ಅರಿಶಿನವು ಭಾರತೀಯ ಅಡುಗೆಮನೆಯಲ್ಲಿರುವ ಒಂದು ಪ್ರಮುಖ ಮಸಾಲೆ ಪದಾರ್ಥ. ಅರಿಶಿನವಿಲ್ಲದೆ ಭಾರತೀಯ ಖಾದ್ಯ ಅಪೂರ್ಣವೆನ್ನುಬಹುದು. ಅರಿಶಿನವನ್ನು ಆಹಾರದ ಬಣ್ಣ ಮತ್ತು ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಆದ್ದರಿಂದ ಅದೇ ಸಮಯದಲ್ಲಿ ಅರಿಶಿನವನ್ನು ಆರೋಗ್ಯ ದೃಷ್ಟಿಕೋನದಿಂದ ಮತ್ತು ಸೌಂದರ್ಯ ದೃಷ್ಟಿಕೋನದಿಂದಲೂ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಆದರೆ ಹಿಂದೂ ಧರ್ಮದಲ್ಲಿ, ಜ್ಯೋತಿಷ್ಟ ಶಾಸ್ತ್ರದಲ್ಲಿ ಅರಿಶಿನಕ್ಕೆ ವಿಶೇಷ ಸ್ಥಾನ – ಮಾನವಿದೆ. ಹಿಂದೂ ಧರ್ಮದಲ್ಲಿ ಹೆಚ್ಚಿನ ಹಿಂದೂ ದೇವತೆಗಳ ಪೂಜೆಯಲ್ಲಿ ಅರಶಿಣವನ್ನು ಕಡ್ಡಾಯವಾಗಿ ಬಳಸುತ್ತಾರೆ. ಅದರಲ್ಲೂ ನಾಗ ದೇವತೆಗ ಪೂಜೆಯಲ್ಲಿ ಅರಿಶಿನಕ್ಕೆ ಮೊದಲ ಸ್ಥಾನ. ಅರಿಶಿನವನ್ನು ಆಹಾರದಲ್ಲಿ, ಪೂಜೆಯಲ್ಲಿ ಮಾತ್ರವಲ್ಲ, ನಮ್ಮೆಲ್ಲಾ ಆರ್ಥಿಕ ತೊಂದರೆಗಳನ್ನು, ಗ್ರಹಗಳ ತೊಂದರೆಗಳನ್ನು ನಿವಾರಿಸಿಕೊಳ್ಳಲೂ ಪರಿಣಾಮಕಾರಿ.
ಅರಿಶಿನದ ಪ್ರಯೋಜನವೇನು ತಿಳಿದುಕೊಳ್ಳಿ.
ಇದು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವುದು. ಹಿಂದೂ ಧರ್ಮದಲ್ಲಿ ಅರಿಶಿಣ ಹಾಗೂ ಕುಂಕುಮಕ್ಕೆ ಪವಿತ್ರ ಸ್ಥಾನವಿದೆ. ಯಾವುದೇ ಪೂಜೆ ಅಥವಾ ಇನ್ನಿತರ ಶುಭ ಸಮಾರಂಭಗಳಲ್ಲಿ ಅರಿಶಿಣ ಕುಂಕುಮವನ್ನು ಬಳಸಿಕೊಂಡು, ಅವುಗಳಿಗೆ ಪೂಜನೀಯ ಸ್ಥಾನವನ್ನು ನೀಡಲಾಗತ್ತೆ. ವಿವಾಹಿತ ಸ್ತ್ರೀಯರು ತಮ್ಮ ಕೆನ್ನೆಗೆ ಅರಿಶಿಣ, ಹಣೆಗೆ ಕುಂಕುಮದ ಸಿಂಧೂರವನ್ನಿಟ್ಟು ತಮ್ಮ ಮುತ್ತೈದೆತನ ಸಂಕೇತಿಸುತ್ತಾರೆ.
ಕುಂಕುಮ :
*ವಿವಾಹಿತ ಮಹಿಳೆಯರ ಗುರುತು: ಅನಾದಿ ಕಾಲದಿಂದಲೂ, ವಿವಾಹಿತ ಮಹಿಳೆಯರು ಕುಂಕುಮವನ್ನು ಸಿಂಧೂರ ಮತ್ತು ತಿಲಕದಂತೆ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಪತಿಯ ದೀರ್ಘಾಯುಷ್ಯದ ಸಂಕೇತವಾಗಿ ಇವರುಗಳು ಕುಂಕುಮದಿಂದ ಬೈತಲೆಯ ನಡುವೆ ಸಿಂಧೂರವನ್ನು ಹಚ್ಚಿಕೊಳ್ಳುತ್ತಾರೆ.
