ವನಿಲಾ ಮೆಕ್ಸಿಕೋಗೆ ಸ್ಥಳೀಯವಾದ ವನಿಲಾ ಪಂಗಡದ ಸೀತಾಳೆ ಸಸ್ಯಗಳಿಂದ ಪಡೆಯಲಾದ ಒಂದು ರುಚಿಕಾರಕ. ವ್ಯುತ್ಪತ್ತಿಯಲ್ಲಿ, ವನಿಲಾ ಪದವು ಸ್ಪೇಯ್ನ್‌ನ ಭಾಷೆಯ ಶಬ್ದವಾದ “ವೈನಿಯಾ”, (ಸಣ್ಣ ಕೋಡು) ದಿಂದ ಉದ್ಭವಿಸಿದೆ. ಮೂಲವಾಗಿ ಕಲಂಬಸ್‌ನಿಗಿಂತ ಮುಂಚಿನ ಮೆಸೋಅಮೇರಿಕಾದ ಜನರಿಂದ ಬೇಸಾಯಮಾಡಲಾಗುತ್ತಿದೆ. ಇದು, ಮನ್ನಣೆ ಪಡೆದಿರುವ ಸ್ಪೇಯ್ನ್‌ನ ಸಾಹಸಿ ಅರ್ನಾನ್ ಕೋರ್ಟೀಸ್‍ನಿಂದ ೧೫೨೦ರ ದಶಕದಲ್ಲಿ ಸಂಬಾರ ಪದಾರ್ಥ ಮತ್ತು ಚಾಕಲಿಟ್ ಎರಡೂ ಯೂರಪ್‌ಗೆ ಪರಿಚಯಿಸಲ್ಪಟ್ಟಿತು. ವೆನಿಲಾ ವಿವಿಧ ಆಹಾರ ಪದಾರ್ಥಗಳನ್ನು ತಯಾರಿಸುವಾಗ ಬಳಸುವ ಒಂದು ಸ್ವಾದಯುಕ್ತ ಪದಾರ್ಥ. ವೆನಿಲಾ ಕಾಯಿಗಳಿಂದ ಆಹಾರ ಪದಾರ್ಥಗಳಿಗೆ ಬೇಕಾಗುವ ಸುಗಂಧ ಭರಿತವಾದ ಅಂಶವನ್ನು ಸೇರಿಸಲಾಗುತ್ತದೆ. ಕೃಷಿ ಜಗತ್ತಿನಲ್ಲಿ ವೆನಿಲಾ ಬೆಳೆಯು ಕೂಡ ಒಂದು ಪ್ರಮುಖ ಹಾಗೂ ಲಾಭದಾಯಕ ಬೆಳೆ ಎನಿಸಿಕೊಂಡಿದೆ. ವೆನಿಲಾ ಎಂದು ಕರೆಸಿಕೊಳ್ಳುವ ವಿಭಿನ್ನ ಬಳ್ಳಿ ಇದಾಗಿದೆ. ತೆಂಗು ಹಲಸು ಮಾವು ಹೀಗೆ ಯಾವುದಾದರೂ ಒಂದು ಗಿಡದ ನೆರವಿನಿಂದ ಹಬ್ಬಿ ವೆನಿಲಾ ಕಾಯಿಗಳನ್ನು ಬಿಡುತ್ತದೆ. ಸಾಮಾನ್ಯವಾಗಿ ನೋಡಲು ಗಂಟುಗಂಟಾದ ವಿನ್ಯಾಸವನ್ನು ಹೊಂದಿರುವ ಈ ಬಳ್ಳಿಯನ್ನು ಆರಂಭದಲ್ಲಿ ತಂಪಾಗಿರುವ ಪ್ರದೇಶದಲ್ಲಿ ಎರಡು ಗಂಟಿನಷ್ಟು ಆಳಕ್ಕೆ ಭೂಮಿಯ ಒಳಗೆ ನಡಬೇಕು. ನಂತರ ಯಾವುದಾದರೂ ಮರಕ್ಕೆ ಹಬ್ಬಿಸಿ ಬಿಡಬೇಕು. ಹೀಗೆ ಹಬ್ಬಿಸಿದ ಬಳಿಕ ಕೆಲವೆ ವಾರಗಳಲ್ಲಿ ಈ ಬಳ್ಳಿ ಬೆಳವಣಿಗೆಯನ್ನು ಪ್ರಾರಂಭಿಸುತ್ತದೆ. ಮರಗಳಿಗೆ ತನ್ನ ಬೇರುಗಳನ್ನು ಪಸರಿಸುತ್ತಾ ಬೆಳೆಯುವ ಬಳ್ಳಿ ಸುಮಾರು ಆರರಿಂದ ಏಳು ಅಡಿಗಳಷ್ಟು ಬೆಳೆದ ನಂತರ ಕೃಷಿಕರು ನಿಧಾನವಾಗಿ ಬಳ್ಳಿಯನ್ನು ಬಗ್ಗಿಸಿ ನೆಲದಿಂದ ಎರಡು ಅಡಿಗಳಷ್ಟು ಜಾಗ ಬಿಟ್ಟು ಬಳ್ಳಿಯನ್ನು ಕತ್ತರಿಸುತ್ತಾರೆ. ಹೀಗೆ ಕತ್ತರಿಸಿದ ಬಳಿಕವಷ್ಟೇ ಈ ಬಳ್ಳಿ ಹೂಗಳನ್ನು ಬಿಡಲು ಪ್ರಾರಂಭವಾಗುತ್ತದೆ.
