ಭಾರತದ ಗ್ರಾಮೀಣ ಕ್ರೀಡೆ ಆಗಿರುವ ಕಬಡ್ಡಿ ಸುಮಾರು ೪೦೦೦ ವರ್ಷಗಳಷ್ಟು ಪುರಾತನವಾದದ್ದು. ಭಾರತದ ದೇಸೀ ಕ್ರೀಡೆ ಕಬಡ್ಡಿಯು ದೇಶಕ್ಕೆ ಸಾಕಷ್ಟು ಹೆಗ್ಗಲಿಕೆಯ ಜೊತೆಗೆ ಹೆಸರನ್ನೂ ತಂದು ಕೊಟ್ಟಿದೆ. ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಅಂದರೆ ಗ್ರಾಮೀಣ ಜನರಿಗೆ ಬಹಳ ಇಷ್ಟ.ಪುರುಷರ ಹಾಗೂ ಮಹಿಳೆಯರ ಕಬಡ್ಡಿ ಆಡುತ್ತಾರೆ.
ಈ ಕಬಡ್ಡಿ ಆಟದಲ್ಲಿರುವುದು ನೇರ ನೇರ ಯುದ್ದ. ಬಲ, ಚಾಕಚಕ್ಯತೆ, ಕೌಶಲ್ಯ ಅವಲಂಬಿಸಿದ್ದು. ಮೋಸ ವಂಚನೆ ಕಪಟತನಕ್ಕೆ ಇಲ್ಲಿ ಅವಕಾಶವಿಲ್ಲ. ಆಟಗಾರ ಎದುರು ರಾಜ್ಯವನ್ನು ಪ್ರವೇಶಿಸಿ, ರಾಜದಾನಿಯನ್ನು ಮುಟ್ಟಿ, ಅಲ್ಲಿರುವ ಯಾವುದೇ ಒಂದು ಅಂಗವನ್ನು ತನ್ನ ಕೈವಶ ಮಾಡಿಕೊಳ್ಳಬೇಕು. ಅಂತಪ್ಪುರಕ್ಕೆ ನುಗ್ಗಲು ಯತ್ನಿಸಿ ವೈರಿಪಡೆಯನ್ನು ಕೆಣಕಬೇಕು. ಏಳು ಅಂಗಗಳಲ್ಲಿ ಯಾವ ಅಂಗ ದುರ‍್ಬಲವಾಗಿದೆ ಎಂಬುದನ್ನು ಗುರುತಿಸಿ ಅದರ ಮೇಲೆ ದಾಳಿ ಮಾಡಬೇಕು. ಗೆಲುವು ಸಾದಿಸಬೇಕು. ದಾಳಿಗೊಳಗಾದ ರಾಜ್ಯ ತನ್ನ ಸಂಗಟಿತ ಪ್ರಯತ್ನದಿಂದ ಎದುರು ತಂಡದ ಹುದ್ದರಿಯನ್ನು ಕಟ್ಟಿಹಾಕಬೇಕು, ಕೈವಶ ಮಾಡಿಕೊಳ್ಳಬೇಕು.
ಕಬಡ್ಡಿ ಕಬಡ್ಡಿ ಎನ್ನುತ್ತ ಉಸಿರು ಹಿಡಿಯುವುದು ಜೀವಿಸುವ ಮತ್ತು ಸಾಯುವ ಸಂಗತಿಯನ್ನು ಬಿಂಬಿಸುತ್ತದೆ. ಒಂದು ಹುದ್ದರಿ ಔಟಾದರೆ ಒಂದು ಅಂಗ ಸತ್ತೇ ಹೋಗುತ್ತದೆ. ಮತ್ತೆ ಈ ಸತ್ತ ಅಂಗಕ್ಕೆ ಜೀವ ಬರಬೇಕಾದರೆ ಎದುರು ರಾಜ್ಯದ ಒಂದು ಅಂಗ ಸಾಯಲೇಬೇಕು. ರಾಜ್ಯದಾಡಳಿತ ಎರಡು ಮುಕ್ತ ಹೊಂದಿದೆ. ತನ್ನ ರಾಜ್ಯದ ವಿಸ್ತಾರಕ್ಕಾಗಿ ತಾನೆ ವೈರಿ ರಾಜ್ಯದ ಮೇಲೆ ಏರಿ ಹೊಗಿ ಯುದ್ದ ಸಾರುವುದು ಒಂದು. ತನ್ನ ಮೇಲೆ ದಾಳಿ ಮಾಡಿದ ವೈರಿ ರಾಜನನ್ನು ಹಿಡಿದು ಹಾಕಿ ಸೋಲಿಸುವುದು ಎರಡು. ಈ ಎರಡು ಸಂದರ‍್ಬಗಳು ಜೀವನ್ಮರಣದ ಕಟಿಣ ಪ್ರಸಂಗಗಳೆ. ಉಸಿರಿರುವವರೆಗೆ ಹೋರಾಡಬೇಕು. ವೀರತನವೇ ಮೌಲ್ಯ. ಸಾವು ಬಂದರೂ ಅದು ವೀರ ಮರಣ. ರಾಜ ತನ್ನ ರಾಜ್ಯಕ್ಕೆ ರಾಜ್ಯದ ಯಾವುದೇ ಅಂಗಕ್ಕೆ ದಕ್ಕೆ ಬರದಂತೆ ಎಚ್ಚರವಾಗಿರಬೇಕು. ಆಕ್ರಮಣಶೀಲತೆ, ಮುನ್ನುಗ್ಗುವ ಉತ್ಸಾಹ, ಕಾಲ್ಚಳಕ, ಕೈಚಳಕ, ಎದುರಾಳಿಯನ್ನು ಕೆಣಕಿ ಹಿಮ್ಮೆಟ್ಟಿಸುವ ಅಸಮ ಬಲ ಇವೆಲ್ಲ ರಾಜನಿಗೆ ಇರಲೇಬೇಕು. ಇಲ್ಲದೆ ಹೋದರೆ ಸೋಲು ಸಾವು ಖಚಿತ.
ಏಷ್ಯನ್ ಗೇಮ್ಸ್‌ನಲ್ಲಿ ಸತತ ಎರಡನೇ ಬಾರಿಗೆ ಬಂಗಾರ ಗೆದ್ದಿರುವ ಭಾರತ ಮಹಿಳಾ ತಂಡ ಕೂಡ ವಿಶ್ವ ಕಪ್ ಕಬಡ್ಡಿಯಲ್ಲಿ ಸತತ ಎರಡು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡು ಪ್ರಭುತ್ವ ಮೆರೆದಿದೆ.
2012ರಲ್ಲಿ ಪಂಜಾಬ್‌ನಲ್ಲಿ ನಡೆದ ಮೊದಲ ವಿಶ್ವಕಪ್‌ನಲ್ಲಿ ಇರಾನ್ ತಂಡವನ್ನು ಮಣಿಸಿ ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡ ಕರ್ನಾಟಕದ ಮಮತಾ ಪೂಜಾರಿ ಸಾರಥ್ಯದ ಭಾರತ ತಂಡ 2013ರಲ್ಲಿ ನಡೆದ ಟೂರ್ನಿ ಯಲ್ಲೂ ನ್ಯೂಜಿಲೆಂಡ್ ತಂಡವನ್ನು ಸದೆಬಡಿದು ದ್ವಿತೀಯ ಬಾರಿಗೆ ಪ್ರಶಸ್ತಿ ತಮ್ಮದಾಗಿಸಿಕೊಂಡಿದೆ.
ಕಬಡ್ಡಿ ಆಟದ ನಿಯಮಗಳು
ಸರಿಯಾಗಿ ಎರಡು ಭಾಗವಾಗಿ ಕೋರ್ಟ್ ವಿಭಜಿಸಲಾಗುತ್ತದೆ. ಅದೇ ಮಿಡ್ ಲೈನ್. ಈಗ ಒಂದು ಭಾಗದಲ್ಲಿ ನಿರ್ದಿಷ್ಟ ಅಳತೆಯಲ್ಲಿ ಬಾಲ್ಕ್ ಲೈನ್, ಬೋನಸ್ ಲೈನ್ ಹಾಕಲಾಗುತ್ತದೆ. ಮಿಡ್ ಲೈನ್ ಮತ್ತು ಬಾಲ್ಕ್ ಲೈನ್ ಮಧ್ಯೆ 3.75 ಮೀಟರ್ ಅಂತರ ಇರುತ್ತದೆ. ಬಾಲ್ಕ್ ಲೈನ್ ಆಚೆ 1 ಮೀಟರ್ ದೂರಕ್ಕೆ ಬೋನಸ್ ಲೈನ್ ಇರುತ್ತದೆ. ಕೊನೆ ಗೆರೆಗೂ ಬೋನಸ್ ಗೆರೆಗೂ 1.75 ಮೀಟರ್ ದೂರ ಇರುತ್ತದೆ. ಮತ್ತೊಂದು ಭಾಗದಲ್ಲೂ ಇದೇ ಅಳತೆ ಇರುತ್ತದೆ. ಅಂಗಳದ ಆ ಬದಿ ಈ ಬದಿ ಎರಡು ಕಡೆ 1 ಮೀಟರ್ ಅಗಲದ ಲಾಬಿ ಇರುತ್ತದೆ.
