in ,

ಕಾಳಿಂಗ ಸರ್ಪ ಅತ್ಯಂತ ವಿಷದ ಹಾವು ಹಾಗೂ ಉದ್ದದ ಹಾವು

ಕಾಳಿಂಗ ಸರ್ಪ
ಕಾಳಿಂಗ ಸರ್ಪ

ಕಾಳಿಂಗ ಸರ್ಪ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದು. ಮಲೆನಾಡಿನಲ್ಲಿ ಅಥವಾ ಆಗುಂಬೆ ಭಾಗದಲ್ಲಿ ಕಾಳಿಂಗ ಸರ್ಪವನ್ನು ಕಾಣಬಹುದು. ಅತಿ ಅಪರೂಪದ ಹಾವು ಇದಾಗಿದೆ. ಹೆಚ್ಚಾಗಿ ಯಾರ ಕಣ್ಣಿಗೂ ಕಾಣಿಸುವುದಿಲ್ಲ. ಉದ್ದ ಮತ್ತು ಗಾತ್ರದಲ್ಲಿ ಉಳಿದೆಲ್ಲಾ ಹಾವುಗಳಿಂತ ದಪ್ಪವಾಗಿ ಬೆಳೆಯುವ ಈ ಕಾಳಿಂಗ ಸರ್ಪ ಕಚ್ಚಿದರೆ ನಿಮಿಷಾರ್ಧದಲ್ಲೇ ಸಾವನ್ನಪ್ಪಿದವರೂ ಇದ್ದಾರೆ.

ಕಾಳಿಂಗ ಸರ್ಪವು (ಒಫಿಯೊಫಗಸ್‌ ಹನ್ನಾ ) ೫.೬ ಮೀಟರ್‌ಗಳವರೆಗೆ (೧೮.೫ ಅ) ಬೆಳೆಯುವ ವಿಶ್ವದ ಅತಿ ಉದ್ದದ ವಿಷಪೂರಿತ ಹಾವು ಆಗಿದೆ. ಈ ಗುಂಪಿಗೆ ಸೇರಿದ ಹಾವುಗಳು ಆಗ್ನೇಯ ಏಷ್ಯಾ ಮತ್ತು ಭಾರತದ ಭಾಗಗಳಲ್ಲಿ ಕಾಣಸಿಗುತ್ತವೆ. ಇವುಗಳು ಅರಣ್ಯ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಕಾಳಿಂಗ ಸರ್ಪವು ನಾಗರಹಾವಿನ ಗುಂಪಿಗೆ ಸೇರಿಲ್ಲ. ಹಾಗೆಯೇ ಕಾಳಿಂಗ ಸರ್ಪವು ತನ್ನದೇ ಆದ ಜೀವಿ ಕುಲದ ಗುಂಪುನ್ನು ಹೊಂದಿದೆ. ಇದರ ಕುತ್ತಿಗೆಯ ಗಾತ್ರ ಮತ್ತು ಪ್ರಕಾರದಲ್ಲಿನ ವೈವಿಧ್ಯಗಳಿಂದಾಗಿ ನಾಗರಹಾವುಗಳಿಗಿಂತ ಭಿನ್ನವಾಗಿವೆ. ಈ ಲಕ್ಷಣಗಳ ಅರಿವುಗಳ ಮೂಲಕ ಕಾಳಿಂಗ ಸರ್ಪವನ್ನು ಗುರುತಿಸಬಹುದು. ಕಾಳಿಂಗ ಸರ್ಪಗಳು ಇತರ ನಾಗರಹಾವುಗಳಿಗಿಂತ ದೊಡ್ಡದಾಗಿದ್ದು, ಇವುಗಳ ಕುತ್ತಿಗೆಯಲ್ಲಿ “^” ಸಂಕೇತದಂತಹ ಪಟ್ಟೆಯಿರುವುದು. ಆದರೆ ಉಳಿದ ನಾಗರಹಾವುಗಳಲ್ಲಿ ಎರಡು ಅಥವಾ ಒಂದು ಕಣ್ಣಿನಾಕಾರ ಸಂಕೇತಿಸುವ ಪಟ್ಟೆಯಿರುವುದು.

