ಭಾಷಾ ನೀತಿಯಲ್ಲಿ ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆಯ ಹಕ್ಕಿಗಾಗಿ ೧೯೮೦ರ ದಶಕದಲ್ಲಿ ನಡೆದ ಒಂದು ಚಳವಳಿ/ಆಂದೋಲನವೇ ಗೋಕಾಕ್ ಚಳವಳಿ ತ್ರಿಭಾಷಾ ಸೂತ್ರದಡಿಯಲ್ಲಿ ಕರ್ನಾಟಕದ ಶಾಲೆಗಳಲ್ಲಿ ಕನ್ನಡವನ್ನು ಮುಖ್ಯ ಭಾಷೆಯನ್ನಾಗಿ ಪರಿಗಣಿಸಬೇಕು ಎನ್ನವಂತಹ ಹಲವಾರು ಬೇಡಿಕೆಗಳನ್ನೊಳಗೊಂಡ ವರದಿಯೊಂದನ್ನು ಕನ್ನಡದ ಕವಿ ವಿ.ಕೃ ಗೋಕಾಕ್ ರು ಸಿದ್ಧಪಡಿಸಿ ಸಲ್ಲಿಸಿದ್ದರು, ಆದ ಕಾರಣ ಚಳವಳಿಗೆ ಅವರದೇ ಹೆಸರು ಬಂದಿದೆ. ವಿ.ಕೃ ಗೋಕಾಕ್ ತಂಡಕೆ ಹಲವಾರು ಭಾಷಾ ವ್ಯಾಸಂಗರವರು ವಿರೋಧ ಮಾಡಿದರು. ಈ ಸಮಯದಲ್ಲಿ ನಾಯಕತ್ವ ಹುಡುಕುವ ಸಂದರ್ಭ ಬಂದಿತು ಮತ್ತೆ ಆ ನಾಯಕ ಬೇರೆ ಯಾರು ಅಲ್ಲ ಅದು ಡಾ|| ರಾಜಕುಮಾರ್. ಕನ್ನಡ ಕವಿಗಳ ಕರೆಗೆ ಡಾ ||ರಾಜ್ ಒಪ್ಪಿದರು. ಡಾ|| ರಾಜಕುಮಾರ್ ಅವರು ಬೆಂಗಳೂರಿನಿಂದ ಬೆಳಗಾವಿವರೆಗೂ ಪ್ರಯಾಣ ಮಾಡಿದರು. ಡಾ|| ರಾಜ್ ಅವರು,”ಕನ್ನಡ ಭೂಮಿ ಮತ್ತು ಭಾಷೆಯ ಸಲುವಾಗಿ ಯಾವುದೇ ತ್ಯಾಗಕ್ಕೆ ನಾನು ಸಿದ್ಧ”. ಎಂದು ಹೇಳಿದರು”. ಡಾ. ರಾಜ್‌ಕುಮಾರ್ ಅವರು ಭಾರತದ ಏಕೈಕ ನಟರಾಗಿದ್ದು, ಯಾವುದೇ ವ್ಯಕ್ತಿ ಪ್ರಯೋಜನವಿಲ್ಲದೆ ಉಪಕ್ರಮ ಕೈಗೊಂಡಿದ್ದಾರೆ..
