in ,

ಟಿ 20 ವಿಶ್ವಕಪ್ ಕ್ರಿಕೆಟ್ ಮುಗಿಯುವ ಸಮಯ, ಇನ್ನು ಶುರುವಾಗಲಿದೆ 2022ರ ಫಿಫಾ ಫುಟ್ಬಾಲ್‌ ವಿಶ್ವಕಪ್‌

ಶುರುವಾಗಲಿದೆ 2022ರ ಫಿಫಾ ಫುಟ್ಬಾಲ್‌ ವಿಶ್ವಕಪ್‌
ಶುರುವಾಗಲಿದೆ 2022ರ ಫಿಫಾ ಫುಟ್ಬಾಲ್‌ ವಿಶ್ವಕಪ್‌

ಫಿಫಾ ವಿಶ್ವಕಪ್ 2022 ನವೆಂಬರ್ 20 ರಿಂದ ಪ್ರಾರಂಭವಾಗಲಿದೆ. ವಿಶ್ವ ಫುಟ್‌ಬಾಲ್‌ನ ಮಹಾ ಸಂಗ್ರಾಮಕ್ಕೆ ಇಡೀ ಜಗತ್ತು ಉತ್ಸಾಹದಿಂದ ಕುದಿಯುತ್ತಿದೆ. ಕತಾರ್ ಕೂಡ ಸಂಪೂರ್ಣವಾಗಿ ಇದಕ್ಕಾಗಿ ನವ ವಧುವಿನಂತೆ ಸಿದ್ಧವಾಗಿದೆ.

2022ರ ಫಿಫಾ ಫುಟ್ಬಾಲ್‌ ವಿಶ್ವಕಪ್‌ನಲ್ಲಿ 32 ತಂಡಗಳು ಸೆಣಸಲಿದ್ದು, ತಲಾ 4 ತಂಡಗಳ 8 ಗುಂಪುಗಳನ್ನು ರಚಿಸಲಾಗಿದೆ. ಪ್ರತಿ ಗುಂಪಿನಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ನಾಕೌಟ್‌ ಹಂತಕ್ಕೆ ಪ್ರವೇಶಿಸಲಿವೆ. 8 ಪ್ರಿ ಕ್ವಾರ್ಟರ್‌ ಫೈನಲ್‌, 4 ಕ್ವಾರ್ಟರ್‌ ಫೈನಲ್‌, 2 ಸೆಮಿಫೈನಲ್‌ಗಳ ಬಳಿಕ ಫೈನಲ್‌ಗೇರುವ ತಂಡಗಳು ಯಾವುವು ಎನ್ನುವುದು ನಿರ್ಧಾರವಾಗಲಿದೆ.