ಕಬಡ್ಡಿಯನ್ನ ಮಣ್ಣಿನ ನೆಲದಲ್ಲಿ ಆಡುತ್ತಾರೆ, ಮರಳಿನ ನೆಲದಲ್ಲಿ ಆಡುತ್ತಾರೆ ಅಥವಾ ಸಿಂಥೆಟಿಕ್ ಮ್ಯಾಟ್ಗಳಲ್ಲಿ ಆಡುತ್ತಾರೆ. ಪ್ರೋಕಬಡ್ಡಿಯನ್ನ ಸಿಂಥೆಟಿಕ್ ಟ್ರ್ಯಾಕ್ನಲ್ಲಿ ಆಡಲಾಗುತ್ತದೆ.
ಆಟದ ಅವಧಿ :
ಪ್ರೋಕಬಡ್ಡಿಯಲ್ಲ ಒಂದು ಕಬಡ್ಡಿ ಪಂದ್ಯದ ಅವಧಿ 40 ನಿಮಿಷ ಇರುತ್ತದೆ. ತಲಾ ಇಪ್ಪತ್ತು ನಿಮಿಷಗಳ ಎರಡು ಅವಧಿ ಇರುತ್ತದೆ. ಒಂದು ರೇಡ್ಗೆ 30 ಸೆಕೆಂಡ್ ಕಾಲಾವಕಾಶ ಕೊಡಲಾಗುತ್ತದೆ. ರೇಡಿಂಗ್ ಮಾಡುವವರು ಉಸಿರು ಹೊರಹಾಕುತ್ತಾ ಕಬಡ್ಡಿ ಕಬಡ್ಡಿ ಎಂದು ಉಚ್ಚರಿಸಬೇಕು. 30 ಸೆಕೆಂಡ್ ಒಳಗೆ ಅವರು ಕಬಡ್ಡಿ ಹೇಳುವುದು ನಿಂತರೆ ರೇಡರ್ ಔಟ್ ಆಗುತ್ತಾರೆ.
ಬಾಲ್ಕ್ ಲೈನ್, ಬೋನಸ್ ಲೈನ್ :
ರೇಡರ್ ಆದವರು ಮೊದಲು ಸಿಗುವ ಬಾಲ್ಕ್ ಲೈನ್ ಅನ್ನು ಕಾಲಿನಿಂದ ದಾಟುವುದು ಕಡ್ಡಾಯ. ಹಾಗೆಯೇ ವಾಪಸ್ ಬಂದರೆ ಔಟ್. ರೇಡ್ ಮಾಡುತ್ತಾ ಡಿಫೆಂಡಿಂಗ್ ಆಟಗಾರನನ್ನ ಸ್ಪರ್ಶಿಸಿದರೆ ರೇಡರ್ಗೆ ಅಂಕ ಸಿಗುತ್ತದೆ. ಡಿಫೆಂಡರ್ ಅನ್ನ ಟಚ್ ಮಾಡದೇ ಬಾಲ್ಕ್ ಲೈನ್ ಕೂಡ ದಾಟದಿದ್ದರೆ ರೇಡರ್ ಔಟ್.
ಬೋನಸ್ ಅಂಕ :
ರೇಡರ್ ಆದವರು ಬಾಲ್ಕ್ ಲೈನ್ ಆದ ನಂತರ ಇರುವ ಬೋನಸ್ ಲೈನ್ ಅನ್ನು ಟಚ್ ಮಾಡಿದರೆ ಒಂದು ಬೋನಸ್ ಅಂಕ ಸಿಗುತ್ತದೆ. ಆದರೆ, ಆ ಬದಿಯಲ್ಲಿ 6 ಅಥವಾ 7 ಡಿಫೆಂಡರ್ಗಳು ಇರಬೇಕು. ಆಗ ಮಾತ್ರ ರೇಡರ್ ಆದವರು ಬೋನಸ್ ಅಂಕ ಪಡೆಯಬಹುದು. ಬೋನಸ್ ಲೈನ್ ಆಚೆ ರೈಡರ್ ಒಂದು ಕಾಲನ್ನ ಇಟ್ಟು ಮತ್ತೊಂದು ಕಾಲನ್ನ ಮೇಲೆತ್ತಿರಬೇಕು, ಆಗ ಮಾತ್ರ ಬೋನಸ್ ಅಂಕ ಸಿಗುತ್ತದೆ.
