ಅಹಿಂಸಾತ್ಮಕ ವಿಧಾನಗಳ ಮೂಲಕ ಭಾರತದಲ್ಲಿ ಬ್ರಿಟಿಷ್ ಆಡಳಿತದ ಪ್ರತಿರೋಧ. ಅಸಹಕಾರ ಚಳುವಳಿ ಭಾರತದ ಪ್ರಥಮ ದೇಶಾದ್ಯಂತ ಜನರ ಅಹಿಂಸಾತ್ಮಕ ಚಳುವಳಿಯಾಗಿದ್ದು ಇದನ್ನು ಮಹಾತ್ಮಾ ಗಾಂಧಿಯವರ ಮುಂದಾಳತ್ವದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಏರ್ಪಡಿಸಿತ್ತು. ಈ ಚಳುವಳಿಯಿಂದ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧಿಯುಗದ ಪ್ರಾರಂಭವಾಯಿತು. ಈ ಚಳುವಳಿ 1920ರಲ್ಲಿ ಪ್ರಾರಂಭವಾಯಿತು.
ರೌಲತ್ ಕಾಯ್ದೆಗಳು ಭಾರತೀಯರ ಮೇಲೆ ಬ್ರಿಟಿಷರಿಗೆ ಪರಮಾಧಿಕಾರ ಕೊಟ್ಟಿದ್ದವು. ಪೊಲೀಸರು ಮತ್ತು ಸೈನಿಕರು ಲವಲೇಶದ ಸಾಕ್ಷಿ-ಪುರಾವೆಗಳಿಲ್ಲದೇ ಸಾರ್ವಜನಿಕರನ್ನು ಶೋಧಿಸುವ, ಅವರ ಆಸ್ತಿಯನ್ನು ಜಫ್ತು ಮಾಡುವ, ಮತ್ತು ಅಂತಹವರನ್ನು ಬಂಧಿಸುವ ಅಧಿಕಾರವನ್ನು ಹೊಂದಿದ್ದರು. ಈ ಕಾಯ್ದೆಗಳು ಬ್ರಿಟಿಷ್ ಸಂಸತ್ತಿನಿಂದ ಹೊರಟು ಏಪ್ರಿಲ್ ೬, ೧೯೧೯ರಂದು ಚಾಲ್ತಿಗೆ ಬರಬೇಕಿತ್ತು. ಇದರ ಜೊತೆ, ಮೊದಲನೇ ಮಹಾ ಯುದ್ಧಕ್ಕೆ ಭಾರತೀಯರನ್ನು ಮಾತುಕತೆಗೆ ಕರೆಯದೆ ಭಾರತದ ಸೈನಿಕರನ್ನು ಬಳಸಿದ್ದು ಅವರನ್ನು ಉದ್ರೇಕಿಸಿತ್ತು. ಕಾಂಗ್ರೆಸ್ಸಿನ ಸೌಮ್ಯವಾದಿ ನಾಯಕರಾದ ಮೊಹಮ್ಮದ್ ಅಲಿ ಜಿನ್ನಾ, ಆನೀ ಬೆಸಂಟ್, ಬಾಲ ಗಂಗಾಧರ ತಿಲಕ್, ಮತ್ತು ಗೋಪಾಲ ಕೃಷ್ಣ ಗೋಖಲೆಯವರ ಸ್ವರಾಜ್ಯದ ಕೂಗಿನ ಜೊತೆ ನಾಮಮಾತ್ರದ ಪ್ರತಿರೋಧ ಕೇಳಿಬಂದಿತ್ತು. ಇದರಿಂದ ಬ್ರಿಟಿಷ್ ಸಾಮ್ರಾಜ್ಯಕ್ಕೆ ಹೇಳಿಕೊಳ್ಳುವಂತಹ ಧಕ್ಕೆ ಉಂಟಾಗಲಿಲ್ಲ. ಹೀಗಿದ್ದಾಗಿಯೂ ಸಹ ಬ್ರಿಟಿಷರು ಲಷ್ಕರಿ ಶಾಸನದಂತಹ ಸ್ಥಿತಿಯನ್ನು ಸೃಷ್ಟಿಸಿದರು.
