in ,

ಸೀಗೆ ಕಾಯಿ ಗುಣಲಕ್ಷಣಗಳು ಮತ್ತು ಕೂದಲಿಗೆ ಸೀಗೆಯ ಉಪಯೋಗ

ಸೀಗೆ ಕಾಯಿ ಉಪಯೋಗ
ಸೀಗೆ ಕಾಯಿ ಉಪಯೋಗ

ಸೀಗೆ ಕಾಯಿ ಆಯುರ್ವೇದಿಕ ಔಷಧೀಯ ಸಸ್ಯಗಳಲ್ಲಿ ಒಂದು. ಇದನ್ನು ಕೃತಕ ಆಯುರ್ವೇದಿಕ ಶ್ಯಾಂಪೂಗಳಲ್ಲೂ ಸೇರಿಸಲಾಗುತ್ತದೆ. ಇದನ್ನು ಉಪಯೋಗಿಸಲು, ಬೀಜಕೋಶಗಳು, ಎಲೆಗಳು ಮತ್ತು ಸಸ್ಯದ ತೊಗಟೆಯನ್ನು ಒಣಗಿಸಿ ಪುಡಿ ಮಾಡಲಾಗುತ್ತದೆ, ಮತ್ತು ನಂತರ ಪೇಸ್ಟ್ ಆಗಿ ಮಾಡಲಾಗುತ್ತದೆ. ಈ ಸಾಂಪ್ರದಾಯಿಕ ಶ್ಯಾಂಪೂ ಸಲ್ಫೇಟ್ ಹೊಂದಿರುವ ಶ್ಯಾಂಪೂ ಉಂಟುಮಾಡುವಷ್ಟು ಸಾಮಾನ್ಯ ಪ್ರಮಾಣದ ಬುರುಗನ್ನು ಉಂಟುಮಾಡುವುದಿಲ್ಲವಾದರೂ, ಇದನ್ನು ಒಳ್ಳೆ ಸ್ವಚ್ಛಕವೆಂದು ಪರಿಗಣಿಸಲಾಗಿದೆ. ಇದು ಸೌಮ್ಯವಾಗಿದ್ದು, ಕೂದಲಿನಿಂದ ನೈಸರ್ಗಿಕ ತೈಲಗಳನ್ನು ತೆಗೆಯುವುದಿಲ್ಲ.

ಸೀಗೆಯು ಲೆಗ್ಯುಮಿನೋಸೀ ಕುಟುಂಬದ ವಿಮೋಸೀ ಉಪಕುಟುಂಬಕ್ಕೆ ಸೇರುವ ಅಕೇಸಿಯ ಕಾನ್ಸಿನ್ನ ಎಂಬ ಪ್ರಭೇದದ ಮುಳ್ಳಿನ ಮರಬಳ್ಳಿ. ಹಳ್ಳಿಗಳಲ್ಲಿ ಬೇಲಿಗಳಲ್ಲಿ ಬೆಳೆಸುತ್ತಾರೆ. ಕಾಡಿನ ಇನ್ನಿತರ ಮರಗಳ ಮೇಲೆ ಹಬ್ಬಿ ತುಂಬ ಹುಲುಸಾಗಿ ಬೆಳೆಯುವುದುಂಟು. ಇದರ ಕಾಯಿಯಿಂದ ಮಾಡುವ ಪುಡಿಯೇ ಸೀಗೆಪುಡಿ. ತಲೆಗೂದಲನ್ನು ತೊಳೆಯಲು ಪ್ರಾಚೀನ ಕಾಲದಿಂದಲೂ ವಿಶೇಷವಾಗಿ ಬಳಸುತ್ತಾ ಬಂದಿದ್ದಾರೆ. ಅಕೇಸಿಯ ಪೆನ್ನೇಟ ಎಂಬ ಇನ್ನೊಂದು ಪ್ರಭೇದವಿದೆ. ಇದು ಕಾಡು ಸೀಗೆಬಳ್ಳಿ.

