿದ್ದರು ಕೂಡಾ.
ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲ ನಟಿಸಿದ ಪಂಡರಿಬಾಯಿ ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ನಟರೊಂದಿಗೂ ಪರದೆ ಹಂಚಿಕೊಂಡಿದ್ದಾರೆ. ಇವರ ಸಹೋದರಿ ಮೈನಾವತಿ ಕೂಡ ನಟಿಯಾಗಿ ಪ್ರಸಿದ್ಧಿಯಾಗಿದ್ದಾರೆ. ಮೇರು ನಟರಾದ ಡಾ.ರಾಜಕುಮಾರ್, ತಮಿಳಿನ ಎಂಜಿಆರ್ ಮತ್ತು ತೆಲುಗಿನ ಎನ್‌ಟಿಆರ್ ರೊಂದಿಗೆ ನಾಯಕನಟಿಯಾಗಿ ಮತ್ತು ತಾಯಿಯಾಗಿ ನಟಿಸಿದ್ದು ವಿಶೇಷ.
ತಮಿಳು ಚಿತ್ರರಂಗವನ್ನು ಪ್ರವೇಶಿಸಿದ ಪಂಡರೀಬಾಯಿ, ತಮಿಳಿನ ತನ್ನ ಸಮಕಾಲೀನ ನಟರೊಂದಿಗೆ ನಟಿಸಿದರು. ತಮಿಳಿನ ಮೇರು ನಟ ಶಿವಾಜಿ ಗಣೇಶನ್ರವರ ಮೊದಲ ಚಿತ್ರದಲ್ಲೂ ಪಂಡರೀಬಾಯಿಯವರೇ ನಾಯಕಿಯಾಗಿದ್ದರು. ತಮ್ಮ ೫೦ ನೇ ವಯಸ್ಸಿನಲ್ಲಿ ಪಿ.ಹೆಚ್.ರಾಮ ರಾವ್ ಎಂಬವರನ್ನು ವಿವಾಹವಾಗಿದ್ದರು. ಕನ್ನಡ, ತಮಿಳು, ತುಳು, ಕೊಂಕಣಿ, ತೆಲುಗು ಹಾಗೂ ಹಿಂದಿ ಭಾಷೆಗಳೂ ಸೇರಿದಂತೆ ಸುಮಾರು ೫೦೦ ಚಿತ್ರಗಳಲ್ಲಿ ಇವರು ಅಭಿನಯಿಸಿದ್ದರು

ಪಂಡರಿಬಾಯಿಯವರು ನಟಿಸಿದ ಕೊನೆಯ ಚಿತ್ರ ಶಶಿಕುಮಾರ್ ನಟನೆಯ `ಬಾರೋ ನನ್ನ ಮುದ್ದಿನ ಕೃಷ್ಣ’.
ಹಿಂದಿಯಲ್ಲಿ ವೈಜಯಂತಿ ಮಾಲಾ ಬಾಲಿಯವರನ್ನು ಚಿತ್ರರಂಗಕ್ಕೆ ಪರಿಚಯಿಸಿದ “ಬಾಹರ್” ಎಂಬ ಚಿತ್ರದಲ್ಲಿ ಪಂಡರೀಬಾಯಿಯವರು ನಟಿಸಿದ್ದರು. ಚಿತ್ರರಂಗದಲ್ಲಿ ತಾಯಿಯಾಗಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದ ಇವರು “ಮನೆತನ” ಎಂಬ ಕನ್ನಡ ದೈನಂದಿನ ಧಾರಾವಾಹಿಯಲ್ಲಿಯೂ ಕಾಣಿಸಿಕೊಂಡಿದ್ದರು. ೧೯೯೪ರಲ್ಲಿ ರಸ್ತೆ ಅಪಘಾತವೊಂದರಲ್ಲಿ ತಮ್ಮ ಎಡಗೈಯನ್ನು ಕಳೆದು ಕೊಂಡಿದ್ದರು. ಪಾಂಡುರಂಗನ ಭಕ್ತೆಯಾಗಿದ್ದ ಪಂಡರೀಬಾಯಿಯವರು ಚೆನ್ನೈನಲ್ಲಿ ಪಾಂಡುರಂಗನ ದೇಗುಲವನ್ನು ಕಟ್ಟಿಸಿದ್ದರು. ತಮ್ಮ ಕೊನೆಗಾಲದಲ್ಲಿ ಅನಾರೋಗ್ಯದಿಂದ ಬಳಲಿದ ಪಂಡರೀಬಾಯಿಯವರು ತಮ್ಮ ೭೩ ನೇ ವಯಸ್ಸಿನಲ್ಲಿ (ಜನವರಿ ೨೯, ೨೦೦೩) ಚೆನ್ನೈನಲ್ಲಿ ನಿಧನರಾದರು.
“ನಮ್ಮ ಮಕ್ಕಳು”, “ಬೆಳ್ಳಿ ಮೋಡ” ಚಿತ್ರಗಳ ಅಭಿನಯಕ್ಕಾಗಿ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ.
ಸಿನಿಮಾ ರಂಗದ ಶ್ರೇಷ್ಠ ಸಾಧನೆಗಾಗಿ ಪ್ರತಿಷ್ಠಿತ ಡಾ.ರಾಜ್ ಕುಮಾರ್ ಪ್ರಶಸ್ತಿ ಸಿಕ್ಕಿತ್ತು.
ಧನ್ಯವಾದಗಳು.
купить в абакане диплом пту
[url=https://vk.com/podslushanomoskwa]Наш город Москва[/url] – Время в Москве, Метро Москвы
1с бухгалтерия облако цена доступ в облако 1с
консультация адвоката консультация юриста 24 часа
Нужен вентилируемый фасад: подсистема для вентилируемого фасада купить
Нужны пластиковые окна: пластиковые окна алматы
nyc shipping ny delivery
new york cargo nyc package delivery service
оценка предприятий оценка компании
vps hosting server rental vps host
ширма перегородка столик косметолога на колесиках
цена куба бетона заказать бетон
зайти на сайт [url=https://poker-agent.org]Poker agent[/url]