ಮಹಾತ್ಮಾ ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ ಹಾಗೂ ನಂತರ ೧೯೧೮ರಲ್ಲಿ ಚಂಪ ಮತ್ತು ಖೇಡಾ ಗುಜರಾತ್ ಗಳಲ್ಲಿ ಗೌರವ ಸಂಪಾದಿಸುವ ಒಂದೇ ಮಾರ್ಗವೆಂದರೆ ಕಾನೂನು ಭಂಗದ ಮೂಲಕ ಸರ್ಕಾರಕ್ಕೆ ಸವಿನಯ ವಿರೋಧ ತೋರಿಸುವುದು ಎಂದು ತೋರಿಸಿಕೊಟ್ಟಿದ್ದರು. ಚಂಪಾರಣ ಮತ್ತು ಖೇಡಾಗಳ ಶೋಷಿತ ರೈತರನ್ನು ಒಗ್ಗೂಡಿಸಿ, ಸಂಘಟಿತ ಕಾರ್ಯಕರ್ತರ ಸಹಾಯದಿಂದ ರೈತರ ಶೋಷಣೆಗಳ ಬಗ್ಗೆ ವಿವರವಾದ ವರದಿಯನ್ನು ತಯಾರು ಮಾಡಿದರು. ಇದರಿಂದ ಜನರು ತೆರಿಗೆ ಕೊಡುವುದನ್ನು ಬಿಟ್ಟು ವಿರೋಧ ಪ್ರದರ್ಶನಗಳನ್ನು ಏರ್ಪಡಿಸಿದರು. ಈ ಪ್ರದರ್ಶನಕಾರರನ್ನು ಮತ್ತು ಸ್ವತಃ ಗಾಂಧಿಯವರನ್ನು ಬಂಧಿಸಿದಾಗ ಬಿಹಾರ ಮತ್ತು ಗುಜರಾತ್ ಪ್ರಾಂತ್ಯಗಳಲ್ಲಿ ಸಾವಿರಾರು ಜನರು ವಿರೋಧ ಪ್ರದರ್ಶನಗಳನ್ನೇರ್ಪಡಿಸಿದಾಗ ಗಾಂಧಿಯವರನ್ನು ಬಿಡುಗಡೆ ಮಾಡಲಾಯಿತು. ಇದರ ನಂತರ ಈ ಎರಡು ಪ್ರಾಂತ್ಯದ ಸರ್ಕಾರಗಳು ಒಪ್ಪಂದಗಳಿಗೆ ಸಹಿ ಮಾಡಿ ಬರಗಾಲದಲ್ಲಿಯೂ ಹಾಕುತ್ತಿದ್ದ ತೆರಿಗೆಗಳನ್ನು ಹಿಂತೆಗೆದುಕೊಂಡು ಎಲ್ಲ ರಾಜಕೀಯ ಖೈದಿಗಳನ್ನು ಬಿಡುಗಡೆ ಮಾಡಿ ಜಫ್ತಿ ಮಾಡಿದ ಭೂಮಿ ಮತ್ತು ಆಸ್ತಿಗಳನ್ನು ವಾಪಾಸು ಮಾಡಬೇಕಾಯಿತು. ಅಮೆರಿಕ ಕ್ರಾಂತಿಯ ನಂತರ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಯಾರಾದರೂ ಗೆದ್ದಿದ್ದು