ಚಳಿಗಾಲದ ಸಂದರ್ಭದಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳಿಗೆ ಹೊಂದಿಕೊಂಡಂತೆ ಗಂಟಲು ನೋವು ಬಹುತೇಕ ಜನರಲ್ಲಿ ಸಾಮಾನ್ಯವಾಗಿರುತ್ತದೆ. ಯಾರಿಗೆ ಗಂಟಲು ನೋವು ಹೆಚ್ಚಾಗಿರುತ್ತದೆ ಅವರಿಗೆ ರಾತ್ರಿಯ ಸಮಯದಲ್ಲಿ ನಿದ್ರೆ ಬರುವುದಿಲ್ಲ, ಏನನ್ನಾದರೂ ತಿನ್ನಲು, ಕುಡಿಯಲು, ನುಂಗಲು ಕಷ್ಟವಾಗುತ್ತದೆ.
ಗಂಟಲಿನಲ್ಲಿ ನೋವು ಕಾಣಿಸಿಕೊಳ್ಳುವುದು ಒಂದು ಸಾಮಾನ್ಯ ಲಕ್ಷಣ. ಒಂದು ಅಂದಾಜಿನ ಪ್ರಕಾರ ಪ್ರತಿ ವರ್ಷ ಗಂಟಲು ನೋವಿನಿಂದ 13 ದಶಲಕ್ಷಕ್ಕೂ ಹೆಚ್ಚು ಜನ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಾರೆ ಎಂದು ಕೆಲವು ಅಧ್ಯಯನಗಳು ತಿಳಿಸುತ್ತವೆ. ಶಾರೀರಿಕ ರಚನೆಯ ದೃಷ್ಠಿಯಿಂದ ಗಂಟಲು ಒಳ ಅಂಗವಾಗಿದರುವುದರಿಂದ ಇದು ಎಲ್ಲಾ ರೀತಿಯಿಂದಲೂ ಬಹಳ ಸುರಕ್ಷತೆ ಹೊಂದಿದೆ.
ಗಂಟಲಿನಲ್ಲಿ ನೋವು ಕಾಣಿಸಿಕೊಳ್ಳುವುದು ಒಂದು ಸಾಮಾನ್ಯ ಲಕ್ಷಣ. ಒಂದು ಅಂದಾಜಿನ ಪ್ರಕಾರ ಪ್ರತಿ ವರ್ಷ ಗಂಟಲು ನೋವಿನಿಂದ 13 ದಶಲಕ್ಷಕ್ಕೂ ಹೆಚ್ಚು ಜನ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಾರೆ ಎಂದು ಕೆಲವು ಅಧ್ಯಯನಗಳು ತಿಳಿಸುತ್ತವೆ. ಶಾರೀರಿಕ ರಚನೆಯ ದೃಷ್ಠಿಯಿಂದ ಗಂಟಲು ಒಳ ಅಂಗವಾಗಿದರುವುದರಿಂದ ಇದು ಎಲ್ಲಾ ರೀತಿಯಿಂದಲೂ ಬಹಳ ಸುರಕ್ಷತೆ ಹೊಂದಿದೆ.
ಒಂದು ಗ್ಲಾಸ್ ನೀರಿನಲ್ಲಿ ಏಲಕ್ಕಿ ನೆನಸಿಡಬೇಕು. ಮರುದಿನ ಬೆಳಿಗ್ಗೆ ಚಿಟಿಕೆ ಉಪ್ಪು ಹಾಕಿ, ಅದನ್ನು ಗಂಟಲಿಗೆ ಹಾಕಿಕೊಂಡು ಗುಳು ಗುಳು ಮಾಡಿದರೆ ಗಂಟಲು ಕೆರೆತ, ನೋವು ಕಡಿಮೆಯಾಗುತ್ತದೆ.
ಶುಂಠಿ ಚಹಾ ಬೇರೆಲ್ಲಾ ಔಷಧಿಗಳಿಗಿಂತ ಬಹಳ ಚೆನ್ನಾಗಿ ಕೆಲಸ ಮಾಡುತ್ತದೆ. ಸುತ್ತಲಿನ ಪ್ರಕೃತಿಯ ವ್ಯತ್ಯಾಸದಿಂದ ಉಂಟಾದ ಇಂತಹ ಸಮಸ್ಯೆಗಳನ್ನು ಕ್ಷಣ ಮಾತ್ರದಲ್ಲಿ ನಿವಾರಣೆ ಮಾಡುವ ಶಕ್ತಿ ಶುಂಠಿ ಚಹಾಕ್ಕೆ ಇದೆ. ಅದರಲ್ಲೂ ಗಂಟಲು ನೋವಿನ ಸಮಸ್ಯೆಗೆ ಬಿಸಿ ಬಿಸಿ ಶುಂಠಿ ಚಹಾ ಬೆಸ್ಟ್ ಮನೆಮದ್ದು.