ಕಾಳಿಂಗ ಸರ್ಪ ಅತ್ಯಂತ ವಿಷದ ಹಾವು ಹಾಗೂ ಉದ್ದದ ಹಾವು
13ಅಡಿ ಉದ್ದದ ಕಾಳಿಂಗ

ಕಾಳಿಂಗ ಸರ್ಪದ ಜೀವ ಸಂಕುಲದ ಹೆಸರು ಒಫಿಯೊಫಗಸ್‌ ಆಗಿದ್ದು, ಇದರ ಅರ್ಥ “ಹಾವು-ಭಕ್ಷಕ” ಎಂದಾಗಿದೆ. ಇಲಿ ಹಾವು, ತಮ್ಮ ಆಹಾರಕ್ಕೆ ತಕ್ಕಂತಹ ದೊಡ್ಡ ಗಾತ್ರದ ಹೆಬ್ಬಾವುಗಳು ಮತ್ತು ಇತರ ವಿಷಪೂರಿತ ಹಾವುಗಳು (ಬಣ್ಣ,ಬಣ್ಣದ ಪಟ್ಟೆಯುಳ್ಳ(ಬಹುರಂಗಿ) ಹಾವು, ನಾಗರಹಾವು ಮತ್ತು ತನ್ನದೇ ಜಾತಿಯ ಚಿಕ್ಕ ಹಾವುಗಳು) ಸೇರಿದಂತೆ ಇತರ ಹಾವುಗಳು ಕಾಳಿಂಗ ಸರ್ಪದ ಆಹಾರ ಮೂಲವಾಗಿವೆ.

ಕಾಳಿಂಗ ಸರ್ಪದ ವಿಷವು ಮೂಲತಃ ನಿರೊಕಾಕ್ಸಿಕ್‌(ನೇರವಾಗಿ ಮಾನವನ ನರಮಂಡಲಕ್ಕೆ ವಿಷ ಸ್ಪ್ರುರಿಸುವ) ಆಗಿದ್ದು, ಒಂದೇ ಕಡಿತಕ್ಕೆ ಒಬ್ಬ ಮನುಷ್ಯನನ್ನು ಕೊಲ್ಲುವ ಸಾಮರ್ಥ್ಯ ಹೊಂದಿದೆ. ಒಂದು ಕಡಿತದಿಂದ ಸಾವಿನ ಪ್ರಮಾಣ ಅತಿ ಗರಿಷ್ಠ,೭೫%ರಷ್ಟು ಎನ್ನಲಾಗಿದ್ದು, ಅಥವಾ ಕಡಿಮೆಯೆಂದರೆ ೩೩%ರಷ್ಟು ಕಾಣಬರುತ್ತದೆ. ಚಿಕಿತ್ಸೆಯನ್ನಾಧರಿಸಿದಂತೆ ಇದರ ಪ್ರಮಾಣ ಇಳಿಮುಖವಾಗುತ್ತದೆ. ಈ ಹಾವುಗಳು ಏಷ್ಯಾದ ಅತಿ ಹೆಚ್ಚು ಅಪಾಯಕಾರಿ ಹಾವುಗಳಲ್ಲಿ ಒಂದಾಗಿವೆ.

ಕಾಳಿಂಗ ಸರ್ಪವು ಉದ್ದದ ಮತ್ತು ಬಲಯುತ ಹಾವಾಗಿದೆ. ಇದು ಸರಾಸರಿ ೩.೬–೪ ಮೀಟರ್‌ನಷ್ಟು (೧೨–೧೩ ಅಡಿ) ಉದ್ದವಿದ್ದು, ಸುಮಾರು ೬ ಕಿಲೋಗ್ರಾಮ್‌ನಷ್ಟು (೧೩.೨ ಪೌಂಡ್‌ಗಳು) ತೂಕ ಹೊಂದಿರುವುದು. ವಿವಿಧ ಜಾತಿಯ ಕಾಳಿಂಗ ಸರ್ಪಗಳನ್ನು ಲಂಡನ್‌ ಮೃಗಾಲಯದಲ್ಲಿ ಬಂಧಿಸಿಡಲಾಗಿತ್ತು. ಎರಡನೇ ಮಹಾಯುದ್ಧದ ಕಾರಣದಿಂದ ಅವುಗಳು ಸಾಯುವ ಮೊದಲು ೫.೭ ಮೀಟರ್‌ನಷ್ಟು (೧೮.೮ ಅಡಿ) ಬೆಳೆದಿದ್ದವು ಎಂದು ಪ್ರಾಣಿ ಸಂಗ್ರಹಾಲಯದವರು ಹೇಳುತ್ತಾರೆ. ಕಾಳಿಂಗ ಸರ್ಪಗಳು ದೊಡ್ಡ ಗಾತ್ರದಲ್ಲಿದ್ದರೂ, ವೇಗವಾಗಿ ಚಲಿಸಬಲ್ಲವಾಗಿದ್ದು, ಚುರುಕಾಗಿರುತ್ತವೆ. ಇವು ಕಡುಹಸಿರು, ಕಂದು ಅಥವಾ ಕಪ್ಪು ಬಣ್ಣದ ಚರ್ಮ ಹೊಂದಿದ್ದು, ದೇಹದ ಕೆಳಭಾಗದಲ್ಲಿ ಮಸುಕಾದ ಹಳದಿ ಬಣ್ಣ ಹೊಂದಿರುತ್ತವೆ. ಹಾವಿನ ಹೊಟ್ಟೆಯ ಭಾಗವು ಕೆನೆಹಾಲಿನ ಬಣ್ಣ ಅಥವಾ ಮಸುಕಾದ ತಿಳಿ ಹಳದಿ ಬಣ್ಣ ಹೊಂದಿರುತ್ತದೆ.

