ಚಿಟ್ಟು ಮರಕುಟುಕವು ಮರಕುಟುಕ ಪಕ್ಷಿಗಳಲ್ಲಿನ ಒಂದು ವರ್ಗವಾಗಿದೆ. ಈ ಪ್ರಕಾರದ ಪಕ್ಷಿಗಳು ಎದ್ದುಕಾಣುವಂತೆ ಬಿಳಿ ಮತ್ತು ಕಪ್ಪು ಬಣ್ಣಗಳಿಂದ ಕೂಡಿದ ಹೊರಮೈಯನ್ನು ಹೊಂದಿರುತ್ತವೆ. ಇವುಗಳ ವಿಶಿಷ್ಟವಾದ ಮೋಟುಮೊಟಾದ ದೇಹಾಕೃತಿ ಮತ್ತು ಬೆಣೆಯಾಕಾರದ ತಲೆಯು ಅವುಗಳನ್ನು ಗುರುತಿಸಲು ಸಹಾಯ ಮಾಡುತ್ತವೆ. ಅವುಗಳು ತಮ್ಮ ಆಹಾರವಾದ ಮರದ ತೊಗಟೆಯ ಹೊರಭಾಗದಲ್ಲಿ ಅಡಗಿರುವ ಅಕಶೇರುಕ ಜೀವಿಗಳನ್ನು ಹುಡುಕುವಾಗ ಆಗಾಗ ಕೂಗುವುದು ಅವುಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಅವುಗಳು ಜೋಡಿಯಾಗಿ ಇಲ್ಲವೇ ಸಣ್ಣ ಸಣ್ಣ ಗುಂಪುಗಳಾಗಿ ಸಂಚರಿಸುತ್ತವೆ ಮತ್ತು ತನ್ನ ಆಹಾರವಾದ ಹುಳ ಹುಪ್ಪಟೆಗಳನ್ನು ಹುಡುಕುವ ಮಿಶ್ರ ವರ್ಗದ ಪಕ್ಷಿಗಳೊಂದಿಗೆ ಕಾಣಿಸಿಕೊಳ್ಳುತ್ತವೆ. ಇವುಗಳ ಸಂಖ್ಯೆಯು ಎಷ್ಯಾದ ತುಂಬ ಹರಡಿಕೊಂಡಿದ್ದು, ಭಾರತದ ನೈರುತ್ಯ ಕಾಡುಗಳಲ್ಲಿ ಮತ್ತು ಮಧ್ಯಭಾರತದಲ್ಲಿ ಇರುವ ಪಕ್ಷಿಗಳು ನೈರುತ್ಯ ಏಷ್ಯಾ ಮತ್ತು ಹಿಮಾಲಯದಲ್ಲಿರುವ ಪ್ರಮಾಣಕ್ಕಿಂತ ಸ್ವಲ್ಪ ವ್ಯತ್ಯಾಸವಿದೆ.