ಡಿಫೆಂಡರ್ಗಳು ಬಂದು ಹಿಡಿಯುವಾಗ ರೇಡರ್ ತಪ್ಪಿಸಿಕೊಂಡು ಮಿಡ್ ಲೈನ್ ಅನ್ನು ಟಚ್ ಮಾಡಿದರೆ ಬಚಾವ್.
ಫೌಲ್:
ಡಿಫೆಂಡರ್ ಆದವರು ರೇಡರ್ನ ಬಟ್ಟೆಯನ್ನ ಹಿಡಿದುಕೊಂಡರೆ ಅದು ಫೌಲ್ ಆಗುತ್ತದೆ. ಅಥವಾ ಬಹಳ ಅಮಾನುಷವಾಗಿ ವರ್ತಿಸಿದಲ್ಲಿ ಆ ಆಟಗಾರನದ್ದು ಫೌಲ್ ಎಂದು ಪರಿಗಣಿಸಲಾಗುತ್ತದೆ. ವಿವಿಧ ರೀತಿಯ ಫೌಲ್ಗಳಿಗೆ ಗ್ರೀನ್, ಯೆಲ್ಲೋ ಮತ್ತು ರೆಡ್ ಕಾರ್ಡ್ಗಳನ್ನ ಆಟಗಾರನಿಗೆ ಅಂಪೈರ್ ಕೊಡಬಹುದು.
ಗ್ರೀನ್ ಕಾರ್ಡ್ ಎಂದರೆ ಅದು ಎಚ್ಚರಿಕೆಗೆ ಮಾತ್ರ ಸೀಮಿತ. ಯೆಲ್ಲೋ ಕಾರ್ಡ್ ಸಿಗುವ ಆಟಗಾರ ಎರಡು ನಿಮಿಷ ಆಟದಿಂದ ನಿರ್ಬಂಧಿತನಾಗುತ್ತಾನೆ. ಜೊತೆಗೆ ಒಂದು ಟೆಕ್ನಿಕಲ್ ಪಾಯಿಂಟ್ ಎದುರಾಳಿ ತಂಡಕ್ಕೆ ಸಿಗುತ್ತದೆ. ರೆಡ್ ಕಾರ್ಡ್ ಎಂದರೆ ಆಟಗಾರ ಇಡೀ ಪಂದ್ಯಕ್ಕೆ ನಿಷಿದ್ಧ. ಆ ಆಟಗಾರನಿಗೆ ಸಬ್ಸ್ಟಿಟ್ಯೂಟ್ಗೆ ಅವಕಾಶ ಇರುವುದಿಲ್ಲ. ಜೊತೆಗೆ ಎದುರಾಳಿ ತಂಡಕ್ಕೆ ಒಂದು ಟೆಕ್ನಿಕಲ್ ಪಾಯಿಂಟ್ ಕೂಡ ಸಿಗುತ್ತದೆ.
ಪ್ರೊ ಕಬಡ್ಡಿ 2014 ರಲ್ಲಿ ಸ್ಥಾಪನೆಯಾದ ಒಂದು ವೃತ್ತಿಪರ ಕಬಡ್ಡಿ ಲೀಗ್ ಆಗಿದೆ. ಅದು ಎಂಟು ನಗರ ಲೀಗ್ “ಕಾರವಾನ್ ಸ್ವರೂಪ” ದ ಒಂದು ಲಿಘ್-ಒಕ್ಕೂಟ. ಒಟ್ಟು ಎಲ್ಲಾ 60 ಪಂದ್ಯಗಳನ್ನು ಆಡಲು 8 ಸ್ಥಳಗಳಲ್ಲಿ ಒಟ್ಟಿಗೆ ಪ್ರಯಾಣ ಮಾಡುವ ಸೂತ್ರವನ್ನು ಇದು ಹೊಂದಿದೆ. ಇದು ಶೌರ್ಯದ ಕ್ರೀಡೆ. ಮಹೀಂದ್ರಾ ಸಮೂಹದ ಶ್ರೀ ಆನಂದ್ ಮಹೀಂದ್ರಾ, ಅಧ್ಯಕ್ಷ, ಮತ್ತು ಶ್ರೀ ಚಾರು ಶರ್ಮಾ, ಸಹ ಶೌರ್ಯದ ಸ್ವರೂಪದ ಕ್ರೀಡೆಗಳ ನಿರ್ದೇಶಕ. ಇವರ ಸಹಯೋಗದಿಂದ ಸ್ಥಾಪಿತವಾದ ಒಂದು ಸಂಸ್ಥೆ. ಸ್ಟಾರ್ ಇಂಡಿಯಾ 74% ಪಾಲನ್ನು ಪಡೆದುಕೊಂಡಿತು. ಈಗ ಸ್ಟಾರ್ ಇಂಡಿಯಾವು . ಶೌರ್ಯದ ಲೀಗ್ ಕ್ರೀಡೆಯ ಬಹುತೇಕ ಮಾಲೀಕರತ್ವ ಹೊಂದಿದೆ ಕ್ರೀಡೆಯನ್ನು ಮತ್ತಷ್ಟು ನವೀಕರಿಸಲು ಆಯ್ಕೆಯನ್ನು ಇಂಟರ್ನ್ಯಾಷನಲ್ ಕಬಡ್ಡಿ ಫೆಡರೇಷನ್ (ಐ.ಕೆ.ಎಫ್) 10 ವರ್ಷಗಳ ಕಾಲ ಲೀಗ್‍ನ್ನು ಸಂಘಟಿಸಲು ಹಕ್ಕುಗಳನ್ನು ಪಡೆದಿದೆ.
