in

ಕಾವೇರಿ ನದಿ ನೀರಿನ ವಿವಾದ

ಕಾವೇರಿ ನದಿ
ಕಾವೇರಿ ನದಿ

ಕಾವೇರಿ ನದಿಯ ಹರಿವು ಬ್ರಿಟಿಷ್ ರಾಜ್ ಅಡಿಯಲ್ಲಿದ್ದ ಮದ್ರಾಸ್ ಪ್ರಾಂತ್ಯ ಮತ್ತು ಮೈಸೂರು ರಾಜ್ಯದ ನಡುವೆ ನೀರಿನ ಹಂಚಿಕೆ ಬಗೆಗೆ ಈ ಎರಡು ರಾಜ್ಯಗಳ ನಡುವೆ ನದಿ ನೀರು ಹಂಚುವ ಕಾವೇರಿ ವಿವಾದ 1892 ರಲ್ಲಿ ಆರಂಭವಾಯಿತು. ವರ್ಷ 1910 ರಲ್ಲಿ, ಎರಡೂ ಪ್ರಭುತ್ವಗಳು ಕಾವೇರಿ ನದಿಯ ಅಣೆಕಟ್ಟಿನ ನಿರ್ಮಾಣ ಯೋಜನೆಯನ್ನು ಆರಂಭಿಸಿದರು. ಪ್ರತಿ ರಾಜ್ಯಗಳು ನೀರಿನ ಎಷ್ಟು ಪಾಲು ಪಡೆಯುತ್ತಾರೆ ಎಂದು ನಿರ್ಧರಿಸಲು ಬ್ರಿಟಿಷ್ ಸವರು ಅಧ್ಯಕ್ಷತೆ ವಹಿಸಿದ್ದರು. 1924 ರಲ್ಲಿ, ಕೃಷ್ಣರಾಜಸಾಗರ (ಕನ್ನಂಬಾಡಿ) ಅಣೆಕಟ್ಟಿ ಕಟ್ಟಲು ಒಂದು ಒಪ್ಪಂದಕ್ಕೆ ಬರಲು ನಿಯಂತ್ರಣ ನಿಯಮಗಳನ್ನು ಸೂಚಿಸಿದರು. ಇದಕ್ಕೆ ಎರಡು ರಾಜ್ಯಗಳ ನಡುವೆ ಒಪ್ಪಿಗೆಯಾಗಿ ಸಹಿಮಾಡಿದರು.

ಟೈಮ್ಸ್ ಆಫ್ ಇಂಡಿಯಾ ಪ್ರಕಟವಾದ ವರದಿಯಲ್ಲಿ, ಹಿರಿಯ ವಕೀಲ ಎ.ಕೆ. ಗಂಗೂಲಿ “ಒಪ್ಪಂದದ 11 ನೇ ಷರತ್ತು ಪ್ರಕಾರ ಪರಸ್ಪರ ಅಂಗೀಕಾರವಾದಂತೆ ಐದು ದಶಕಗಳ ನಂತರ ಪರಸ್ಪರ ಒಪ್ಪಿಕೊಂಡು ಪುನಃ ಪರಿಶೀಲನೆ ಮಾಡಬಹುದು,’ ಎಂದು ತಿಳಿಸಿದರು. ಈ ಪರಿಷ್ಕರಣೆ ಷರತ್ತು ಕೃಷ್ಣರಾಜಸಾಗರ (ಕೆಆರ್ಎಸ್) ಹೊರತು ಪಡಿಸಿ ಬೇರೆ ಯೋಜನೆಗಳಿಗೆ ಮಾತ್ರ ಅನ್ವಯವಾಗುತ್ತಿತ್ತು.

ಒಪ್ಪಂದದ ಪ್ರಮುಖ ಅಂಶ (ಕೋರ್) ಕೆ ಆರ್ ಎಸ್ ನಿರ್ಮಾಣ ಮತ್ತು ಅದರ ಕಾರ್ಯಾಚರಣೆ ಮತ್ತು ಆಡಳಿತ ಪರಿಸ್ಥಿತಿಗಳು ಯಾವುದೇ ಷರುತ್ತಗಳ ವ್ಯಾಪ್ತಿಗೆ ಒಳಪಡುವುದಿಲ್ಲ.

ಕಾವೇರಿ ನದಿ ನೀರಿನ ವಿವಾದ
ಮೆಟ್ಟೂರ್ ಅಣೆಕಟ್ಟು

ಆದರಂತೆ 1924 ಒಪ್ಪಂದದ ಪ್ರಕಾರ ಮದ್ರಾಸ್ ಮತ್ತು ಮೈಸೂರು ಎರಡೂ ರಾಜ್ಯಗಳು ಕಾವೇರಿ ನದಿಯ ಹೆಚ್ಚುವರಿ ನೀರಿನ್ನು ಬಳಸಲು ಹಕ್ಕುಗಳನ್ನು ಪಡೆದವು. ಮದ್ರಾಸ್ ಸರ್ಕಾರ ಕೃಷ್ಣರಾಜಸಾಗರ ಅಣೆಕಟ್ಟಿನ ನಿರ್ಮಾಣಕ್ಕೆ ವಿರೋಧ ಮಾಡಿದ್ದರಿಂದ, ಅದಕ್ಕೆ ಒಪ್ಪಂದದಲ್ಲಿ ಮೆಟ್ಟೂರ್ ಅಣೆಕಟ್ಟು ನಿರ್ಮಿಸುವ ಸ್ವಾತಂತ್ರ್ಯವನ್ನು ನೀಡಿತ್ತು. ಆದಾಗ್ಯೂ ಒಪ್ಪಂದವು, ನದಿ ನೀರು ಬಳಸಿಕೊಂಡು ಮದ್ರಾಸ್ ಮತ್ತು ಮೈಸೂರು ರಾಜ್ಯಗಳು ಕಾವೇರಿ ನೀರು ಬಳಸುವ ನೀರಾವರಿ ಪ್ರದೇಶದ ವ್ಯಾಪ್ತಿಯನ್ನು ಹೆಚ್ಚಿಸದಂತೆ ನಿರ್ಬಂಧಗಳನ್ನು ಹಾಕಿತ್ತು.