ಇದೇ ಮೊದಲು. ಗಾಂಧೀಜಿಯವರಿಗೆ ಭಾರತದ ಯುವ ನಾಯಕರಾದ ರಾಜೇಂದ್ರ ಪ್ರಸಾದ್ ಮತ್ತು ಜವಾಹರಲಾಲ್ ನೆಹರು ಅವರ ಬೆಂಬಲವಿದ್ದಿತು. ಖೇಡಾದಲ್ಲಿ ಇಡೀ ದಂಗೆಯ ನಾಯಕತ್ವವನ್ನು ಸರ್ದಾರ್ ಪಟೇಲ್ ಅವರು ವಹಿಸಿ ಗಾಂಧೀಜಿಯವರ ಬಲಗೈ ಆದರು. ಬ್ರಿಟಿಷ್ ಸರ್ಕಾರ ಟರ್ಕಿ ದೇಶದ ಮುಸ್ತಫಾ ಕಮಾಲ್ ಗೆ ಟರ್ಕಿಯ ಸುಲ್ತಾನನ್ನು ಮೆಟ್ಟಿ ಹಾಕಲು ನೀಡಿದ ಬೆಂಬಲಕ್ಕಾಗಿ ಭಾರತದ ಲಕ್ಷಾಂತರ ಮುಸ್ಲಿಮರು ವಿರೋಧಿಸಿದರು. ಮುಸ್ಲಿಮ್ ನಾಯಕರು ಸರ್ಕಾರದ ಈ ದುಷ್ಕಾರ್ಯವನ್ನು ವಿರೋಧಿಸಲು ಖಿಲಾಫತ್ ಸಮಿತಿಯನ್ನು ರಚಿಸಿದರು. ಪಂಜಾಬಿನ ಅಮೃತಸರದ ಜಲಿಯನ್‌ವಾಲಾ ಬಾಗ್ ಎಂಬಲ್ಲಿ ಶಸ್ತ್ರ ರಹಿತರಾಗಿ ಶಾಂತ ರೀತಿಯಲ್ಲಿ ವಿರೋಧಿಸುತ್ತಿದ್ದ ಸಾವಿರಾರು ಜನರನ್ನು ರೆಜಿನಾಲ್ಡ್ ಡಯರ್ ಎಂಬ ಬ್ರಿಟಿಷ್ ಸೈನ್ಯಾಧಿಕಾರಿ ಗುಂಡಿಟ್ಟು ಕೊಲ್ಲಲು ಸೈನಿಕರಿಗೆ ಆಜ್ಞೆ ಮಾಡಿದನು. ಸಾವಿರಾರು ಮಂದಿ ಸ್ಥಳದಲ್ಲೇ ಪ್ರಾಣತ್ಯಾಗ ಮಾಡಿದರು. ಮಕ್ಕಳು-ಮಹಿಳೆಯರು-ವೃದ್ಧರನ್ನೂ ಬಿಡಲಿಲ್ಲ. ಪಂಜಾಬಿನಲ್ಲಿ ವಿರೋಧಿಸಿದವರನ್ನೆಲ್ಲ ಬಂಧಿಸಿ, ಶೋಷಿಸಿ, ಕೊಲ್ಲಲಾಯಿತು. ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ ಭಾರತದಲ್ಲಿ ಬ್ರಿಟಿಷ್ ಅಧಿಪತ್ಯದ ಅತಿ ಕರಾಳ ಅಧ್ಯಾಯವಾಯಿತು. ಬ್ರಿಟಿಷರ ವಿರುದ್ಧ ಸಂಘರ್ಷಕ್ಕಿಳಿಯಲು ಕಾಲ ದೂರವಿರಲಿಲ್ಲ.
