in ,

ಪ್ರೋಟಿನ್ ಭರಿತ ಹೆಸರು ಕಾಳು

ಹೆಸರು ಕಾಳು
ಹೆಸರು ಕಾಳು

ಅತ್ಯಂತ ಚಿಕ್ಕ ಕಾಳಾದರೂ ಇದರಲ್ಲಿ ಇರುವ ಆರೋಗ್ಯದ ಗುಣವು ಅದ್ಭುತ ಸಂಗತಿಗಳಿಂದ ಕೂಡಿದೆ. ಗಣನೀಯವಾಗಿ ಆಹಾರದಲ್ಲಿ ಇದನ್ನು ಬಳಸುವುದರಿಂದ ಆರೋಗ್ಯದಲ್ಲಿ ಸಾಕಷ್ಟು ಉತ್ತಮ ದಲಾವಣೆ ಉಂಟಾಗುವುದು. ಜೊತೆಗೆ ಕೆಲವು ಆರೋಗ್ಯ ಸಮಸ್ಯೆ ಇದ್ದರೂ ಗುಣಮುಖವಾಗುವುದು ಎಂದು ವೈಜ್ಞಾನಿಕ ಶಾಸ್ತ್ರ ತಿಳಿಸುತ್ತದೆ. ​ರಕ್ತ ಕಣಗಳನ್ನು ಹೆಚ್ಚಿಸುತ್ತದೆ.

ದೇಹದಲ್ಲಿ ಪ್ರೋಟೀನ್‍ಗಳ ಕೊರತೆ ಉಂಟಾದಾಗ ಸಾಕಷ್ಟು ಅನಾರೋಗ್ಯಗಳು ಕಾಣಿಸಿಕೊಳ್ಳುತವೆ. ನಿತ್ಯದ ಆಹಾರದಲ್ಲಿ ಹೆಸರು ಕಾಳನ್ನು ಸೇರಿಸಿಕೊಳ್ಳುವುದರಿಂದ ಅಧಿಕ ರಕ್ತಕಣಗಳ ಉತ್ಪತ್ತಿ ಮತ್ತು ಮೂಳೆಗಳು ಬಲಗೊಳ್ಳುವುದು. ಜೊತೆಗೆ ದೇಹಕ್ಕೆ ಅಗತ್ಯವಾದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಅದಕ್ಕಾಗಿ ನೀವು ಮೊಳಕೆ ಬರಿಸಿದ ಹೆಸರುಕಾಳನ್ನು ಸಲಡ್‍ಗಳ ರೀತಿಯಲ್ಲಿ ಸೇವಿಸುವುದು, ಅಥವಾ ಮೊಳಕೆ ಬರಿಸಿದ ಕಾಳುಗಳಿಂದ ಆಹಾರ ಪದಾರ್ಥಗಳನ್ನು ತಯಾರಿಸಿ ಸೇವಿಸಬಹುದು.

ಪ್ರೋಟಿನ್ ಭರಿತ ಹೆಸರು ಕಾಳು
ಹೆಸರು ಕಾಳು

ಹೆಸರು ಕಾಳಿನಲ್ಲಿ ಫೋಲೇಟ್, ವಿಟಮಿನ್ ಬಿ9 ಸಮೃದ್ಧವಾಗಿವೆ. ಇವು ದೇಹದಲ್ಲಿ ಹೊಸ ರಕ್ತಕಣಗಳ ಸೃಷ್ಟಿಗೆ ಸಹಾಯ ಮಾಡುತ್ತವೆ. ಅದರಲ್ಲೂ ಕೆಂಪು ರಕ್ತ ಕಣಗಳನ್ನು ಹೆಚ್ಚುವಂತೆ ಮಾಡುವುದು. ಹಾಗಾಗಿ ಗರ್ಭಿಣಿಯರಿಗೆ ಅತ್ಯುತ್ತಮವಾದದ್ದು. ಯಾರು ಗರ್ಭಾವಸ್ಥೆಯನ್ನು ಹೊಂದಲು ಯೋಜನೆ ಮಾಡುವರೋ ಅಂತಹವರು ಸಹ ತಮ್ಮ ಆಹಾರದಲ್ಲಿ ಹೆಸರು ಕಾಳನ್ನು ಸೇರಿಸಿಕೊಳ್ಳಬಹುದು. ಆರೋಗ್ಯಕರ ರಕ್ತಕಣಗಳಿಂದಾಗಿ ಮಗುವಿನ ಬೆಳವಣಿಗೆಯು ಉತ್ತಮವಾಗುವುದು. ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಉತ್ತಮ ಪೋಷಣೆ ನೀಡುವುದು. ಗರ್ಭಾವಸ್ಥೆಯಲ್ಲಿ ಇರುವವರು ಹೆಸರು ಕಾಳಿನ ದೋಸೆಯನ್ನು ಸೇವಿಸಬಹುದು.