ಸೀಗೆ ಕಾಯಿ ಗುಣಲಕ್ಷಣಗಳು ಮತ್ತು ಕೂದಲಿಗೆ ಸೀಗೆಯ ಉಪಯೋಗ
ಒಣಗಿರುವ ಸೀಗೆಕಾಯಿ

ತಲೆ ಕೂದಲಿಗೆ ಎಣ್ಣೆ ಹಚ್ಚಿಕೊಂಡು ಸೀಗೇಪುಡಿಯನ್ನು ಎರೆದು ಸ್ನಾನ ಮಾಡಿದರೆ ಜಿಡ್ಡಿನ ಲವಲೇಶವೂ ಇಲ್ಲದಂತೆ ತೊಳೆಯುವ ಅತ್ಯಂತ ಪ್ರಬಲ ಮಾರ್ಜಕ ಸೀಗೆ.

ನಮ್ಮ ಅತ್ಯಂತ ಪ್ರಾಚೀನ ಮಾರ್ಜಕವಾದ ಸೀಗೆ ನಮ್ಮ ಗ್ರಾಮೀಣ ಭಾಗದಲ್ಲಿ ಸಾಮಾನ್ಯವಾಗಿ ಬೇಲಿಗಳಲ್ಲಿ ಬಳ್ಳಿಗಳನ್ನು ಹಬ್ಬಿಸಿ ಬೆಳೆಯುತ್ತಾರೆ. ಅಕೇಸಿಯ ಪೆನ್ನೇಟ ಎನ್ನುವ ಹೆಸರಿನ ಸೀಗೆಯ ಮತ್ತೊಂದು ಜಾತಿಯಿದೆ ಇದು ಕಾಡು ಸೀಗೆ.

ಸೀಗೆಸೊಪ್ಪು ಅತ್ಯುತ್ತಮವಾದ ಡಯಟ್ ಆಹಾರ. ದೇಹದ ತೂಕ ಇಳಿಸಲು, ಕೊಬ್ಬ ಕರಗಿಸಲು, ಹಾಗೂ ಸುಸ್ತಾದಾಗ ಹೆಚ್ಚಿನ ಶಕ್ತಿ ನೀಡಲು ಇದರ ಸೊಪ್ಪಿನ ಪದಾರ್ಥಗಳು ಉಪಯೋಗಕಾರಿ. ಸೀಗೆ ಸೊಪ್ಪಿನ ಸಾರನ್ನು ವಾರದಲ್ಲಿ ಒಮ್ಮೆಯಾದರೂ ಮಾಡಿ ಬಳಸಿದರೆ ಸ್ಥೂಲಕಾಯ ಸಮಸ್ಯೆಯೇ ಎದುರಾಗುವುದಿಲ್ಲ. ನಮ್ಮ ಗ್ರಾಮೀಣ ಭಾಗಗಳಲ್ಲಿ ಬಾಣಂತಿಯರಿಗೆ ಸೀಗೆಸೊಪ್ಪಿನ ಸಾರು ಉಣಬಡಿಸಲಾಗುತ್ತದೆ. ನಿಯಮಿತವಾಗಿ ಸೀಗೆ ಸೊಪ್ಪಿನ ಸಾರು ಸೇವಿಸುವುದರಿಂದ ನಿದ್ರಾಹೀನತೆ ದೂರವಾಗುತ್ತದೆ. ಸೀಗೆಯನ್ನು ಪುಡಿ ಮಾಡಿ ತಲೆ ಕೂದಲಿನ ಜೊತೆ ದೇಹದ ಭಾಗಗಳಿಗೂ ಲೇಪಿಸಿಕೊಂಡು ಸ್ನಾನ ಮಾಡುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ.

ಕೂದಲು ಉದ್ದವಾಗಿ, ದಪ್ಪಗಾಗಿ, ಕಪ್ಪಾಗಿ ಬೆಳೆಯಬೇಕಾದರೆ ಪ್ರತಿದಿನ ಕೂದಲಿಗೆ ಸೀಗೆಕಾಯಿ ಬಳಸಿ ಸ್ನಾನ ಮಾಡಿ.