ಕಾವೇರಿ ನದಿಯು ಕರ್ನಾಟಕ ಮತ್ತು ತಮಿಳುನಾಡಿನಾದ್ಯಂತ 765 ಕಿಮೀನಷ್ಟು ಉದ್ದದ ಹರಿವು ಹೊಂದಿದೆ. ಇದು ಕರ್ನಾಟಕದಲ್ಲಿ ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಹುಟ್ಟಿ. ಇದು ಪ್ರಮುಖವಾಗಿ ಕರ್ನಾಟಕ ಮತ್ತು ತಮಿಳುನಾಡು ಮೂಲಕ ಹರಿಯುತ್ತದೆ, ಅದರ ಜಲಾನಯನ ಬಹಳಷ್ಟು ಪ್ರದೇಶ ಕೇರಳ ಮತ್ತು ಪುದುಚೆರಿ ಕಾರೈಕಾಲ್ ಪ್ರದೇಶವನ್ನು ಆವರಿಸಿಕೊಂಡಿದೆ.

ಭಾರತದ ಸ್ವಾತಂತ್ರ್ಯದ ನಂತರ ರಾಜ್ಯಗಳ ಪುನಃ ಸಂಘಟನೆಯಾದಾಗ ನಿಜವಾದ ಸಮಸ್ಯೆ ಪ್ರಾರಂಭವಾಯಿತು. ಇದಕ್ಕೂ ಮುನ್ನ, ಹೆಚ್ಚಿನ ವಿಷಯಗಳನ್ನು ಪಂಚಾಯ್ತಿ ಮತ್ತು ಒಪ್ಪಂದಗಳು ಮೂಲಕ ಇತ್ಯರ್ಥಗೊಳಿಸಲಾಯಿತು. 20ನೇ ಶತಮಾನದಲ್ಲಿ, ತಮಿಳುನಾಡು ಸರ್ಕಾರ ಕರ್ನಾಟಕದಲ್ಲಿ ನದಿಯ ಅಣೆಕಟ್ಟಿನ ನಿರ್ಮಾಣಗಳನ್ನು ವಿರೋಧಿಸಿತು, ಪ್ರತಿಯಾಗಿ ಕರ್ನಾಟಕ ರಾಜ್ಯ ತಮಿಳುನಾಡಿಗೆ ನೀರು ಸರಬರಾಜು ನಿಲ್ಲಿಸಲು (ಕಡಿಮೆ ಮಾಡಲು) ಬಯಸಿದ್ದರು. ಕರ್ನಾಟಕ ಹಿಂದಿನ 50 ವರ್ಷಗಳ ಅವಧಿ 1974 ರಲ್ಲಿ ಮುಗಿದಿದೆ ಮತ್ತು ನದಿಯು ಕರ್ನಾಟಕದಲ್ಲಿ ಹುಟ್ಟುವುದರಿಂದ ಅದನ್ನು ಪರಿಗಣಿಸಿ, ತಮಗೆ ನದಿಯ ಮೇಲೆ ಹೆಚ್ಚಿನ ಹಕ್ಕು ಇದೆ ಬಂದಾಗ 1924 ರ ಬ್ರಿಟಿಷ್ ಸಾಮ್ರಾಜ್ಯ ಮತ್ತು ಮೈಸೂರು ಮಹಾರಾಜರ ನಡುವಿನ ಒಪ್ಪಂದಕ್ಕೆ ತಾವು ಬದ್ಧರಲ್ಲ ಎಂದು ವಾದಿಸಿದರು. ಅವರು ಹಿಂದಿನ ಒಪ್ಪಂದದ ಮಿತಿಯಲ್ಲೇ 1974ರ ನಂತರವೂ ಇರಬೇಕೆಂದೇನೂ ಇಲ್ಲ ಎಂದು ವಾದಿಸಿದರು.

1924 ರ ನಂತರ ತಮಿಳುನಾಡು ನದಿಯ ಸುತ್ತ ಮುತ್ತ ಲಕ್ಷಾಂತರ ಎಕರೆ ಕೃಷಿ ಭೂಮಿ ಅಭಿವೃದ್ಧಿ ಪಡಿಸಿದ್ದು, ನದಿಯ ನೀರಿನ ಮೇಲೆ ತುಂಬಾ ಅವಲಂಬಿಸಿದ್ದರು. ಅವರು ನೀರಿನ ವಿತರಣೆ ಬದಲಾವಣೆ ಆದರೆ ರೈತರ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ವಾಗುವುದು ಎಂದು ವಾದಿಸಿದರು. 1972 ರಲ್ಲಿ, ಕೇಂದ್ರಸರ್ಕಾರ ಕೇರಳ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ – ನದಿ ಜಲಾನಯನ ಪ್ರದೇಶದ ಅಂಕಿಅಂಶಗಳನ್ನು ಸಂಗ್ರಹಿಸಲು ಒಂದು ಸಮಿತಿಯನ್ನು ನೇಮಿಸುವುದಕ್ಕೆ ಒಪ್ಪಿಕೊಂಡಿತು.