​ಅನಗತ್ಯ ತೂಕ ಇಳಿಸಲು ಉತ್ತಮ
ಹೆಸರು ಕಾಳಿನಲ್ಲಿ ಕಡಿಮೆ ಪ್ರಮಾಣದ ಕೊಬ್ಬು ಮತ್ತು ಅಧಿಕ ಪ್ರಮಾಣದಲ್ಲಿ ಪ್ರೋಟೀನ್ ಹಾಗೂ ನಾರಿನಂಶಗಳನ್ನು ಒಳಗೊಂಡಿರುತ್ತವೆ. ನಿತ್ಯದ ಆಹಾರದಲ್ಲಿ ಅಥವಾ ಯೋಜನಾ ಬದ್ಧ ಆಹಾರ ಕ್ರಮದಲ್ಲಿ ಹೆಸರು ಕಾಳನ್ನು ಸೇರಿಸಿಕೊಂಡರೆ ದೇಹದಲ್ಲಿ ಇರುವ ಅನಗತ್ಯ ಕೊಬ್ಬಿನಂಶವು ಕರಗುವುದು.

ಬೇಳೆ ಕಾಳುಗಳು ಸಾಮಾನ್ಯವಾಗಿ ಆಂಟಿ ಆಕ್ಸಿಡೆಂಟ್‍ಗಳನ್ನು ಸಮೃದ್ಧವಾಗಿ ಪಡೆದುಕೊಂಡಿರುತ್ತವೆ. ಅವು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಹೆಸರು ಕಾಳು ಎಲ್ ಡಿಎಲ್ ಆಕ್ಸಿಡೀಕರಣವನ್ನು ನಿಯಂತ್ರಣದಲ್ಲಿ ಇಡುವುದು. ಜೊತೆಗೆ ರಕ್ತದ ಉತ್ತಮ ಹರಿವಿಗೆ ಪ್ರಚೋದನೆ ನೀಡುವುದು. ಇದಲ್ಲಿ ಇರುವ ಸಮೃದ್ಧವಾದ ಪೊಟ್ಯಾಸಿಯಮ್ ರಕ್ತದಲ್ಲಿ ಇರುವ ಅನಗತ್ಯ ಸೋಡಿಯಮ್ ಅನ್ನು ನಿವಾರಿಸುವುದು. ಜೊತೆಗೆ ಕಡಿಮೆ ಪ್ರಮಾಣದ ರಕ್ತದೊತ್ತಡ ಅಥವಾ ಅಧಿಕ ರಕ್ತದೊತ್ತಡದಂತಹ ಯಾವ ಸಮಸ್ಯೆ ಇದ್ದರೂ ಅದನ್ನು ನಿಯಂತ್ರಿಸುವುದು.

ಹೆಸರು ಕಾಳಿನಲ್ಲಿ ಫ್ಲೋವೊನೈಡ್ ಆಂಟಿ ಆಕ್ಸಿಡೆಂಟ್ ಅಧಿಕವಾಗಿದೆ. ಇದು ಸ್ವತಂತ್ರ ರಾಡಿಕಲ್ಸನಿಂದ ಉಂಟಾದ ಹಾನಿಯನ್ನು ಸುಲಭವಾಗಿ ತಡೆಯುವುದು. ಜೊತೆಗೆ ಸ್ವತಂತ್ರ ರಾಡಿಕಲ್ಸಗಳನ್ನು ನಿಯಂತ್ರಣದಲ್ಲಿ ಇಡುವುದು. ರಕ್ತವು ಆರೋಗ್ಯಕರ ಸ್ಥಿರತೆಯನ್ನು ಕಾಯ್ದುಕೊಂಡು, ದೇಹದಲ್ಲಿ ಉತ್ತಮ ಸಂಚಾರವನ್ನು ಒಳಗೊಳ್ಳುವಂತೆ ಮಾಡುವುದು. ಇದರಲ್ಲಿ ಇರುವ ವಿಟಮಿನ್ ಬಿ ಗುಣವು ಸಾಮಾನ್ಯ ಹೃದಯ ಬಡಿತದಿಂದ ಕೂಡಿರುವಂತೆ ಮಾಡುವುದು. ಇದರಲ್ಲಿ ಇರುವ ಮ್ಯಾಗ್ನಿಸಿಯಮ್ ಹೃದಯದ ರಕ್ತನಾಳಗಳಲ್ಲಿ ಉಂಟಾಗುವ ಅಡೆತಡೆಯನ್ನು ನಿವಾರಿಸುವುದು. ಅನಾರೋಗ್ಯಕ್ಕೆ ಕಾರಣವಾಗುವ ಕೊಲೆಸ್ಟ್ರಾಲ್‍ಗಳನ್ನು ತಡೆಯಲು ಸಹಾಯ ಮಾಡುವುದು.

