in ,

ಅಥ್ಲೀಟ್ ಎಂ.ಆರ್ ಪೂವಮ್ಮ ಅವರಿಗೆ ಎರಡು ವರ್ಷಗಳ ನಿಷೇಧವನ್ನು ವಿಧಿಸಿದೆ

ಎಂ.ಆರ್ ಪೂವಮ್ಮ
ಎಂ.ಆರ್ ಪೂವಮ್ಮ

ಅಥ್ಲೀಟ್ ಎಂ.ಆರ್. ಪೂವಮ್ಮ ಅವರು ಈಚೆಗೆ ಉದ್ದೀಪನ ಮದ್ದು ಸೇವನೆ ಮಾಡಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಅವರಿಗೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕವು ಮೂರು ತಿಂಗಳುಗಳ ನಿಷೇಧ ಶಿಕ್ಷೆ ವಿಧಿಸಿದೆ.

ಪೂವಮ್ಮ, ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಫೆಡರೇಷನ್ ಕಪ್‌ನಲ್ಲಿ ೪೦೦ ಮೀ.ರಿಲೇ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ‘ರಾಷ್ಟ್ರ ಮಟ್ಟದಲ್ಲಿ ಉತ್ತಮ ಓಟಗಾರ್ತಿ’, ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ನಡೆದ ಏಷ್ಯನ್ ಗೇಮ್ಸ್‌ನ ರಿಲೇಯಲ್ಲಿ ದಾಖಲೆಯೊಂದಿಗೆ ಚಿನ್ನದ ಪದಕ, ಹಾಗೂ ಏಷ್ಯನ್ ಗೇಮ್ಸ್‌ನ ೪೦೦ ಮೀ. ಓಟದಲ್ಲಿ ಕಂಚಿನ ಪದಕ, ಜಕಾರ್ತಾ-2018 ರಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ, ಮಹಿಳಾ ಮತ್ತು ಮಿಶ್ರ 4×400 ಮೀಟರ್ ಪ್ರಸಾರಗಳಲ್ಲಿ ಚಿನ್ನದ ಮತ್ತು ಬೆಳ್ಳಿ ಪದಕ ಗೆದ್ದ ಹೆಗ್ಗಳಿಕೆಗೆ ಪಾತ್ರರು.

ಕು.ಪೂವಮ್ಮ, ದಿನಾಂಕ- ೫, ಜೂನ್ ೧೯೯೦ ರಂದು ಶ್ರೀ ಎಂ.ಜಿ.ರಾಜು; ಹಾಗೂ ಶ್ರೀಮತಿ ಜಾಜೀ ದಂಪತಿಗಳ ಮಗಳಾಗಿ ಕೊಡಗಿನ ‘ಗೋಣೀಕೊಪ್ಪಲಿ’ನಲ್ಲಿ ಜನಿಸಿದರು. ಅವರ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮತ್ತು ಮುಂದಿನ ಉನ್ನತ ವ್ಯಾಸಂಗವನ್ನು ಮಂಗಳೂರಿನಲ್ಲಿ ಮಾಡಿದರು. ಮಂಗಳೂರಿನ ‘ಎಸ್.ಡಿ.ಎಮ್. ಬಿಜಿನೆಸ್ ಮ್ಯಾನೇಜ್ ಮೆಂಟ್ ಕಾಲೇಜ್’ನಲ್ಲಿ ‘ಬಿಸಿನೆಸ್ ಮ್ಯಾನೇಜ್ಮೆಂಟ್ ಬ್ಯಾಚುಲರ್ ಪದವಿ’ ಪಡೆದರು.

ಅಥ್ಲೀಟ್ ಎಂ.ಆರ್ ಪೂವಮ್ಮ ಅವರಿಗೆ ಎರಡು ವರ್ಷಗಳ ನಿಷೇಧವನ್ನು ವಿಧಿಸಿದೆ
ಎಂ.ಆರ್ ಪೂವಮ್ಮ

ಭಾರತದ-ಓಟದ ಕ್ರೀಡಾಪಟು
೧೦೦ ಮೀಟರ್ ಹಾಗೂ (೨೦೦ ಮತ್ತು) ೪೦೦ ಮೀ. ಓಟಗಳಲ್ಲಿ ಭಾರತವನ್ನು ಸಮರ್ಥವಾಗಿ ಪ್ರತಿನಿಧಿಸುತ್ತಿರುವ ಭಾರತದ ಕ್ರೀಡಾಪಟು. ಫೂವಮ್ಮ ೨೦೦೮ ರ ಬೀಜಿಂಗ್ ಒಲಂಪಿಕ್ಸ್`ನಲ್ಲಿ ಭಾಗವಹಿಸಿದ್ದರು. ಅವರು ಈಗ ಏಷ್ಯಾ ವಿಭಾಗದಲ್ಲಿ ೪೦೦ ಮೀಟರ್ ಓಟದಲ್ಲಿ ನಂ.೨ ನೇ ಸ್ಥಾನದಲ್ಲಿದ್ದಾರೆ. ಈಗ, ಎಂ.ಆರ್ ಪೂವಮ್ಮ ಅವರನ್ನು ಆಂಗ್ಲಿಯನ್ ಮೆಡಲ್ ಹಂಟ್ ಕಂಪನಿಯು ಬೆಂಬಲಿಸುತ್ತಿದೆ.

