in ,

ಅಳಿದು ಹೋಗಿರುವ ಕೆಲವೊಂದು ಹಳ್ಳಿ ಆಟಗಳು

ಅಳಿದು ಹೋಗಿರುವ ಕೆಲವೊಂದು ಹಳ್ಳಿ ಆಟಗಳು

ಈಗಿನ ಮಕ್ಕಳಿಗೆ ಆಟ ಎಂದರೆ ಬರೀ ಟಿವಿ, ಮೊಬೈಲ್,ವೀಡಿಯೋ ಗೇಮ್ ಗಳು. ಆದರೆ ನಾವೆಲ್ಲ ಚಿಕ್ಕ ವಯಸ್ಸಲ್ಲಿ ಆಡಿದ ಆಟಗಳು ಏಷ್ಟು ಎಂದರೆ ಲೆಕ್ಕವೇ ಇಲ್ಲ. ಆಗಿನ ಕಾಲಕ್ಕೆ ಯಾವುದೇ ಓದಿನ ಒತ್ತಡ ಇಲ್ಲ, ಆರಾಮಾಗಿ ಆಟವಾಡುತ್ತಿದೆವು. ಮಕ್ಕಳ ಅರೋಗ್ಯ ಕೂಡ ಅಷ್ಟೇ ಉತ್ತಮವಾಗಿತ್ತು. ಈಗ ಸ್ವಲ್ಪ ಹೊರಗಡೆ ಬಿಸಿಲಿಗೆ ಹೋಗಿ ಬಂದರೆ ಸಾಕು ಮರುದಿವಸ ಶುರು ಜ್ವರ, ಮೈ ಕೈ ನೋವು ಅಂತ ಹಲವು ಖಾಯಿಲೆಗಳು.

ಎಲ್ಲಾ ಪ್ರದೇಶಗಳಲ್ಲೂ ಹಿಂದಿನ ದಿನಗಳಿಂದಲೇ ಪ್ರಚಲಿತವಾಗಿರುವ ಅನೇಕ ಜನಪದ ಆಟಗಳಿವೆ. ಆಟಗಳು ಪ್ರಾಚೀನ ಸಂಸ್ಕೃತಿಯನ್ನು ತಕ್ಕಮಟ್ಟಿಗೆ ಬಿಂಬಿಸುವುದು ಕೂಡ. ಅಜ್ಜಿಯಾಟ, ತೋಳತೊಟ್ಟಿಲಾಟ, ಕೋಳಿಕಾದುವಿಕೆ, ಕುದುರೆ ಆಟ, ಬೀಸು ಹೊಡೆತ, ಉಪ್ಪಾಟ, ಕಪ್ಪೆಲಾಗ, ಉಸಿರು ಕಟ್ಟಿಸುವುದು, ಡೊಂಕ ಹಾಕುವುದು, ಕಾಗೆ-ಗಿಳಿ, ಕಬಡ್ಡಿ, ಹುಲಿದನ, ಪುಣಿಚ್ಚೆಲ್ ಆಟ, ಪಲ್ಲಿಪತ್, ಮರಕೋತಿಯಾಟ, ನೇಲಾಟ, ಅವಿತುಕೊಳ್ಳುವಾಟ, ದುರ್ಸುಬಾಣ, ನೀರಮೇಲೆ ಕಪ್ಪೆಲಾಗ, ತಪ್ಪಂಗಾಯಿ, ಚೆಂಡು ಹೊಡೆತ, ಕುಟ್ಟಿದೊಣ್ಣೆ, ಏಳುಪಲ್ಲೆಯಾಟ, ಬುಗುರಿ, ಜುಬುಲಿ, ಗೋಲಿಯಾಟ, ಏಳು ಗುಳಿಯ ಆಟ, ಕಣ್ಣಾಮುಚ್ಚಾಲೆ, ಗಾಡಿಯಾಟ, ಗೇರುಬೀಜದಾಟ ಮುಂತಾದವು ಹೊರಾಂಗಣ ಆಟಗಳನ್ನು ಜನರು ಆಡುತ್ತಿದ್ದರು. ಚೆನ್ನಮಣೆ, ಪಗಡೆ, ಕಲ್ಲಾಟ, ಕವಡೆ ಆಟ, ಹೊಂಗಾರನ ಕಾಯಿ, ಗಜ್ಜುಗ, ಮಂಜೊಟ್ಟಿ, ಹುಣಸೇ ಬೀಜಗಳಿಂದ ಆಡುವ ಆಟ ಮುಂತಾದ ಒಳಾಂಗಣ ಆಟಗಳನ್ನು ಆಡುತ್ತಿದ್ದರು.