ಒಂದು ವೇಳೆ ಈ ಪ್ರಕ್ರಿಯೆ ಮಾಡದಿದ್ದರೆ ಬಳಿ ಕೇವಲ ಮರಕ್ಕೆ ಅಂಟಿಕೊಂಡು ಮೇಲಕ್ಕೆ ಬೆಳೆಯುತ್ತ ಹೋಗುತ್ತದೆ. ಇದೊಂದು ವಾರ್ಷಿಕ ಬೆಳೆಯಾಗಿದ್ದು, ಒಂದು ವರ್ಷಕ್ಕೊಮ್ಮೆ ಫಸಲನ್ನು ನೀಡುತ್ತದೆ. ಇದರಲ್ಲಿ ಸುಮಾರು ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ ಹೂಬಿಡುವ ಪ್ರಕ್ರಿಯೆ ಆರಂಭವಾಗುತ್ತದೆ. ಒಂದೊಂದು ಗೊಂಚಲಿನಲ್ಲಿ ದಿನಕ್ಕೆ ಒಂದೊಂದರಂತೆ ಮಾತ್ರ ಹೂ ಬಿಡುತ್ತದೆ. ಸಾಮಾನ್ಯವಾಗಿ ನೋಡಲು ಈ ಹೂವು ಸಂಪಿಗೆ ಹೂವನ್ನು ಹೋಲುತ್ತದೆ. ಬೇರೆ ಜಾತಿಯ ಹೂವುಗಳಿಗಿಂತ ಈ ಹೂಗಳು ಬಹಳಷ್ಟು ವಿಭಿನ್ನವಾಗಿದೆ.

ಬೇರೆ ಜಾತಿಯ ಹೂಗಳಲ್ಲಿ ಸರ್ವೇಸಾಮಾನ್ಯವಾಗಿ ಪರಾಗಸ್ಪರ್ಶ ಕ್ರಿಯೆ ಎನ್ನುವಂತದ್ದು ದುಂಬಿಗಳಿಂದ ಅಥವಾ ಕೀಟಗಳಿಂದ ನಡೆಯುತ್ತದೆ. ಆದರೆ ಈ ಹೂವಿನ ಪರಾಗಸ್ಪರ್ಶ ಪ್ರಕ್ರಿಯೆಯನ್ನು ಕೃಷಿಕರೆ ಮಾಡಬೇಕು. ಅಂದರೆ ಪ್ರತಿನಿತ್ಯ ಒಂದೊಂದು ಹೂ ಬಿಟ್ಟಾಗಲೂ ಚೂಪಾದ ಕಡ್ಡಿಯನ್ನು ಬಳಸಿ ಹೂವಿನ ಎಸಲನ್ನು ಸೀಳಿ ಎಸಳಿನ ಒಳಗಡೆ ಇರುವ ಮಕರಂದವನ್ನು ನಾಲಿಗೆಯಂತಹಾ ವಿನ್ಯಾಸದ ಸಣ್ಣ ಎಸಳಿನೊಂದಿಗೆ ಜೋಡಿಸಬೇಕು. ಹೀಗೆ ಒಂದು ನಿರ್ದಿಷ್ಟ ಪ್ರಕ್ರಿಯೆಯಲ್ಲಿ ಮಾಡಿದಾಗ ಮಾತ್ರ ಯಶಸ್ವಿಯಾಗಿ ಹೂವು ಪರಾಗಸ್ಪರ್ಶಗೊಳ್ಳುತ್ತದೆ. ಒಂದು ವೇಳೆ ಪರಾಗಸ್ಪರ್ಶ ಕ್ರಿಯೆ ಸರಿಯಾಗದ ಸಂದರ್ಭದಲ್ಲಿ ಎರಡರಿಂದ ಮೂರು ದಿನಗಳಲ್ಲಿ ಹೂವು ಬಳ್ಳಿಯಿಂದ ಬೇರ್ಪಟ್ಟು