ಕಾವೇರಿ ನದಿ ನೀರಿನ ವಿವಾದ
ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಕಾವೇರಿ ನದಿ ಹುಟ್ಟು

ನ್ಯಾಯಮೂರ್ತಿ ಗ್ರಿಫ್ಫಿನ್ ಅವರು ನೀಡಿದ್ದ ಆದೇಶ ಕರ್ನಾಟಕಕ್ಕೆ ಅನುಕೂಲ ಆಗಿತ್ತು. ಆದರೆ, ಮದ್ರಾಸ್ ಸರ್ಕಾರದ ಒತ್ತಾಯದಿಂದಾಗಿ, ಬ್ರಿಟಿಷ್ ಸರ್ಕಾರ ಅದನ್ನು ಅಸಿಂಧುಗೊಳಿಸಿತು. ಆ ಸಂದರ್ಭದಲ್ಲಿ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ಕಾವೇರಿ ನೀರಿನ ಮೇಲೆ ತಮಿಳುನಾಡಿಗೆ ಪರಂಪರಾನುಗತ ಹಕ್ಕು ಇರಲಿಲ್ಲ. ಪರಂಪರಾನುಗತ ಹಕ್ಕು ಇಲ್ಲದಿರುವಾಗ ತಮಿಳುನಾಡು ರಾಜ್ಯವು, ತನ್ನಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚಲು ಬಿಡಬಾರದಿತ್ತು. ತಮಿಳುನಾಡು ಒಪ್ಪಂದ ಮೀರಿ, ಕೃಷಿ ಜಮೀನು ವಿಸ್ತರಿಸಿದೆ ಎಂದು ಕಾವೇರಿ ನದಿ ನ್ಯಾಯಮಂಡಳಿ ಕೂಡ ಹೇಳಿದೆ.

ಸತ್ಯಶೋಧನೆಯ ಸಮಿತಿಯು ತಮಿಳುನಾಡು 566 ಟಿ.ಎಮ್.ಸಿ ಅಡಿ (ಸಾವಿರ ಮಿಲಿ ಘನ ಅಡಿಗಳು) ಮತ್ತು ಕರ್ನಾಟಕ 177 ಟಿ.ಎಮ್.ಸಿ ಅಡಿ ಬಳಸುತ್ತದೆ ಎಂಬುದನ್ನು ಕಂಡುಕೊಂಡರು. 125 ಟಿ.ಎಮ್.ಸಿ ಅಡಿ ಹೆಚ್ಚು ಉಳಿಯುತ್ತದೆ ಎಂದು ಲೆಕ್ಕ ಹಾಕಿದರು. ಎಂದರೆ ಒಟ್ಟು 868 ಟಿ.ಎಮ್.ಸಿ ಅಡಿ ಲಭ್ಯವೆಂದು ತೀರ್ಮಾನಿಸಿದ್ದರು (ಇದೂ ತಪ್ಪು ಲೆಕ್ಕ)

1976 ರಲ್ಲಿ, ಪ್ರತಿಯೊಂದು ರಾಜ್ಯವೂ ತಮ್ಮ ಹಿಂದಿನ ಬಳಕೆಯ ಪ್ರಕಾರ ನೀರನ್ನು ಬಳಸಿಕೊಂಡು ಮುಂದುವರಿಯತಕ್ಕದ್ದೆಂಬ ತೀಮಾನಕ್ಕೆ ಬಂದವು. ಈಗ ಹೆಚ್ಚುವರಿ 125 ಟಿ.ಎಮ್.ಸಿ.ಅಡಿ ನೀರು ಉಳಿದಿದ್ದು ಅದನ್ನು ಮತ್ತೆ ಹಂಚಿಕೆ ಮಾಡಬೇಕು ಎಂದು ತೀರ್ಮಾನಿಸಲಾಯಿತು.

ಕರ್ನಾಟಕದ ವಾದ

ಕರ್ನಾಟಕವು ನದಿ ನೀರು ಹಂಚಿಕೆಯು ಅಂತರರಾಷ್ಟ್ರೀಯ ನಿಯಮಗಳಂತೆ, ಎಂದರೆ ಸಮಾನ ಭಾಗಗಳ ಪ್ರಕಾರ ನೀರು ಹಂಚಬೇಕು ಎಂದು ವಾದಿಸಿದರು. ಅತೀವವಾಗಿ ಕರ್ನಾಟಕವು 94 ಪ್ರತಿಶತದಷ್ಟು ನೀರನ್ನು ರಾಜ್ಯಗಳ ನಡುವೆ ಸಮಾನವಾಗಿ ಹಂಚಬೇಕು ಮತ್ತು ಆ ಉಳಿದ 6% ನಷ್ಟು ನೀರನ್ನು ಕೇರಳ ಮತ್ತು ಪುದುಚೇರಿಗಳಿಗೆ ವಿತರಣೆ ಮಾಡಬೇಕು ಎಂದು ಕರ್ನಾಟಕವು ಸೂಚಿಸಿತು. ಆದಾಗ್ಯೂ ತಮಿಳುನಾಡು 1924 ಮೂಲ ಒಪ್ಪಂದದ ಪ್ರಕಾರ, ವಿತರಣೆ ನಿಯಮಕ್ಕೆ ಅಂಟಿಕೊಳ್ಳ ಬಯಸಿದರು.