*ಕುಂಕುಮ ಮಹಿಳೆಯರ ಶಕ್ತಿಯ ಸಂಕೇತ
ವಿದ್ವಾನರ ಪ್ರಕಾರ, ಕೆಂಪು ಶಕ್ತಿ ಮತ್ತು ಬಲದ ಸಂಕೇತವಾಗಿದೆ. ಪಾರ್ವತಿ ಮತ್ತು ಸತಿ ದೇವಿಯ ಶಕ್ತಿಗೆ ಸಮನಾಗಿ ಇದನ್ನು ಹೋಲಿಸಲಾಗುತ್ತದೆ. ಹಿಂದೂ ಶಾಸ್ತ್ರಗಳ ಪ್ರಕಾರ, ಸತಿಯು ತನ್ನ ಪತಿಗಾಗಿ ತನ್ನ ಪ್ರಾಣವನ್ನೇ ಅರ್ಪಿಸುತ್ತಾಳೆ. ಅದೇ ರೀತಿಯಲ್ಲಿ ಪ್ರತಿಯೊಬ್ಬ ಪತ್ನಿ ಕೂಡ ತನ್ನ ಪತಿಗಾಗಿ ನಿಷ್ಟತೆಯನ್ನು ತೋರ್ಪಡಿಸಬೇಕು ಮತ್ತು ತನ್ನ ಭಕ್ತಿಯನ್ನು ಆತನ ಪ್ರತಿಯಾಗಿ ತೋರಬೇಕು ಎಂದಾಗಿದೆ.
*ಮನೆಯ ಸುತ್ತಲೂ ಅರಿಶಿನ ರೇಖೆಯನ್ನು ಚಿತ್ರಿಸುವುದು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಮನೆಯ ಸುತ್ತಲೂ ಅರಿಶಿನ ರೇಖೆಯನ್ನು ಚಿತ್ರಿಸುವುದರಿಂದ ಋಣಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶಿಸುವುದಿಲ್ಲ ಮತ್ತು ಧನಾತ್ಮಕ ಶಕ್ತಿಯು ಮನೆಯಲ್ಲಿ ಉಳಿಯುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಪುಟ್ಟ ಮಕ್ಕಳಿರುವ ಮನೆಗಳಲ್ಲಿ ಹೆಚ್ಚಾಗಿ ಮನೆಯ ಸುತ್ತ ಅರಿಶಿನದ ರೇಖೆಯನ್ನು ಹಾಕುತ್ತಾರೆ. ಮೆನಯ ಸುತ್ತ ಅರಿಶಿನ ರೇಖೆಯನ್ನು ಹಾಕುವುದರಿಂದ ಅಲ್ಲಿ ದೇವತೆಗಳು ವಾಸವಾಗಿರುತ್ತಾರೆ ಎನ್ನುವ ನಂಬಿಕೆಯಿದೆ.
*ಅನಾದಿ ಕಾಲದಿಂದಲೂ, ವಿವಾಹಿತ ಮಹಿಳೆಯರು ಕುಂಕುಮವನ್ನು ಸಿಂಧೂರ ಹಾಗೂ ತಿಲಕದಂತೆ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಪತಿಯ ದೀರ್ಘಾಯುಷ್ಯದ ಸಂಕೇತವಾಗಿ ಬೈತಲೆಯ ನಡುವೆ ಸಿಂಧೂರವನ್ನು ಹಚ್ಚಿಕೊಳ್ಳುತ್ತಾರೆ. ಕುಂಕುಮದ ಮಹತ್ವ ಹಿಂದೂ ಶಾಸ್ತ್ರಗಳು ಹೇಳುವಂತೆ, ಸೌಭಾಗ್ಯ ಮತ್ತು ಅದೃಷ್ಟದ ಸಂಕೇತವಾಗಿದೆ. ಹಣೆಯನ್ನು ಮೇಷ ರಾಶಿಯ ಸ್ಥಾನವೆಂದು ಹೇಳಲಾಗತ್ತೆ. ಮೇಷ ರಾಶಿಯ ದೇವನು ಮಂಗಳನಾಗಿದ್ದು, ಅದೃಷ್ಟವನ್ನು ತರುತ್ತಾನೆ ಎಂಬ ಕಾರಣಕ್ಕೆ ವಿವಾಹಿತ ಸ್ತ್ರೀಯರು ತಮ್ಮ ಹಣೆಯನ್ನು ಕುಂಕುಮದಿಂದ ಅಲಂಕರಿಸಿಕೊಳ್ಳುತ್ತಾರೆ. ಕುಂಕುಮ ಮಹಿಳೆಯರ ಶಕ್ತಿಯ ಸಂಕೇತ ಕೂಡ. ವಿದ್ವಾನರ ಪ್ರಕಾರ, ಕೆಂಪು ಶಕ್ತಿ ಬಲದಸೂಚಕ. ಪಾರ್ವತಿ ಹಾಗೂ ಸತಿ ದೇವಿಯ ಶಕ್ತಿಗೆ ಸಮನಾಗಿ ಕುಂಕುಮ ಹೋಲಿಸಲಾಗುತ್ತದೆ. ಹಿಂದೂ ಶಾಸ್ತ್ರಗಳ ಪ್ರಕಾರ, ಸತಿಯು ತನ್ನ ಪತಿಗಾಗಿ ತನ್ನ ಪ್ರಾಣವನ್ನೇ ಅರ್ಪಿಸುತ್ತಾಳೆ. ಅದೇ ರೀತಿಯಲ್ಲಿ ಪ್ರತಿಯೊಬ್ಬ ಪತ್ನಿ ಕೂಡ ತನ್ನ ಪತಿಗಾಗಿ ನಿಷ್ಠೆ ತೋರಬೇಕು ಹಾಗೂ ತನ್ನ ಭಕ್ತಿಯನ್ನು ಆತನ ಪ್ರತಿಯಾಗಿ ತೋರಬೇಕು. ಸಂಸ್ಕೃತಿಯ ಪ್ರತೀಕವೇ ಹಣೆಯ ಮೇಲಿನ ಪುಟ್ಟ ಸಿಂಧೂರ.
*ಹಿಂದೂ ಶಾಸ್ತ್ರಗಳು ಹೇಳುವಂತೆ, ಸೌಭಾಗ್ಯ ಮತ್ತು ಅದೃಷ್ಟದ ಸಂಕೇತವಾಗಿ ಕುಂಕುವನ್ನು ಕಾಣಲಾಗುತ್ತದೆ. ಹಣೆಯನ್ನು ಮೇಷ ರಾಶಿಯ ಸ್ಥಾನವಾಗಿ ಹೇಳಲಾಗಿದ್ದು ಮೇಷ ರಾಶಿಯ ದೇವನು ಮಂಗಳನಾಗಿದ್ದಾನೆ. ಆದ್ದರಿಂದಲೇ ಅದೃಷ್ಟವನ್ನು ತರುತ್ತದೆ ಎಂಬ ಕಾರಣಕ್ಕಾಗಿ ವಿವಾಹಿತ ಸ್ತ್ರೀಯರು ತಮ್ಮ ಹಣೆಯನ್ನು ಕುಂಕುಮದಿಂದ ಅಲಂಕರಿಸಿಕೊಳ್ಳುತ್ತಾರೆ.
*ಕುಂಕುಮದ ಪೌರಾಣಿಕ ಮಹತ್ವ
ಕುಂಕುಮವನ್ನು ಅರಿಶಿನ ಮತ್ತು ಪ್ರಮುಖ ವಸ್ತುಗಳಿಂದ ಸಿದ್ಧಪಡಿಸಲಾಗಿದೆ. ಅನಾದಿ ಕಾಲದಲ್ಲಿ ಕುಂಕುಮವು ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುತ್ತದೆ ಎಂಬುದಾಗಿ ನಂಬಲಾಗಿತ್ತು. ಅದಕ್ಕಾಗಿಯೇ ವಿವಾಹಿತ ಸ್ತ್ರೀಯರು ಕುಂಕುಮವನ್ನು ಹಚ್ಚಿಕೊಳ್ಳುತ್ತಿದ್ದರು. ಮದುವೆಯಾಗದವರು ಮತ್ತು ವಿಧವೆಯರು ಕುಂಕುಮವನ್ನು ಹಚ್ಚಿಕೊಳ್ಳುವಂತಿಲ್ಲ.