ಆದರೆ ಈಗಲೂ ಹಳ್ಳಿಗಳಲ್ಲಿ ಹಳ್ಳಿ ಆಟಗಳು ಇವೆ. ಕ್ಯಾಂಡಿಕ್ರಶ್ನಂಥ ವಿಡಿಯೋ ಗೇಮ್ ಹಾಗೂ ಮೊಬೈಲ್ನಲ್ಲಿ ಸಿಗುವ ಗೇಮ್ಗಳು ನಗರಕ್ಕೆ ಮಾತ್ರ ಸೀಮಿತ. ಹಳ್ಳಿಯಲ್ಲಿ ಏನಿದ್ದರೂ ಚೌಕಾಬಾರ, ಪಗಡೆ, ಹಾವು ಏಣಿ ಆಟಗಳು. ಕಾಲಚಕ್ರ ಉರುಳಿದೆ. ಹಳ್ಳಿ ಆಟಗಳಿಗೂ ಸಿಟಿಗಳಲ್ಲಿ ವಿಪರೀತ ಡಿಮಾಂಡ್ ಸೃಷ್ಟಿಸುತ್ತಿವೆ. ಹಳ್ಳಿ ಸೊಗಡಿನ ಸಾಂಪ್ರದಾಯಿಕ ಆಟಗಳು ಸಿಟಿಗರನ್ನು ಹೆಚ್ಚು ಹೆಚ್ಚು ಸೆಳೆಯುತ್ತಿವೆಯಲ್ಲದೆ, ಅದೇ ಟ್ರೆಂಡ್ ಆಗಿ ಹವಾ ಆಗಿಬ್ಟಿಟಿದೆ. ಅದಕ್ಕಾಗಿಯೇ ಅನೇಕ ಹಳ್ಳಿ ಆಟಗಳನ್ನು ಕಲಿಸುವ, ಆಡಿಸುವ ಗೇಮ್ ಸೆಂಟರ್ಗಳು ನಗರದಲ್ಲಿ ತಲೆ ಎತ್ತಿವೆ.
ಅಷ್ಟೇ ಅಲ್ಲ, ಮಕ್ಕಳಿಗೆ ಇಂಥ ಆಟಗಳನ್ನು ಕಲಿಸುವ, ಗ್ರಾಮೀಣ ಸೊಗಡಿನ ಹಾವಭಾವಗಳನ್ನು ಉದ್ದೀಪನಗೊಳಿಸಲು ಪೋಷಕರು ಕೂಡ ಪ್ರಯತ್ನಿಸುತ್ತಿದ್ದಾರೆ. ಇಂಥ ಸಂಸ್ಥೆಗಳಲ್ಲಿ ಐದು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೂ ತಮ್ಮಿಷ್ಟದ ಆಟಗಳನ್ನು ಆಡಿ ನಲಿಯಬಹುದು. ಚಿನ್ನಿದಾಂಡು, ಬುಗುರಿ, ಲಗೋರಿ, ಅಳಗುಳಿ ಮನೆ, ಕವಡೆ, ಚನ್ನಮಣೆ, ಹಾವು ಏಣಿ, ಹುಲಿ-ಕುರಿ, ಆಡು-ಕುರಿ, ಮರಕೋತಿಯಾಟ ಮೊದಲಾದ ಹಳ್ಳಿ ಹೈಕಳ ಜನಪ್ರಿಯ ಆಟಗಳನ್ನು ಆಡಿ ಖುಷಿಪಡಬಹುದು. ಅಲ್ಲದೆ, ಕೇರಳ, ತಮಿಳುನಾಡಿನ ಪ್ರಮುಖ ದೇಸಿ ಆಟಗಳನ್ನು ಕೂಡ ಎಂಜಾಯ್ ಮಾಡಬಹುದು.

ಗ್ರಾಮೀಣ ಜನರಿಂದ ಮನೋರಂಜನೆಗಾಗಿ, ದೈಹಿಕ ವ್ಯಾಯಾಮಕ್ಕಾಗಿ ರಚಿಸಲ್ಪಟ್ಟ ಆಟಗಳು. ಇವುಗಳಲ್ಲಿ ಕಂಡು ಬರುವ ಸಾಮಾನ್ಯ ಅಂಶವೆಂದರೆ ಇವು ಅತೀ ಕಡಿಮೆ ಹಾಗೂ ಸುಲಭದಲ್ಲಿ ದೊರಕುವ ಸಾಮಗ್ರಿಗಳನ್ನು ಬಳಸಿ ಕೊಂಡುಆಟವಾಡಿ ನೆರೆದವರನ್ನು ರಂಜಿಸುವುದು. ಲಗೋರಿ, ಕುಂಟೇ ಬಿಲ್ಲೆ, ಮರಕೋತಿಯಾಟ, ಚಿನ್ನಿದಾಂಡು, ಬುಗುರಿ, ಕಣ್ಣು ಮುಚ್ಚಾಲೆ, ಅಳ್ಳುಮನೆ, ಆಣೆಕಲ್ಲು, ಹಗ್ಗಜಗ್ಗಾಟ ಮುಂತಾದವು.