ಅಲ್ಲದೇ ಇದು ಮೃದುವಾಗಿರುವುದು. ಒಂದು ಪ್ರೌಢ ಕಾಳಿಂಗ ಸರ್ಪದ ತಲೆಯು ದೊಡ್ಡ ಗಾತ್ರ ಮತ್ತು ತೂಕ ಹೊಂದಿರುವಂತೆ ಕಾಣಿಸುವುದು. ಇತರ ಹಾವುಗಳಂತೆ ಕಾಳಿಂಗ ಸರ್ಪಗಳು ತಮ್ಮ ಬೇಟೆಯನ್ನು ನುಂಗಲು ಬಾಯಿ ಭಾಗದ ದವಡೆ ಅಗಲಿಸುವ ಸಾಮರ್ಥ್ಯ ಹೊಂದಿವೆ. ಇದು ಪ್ರೋಟೆರೊಗ್ಲಿಫ್‌(ಒಂದೇ ಸಮರೂಪದ) ದಂತರಚನೆ ಹೊಂದಿದೆ.

ಅಂದರೆ ಇವು ಬಾಯಿಯ ಮುಂಭಾಗದಲ್ಲಿ ಎರಡು ಚಿಕ್ಕ, ಸ್ಥಿರ ವಿಷದ ಹಲ್ಲುಗಳನ್ನು ಹೊಂದಿದೆ. ಇದು ಚರ್ಮದಡಿಯಲ್ಲಿದ್ದು ಪಿಚಕಾರಿಯಂತೆ ಬೇಟೆಯ ಶರೀರದೊಳಗೆ ವಿಷ ಪ್ರವಹಿಸುವಂತೆ ಮಾಡುತ್ತದೆ. ಹೆಣ್ಣು ಹಾವಿಗಿಂತ ಗಂಡು ಹಾವು ಗಾತ್ರದಲ್ಲಿ ದೊಡ್ಡದು ಮತ್ತು ದಪ್ಪನಾಗಿರುವುದು.ವಿಷದ ಹಲ್ಲುಗಳೂ ದೊಡ್ಡದಾಗಿರುತ್ತವೆ. ಕಾಳಿಂಗ ಸರ್ಪದ ಸರಾಸರಿ ಜೀವಿತಾವಧಿ ಸುಮಾರು ೨೦ ವರ್ಷಗಳು.

ಕಾಳಿಂಗ ಸರ್ಪ ಅತ್ಯಂತ ವಿಷದ ಹಾವು ಹಾಗೂ ಉದ್ದದ ಹಾವು
ಕಾಳಿಂಗ ಇನ್ನೊಂದು ಹಾವನ್ನು ನುಂಗುತ್ತಿರುವುದು

ಕಾಳಿಂಗ ಸರ್ಪವು ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಕಂಡು ಬರುತ್ತಿದ್ದವು. ಆದರೆ ಅವುಗಳು ಸಾಮಾನ್ಯವಾಗಿ ಕಂಡು ಬರುವುದಿಲ್ಲ. ಇವುಗಳು ಎತ್ತರದ ದಟ್ಟ ಅರಣ್ಯ ಪ್ರದೇಶಗಳಲ್ಲಿ ಕಂಡುಬರುತ್ತದೆ. ಹೆಚ್ಚಾಗಿ ಸರೋವರ ಮತ್ತು ಹಳ್ಳಗಳು ಆಸುಪಾಸಿನ ಪ್ರದೇಶದಲ್ಲಿ ಹೆಚ್ಚಾಗಿ ವಾಸಿಸುತ್ತವೆ.