ಎಮ್. ಆರ್. ಪೂವಮ್ಮ.. ಕರ್ನಾಟಕದ ಹೆಮ್ಮೆಯ ಅಥ್ಲೀಟ್. ಕರಾವಳಿಯ ಹುಡುಗಿ ಭಾರತದ ಅಪ್ರತಿಮ ಕ್ರೀಡಾಪಟುವಾಗಿ ರೂಪುಗೊಂಡಿದ್ದೇ ಒಂದು ರೋಚಕ ಸ್ಟೋರಿ. ಹಲವು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗೆದ್ದುಕೊಂಡಿದ್ದ ಎಮ್. ಆರ್. ಪೂವಮ್ಮ ಅವರಿಗೆ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಆದ್ರೆ ಇದೀಗ ಎಮ್. ಆರ್. ಪೂವಮ್ಮ ಅವರ ಕ್ರೀಡಾಬದುಕಿಗೆ ಕಪ್ಪುಚುಕ್ಕೆಯೊಂದು ಆವರಿಸಿಕೊಂಡಿದೆ. ಹೌದು. ಪೂವಮ್ಮ ಅವರು ಡೋಪಿಂಗ್ ಬಲೆಯೊಳಗೆ ಸಿಲುಕಿ ಎರಡು ವರ್ಷಗಳ ನಿಷೇಧವನ್ನು ವಿಧಿಸಲಾಗಿದೆ.

400 ಮೀಟರ್ ಓಟಗಾರ್ತಿಯಾಗಿರುವ ಪೂವಮ್ಮ ಅವರು ಭಾರತ ಮಹಿಳಾ 400/4 ಮೀಟರ್ ರಿಲೇ ಹಾಗೂ 4/400 ಮೀಟರ್ ಮಿಕ್ಸೆಡ್ ರಿಲೇ ತಂಡದ ಓಟಗಾರ್ತಿಯಾಗಿದ್ದಾರೆ. 2014 ಮತ್ತು 2018ರ ಏಷ್ಯಾನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದ ತಂಡ ಸದಸ್ಯೆಯಾಗಿದ್ದಾರೆ.

ಅಥ್ಲೀಟ್ ಎಂ.ಆರ್ ಪೂವಮ್ಮ ಅವರಿಗೆ ಎರಡು ವರ್ಷಗಳ ನಿಷೇಧವನ್ನು ವಿಧಿಸಿದೆ
ಪೂವಮ್ಮ ಅವರಿಗೆ ಎರಡು ವರ್ಷಗಳ ನಿಷೇಧ

32ರ ಹರೆಯದ ಪೂವಮ್ಮ ಅವರನ್ನು ಕಳೆದ ವರ್ಷ ಡೋಪಿಂಗ್ ಟೆಸ್ಟ್ ಗೆ ಒಳಪಡಿಸಲಾಗಿತ್ತು. 2021ರ ಫೆಬ್ರವರಿ 18ರಂದು ಪಟಿಯಾಲದಲ್ಲಿ ನಡೆದ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ -1 ಕ್ರೀಡಾಕೂಟದ ವೇಳೆ ಸ್ಯಾಂಪಲ್ ಟೆಸ್ಟ್ ಗೆ ಒಳಪಡಿಸಲಾಗಿತ್ತು. ಅಲ್ಲದೆ ಡೋಪಿಂಗ್ ಟೆಸ್ಟ್ ನಲ್ಲಿ ಪಾಟಿಟಿವ್ ಬಂದಿದ್ದು, ಮೀಥೈಲ್ ಹೆಕ್ಸನಿಯಮೈನ್ ಅಂಶ ಪತ್ತೆಯಾಗಿತ್ತು. ಇದು ವಾಡಾಗೆ ವಿರುದ್ಧವಾಗಿರುವುದರಿಂದ ಅವರಿಗೆ ಮೂರು ತಿಂಗಳುಗಳ ನಿಷೇಧವನ್ನು ವಿಧಿಸಲಾಗಿತ್ತು. ಹಾಗೇ ಪೂವಮ್ಮ ಅವರು ಕಳೆದ ವರ್ಷ ಟೋಕಿಯೋ ಒಲಿಂಪಿಕ್ಸ್ ನ ಆಯ್ಕೆ ಟ್ರಯಲ್ಸ್ ನಲ್ಲೂ ಭಾಗವಹಿಸಿರಲಿಲ್ಲ. ಬಳಿಕ ಅವರು ರಾಷ್ಟ್ರೀಯ ತರಬೇತಿ ಶಿಬಿರದಿಂದಲೂ ಹೊರಬಂದಿದ್ದರು. ಇದೀಗ ನಾಡಾ ಸಂಸ್ಥೆಯು

ಪೂವಮ್ಮ ಅವರಿಗೆ ಎರಡು ವರ್ಷಗಳ ನಿಷೇಧವನ್ನು ವಿಧಿಸಿದೆ. ಹೀಗಾಗಿ ಅವರು ಕಳೆದ ವರ್ಷದಿಂದ ಗೆದ್ದ ಮೂರು ಪದಕಗಳನ್ನು ವಾಪಸು ಪಡೆದುಕೊಳ್ಳಲಾಗಿದೆ. ಉಣಡುಯನ್ ಗ್ರ್ಯಾಂಡ್ ಪ್ರಿಕ್ಸ್-1 ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್-2 ಮತ್ತು ಫೆಡರೇಶನ್ ಕಪ್ ನಲ್ಲಿ ಭಾಗವಹಿಸಿ ಬೆಳ್ಳಿಯ ಪದಕಗಳನ್ನು ಗೆದ್ದುಕೊಂಡಿದ್ದರು. ಇದೀಗ ಆ ಮೂರು ಪದಕಗಳನ್ನು ವಾಪಸು ಪಡೆದುಕೊಳ್ಳಲಾಗಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

37 Comments

ಚ್ಯವನ ಋಷಿ

ಚ್ಯವನ ಋಷಿ

ಅರಿಶಿಣ, ಕುಂಕುಮ

ಅರಿಶಿಣ, ಕುಂಕುಮದ ಪಾವಿತ್ರ್ಯತೆ