ಕೆಲವೊಂದು ಆಟಗಳು ಮತ್ತು ಆಡುವ ನಿಯಮಗಳ ಬಗ್ಗೆ ತಿಳಿಯೋಣ

ಗೋಲಿ ಆಟ :

ಅಳಿದು ಹೋಗಿರುವ ಕೆಲವೊಂದು ಹಳ್ಳಿ ಆಟಗಳು

ಅಂಗಳದಲ್ಲಿ ಒಂದು ಕುಳಿ ತೆಗೆಯುತ್ತಾರೆ. ಕುಳಿಯಿಂದ ಸುಮಾರು ಇಪ್ಪತ್ತು ಇಪ್ಪತ್ತೈದು ಫೂಟುಗಳ ಅಂತರದ ಮೇಲೆ ಅಡ್ಡ ಗೆರೆಯೊಂದನ್ನು ಎಳೆದು, ಅಲ್ಲಿಂದ ಆಟಗಾರರು ಗೋಡಾ-ಎಂದು ತಮ್ಮ ಗೋಲಿಗಳನ್ನು ಕುಳಿಯತ್ತ ಬಿಡುವರು. ಯಾರ ಗೋಲಿ ಕುಳಿಯ ಹತ್ತಿರ ಬೀಳುವುದೋ ಅವರು ಮೊದಲು ಕುಳಿ ತುಂಬುವರು. ಕುಳಿ ತುಂಬಿದವರು ಕುಳಿಯ ಹತ್ತಿರ ಕುಳಿತು ಇನ್ನೊಬ್ಬರ ಗೋಲಿಗೆ ಹೊಡೆಯುವರು.
ಆಗ ಇನ್ನೊಬ್ಬ ಅವನ ಗೋಲಿ ಹೊಡೆತದಿಂದ ಎಷ್ಟು ದೂರ ಬೀಳುವದೋ ಅಲ್ಲಿಂದ ತನ್ನ ಮುಷ್ಟಿ ಕಟ್ಟಿ ಮುಷ್ಟಿಯ ತುದಿಯಿಂದ ಗೋಲಿಯನ್ನು ತೂರಿ ಕುಳಿಯನ್ನು ತುಂಬಬೇಕು. ಕೈಮುಷ್ಟಿಯಿಂದ ಗೋಲಿ ತೂರುವುದಕ್ಕೆ “ಡೀಗು” ಎನ್ನುತ್ತಾರೆ. ಒಮ್ಮೆ ಗೋಲಿಗೆ ಹೊಡೆದ ಹೊಡೆತದ ಗುರಿ ತಪ್ಪಿದರೆ, ಗೋಲಿ ಇದ್ದಲ್ಲಿಂದ ಮೇಲೆ ಹೇಳಿದ ರೀತಿಯಲ್ಲಿ ಗೋಲಿ ತೂರಿ ಕುಳಿ ತುಂಬಬೇಕು.
ಒಮ್ಮೊಮ್ಮೆ ಗೋಲಿ ಕುಳಿಯಿಂದ ಹೊಡೆದ ಪರಿಣಾಮವಾಗಿ ಬಹಳ ದೂರ ಬಿದ್ದರೆ, ಮೂರು ಸಲ ಮುಷ್ಟಿಯಿಂದ ಡೀಗಲು ಅವಕಾಶ ಕೊಡುತ್ತಾರೆ. ಆಗ ಗೋಲಿ ಕುಳಿ ತುಂಬದೆ ಕುಳಿಯಿಂದ ಅಂತರದಲ್ಲಿಯೇ ಉಳಿದರೆ, ಮತ್ತೆ ಆಟಗಾರ ಇನ್ನೊಮ್ಮೆ ಕುಳಿಯ ಹತ್ತಿರ ಕುಳಿತು ಗೋಲಿಗೆ ಹೊಡೆದು ಓಡಿಸುತ್ತಾನೆ. ಹೀಗೆ ಗೋಲಿಯನ್ನು ಮುಷ್ಟಿಯಿಂದ ಡೀಗುವವ ಕುಳಿ ತುಂಬುವವರೆಗೆ ಆಟ ಮುಂದುವರೆಯುತ್ತದೆ.


ಲಗೋರಿ ಆಟ :

