in

ಈ ಬಾರಿಯ ಸೈಮಾ ಫಿಲ್ಮ್‌ ಅವಾರ್ಡ್ ಪುನೀತ್ ಅವರ ಹೆಸರಿನಲ್ಲಿ ಬೆಂಗಳೂರಿನಲ್ಲಿ ನಡೆಯಿತು

ಸೈಮಾ ಫಿಲ್ಮ್‌ ಅವಾರ್ಡ್
ಸೈಮಾ ಫಿಲ್ಮ್‌ ಅವಾರ್ಡ್

10ನೇ ವರ್ಷದ ಸೈಮಾ ಫಿಲ್ಮ್‌ ಅವಾರ್ಡ್ ಪ್ರಧಾನ ಸಮಾರಂಭ ಈ ಬಾರಿ ಬೆಂಗಳೂರಿನಲ್ಲಿ ನಡೆಸಿರುವುದು ವಿಶೇಷ. ದಕ್ಷಿಣ ಭಾರತದ ನಾಲ್ಕೂ ಚಿತ್ರರಂಗಗಳ ಸಿನಿಮಾಗಳಿಗೆ ಪ್ರಶಸ್ತಿ ನೀಡುವ ಈ ಕಾರ್ಯಕ್ರಮವನ್ನು ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಸೆ.10ರಂದು ನಡೆದ ಕಾರ್ಯಕ್ರಮದಲ್ಲಿ ತೆಲುಗು ಮತ್ತು ಕನ್ನಡ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ಅಲ್ಲು ಅರ್ಜುನ್ ನಟನೆಯ ‘ಪುಷ್ಪ’, ಕನ್ನಡದ ‘ರಾಬರ್ಟ್’ ಸಿನಿಮಾಗಳಿಗೆ ಜಾಸ್ತಿ ಪ್ರಶಸ್ತಿಗಳನ್ನು ಪಡೆದುಕೊಂಡಿವೆ.

ಡಾ. ಪುನೀತ್ ರಾಜ್‌ಕುಮಾರ್ ಅವರಿಗೆ ‘ಯುವರತ್ನ’ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಘೋಷಣೆ ಆಗಿದೆ. ಪುನೀತ್ ಅವರಿಗೆ ಬಂದ ಪ್ರಶಸ್ತಿಯನ್ನು ಕನ್ನಡ ಚಿತ್ರರಂಗದ ಪ್ರಮುಖರು ಸ್ವೀಕಾರ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಕಮಲ್ ಹಾಸನ್‌, ಅಲ್ಲು ಅರ್ಜುನ್‌, ಬಾಲಿವುಡ್ ನಟ ರಣ್‌ವೀರ್ ಸಿಂಗ್, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಯಶ್, ರಾಧಿಕಾ ಪಂಡಿತ್‌ ಡಾಲಿ ಧನಂಜಯ್, ರಾಣಾ ದಗ್ಗುಬಾಟಿ, ಶಾನ್ವಿ ಶ್ರೀವಾಸ್ತವ, ಮಾನ್ವಿತಾ ಕಾಮತ್, ಸುಧೀರ್ ಬಾಬು ಮುಂತಾದವರು ಆಗಮಿಸಿದ್ದರು.

ಸೈಮಾ-2022 (SIIMA) ಪ್ರಶಸ್ತಿ ಕಾರ್ಯಕ್ರಮ ಸೆಪ್ಟೆಂಬರ್ 10ರಂದು ಬೆಂಗಳೂರಿನಲ್ಲಿ ನಡೆದಿದೆ. ವಿವಿಧ ವಿಭಾಗದಲ್ಲಿ ಪ್ರಶಸ್ತಿ ನೀಡಲಾಗಿದೆ. 2021ರಲ್ಲಿ ತೆರೆಗೆ ಬಂದ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳನ್ನು ನಾನಾ ವಿಭಾಗಗಳಲ್ಲಿ ನಾಮಿನೇಷನ್ ಮಾಡಲಾಗಿತ್ತು. ಆ ಪೈಕಿ ಹಲವು ಸಿನಿಮಾಗಳು ಪ್ರಶಸ್ತಿ ಬಾಚಿಕೊಂಡಿವೆ.