ಮೊಳಕೆ ಕಾಳುಗಳಲ್ಲಿ ಹೆಚ್ಚಿನ ವಿಟಮಿನ್ ಇ ಮತ್ತು ವಿಟಮಿನ್ ಎಗಳಿವೆ. ಇವೆರಡೂ ಕೂದಲ ಆರೋಗ್ಯಕ್ಕೆ ಅಗತ್ಯ. ಪ್ರತಿ ನಿತ್ಯ ಇವುಗಳ ಸೇವನೆಯಿಂದ ಶುಷ್ಕಗೊಂಡಿರುವ ನೆತ್ತಿಗೆ ಚಿಕಿತ್ಸೆ ದೊರೆತು, ದುರ್ಬಲ ಕೂದಲ ಬೇರು ಬಲಿಷ್ಠವಾಗುತ್ತವೆ. ನಿಮ್ಮ ಕೂದಲನ್ನು ದುರ್ಬಲಗೊಳಿಸುವ ಫ್ರೀ ರಾಡಿಕಲ್ಸ್ ವಿರುದ್ಧ ಇವು ಹೋರಾಡುತ್ತವೆ. ಇದರೊಂದಿಗೆ ಕೂದಲ ಪೋಷಣೆಗೆ ಬೇಕಾದ ಪ್ರೋಟೀನ್ ಮೊಳಕೆಕಾಳುಗಳಲ್ಲಿರುವುದರಿಂದ ಇದು ಕೂದಲು ತುಂಡಾಗುವುದು, ಉದುರುವುದು ಮುಂತಾದವನ್ನು ತಡೆಗಟ್ಟೆ ಹೊಸ ಕೂದಲ ಬೆಳವಣಿಗೆಗೆ ಕಾರಣವಾಗುತ್ತದೆ.

ಹಾರ್ಮೋನ್‍ಗಳ ಸಮಸ್ಯೆಗೆ ಪರಿಹಾರ
ಹೆಸರು ಕಾಳು ಜಿಂಕ್ ಅಂಶವನ್ನು ಹೊಂದಿದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸಲು ಹಾಗೂ ಚರ್ಮದ ಆರೋಗ್ಯ ಕಾಪಾಡಲು ಸಹಾಯ ಮಾಡುವುದು. ಇದರಲ್ಲಿ ಇರುವ ಆಂಟಿಆಕ್ಸಿಡೆಂಟ್ ಮೆಟಾಬೊಲಿಸಮ್ ಶಕ್ತಿಯನ್ನು ಹೆಚ್ಚಿಸುವುದು. ಅಲ್ಲದೆ ಮಹಿಳೆಯರಿಗೆ ಮತ್ತು ಪುರುಷರಿಗೆ ಲೈಂಗಿಕ ಕ್ರಿಯೆಗೆ ಅನುವು ಮಾಡುವ ಹಾರ್ಮೋನ್‍ಗಳ ಸಮಸ್ಯೆಗಳನ್ನು ನಿವಾರಿಸುವುದು. ಮಹಿಳೆಯರಲ್ಲಿ ಆರೋಗ್ಯಕರ ಅಂಡಾಶಯದ ಮೊಟ್ಟೆ ಬಿಡುಗಡೆ ಮಾಡಲು ಸಹಾಯ ಮಾಡುವುದು.

ಬೇಳೆ ಕಾಳುಗಳಲ್ಲಿ ಇರುಳುಗಣ್ಣು ಸಮಸ್ಯೆಯನ್ನು ನಿವಾರಿಸುವ ಶಕ್ತಿಯಿರುತ್ತದೆ. ಹೆಸರು ಕಾಳಿನಲ್ಲಿ ಇರುವ ಜಿಂಕ್ ಅಂಶವು ವಿಟಮಿನ್ ಎ ಉತ್ಪಾದನೆಗೆ ಸಹಾಯ ಮಾಡುವುದು. ದೇಹದಲ್ಲಿ ಅಗತ್ಯವಾದ ವಿಟಮಿನ್ ಎ ಪ್ರಮಾಣವು ಸಮತೋಲನದಲ್ಲಿ ಇದ್ದಾಗ ರಾತ್ರಿ ಕುರುಡು ನಿವಾರಣೆಯಾಗುವುದು.