ಅಳಿದು ಹೋಗಿರುವ ಕೆಲವೊಂದು ಹಳ್ಳಿ ಆಟಗಳು

ನಮ್ಮ ನಾಡಿನಲ್ಲಿ ಹಲವಾರು ವರ್ಷಗಳಿಂದ ಮಕ್ಕಳಿಂದ ಹಿಡಿದು ಮುದುಕರ ತನಕ ಸಾಯಂಕಾಲ ಎಲ್ಲರೂ ಜೊತೆಗೂಡಿ ಆಡುತ್ತಿದ್ದ ಆಟ ಲಗೋರಿ. ಲಗೋರಿ ಅಂತ ಕಿರುಚಿದಾಗ ಮೈ ಎಲ್ಲ ‘ಜುಮ್’ ಅನ್ನುವುದು. ಈಗ ಲಗೋರಿ ಆಡುವವರು ಅತಿ ಕಡಿಮೆ, ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಸಿಗುವವರು.
ಈ ಆಟವನ್ನು ಇಬ್ಬರಿಗಿಂತ ಹೆಚ್ಚಾಗಿ ಎಷ್ಟು ಜನರು ಕೂಡ ಆಡಬಹುದು. ಅವರನ್ನು ಎರಡು ತಂಡಗಳಲ್ಲಿ ವಿಭಜಿಸಿವವರು. ಮೊದಲನೆಯ ತಂಡದವರು ೭ ರಿಂದ ೯ ಕಲ್ಲುಗಳನ್ನು ಒಂದರ ಮೇಲೊಂದು ಜೋಡಿಸುವರು. ಹಾಗೆ ಜೋಡಿಸಿದ ಕಲ್ಲುಗಳಿಗೆ ಸ್ವಲ್ಪದೂರದಿಂದ ಮತ್ತೊಂದು ತಂಡದವರು ಒಂದು ಚೆಂಡನ್ನು ಎಸೆಯುವರು. ಆ ಚೆಂಡು ತಾಗಿ ಕಲ್ಲುಗಳು ಚದುರಿದಾಗ, ಮೊದಲನೆಯ ತಂಡದವರು ಅದನ್ನು ಮತ್ತೆ ಯಥಾಸ್ಥಿತಿಗೆ ತರಲು ಪ್ರಯತ್ನಿಸುವರು.
ಅದನ್ನು ತಡೆಯುವುದೇ ಎದುರಾಳಿ ತಂಡದ ಗುರಿ. ಮೊದಲನೆಯ ತಂಡದವರು ಆ ಕಲ್ಲುಗಳನ್ನು ಜೋಡಿಸುವ ಪ್ರಯತ್ನದಲ್ಲಿರುವಾಗ ಎದುರಾಳಿ ತಂಡದವರು ಆ ಚೆಂಡನ್ನು ಯಾರೊಬ್ಬರಿಗೆ ತಾಗುವಂತೆ ಎಸೆದರೆ, ತಾಗಿದಾತ ಆಟದಿಂದ ಹೊರಗೆ ಹೋಗುತ್ತಾನೆ. ಹೀಗೆ ಎದುರಾಳಿಯ ಪ್ರತಿಯೊಬ್ಬರನ್ನು ಆಟದಿಂದ ಹೊರ ಕಳುಹಿಸುವುದೇ ಆಟದ ಗುರಿ. ಈ ಸಮಯದಲ್ಲಿ ಎದುರಾಳಿ ತಂಡವೇನಾದರು ಕಲ್ಲುಗಳನ್ನು ಜೋಡಿಸುವುದರಲ್ಲಿ ಯಶಸ್ವಿಯಾದಲ್ಲಿ ಆ ತಂಡವೇ ಈ ಆಟದಲ್ಲಿ ವಿಜಯಿಗಳು.

ಕುಂಟೆ ಬಿಲ್ಲೆ ಆಟ:

ಅಳಿದು ಹೋಗಿರುವ ಕೆಲವೊಂದು ಹಳ್ಳಿ ಆಟಗಳು

ಇದು ಚಿಕ್ಕ ಹೆಣ್ಣುಮಕ್ಕಳು ಆಡುವ ಆಟ. ಚೌಕಾಕಾರದ ನಾಲ್ಕು ಅಥವಾ ಐದು ಮನೆಗಳನ್ನು ಬರೆದು ಒಂದೊಂದು ಮನೆಯಿಂದ ಮತ್ತೊಂದು ಮನೆಗೆ ‘ಬಕರೆ'(ಮಡಕೆ ಚೂರು) ಎಸೆದು ಕುಂಟುತ್ತಾ , ಒಂದು ಮನೆಯಿಂದ ಮತ್ತೊಂದು ಮನೆಗೆ ನೆಗೆದು ಆಡುವ ಆಟ. ಅಮ್ಮಾಟೆಯಾಟವನ್ನು ಕಣ್ಣು ಮುಚ್ಚಿಕೊಂಡು ಎಚ್ಚರಿಕೆಯಿಂದ ಆಡಬೇಕು.


ಮರಕೋತಿ ಆಟ :

ಅಳಿದು ಹೋಗಿರುವ ಕೆಲವೊಂದು ಹಳ್ಳಿ ಆಟಗಳು

ಇದು ಸಹ ಮುಟ್ಟಾಟದಂತೆ ಇದ್ದು ದೊಡ್ಡ ಮರ, ಗಿಡಗಳ ಮೇಲೆ ಏರಿಕೊಂಡು ಆಟ ಆಡುವುದರಿಂದ ಇದಕ್ಕೆ ಮರಕೋತಿಯಾಟ ಎಂದು ಹೆಸರು.