ಸೀಗೆ ಕಾಯಿಯಲ್ಲಿ ಕೂದಲು ತೊಳೆಯುವುದರಿಂದ ಶ್ಯಾಂಪುವಿನ ರೀತಿಯಲ್ಲಿ ಬಳಸಬಹುದು. ಇದು ಕೂದಲನ್ನು ಸೀಗೆ ಕಾಯಿಯಿಂದ ಪೋಷಿಸಲು ಸಹ ಸಾಧ್ಯವಾಗುತ್ತದೆ ಮತ್ತು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವುದಿಲ್ಲ.

ಸೀಗೆಬಳ್ಳಿಯಲ್ಲಿ ಸೀಗೆಕಾಯಿಗಳು ಗುಂಪು ಗುಂಪಾಗಿ ಬೆಳೆಯುತ್ತವೆ ಹಾಗೂ ಬಳ್ಳಿಗಳಲ್ಲಿ ನೇತಾಡುತಿರುತ್ತವೆ. ಸೀಗೆಕಾಯಿಯ ತೊಗಟೆ ದಪ್ಪವಾಗಿದ್ದು, ಕಂದು ಬಣ್ಣದಲ್ಲಿರುತ್ತದೆ. ಇದರ ಪಸಲು ವರ‍್ಶಕ್ಕೊಮ್ಮೆ ದೊರೆಯುತ್ತದೆ. ಸೀಗೆಕಾಯಿಯ ಬಳ್ಳಿಯು ಮುಳ್ಳುಗಳಿಂದ ಕೂಡಿರುವುದರಿಂದ ದೋಟಿಯ ಸಹಾಯದಿಂದ ಕೆಡವಿ ಇದನ್ನು ಸಂಗ್ರಹಿಸಲಾಗುತ್ತದೆ. ತದನಂತರ ಇದನ್ನು ಚೆನ್ನಾಗಿ ಒಣಗಿಸಿ ಕುಟ್ಟಿ ಪುಡಿಮಾಡಿ ಕೂದಲಿನ ಸಂರಕ್ಶಣೆಗೆ ಬಳಸಲಾಗುತ್ತದೆ. ಸೀಗೆಯ ಹೂಗಳು ನೋಡಲು ಬಿಳಿ ಮಿಶ್ರಿತ ಹಳದಿ ಬಣ್ಣದಿಂದ ಕೂಡಿರುತ್ತವೆ. ಇತ್ತೀಚೆಗೆ ಶಾಂಪೂವಿನ ಬಳಕೆ ಹೆಚ್ಛಾಗಿರುವುದರಿಂದ ಹಳ್ಳಿಗಳಲ್ಲಿ ಸೀಗೆಕಾಯಿಯ ಬೆಳೆಸುವುವಿಕೆ ಇಳಿಮುಕವಾಗಿದೆ.

ಸೀಗೆ ಕಾಯಿ-ರೀಥಾ-ಆಮ್ಲಾದ ಈ ಪುಡಿಯನ್ನು ಬಳಸುವ ಮೂಲಕ, ಕೂದಲಿನ ಬೆಳವಣಿಗೆಯು ವೇಗಗೊಳ್ಳುತ್ತದೆ. ಹೊಸ ಕೂದಲು ಬೆಳೆಯಲು ಪ್ರಾರಂಭಿಸುತ್ತದೆ. ಕೆಲವು ತಿಂಗಳುಗಳ ಕಾಲ ಈ ಶ್ಯಾಂಪೂವನ್ನು ನಿಯಮಿತವಾಗಿ ಬಳಸಿದರೆ, ಕೂದಲು ಬಿಳಿಯಾಗುವುದನ್ನು ನಿಲ್ಲಿಸುತ್ತದೆ ಮತ್ತು ಹೊಸ ಕೂದಲು ಸಹ ಸಂಪೂರ್ಣವಾಗಿ ಕಪ್ಪು ಬಣ್ಣಕ್ಕೆ ಬರುತ್ತದೆ.