ಕರ್ನಾಟಕ 1956 ರಿಂದಲೇ ಶಾಲಾ ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಂಡಿತ್ತು. 1967 ರಲ್ಲಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಆಡಳಿತ ಭಾಷೆಗಳನ್ನಾಗಿ ಸಾಂವಿಧಾನಿಕ ತಿದ್ದುಪಡಿ ಮಾಡಿದರು. ಹಿಂದಿ ಪ್ರಾಬಲ್ಯವಿರದಿದ್ದ ಪ್ರದೇಶಗಳಲ್ಲಿ ಹಿಂದಿ ಭಾಷೆಗೆ ವಿರೋಧ ವ್ಯಕ್ತವಾದ್ದರಿಂದ ಹಿಂದಿಯೊಡನೆ ಇಂಗ್ಲಿಷ್ ಭಾಷೆಯನ್ನೂ ಸೇರಿಸಲಾಯಿತು. ಇದು ಮುಂದುವರೆದು ಶಾಲಾ ಶಿಕ್ಷಣದಲ್ಲಿಯೂ ಇಂಗ್ಲಿಷ್ ಹಾಗು ಹಿಂದಿ ಕಡ್ಡಾಯವೆನ್ನುವಂತಾಯಿತು. ಆದರೆ ಕರ್ನಾಟಕದಲ್ಲಿ ಅಧೀಕೃತ ಭಾಷೆಯೇ ಇರದಿರುವುದು ಶಾಲಾ ಶಿಕ್ಷಣದಲ್ಲಿ ಕನ್ನಡ ಭಾಷಾ ಅನುಷ್ಠಾನಕ್ಕೆ ಹಿನ್ನಡೆಯಾಗಲು ಮುಖ್ಯ ಕಾರಣವಾಯಿತು. ಕನ್ನಡವನ್ನು ಕರ್ನಾಟಕದಲ್ಲಿ ಅಧೀಕೃತ ಭಾಷೆಯಾಗಿಯೂ ಹಾಗು ಆಡಳಿತ ಭಾಷೆಯಾಗಿಯೂ ಘೋಷಿಸದ ಹೊರತು ಶಾಲಾ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಅನುಷ್ಠಾನ ಕಷ್ಟ ಸಾಧ್ಯವೆನ್ನುವುದು ಎಲ್ಲರಿಗೂ ತಿಳಿದ ವಿಚಾರವಾಗಿತ್ತು. ಆದ ಕಾರಣದಿಂದಲೇ ಕರ್ನಾಟಕದಲ್ಲಿ ಎಷ್ಟೋ ಶಾಲೆಗಳು ಕನ್ನಡ ಭಾಷೆಯೇ ಇಲ್ಲದಂತೆ ಸಂಸ್ಕೃತ ಮತ್ತಿತರ ಭಾಷೆಗಳನ್ನು ಕಲಿಸುತ್ತಿದ್ದವು. ಸಾಲದೆಂಬಂತೆ ಆ ಸಮಯದಲ್ಲಿ ಶಾಲಾ ಶಿಕ್ಷಣದಲ್ಲಿ ಸಂಸ್ಕೃತ ಎಲ್ಲ ಭಾಷೆಗಳಿಗಿಂತ ಹೆಚ್ಚಿನ ಬೇಡಿಕೆಯಲ್ಲಿದ್ದ ಭಾಷೆಯಾಗಿತ್ತು. ಎಷ್ಟೋ ಮಕ್ಕಳು ಕನ್ನಡವನ್ನು ಒಂದು ಭಾಷೆಯಾಗಿ ಅಭ್ಯಸಿಸದೆ ಶಾಲಾ ಶಿಕ್ಷಣವನ್ನು ಮುಗಿಸುತ್ತಿದ್ದರು. ಇವುಗಳಿಗೆಲ್ಲ ಇತಿಶ್ರೀ ಹಾಡಲು ಕನ್ನಡದ ಕವಿ ವಿ.ಕೃ ಗೋಕಾಕ್ ವಿಸ್ಮೃತ ವರದಿಯೊಂದನ್ನು ಸಿದ್ಧಪಡಿಸಿದರು. ಈ ವರದಿಯ ಅನುಷ್ಠಾನಕ್ಕಾಗಿ ನಡೆದ ಕನ್ನಡ ನೆಲದಲ್ಲಿ ಚಿರಸ್ಥಾಯಿಯಾಗಿ ಉಳಿಯುವ ಆ ಚಳವಳಿಯೇ ಗೋಕಾಕ್ ಚಳವಳಿ.