ಫಿಫಾ ವಿಶ್ವ ಕಪ್ ಫುಟ್ಬಾಲ್ ಕ್ರೀಡೆಯ ಅತ್ಯುನ್ನತ ಪ್ರಶಸ್ತಿಯಾಗಿದೆ. ಇದನ್ನು ಸಾಮಾನ್ಯವಾಗಿ ವಿಶ್ವ ಕಪ್ ಫುಟ್ಬಾಲ್ ಎಂದೇ ಕರೆಯುವುದು ವಾಡಿಕೆ. ಈ ಪಂದ್ಯಾವಳಿಯು ಫಿಫಾ ( ಅಂತರರಾಷ್ಟ್ರೀಯ ಫುಟ್ಬಾಲ್ ಫೆಡರೇಷನ್ )ದ ಸದಸ್ಯರಾಷ್ಟ್ರಗಳ ಪುರುಷರ ತಂಡಗಳ ನಡುವೆ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವುದು. ೧೯೩೦ರಲ್ಲಿ ಆರಂಭವಾದ ಈ ಪಂದ್ಯಾವಳಿ ೧೯೪೦ ಮತ್ತು ೧೯೪೪ರಲ್ಲಿ ದ್ವಿತೀಯ ವಿಶ್ವಯುದ್ಧದ ಕಾರಣದಿಂದಾಗಿ ನಡೆಯಲಿಲ್ಲ. ಈ ಪಂದ್ಯಾವಳಿಯ ಅಂತಿಮ ಚರಣವು ಸಾಮಾನ್ಯವಾಗಿ ವಿಶಕಪ್ ಫುಟ್ಬಾಲ್ ಫೈನಲ್ಸ್ ಎಂದು ಕರೆಯಲ್ಪಟ್ಟು ವಿಶ್ವದ ಅತಿ ಹೆಚ್ಚಿನ ಸಂಖ್ಯೆಯ ಜನತೆಯಿಂದ ನೇರವಾಗಿ ದೂರದರ್ಶನದ ಮೂಲಕ ವೀಕ್ಷಿಸಲ್ಪಡುತ್ತದೆ. ೨೦೦೬ರಲ್ಲಿ ನಡೆದ ಇತ್ತೀಚಿನ ಫೈನಲ್ಸ್ ಸುಮಾರು ೭೧ ಕೋಟಿ ಜನರಿಂದ ವೀಕ್ಷಿಸಲ್ಪಟ್ಟಿತು. ಪ್ರಸ್ತುತ ಈ ಅಂತಿಮ ಹಂತದಲ್ಲಿ ೩೨ ದೇಶಗಳ ತಂಡಗಳು ಪಾಲ್ಗೊಳ್ಳುತ್ತವೆ. ಒಂದು ಯಾ ಹೆಚ್ಚು ಆತಿಥೇಯ ರಾಷ್ಟ್ರಗಳ ಹಲವು ನಗರಗಳಲ್ಲಿ ಸುಮಾರು ಒಂದು ತಿಂಗಳ ಕಾಲ ಈ ಅಂತಿಮ ಘಟ್ಟದ ಪಂದ್ಯಗಳು ಆಡಲ್ಪಡುತ್ತವೆ. ಅಂತಿಮ ಹಂತಕ್ಕೆ ತಂಡಗಳನ್ನು ಆಯ್ಕೆ ಮಾಡಲು ಸುಮಾರು ಮೂರು ವರ್ಷಗಳ ಅವಧಿಯಲ್ಲಿ ಪ್ರಪಂಚದೆಲ್ಲೆಡೆ ಅರ್ಹತಾಸುತ್ತಿನ ಪಂದ್ಯಗಳನ್ನು ಆಡಲಾಗುತ್ತದೆ.

ಟಿ 20 ವಿಶ್ವಕಪ್ ಕ್ರಿಕೆಟ್ ಮುಗಿಯುವ ಸಮಯ, ಇನ್ನು ಶುರುವಾಗಲಿದೆ 2022ರ ಫಿಫಾ ಫುಟ್ಬಾಲ್‌ ವಿಶ್ವಕಪ್‌
ಫಿಫಾ ಫುಟ್ಬಾಲ್‌ ವಿಶ್ವಕಪ್‌ ಚೆಂಡು

ಟಿ20 ವಿಶ್ವಕಪ್​ ಕ್ರಿಕೆಟ್ ಮುಗಿದ ಒಂದು ವಾರದ ನಂತರ, ಮತ್ತೊಂದು ಮಹಾಯುದ್ಧ ಪ್ರಾರಂಭವಾಗಲಿದೆ. ಫುಟ್ಬಾಲ್ ವಿಶ್ವದ ಅತ್ಯಂತ ಜನಪ್ರಿಯ ಆಟವಾಗಿದೆ. FIFA ವಿಶ್ವಕಪ್ 2022 ನವೆಂಬರ್ 20 ರಂದು ಕತಾರ್‌ನಲ್ಲಿ ಪ್ರಾರಂಭವಾಗಲಿದೆ. ಡಿಸೆಂಬರ್ 18ರ ವರೆಗೆ ಟೂರ್ನಿ ನಡೆಯಲಿದೆ. ಕ್ರಿಕೆಟ್ ವಿಶ್ವಕಪ್‌ನಲ್ಲಿ ಕೇವಲ 16 ತಂಡಗಳು ಭಾಗವಹಿಸಿದರೆ, ಫುಟ್‌ಬಾಲ್ ವಿಶ್ವಕಪ್‌ನಲ್ಲಿ 32 ತಂಡಗಳು ಸ್ಪರ್ಧಿಸಲಿವೆ. ಫುಟ್ಬಾಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಕತಾರ್ ವಿಶ್ವಕಪ್ ಅನ್ನು ಆಯೋಜಿಸಿದೆ. ಆತಿಥೇಯ ಕತಾರ್ ತಂಡ ನವೆಂಬರ್ 20 ರಂದು ಮೊದಲ ಪಂದ್ಯದಲ್ಲಿ ಈಕ್ವೆಡಾರ್ ತಂಡವನ್ನು ಎದುರಿಸಲಿದೆ. ಫುಟ್ಬಾಲ್ ವಿಶ್ವಕಪ್ ನಲ್ಲಿ ಕತಾರ್ ಆಡುತ್ತಿರುವುದು ಇದೇ ಮೊದಲು.