ನ್ಯಾಯಾಧಿಕರಣ ನೇಮಕ

ನದಿ ವಿವಾದ ಅತ್ಯಂತ ತೀವ್ರ ಪ್ರತಿಭಟನೆ ಮತ್ತು ಧರಣಿಗಳುನ್ನು ಕಂಡಿತು. 1986 ರಲ್ಲಿ, ತಮಿಳುನಾಡು ತಂಜಾವೂರು ರೈತರ ಸಂಘ ಸುಪ್ರೀಂ ಕೋರ್ಟ್’ಗೆ (ಎಸ್ಸಿ) ತೆರಳಿದರು ಮತ್ತು ಕಾವೇರಿ ನೀರು ವಿವಾದಕ್ಕೆ ಒಂದು ನ್ಯಾಯಮಂಡಳಿ ನೇಮಿಸಬೇಕೆಂದು ಆಗ್ರಹಿಸಿದರು.

1990 ರಲ್ಲಿ,(ಎಸ್ಸಿ) ಸುಪ್ರೀಂ ಕೋರ್ಟ್ ಎರಡು ರಾಜ್ಯಗಳ ಅರ್ಜಿ/ವಾದಗಳನ್ನು ಕೇಳಿ, ಸಮಾಲೋಚನೆಯ ಪೂರ್ವಕ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಹೇಳಿತು. ಆದರೆ ರಾಜ್ಯಗಳು ತಮ್ಮೊಳಗೆ ಸಂಧಾನಕ್ಕೆ ಬರಲು ಸಾಧ್ಯವಾಗಲಿಲ್ಲ. ಆದ್ದರಿಂದ ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ನೀರು ವಿತರಿಸಲು ನ್ಯಾಯಾಧಿಕರಣ ರಚಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು. ಅದಕ್ಕೆ ಅನುಗಣವಾಗಿ ಕೇಂದ್ರ ಒಂದು ಟ್ರಿಬ್ಯೂನಲ್ ನೇಮಿಸಿತು.

ಕಾವೇರಿ ನದಿ ನೀರಿನ ವಿವಾದ
ಮೇಕೆದಾಟು

ಕಾವೇರಿ ನ್ಯಾಯಮಂಡಳಿಯ ಅಂತಿಮ ಅನುದಾನದಲ್ಲಿ ತಮಿಳುನಾಡಿನ ಕೃಷಿ ಪ್ರದೇಶವನ್ನು ಸುಮಾರು 28 ಲಕ್ಷ ಎಕರೆಯಿಂದ 24 ಲಕ್ಷ ಎಕರೆಗೆ ತಗ್ಗಿಸಲಾಯಿತು. ಅದನ್ನು ಕರ್ನಾಟಕಕ್ಕೆ 1991 ರ ಮಧ್ಯಂತರ ಅನುದಾನಲ್ಲಿ ಸುಮಾರು 11 ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ಆಗಿತ್ತು. ಅಂತಿಮ ಅನುದಾನಲ್ಲಿ ಸುಮಾರು 21 ಲಕ್ಷ ಎಕರೆಗೆ ನೀರಿನ ಕೊಡಿಗೆ ಸಿಕ್ಕಿದೆ. ಅಲ್ಲಿ ಈಗ ಕಬ್ಬಿನ ಬೆಳೆ ಪ್ರದೇಶ ಕಳೆದ ಐದು ವರ್ಷಗಳಲ್ಲಿ ಪ್ರದೇಶದಲ್ಲಿ ಕರ್ನಾಟಕದಲ್ಲಿ ಐದರಷ್ಟು ಹೆಚ್ಚದೆ. 1ಮೊದಲು 91000 ಹೆಕ್ಟೇರ್ (227500ಎಕರೆ) ಇದ್ದುದು. 1971 ರಲ್ಲಿ 410000 ಹೆಕ್ಟೇರಿಗೆ (1025000ಎಕರೆ) ಮತ್ತು 2015 ರಲ್ಲಿ 620000 ಹೆಕ್ಟೇರಿಗೆ (127100000 ಎಕರೆಗೆ) ಹೆಚ್ಚಾಯಿತು.

ಭಾರತ 3.287.263 ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಿದ್ದು, 1200 ಮಿಮೀ ವಾರ್ಷಿಕ ಮಳೆ ಹೊಂದಿದೆ.

ಕರ್ನಾಟಕ ಸುಮಾರು 6.4ಕೋಟಿ ಜನಸಂಖ್ಯೆಹೊಂದಿದ್ದು 1,91,791 ಚ.ಕಿ.ಮೀ. ಪ್ರದೇಶದಲ್ಲಿ 1152 ಮಿಮೀ (ಅಂದಾಜು) ಸರಾಸರಿ ಮಳೆ ಹೊಂದಿದೆ, ಉಡುಪಿ ಜಿಲ್ಲೆಯ 4180 ಮಿಮೀ ಮಳೆ ಗರಿಷ್ಠ ಹೊಂದಿದ್ದರ, ಚಿತ್ರದುರ್ಗ ಜಿಲ್ಲೆಯ 570 ಮಿಮೀ ಕನಿಷ್ಠ ಮಳೆ ಹೊಂದಿದೆ. ಕರಾವಳಿ ಪ್ರದೇಶದಲ್ಲಿ ಅತಿ (ಸಮುದ್ರ ಆದ್ದರಿಂದ ಹೆಚ್ಚು ನೀರು ಅರೇಬಿಯನ್ ಸಮುಗ್ರ ಸೇರುವುದು) ಹೊಂದಿದೆ. ಉತ್ತರ ಕರ್ನಾಟಕದ ಒಳನಾಡಿನಲ್ಲಿ ಅತಿ ಕಡಿಮೆ ಮಳೆ ಹೊಂದಿದೆ.,