ಅರಣ್ಯನಾಶದಿಂದಾಗಿ ಕಾಳಿಂಗ ಸರ್ಪದ ಸಂಖ್ಯೆಯು ಕಡಿಮೆಯಾಗುತ್ತಿದೆ. ಆದರೆ ಇದು ಅಳಿವಿನಂಚಿನಲ್ಲಿರುವ ಹಾವುಗಳಂತೆ IUCNನ ಪಟ್ಟಿಯಲ್ಲಿ ದಾಖಲಾಗಿಲ್ಲ. ಇದು ಕೇವಲ ದಾಖಲೆಗಳಲ್ಲಿ ಅನುಬಂಧ II ಪ್ರಾಣಿಗಳ ವರ್ಗದಲ್ಲಿ ದಾಖಲಾಗಿದೆ.

ಇತರ ಹಾವುಗಳಂತೆ ಕಾಳಿಂಗ ಸರ್ಪಗಳು ತಮ್ಮ ಸೀಳು ನಾಲಿಗೆಗಳ ಮೂಲಕ ರಸಾಯನಿಕ ಸಂಕೇತ (“ವಾಸನೆ”) ಪಡೆಯುವವು. ಶರೀರದ ಸೂಕ್ಷ್ಮ ಭಾಗದಿಂದ ವಾಸನೆ ಗ್ರಹಿಸಿ, ತಮ್ಮ ಬಾಯಿಯ ಮೇಲ್ಗಡೆಯಿರುವ ವಿಶೇಷ ಸಂವೇದನ ಗ್ರಹಣ ಶಕ್ತಿಗೆ ಜಕೋಬ್ಸನ್‌ರ (ಎಂಬ)ಅಂಗ)ದ ಮೂಲಕ ಬೇಟೆಯ ಇರುವಿಕೆಯ ಮಾಹಿತಿಯನ್ನು ವರ್ಗಾಯಿಸುತ್ತವೆ.

ಆಹಾರದ ವಾಸನೆ ಪತ್ತೆಯಾದಾಗ, ಬೇಟೆಯ ದಿಕ್ಕು ತಿಳಿಯಲು ಹಾವು ತನ್ನ ನಾಲಿಗೆಯನ್ನು (ಸೀಳು ನಾಲಿಗೆಯು ಸ್ಟೀರಿಯೊದಂತೆ ಕಾರ್ಯನಿರ್ವಹಿಸುವುದು) ಹೊರ ಚಾಚು ವುದು; ಕಾಳಿಂಗ ಸರ್ಪದ ತೀಕ್ಷ್ಣ ದೃಷ್ಟಿ (ಕಾಳಿಂಗ ಸರ್ಪಗಳು ೧೦೦ ಮೀಟರ್‌ [300 ಅಡಿ] ದೂರದಲ್ಲಿ ಚಲಿಸುತ್ತಿರುವ ತನ್ನ ಬೇಟೆಯನ್ನು ಪತ್ತೆ ಹಚ್ಚ ಬಲ್ಲವು), ಬುದ್ಧಿಶಕ್ತಿ ಮತ್ತು ಬೇಟೆ ಪತ್ತೆಗೆ ಭೂಮಿಯ ಕಂಪನದ ಸಂವೇದನತ್ವ ಗ್ರಹಿಸುವ ಶಕ್ತಿ ಹೊಂದಿವೆ. ವಿಷಕಾರಿದ ನಂತರ, ಕಾಳಿಂಗ ಸರ್ಪವು ತನ್ನ ಬೇಟೆಯನ್ನು ನುಂಗಲು ಪ್ರಾರಂಭಿಸುವುದು. ಆಗ ಹಾವಿನಲ್ಲಿರುವ ಟಾಕ್ಸಿನ್‌ಗಳು(ವಿಷಕಾರಕ) ನುಂಗಿದ ಆಹಾರದ ಜೀರ್ಣ ಕ್ರಿಯೆಯನ್ನು ಪ್ರಾರಂಭಿಸುವುದು.