ಕತಾರ್ ಆತಿಥೇಯ ರಾಷ್ಟ್ರವಾಗಿ ವಿಶ್ವಕಪ್‌ಗೆ ಅರ್ಹತೆ ಪಡೆದಿದೆ. ಕತಾರ್ ಈ ಬಾರಿಯ ವಿಶ್ವಕಪ್‌ಗಾಗಿ ಒಟ್ಟು 7 ಅತ್ಯಾಧುನಿಕ ಸ್ಟೇಡಿಯಂಗಳನ್ನು ನಿರ್ಮಿಸಿದೆ. ಕಳೆದ ವರ್ಷ ಯೂರೋ ಕಪ್ ಚಾಂಪಿಯನ್ ಆಗಿದ್ದ ಇಟಲಿ ಈ ಬಾರಿಯ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ ಎಂಬುದು ಗಮನಾರ್ಹ.

ಈವರೆವಿಗೆ ೧೮ ಬಾರಿ ಫೈನಲ್ಸ್ ನಡೆದಿದ್ದು ಕೇವಲ ೭ ರಾಷ್ಟ್ರಗಳು ಮಾತ್ರ ವಿಶ್ವಕಪ್ ಅನ್ನು ಗೆದ್ದಿವೆ. ಬ್ರಝಿಲ್ ೫ ಬಾರಿ ಗೆಲುವು ಸಾಧಿಸಿ ಅತಿ ಯಶಸ್ವೀ ತಂಡವೆನಿಸಿದೆ. ಉಳಿದಂತೆ ಇಟಲಿ ೪ ಬಾರಿ , ಜರ್ಮನಿ ೩ ಬಾರಿ, ಅರ್ಜೆಂಟೀನ ಮತ್ತು ಉರುಗ್ವೆ ೨ ಬಾರಿ ಹಾಗೂ ಇಂಗ್ಲಂಡ್ ಮತ್ತು ಫ್ರಾನ್ಸ್ ತಲಾ ಒಂದು ಬಾರಿ ಪ್ರಶಸ್ತಿ ಗೆದ್ದಿವೆ. ಈ ಹಿಂದಿನ ವಿಶ್ವಕಪ್ ದಕ್ಷಿಣ ಆಫ್ರಿಕಾದಲ್ಲಿ ೨೦೧೦ರಲ್ಲಿ ನಡೆಯಿತು. ಸ್ಪೇನ್ ತಂಡ ಇದರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. 

