in

ಸುಂದರ ಗಿರಿಧಾಮ ಕುದುರೆಮುಖ

ಕುದುರೆಮುಖ
ಕುದುರೆಮುಖ

ಕುದುರೆಯ ಮುಖ’ದ ಹಾಗೆ ಕಾಣಿಸುವ ಪರ್ವತ ಶ್ರೇಣಿಯೇ ‘ಕುದುರೆ ಮುಖ’. ಈ ಸುಂದರ ಗಿರಿಧಾಮ, ಚಿಕ್ಕಮಗಳೂರು ಇಂದ ೯೫ ಕಿ.ಮೀ ದೂರದಲ್ಲಿದೆ. ಇಲ್ಲಿಂದ ‘ಅರಬ್ಬೀ ಸಮುದ್ರ’ ಕಾಣಿಸುತ್ತದೆ. ಈ ಪ್ರದೇಶದಲ್ಲಿ ವಿಶಾಲವಾದ ಹಾಗೂ ಸುಂದರವಾದ ಪರ್ವತ ಶ್ರೇಣಿಗಳು, ಗುಹೆಗಳು, ಕಂದಕ, ಹಳ್ಳಕೊಳ್ಳ ಮತ್ತು ಚಿಕ್ಕದೊಡ್ಡ ಬೆಟ್ಟಗಳಿಂದ ಕೂಡಿವೆ. ಕಿರಿದಾದ ಬೆಟ್ಟಗಳ ಕಾಡಿನ ಕವಲು ದಾರಿಯಲ್ಲಿ ನಡೆದು ಸಾಗಿದರೆ, ಪಕ್ಕದಲ್ಲಿ ಜುಳುಜುಳು ಹರಿಯುವ ಶುದ್ಧ ತಿಳಿನೀರಿನ ಝರಿಗಳು, ಎಲ್ಲೆಡೆ ಕಾಣುವ ಹಸಿರು ಹುಲ್ಲು ಗಿಡಮರಗಳು ಮತ್ತು ಚಿಲಿಪಿಲಿ ಕೂಗುವ ಪಕ್ಷಿ ಸಂಕುಲಗಳು. ಇನ್ನೂ ಕೆಲವು ಜಾಗಗಳು ‘ಪರ್ಯಟಕರ ಪುಸ್ತಕ’ಗಳಲ್ಲಿ ದಾಖಲಾಗದೆ ಇರುವ ಪರಿಸರಗಳೂ ಇವೆ. ಹೆಸರು ಗೊತ್ತಿಲ್ಲದ್ದ ಅದೆಷ್ಟೋ ಗಿಡಮರ ಬಳ್ಳಿಗಳು, ಹೂ-ಕಾಯಿಗಳು. ಬಣ್ಣ ಬಣ್ಣದ ನೆಲದ ಮಣ್ಣುಗಳು ಇಲ್ಲಿನ ವಿಶೇಷಗಳಲ್ಲೊಂದು.

ಕುದುರೆ ಮುಖ ಹೆಚ್ಚು ಬೆಳಕಿಗೆ ಬಂದದ್ದು ೧೯೭೬ ರ ನಂತರ, ೧೯೧೩ ರಲ್ಲಿ ‘ಮೈಸೂರಿನ ಭೂಶೋಧಕ, ಸಂಪತ್ ಅಯ್ಯಂಗಾರ್ ‘ಕುದುರೆ ಮುಖ ಬೆಟ್ಟ’ದಲ್ಲಿ ಕಬ್ಬಿಣದ ಅಂಶವಿರುವ ಅದಿರಿನ ಪತ್ತೆಹಚ್ಚಿದ್ದರು. ೪ ಮಿಲಿಯನ್ ಟನ್ ಅದಿರು ಸಿಗಬಹುದೆಂದು ಅಂದಾಜುಮಾಡಿದ್ದರು. ನ್ಯಾಷನಲ್ ಮಿನರಲ್ ಡೆವೆಲಪ್ ಮೆಂಟ್ ಕಾರ್ಪೊರೇಷನ್, ೧೯೬೫ ರಲ್ಲಿ ಉತ್ಖನನ ನಡೆಸಿ, ಪ್ರತಿವರ್ಷ ೨೫ ಮಿಲಿಯನ್ ಅದಿರು ತೆಗೆದರೂ ಮೋಸವಿಲ್ಲ ಎಂದು ವರದಿ ನೀಡಿತ್ತು. ೧೯೭೫ ರಲ್ಲಿ ಭಾರತ-ಇರಾನ್ ಮಧ್ಯೆ ಅದಿರು ರಫ್ತು ವ್ಯಾಪಾರ ಒಪ್ಪಂದಕ್ಕೆ ಸಹಿಹಾಕಲಾಗಿತ್ತು. ಮೈಸೂರು ಸರಕಾರದ ಸ್ವಾಮ್ಯದ ಭಾರಿ ಗಣಿ ಸಂಸ್ಥೆ ಕುದುರೆಮುಖ ಐರನ್ ಓರ್ ಲಿಮಿಟೆಡ್ ೧೯೭೬ ರ, ಏಪ್ರಿಲ್ ೨ ರಂದು ಅಸ್ತಿತ್ವಕ್ಕೆ ಬಂತು. ವಾರ್ಷಿಕ ೭೫ ಮಿಲಿಯನ್ ಕಬ್ಬಿಣದ ಅದಿರು ತೆಗೆಯುವ ಗುರಿಯಿಂದ ಸ್ಥಾಪಿತವಾದ ಕುದುರೆ ಮುಖ ಬೆಟ್ಟಶ್ರೇಣಿಗೆ ೪,೬೦೫ ಹೆಕ್ಟೇರ್ ಭೂಪ್ರದೇಶವನ್ನು ಗುತ್ತಿಗೆಯಾಗಿ ಪಡೆಯಿತು. ಸಂಪೂರ್ಣ ರಫ್ತಿಗೇ ಮೀಸಲಾಗಿದ್ದ ಕಂಪೆನಿ, ಅನೇಕ ಸಾವಿರಾರು ಚಿಕ್ಕ ಕೈಗಾ ರಿಕೆಗಳಿಗೆ ಮನೆಮಾಡಿಕೊಟ್ಟು ಅಲ್ಲಿನ ಜನರಿಗೆ ಉದ್ಯೋಗಾವಕಾಶ ಮಾಡಿಕೊಟ್ಟಿತು. ಗಣಿಗಾರಿಕೆ ಒಂದು ಉದ್ಯೋಗವಾಗಿ ನೆಲೆಯಾಗಿದೆ.

‘ಕುದುರೆಮುಖ ಅದಿರು ಸಂಸ್ಥೆ’ಯ ಮತ್ತೊಂದು ಮುಖ ಅನಾವರಣಗೊಂಡಿತು. ಪರಿಸರಕ್ಕೆ ಭಾರಿ ಪ್ರಮಾಣದಲ್ಲಿ ಹಾನಿ ಆಗುತ್ತಿರುವ ಅಂಶ ಪಶ್ಚಿಮ ಘಟ್ಟ ಉಳಿಸಿ ಆಂದೋಲನ ಮತ್ತಿತರ ಸಂಘಟನೆಗಳಿಂದ ಬೆಳಕಿಗೆ ಬಂತು. ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ಸಂಘರ್ಷ ಆರಂಭವಾಯಿತು. ‘ತುಂಗಭದ್ರ ನದಿ ಉಳಿಸಿ ಬ್ಯಾನರ್’ ಅಡಿ ಸ್ಥಳೀಯ ಗಿರಿಜನರೂ ಒಳಗೊಂಡಂತೆ ಸಂಘಟಿತ ಹೋರಾಟ ಜರುಗಿ ಗಣಿಗಾರಿಕೆ ವಹಿವಾಟು ಮುಚ್ಚುವಂತೆ ಪ್ರಬಲ ಒತ್ತಾಯ ಹೇರಿತು. ಇದೊಂದು ಐತಿಹಾಸಿಕ ಚಳುವಳಿ.

ಸುಂದರ ಗಿರಿಧಾಮ ಕುದುರೆಮುಖ
ಕುದುರೆ ಮುಖ ಬೆಟ್ಟ

ಗಣಿಗಾರಿಕೆ ಪಡೆದಿದ್ದ ೨೦ ವರ್ಷಗಳ ಗುತ್ತಿಗೆ ಅವಧಿ ೨೦೦೧ ರಲ್ಲಿ ಮುಗಿದು ಆದರೂ ಗಂಗಡಿಕಲ್ಲು ಪ್ರದೇಶಗಳಿಗೆ ಗಣಿಗಾರಿಕೆ ವಿಸ್ತರಿಸುವ ಹುನ್ನಾರವೂ ಸಾಗಿತ್ತು. ಪರಿಸರ ಮತ್ತು ವನ್ಯ ಜೀವಿಗಳ ಬದುಕಿನ ಮೇಲೆ ಆಗುತ್ತಿರುವ ಪರಿಣಾಮ ಮತ್ತಿತರ ಅಂಶಗಳನ್ನು ಗಮನಿಸಿದ ಸುಪ್ರೀಂ ಕೋರ್ಟ್ ಗಣಿಗಾರಿಕೆ ನಿಲ್ಲಿಸಲು ಆದೇಶ ನೀಡಿತು. ೨೦೦೫ ಡಿಸೆಂಬರ್ ೩೦ ರ ಮಧ್ಯರಾತ್ರಿ ಗಣಿಗಾರಿಕೆ ಸ್ಥಗಿತಗೊಂಡಿತು. ಗಣಿಗಾರಿಕೆ ನಿಂತದ್ದು ಪರಿಸರವಾದಿಗಳಿಗೆ ಸಮಾಧಾನ ತಂದಿದೆ. ಸ್ಥಳೀಯ ಜನ ಗಣಿಗಾರಿಕೆಯನ್ನೇ ತಮ್ಮ ಜೀವನಕ್ಕೆ ಅವಂಭಿಸಿದ್ದು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕುಟುಂಬಗಳು ನಲುಗಿವೆ.