ಇತರ ಹಾವುಗಳಂತೆ ಕಾಳಿಂಗ ಸರ್ಪಗಳು ಸುಸ್ಥಿರ ಜೋಡಣೆಯ ದವಡೆಗಳನ್ನು ಹೊಂದಿಲ್ಲ. ಅದರ ಬದಲಿಗೆ, ದವಡೆ ಮೂಳೆಗಳ ಹೆಚ್ಚು ಬಾಗುವಿಕೆಯಿಂದಾಗಿ ಅಸ್ತಿಬಂಧನಿಗಳಿಂದ ಸಂಪರ್ಕಿಸಲ್ಪಟ್ಟಿದೆ. ಹೀಗಾಗಿ ಕೆಳಗಿನ ದವಡೆಯ ಮೂಳೆಗಳು ಸ್ವತಂತ್ರ ಮತ್ತು ಸುಲಭವಾಗಿ ಚಲಿಸಬಲ್ಲವು. ಇತರ ಹಾವುಗಳಂತೆ ಕಾಳಿಂಗ ಸರ್ಪವು ತನ್ನ ಆಹಾರವನ್ನು ಜಗಿಯದೆ, ಸಂಪೂರ್ಣವಾಗಿ ನುಂಗುವುದು.

ದವಡೆ ಅಗಲಿಸುವಿಕೆಯಿಂದಾಗಿ ತನ್ನ ತಲೆಗಿಂತಲೂ ದೊಡ್ಡದಾಗ ಬೇಟೆಯನ್ನು ಅದು ನುಂಗಿ (ಆಹಾರ)ಅರಗಿಸಿಕೊಳ್ಳಬಹುದಾಗಿದೆ. ರಾತ್ರಿ ಕಡಿಮೆ ಕಾಣಿಸಿಕೊಂಡರೂ, ಕಾಳಿಂಗ ಸರ್ಪಗಳು ಯಾವುದೇ ಸಮಯದಲ್ಲಿ ಬೇಟೆಯನ್ನಾಡಬಹುದಾಗಿದೆ. ಬಹುತೇಕ ಪ್ರಖ್ಯಾತ ಸರೀಸೃಪ ವಿಜ್ಞಾನಿಗಳು ಇದನ್ನು ದಿವಾಚರ (ಹಗಲಿನಲ್ಲಿ ಹೆಚ್ಚಾಗಿ ಕಾರ್ಯನಿರ್ವಹಿಸುವ) ಜಾತಿಯ ಸರಿಸೃಪಗಳಿಗೆ ಹೋಲಿಸುತ್ತಾರೆ.

ಕಾಳಿಂಗ ಸರ್ಪದ ಆಹಾರ ಕ್ರಮವು ಪ್ರಮುಖವಾಗಿ ಇತರ ಹಾವುಗಳನ್ನು ಒಳಗೊಂಡಿದೆ (ಒಫಿಯೊಫಜಿ): ಹೆಬ್ಬಾವುಗಳುನಂತಹ ವಿಷಕಾರಿಯಲ್ಲದ ಹಾವು ಮತ್ತು ತೀಕ್ಷ್ಣ ವಿಷದ ಪಟ್ಟೆ ಹಾವುಗಳನ್ನು ಒಳಗೊಂಡಿರುವ ವಿಷಪೂರಿತ ಹಾವುಗಳು ಇದರ ಆಹಾರವಾಗಿದೆ. ಆಹಾರದ ಕೊರತೆಯಾದಾಗ, ಕಾಳಿಂಗ ಸರ್ಪವು ಹಲ್ಲಿಗಳು, ಪಕ್ಷಿಗಳು ಮತ್ತು ಇಲಿ, ಮೊಲದಂತಹ ಚಿಕ್ಕ ಕಶೇರುಕ ಪ್ರಾಣಿಗಳನ್ನು ಸಹ ತಿನ್ನುವುದು.