ಸಣ್ಣ ವಿಶಿಷ್ಟಾಕಾರದ ಆಕಾರವಿರುವ ಕಪ್ಪು ಮರಕುಟುಕವು ದೊಡ್ಡ ಜುಟ್ಟು ಹೊಂದಿದ್ದು, ಈ ಪಕ್ಷಿಯ ಸಣ್ಣ ದೇಹಕ್ಕೆ ಮತ್ತು ಬಾಲಕ್ಕೆ ಹೋಲಿಸಿದರೆ ತಲೆ ದೊಡ್ಡದಾಗಿ ತೋರುತ್ತದೆ. ಗಂಡು ಮತ್ತು ಹೆಣ್ಣು ಎರಡೂ ಪಕ್ಷಿಗಳು ಪ್ರಧಾನವಾಗಿ ಕಪ್ಪು ಬಣ್ಣವನ್ನು ಹೊಂದಿರುತ್ತವೆ. ಬಿಳಿಯಾದ ತಮ್ಮ ಪಕ್ಕೆಗಳ ಮೇಲೆ ಕಪ್ಪು ಹೃದಯಾಕಾರದ ಚಿನ್ಹೆಯನ್ನು ಹೊಂದಿರುತ್ತವೆ ಮತ್ತು ಹಾರುವ ಗರಿಗಳನ್ನು ಹೊರತುಪಡಿಸಿದರೆ ಹೆಗಲ ಬಳಿ ಅಗಲವಾದ ಬಿಳಿ ಬಣ್ಣವಿರುತ್ತದೆ. ಹೆಣ್ಣು ಪಕ್ಷಿಯು ನೊಸಲಿಗೆ ಮಾಸಲು ಬಿಳಿಯ ಬಣ್ಣವನ್ನು ಹೊಂದಿರುತ್ತದೆ ಮತ್ತು ಇದೇ ಜಾಗದಲ್ಲಿ ಗಂಡು ಕಪ್ಪು ಬಣ್ಣವನ್ನು ಹೊಂದಿರುತ್ತದೆ. ಗಂಟಲು ಭಾಗವು ಸ್ವಲ್ಪ ಬಿಳಿ ಬಣ್ಣವನ್ನು ಹೊಂದಿದ್ದು ಕೆಳಭಾಗವು ಬೂದುಬಣ್ಣವನ್ನು ಹೊಂದಿರುತ್ತದೆ. ಗೊಂಚಲಾಗಿರುವ ಗರಿಗಳು ಕೊಬ್ಬನ್ನು ಹೊಂದಿದ್ದು ಒಂದಕ್ಕೊಂದು ಹೊಂದಿಕೊಂಡು ಗೊಂಚಲಾಗಿರುವಂತೆ ಹೊಂದಿಕೊಂದಿರುತ್ತವೆ. ಈ ವಿಶೇಷ ಗರಿಗಳು ಅಥವಾ “ದಪ್ಪ ಗರಿಗಳ” ಮೂಲದ ಭಾಗವು ಮಾಸಲು ಹಳದಿಯಂತೆ ಕಂಡು “ಶೃಂಗಾರಮಯ ವರ್ಣ ವಿನ್ಯಾಸ” ಹೊಂದಿದ್ದು, ಅಲ್ಲಿಂದ ಬರುವ ದ್ರವ್ಯವು ಸುಗಂಧ ಪರಿಮಳವನ್ನು ಬೀರುತ್ತವೆ ಎಂದು ಹೇಳಲಾಗುತ್ತಿದ್ದು, ಅದರ ಕಾರ್ಯಾತ್ಮಕ ಉಪಯುಕ್ತತೆಯು ಇನ್ನೂ ಗೊತ್ತಾಗಿಲ್ಲ.