ಸೀಗೆ ಕಾಯಿ ಗುಣಲಕ್ಷಣಗಳು ಮತ್ತು ಕೂದಲಿಗೆ ಸೀಗೆಯ ಉಪಯೋಗ
ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳ ಬೇಕು

ಸೀಗೆ ಕಾಯಿ ಶ್ಯಾಂಪೂ ಬಳಸುವಾಗ, ಕೂದಲು ರಾಸಾಯನಿಕ ಆಧಾರಿತ ಶ್ಯಾಂಪೂಗಳಂತೆ ಭಾಸವಾಗುವುದಿಲ್ಲ. ಬದಲಿಗೆ ಕೂದಲು ದಪ್ಪ ದಪ್ಪಗೆ ಜಿಡ್ಡಿನಂತೆ ಭಾಸವಾಗುತ್ತದೆ. ಹಾಗೆಂದ ಮಾತ್ರಕ್ಕೆ ಕೂದಲನ್ನು ಸರಿಯಾಗಿ ಸ್ವಚ್ಛಗೊಳಿಸಿಲ್ಲ ಎಂದಲ್ಲ. ಬದಲಿಗೆ ಕೂದಲನ್ನು ನೈಸರ್ಗಿಕ ರೀತಿಯಲ್ಲಿ ಮತ್ತು ಆಳವಾಗಿ ಸಂಪೂರ್ಣವಾಗಿ ಸ್ವಚ್ಛ ಗೊಳಿಸಲಾಗುತ್ತದೆ.

ಸೀಗೆಯಲ್ಲಿ ಮತ್ತೊಂದು ಬಗೆಯ ಸೀಗೆಬಳ್ಳಿಯೂ ಇದ್ದು, ಈ ಬಳ್ಳಿಯನ್ನು ಸೀಗೆಸೊಪ್ಪು ಅತವಾ ಸೀಗೆ ಚಿಗುರಿಗಾಗಿ ಬೆಳೆಸಲಾಗುವುದು. ಇದು ಒಂದು ಬಗೆಯ ಸುವಾಸನೆಯಿಂದ ಕೂಡಿರುತ್ತದೆ ಹಾಗೂ ಎರಡೂ ಬಗೆಯ ಬಳ್ಳಿಗಳ ಎಲೆಗಳು ನೋಡಲು ಒಂದೇ ತರಹ ಇದ್ದು, ಹುಣಸೆ ಮರದ ಎಲೆಯಂತೆ ಕಾಣಸಿಗುತ್ತದೆ. ಸೀಗೆಕಾಯಿಯ ಬಳ್ಳಿಗಿಂತ ಸೀಗೆ ಸೊಪ್ಪಿನ ಬಳ್ಳಿಯು ನೋಡಲು ಚಿಕ್ಕದಾಗಿರುತ್ತದೆ. ಈ ವಾಸನೆಬರಿತ ಸೀಗೆಸೊಪ್ಪು ಆಯುರ‍್ವೇದೀಯ ಗುಣಗಳನ್ನು ಕೂಡ ಹೊಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಸೊಪ್ಪನ್ನು ಬಳಸಿ ಸಾಂಬಾರು ಮಾಡಲಾಗುವುದು. ಸೀಗೆಯು ತಿನ್ನಲೂ ತುಂಬಾ ರುಚಿಕರ ಹಾಗೂ ರಕ್ತ ಶುದ್ದಿ ಮಾಡುವಲ್ಲಿ ಬಹಳ ಮುಕ್ಯ ಪಾತ್ರವಹಿಸುತ್ತದೆ. ಸೀಗೆ ಸೊಪ್ಪು ಹೆಚ್ಚಾಗಿ ಕಾಡುಗಳಲ್ಲಿ ಕಂಡುಬರುತ್ತದೆ ಹಾಗೂ ಇದನ್ನು ಒಂದು ಔಷಧೀಯ ಸಸ್ಯವೆಂದು ಹೇಳಲಾಗುವುದು.