ಬ್ರಿಟಿಷ್ ದ್ವೀಪಗಳಲ್ಲಿ ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಫುಟ್ಬಾಲ್ ಕ್ರೀಡೆಯು ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿತ್ತು. ೧೯೦೦ ಮತ್ತು ೧೯೦೪ರ ಒಲಿಂಪಿಕ್ಸ್ ನಲ್ಲಿ ಫುಟ್ಬಾಲ್ ಒಂದು ಪ್ರದರ್ಶನ ಆಟವಾಗಿ ಸೇರಿಸಲ್ಪಟ್ಟು ಮುಂದೆ ೧೯೦೮ರ ನಂತರ ಸ್ಪರ್ಧಾಕ್ರೀಡೆಯಾಗಿ ಬಡ್ತಿ ಹೊಂದಿತು. ೧೯೦೪ರಲ್ಲಿ ಸ್ಥಾಪಿತವಾದ ಫಿಫಾ ಒಲಿಂಪಿಕ್ಸ್ ನ ಹೊರಗೆ ಒಂದು ಜಾಗತಿಕ ಮಟ್ಟದ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಲು ಕ್ರಮಕೈಗೊಂಡಿತು. ಆದರೆ ಆರಂಭದ ಯತ್ನಗಳು ಸಫಲವಾಗಲಿಲ್ಲ. ಬ್ರಿಟಿಷ್ ಫುಟ್ಬಾಲ್ ಅಸೋಸಿಯೇಷನ್ ಮತ್ತು ಫಿಫಾ ದ ನಡುವೆ ಸಾಕಷ್ಟು ತಿಕ್ಕಾಟ ನಡೆದು ಕೊನೆಗೆ ಫಿಫಾ ಒಲಿಂಪಿಕ್ ಫುಟ್ಬಾಲ್ ಗೆ ಮಾನ್ಯತೆ ನೀಡಿತು ಅಲ್ಲದೆ ೧೯೨೦ರಲ್ಲಿ ಒಲಿಂಪಿಕ್ಸ್ ನಲ್ಲಿ ಫುಟ್ಬಾಲ್ ಪಂದ್ಯಾವಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿತು. ಹೀಗೆ ನಿಜವಾದ ಅರ್ಥದಲ್ಲಿ ಅಂತರಾಷ್ಟ್ರೀಯ ಫುಟ್ಬಾಲ್ ಪಂದ್ಯಾವಳಿಯು ಮೊದಲ ಬಾರಿಗೆ ೧೯೨೦ರಲ್ಲಿ ಒಲಿಂಪಿಕ್ಸ್ ನಲ್ಲಿ ನಡೆಯಿತು. ತರುವಾಯ ಫಿಫಾ ತನ್ನದೇ ಆದ ವಿಶ್ವ ಫುಟ್ಬಾಲ್ ಚಾಂಪಿಯನ್ ಶಿಪ್ ನಡೆಸುವ ತನ್ನ ಹಳೆಯ ಯೋಜನೆಗೆ ಮತ್ತೆ ಜೀವ ತುಂಬಿ ೧೯೩೦ರಲ್ಲಿ ಉರುಗ್ವೆಯಲ್ಲಿ ಪ್ರಪ್ರಥಮ ವಿಶ್ವಕಪ್ ಪಂದ್ಯಾವಳಿಯನ್ನು ಆಯೋಜಿಸಲಾಯಿತು.

ಟಿ 20 ವಿಶ್ವಕಪ್ ಕ್ರಿಕೆಟ್ ಮುಗಿಯುವ ಸಮಯ, ಇನ್ನು ಶುರುವಾಗಲಿದೆ 2022ರ ಫಿಫಾ ಫುಟ್ಬಾಲ್‌ ವಿಶ್ವಕಪ್‌
ಫುಟ್ಬಾಲ್ ಕ್ರೀಡಾಂಗಣ