ಇವುಗಳು ಸಾಮಾನ್ಯವಾಗಿ ಉಷ್ಣ ವಲಯ ಅಥವಾ ಉಪೋಷ್ಣ ವಲಯಗಳ ಅರಣ್ಯಗಳಲ್ಲಿ ವಾಸಮಾಡುತ್ತವೆ. ಇವುಗಳು ಭಾರತದ ಹಿಮಾಲಯದ ಅರಣ್ಯಗಳಲ್ಲಿ ಮತ್ತು ಬಾಂಗ್ಲಾದಿಂದ ಮ್ಯಾನ್ಮಾರ್ ವರೆಗೂ ಥೈಲೆಂಡ್ ಲಾವೋಸ್ ಕಾಂಬೋಡಿಯಾ ಮತ್ತು ವಿಯೆಟ್ನಾಂವರೆಗೂ ಕಂಡುಬರುತ್ತವೆ. ಭಾರತದ ಒಳಗೆ ಅವು ಪಶ್ಚಿಮ ಘಟ್ಟಗಳಲ್ಲಿಯೂ ಮತ್ತು ಮಧ್ಯ ಭಾರತದ ಕಾಡುಗಳಲ್ಲಿಯೂ ಕಂಡುಬರುತ್ತವೆ. ಥಾಮಸ್ ಸಿ.ಜೆರ್ಡೊನ್‌ರ ಪ್ರಕಾರ ಪಶ್ಚಿಮ ಘಟ್ಟಗಳಲ್ಲಿ ಇರುವ ಕಾರ್ಡಾಟಸ್ ಎಂಬ ಉಪವರ್ಗದ ಈ ಹಕ್ಕಿಗಳು ಬೇರೆ ರೀತಿಯವು ಎಂದು ಪರಿಗಣಿಸಲ್ಪಟ್ಟಿಲ್ಲ ಮತ್ತು ಅವುಗಳಲ್ಲಿ ಗರಿಗಳ ಬಣ್ಣದಲ್ಲಿ ವ್ಯತ್ಯಾಸವಿರುತ್ತದೆ ಮತ್ತು ಗಾತ್ರದ ಶ್ರೇಣಿಯಲ್ಲಿ ವ್ಯತ್ಯಾಸವಿದೆ. ಉತ್ತರದಲ್ಲಿನ ಪಕ್ಷಿಗಳು ಸಮಭಾಜಕ ವೃತ್ತದಲ್ಲಿನವುಗಳಿಗಿಂತ ದೊಡ್ಡದಾಗಿವೆ.
ಈ ಮರಕುಟುಕ ಪಕ್ಷಿಗಳು ತಮ್ಮ ಆಹಾರಕ್ಕಾಗಿ ಜೋಡಿ ಜೋಡಿಯಾಗಿ ಮತ್ತು ಕೆಲವೊಮ್ಮೆ ಆಹಾರ ಹುಡುಕುವ ಮಿಶ್ರಪಕ್ಷಿಗಳ ಗುಂಪಿನಲ್ಲಿ ಹೋಗುತ್ತವೆ. ಕೆಲವು ಬಾರಿ ಬೇರೆ ವರ್ಗಗಳ ಜೊತೆಗೂ ಸೇರಿಕೊಳ್ಳುತ್ತವೆ. ಅವು ಮರದಿಂದ ಮರಕ್ಕೆ ಹಾರುತ್ತಾ ತಮ್ಮ ಬಲವಾದ ಕೊಕ್ಕಿನಿಂದ ಮರವನ್ನು ಕುಕ್ಕಿ ನೋಡುತ್ತವೆ. ತಮ್ಮ ಆಹಾರವಾದ ಹುಳುಗಳನ್ನು ತೊಗಟೆಗಳಿಂದ ಹೆಕ್ಕಿಕೊಳ್ಳುತ್ತವೆ. ಅವುಗಳು ಹೆಚ್ಚಾಗಿ ಕ್ಯಾಸಿಯಾ ಫಿಸ್ತುಲ ಮರದ ತೊಗಟೆಯನ್ನು ಕುಟುಕಿ ಅದರಲ್ಲಿನ ಹುಳಹುಪ್ಪಡಿಗಳನ್ನು ಹಿಡಿದು ತಿನ್ನುತ್ತವೆ. ಅವು ಮತ್ತೊಂದು ಪಕ್ಷಿಯನ್ನು ಕರೆಯಲು ಟ್ವೀ-ಟ್ವೀ-ಟ್ವೀ ಎಂಬ ರಾಗದಲ್ಲಿ ಕೂಗುತ್ತವೆ. ಕೆಲವೊಮ್ಮೆ ಅವು ಅನೇಕ ಬಾರಿ ಈ ರೀತಿ ಕೂಗುತ್ತವೆ, ಅದು ಮೂಗಿನಿಂದ ಹೊರಡುವ ಕಿ-ಇವ್ ಮತ್ತು ಸು-ಸುಯಿ ಎಂಬ ಶಬ್ದವಾಗಿ ಕೇಳಿಸುತ್ತದೆ. ಅವು ತಮ್ಮ ಸಂತಾನೋತ್ಪತ್ತಿಯನ್ನು ಚಳಿಗಾಲದಿಂದ ಮಳೆಗಾಲದ ಅವಧಿಯಲ್ಲಿ ಮಾಡುತ್ತಿದ್ದು ಆ ಕಾಲದಲ್ಲಿ ಅವು ಮೇಲಿಂದ ಮೇಲೆ ಕುಟ್ಟುವ ಸದ್ದು ಮಾಡುತ್ತವೆ. ಅವುಗಳು ತಮ್ಮ ಗೂಡನ್ನು ಮರದ ಒಣಗಿದ ಕೊಂಬೆಗಳಲ್ಲಿ ಅವುಗಳನ್ನು ಮೂರರಿಂದ ನಾಲ್ಕು ಸೆಂಟಿಮಿಟರ್‌ಗಳಷ್ಟು ವ್ಯಾಸದಲ್ಲಿ ಕೊರೆದು ಮುಖ್ಯದ್ವಾರದಿಂದ ಸುಮಾರು ಇಪ್ಪತ್ತು ಸೆಂಟಿಮಿಟರ್‌ಗಳಷ್ಟು ಆಳದಲ್ಲಿ ಕೊರೆದು ನಂತರ ಸ್ವಲ್ಪ ದೊಡ್ಡಗಾತ್ರದಲ್ಲಿ ಕೊರೆಯುತ್ತವೆ. ಗೂಡುಗಳು ಕೆಲವು ಬಾರಿ ಬೇಲಿಗಳಲ್ಲಿಯೂ ಕಟ್ಟಲ್ಪಟ್ಟಿರುತ್ತವೆ. ಸಾಮಾನ್ಯವಾಗಿ ಅವು ಎರಡರಿಂದ ಮೂರು ಮೊಟ್ಟೆಗಳನ್ನು ಇಡುತ್ತವೆ. ಅವು ಕಂದು ಬಿಳಿ ಬಣ್ಣದಲ್ಲಿರುತ್ತವೆ. ಈ ವರ್ಗದ ಪಕ್ಷಿಗಳನ್ನು ಅವುಗಳ ಕೂಗಿನ ಆಧಾರದ ಮೇಲೆ ಹೆಮಾಫಿಸಾಲಿಸ್ ಸ್ಪಿನಿಗೆರಾ ಪಕ್ಷಿಗಳ ಸಂಕುಲದಲ್ಲಿ ಸೇರಿಸಲಾಗಿದೆ.
ಸುವರ್ಣ ಬೆನ್ನಿನ ಮರಕುಟಿಕ
ಸುವರ್ಣ ಬೆನ್ನಿನ ಮರಕುಟಿಕವು ಒಂದು ರೀತಿಯ ಮರಕುಟಿಕವಾಗಿದ್ದು, ಇವು ದಕ್ಷಿಣ ಏಷ್ಯಾದ ತುಂಬಾ ವಿಸ್ತಾರವಾಗಿ ಹರಡಿಕೊಂಡಿದ್ದನ್ನು ಕಾಣಬಹುದಾಗಿದೆ. ಇವುಗಳಲ್ಲಿ ಕೆಲ ಮರಕುಟಿಕಗಳು ಗ್ರಾಮೀಣ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ಇದನ್ನು ಲೊಡಗುಟ್ಟುವ-ಕೆನೆಯುವ ಮತ್ತು ಅಲೆಯಾಗಿ ಹಾರುವ ಹಕ್ಕಿ ಎಂದು ಬಣ್ಣಿಸಲಾಗುತ್ತದೆ. ಸುವರ್ಣ ಬೆನ್ನಿನ ಮರಕುಟುಕ ಮಾತ್ರ ಕಪ್ಪು ಗಂಟಲು ಮತ್ತು ಕಪ್ಪು ಪುಷ್ಠವನ್ನು ಹೊಂದಿದ ಮರಕುಟಿಕವಾಗಿದೆ.