ಚಿನ್ನಿ ದಾಂಡು ಆಟ :

ಅಳಿದು ಹೋಗಿರುವ ಕೆಲವೊಂದು ಹಳ್ಳಿ ಆಟಗಳು

ಈ ಆಟವನ್ನೇ ಬ್ರಿಟಿಷರು ನಮ್ಮನ್ನು ಆಡುವುದನ್ನು ನೋಡಿ, ಇದರ ಬಗ್ಗೆ ತಿಳಿದುಕೊಂದು ತಮ್ಮ ದೇಶಕ್ಕೆ ಹೋಗಿ ಈ ಆಟವನ್ನು ಕ್ರಿಕೆಟ್ ಎಂದು ಕರೆದು ಜಗತ್ ವಿಖ್ಯಾತಿ ಮಾಡಿದರು. ಆದ್ದರಿಂದ ಕ್ರಿಕೆಟನ್ನು ಸ್ಥಾಪಿಸಿದ ದೇಶದ ಹೆಗ್ಗಳಿಕೆ ಭಾರತಕ್ಕೆ ದೊರಕಿದೆ. ಈ ಆಟದಲ್ಲಿ ಚೆಂಡಿನ ಬದಲಾಗಿ ಮರದಿಂದ ಮಡಲಾದ ಚಿಕ್ಕ ಚಿನ್ನಿ ಹಾಗೂ ಬ್ಯಾಟ್ ಬದಲಾಗಿ ಮರದಿಂದಲೇ ತಯಾರಾದ ಬಡಿಗೆಯ ರೂಪದ ದಾಂಡನ್ನು ಬಳಸಲಾಗುತ್ತದೆ. ಚಿನ್ನಿ ದಾಂಡು ಅಥವಾ ಗಿಲ್ಲಿ ದಾಂಡು ಅಥವಾ ಹಾಣೆ ಗೆಂಡೆ ಅಥವಾ ಚಿನ್ನಿ ಕೋಲು ಒಂದು ಜನಪ್ರಿಯ ಗ್ರಾಮೀಣ ಆಟ. ಇದರಲ್ಲಿ ಮರದ ಕೋಲಿನಿಂದ ಮಾಡಿದ ಒಂದು ಚಿಕ್ಕ ಚಿನ್ನಿ ಅಥವಾ ಗಿಲ್ಲಿ ಅಥವಾ ಹಾಣೆ ಮತ್ತು ಸ್ವಲ್ಪ ದೊಡ್ಡದಾದ ಒಂದು ದಾಂಡು ಅಥವಾ ಕೋಲು ಇವುಗಳ ಸಹಾಯದಿಂದ ಆಡಲಾಗುತ್ತದೆ . ಇದನ್ನು ವೈಯಕ್ತಿಕವಾಗಿ ಅಥವಾ ತಂಡಗಳಾಗಿ ಆಡಬಹುದು. ವ್ಯವಸ್ಥೆ/ಸಲಕರಣೆಗಳು ಆಡಲು ಸಾಕಷ್ಟು ಜಾಗ. ಸುಮಾರು ಒಂದು ಗೇಣು ಉದ್ದದ ನೆಲದ ಮೇಲೆ ಕೊರೆದ ಒಂದು ಗುಂಡಿ / ಕುಳಿ / ಉಳ್ಳ. ಗುಂಡಿಯಷ್ಟೇ ಉದ್ದವಾದ ಮರದ ಕೋಲಿನಿಂದ ಮಾಡಿದ ಚಿನ್ನಿ / ಹಾಣೆ / ಗಿಲ್ಲಿ. ಇದರ ಎರಡೂ ಬದಿ ಚೂಪಾಗಿರಬೇಕು. ಚಿನ್ನಿಗಿಂತ ಕನಿಷ್ಠ ಎರಡೂವರೆ-ಮೂರು ಪಟ್ಟು ಉದ್ದವಾದ, ಮರದ ಕೋಲಿನಿಂದ ಮಾಡಿದ ನೇರವಾದ ದಾಂಡು.

ಆಟಗಾರನು ಗುಂಡಿಯ ಮೇಲೆ ಅಡ್ಡವಾಗಿ ಚಿನ್ನಿಯನ್ನು ಇಡಬೇಕು. ಎದುರು ತಂಡದ ಆಟಗಾರರು ಸನ್ನದ್ಧರಾಗಿರುವುದನ್ನು ತಿಳಿಯಲು ಹೋ ಎಂದು ಕೂಗುವ ರೂಢಿಯಿದೆ. ಎದುರು ತಂಡದವರು ಹೋ ಎಂದು ಉತ್ತರಿಸಿದ ಮೇಲೆ ಚಿನ್ನಿಯ ಕೆಳಭಾಗದಲ್ಲಿ ದಾಂಡನ್ನಿಟ್ಟು ಚಿನ್ನಿಯನ್ನು ಆದಷ್ಟು ದೂರ ಚಿಮ್ಮಬೇಕು. ನೆಲಕ್ಕೆ ಬೀಳುವ ಮೊದಲು ಅದನ್ನು ಎದುರು ತಂಡದ ಆಟಗಾರರು ಹಿಡಿಯಬಹುದು.