ಅತಿ ದೊಡ್ಡ ಮಟ್ಟದಲ್ಲಿ ನಡೆದ ಚಳವಳಿಯನ್ನು ಕನ್ನಡದ ರಾಜಕೀಯ ಪಕ್ಷಗಳು, ಕನ್ನಡ ಭೋದಕ ವರ್ಗದವರು, ವಿದ್ಯಾರ್ಥಿಗಳು, ಕವಿಗಳು, ನಾಟಕಕಾರರು,ಚಿತ್ರರಂಗದ ಗಣ್ಯರು, ವಿಮರ್ಶೆಕಾರರಾದಿಯಾಗಿ ಅನೇಕರು ಪ್ರೋತ್ಸಾಹಿಸಿದರು. ಹಲವಾರು ದಿನಗಳು ನಡೆದ ಬೃಹತ್ ಚಳವಳಿ ಸರ್ಕಾರವನ್ನು ಆಗ್ರಹಿಸುವುದರಲ್ಲಿ ಸಫಲವಾಯಿತು. ಅದರ ಫಲವಾಗಿ ಕರ್ನಾಟಕ ಸರ್ಕಾರ ಜುಲೈ 5, 1980 ರಲ್ಲಿ ಶಾಲಾ ಶಿಕ್ಷಣದ ಭಾಷಾ ನೀತಿ ಮರುಯೋಜನೆಗೆ ಸಮಿತಿಯೊಂದನ್ನು ರಚಿಸಿತು ಹಾಗು ವಿ.ಕೃ ಗೋಕಾಕರನ್ನೇ ಆ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸಿತು.
ಗೋಕಾಕ್ ವರದಿ ಕನ್ನಡ ಭಾಷೆಗೆ ಕರ್ನಾಟಕದಲ್ಲಿ ಪ್ರಥಮ ಭಾಷಾ ಸ್ಥಾನಮಾನ ಕೊಡುವ ವಿಚಾರಕ್ಕೆ ಕರ್ನಾಟಕ ಸರ್ಕಾರ ಸಮಿತಿಯೊಂದನ್ನು ರಚಿಸಿ ಆ ಸಮಿತಿಗೆ ಕರ್ನಾಟಕ ವಿಶ್ವ ವಿದ್ಯಾಲಯದ ಮಾಜಿ ಕುಲಪತಿಗಳು ಜ್ಞಾನಪೀಠ ಹಾಗು ಪದ್ಮಶ್ರೀ ಪ್ರಶಸ್ತಿ ಪಡೆದ ಹಿರಿಯ ಸಾಹಿತಿಯಾದ ಶ್ರೀ ವಿನಾಯಕ ಕೃಷ್ಣ ಗೋಕಾಕ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸುತ್ತದೆ. ಕನ್ನಡಕ್ಕೆ ಪ್ರಮುಖ ಸ್ಥಾನಮಾನ ಕೊಡುವುದರ ಜೊತೆಗೆ ಇನ್ನಿತರ ಭಾಷೆಗಳು ಎಂದರೆ ಕರ್ನಾಟಕ ರಾಜ್ಯದೊಳಗೆ ಚಾಲ್ತಿಯಲ್ಲಿದ್ದ ಭಾಷೆಗಳಾದ ಹಿಂದಿ, ಮರಾಠಿ, ತೆಲುಗು, ತಮಿಳು, ಇಂಗ್ಲಿಷ್ ಹಾಗು ಉರ್ದು ಭಾಷೆಗಳ ಸ್ಥಾನ ಮಾನವನ್ನು ನಿಗದಿಪಡಿಸಲು ಗೋಕಾಕ್ ಸಮಿತಿಯು ವಿಸ್ಮೃತ ವರದಿ ಸಿದ್ಧಪಡಿಸುತ್ತದೆ.