ಬೀಳುತ್ತದೆ. ಈ ಹೂವಿನ ಪರಾಗಸ್ಪರ್ಶಕ್ರಿಯೆ ಸಾಮಾನ್ಯವಾಗಿ ಬೆಳಿಗ್ಗೆ 9 ರಿಂದ 10 ಗಂಟೆಯ ಅವಧಿಯಲ್ಲಿ ಮಾಡಬೇಕಾಗುತ್ತದೆ. ವೆನಿಲಾ ಬಳ್ಳಿಯಲ್ಲಿ ಹಲವು ಗೊಂಚಲುಗಳಿದ್ದು ಪ್ರತಿಯೊಂದು ಗೊಂಚಲಿನಲ್ಲಿ ಏಳರಿಂದ ಎಂಟು ಹೂಗಳು ಇರುತ್ತವೆ. ಆದರೆ ಕೃಷಿಕರು ಆರರಿಂದ ಏಳು ಹೂಗಳನ್ನು ಮಾತ್ರ ಪರಾಗಸ್ಪರ್ಶ ಕ್ರಿಯೆಯಲ್ಲಿ ತೊಡಗಿಸುತ್ತಾರೆ. ಕಾರಣ ಎಲ್ಲಾ ಹೂಗಳ ಪರಾಗಸ್ಪರ್ಶ ಮಾಡಿದಾಗ ಇಡೀ ವೆನಿಲಾ ಕಾಯಿಗಳ ಗಾತ್ರ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.
ವರ್ಷದ ಏಪ್ರಿಲ್ ಮೇ ತಿಂಗಳಿನಲ್ಲಿ ಈ ವೆನಿಲ ಕಾಯಿಗಳು ಬೆಳೆಯುತ್ತದೆ. ಈ ಕಾಯಿಗಳು ಸಂಪೂರ್ಣ ಬಲಿತು ಒಡೆಯುವ ಮುನ್ನವೇ ರೈತರು ಈ ಕಾಯಿಯನ್ನು ಕೊಯ್ದು ಬೇರೆ ಬೇರೆ ಗ್ರೇಡ್‍ಗಳಾಗಿ ಮಾಡಿ ಮಾರುಕಟ್ಟೆಗೆ ಕಳುಹಿಸುತ್ತಾರೆ. ಗ್ರೇಡ್‍ಗಳನ್ನು ಮಾಡುವಾಗಲೂ ಕೆಲವು ನಿಯಮಗಳನ್ನು ಅನುಸರಿಸಲಾಗುತ್ತದೆ. ಒಟ್ಟು ಎ,ಬಿ,ಸಿ ಎಂಬಂತೆ ೩ ಗ್ರೇಡ್‍ಗಳಾಗಿ ಕಾಯಿಗಳನ್ನು ಬೇರ್ಪಡಿಸಲಾಗುತ್ತದೆ. ಎಂಟರಿಂದ ಒಂಬತ್ತು ಇಂಚು ಉದ್ದ ಇರುವ ಕಾಯಿಗಳನ್ನು ಹಾಗೂ ಆಯಾ ಗಾತ್ರಕ್ಕನುಗುಣವಾಗಿ ಎ, ಬಿ ಹಾಗೂ ಸಿ ಗ್ರೇಡ್‍ಗಳಾಗಿ ಮಾಡಲಾಗುತ್ತದೆ. ಮಾರುಕಟ್ಟೆಯಲ್ಲಿ ಒಂದು ಕಾಲದಲ್ಲಿ ಅತ್ಯುತ್ತಮ ಬೆಲೆ ಇದ್ದ ಈ ವೆನಿಲಾ ಒಂದು ಸಂದರ್ಭದಲ್ಲಿ ಬೆಲೆ ಕಳೆದುಕೊಂಡಿತ್ತು, ಮತ್ತೆ ಇದೀಗ ಬೆಲೆಯನ್ನು ನಿದಾನವಾಗಿ ಪಡೆದುಕೊಳ್ಳುತ್ತಿದೆ.