ಹೀಗೆ ಹಿಡಿದರೆ ಆಟಗಾರ ತನ್ನ ಪಾಳಿ ಕಳೆದುಕೊಂಡಂತೆ. ಎದುರು ತಂಡದವರಿಗೆ ಅದನ್ನು ಹಿಡಿಯಲಾಗದಿದ್ದರೆ ದಾಂಡನ್ನು ಗುಂಡಿಯಿಂದ ಒಂದು ದಾಂಡಿನಷ್ಟು ದೂರ ಹಿಂದೆ ಇಡಬೇಕು. ಎದುರು ತಂಡದ ಯಾವುದಾದರೂ (ಅಥವಾ ಚಿನ್ನಿ ಬಿದ್ದ ಸ್ಥಳಕ್ಕೆ ಹತ್ತಿರವಿದ್ದ) ಆಟಗಾರ ಅದಕ್ಕೆ ಚಿನ್ನಿ ಬಿದ್ದ ಸ್ಥಳದಿಂದ ಹೊಡೆಯಬೇಕು. ಚಿನ್ನಿ ದಾಂಡಿಗೆ ಮುಟ್ಟಿದರೆ ಆಟಗಾರ ತನ್ನ ಪಾಳಿಯನ್ನು ಕಳೆದುಕೊಂಡಂತೆ. ಚಿನ್ನಿ ಗುಂಡಿಯ ಒಳಗೆ ಬಿದ್ದರೆ ಕೂಡ ಆಟಗಾರ ತನ್ನ ಪಾಳಿಯನ್ನು ಕಳೆದುಕೊಂಡಂತೆ.

ಚಿನ್ನಿ ಗುಂಡಿಯಿಂದ ಒಂದು ಚಿನ್ನಿಯಷ್ಟು ದೂರದಲ್ಲಿ ಬಿದ್ದರೆ ಆಟಗಾರ ಎಡಗೈಯಲ್ಲಿ ಆಟ ಮುಂದುವರೆಸಬೇಕು. ಆಟಗಾರನು ಚಿನ್ನಿಯನ್ನು ದಾಂಡಿನಿಂದ ಮೇಲಕ್ಕೆ ಚಿಮ್ಮಿಸಿ ಚಿನ್ನಿ ಗಾಳಿಯಲ್ಲಿರುವಾಗ ಅದಕ್ಕೆ ಹೊಡೆಯಬೇಕು. ಗಾಳಿಯಲ್ಲಿರುವಾಗ ಎಷ್ಟು ಸಲ ಬೇಕಾದರೂ ಹೊಡೆಯಬಹುದು. ಹೀಗೆ ಮೇಲೆ ಚಿಮ್ಮಿಸಿದಾಗ ಎದುರು ತಂಡದ ಆಟಗಾರರು ಚಿನ್ನಿಯನ್ನು ಹಿಡಿದರೆ ಆಟಗಾರ ತನ್ನ ಪಾಳಿ ಕಳೆದುಕೊಂಡಂತೆ. ಮೂರು ಬಾರಿ ಚಿನ್ನಿಯನ್ನು ಹೀಗೆ ಹೊಡೆಯಲಾಗದಿದ್ದರೆ ಆಟಗಾರ ಪಾಳಿ ಕಳೆದುಕೊಂಡಂತೆ.

ಚಿನ್ನಿಯನ್ನು ಎರಡಕ್ಕಿಂತ ಹೆಚ್ಚು ಬಾರಿ ಹೊಡೆದರೆ ಗಿಲ್ಲಿ ಎಂದು ಕರೆಯಲಾಗುತ್ತದೆ. (ಎರಡು ಬಾರಿ ಹೊಡೆದರೆ ಒಂದು ಗಿಲ್ಲಿ, ಮೂರು ಬಾರಿ ಹೊಡೆದರೆ ಎರಡು ಗಿಲ್ಲಿ ಹೀಗೆ. ಸ್ಥಳದಿಂದ ಸ್ಥಳಕ್ಕೆ ಈ ನಿಯಮ ಬದಲಾಗಬಹುದು. ಚಿನ್ನಿ ಬಿದ್ದ ಸ್ಥಳದಿಂದ ಗುಂಡಿಯವರೆಗಿನ ದೂರವನ್ನು ಆಟಗಾರ ಊಹಿಸಬೇಕು. ಗಿಲ್ಲಿ ಆಗಿದ್ದರೆ ಚಿನ್ನಿಯಿಂದ ಅಳೆಯಬೇಕು. ಎಷ್ಟು ಬಾರಿ ಗಿಲ್ಲಿಯಾಗಿದೆ ಯೋ ಅಷ್ಟರಿಂದ ಅಂಕಗಳನ್ನು ಗುಣಿಸಬೇಕು.