ಜಿ. ನಾರಾಯಣ ಕುಮಾರ್ ರವರಿಂದ ಗೋಕಾಕ್ ಚಳವಳಿಯ ಆರಂಭ :
ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ ನಂತರವೂ ಸರ್ಕಾರದಿಂದ ಯಾವುದೇ ಸಾಂವಿಧಾನಿಕ ತಿದ್ದುಪಡಿಗಳಾಗಲಿ ಅಥವಾ ಅಧಿಸೂಚನೆಗಳಾಗಲಿ ಹೊರಡಲಿಲ್ಲ. ಅದೇ ಸಮಯಕ್ಕೆ ಗೋಕಾಕ್ ವರದಿ ಜಾರಿಗೆ ಮೊಟ್ಟ ಮೊದಲು ಕನ್ನಡ ಚಳವಳಿ ನಾಯಕ ಜಿ.ನಾರಾಯಣ ಕುಮಾರ್ ಕಬ್ಬನ್ ಪಾರ್ಕಿನಿಂದ ವಿಧಾನಸೌಧದವರೆಗೆ ಪ್ರಟಿಭಟನಾ ಮೆರವಣಿಗೆ ಮೂಲಕ ಪ್ರಾರಂಭ ಮಾಡಿದರು. ವಿಧಾನಸೌಧ ಮುತ್ತಿಗೆ ಸಂಧರ್ಭದಲ್ಲಿ ಜಿ. ನಾರಾಯಣ ಕುಮಾರ್ ರವರ ಉಗ್ರ ಪ್ರತಿಭಟನೆಯನ್ನು ಎದುರಿಸಲು ಸರ್ಕಾರ ಲಾಠಿ ಚಾರ್ಜ್ ಮಾಡಿಸಿತು, ಇವೆಲ್ಲವುಗಳ ಪರಿಣಾಮ ಹಲವಾರು ಪ್ರತಿಭಟನೆಗಳು, ಆಗ್ರಹ ಜಾಥಾಗಳು ಕನ್ನಡ ಪರ ಸಂಘಟನೆಗಳಿಂದ ನಡೆದವು,ನಂತರ ಸಾಹಿತಿಗಳಾದ ಪ್ರೊ. ಚಂದ್ರಶೇಖರ ಪಾಟೀಲರಿಂದ ಧಾರವಾಡದಲ್ಲಿ ಪ್ರಾರಂಭವಾಯಿತು, ಚಳವಳಿಯನ್ನು ಬೃಹತ್ ಮಟ್ಟದಲ್ಲಿ ನಡೆಸಿ ಸರ್ಕಾರವನ್ನು ಸಮರ್ಪಕವಾಗಿ ಆಗ್ರಹಿಸಲು ನಿರ್ಧರಿಸಿದಾಗ ಚಳವಳಿಯಲ್ಲಿ ಕಾಣಿಸಿಕೊಂಡದ್ದೇ ಕನ್ನಡ ಚಿತ್ರರಂಗ. ಅಲ್ಲಿಯವರೆವಿಗೂ ಎಲ್ಲಿಯೂ ಜನರೊಡನೆ ಅಷ್ಟಾಗಿ ಬೆರೆಯದ ಚಿತ್ರರಂಗ ಕನ್ನಡದ ವಿಚಾರವಾಗಿ ಬೀದಿಗಿಳಿದು ಹೋರಾಡಲು ಶುರು ಮಾಡಿದ್ದು ಕನ್ನಡದ ವರನಟ ಡಾ.ರಾಜ್ ಕುಮಾರ್ ಚಳವಳಿಗೆ ಧುಮುಕಿದಾಗಲೇ.
ಗೋಕಾಕ್ ಚಳವಳಿಯಲ್ಲಿ ಡಾ.ರಾಜ್ ಕುಮಾರ್
ಕನ್ನಡ ಚಳವಳಿಗಾರರು, ಸಾಹಿತಿಗಳು ಹಾಗು ಕನ್ನಡ ಭೋದಕ ಸಿಬ್ಬಂದಿಗಳಿಂದ ನಡೆಯುತ್ತಿದ್ದ ಚಳವಳಿ ಅಷ್ಟಾಗಿ ಸುದ್ದಿಯೇನು ಮಾಡಿರಲಿಲ್ಲ. ಸರ್ಕಾರದೊಂದಿಗೆ ಪತ್ರಗಳ ಮುಖೇನ ಮಾತು ಕತೆ ನಡೆಯುತ್ತಿದ್ದರೂ ಚಳವಳಿಯ ಮೂಲ ಸ್ವರೂಪವೇನು ಎಂದು ಸಾಮಾನ್ಯ ಜನರಿಗೆ ಅರ್ಥವೇ ಆಗಿರಲಿಲ್ಲ. ಚಳವಳಿಯ ವಿಚಾರವಾಗಿ ಕೆಲವೇ ಕೆಲವರು ಕರಾರುವಕ್ಕಾದ ನಿಲುವು ಹೊಂದಿದ್ದರು, ಆದರೂ ಸಾಮಾನ್ಯ ಕನ್ನಡಿಗರಿಗೆ ವಿಚಾರ ತಿಳಿಯದ ಕಾರಣ ಚಳವಳಿ ವಿಫಲದ ಹಾದಿ ಹಿಡಿದಿತ್ತು. ಹೀಗಿರುವ ಚಳುವಳಿಗೆ ಉತ್ತಮ ರೂಪು ಕೊಡುವ, ಚಳುವಳಿಯ ಪ್ರಮಾಣವನ್ನು ಅಗಾಧವಾಗಿಸಬಲ್ಲ ವ್ಯಕ್ತಿತ್ವಕ್ಕಾಗಿ ಹುಡುಕಾಟ ಚರ್ಚೆಗಳು ಆರಂಭವಾದವು. ಆಗ ಕಣ್ಣಿಗೆ ಬಿದ್ದದ್ದೇ ಕನ್ನಡದ ಮೇರು ನಟ ಡಾ.ರಾಜ್ ಕುಮಾರ್. ಚಿತ್ರರಂಗದ ವತಿಯಿಂದ ಹೋರಾಟಕ್ಕಿಳಿದರೆ ಇಡೀ ಚಿತ್ರರಂಗವನ್ನು ಚಳುವಳಿಗೆ ತರುವುದು ಬಹು ಸುಲಭವೆನ್ನುವ ವಿಚಾರ ಕನ್ನಡ ಚಳವಳಿಗಾರರ ನಡುವೆ ಹರಿದಾಡಿತು.