೧೯೨೪ ಮತ್ತು ೧೮೨೮ರ ಒಲಿಂಪಿಕ್ಸ್ ನಲ್ಲಿ ಉರುಗ್ವೆ ತಂಡವು ಫುಟ್ಬಾಲ್ ಸ್ವರ್ಣಪದಕ ಪಡೆದಿತ್ತು. ಅಲ್ಲದೇ ಉರುಗ್ವೆಯು ೧೯೩೦ರಲ್ಲಿ ತನ್ನ ಸ್ವಾತಂತ್ರ್ಯೋತ್ಸವದ ಶತಮಾನವನ್ನು ಆಚರಿಸುವುದಾಗಿದ್ದರಿಂದ ಸಹಜವಾಗಿಯೇ ಮೊದಲ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ನಡೆಸುವ ಅವಕಾಶ ಪಡೆದುಕೊಂಡಿತು. ಈ ಪಂದ್ಯಾವಳಿಯ ಕನಸನ್ನು ನನಸಾಗಿಸುವಲ್ಲಿ ಫಿಫಾದ ಅಧ್ಯಕ್ಷ ಜೂಲ್ಸ್ ರಿಮೆ ಪ್ರಧಾನಪಾತ್ರ ವಹಿಸಿದನು. ಉರುಗ್ವೆಗೆ ಆತಿಥ್ಯ ವಹಿಸಿದುದು ಯುರೋಪ್ ನ ಬಹಳಷ್ಟು ರಾಷ್ಟ್ರಗಳಿಗೆ ಪಥ್ಯವಾಗಲಿಲ್ಲ. ಅಲ್ಲದೇ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಅಟ್ಲಾಂಟಿಕ್ ಮಹಾಸಾಗರದ ಮೇಲಿನ ದೀರ್ಘ ಮತ್ತು ದುಬಾರಿ ವೆಚ್ಚದ ನೌಕಾಯಾನ ಕೈಗೊಳ್ಳಬೇಕಾಗಿದ್ದುದರಿಂದ ಯುರೋಪ್ ನ ಪ್ರಮುಖ ತಂಡಗಳು ಈ ಪಂದ್ಯಾವಳಿಯಿಂದ ಹೊರಗುಳಿದವು. ಕೊನೆಗೆ ೧೩ ತಂಡಗಳು ಮೊದಲನೆಯ ವಿಶ್ವಕಪ್ ನಲ್ಲಿ ಭಾಗವಹಿಸಿದವು. ಮಾಂಟೆವಿಡಿಯೋದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಅರ್ಜೆಂಟೀನ ತಂಡವನ್ನು ೪-೨ ಗೋಲುಗಳಿಂದ ಸೋಲಿಸಿದ ಆತಿಥೇಯ ಉರುಗ್ವೆ ಪ್ರಥಮ ವಿಶ್ವಕಪ್ ಅನ್ನು ಗೆದ್ದುಕೊಂಡಿತು. ಪ್ರಾರಂಭದ ವಿಶ್ವಕಪ್ ಸರಣಿಗಳಿಗೆ ದೀರ್ಘ ನೌಕಾಯಾನದ ಸಮಸ್ಯೆ ಹಾಗೂ ಯುದ್ಧದ ಸಮಸ್ಯೆ ಕಾಡಿತು. ೧೯೩೦ ಮತ್ತು ೧೯೩೪ರ ಮುಂದಿನೆರಡೂ ಫೈನಲ್ಸ್ ಪಂದ್ಯಾವಳಿಗಳು ಯುರೋಪ್ ನಲ್ಲಿ ನಡೆದುವು. ದಕ್ಷಿಣ ಅಮೆರಿಕದ ಹೆಚ್ಚಿನ ತಂಡಗಳು ಇವುಗಳಲ್ಲಿ ಪಾಲ್ಗೊಳ್ಳಲಿಲ್ಲ. ಇಟಲಿ ತಂಡವು ಈ ಎರಡೂ ವಿಶ್ವಕಪ್ ಗಳಲ್ಲಿ ಜಯ ಸಾಧಿಸಿತು. ೧೯೪೨ ಮತ್ತು ೧೯೪೬ರ ವಿಶ್ವಕಪ್ ಪಂದ್ಯಾವಳಿಗಳು ದ್ವಿತೀಯ ವಿಶ್ವಯುದ್ಧದ ಕಾರಣದಿಂದಾಗಿ ರದ್ದಾದವು. ೧೯೩೪ರಿಂದ ೧೯೭೮ರವರೆಗೆ ಅಂತಿಮಘಟ್ಟದಲ್ಲಿ ೧೬ ತಂಡಗಳು ಪಾಲ್ಗೊಳ್ಳುತಿದ್ದುವು. ಇದನ್ನು ೧೯೮೨ರಲ್ಲಿ ೨೪ ತಂಡಗಳಿಗೆ ಮತ್ತು ೧೯೯೮ರಲ್ಲಿ ೩೨ಕ್ಕೆ ಹೆಚ್ಚಿಸಲಾಯಿತು. ಇದರಿಂದಾಗಿ ಆಫ್ರಿಕಾ, ಉತ್ತರ ಅಮೆರಿಕ, ಏಷ್ಯಾದ ದೇಶಗಳಿಗ ಹೆಚ್ಚಿನ ಪ್ರಾತಿನಿಧ್ಯ ದೊರೆಯುವಂತಾಯಿತು. ೨೦೦೬ರ ವಿಶ್ವಕಪ್ ಫೈನಲ್ಸ್ ಗೆ ಅರ್ಹತೆ ಪಡೆಯಲು ೧೯೮ ದೇಶಗಳು ಪ್ರಯತ್ನಿಸಿದುವು. 