ಅರಿಶಿಣ :
*ಅರಿಶಿಣವು ಹಳದಿ ಮತ್ತು ಕಿತ್ತಳೆ ಬಣ್ಣದಲ್ಲಿ ಸಿಗತ್ತೆ. ಈ ಎರಡೂ ಬಣ್ಣಗಳು ಕೂಡ ತಮ್ಮದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ. ಹಳದಿ ಬಣ್ಣವು ಕನ್ಯತ್ವ ಹಾಗೂ ಇಂದ್ರಿಯ ನಿಗ್ರಹದ ದ್ಯೋತಕವಾಗಿದ್ರೆ, ಕಿತ್ತಳೆ ಬಣ್ಣವು ಸೂರ್ಯ, ಧೈರ್ಯ ಮತ್ತು ತ್ಯಾಗದ ಸಂಕೇತವಾಗಿದೆ.
*ಅರಿಶಿನ ಹಲವು ಅಂಶಗಳ ಸಂಕೇತ. ಅರಿಶಿಣವು ಸೂರ್ಯ ಹಾಗೂ ಅದೃಷ್ಟ ಫಲವತ್ತತೆ ಪ್ರತೀಕ. ಮನುಷ್ಯರ ಆಂತರಿಕ ಶಕ್ತಿಯನ್ನು ಇದು ಪ್ರತಿಪಾದಿಸುತ್ತದೆ ಮತ್ತು ಮನುಕುಲದ ಏಳಿಗೆಯನ್ನು ಎತ್ತಿಹಿಡಿಯುತ್ತದೆ. ಆದ್ದರಿಂದಲೇ ಪವಿತ್ರ ಪೂಜಾ ಸಮಯಗಳಲ್ಲಿ ಅರಿಶಿನವನ್ನು ಬಳಸುತ್ತಾರೆ. ಅರಿಶಿಣವು ಬರೀ ಅಲಂಕಾರಿಕ, ಪೂಜನೀಯ ಸಾಮಾಗ್ರಿಯಾಗಿ ಹೆಸರು ಪಡೆದುಕೊಂಡಿರುವುದಷ್ಟೇ ಅಲ್ದೇ ಆರೋಗ್ಯ ಕ್ಷೇತ್ರದಲ್ಲಿ ಕೂಡ ಅರಿಶಿಣಕ್ಕೆ ಗಣನೀಯ ಸ್ಥಾನವಿದೆ. ಮನೆಮದ್ದಾಗಿ ಕೂಡ ಎಲ್ಲರ ಮನೆಯಲ್ಲೂ ಅರಿಶಿಣ ತನ್ನದೇ ಸ್ಥಾನ ಪಡೆದುಕೊಂಡಿರುವ ಸಂಜೀವಿನಿಯಾಗಿದೆ. ಅರಿಶಿನ ಶುದ್ಧೀಕರಣದ ಸಂಕೇತ ಹಿಂದೂ ವಿವಾಹ ಪದ್ಧತಿಗಳಲ್ಲಿ ಅರಿಶಿನ ಶಾಸ್ತ್ರ ಇದ್ದೇ ಇರುತ್ತದೆ. ಮದುಮಗಳಿಗೆ ಅರಶಿಣದ ಮಿಶ್ರಣ ಹಚ್ಚಿ ಶಾಸ್ತ್ರ ನೆರವೇರಿಸಲಾಗತ್ತೆ. ವಿವಾಹದಂತಹ ಪರಿಶುದ್ಧ ಶಾಸ್ತ್ರದಲ್ಲಿ ಹುಡುಗಿಯನ್ನು ಎಲ್ಲಾ ಬಗೆಯಲ್ಲೂ ಪುನೀತಳನ್ನಾಗಿ ಮಾಡಲು ಅರಿಶಿನ ಶಾಸ್ತ್ರವನ್ನು ಇಟ್ಟುಕೊಳ್ಳುತ್ತಾರೆ. ಚಿನ್ನದ ದೇವತೆ ಅರಿಶಿನದ ಚಿನ್ನದಂತಹ ಗುಣಗಳು ವಧುವಿಗೆ ತುಂಬಿರಲಿ ಅಂತ ಈ ಬಗೆಯ ಶಾಸ್ತ್ರಗಳನ್ನು ಮಾಡಲಾಗತ್ತೆ.