ಪ್ರೋಟಿನ್ ಭರಿತ ಹೆಸರು ಕಾಳು
ಮೊಳಕೆ ಕಾಳು

ಮೊಳಕೆ ಕಾಳುಗಳಲ್ಲಿರುವ ವಿಟಮಿನ್ ಇ ಹಾಗೂ ಎ ನಿಮ್ಮ ಚರ್ಮಕ್ಕೆ ಅಗತ್ಯವಿರುವ ಪೌಷ್ಟಿಕತೆಯನ್ನು ನೀಡಿ, ಕೊಲಾಜನ್ ಉತ್ಪಾದನೆಯನ್ನು ಪ್ರಚೋದಿಸುತ್ತದೆ. ಕೊಲಾಜನ್ ನಿಮ್ಮ ಚರ್ಮವನ್ನು ಮೃದುವಾಗಿಸಿ ಹೊಳೆಯುವಂತೆ ಮಾಡಿ, ಆರೋಗ್ಯಕರವಾಗಿಸುತ್ತದೆ. ಮೊಳಕೆ ಕಾಳುಗಳು ಜೀವಕೋಶಗಳ ಪುನರುತ್ಪಾದನೆಯ ಮೂಲಕ ದೇಹದಲ್ಲಾದ ಗಾಯವನ್ನು ಗುಣಪಡಿಸುವಲ್ಲಿ ಸಹಾಯ ಮಾಡುತ್ತವೆ.

ಗರ್ಭಾವಸ್ಥೆಯಲ್ಲಿ ಮೊಳಕೆಕಾಳುಗಳನ್ನು ಸೇವಿಸುವುದರಿಂದ ಮಗುವಿನ ಸ್ನಾಯುಗಳ ಬೆಳವಣಿಗೆಗೆ ಪ್ರೊಟೀನ್, ರೋಗನಿರೋಧಕ ಶಕ್ತಿ ಹೆಚ್ಚಿಸಲು ವಿಟಮಿನ್ ಸಿ, ಭ್ರೂಣದ ಬುದ್ಧಿ ಬೆಳವಣಿಗೆಗೆ ಐರನ್ ಸಿಗುವ ಜೊತೆಗೆ ಹಲವು ಪೋಷಕಸತ್ವಗಳು ಜೊತೆಗೂಡುತ್ತವೆ. ಇನ್ನು ಗರ್ಭಿಣಿಯರಿಗೆ ಕಾಡುವ ಕೂದಲುದುರುವಿಕೆ, ಮಲಬದ್ಧತೆ, ಚರ್ಮದ ಮೆಲಾಸ್ಮ ಕಡಿಮೆಯಾಗುತ್ತದೆ.

ಕಾಳುಗಳನ್ನು ಹಾಗೆಯೇ ತಿನ್ನುವುದಕ್ಕಿಂತ ಅದನ್ನು ನೀರಲ್ಲಿ ನೆನಸಿಟ್ಟು, ಮೊಳಕೆ ಬಂದ ಮೇಲೆ ತಿಂದ್ರೆ ಅದರಲ್ಲಿ ಪೌಷ್ಟಿಕಾಂಶ ಜಾಸ್ತಿ ಇರುತ್ತದೆ. ಮೊಳಕೆ ಒಡೆದ ಕಾಳುಗಳನ್ನು ಬೇಯಿಸಿ ತಿನ್ನುವುದಕ್ಕಿಂದ ಹಸಿಯಾಗಿಯೇ ಸೇವಿಸುವುದು ಉತ್ತಮ. ಯಾಕೆಂದರೆ ಮೊಳಕೆ ಕಾಳುಗಳನ್ನು ಬೇಯಿಸಿದಾಗ ಅದರ ಪೌಷ್ಟಿಕತೆ ದೇಹಕ್ಕೆ ಸಿಗಲ್ಲ. ಮೊಳಕೆ ಕಾಳಲ್ಲಿ ಪ್ರೋಟಿನ್, ಫೈಬರ್, ವಿಟಮಿನ್ಸ್, ಕಬ್ಬಿಣದ ಅಂಶ, ಕ್ಯಾಲ್ಸಿಯಂ ಹೀಗೆ ದೇಹಕ್ಕೆ ಬೇಕಾದ ಆರೋಗ್ಯಕರ ಅಂಶಗಳು ಇರುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

One Comment

ಐರಾವಣ

ಅರ್ಜುನನ ಪುತ್ರ ಐರಾವಣ, ನಾಗರಾಣಿ ಉಲುಪಿಯ ಮಗ

ಕೊನೆಗೂ ನಡೆಯಿತು ಸತ್ಯ ಕಾರ್ತಿಕ್ ಮದುವೆ ಮುಂದಿದೆ ದೊಡ್ಡ ಟ್ವಿಸ್ಟ್.

ಕೊನೆಗೂ ನಡೆಯಿತು ಸತ್ಯ ಕಾರ್ತಿಕ್ ಮದುವೆ ಮುಂದಿದೆ ದೊಡ್ಡ ಟ್ವಿಸ್ಟ್.