ಹಸಿ ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ಈ ಸಮಯದಲ್ಲಿ ಜಗಿದು ತಿನ್ನುವ ಮೂಲಕ ಗಂಟಲು ನೋವಿನಿಂದ ಮುಕ್ತಿ ಪಡೆಯಬಹುದು.
ಹಸಿ ಬೆಳ್ಳುಳ್ಳಿ ತಿನ್ನಲು ಸಾಧ್ಯವಾಗದೆ ಇದ್ದವರು ತಯಾರು ಮಾಡುವ ಸೂಪ್ ಗೆ ಬೆಳ್ಳುಳ್ಳಿಯನ್ನು ಸಣ್ಣದಾಗಿ ಹೆಚ್ಚಿ ಹಾಕಿ ಬೆರೆಸಿಕೊಂಡು ಸೇವನೆ ಮಾಡಬಹುದು. ಬಹುತೇಕ ಅಡುಗೆಗಳಲ್ಲಿ ಬೆಳ್ಳುಳ್ಳಿಯನ್ನು ಇದು ರೀತಿ ಬೆರೆಸಿ ಆಹಾರ ಸೇವನೆ ಮಾಡಬಹುದು.
ಗಂಟಲಿನ ನೋವು, ಊತ ಅಥವಾ ನೋವನ್ನು ತೆಗೆದು ಹಾಕಲು, ಉಪ್ಪು ನೀರಿನಿಂದ ಗಾರ್ಗ್ಲ್ ಮಾಡಬೇಕು. ಇದು ಗಂಟಲಿಗೆ ಹೆಚ್ಚಿನ ಪರಿಹಾ ನೀಡುತ್ತದೆ. ಗಾರ್ಗ್ಲಿಂಗ್ ಮಾಡಲು ನೀರು ಸ್ವಲ್ಪ ಬೆಚ್ಚಗಿರಬೇಕು. ಗಂಟಲು ಸ್ವಲ್ಪ ನೋಯುತ್ತಿದ್ದರೆ, ಗಾರ್ಗ್ ಮಾಡುವ ಬದಲು ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ.
ಶೀತ ಆಗಿದ್ದಾಗ ಏಲಕ್ಕಿ ಟೀಯನ್ನು ಕುಡಿದರೆ ಬೇಗ ವಾಸಿಯಾಗುತ್ತದೆ. ಇದು ಕಟ್ಟಿಕೊಂಡಿರುವ ಮೂಗನ್ನು ಗುಣಮಾಡಿ ಉಸಿರಾಟ ಸರಾಗವಾಗುವಂತೆ ಮಾಡುತ್ತದೆ. ಹಾಗೇ ಮೈಕೈ ನೋವನ್ನೂ ಕಡಿಮೆ ಮಾಡುತ್ತದೆ.
ಬಿಸಿ ಹಾಲಿಗೆ ಶುದ್ಧ ಅರಿಶಿನ ಮತ್ತು ಬೆಲ್ಲ ಹಾಕಿ ಚೆನ್ನಾಗಿ ಕಲಸಿ ಕುಡಿಯುವುದರಿಂದ ಕೆಮ್ಮು ಶಮನವಾಗುತ್ತೆ ಜೊತೆಗೆ ಶೀತವೂ ನಿಯಂತ್ರಣಕ್ಕೆ ಬರುತ್ತದೆ.
ಜೇನುತುಪ್ಪ ಮತ್ತು ಕಾಳುಮೆಣಸಿನ ಪುಡಿ, ತುಂಬಾ ಸುಲಭ ರೀತಿಯಲ್ಲಿ ಕಾಳುಮೆಣಸಿನ ಪುಡಿ ಮತ್ತು ಜೇನುತುಪ್ಪವನ್ನು ನಿಮ್ಮ ಕೆಮ್ಮಿನ ಸಮಸ್ಯೆಯ ವಿರುದ್ಧ ಕೆಲಸ ಮಾಡುವಂತೆ ಮಾಡಬಹುದು.