ಸದಾ ಜನರಿಂದ ಜಿಗಿಜಿಗಿಸುತ್ತಿರುವ ಕುದು ಪ್ರದೇಶ ಈಗ ನೀರವತೆ ತಟ್ಟಿದೆ. ನೂರಾರು ಕಾರ್ಮಿಕರು ಜಾಗಕ್ಕೆ ಸಲಾಮುಹಾಕಿ ಬೇರೆಕಡೆ ಹೋದರೆ, ಅಲ್ಲೇ ಇದ್ದವರು ಕೆಲಸವಿಲ್ಲದೆ ಸಹಿಹಾಕಿ ಸಂಬಳ ಪಡೆಯುತ್ತಿದ್ದಾರೆ. ಭಾರಿಯಂತ್ರಗಳು ಮೌನವಾಗಿ ಬಿದ್ದಿವೆ. ಆದರೆ ಗಣಿಗಾರಿಕೆಯ ಆರ್ಭಟಕ್ಕೆ ಸಿಕ್ಕಿ ನಲುಗಿದ ಬೆಟ್ಟಗಳು ತಮ್ಮ ಮೊದಲಿನ ಸೌಂದರ್ಯವನ್ನು ಮತ್ತೆ ಪಡೆಯುತ್ತಿವೆ. ಪಶುಪಕ್ಷಿ ಪ್ರಾಣಿ ಸಂಕುಲ ವೃದ್ಧಿಸಿದೆ. ಗಣಿಗಾರಿಕೆ ಸ್ಥಗಿತಗೊಂಡು ಐದು ವರ್ಷಗಳಾದರೂ ಬದಲಿ ವ್ಯವಸ್ಥೆಯೊಂದನ್ನು ಕಲ್ಪಿಸಲು ಇನ್ನೂ ಸಾಧ್ಯವಾಗಿಲ್ಲ. ಕೋಟ್ಯಾಂತರ ರುಪಾಯಿ ಬೆಳೆಬಾಳುವ ದೈತ್ಯ ಯಂತ್ರಗಳನ್ನು ಸ್ಥಳಾಂತರಿಸಲು ತೆರೆದ ಜಾಗತಿಕ ಟೆಂಡರ್ ಗೆ ಮನ್ನಣೆ ಸಿಕ್ಕಿಲ್ಲ. ಯುನೆಸ್ಕೋ ತಂಡಾ ಭೇಟಿಯಿತ್ತು ‘ವಿಶ್ವಪಾರಂಪರಿಕ ಪಟ್ಟಿ’ಗೆ ಸೇರಿಸಲುಪ್ರಸ್ತಾವನೆ ಮಾಡಿದೆ. ಹುಲಿ ಸಂರಕ್ಷಣಾ ಪ್ರದೇಶವೆಂದು ಘೋಷಿಸುವ ಮತುಗಳೂ ಕೇಳಿಬರುತ್ತಿವೆ. ಅಪರೂಪದ ಶೋಲಾ ಅರಣ್ಯ, ಹುಲ್ಲುಗಾವಲಿನಿಂದ ಆವೃತವಾದ, ಕಣಿವೆ ಇಳಿಜಾರಿನಿಂದ ಕೂಡಿದ ದಟ್ಟ ವನರಾಶಿ.

ಪಶ್ಚಿಮ ಘಟ್ಟಗಳಿಗೆ ಹೊಂದಿಕೊಂಡಂತೆ ಇರುವ ಈ ‘ಗಂಗಮೂಲ’ ಅಥವಾ ‘ವರಹಾ ಪರ್ವತ ಸಾಲುಗಳು’,’ಅಭಯಾರಣ್ಯ’ಕ್ಕೆ ಅಂಟಿಕೊಂಡಂತೆ ಇವೆ. ಇವು ‘ಕುದುರೆ ಮುಖ’ ತೀರ ಹತ್ತಿರದಲ್ಲಿವೆ. ಸಮುದ್ರ ಮಟ್ಟಕ್ಕಿಂತಾ ಸುಮಾರು ೧೪೫೮ ಮೀ.ಎತ್ತರವಿರುವ ಈ ಗಿರಿಧಾಮದಲ್ಲಿ ಉದಯಿಸುವ ಮೂರು ನದಿಗಳು, ತುಂಗಾ, ಭದ್ರಾ, ಮತ್ತು ನೇತ್ರಾವತಿ ನದಿಗಳು. ಸಹಜವಾಗಿ ನದಿಯ ಅಕ್ಕಪಕ್ಕಗಳಲ್ಲಿ ದಟ್ಟವಾದ ಅರಣ್ಯವಿದೆ.