ಗಾಂಧಿಯವರ ಉದ್ದೇಶ ರಾಷ್ಟ್ರದಾದ್ಯಂತ ರೌಲತ್ ಕಾಯ್ದೆಗಳ ವಿರುದ್ಧ ಪ್ರದರ್ಶನ ಮಾಡುವುದಾಗಿತ್ತು. ಎಲ್ಲ ಆಫೀಸುಗಳು ಮತ್ತು ಫ್ಯಾಕ್ಟರಿಗಳು ಮುಚ್ಚಬೇಕು, ಬ್ರಿಟಿಷರ ಪೊಲೀಸ್ ಇಲಾಖೆ, ಸೇನೆ ಮತ್ತು ನಾಗರಿಕ ಸೇವೆಗಳಿಂದ ಮತ್ತು ಮಕ್ಕಳನ್ನು ಶಾಲೆಗಳಿಂದ ಹಿಂತೆಗೆಯಬೇಕು ಎಂಬ ಯೋಜನೆ ಹೊರಡಿಸಿದರು. ಅವರ ಇರಾದೆ ಕರ ವಿರೋಧ ಮಾಡುವುದಾಗಲೀ, ಶೀಘ್ರ ಸ್ವಾತಂತ್ರ್ಯಕ್ಕಾಗಿ ಆಗ್ರಹಿಸುವುದಾಗಲೀ, ಅಥವಾ ಹಿಂಸೆ ಮತ್ತು ಶಕ್ತಿ ಪ್ರದರ್ಶನ ಮಾಡುವುದಾಗಲೀ ಅಗಿರಲಿಲ್ಲ. ಪ್ರತಿ ಪ್ರದರ್ಶಕನೂ ಬಂಧಿತನಾಗಬೇಕು ಹಾಗೂ ಪೊಲೀಸರು ಹೊಡೆದರೆ ಹೊಡೆತ ಸಹಿಸಬೇಕೆ ಹೊರತು ತಿರುಗಿ ಹೊಡೆಯಬಾರದೆಂದು ಹಾಗೂ ಹಿಂದೂ-ಮುಸ್ಲಿಮ್ ಏಕತೆ ಕಾಪಾಡಬೇಕೆಂದು ಬಯಸಿದ್ದರು. ಗಾಂಧೀಜಿಯವರ ಈ ಯೋಜನೆಗಳನ್ನು ಹಿರಿಯ ಕಾಂಗ್ರೆಸ್ ನಾಯಕರು ತೀವ್ರವಾಗಿ ವಿರೋಧಿಸಿದರು. ಮುಸ್ಲಿಮ್ ಲೀಗ್ ಕೂಡ ಪ್ರತಿಭಟಿಸಿತು. ಆದರೆ ಭಾರತದ ಯುವ ಪೀಳಿಗೆ ಗಾಂಧಿಯವರ ಉದ್ದೇಶದಿಂದ ರೋಮಾಂಚನಗೊಂಡು ಅವರಿಗೆ ಬೆಂಬಲ ಸೂಚಿಸಿತು. ಇದರಿಂದ ಕಾಂಗ್ರೆಸ್ ಪಕ್ಷ ಮತ್ತು ಮುಸ್ಲಿಮ್ ಲೀಗ್ ತಮ್ಮ ವಿರೋಧ ಮರೆತು ಬೆಂಬಲ ಸೂಚಿಸಿದವು. ಗಾಂಧಿಯವರನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷರಾಗಿ ೧೯೧೯ ಮತ್ತು ೧೯೨೦ರಲ್ಲಿ ಆರಿಸಲಾಯಿತು.