ಗಿಲ್ಲಿ ಆಗಿಲ್ಲದಿದ್ದರೆ ದಾಂಡಿನಿಂದ ಅಳೆಯಬೇಕು. ಊಹಿಸಿದ್ದಕ್ಕಿಂತ ಕಡಿಮೆ ದೂರವಿದ್ದರೆ ಆಟಗಾರ ಪಾಳಿ ಕಳೆದುಕೊಂಡಂತೆ. ಸರಿಯಾಗಿ ಊಹಿಸಿದರೆ ಆಟಗಾರ ಅಥವಾ ಅವನ ತಂಡಕ್ಕೆ ಅಷ್ಟು ಅಂಕಗಳು ದೊರೆತಂತೆ. ಮೊದಲೇ ನಿರ್ಧರಿಸಿದ ಅಂಕವನ್ನು ತಲುಪುವವರೆಗೆ, ಅಥವಾ ಯಾರು/ಯಾವ ತಂಡ ಹೆಚ್ಚು ಅಂಕ ಗಳಿಸಿರುತ್ತದೆಯೋ ಆ ಆಟಗಾರ / ತಂಡ ಗೆದ್ದಂತೆ.


ಬುಗುರಿ ಆಟ :

ಅಳಿದು ಹೋಗಿರುವ ಕೆಲವೊಂದು ಹಳ್ಳಿ ಆಟಗಳು

ಸಾಮಾನ್ಯವಾಗಿ ಗಂಡು ಮಕ್ಕಳು ಹಳ್ಳಿಗಳಲ್ಲಿ ಬುಗುರಿ ಆಟವನ್ನು ಹೆಚ್ಚಾಗಿ ಆಡುತ್ತಾರೆ. ಈ ಬುಗುರಿ ಆಟಕ್ಕೆ ಇತಿಹಾಸದ ಹಿನ್ನೆಲೆ ಮಹಾಭಾರತ ಕಥೆಯಲ್ಲಿ ಪಾಂಡವರು ಮತ್ತು ಕೌರವರ ಆಟದ ಸನ್ನಿವೇಶದಲ್ಲಿ ಕಾಣಿಸುತ್ತದೆ.
ಬುಗುರಿ ಆಟದ ನಿಯಮ ಮತ್ತು ರೀತಿ:
ಮೊದಲು ಹುಡಗರು ಬುಗುರಿಯನ್ನು ದಾರದಿಂದ ಸುತ್ತಿ ತಕ್ಷಣ ನೆಲಕ್ಕೆ ಹಾಕಿ ನಂತರ ಕೈಯಲ್ಲಿ ಹಿಡಿಯುತ್ತಾರೆ. ಮಿಕ್ಕವರು ನೆಲದಲ್ಲಿ ಬಿದ್ದ ಬುಗುರಿಗೆ ಗುರಿ ಇಟ್ಟು ಹೋಡೆದು ತೂತು ಮಾಡುತ್ತಾರೆ.
ಹೀಗೆಯೇ ಆಟ ಮುಂದುವರೆಯುತ್ತದೆ. ಈ ಆಟದಲ್ಲಿ ಬುಗುರಿಗಳು ಎರಡು ಹೋಳು ಆಗುವುದು ಸರ್ವೇ ಸಾಮಾನ್ಯ. ನೆಲಕ್ಕೆ ಬುಗುರಿ ಬೀಳದ ಹಾಗೆ ಕೈಯಲ್ಲಿ ಹಿಡಿದರೆ ಅದಕ್ಕೆ “ಅಂತರ ಮಂಗ” ಎನ್ನುತ್ತಾರೆ. ಆಟಗಾರನ ಅನುಭವದಿಂದ ಬುಗುರಿಯನ್ನು ಅನೇಕ ರೀತಿ ಆಡಿಸುತ್ತಾನೆ. ಇದಕ್ಕೆ ಬೇಕಾದದ್ದು ದಾರ ಹಾಗೂ ಬುಗುರಿ. ಇದನ್ನು ಸರಿಯಾಗಿ ಆಡಿಸಲು ನೈಪುಣ್ಯತೆ ಬೇಕು.


ಕಣ್ಣಾ ಮುಚ್ಚಾಲೆ ಆಟ :

ಅಳಿದು ಹೋಗಿರುವ ಕೆಲವೊಂದು ಹಳ್ಳಿ ಆಟಗಳು

ಇದು ಮಕ್ಕಳ ಆಟ, ಇದನ್ನು ಸುಮಾರು ಐದರಿಂದ ಹತ್ತು ಮಕ್ಕಳ ಗುಂಪು ಆಡಬಹುದು. ಗೋಡೆಗೆ ಮುಖ ಮಾಡಿ ಕಣ್ಣು ಮುಚ್ಚಿಕೊಂಡು ಒಂದರಿಂದ ನೂರರವರೆಗೆ ಎಣಿಸುತ್ತಿರುವಾಗ ಉಳಿದವರು ಹೋಗಿ ಬಚ್ಚಿಟ್ಟುಕೊಳ್ಳಬೇಕು. ಎಣಿಕೆ ಮುಗಿದ ನಂತರ ಬಚ್ಚಿಟ್ಟು ಕೊಂಡಿರುವವರನ್ನು ಹುಡುಕಿ ಅವರ ಹೆಸರನ್ನು ಕೂಗಿ ಗೋಡೆಗೆ ಕೈ ತಾಕಿಸಬೇಕು.