ರೋಸ್ ವಾಟರ್ ನೊಂದಿಗೆ ಬೆರೆಸಿ ಬಳಸಬಹುದು

ಸಾಮಾನ್ಯ ನೀರಿನ ಬದಲು, ಸೀಗೆ ಶ್ಯಾಂಪೂವನ್ನು ರೋಸ್ ವಾಟರ್ ನೊಂದಿಗೆ ಬೆರೆಸಿ ಹಚ್ಚಬಹುದು. ಕೂದಲನ್ನು ದಪ್ಪವಾಗಿಸಲು ಮತ್ತು ನೆತ್ತಿಯ ಚರ್ಮವನ್ನು ತಂಪಾಗಿಸಲು ರೋಸ್ ವಾಟರ್ ಸಹಕಾರಿಯಾಗಿದೆ. ಚರ್ಮದ ರಂಧ್ರಗಳನ್ನು ಸ್ವಚ್ಛಗೊಳಿಸಲು ಸಹ ಇದು ಸಹಾಯ ಮಾಡುತ್ತದೆ.

ಸೀಗೆ ಕಾಯಿ ಶ್ಯಾಂಪೂ ತಯಾರಿಸುವ ಸುಲಭ ವಿಧಾನ :

​ಬೇಕಾಗುವ ಸಾಮಾಗ್ರಿ :

*200 ಗ್ರಾಂ ಸೀಗೆ ಕಾಯಿ

*75 ಗ್ರಾಂ ಮೆಂತ್ಯ ಬೀಜಗಳು

*75ಗ್ರಾಂ ಸೋಪ್ ಕಾಯಿ

*30 ಗ್ರಾಂ ಒಣಗಿದ ನೆಲ್ಲಿಕಾಯಿ

*1 ಹಿಡಿ ಒಣಗಿದ ಕರಿಬೇವಿನ ಎಲೆಗಳು

*1 ಒಣಗಿದ ಬೆರಳೆಣಿಕೆಯ ಬೇವಿನ ಎಲೆಗಳು

ಮುಖದ ಕಾಂತಿ ಹೆಚ್ಚಿಸುವ ರೋಸ್ ಆಯಿಲ್‍

(ಪ್ರಮಾಣ ನಿಮ್ಮ ಲೆಕ್ಕ ನೀವು ಉಪಯೋಗಿಸಿ)

ಎಲ್ಲಾ ವಸ್ತುಗಳನ್ನು ಒಟ್ಟಿಗೆ ಬೆರೆಸಿ ಪುಡಿಮಾಡಿ. ತಯಾರಾದ ಪುಡಿಯನ್ನು ಜರಡಿ ಅಥವಾ ಗಾಳಿಯಾಡದ ಬಿಗಿಯಾದ ಜಾರ್‌ನಲ್ಲಿ ಸಂಗ್ರಹಿಸಿ. ಇದನ್ನು ಶ್ಯಾಂಪುವಿನ ರೀತಿ ಒಣ ಶ್ಯಾಂಪೂ ಸಿದ್ಧವಾಗಿದೆ.

ಕೂದಲನ್ನು ತೊಳೆಯಬೇಕಾದಾಗಲೆಲ್ಲಾ, ಈ ಸೀಗೆ ಕಾಯಿ ಶ್ಯಾಂಪೂ 3 ರಿಂದ 4 ಟೀ ಚಮಚಗಳನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಕರಗಿಸಿ. ಕೂದಲಿಗೆ ಹಚ್ಚಿ 10 ನಿಮಿಷಗಳ ಕಾಲ ಬಿಡಿ ನಂತರ ಕೂದಲನ್ನು ಶುದ್ಧ ನೀರಿನಿಂದ ತೊಳೆಯಿರಿ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

40 Comments

ಸಾವಿತ್ರಿಬಾಯಿ ಫುಲೆ ಜನ್ಮದಿನ

ಜನವರಿ ೩, ಲೇಡಿ ಟೀಚರ್” ಸಾವಿತ್ರಿಬಾಯಿ ಫುಲೆ ಜನ್ಮದಿನ

ಬೆಟ್ಟದಲ್ಲಿ ಇದ್ದಾನೆ ಭೈರವೇಶ್ವರ ಸ್ವಾಮಿ

ಎತ್ತಿನ ಭುಜದಂತೆ ಕಾಣುವ ಚಾರಣ ಬೆಟ್ಟದಲ್ಲಿ ಇದ್ದಾನೆ ಭೈರವೇಶ್ವರ ಸ್ವಾಮಿ