ಕರುಳಿನಲ್ಲಿ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುವ ಟಾಕ್ಸಿನ್‌ಗಳ ಸಂಗ್ರಹವಾಗಿರುತ್ತದೆ. ಇದರಿಂದ ಗಂಟಲು ನೋವಿನಂತಹ ಆರೋಗ್ಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಏಲಕ್ಕಿ ಜೀರ್ಣಶಕ್ತಿಯನ್ನು ಹೆಚ್ಚು ಮಾಡಿ, ಅನಗತ್ಯ ಟಾಕ್ಸಿನ್‌ಗಳನ್ನು ಹೊರಹಾಕುವ ಶಕ್ತಿಯನ್ನು ಹೊಂದಿದೆ.
ಒಂದು ಲೋಟ ಬಿಸಿನೀರಿಗೆ 1 ಟೀಚಮಚ ಜೇನುತುಪ್ಪ ಮತ್ತು ಸ್ವಲ್ಪ ನಿಂಬೆ ಹಣ್ಣಿನ ರಸವನ್ನು ಚೆನ್ನಾಗಿ ಹಿಂಡಿ ಕಲಸಿ ಉಗುರು ಬೆಚ್ಚಗಿರುವ ತಾಪಮಾನದಲ್ಲಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಗಂಟಲು ನೋವಿನಿಂದ ಮುಕ್ತಿ ಪಡೆದುಕೊಳ್ಳಬಹುದು.
ಇದರ ಜೊತೆಗೆ ವೈರಾಣುಗಳ ಸೋಂಕಿನಿಂದಲೂ ಸಹ ಶ್ರೀಘ್ರವಾದ ಪರಿಹಾರ ಕಂಡುಕೊಳ್ಳಲು ಅನುಕೂಲವಾಗುತ್ತದೆ.
ಬೆಳ್ಳುಳ್ಳಿಯಲ್ಲಿ ಅತ್ಯಂತ ಶಕ್ತಿಯುತವಾದ ಆಂಟಿ- ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳು ಸಾಕಷ್ಟು ಕಂಡುಬಂದಿದ್ದು, ಗಂಟಲು ನೋವು ಅಥವಾ ಗಂಟಲಿನ ಸೋಂಕಿನಿಂದ ತಕ್ಷಣವೇ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ.
ಉಗುರು ಬೆಚ್ಚಗಿನ ನೀರು ಕುಡಿದ ಸಂದರ್ಭದಲ್ಲಿ ಗಂಟಲಿನ ನೋವು ಮತ್ತು ಕೆಮ್ಮಿನ ಸಮಸ್ಯೆಯಿಂದ ಕ್ರಮೇಣವಾಗಿ ಪರಿಹಾರವನ್ನು ಪಡೆದುಕೊಳ್ಳುತ್ತಾ ಹೋಗುತ್ತೀರಿ.
ರಾತ್ರಿಯಲ್ಲಿ ಅರಿಶಿನ ಹಾಲನ್ನು ಕುಡಿಯಬೇಕು. ಅರಿಶಿನವು ಉರಿಯೂತ ಮತ್ತು ನೋವನ್ನು ಕಡಿಮೆ ಮಾಡುವ ಪ್ರತಿಜೀವಕ ಮತ್ತು ನಂಜುನಿರೋಧಕ ಅಂಶಗಳನ್ನು ಒಳಗೊಂಡಿದೆ. ಅರಿಶಿನವು ಗಂಟಲಿಗೆ ಪ್ರಯೋಜನಕಾರಿ.
ಒಂದು ಚಿಟಿಕೆ ಏಲಕ್ಕಿ ಪೌಡರ್, ಒಂದು ಚಿಟಿಕೆ ಉಪ್ಪು, ಒಂದು ಟೀ ಸ್ಪೂನ್ ತುಪ್ಪ, ಅರ್ಧ ಟೀ ಸ್ಪೂನ್ ಜೇನುತುಪ್ಪವನ್ನು ಚೆನ್ನಾಗಿ ಮಿಶ್ರ ಮಾಡಿ ಸೇವಿಸಿದರೆ ಕಫದ ಸಮಸ್ಯೆ ಕಡಿಮೆಯಾಗುತ್ತದೆ
ಸ್ವಲ್ಪ ನಿಂಬೆಹಣ್ಣಿನ ರಸವನ್ನು ಮತ್ತು ಸ್ವಲ್ಪ ಪ್ರಮಾಣದಲ್ಲಿ ಜೇನುತುಪ್ಪವನ್ನು ಸೇರಿಸಿ ಸೇವನೆ ಮಾಡುವುದರಿಂದ ಕೆಮ್ಮಿನ ಪರಿಹಾರ ಬಹಳ ಬೇಗನೆ ಆಗುತ್ತದೆ ಮತ್ತು ಗಂಟಲು ನೋವು ಮತ್ತು ಗಂಟಲಿನ ಭಾಗದ ಕಫ ಸಹ ಮಾಯವಾಗುತ್ತದೆ.