ಚನ್ನೆ ಮಣೆ ಆಟ :

ಅಳಿದು ಹೋಗಿರುವ ಕೆಲವೊಂದು ಹಳ್ಳಿ ಆಟಗಳು

ಖಾಲಿ ಮನೆ, ಒಂದು, ಎರಡು, ಮೂರು, ನಾಲ್ಕು. ಮತ್ತೆ ಖಾಲಿ ಮನೆ, ಒಂದು, ಎರಡು, ಮೂರು, ನಾಲ್ಕು ಹೀಗೆ ಸಾಗುತ್ತದೆ ಚನ್ನೆಮನೆ ಆಟ. ಎರಡು ಆಟಗಾರರು, ಪ್ರತಿಯೊಬ್ಬರಿಗೂ ೭ ಮನೆಗಳು. ಪ್ರತೀ ಮನೆಗಳಲ್ಲೂ ೪ ಕಾಳುಗಳು. ಮೊದಲು ಆಟ ಶುರುಮಾಡಿದವ ತನ್ನ ೭ ಮನೆಗಳಲ್ಲಿ ಯಾವುದಾದರೊಂದು ಮನೆಯನ್ನು ಆಯ್ದುಕೊಂಡು ಅದರಲ್ಲಿರುವ ೪ ಕಾಳುಗಳನ್ನು ತನ್ನ ಹಾಗೂ ತನ್ನ ಸಹ ಆಟಗಾರನ ಮನೆಗಳಿಗೆ ಹಂಚುತ್ತಾ ಹೋಗಬೇಕು.
ಹೀಗೆ ಹಂಚುತ್ತಾ ಹೋಗುವಾಗ ಮತ್ತೆ ೪ ಕಾಳುಗಳು ಒಟ್ಟುಗೂಡಿದರೆ ಮನೆಯಲ್ಲಿ ಕರು ಹಾಕಿತೆಂದೂ, ಆ ಕರು ಮನೆಯ ಯಜಮಾನನ (ಆ ೭ ಮನೆಯ ಆಟಗಾರ ಮನೆ ಒಡೆಯ) ಸ್ವತ್ತೆಂದೂ, ಅವನು ಅದನ್ನು ತೆಗೆದಿರಿಸಿಕೊಳ್ಳುತ್ತಾನೆ. ಒಬ್ಬನ ಆಟ ಮುಗಿಯುವುದು ಆತನ ಕೈಯಲ್ಲಿರುವ ಕಾಳುಗಳು ಖಾಲಿಯಾಗಿ, ಮುಂದೆ ಕಾಳಿರದ ಬರಿಯ ಖಾಲಿ ಮನೆಗಳು ಸಿಕ್ಕಾಗ. ಹೀಗೆ ಚದುರಿಸಿ ಹಂಚುವ, ಕೂಡಿಸುವ ಆಟದಲ್ಲಿ ಯಾರಾದರೊಬ್ಬರು ಗೆಲ್ಲುತಾರೆ.
ಹೀಗೆ ಇನ್ನೂ ಹಲವು ಹಳ್ಳಿ ಆಟಗಳು ಇವೆ. ಕೊಕ್ಕೋ, ಕಬ್ಬಡಿ ಮುಂತಾದವು ದೇಹಕ್ಕೆ ಒಳ್ಳೆಯ ವ್ಯಾಯಾಮ ಕೊಡುವ ಆಟಗಳು.

What do you think?

-1 Points
Upvote Downvote

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

1,504 Comments

  1. кухонный гарнитур в спб по выгодной цене
    Кухонная мебель из натурального дерева в спб на заказ
    Качественные кухни от производителя в спб недорого
    Мебель для кухни в спб с доставкой и монтажом
    Специальные предложения на кухни в спб только у нас
    Уникальные кухни в спб для вашего дома
    Кухни семейного типа в спб по индивидуальному заказу
    Трендовые кухонные гарнитуры для спб от ведущих производителей
    Экономные кухни в спб для квартиры или загородного дома
    Практичные кухонные уголки для небольшой площади в спб
    Квалифицированные дизайнеры для создания вашей кухни в спб
    Современный дизайн для вашей кухни в спб
    Широкий ассортимент кухонной мебели в спб
    Высокие стандарты качества для вашей кухни в спб
    Сертифицированные материалы для вашей кухни в спб
    Уникальный дизайн для вашей кухни в спб
    Уютная кухня в спб – место для семейных посиделок и приготовления вкусных блюд
    Кухонная мебель на любой вкус для вашей кухни в спб
    Бесплатная доставка для вашей кухни в спб
    купить кухню в спб дешево [url=vip-kukhni-spb.ru]vip-kukhni-spb.ru[/url].