ಇದು ಭಾರತದ ಅತ್ಯಂತ ಪ್ರಮುಖ ಮನರಂಜನಾ ಪ್ರಶಸ್ತಿ ಸಮಾರಂಭಗಳಲ್ಲಿ ಒಂದಾಗಿದೆ. ಇತರ ದಕ್ಷಿಣ ಭಾರತದ ಚಲನಚಿತ್ರ ಪ್ರಶಸ್ತಿಗಳಿಗಿಂತ ಭಿನ್ನವಾಗಿ, SIIMA ತನ್ನ ಸಮಾರಂಭವನ್ನು ವಿದೇಶದಲ್ಲಿ ನಡೆಸುತ್ತದೆ. ಆದಾಗ್ಯೂ, 2021 ರಲ್ಲಿ, COVID-19 ಸಾಂಕ್ರಾಮಿಕ ರೋಗದಿಂದಾಗಿ ಪ್ರಯಾಣದ ನಿರ್ಬಂಧಗಳ ಕಾರಣದಿಂದಾಗಿ SIIMA ಅನ್ನು ಭಾರತದ ಹೈದರಾಬಾದ್‌ನಲ್ಲಿ ನಡೆಸಲಾಯಿತು.

ಈ ಬಾರಿಯ ಸೈಮಾ ಫಿಲ್ಮ್‌ ಅವಾರ್ಡ್ ಪುನೀತ್ ಅವರ ಹೆಸರಿನಲ್ಲಿ ಬೆಂಗಳೂರಿನಲ್ಲಿ ನಡೆಯಿತು
ಸೈಮಾ-2021

ದಕ್ಷಿಣ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರ
SIIMA ಪ್ರಶಸ್ತಿಗಳು ಎಂದೂ ಕರೆಯಲ್ಪಡುವ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವೀ ಅವಾರ್ಡ್ಸ್, ದಕ್ಷಿಣ ಭಾರತೀಯ ಚಲನಚಿತ್ರೋದ್ಯಮದ ಕಲಾತ್ಮಕ ಮತ್ತು ತಾಂತ್ರಿಕ ಸಾಧನೆಗಳನ್ನು ಪುರಸ್ಕರಿಸುತ್ತದೆ. ಇದನ್ನು 2012 ರಲ್ಲಿ ವಿಷ್ಣು ವರ್ಧನ್ ಇಂದೂರಿ ಮತ್ತು ಬೃಂದಾ ಪ್ರಸಾದ್ ಅಡುಸಿಮಿಲ್ಲಿ ಅವರು ದಕ್ಷಿಣ ಭಾರತದ ಚಲನಚಿತ್ರೋದ್ಯಮಗಳಾದ್ಯಂತದ ಚಲನಚಿತ್ರ ತಯಾರಕರನ್ನು ಶ್ಲಾಘಿಸಲು ಪ್ರಾರಂಭಿಸಿದರು : ತಮಿಳು ಸಿನಿಮಾ, ತೆಲುಗು ಸಿನಿಮಾ, ಕನ್ನಡ ಸಿನಿಮಾ ಮತ್ತು ಮಲಯಾಳಂ ಸಿನಿಮಾ, ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ದಕ್ಷಿಣ ಭಾರತದ ಚಲನಚಿತ್ರಗಳನ್ನು ಪ್ರಚಾರ ಮಾಡಲು ವೇದಿಕೆಯನ್ನು ಒದಗಿಸಿತು.

ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಸಂಸ್ಥಾಪಕ ವಿಷ್ಣು ವರ್ಧನ್ ಇಂದೂರಿ ಅವರು 2012 ರಲ್ಲಿ ಸಮಾರಂಭವನ್ನು ಸ್ಥಾಪಿಸಿದರು. ಅದುಸುಮಿಲ್ಲಿ ಬೃಂದಾ ಪ್ರಸಾದ್ ಅವರು SIIMA ಅಧ್ಯಕ್ಷರಾಗಿದ್ದಾರೆ. ಪ್ರಶಸ್ತಿಗಳನ್ನು ಎರಡು ವಿಭಿನ್ನ ದಿನಗಳಲ್ಲಿ ಪ್ರತ್ಯೇಕ ಭಾಗಗಳಲ್ಲಿ ನೀಡಲಾಗುತ್ತದೆ. ಮೊದಲ ದಿನ ಅತ್ಯಂತ ಭರವಸೆಯ ಮುಂಬರುವ ದಕ್ಷಿಣ ಭಾರತದ ಚಲನಚಿತ್ರ ಕಲಾವಿದರನ್ನು ಜನರೇಷನ್ ನೆಕ್ಸ್ಟ್ ಅವಾರ್ಡ್ಸ್‌ನಲ್ಲಿ ಗೌರವಿಸಲಾಗುತ್ತದೆ, ಆದರೆ ಎರಡನೇ ದಿನವನ್ನು ಮುಖ್ಯ SIIMA ಪ್ರಶಸ್ತಿಗಳಿಗಾಗಿ ಕಾಯ್ದಿರಿಸಲಾಗಿದೆ. ಪ್ರಶಸ್ತಿ ನಾಮನಿರ್ದೇಶಿತರನ್ನು ಹಿರಿಯ ಕಲಾವಿದರು ಮತ್ತು ವೃತ್ತಿಪರರ ತೀರ್ಪುಗಾರರ ಆಯ್ಕೆ ಮಾಡಲಾಗುತ್ತದೆ ಮತ್ತು ಸಾರ್ವಜನಿಕ ಮತದಾನದ ಮೂಲಕ ಮತ ಹಾಕಲಾಗುತ್ತದೆ. ಮೊದಲ SIIMA ಸಮಾರಂಭವನ್ನು 21 ಮತ್ತು 22 ಜೂನ್ 2012 ರಂದು ದುಬೈ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ನಡೆಸಲಾಯಿತು.

ಕಿರುಚಿತ್ರಗಳ ತಯಾರಕರು ಮತ್ತು ನಟರನ್ನು ಗುರುತಿಸಲು SIIMA ಕಿರುಚಿತ್ರ ಪ್ರಶಸ್ತಿಗಳ ವರ್ಗವನ್ನು ಸೇರಿಸುವುದಾಗಿ 2017 ರಲ್ಲಿ ವಿಬ್ರಿ ಮೀಡಿಯಾ ಗ್ರೂಪ್ ಘೋಷಿಸಿದೆ.ಸೆಪ್ಟೆಂಬರ್ 2017 ರಲ್ಲಿ , ವೇದಿಕೆಯಲ್ಲಿ ಟ್ವಿಟರ್ ಎಮೋಜಿಯನ್ನು ಬಿಡುಗಡೆ ಮಾಡಲಾಯಿತು.

2021ರಲ್ಲಿ ತರುಣ್ ಸುಧೀರ್ ನಿರ್ದೇಶನದ ‘ರಾಬರ್ಟ್​’ ಸಿನಿಮಾ ತೆರೆಗೆ ಬಂತು. ಸುಧಾಕರ್ ರಾಜ್ ಅವರು ಈ ಚಿತ್ರದ ಸಿನಿಮಾಟೋಗ್ರಫಿಗೆ ‘ಬೆಸ್ಟ್ ಸಿನಿಮಾಟೋಗ್ರಫಿ’ (ಕನ್ನಡ) ಪ್ರಶಸ್ತಿ ಪಡೆದುಕೊಂಡಿದ್ದಾರೆ. ‘ನಿನ್ನ ಸನಿಹಕೆ’ ಸಿನಿಮಾದ ‘ನೀ ಪರಿಚಯ..’ ಹಾಡಿಗೆ ವಾಸುಕಿ ವೈಭವ್ ‘ಅತ್ಯುತ್ತಮ ಗೀತ ರಚನಕಾರ’ (ಕನ್ನಡ) ಪ್ರಶಸ್ತಿ ಬಾಚಿಕೊಂಡಿದ್ದಾರೆ.