ಕಾಳಿಂಗ ಸರ್ಪ ಅತ್ಯಂತ ವಿಷದ ಹಾವು ಹಾಗೂ ಉದ್ದದ ಹಾವು
ದಕ್ಷಿಣ ಕನ್ನಡ ಪಿಲಿಕುಳದಲ್ಲಿ 38 ಮರಿ ಸರ್ಪ ಜನಿಸಿತ್ತು

ಕೆಲವು ಸಂದರ್ಭಗಳಲ್ಲಿ ಇದು ಸುಲಭವಾಗಿ ಬಾಗುವ ತನ್ನ ಸ್ನಾಯು ಬಲ ಬಳಸಿ, ಪಕ್ಷಿಗಳು ಮತ್ತು ದೊಡ್ಡ ಗಾತ್ರದ ಕಶೇರುಕಗಳಂತಹವುಗಳ ಗಾತ್ರ “ಕುಗ್ಗಿಸಿ,” ನುಂಗಬಲ್ಲವು. ಆದರೂ ಇದು ಅಪರೂಪವೆನ್ನಬಹುದು. ಕಾಳಿಂಗ ಸರ್ಪದ ನಿಧಾನಗತಿಯ ಚಯಾಪಚಯಿ (ಜೀರ್ಣ) ಕ್ರಿಯೆಯಿಂದಾಗಿ, ಒಂದು ಬಾರಿ ದೊಡ್ಡ ಪ್ರಮಾಣದಲ್ಲಿ ಆಹಾರ ಸೇವಿಸಿದ ನಂತರ, ಹಲವು ತಿಂಗಳವರೆಗೆ ಅದಕ್ಕೆ ಆಹಾರದ ಅಗತ್ಯವಿರು ವುದಿಲ್ಲ. ಇಲಿ ಹಾವು ಕಾಳಿಂಗ ಸರ್ಪದ ಸಾಮಾನ್ಯ ಆಹಾರವಾಗಿದೆ. ಕಾಳಿಂಗ ಸರ್ಪಗಳು ಇಲಿಗಳ ಆಕರ್ಷಣೆಯಿಂದಾಗಿ ಹುಡುಕಿ ಕೊಂಡು ಮಾನವನ ಆವಾಸ ಸ್ಥಾನಗಳಿಗೆ ಬರುತ್ತವೆ.

ಕಾಳಿಂಗ ಸರ್ಪ ಬೆದರಿಸಿದಾಗ, ತನ್ನ ದೇಹದ ಮೂರನೇ ಒಂದು ಭಾಗದಷ್ಟು ಗೋಣನ್ನು ಮೇಲೆತ್ತಿ, ಕುತ್ತಿಗೆ (ವಯಸ್ಕರ ಮೊಣಕೈಯನ್ನು ಸುತ್ತಬಹುದಾದಷ್ಟು) ನೇರಗೊಳಿಸಿ, ವಿಷದ ಹಲ್ಲುಗಳ ತೋರಿಸುವ ಮೂಲಕ ಜೋರಾಗಿ ಬುಸುಗುಟ್ಟುವುದು.

ತೀರಾ ಹತ್ತಿರಕ್ಕೆ ಬರುವ ವಸ್ತು ಅಥವಾ ಜೀವಿಗಳ ಅನೀರಿಕ್ಷಿತ ಚಲನೆಯಿಂದಾಗಿ ಅವು ಹಠಾತ್ತನೆ ಕೆರಳುತ್ತವೆ. ಕಾಳಿಂಗ ಸರ್ಪಗಳು ಬಹಳಷ್ಟು ಬಾರಿ ಹಠಾತ್ ದಾಳಿ ನಡೆಸುವುದಲ್ಲದೇ ಸುಮಾರು ೭ ಅಡಿಯಷ್ಟು ದೂರದಿಂದಲೇ ಅಪ್ಪಳಿಸಿ ಬಲಿ ಹಿಡಿಯುವ ಸಾಮರ್ಥ್ಯ ಹೊಂದಿವೆ.

ನಿರೊಟಾಕ್ಸಿಕ್‌ಗಳಿಗೆ (ನರಗಳ ಮೇಲೆ ವಿಷದಿಂದಾಗುವ) ಪ್ರತಿರೋಧ ಹೊಂದಿರುವ ಮುಂಗುಸಿಯಂತಹ ಸ್ವಾಭಾವಿಕ ಪರಭಕ್ಷಕ ಜೀವಿಗಳನ್ನು ಕಾಳಿಂಗ ಸರ್ಪಹೋರಾಟ ಮಾಡಿ ಎದುರಿಸಿದರೆ,