7.7 ಕೋಟಿ ಜನರ ಜನಸಂಖ್ಯೆಯನ್ನು ಹೊಂದಿದ, 130060 ಚ.ಕಿಮೀ. ವಿಸ್ತೀರ್ಣವನ್ನು ಹೊಂದಿರುವ ತಮಿಳುನಾಡಿನ ಮೇಲೆ, ವರ್ಷದಲ್ಲಿ ಸುಮಾರು 958 ಮಿಮೀ ಸರಾಸರಿ ಮಳೆ ಸುಮಾರು ನೀಲಗಿರಿ ಜಿಲ್ಲೆಯ 1695 ಮಿಮೀ ಮಳೆ ಪಡೆದರೆ, ತೂತ್ತುಕುಡಿ ಜಿಲ್ಲೆಯು 655,7 ಮಿಮೀ ಗರಿಷ್ಠ ಮಳೆ ಹೊಂದಿದೆ.

1970 ರಲ್ಲಿ ಕಾವೇರಿ ಫ್ಯಾಕ್ಟ್ ಫೈಂಡಿಂಗ್ (ಪರಿಶೀಲನಾ) ಸಮಿತಿಯು ನೀರು ಹಂಚಿಕೆ ಗಾಗಿ ಮೂಲ ಸತ್ಯ ವನ್ನು ಅಗೆದು ತೆಗೆದು ಐತಿಹಾಸಿಕ 1924 ಒಪ್ಪಂದಕ್ಕೆ (ಹಿಂದಿನಿಂದ ನಂತರ 50 ವರ್ಷಗಳ ಅವಧಿ ನಿರ್ಧರಿಸಲಾಗಿದೆ) ಮುಕ್ತಾಯ ಹೇಳಿತು. ಈ ವೇಳೆಗೆ ತಮಿಳುನಾಡಿನ ನೀರಾವರಿ ಭೂಮಿ 1.440.000 ಎಕರೆ ಯಿಂದ 2.580.000 ಎಕರೆ ಪ್ರದೇಶಕ್ಕೆ ವಿಸ್ತರಿಸಿತ್ತು. ಅದೇ ಕರ್ನಾಟಕದ ನೀರಾವರಿ ಪ್ರದೇಶದ 680.000 ಎಕರೆಗೆ ನಿಂತಿತ್ತು (ಏರಿತು)೪.

ನ್ಯಾಯಾಧಿಕರಣದ ತೀರ್ಪು

ಅವರು, 1980 ರಿಂದ 1990 ರವರೆಗಿನ 10 ವರ್ಷಗಳಲ್ಲಿ ತಮಿಳುನಾಡಿಗೆ ಸರಾಸರಿ ಒಳಹರಿವು ಲೆಕ್ಕಾಚಾರ ನಂತರ ಪ್ರತಿ ವರ್ಷ 205 ಟಿ.ಎಮ್.ಸಿ.ಅಡಿ ನೀರನ್ನು ಖಾತ್ರಿಯಾಗಿ ತಮಿಳುನಾಡು ತಲುಪಲು ಕರ್ನಾಟಕ ಬಿಡಬೇಕೆಂದು ನಿರ್ದೇಶನ – 1991 ರಲ್ಲಿ, ಟ್ರಿಬ್ಯೂನಲ್ ಅದರ ಮಧ್ಯಂತರ(?) ತೀರ್ಮಾನ ನೀಡಿತು. ಈ ನಡುವೆ.. ಅವರು ಅಸ್ತಿತ್ವದಲ್ಲಿರುವ ನೀರಾವರಿ ಭೂಪ್ರದೇಶವನ್ನು ಹೆಚ್ಚಿಸದಿರಲು ಕರ್ನಾಟಕಕ್ಕೆ ನಿರ್ದೇಶಿಸಿದರು.

ಆದಾಗ್ಯೂ ಈ ನಿರ್ಧಾರವನ್ನು ಎರಡೂ ರಾಜ್ಯಗಳ ಜನರು ಸ್ವೀಕರಿಸಲಿಲ್ಲ. ಹಾಗೂ ಗಲಭೆಗಳು ಏಕಕಾಲದಲ್ಲಿ ಭುಗಿಲೆದ್ದು ಕರ್ನಾಟಕ ಸರಕಾರ ಟ್ರಿಬ್ಯೂನಲ್ ಕೊಡಿಗೆಯನ್ನು ತಿರಸ್ಕರಿಸಿತು. ಮತ್ತು ಅದು ಅಕ್ರಮವೆಂದು ಸುಗ್ರೀವಾಜ್ಞೆ ಹೊರಡಿಸಿತು. ಆದರೆ ಸುಪ್ರೀಂ ಕೋರ್ಟ್ ಸುಗ್ರೀವಾಜ್ಞೆಗಯನ್ನು ತಳ್ಳಿಹಾಕಿತು, ಮತ್ತು ಟ್ರಿಬ್ಯೂನಲ್ ಕೊಡಿಗೆ ಸಿಂಧುವಾದದ್ದು ಎಂದು ಹೇಳಿತು. ಕರ್ನಾಟಕಕ್ಕೆ ಸಹಾಯ ಮಾಡಲು ನಿರಾಕರಿಸಿತು. ಇದರ ನಂತರ, ಮಧ್ಯಂತರ ಅವಾರ್ಡ/ತೀರ್ಪು ಭಾರತದ ಸರ್ಕಾರದ ಪತ್ರದಲ್ಲಿ ಪ್ರಕಟವಾಯಿತು.