ಈ ಬಾರಿಯ ಸೈಮಾ ಫಿಲ್ಮ್‌ ಅವಾರ್ಡ್ ಪುನೀತ್ ಅವರ ಹೆಸರಿನಲ್ಲಿ ಬೆಂಗಳೂರಿನಲ್ಲಿ ನಡೆಯಿತು
ಈ ಬಾರಿಯ ವಿಜೇತರು

ಈ ಬಾರಿಯ ವಿಜೇತರು :
*ಅತ್ಯುತ್ತಮ ನಟ (ಕನ್ನಡ): ಪುನೀತ್ ರಾಜ್​ಕುಮಾರ್ (ಯುವರತ್ನ)

*ಅತ್ಯುತ್ತಮ ನಟಿ (ಕನ್ನಡ): ಆಶಿಕಾ ರಂಗನಾಥ್ (ಮದಗಜ)

*ಅತ್ಯುತ್ತಮ ನಟಿ ಕ್ರಿಟಿಕ್ಸ್​ (ಕನ್ನಡ): ಅಮೃತಾ ಅಯ್ಯಂಗಾರ್ (ಬಡವ ರಾಸ್ಕಲ್)

*ಅತ್ಯುತ್ತಮ ಹಾಸ್ಯ ನಟ- ಚಿಕ್ಕಣ್ಣ (ಪೊಗರು)

*ಅತ್ಯುತ್ತಮ ನಿರ್ದೇಶನ- ತರುಣ್ ಸುಧೀರ್ (ರಾಬರ್ಟ್​)

*ಅತ್ಯುತ್ತಮ ಪೋಷಕ ನಟಿ: ಆರೋಹಿ ನಾರಾಯಣ್ (ದೃಶ್ಯ 2)

*ಅತ್ಯುತ್ತಮ ಪೋಷಕ ನಟ: ಪ್ರಮೋದ್​ (ರತ್ನನ್​ ಪ್ರಪಂಚ)

*ಅತ್ಯುತ್ತಮ ಹಿನ್ನೆಲೆ ಗಾಯಕಿ (ಕನ್ನಡ)- ಚೈತ್ರಾ ಆಚಾರ್ (‘ಗರುಡ ಗಮನ ವೃಷಭ ವಾಹನ’ ಚಿತ್ರದ ‘ಸೋಜುಗಾದ ಸೂಜುಮಲ್ಲಿಗೆ ಹಾಡು’)

*ಅತ್ಯುತ್ತಮ ಸಂಗೀತ ನಿರ್ದೇಶಕ: ಅರ್ಜುನ್ ಜನ್ಯ- ‘ರಾಬರ್ಟ್​’

ಈ ಬಾರಿಯ ವಿಶೇಷ ಎಂದರೆ ಪವರ್ ಸ್ಟಾರ್ ಡಾ.ಪುನೀತ್ ರಾಜ್‍ಕುಮಾರ್ ಹೆಸರಲ್ಲಿ ನಡೆಯುತ್ತಿದ್ದು, ಅಪ್ಪುಗೆ ಅರ್ಪಣೆಯಾಗಿದೆ.

ಪುನೀತ್ ರಾಜ್​ಕುಮಾರ್​ ಅಭಿನಯಿಸಿದ್ದ ಯುವರತ್ನ ಚಿತ್ರದ ನೀನಾದೇನಾ ಹಾಡಿಗೆ ಗಾಯಕ ಅರ್ಮಾನ್ ಮಲೀಕ್ ಗೆ ಸೈಮಾ ಪ್ರಶಸ್ತಿ ದೊರಕಿದೆ. ಈ ಪ್ರಶಸ್ತಿಯನ್ನು ಅವರು ಅಪ್ಪು ಅವರಿಗೆ ಡೆಡಿಕೇಟ್​ ಮಾಡಿದ್ದಾರೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕುದುರೆಮುಖ

ಸುಂದರ ಗಿರಿಧಾಮ ಕುದುರೆಮುಖ

ಕರ್ಪೂರ

ಕರ್ಪೂರ ತಯಾರಿಕೆ