ಸಾಮಾನ್ಯವಾಗಿ ಹಾವುಗಳು ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವವು. ಒಂದು ವೇಳೆ ಅದಕ್ಕೆ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಅದು ನಾಗರ ಹಾವಿನ ಮಾದರಿ ಯಲ್ಲಿ ಗಟ್ಟಿಯಾಗಿ ಬುಸುಗುಟ್ಟಿ, ಕೆಲವೊಮ್ಮೆ ಬಾಯಿ ಮುಚ್ಚಿದಂತೆ ನಟಿಸಿ, ಎದುರಿನ ಪ್ರಾಣಿಯ ಮೇಲೆ ಜೋರಾಗಿ ಅಪ್ಪಳಿಸುವುದು. ಆ ಸಂದರ್ಭದಲ್ಲಿ ಕಾಳಿಂಗ ಸರ್ಪದ ಈ ಪ್ರಯತ್ನ ಪರಿಣಾಮಕಾರಿಯಾಗಿ ಫಲಕಾರಿಯಾಗುತ್ತದೆ. ವಿಶೇಷವಾಗಿ ಬೇಟೆ ಯಾಡುವುದರಲ್ಲಿ ಕಾಳಿಂಗ ಸರ್ಪವು ಮುಂಗುಸಿಯಂತಹ ಸಸ್ತನಿಗಳಿಗಿಂತ ಹೆಚ್ಚು ಅಪಾಯಕಾರಿ. ಇದು ಚಿಕ್ಕ ಸಸ್ತನಿಗಳನ್ನು ಸುಲಭವಾಗಿ ಕೊಲ್ಲುವುದು.

ಪ್ರೋಟಿನ್‌ಗಳು ಮತ್ತು ಪಾಲಿಪೆಪ್ಟೈಡ್‌ (ಅಮೀನೊ ಆಮ್ಲ) ಗಳನ್ನು ಒಳಗೊಂಡಿರುವ ಕಾಳಿಂಗ ಸರ್ಪದ ವಿಷವು ಹಾವಿನ ಕಣ್ಣಿನ (ಇತರ ಹಾವುಗಳಲ್ಲಿ ರುವಂತೆ) ಹಿಂಭಾಗದಲ್ಲಿರುವ ವಿಶೇಷ ಲಾಲಾರಸ ಗ್ರಂಥಿಗಳ ಮೂಲಕ ಉತ್ಪತ್ತಿಯಾಗುವುದು. ಬೇಟೆಯಾಡುವ ಪ್ರಾಣಿಯನ್ನು ಕಚ್ಚಿದಾಗ, ವಿಷವು ಹಾವಿನ ಅರ್ಧ ಅಂಗುಲದ (೧.೨೫ ಸೆ.ಮೀ) ವಿಷದ ಹಲ್ಲುಗಳ ಮೂಲಕ ಗಾಯದೊಳಗೆ ನುಸುಳುವುದು.

ಕಾಳಿಂಗ ಸರ್ಪಗಳು ಇತರ ಜಾತಿಯ ಹಾವುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ವಿಷ ಹೊರಸೂಸುತ್ತವೆ. ಕಾಳಿಂಗ ಸರ್ಪವು ಒಂದು ಬಾರಿಗೆ ೩೮೦-೬೦೦ mgಯಷ್ಟು ವಿಷವನ್ನು (ಇದು ೨೦-೪೦ ವಯಸ್ಕ ಮನುಷ್ಯರನ್ನು ಕೊಲ್ಲಲು ಸಾಕಾಗುವುದು) ಶರೀರದೊಳಗೆ ಸೇರಿಸುವ ಶಕ್ತಿ ಹೊಂದಿವೆ. ಇಷ್ಟೊಂದು ಪ್ರಮಾಣದ ವಿಷವು ಆನೆಯ ನ್ನು ೩ ಗಂಟೆಗಳೊಳಗೆ ಕೊಲ್ಲಲು ಸಾಕಾಗುವುದೆಂದು ಹೇಳಲಾಗುತ್ತದೆ.

ಒಂದು ಬಾರಿ ಕಾಳಿಂಗ ಸರ್ಪ ಕಚ್ಚಿದಲ್ಲಿ, ಅದರ ವಿಷದ ಭೀಕರ ಪ್ರಮಾಣದಿಂದಾಗಿ ಮನುಷ್ಯ ೧೫ ನಿಮಿಷಗಳೊಳಗೆ ಸಾವನ್ನಪ್ಪುವನು. ಆದರೂ, ಬಹುತೇಕ ಸಂದರ್ಭದಲ್ಲಿ ೩೦–೪೫ ನಿಮಿಷಗಳ ತನಕ ಬದುಕಿರುವ ಸಾಧ್ಯತೆ ಇರುತ್ತದೆ.