ಈ ಚಳುವಳಿಯ ಹಠಾತ್ ಯಶಸ್ಸು ಬ್ರಿಟಿಷರಿಗೆ ಆಘಾತ ತಂದುಕೊಟ್ಟು ಲಕ್ಷಾಂತರ ಭಾರತೀಯರಿಗೆ ಸ್ಫೂರ್ತಿಯಾಯಿತು. ಬ್ರಿಟಿಷ್ ಸಂಸ್ಥೆಗಳ ಸಂಪೂರ್ಣ ಬಹಿಷ್ಕಾರವಾಯಿತು. ಗಾಂಧಿ ಸಹಿತ ಹಲವು ನಾಯಕರ ಬಂಧನವಾಯಿತು. ಬ್ರಿಟಿಷ್ ಸೈನ್ಯವು ಅಗತ್ಯ ಸೇವೆಗಳನ್ನು ಪೂರೈಸಬೇಕಾಯಿತು. ದೇಶಾದ್ಯಂತ ಲಕ್ಷಾಂತರ ಜನರನ್ನು ಬಂಧಿಸಲಾಯಿತಾದರೂ ವಿರೋಧ ಪ್ರದರ್ಶನವು ಹಳ್ಳಿ-ಹಳ್ಳಿಗಳಿಗೂ ವ್ಯಾಪಿಸಿತು. ಐರೋಪ್ಯ ಬಟ್ಟೆಗಳನ್ನು ಸುಡಲು ಸಾರ್ವಜನಿಕವಾಗಿ ಬೆಂಕಿ ಹಚ್ಚಲಾಯಿತು. ಆದರೆ ಪೊಲೀಸರ ಮತ್ತು ಸೈನ್ಯದ ದೌರ್ಜನ್ಯದಿಂದ ಸಾವಿರಾರು ಮಂದಿಗಳನ್ನು ಬಂಧಿಸಿ ಹಿಂಸಿಸಲಾಯಿತು ಮತ್ತು ನೂರಾರು ಮಂದಿ ಪ್ರಾಣ ತೆತ್ತರು. ಮೂರು ವರ್ಷಗಳ ಕಾಲ ದಂಗೆಗಳು ಮುಂದುವರೆದವು. ಆದರೆ ೧೯೨೨ರಲ್ಲಿ ಚೌರಿ ಚೌರ ಎಂಬುವಲ್ಲಿ ೧೫ ಪೊಲೀಸರನ್ನು ಜನರ ಗುಂಪು ಸುತ್ತುವರೆದು ಸಾಯಿಸಿ ಪೊಲೀಸ್ ಠಾಣೆಯನ್ನು ಸುಟ್ಟುಹಾಕಲಾಯಿತು. ಪೊಲೀಸರು ಇದರ ಹಿಂದೆ ಇಬ್ಬರು ಪ್ರದರ್ಶನಕಾರರನ್ನು ಹಿಂಸಿಸಿದ್ದು ಜನರ ಆಕ್ರೋಶಕ್ಕೆ ಕಾರಣವಾಯಿತು. ಆದರೆ ಹತರಾದ ಎಲ್ಲ ಪೊಲೀಸರು ಭಾರತೀಯರೆ. ಗಾಂಧಿಯವರು ಚಳುವಳಿಯ ಉದ್ದೇಶ ಬದಲಾಗಿ ಹಿಂಸಾಚಾರಕ್ಕೆ ತಿರುಗುತ್ತಿರುವುದನ್ನು ಮನಗಂಡು ಅಸಹಾಕಾರ ಚಳುವಳಿಯನ್ನು ನಿಲ್ಲಿಸುವ ನಿರ್ಧಾರ ತಳೆದರು. ಈ ಹಿಂಸಾಚಾರಕ್ಕೆ ತಮ್ಮನ್ನೇ ಹೊಣೆಗಾರರನ್ನಾಗಿ ಮಾಡಿಕೊಂಡರು. ಗಾಂಧೀಜಿ ಈ ಹಿಂಸಾಚಾರವನ್ನು ತಡೆಯಲು ಸಾವಿನ ತನಕ ಉಪವಾಸ ಪ್ರಾರಂಭ ಮಾಡಿದರು. ನಿಧಾನವಾಗಿ ೨೧ ದಿನಗಳಲ್ಲಿ ಲಕ್ಷಾಂತರ ರಾಷ್ಟ್ರವಾದಿಗಳು ಸಂದಿಗ್ಧಗೊಂಡು ಗಾಂಧೀಜಿಯವರನ್ನು ಉಳಿಸಲು ಚಳುವಳಿಯನ್ನು ಕೈ ಬಿಟ್ಟರು. ಬಹಳಷ್ಟು ಕಾಂಗ್ರೆಸ್ ನಾಯಕರು ಇದರಿಂದ ನಿರಾಶೆ-ಆಕ್ರೋಶಗೊಂಡರೂ ಕೊನೆಗೆ ಒಪ್ಪಿ ಚಳುವಳಿಯನ್ನು ಸಮಾಪ್ತಿಗೊಳಿಸಿದರು.