ಗಂಟಲು ಕೆರೆತ ಸಹನೀಯವಲ್ಲದಿದ್ದರೆ ಮಿಂಟ್, ಹಾಲ್ಸ್, ಸ್ಟ್ರಪ್ಸಿಲ್‍ಗಳನ್ನು ಬಾಯಲ್ಲಿ ಇಟ್ಟುಕೊಂಡು ಚೀಪಬೇಕು ಇವುಗಳಲ್ಲಿರುವ ಪುದೀನ, ಲವಂಗ, ಶುಂಠಿ ರಸಗಳು ಗಂಟಲು ಕೆರೆತವನ್ನು ಕಡಿಮೆ ಮಾಡುತ್ತವೆ.
ಒಣಕೆಮ್ಮು ಇರುವವರು ಒಣದ್ರಾಕ್ಷಿಯನ್ನು ಬಿಸಿನೀರಿನಲ್ಲಿ ಕುದಿಸಿ ಸ್ವಲ್ಪ ಕೆಂಪು ಸಕ್ಕರೆ ಹಾಕಿ ಕಷಾಯ ಮಾಡಿ ಕುಡಿಯುವುದರಿಂದ ಉಷ್ಣದಿಂದಾದ ಕೆಮ್ಮ ಕಡಿಮೆಯಾಗುತ್ತದೆ.
ಗಂಟಲು ನೋವು ಅಥವಾ ಶೀತ ಕೆಮ್ಮಿನ ಸಂದರ್ಭದಲ್ಲಿ ಶುಂಠಿ ಬಳಸಿ. ಶುಂಠಿಯು ಜಿಂಜೆರಾಲ್ ಹೊಂದಿದೆ. ಇದು ಶಕ್ತಿಯುತ ಔಷಧೀಯ ಗುಣ ಹೊಂದಿದೆ. ಗಂಟಲು ನೋವು ನಿವಾರಣೆಗೆ ಶುಂಠಿಯನ್ನು ತುರಿದು ಒಂದು ಲೋಟ ನೀರಿಗೆ ಹಾಕಿ ಕುದಿಸಿ. 5 ನಿಮಿಷಗಳ ಕಾಲ ಕುದಿಸಿದ ನಂತರ, ಆ ನೀರನ್ನು ಫಿಲ್ಟರ್ ಮಾಡಿ ಮತ್ತು ಅದನ್ನು ಉಗುರು ಬೆಚ್ಚಗಿನ ಕುಡಿಯಿರಿ.
ಜೀರಿಗೆ ಹಾಗು ಶುಂಠಿ ಕಷಾಯಕ್ಕೆ ಬೆಲ್ಲ ಹಾಕಿ ಕುಡಿಯಬೇಕು ತುಳಸಿ ಎಲೆಗಳನ್ನು ನೀರಿಗೆ ಹಾಕಿ ಕುದಿಸಿ ಕಷಾಯ ಮಾಡಿಕೊಂಡು ಅದಕ್ಕೆ ಸ್ವಲ್ಪ ಜೇನುತುಪ್ಪ ಬೆರಸಿ ಕುಡಿಯುವುದರಿಂದ ಕೆಮ್ಮು ನಿವಾರಣೆಯಾಗುತ್ತದೆ. ಮಕ್ಕಳು ಮತ್ತು ವೃದ್ಧರಿಲ್ಲಿ ಕೆಮ್ಮು ಕಾಣಿಸಿಕೊಂಡರೆ ನಿವಾರಣೆಯಾಗುವವರಗೂ ಬಿಸಿನೀರು ಅಥವಾ ಕಾಯಿಸಿ ಆರಿಸಿದ ನೀರನ್ನು ನೀಡಬೇಕು.
ಧನ್ಯವಾದಗಳು.
GIPHY App Key not set. Please check settings