ಕಾಳಿಂಗ ಸರ್ಪ ಅತ್ಯಂತ ವಿಷದ ಹಾವು ಹಾಗೂ ಉದ್ದದ ಹಾವು
ಬಚ್ಚಲು ಮನೆಯಲ್ಲಿ ಅಡಗಿದ್ದ ಕಾಳಿಂಗವನ್ನು ರಕ್ಷಿಸಿದ ಉರಗ ತಜ್ಞ

ಕಾಳಿಂಗ ಸರ್ಪದ ವಿಷ ಮೂಲತಃ ನರಮಂಡಲದ ಮೇಲಿನ ಭೀಕರ ಪ್ರಭಾವದ್ದಾಗಿದೆ. ಇದು ನ್ಯೂರೋಟಾಕ್ಸಿಕ್ ಆಗಿ ಬಲಿ ಪ್ರಾಣಿಯ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತದೆ. ಹಾಗಾಗಿ ಕಚ್ಚಿಸಿಕೊಂಡ ಪ್ರಾಣಿಯ ಕೇಂದ್ರ ನರಮಂಡಲ ವ್ಯವಸ್ಥೆಯ ಮೇಲೆ ಪರಿಣಾಮವನ್ನು ಬೀರಿ ತೀವ್ರಗತಿಯ ನೋವು, ದೃಷ್ಟಿ ಮಂದ, ತಲೆತಿರುಗುವಿಕೆ, ಜಡತ್ವ ಮತ್ತು ಪಾರ್ಶ್ವ ವಾಯು ಗೆ ತುತ್ತಾಗುವ ಸಂಭವವಿದೆ.

ಈ ವಿಷವು ಹೃದಯ ರಕ್ತನಾಳವನ್ನು ಹಾಳುಮಾಡುವುದರಿಂದ, ಕಡಿತಕ್ಕೊಳಗಾದ ಪ್ರಾಣಿಯು ವಿಸ್ಮೃತಿ ಯ ಸ್ಥಿತಿ ತಲುಪುವುದು. ಹೀಗಾಗಿ ಅನೀರಿಕ್ಷಿತ ಉಸಿರಾಟದ ವೈಫಲ್ಯದಿಂದಾಗಿ ಸಾವು ಸಂಭವಿಸುವುದು.

ಕಾಳಿಂಗ ಸರ್ಪ ಕಡಿತದ ಚಿಕಿತ್ಸೆಗಾಗಿ, ವಿಶೇಷವಾಗಿ ತಯಾರಿಸಿದ ಎರಡು ವಿಧದ ವಿಷ ನಿರೋಧಕಗಳು ಸದ್ಯ ಲಭ್ಯವಿವೆ. ಒಂದನ್ನು ಥೈಲ್ಯಾಂಡ್‌ ರೆಡ್‌ ಕ್ರಾಸ್‌ ಸಂಸ್ಥೆಯು ಸಿದ್ದಪಡಿಸಿದರೆ, ಇನ್ನೊಂದನ್ನು ಭಾರತದ ಸೆಂಟ್ರಲ್‌ ರಿಸರ್ಚ್‌ ಇನ್‌ಸ್ಟಿಟ್ಯುಟ್‌ ತಯಾರಿಸುವುದು; ಆದರೂ ಇವುಗಳೆರಡು ಚಿಕ್ಕ ಪ್ರಮಾಣದಲ್ಲಿ ಉತ್ಪಾದನೆಯಾಗುವುದರಿಂದ ಲಭ್ಯತೆ ಕೂಡಾ ತುಂಬಾ ಕಡಿಮೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಪುರಾತನ ಕಟ್ಟಡಗಳಿಗೆ ಉಚಿತ ಎಂಟ್ರಿ

ವಿಶ್ವ ಪರಂಪರೆಯ ದಿನದ ಅಂಗವಾಗಿ ಪುರಾತನ ಕಟ್ಟಡಗಳಿಗೆ ಉಚಿತ ಎಂಟ್ರಿ

ಕಾವೇರಿ ನದಿ

ಕಾವೇರಿ ನದಿ ನೀರಿನ ವಿವಾದ