ಕಾವೇರಿ ಟ್ರಿಬ್ಯೂನಲ್ (1991 ರಲ್ಲಿ) ಅವಾರ್ಡ್ ಪ್ರಕಾರ ತಮಿಳುನಾಡಿಗೆ 487 ಟಿಎಂಸಿ ಅಡಿಯ ಬದಲಾಗಿ 419 ಟಿಎಂಸಿ ಅಡಿಗೆ ರಾಜ್ಯದ ಅವಶ್ಯಕತೆಗೆ ಬದ್ಧವಾಗಿ ನೀಡಿತು.

ಕಾವೇರಿ ನದಿ ನೀರಿನ ವಿವಾದ
ಅನೇಕ ಹೋರಾಟಗಳು ನಷ್ಟಗಳು ಅನುಭವಿಸಿದೆವು

ಅಂತಿಮ ತೀರ್ಪು

ಮುಂದಿನ ಕೆಲವು ವರ್ಷಗಳಲ್ಲಿ ರಾಜ್ಯಗಳು ಸಾಕಷ್ಟು ಮಳೆ ಕಂಡಿತು. ಹಾಗಾಗಿ ನೀರಿಗಾಗಿ ಕೋಲಾಹಲ ಇರಲಿಲ್ಲ.. 1993 ರಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಚೆನೈ ರಲ್ಲಿ ಎಂಜಿಆರ್ ಸ್ಮಾರಕದ ಎದುರಿನಲ್ಲಿ ಇದ್ದಕ್ಕಿದ್ದಂತೆ ಉಪವಾಸ ಕೈಗೊಂಡರು. ಮಧ್ಯಂತರ ಆದೇಶಕ್ಕೆ ಒಳಪಟ್ಟು ತಮಿಳುನಾಡಿನ ಭಾಗದ ನೀರನ್ನು ಬಿಡಬೇಕೆಂದು ಅವರು ಒತ್ತಾಯಿಸಿದರು.

1995 ರಲ್ಲಿ, ಕರ್ನಾಟಕದಲ್ಲಿ ಅತ್ಯಂತ ಕಡಿಮೆ ಮಳೆಯಾಗಿತ್ತು. ಆದ್ದರಿಂದ ಮಧ್ಯಂತರ ಆದೇಶ ಪಾಲಿಸಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ, ತಮಿಳುನಾಡು, 30 ಟಿ.ಎಂ.ಸಿ ಅಡಿ ನೀರಿನ ಬಿಡುಗಡೆಗೆ ಬೇಡಿಕೆಇಟ್ಟು ಸುಪ್ರೀಮ್ ಕೋರ್ಟು ಹತ್ತಿತು. ಸುಪ್ರೀಮ್ ಕೋರ್ಟು ಮತ್ತು ಕರ್ನಾಟಕ ಈ ಬೇಡಿಕೆಗಲಿಗೆ ಮನ್ನಣೆ ನೀಡಲಿಲ್ಲ. ಬಹಳಷ್ಟು ಎಳತಾಟದ ನಂತರ, ಸುಪ್ರೀಮ್ ಕೋರ್ಟು ಈ ವಿಷಯದಲ್ಲಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರಿಗೆ ಮಧ್ಯಸ್ಥಿಕೆ ವಹಿಸಲು ಕೇಳಿತು. ರಾವ್ ಎರಡು ರಾಜ್ಯಗಳ ಮುಖ್ಯಸ್ಥರು ಭೇಟಿಯಾದರು ಮತ್ತು ಎರಡು ರಾಜ್ಯಗಳು ಅವರ ಪರಿಹಾರದ ಶಿಫಾರಸನ್ನು ಅನುಸರಿಸಿದರು.

1998 ರಲ್ಲಿ ಪ್ರಧಾನಿ ಅಧ್ಯಕ್ಷರಾಗಿ ಹಾಗೂ ನಾಲ್ಕು ರಾಜ್ಯಗಳ ಮುಖ್ಯ ಮಂತ್ರಿಗಳ ಸದಸ್ಯರನ್ನುಳ್ಳ ಕಾವೇರಿ ನದಿ ಪ್ರಾಧಿಕಾರವನ್ನು ರಚಿಸಲಾಯಿತು.

2007 ರಲ್ಲಿ, 16 ವರ್ಷಗಳ ನಂತರ, ಕಾವೇರಿ ನ್ಯಾಯಾಧೀಕರಣ ತಮ್ಮ ಅಂತಿಮ ತೀರ್ಪು ನೀಡಿತು. ಟ್ರಿಬ್ಯೂನಲ್, ಮದ್ರಾಸ್ ಮತ್ತು ಮೈಸೂರು ಸರ್ಕಾರದ ನಡುವೆ 1892 ಮತ್ತು 1924 ರ ಒಪ್ಪಂದಗಳನ್ನು ಮಾನ್ಯವೆಂದು ಪರಿಗಣಿಸಿತು. ಕರ್ನಾಟಕ ಟ್ರಿಬ್ಯೂನಲ್ ತೀರ್ಪನ್ನು ಪ್ರತಿಭಟಿಸಿತು. ಮತ್ತು ರಾಜ್ಯಾದ್ಯಂತ ಬಂದ್ ಆಚರಿಸಲಾಯಿತು.