ಈ ಬ್ಲ್ಯಾಕ್-ರಂಪ್ಡ್ ಫ್ಲೇಮ್‌ಬ್ಯಾಕ್ ಎಂಬ ಮರಕುಟಿಗವು ದೊಡ್ಡ ಪಕ್ಷಿ ಜಾತಿಯಾಗಿದ್ದು, ಇವು ೨೬-೨೯ ಸೆಂ.ಮೀ. ಉದ್ದವನ್ನು ಹೊಂದಿರುತ್ತವೆ. ಇದು ವಿಶಿಷ್ಟ ಮರಕುಟಿಕದ ಆಕಾರವನ್ನು ಹೋಲುತ್ತದೆ ಮತ್ತು ಇದರ ಬುಡದ ಗರಿಯು ಬಂಗಾರದ ಹಳದಿ ರೆಕ್ಕೆಯನ್ನು ಹೊಂದಿರುವುದು ಮತ್ತೊಂದು ವಿಶೇಷತೆಯಾಗಿದೆ. ಇದರ ಪುಷ್ಠ ಭಾಗವು ಕಪ್ಪು ಇದ್ದು, ಗ್ರೇಟರ್ ಫ್ಲೇಮ್‌ಬ್ಯಾಕ್‌ನ ಹಾಗೆ ಕೆಂಪಾಗಿಲ್ಲ.ಇದರ ಕೆಳಗಿನ ಭಾಗಗಳು ಬಿಳಿ ಜತೆಗೆ ಕಪ್ಪು ಬಣ್ಣದ ತಲೆಕೆಳಗಾದ V ಆಕಾರದ ಗುರುತನ್ನು ಹೊಂದಿದೆ. ಕಪ್ಪು ಗಂಟಲು ಬಿಳಿ ಬಣ್ಣದ ಗುರುತನ್ನು ಹೊಂದಿದ್ದಲ್ಲಿ ಅವು ಭಾರತದ ಪ್ರದೇಶಗಳಲ್ಲಿರುವ ಉಳಿದ ಹಳದಿ ಬೆನ್ನಿನ ಮರಕುಟುಕಗಳಿಗಿಂತ ಭಿನ್ನವಾಗಿರುತ್ತವೆ. ತಲೆಯು ಬಿಳಿ ಬಣ್ಣದ್ದಾಗಿದ್ದು, ಕುತ್ತಿಗೆಯ ಹಿಂಭಾಗ ಹಾಗೂ ಗಂಟಲು ಕಪ್ಪಾಗಿರುತ್ತದೆ ಮತ್ತು ನಸುಬೂದುಬಣ್ಣದ ಕಣ್ಣನ್ನು ಹೊಂದಿದೆ. ಗ್ರೇಟರ್ ಫ್ಲೇಮ್‌ಬ್ಯಾಕ್ ವು ಭಿನ್ನವಾಗಿದ್ದು, ಇದು ಕಪ್ಪು ಮೀಸೆಗಳ ಪಟ್ಟಿಯನ್ನು ಹೊಂದಿಲ್ಲ. ದೊಡ್ಡ ಗಂಡು ಬ್ಲ್ಯಾಕ್-ರಂಪ್ಡ್ ಫ್ಲೇಮ್‌ಬ್ಯಾಕ್ ವು ಕೆಂಪು ತಲೆಯನ್ನು ಮತ್ತು ಜುಟ್ಟನ್ನು ಹೊಂದಿರುತ್ತದೆ. ಹೆಣ್ಣು ಮರಕುಟಿಕವು ಕಪ್ಪು ತಲೆಯನ್ನು ಬಿಳಿ ಬಣ್ಣದ ಜತೆ ಹೊಂದಿರುತ್ತದೆ. ಇವುಗಳ ಜುಟ್ಟಿನಲ್ಲಿ ಕೆಂಪು ಬಣ್ಣವು ವಿರಳವಾಗಿ ಕಾಣಸಿಗುತ್ತವೆ. ಸಣ್ಣ ಹಕ್ಕಿಗಳು ಹೆಣ್ಣು ಪಕ್ಷಿಗಳಂತೆ ಕಾಣುತ್ತವೆ. ಆದರೆ ಕಳೆಗುಂದಿರುತ್ತವೆ. ಉಳಿದ ಮರಕುಟಿಕಗಳಿಗೆ ಹೋಲಿಸಿದಲ್ಲಿ, ಈ ಜಾತಿಯವು ನೇರ ತುದಿಯ ಕೊಕ್ಕನ್ನು ಹೊಂದಿವೆ. ಇದರ ಗಟ್ಟಿ ಬಾಲವು ಮರಗಳ ಕಾಂಡವನ್ನು ಆಧಾರಕ್ಕಾಗಿ ಬಳಸಿಕೊಳ್ಳಲು ಸಹಾಯಕವಾಗಿದೆ ಮತ್ತು ಜೋಡಿ ಬೆರಳುಗಳಿರುವ ಪಾದಗಳಾದ ಎರಡು ಬೆರಳು ಹಿಂದಕ್ಕೆ ಮತ್ತು ಎರಡು ಮುಂದಕ್ಕೆ ಇರುವ ಹಾಗೆ ರಚನೆಯಾಗಿದೆ. ಉದ್ದನೆಯ ನಾಲಿಗೆಯನ್ನು ಚೂಪವಾಗಿ ಚಾಚಿ ಕೀಟಗಳನ್ನು ಹಿಡಿಯಲು ಸಹಾಯಕವಾಗುವಂತೆ ಇದೆ. ಬಿಳಿಯ ಬಣ್ಣದ ಶ್ರೇಣಿಯ ಹಕ್ಕಿಗಳು ಪಟ್ಟಿಯಲ್ಲಿ ಸೇರಿವೆ. ಎರಡು ಮಾದರಿಯ ಗಂಡು ಹಕ್ಕಿಗಳನ್ನು ಉತ್ತರೀಯ ಮತ್ತು ಪಶ್ಚಿಮ ಭಾಗಗಳ ಗಾಟ್ ಗಳಲ್ಲಿ ಗುರುತಿಸಲಾಗಿದ್ದು, ಕೆಂಪು-ಮೂತಿಯ ಗರಿಗಳನ್ನು ಗಲ್ಲದ ಭಾಗದಲ್ಲಿ ಹೊಂದಿದ್ದು, ಗಲ್ಲದ ಪಟ್ಟಿಯ ಹೆಚ್ಚಿನ ಭಾಗದಲ್ಲಿ ಇವು ರಚನೆಯಾಗಿದೆ. ಲಕ್ನೌನಲ್ಲಿನ ಹೆಣ್ಣು ಜಾತಿಯ ಪಕ್ಷಿಯ ಬೆಳವಣಿಗೆ ಅಸಹಜವಾಗಿದ್ದು, ಹೂಪೂ ಹಕ್ಕಿ (ತಲೆಯ ಮೇಲೆ ಬೀಸಣಿಕೆಯಾಕಾರದ ಶಿಖೆಯುಳ್ಳ) ಯು ಕೆಳವಕ್ರರೇಖೆಯುಳ್ಳ ಕೊಕ್ಕನ್ನು ಹೊಂದಿದೆ.
ಧನ್ಯವಾದಗಳು.
You have remarked very interesting details! ps nice site.Raise your business
casibom guncel giris: casibom guncel giris – casibom giris
casibom giris
casibom: casibom guncel giris – casibom giris adresi
https://casibom.auction/# casibom guncel giris