ರಾಷ್ಟ್ರೀಯ ದಂಗೆಯನ್ನು ಏಕಾಂತವಾಗಿ ನಿಲ್ಲಿಸಿದರೂ ಗಾಂಧಿಯವರನ್ನು ರಾಜದ್ರೋಹದ ಆರೋಪದ ಮೇಲೆ ಎರಡು ವರ್ಷಗಳ ಕಾಲ ಬಂಧಿಸಲಾಯಿತು. ಈ ಆಜ್ಞೆಯನ್ನು ಓದುವಾಗ ಬ್ರಿಟಿಷ್ ನ್ಯಾಯಾಧೀಶರು ಮೆಚ್ಚುಗೆ ಮತ್ತು ಅಭಿಮಾನಗಳಿಂದ ಮಾತಾಡಿ ಸರ್ಕಾರವು ಗಾಂಧಿಯವರನ್ನು ಬಿಡುಗಡೆಗೊಳಿಸಿದರೆ ತಮಗೆ ಅತೀವ ಸಂತೋಷವಾಗುವುದೆಂದು ಹೇಳಿದರು. ಬಹುತೇಕ ಕಾಂಗ್ರೆಸ್ ನಾಯಕರು ಗಾಂಧೀಜಿಗೆ ಬೆಂಬಲ ಸೂಚಿಸಿದರೂ ನಿರಾಶರಾದ ಕೆಲವರು ಅವರ ಸಂಗವನ್ನು ತ್ಯಜಿಸಿದರು. ಇವರಲ್ಲಿ ಪ್ರಮುಖರು ಅಲಿ ಸಹೋದರರು ಗಾಂಧಿಯವರನ್ನು ತೀವ್ರವಾಗಿ ಟೀಕಿಸಿದರು. ಮೋತಿಲಾಲ್ ನೆಹರು ಮತ್ತು ಚಿತ್ತರಂಜನ್ ದಾಸ್ ಸ್ವರಾಜ್ ಪಕ್ಷವನ್ನು ಹುಟ್ಟುಹಾಕಿದರು. ಬಹುತೇಕ ರಾಷ್ಟ್ರೀಯವಾದಿಗಳು ಚಳುವಳಿ ನಿಲ್ಲಿಸಿದ ಕಾರಣಕ್ಕೆ ಅಸಮ್ಮ್ತತಿ ತೋರಿಸಿ ಬಹಳ ದುಃಖಿತರಾದರು. ಇತಿಹಾಸಕಾರರ ಮತ್ತು ವಿಮರ್ಶಕರ ಪ್ರಕಾರ ಈ ಚಳುವಳಿಯು ಬ್ರಿಟಿಷ್ ಆಡಳಿತದ ಮೂಳೆ ಮುರಿಯುವಲ್ಲಿ ಸಾಕಷ್ಟು ಸಫಲವಾಯಿತು. ಬಹುಶಃ ೧೯೪೭ರ ವರೆಗೆ ಭಾರತೀಯರ ಹೋರಾಡಿದ ಸ್ವಾತಂತ್ರ್ಯಕ್ಕೆ ಇದರ ಕೊಡುಗೆಯೂ ಇತ್ತು. ಆದರೆ ಅನೇಕ ಇತಿಹಾಸಕಾರರು ಮತ್ತು ರಾಷ್ಟ್ರೀಯ ನಾಯಕರು ಗಾಂಧೀಜಿಯವರ ನಿರ್ಧಾರ ಸರಿಯಾದದ್ದೆಂದು ನಂಬುತ್ತಾರೆ. ಗಾಂಧೀಜಿಯವರು ಚಳುವಳಿಯನ್ನು ನಿಲ್ಲಿಸದೇ ಹೋಗಿದ್ದರೆ ಭಾರತವು ಬಂಡುಕೋರರ ದಂಗೆಯ ಮಟ್ಟಕ್ಕೆ ಇಳಿದುಹೋಗಿ ಸಾಮಾನ್ಯ ಜನರನ್ನು ದೂರ ಮಾಡುತ್ತಿತ್ತು. ಅಹಿಂಸೆಯ ತತ್ವವನ್ನು ಎತ್ತಿ ಹಿಡಿದಿದ್ದರಿಂದ ಎಷ್ಟೋ ಸಾಮಾನ್ಯ ನಾಗರಿಕರು ಹೆಮ್ಮೆಯಿಂದ ಮತ್ತು ಗೌರವಾತ್ಮಕವಾಗಿ ಸಾವು-ನೋವು ಮಾಡದೇ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಅನುವು ಮಾಡಿಕೊಟ್ಟಿತು.
ಧನ್ಯವಾದಗಳು.
купить диплом вуза в красноярске [url=https://1oriks-diplom199.ru/]1oriks-diplom199.ru[/url] .
Легальная покупка школьного аттестата с упрощенной программой обучения