ಸದ್ಯಕ್ಕೆ ಅತ್ಯುತ್ತಮ ವೆನಿಲಾ ಹಸಿ ಕಾಯಿಗಳಿಗೆ ಪ್ರತಿ ಕೆಜಿಗೆ 4000 ರೂ ಬೆಲೆ ಇದೆ. ಇನ್ನು ಸಂಸ್ಕರಣ ವಿಧಾನಗಳನ್ನು ಬಳಸಿ ಸಂಸ್ಕರಿಸಿ ಒಣಗಿಸಿ ನೀಡಲಾಗುವ ಕಾಯಿಗಳಿಗೆ 15000 ಅಷ್ಟು ಬೆಲೆ ಸಿಗುತ್ತದೆ.
ಮೂಲತಹ ವೆನಿಲಾವನ್ನು ಆಹಾರ ಉತ್ಪನ್ನಗಳ ಸ್ವಾದಕ್ಕೆ ಬಳಸಲಾಗುತ್ತಿದೆ. ಈ ಕಾಯಿಗಳ ಸೇವನೆ ದೇಹಕ್ಕೆ ಸಾಕಷ್ಟು ಪೋಷಕಾಂಶವನ್ನು ಒದಗಿಸುತ್ತದೆ. ಹೆಚ್ಚಾಗಿ ರಾಸಾಯನಿಕ ರಹಿತವಾಗಿ ಸಗಣಿ ನೀರು ಸೇರಿದಂತೆ ಇತ್ಯಾದಿ ಸಾವಯವ ಪದ್ಧತಿಯಲ್ಲಿ ಬೆಳೆಸಲಾಗುತ್ತದೆ. ಕಾರಣ ರಾಸಾಯನಿಕಗಳ ಬಳಕೆಯಿಂದ ಅದರ ಸ್ವಾದ ಹಾಗೂ ರುಚಿಯಲ್ಲಿ ಬದಲಾವಣೆಯಾಗುತ್ತದೆ. ನೋಡಲು ಹಚ್ಚ ಹಸಿರಾಗಿ ತನ್ನ ಕಾಯಿಗಳಲ್ಲಿ ಅತ್ಯದ್ಭುತ ಸ್ವಾದವನ್ನು ಹೊಂದಿರುವ ಈ ಬಳ್ಳಿಯ ಎಲೆಯನ್ನ ದೇಹಕ್ಕೆ ತಾಗಿಸಿಕೊಂಡರೆ ವಿಪರೀತ ತುರಿಕೆ ಶುರುವಾಗುವ ಸಾಧ್ಯತೆಗಳಿವೆ. ಹಾಗಾಗಿ ಎಚ್ಚರಿಕೆಯಿಂದ ಗಿಡಗಳನ್ನು ಬೆಳೆಸುತ್ತಾರೆ. ಮಾರುಕಟ್ಟೆಯಲ್ಲಿ ವೆನಿಲಾ ಬಳಸಿ ಐಸ್ ಕ್ರೀಂ, ಚಾಕಲೇಟು, ಟೀ ಸೇರಿದಂತೆ ವಿವಿಧ ರೀತಿಯಾದ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಇಂತಹಾ ಉತ್ಪನ್ನಗಳು ಅತ್ಯಂತ ಸ್ವದಯುಕ್ತ ಹಾಗೂ ಅತ್ಯಂತ ದುಬಾರಿ ಉತ್ಪನ್ನವಾಗಿ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.
ಧನ್ಯವಾದಗಳು.
Прогон сайта с использованием программы “Хрумер” – это способ автоматизированного продвижения ресурса в поисковых системах. Этот софт позволяет оптимизировать сайт с точки зрения SEO, повышая его видимость и рейтинг в выдаче поисковых систем.
Хрумер способен выполнять множество задач, таких как автоматическое размещение комментариев, создание форумных постов, а также генерацию большого количества обратных ссылок. Эти методы могут привести к быстрому увеличению посещаемости сайта, однако их надо использовать осторожно, так как неправильное применение может привести к санкциям со стороны поисковых систем.
[url=https://kwork.ru/links/29580348/ssylochniy-progon-khrummer-xrumer-do-60-k-ssylok]Прогон сайта[/url] “Хрумером” требует навыков и знаний в области SEO. Важно помнить, что качество контента и органичность ссылок играют важную роль в ранжировании. Применение Хрумера должно быть частью комплексной стратегии продвижения, а не единственным методом.
Важно также следить за изменениями в алгоритмах поисковых систем, чтобы адаптировать свою стратегию к новым требованиям. В итоге, прогон сайта “Хрумером” может быть полезным инструментом для SEO, но его использование должно быть осмотрительным и в соответствии с лучшими практиками.