ಆಗ್ಗೆ ಮಾಧ್ಯಮ ಅಷ್ಟು ಪ್ರಬಲವಾಗಿರದಿದ್ದ ಕಾರಣ ಎಲ್ಲಾ ಕನ್ನಡಿಗರಿಗೆ ಚಳವಳಿ ನಡೆಯುತ್ತಿರುವ ವಿಷಯವೇ ತಿಳಿದಿರಲಿಲ್ಲ. ಡಾ.ರಾಜ್ ಕುಮಾರ್ ಅವರನ್ನು ಈ ಚಳವಳಿಗೆ ಕರೆತರಲು ಕನ್ನಡ ಚಳವಳಿ ನಾಯಕ ಜಿ.ನಾರಾಯಣ ಕುಮಾರ್ ಮದ್ರಾಸ್(ಈಗಿನ ಚೆನ್ನೈ) ಗೆ ಹೊರಡುತ್ತಾರೆ. ಅಲ್ಲಿಯವರೆವಿಗೂ ಡಾ.ರಾಜ್ ಕುಮಾರ್ ಸಿನೆಮಾ ಸಂಬಂಧಿ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದರೆ ಹೊರತು ಸಿನಿಮೇತರ ವಿಚಾರಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಉದ್ದೇಶಿಸಿ ಮಾತನಾಡಿದ ಅನುಭವವೇ ಇರಲಿಲ್ಲ. ಆದಾಗ್ಯೂ ಕನ್ನಡದ ವಿಚಾರವಾದ್ದರಿಂದ ಚಳವಳಿಯಲ್ಲಿ ಪಾಲ್ಗೊಳ್ಳಲು ಒಪ್ಪಿಕೊಳ್ಳುತ್ತಾರೆ.
ಆಗ್ಗೆ ಕನ್ನಡ ಚಿತ್ರರಂಗದಲ್ಲಿದ್ದ ಬಹಳ ಉನ್ನತ ಸ್ಥಾನದಲ್ಲಿದ್ದ ಡಾ.ರಾಜ್ ಕುಮಾರ್ ಚಳವಳಿಗೆ ಇಳಿದಿದ್ದೇ ತಡ, ಇಡೀ ಕನ್ನಡ ಚಿತ್ರರಂಗ ಸ್ವಲ್ಪ ದಿನಗಳ ಮಟ್ಟಿಗೆ ಚಿತ್ರೀಕರಣ ಕಾರ್ಯಗಳನ್ನೆಲ್ಲ ನಿಲ್ಲಿಸಿ ಚಳವಳಿಯಲ್ಲಿ ಪಾಲ್ಗೊಂಡಿತು. ಡಾ.ರಾಜ್ ಕುಮಾರ್ ಅವರೊಂದಿಗೆ ಇನ್ನಿತರ ಹಿರಿಯ ಕಲಾವಿದರಾದ ಡಾ.ವಿಷ್ಣು ವರ್ಧನ್, ಅಂಬರೀಷ್, ಶಂಕರ್ ನಾಗ್, ಲೋಕೇಶ್, ಅನಂತ್ ನಾಗ್, ಜೈ ಜಗದೀಶ್ ಇನ್ನು ಮುಂತಾದ ಕಲಾವಿದರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು ಸಕ್ರಿಯರಾಗಿ ಪಾಲ್ಗೊಂಡರು. ಡಾ.