ಟಿ 20 ವಿಶ್ವಕಪ್ ಕ್ರಿಕೆಟ್ ಮುಗಿಯುವ ಸಮಯ, ಇನ್ನು ಶುರುವಾಗಲಿದೆ 2022ರ ಫಿಫಾ ಫುಟ್ಬಾಲ್‌ ವಿಶ್ವಕಪ್‌
ಪ್ರಶಸ್ತಿಯ ಕಪ್

೧೯೩೦ರಿಂದ ೧೯೭೦ರವರೆಗೆ ವಿಜಯೀ ತಂಡಕ್ಕೆ ಜೂಲ್ಸ್ ರಿಮೆ ಟ್ರೋಫಿಯನ್ನು ನೀಡಲಾಗುತ್ತಿತ್ತು. ಇದನ್ನು ‘ವಿಶ್ವಕಪ್’ ಎಂದಷ್ಟೇ ಕರೆಯಲಾಗುತ್ತಿತ್ತು. ೧೯೭೦ರಲ್ಲಿ ಬ್ರೆಜಿಲ್ ಮೂರನೆಯ ಬಾರಿಗೆ ವಿಜಯ ಸಾಧಿಸಿದಾಗ ಜೂಲ್ಸ್ ರಿಮೆ ಟ್ರೋಫಿಯನ್ನು ಶಾಶ್ವತವಾಗಿ ತನ್ನಲ್ಲೇ ಇರಿಸಿಕೊಳ್ಳುವ ಹಕ್ಕು ಪಡೆಯಿತು. ಆದರೆ ೧೯೮೩ರಲ್ಲಿ ಈ ಟ್ರೋಫಿ ಕಳುವಾಗಿ ಮತ್ತೆ ದೊರೆಯಲೇ ಇಲ್ಲ. ಇದರಲ್ಲಿದ್ದ ಚಿನ್ನಕ್ಕಾಗಿ ಟ್ರೋಫಿಯನ್ನು ಕರಗಿಸಲಾಯಿತು ಎಂದು ಒಂದು ಊಹೆ. ೧೯೭೦ರನಂತರ ಒಂದು ಹೊಸ ಟ್ರೋಫಿಯನ್ನು ತಯಾರಿಸಲಾಯಿತು. ಇದನ್ನು ಫಿಫಾ ಅಧ್ಯಕ್ಷರ ವಿಶ್ವಕಪ್ ಎಂದು ಹೆಸರಿಸಲಾಗಿದೆ. ೩೬ಅಂಗುಲ ಎತ್ತರವಿದ್ದು ೬೧೭೫ ಗ್ರಾಂ ತೂಗುವ ಈ ಟ್ರೋಫಿಯನ್ನು ೧೮ ಕ್ಯಾರಟ್ ಘನವಾದ ಚಿನ್ನದಿಂದ ತಯಾರಿಸಲಾಗಿದೆ. ಇದರ ಕೆಳಭಾಗದಲ್ಲಿ ಪ್ರತಿಬಾರಿಯ ವಿಜೇತರ ಹೆಸರನ್ನು ಕೊರೆಯಲು ಅವಕಾಶವಿದ್ದು ೨೦೩೮ರ ವರೆಗಿನ ಎಲ್ಲ ವಿಜಯಿಗಳ ಹೆಸರು ಸೇರಿಸಲು ಸಾಕಾಗುವಷ್ಟು ಸ್ಥಳವಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಪೆಟ್ರೋಲ್

ಪೆಟ್ರೋಲ್ ಭೂ ಗರ್ಭದಲ್ಲಿ ಸಿಗುವ ದ್ರವ

ಮರಕುಟಿಕ

ಚಿಟ್ಟು ಮರಕುಟುಕ ಮತ್ತು ಸುವರ್ಣ ಬೆನ್ನಿನ ಮರಕುಟಿಕ