 ತಮಿಳುನಾಡು ವಾದ

‘ಕರ್ನಾಟಕದಲ್ಲಿ ಶೇ 47ರಷ್ಟು ಕಡಿಮೆ ಮಳೆ ಸುರಿದಿದ್ದನ್ನು ಪರಿಗಣಿಸಿದರೂ ನಮಗೆ ಇದುವರೆಗೆ 75 ಟಿಎಂಸಿ ಅಡಿ ನೀರನ್ನು ಹರಿಸಬೇಕಿತ್ತು. ಆದರೆ, ತನ್ನ ರೈತರ ಬೆಳೆಗೆ 24 ಟಿಎಂಸಿ ಅಡಿ ನೀರನ್ನು ಹರಿಸಿದ್ದಾಗಿ ಕರ್ನಾಟಕವೇ ಮೇಲುಸ್ತುವಾರಿ ಸಮಿತಿಗೆ ದಾಖಲೆ ಸಲ್ಲಿಸಿದೆ. ಪ್ರಸಕ್ತ ಸಾಲಿನಲ್ಲಿ ಈಗಾಗಲೇ ಒಟ್ಟು 80 ಟಿಎಂಸಿ ಅಡಿ ನೀರನ್ನು ಪಡೆದಿದ್ದರೂ ಈಗ ಕುಡಿಯಲು ನೀರಿಲ್ಲ ಎಂಬ ವಾದ ಮಂಡಿಸುತ್ತಿದೆ ಇದು ಎಷ್ಟು ಸರಿ’ ಎಂದು ಪ್ರಶ್ನಿಸಿದ ತಮಿಳುನಾಡು ಪರ ವಕೀಲ ಶೇಖರ್‌ ನಾಫಡೆ, ‘ಮದ್ಯಂತರ ಆದೇಶ ನೀಡುವ ಮೂಲಕ ನಮಗೆ ಮತ್ತಷ್ಟು ನೀರು ಬಿಡಲು ಸೂಚಿಸಿ’ ಎಂದು ಕೋರಿದರು.

ಕರ್ನಾಟಕದ ವಾದ

‘ಈಶಾನ್ಯ ಮಳೆಯ ಮಾರುತಗಳು ತಮಿಳುನಾಡಿನಲ್ಲಿ ಮಳೆ ಸುರಿಸುವ ಸಾಧ್ಯತೆ ಇದೆ. ಕರ್ನಾಟಕದಲ್ಲಿನ ಕಾವೇರಿ ಕಣಿವೆ ಪ್ರದೇಶದಲ್ಲಿ ಅಕ್ಟೋಬರ್‌ ನಂತರ ಮಳೆ ಸುರಿಯುವ ಭರವಸೆ ಇಲ್ಲ. ಈಗ ಮತ್ತೆ ನೀರು ಹರಿಸಿದರೆ, ಅದು ವಾಪಸ್‌ ಬರುವುದಿಲ್ಲ’ ಎಂದು ನಾರಿಮನ್‌ ಅವರು ನೀರಿನ ಅಗತ್ಯದ ಕುರಿತು ವಿವರ ನೀಡಿದರು. ‘ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ಸೆ. 19ರ ಮಾಹಿತಿಯಂತೆ 50 ಟಿಎಂಸಿಗೂ ಅಧಿಕ ನೀರಿನ ಸಂಗ್ರಹವಿದೆ. ನಾವು ಕುಡಿಯುವುದಕ್ಕೆ ನೀರಿಲ್ಲ ಎಂಬ ಚಿಂತೆಯಲ್ಲಿದ್ದೇವೆ. ಆದರೆ, ತಮಿಳುನಾಡು ತನ್ನ ಬೆಳೆಗಳಿಗೆ ನೀರು ಕೇಳುತ್ತಿದೆ. ಅವರ ಬೆಳೆಗಳಿಗಾಗಿ ನಾವು ಕುಡಿಯುವ ನೀರನ್ನು ತ್ಯಾಗ ಮಾಡಬೇಕಾಗಿದೆ’ ಎಂದು ನೊಂದು ನುಡಿದ ಅವರು, ‘ಈಗಿನ ವಿಚಾರಣೆಯ ನಂತರ ನೀವು ಯಾವುದೇ ಆದೇಶ ನೀಡಿದರೂ ಅದನ್ನು ನಾವು ಒಪ್ಪಲಾಗುವುದಿಲ್ಲ. ನಿಮ್ಮ ಆದೇಶವನ್ನು ನಾನು ವಿರೋಧಿಸುವುದಿಲ್ಲ. ಆದರೆ, ನೀವು ನೀಡಲು ಹೊರಟಿರುವ ಆದೇಶ ತಪ್ಪು ಎಂಬುದೇ ನನ್ನ ಭಾವನೆ’ ಎಂದು ಕಠೋರವಾಗಿಯೇ ತಿಳಿಸಿದರು.