ರಾಜ್ ಚಳವಳಿಗೆ ಇಳಿದ ಸುದ್ದಿ ಕರ್ನಾಟಕದಾದ್ಯಂತ ಮಿಂಚಿನಂತೆ ಸಂಚರಿಸಿತು. ಕರ್ನಾಟಕದ ಬಹುತೇಕ ಜನರು ತಮ್ಮ ನೆಚ್ಚಿನ ನಟನನ್ನು ಹಿಂಬಾಲಿಸಿ ತಾವೂ ಚಳವಳಿಯಲ್ಲಿ ಪಾಲ್ಗೊಂಡರು. ಕರ್ನಾಟಕದ ಮನೆ ಮನೆಯಿಂದಲೂ ಜನರು ಹೊರಗೆ ಬಂದು ನಡೆಯುತ್ತಿದ್ದ ಚಳವಳಿಯನ್ನು ಅರಿತು ಸಕ್ರಿಯರಾಗಿ ಪಾಲ್ಗೊಂಡಿದ್ದೇ ಆಗ. ಡಾ.ರಾಜ್ ಚಿತ್ರರಂಗದ ತಮ್ಮ ಸಹಕಲಾವಿದರೊಂದಿಗೆ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಪ್ರವಾಸ ಮಾಡಿ ಗೋಕಾಕ್ ವರದಿ ಜಾರಿಯನ್ನು ಸರ್ಕಾರಕ್ಕೆ ಆಗ್ರಹಿಸುತ್ತಿದ್ದರು. ಡಾ.ರಾಜ್ ನಾಯಕತ್ವದಲ್ಲಿ ನಡೆಯುತ್ತಿದ್ದ ಚಳವಳಿಯಲ್ಲಿ ಭಾಗವಹಿಸುತ್ತಿದ್ದ ಜನಗಳನ್ನು ನಿಯಂತ್ರಿಸುವುದು ಪೊಲೀಸ್ ಇಲಾಖೆಗೆ ಅತಿ ದೊಡ್ಡ ತಲೆ ನೋವಾಗಿ ಪರಿಣಮಿಸಿತು. ಪ್ರತೀ ದಿನವೂ ನಡೆಯುತ್ತಿದ್ದ ಚಳವಳಿಯನ್ನು, ಅದರ ಅಗಾಧ ಸ್ವರೂಪವನ್ನು ಗಮನಿಸಿದ ಕರ್ನಾಟಕ ಸರ್ಕಾರ ಕೊನೆಗೂ ಚಳವಳಿಗೆ ಪ್ರತಿಕ್ರಿಯಿಸಿತು.
ಅತೀ ದೊಡ್ಡ ಸ್ವರೂಪದಲ್ಲಿ ನಡೆದ ಚಳುವಳಿಗೆ ಕರ್ನಾಟಕ ಸರ್ಕಾರ ಧನಾತ್ಮಕವಾಗಿ ಸ್ಪಂದಿಸಿತು. ಆಗಿನ ಕರ್ನಾಟಕದ ಮುಖ್ಯಮಂತ್ರಿಗಳಾದ ಆರ್.ಗುಂಡೂರಾವ್ ಚಳವಳಿಯ ಆಗಾಧತೆಯನ್ನು ಕಂಡು ಗೋಕಾಕ್ ಸಮಿತಿ ಸಲ್ಲಿಸಿದ್ದ ವರದಿಯನ್ನು ಪುರಸ್ಕರಿಸಿದರು. ವರದಿಯಲ್ಲಿ ಉಲ್ಲೇಖಿಸಿದ್ದ ಪ್ರಕಾರ ಕನ್ನಡ ಭಾಷೆಗೆ ವಿಶೇಷ ಸ್ಥಾನ ಮಾನಗಳ ಜೊತೆಗೆ ಮೊದಲ ಭಾಷೆಯ ಸ್ಥಾನವನ್ನು ಕೊಡಲಾಯಿತು.
ಧನ್ಯವಾದಗಳು.
GIPHY App Key not set. Please check settings