*ಅರಿಶಿಣವನ್ನು ಬೆಚ್ಚನೆಯ ಹಾಲಿನಲ್ಲಿ ಮಿಶ್ರಣ ಮಾಡಿ ಸೇವಿಸುವುದರಿಂದ ದೇಹ ಹಿತವಾಗಿರತ್ತೆ. ಅಲ್ಲದೇ ಅರಿಶಿಣದ ಹಾಲು ನಿಮ್ಮ ದೇಹದಲ್ಲಿರುವ ಆಮ್ಲ ಹಿಮ್ಮುಖ ಹರಿವಿಗೆ ಹಾಗೂ ಯಾವುದೇ ನೋವಿಗೂ ರಾಮಬಾಣ. ಅರಿಶಿಣವನ್ನು ಹಚ್ಚಿಕೊಳ್ಳುವುದ್ರಿಂದ ತ್ವಚೆಯು ಹೊಳಪು ಪಡೆದುಕೊಳ್ಳುತ್ತದೆ.
*ಹಿಂದೂ ವಿವಾಹ ಪದ್ಧತಿಗಳಲ್ಲಿ ಅರಿಶಿನ ಶಾಸ್ತ್ರ ಇದ್ದೇ ಇರುತ್ತದೆ. ಮದುಮಗಳಿಗೆ ಅರಶಿನದ ಮಿಶ್ರಣವನ್ನು ಹಚ್ಚುತ್ತಾರೆ. ವಿವಾಹದಂತಹ ಪರಿಶುದ್ಧ ಶಾಸ್ತ್ರದಲ್ಲಿ ಹುಡುಗಿಯನ್ನು ಎಲ್ಲಾ ಬಗೆಯಲ್ಲೂ ಪುನೀತಳನ್ನಾಗಿ ಮಾಡಲು ಅರಿಶಿನ ಶಾಸ್ತ್ರವನ್ನು ಇಟ್ಟುಕೊಳ್ಳುತ್ತಾರೆ.
*ಅರಿಶಿನವನ್ನು ನೀರಿನಲ್ಲಿ ಬೆರೆಸಿ, ನಂತರ ಆ ಅರಿಶಿನದ ನೀರನ್ನು ಪ್ರತಿ ಗುರುವಾರ ಮನೆಯಲ್ಲಿ ನಿಯಮಿತವಾಗಿ ಸಿಂಪಡಿಸಬೇಕು. ಇದನ್ನು ಮಾಡುವುದರಿಂದ, ತಾಯಿ ಲಕ್ಷ್ಮಿ ಸಂತಸಗೊಂಡಿದ್ದಾರೆ ಮತ್ತು ಮನೆಯಲ್ಲಿ ಸಕಾರಾತ್ಮಕ ಶಕ್ತಿಯೂ ಇದೆ. ಹಳದಿ ಬಣ್ಣವೆಂದರೆ ಲಕ್ಷ್ಮಿಪತಿ ವಿಷ್ಣುವಿಗೆ ಅತ್ಯಂತ ಪ್ರಿಯವಾದ ಬಣ್ಣವಾಗಿದೆ. ಮನೆಯಲ್ಲಿ ಅರಿಶಿನದ ನೀರನ್ನು ಸಿಂಪಡಿಸುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಮಾತ್ರವಲ್ಲ, ವಿಷ್ಣುವಿನ ಆಶೀರ್ವಾದವನ್ನು ಕೂಡ ಪಡೆದುಕೊಳ್ಳಬಹುದು. ಅರಿಶಿನದ ನೀರು ಕೇವಲ ಸಕಾರಾತ್ಮಕ ಹರಿವನ್ನು ವೃದ್ಧಿಸುವುದು ಮಾತ್ರವಲ್ಲ, ಆ ಮನೆಯಲ್ಲಿ ಸಂಪತ್ತಿನ ಹರಿವನ್ನು ಕೂಡ ವೃದ್ಧಿಸಲಾಗುತ್ತದೆ.
ಧನ್ಯವಾದಗಳು.
discount canadian pharmacies enquiry
my canadian pharmacies [url=http://canadianphrmacy23.com/]funny post[/url]
canadian pharmacy and viagra cialis from usa pharmacy
canadian pharmacy viagra [url=http://canadianphrmacy23.com/]web link[/url]