ಈಗ ಈ ಆಟದಲ್ಲಿನ ಒಂದೊಂದು ಸಂಗತಿಯನ್ನು ನಮ್ಮ ಪ್ರಾಚೀನ ರಾಜ್ಯ ಸಾಮ್ರಾಜ್ಯಗಳ ರೂಪ ಸ್ವರೂಪಕ್ಕೆ ಸಮನ್ವಯಗೊಳಿಸಿ ನೋಡಿದರೆ ಒಂದು ಬೆಡಗು ನಮ್ಮೆದುರು ಗೋಚರವಾಗುತ್ತದೆ. ಇದು ಕೇವಲ ಆಟವಲ್ಲ ಎರಡು ಸಾಮ್ರಾಜ್ಯಗಳ ಮದ್ಯೆ ನಡೆಯುವ ಯುದ್ದ, ದರ‍್ಮ ಯುದ್ದ ಎಂಬ ಸತ್ಯ ಗೊತ್ತಾಗುತ್ತದೆ. ಮದ್ಯ ಗೆರೆ ಎರಡು ಸಾಮ್ರಾಜ್ಯಗಳ ಮದ್ಯದ ಗಡಿ. ಜೀವಗೆರೆ ರಾಜ್ಯದ ರಾಜದಾನಿ. ಬೋನಸ್ ಗೆರೆ ರಾಜ್ಯದ ಅಂತಪ್ಪುರ, ರಾಣಿವಾಸ. ಏಳು ಜನ ಆಟಗಾರರು ರಾಜ್ಯದ ಏಳು ಅಂಗಗಳ ಪ್ರತೀಕ. (ರಾಜ್ಯದ ಏಳು ಅಂಗಗಳು: ರಾಜ, ಮಂತ್ರಿ, ಜನಪದ, ಕೋಟೆ, ಬಂಡಾರ, ಸೈನ್ಯ ಮತ್ತು ಮಿತ್ರ.) ಸಾಮ್ರಾಜ್ಯದ ಯಾವುದೇ ಒಂದು ಅಂಗ ಊನವಾದರು ಕೇಡು ಕಟ್ಟಿಟ್ಟ ಬುತ್ತಿ.
ಧನ್ಯವಾದಗಳು.
casibom 158 giris: casibom – casibom guncel
casibom guncel giris adresi
casibom guncel: casibom guncel – casibom guncel
http://casibom.auction/# casibom guncel giris
comprar viagra sin gastos de envГo: viagra precio – farmacia gibraltar online viagra
farmacia online barcelona: comprar cialis online seguro – farmacia online envГo gratis
farmacia online envГo gratis: precio cialis en farmacia con receta – farmacia online espaГ±a envГo internacional
п»їFarmacia online migliore: Cialis generico controindicazioni – farmacie online sicure
farmaci senza ricetta elenco: Tadalafil generico migliore – Farmacia online miglior prezzo
farmacia online senza ricetta: Farmacie on line spedizione gratuita – top farmacia online
acquisto farmaci con ricetta: Brufen 600 prezzo con ricetta – migliori farmacie online 2024
rybelsus generic: rybelsus cost – Semaglutide pharmacy price