ನೀರು ಬಿಡಲು ಆದೇಶಿಸಿರುವುದಕ್ಕೆ ಕರ್ನಾಟಕದಲ್ಲಿ ನಡೆದ ಪ್ರತಿಭಟನೆ ಮತ್ತು ಹಿಂಸಾಚಾರ ಘಟನೆಗಳನ್ನು ಮತ್ತೆ ನೆನಪಿಸಿದ ನ್ಯಾಯಮೂರ್ತಿಗಳು, ಎರಡೂ ಮುಕ್ಕಾಲು ಗಂಟೆ ನಡೆದ ವಿಚಾರಣೆಯನ್ನು ಸೆ. 27ಕ್ಕೆ ಮುಂದೂಡಿದರಲ್ಲದೆ, ಅಲ್ಲಿಯತನಕ ನಿತ್ಯ 6,000 ಕ್ಯುಸೆಕ್‌ ನೀರು ಹರಿಸಬೇಕು ಎಂದು ಆದೇಶಿಸಿದರು. ದೇಶದ ನಂತರವೂ ಕರ್ನಾಟಕದ ಪರ ವಕೀಲರು ಎಷ್ಟೇ ಮನವರಿಕೆ ಮಾಡಿದರೂ ಅವರು ಕಿವಿಗೆ ಹಾಕಿಕೊಳ್ಳಲಿಲ್ಲ.

‘ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ಸೆ. 19ರ ಮಾಹಿತಿಯಂತೆ 50 ಟಿಎಂಸಿಗೂ ಅಧಿಕ ನೀರಿನ ಸಂಗ್ರಹವಿದೆ. ನಾವು ಕುಡಿಯುವುದಕ್ಕೆ ನೀರಿಲ್ಲ ಎಂಬ ಚಿಂತೆಯಲ್ಲಿದ್ದೇವೆ. ಆದರೆ, ತಮಿಳುನಾಡು ತನ್ನ ಬೆಳೆಗಳಿಗೆ ನೀರು ಕೇಳುತ್ತಿದೆ. ಅವರ ಬೆಳೆಗಳಿಗಾಗಿ ನಾವು ಕುಡಿಯುವ ನೀರನ್ನು ತ್ಯಾಗ ಮಾಡಬೇಕಾಗಿದೆ’ ಎಂದು ನೊಂದು ನುಡಿದ ಅವರು, ‘ಈಗಿನ ವಿಚಾರಣೆಯ ನಂತರ ನೀವು ಯಾವುದೇ ಆದೇಶ ನೀಡಿದರೂ ಅದನ್ನು ನಾವು ಒಪ್ಪಲಾಗುವುದಿಲ್ಲ.

ತೀರ್ಪಿನ ಪರಿಣಾಮ

*ಹಿರಿಯ ವಕೀಲ ಅಶೋಕ ಹಾರನಹಳ್ಳಿ ಅಭಿಪ್ರಾಯ

*ಕಾವೇರಿ ನಿರ್ವಹಣಾ ಮಂಡಳಿ ರಚನೆ

*ನಾರಿಮನ್ ನೀರು ಬಿಡಲು ವಿರೋಧ

*ನೀರಿನ ಲಭ್ಯತೆ ಮತ್ತು ಕುಡಿವ ನೀರಿನ ಅಗತ್ಯ

*ಬೆಂಗಳೂರಿನ ಪರಿಸ್ಥಿತಿ

*ನಗರಗಳ ನೀರಿನ ಬೇಡಿಕೆ

*ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ

*ನೀರು ಬಿಡಿ-ಸು.ಕೋರ್ಟು

*ಕೇಂದ್ರ ಸರ್ಕಾರದ ಮಧ್ಯಸ್ಥಿಕೆ

*ಪುನಹ ನೀರು ಬಿಡಲು ಆದೇಶ

*ತ್ವರಿತ ಕ್ರಮಕ್ಕೆ ಸೂಚನೆ

*ಸರ್ವಪಕ್ಷ ಸಭೆ ನಿರ್ಣಯ

*ಕಾವೇರಿ ನಿರ್ವಹಣಾ ಮಂಡಳಿ

*ನೀರು ಬಿಡುವುದು ಒಳ್ಳೆಯದು

*ತಮಿಳುನಾಡಿಗೆ ಹರಿದ ಕಾವೇರಿ ನೀರು

*ಸುಪ್ರೀಂ ತೀರ್ಮಾನ

*ಕೇಂದ್ರದ ಅಧ್ಯಯನ ತಂಡ

*ವರದಿ ಸಾರಾಂಶ

*ಕರ್ನಾಟಕದಲ್ಲಿ ಹೆಚ್ಚು ನೀರು

*ಸರ್ವೋಚ್ಚ ನ್ಯಾಯಾಲಯ ಆದೇಶ

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕಾಳಿಂಗ ಸರ್ಪ

ಕಾಳಿಂಗ ಸರ್ಪ ಅತ್ಯಂತ ವಿಷದ ಹಾವು ಹಾಗೂ ಉದ್ದದ ಹಾವು

ಜಾನ್ಸಿ ರಾಣಿ ಲಕ್ಷ್ಮಿ ಬಾಯಿ

ಸ್ವಾತಂತ್ರ್ಯ ಸಂಗ್ರಾಮದ ವೀರ ಹೋರಾಟಗಾರ್ತಿ, ಜಾನ್ಸಿ ರಾಣಿ ಲಕ್ಷ್ಮಿ ಬಾಯಿ ಜನ್ಮ ದಿನ