ಸುಂದರ ಗಿರಿಧಾಮ ಕುದುರೆಮುಖ
ಲಕ್ಯ ಡ್ಯಾಮ್ , ಹನುಮಾನ್ ಗುಂಡಿ ಜಲಪಾತ

ಲಕ್ಯ ಡ್ಯಾಮ್ :
ಇದನು ನಿರ್ಮಿಸಿದವರು,’ಕುದ್ರೆ ಮುಖ್ ಕಬ್ಬಿಣದ ಅದಿರಿನ ಕಂಪೆನಿ’ಯವರು. ಭದ್ರ ನದಿಯ ಸೇರುವ ‘ಉಪನದಿ ಲಕ್ಯ’ಗೆ ಅಡ್ಡವಾಗಿ ಕಟ್ಟಿರುವ ಅಣೆಕಟ್ಟು. ೧೦೦ ಮೀ ಎತ್ತರ, ಈ ನದಿಯಲ್ಲಿ ಗಣಿಗಾರಿಕೆಯ ಹಂತಗಳಲ್ಲಿ ಹೊರದೂಡುವ ತ್ಯಾಜ್ಯವಸ್ತುಗಳೇ ಹೆಚ್ಚಾಗಿರುತ್ತವೆ. ಅಕ್ಕಪಕ್ಕಗಳಲ್ಲಿ ಕಣ್ಣಿಗೆ ಹಬ್ಬದಂತೆ ತೋರುವ ಅಡವಿಯ ದೃಷ್ಯ. ಬೆಟ್ಟಗುಡ್ಡ ಕಣಿವೆಗಳು, ಶಿಖರ, ಘಟ್ಟಪ್ರದೇಶ ತಗ್ಗು, ನೋಡಲು ಬಂದ ಪರ್ಯಟಕರಿಗೆ ಮುದನೀಡುತ್ತವೆ.

ಹನುಮಾನ್ ಗುಂಡಿ ಜಲಪಾತ :
‘ಕುದುರೆಮುಖ’ ಪರ್ವತ ಶ್ರೇಣಿಗೆ ಅತಿ ಹತ್ತಿರದಲ್ಲೇ ಕಾಣಿಸುವ, ಬೆಟ್ಟದ ಕೆಳಗೆ ಇರುವ ಜಲಪಾತ, ಇಲ್ಲಿಯ ಅತಿ ಸುಂದರವಾದ ಸ್ಥಳಗಳಲ್ಲಿ ಒಂದು. ಇಲ್ಲಿ ಬೀಳುವ ಜಲಧಾರೆ ೧೦೦ ಅಡಿಗಿಂತ ಹೆಚ್ಚು ಎತ್ತರದಿಂದ ರಭಸದಿಂದ ಭೂಮಿಗಿಳಿಯುವ ನೋಟ ಬಂಡೆಗಳ ಮೇಲೆ ಸುರಿದು, ಮುಂದುವರೆಯುವ ಭಂಗಿ ಅತ್ಯಂತ ಸುಂದರವಾಗಿದೆ. ‘ಚಾರಣ ಪ್ರಿಯ’ರು ಜಲಪಾತದ ಹತ್ತಿರದವರೆಗೂ ಹೋಗಬಹುದು. ‘ಅರಣ್ಯ ಇಲಾಖೆ’ಯವರು, ಕೆಳಗಿಳಿಯಲು ಬಲವಾದ ಮೆಟ್ಟಿಲುಗಳನ್ನು ನಿರ್ಮಿಸಿದ್ದಾರೆ. ತಲಾ ೩೦ ರೂಪಾಯಿಗಳ ಟಿಕೀಟ್ ಪಡೆದು ಇಷ್ಟವುಳ್ಳವರು, ಇದರ ಸವಿಯನ್ನು ಅನುಭವಿಸಬಹುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಬಾಳೆ ಎಲೆಯ ಆರೋಗ್ಯ ಪ್ರಯೋಜನಗಳು

ಬಾಳೆ ಎಲೆಯ ಆರೋಗ್ಯ ಪ್ರಯೋಜನಗಳು

ಸೈಮಾ ಫಿಲ್ಮ್‌ ಅವಾರ್ಡ್

ಈ ಬಾರಿಯ ಸೈಮಾ ಫಿಲ್ಮ್‌ ಅವಾರ್ಡ್ ಪುನೀತ್ ಅವರ ಹೆಸರಿನಲ್ಲಿ ಬೆಂಗಳೂರಿನಲ್ಲಿ ನಡೆಯಿತು