in

ಹೊಳೆನರಸೀಪುರದ ಪೌರಾಣಿಕ ಇತಿಹಾಸ ಕೇಳಿ

ಹೊಳೆನರಸೀಪುರ
ಹೊಳೆನರಸೀಪುರ

ಹೊಳೆನರಸೀಪುರ ಹಾಸನ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಈ ಊರನ್ನು ನರಸೀಪುರ ಎಂದು ಕೂಡ ಕರೆಯುತ್ತಾರೆ. ಇಲ್ಲಿ ಹೇಮಾವತಿ ನದಿ ಹರಿಯುವುದರಿಂದ ಹೊಳೆನರಸೀಪುರ ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ. ಪುರಸಭೆ ಇಲ್ಲಿನ ಸ್ಥಳೀಯ ಆಡಳಿತ ಸಂಸ್ಥೆ. ಇಡೀ ಊರನ್ನು ಕೋಟೆ ಮತ್ತು ಪೇಟೆ ವಿಭಜಿಸಲಾಗಿದೆ. ಈ ತಾಲ್ಲೂಕಿನ ಮೂರು ಹೋಬಳಿಗಳು : ಹಳೇಕೋಟೆ, ಹಳ್ಳಿಮೈಸೂರು ಮತ್ತು ಕಸಬಾ.

ಹೊಳೆನರಸೀಪುರ ಪಟ್ಟಣವು ರಾಜ್ಯ ಹೆದ್ದಾರಿ ಸಂಖ್ಯೆ ೫೭ ರಲ್ಲಿ ನೆಲೆಯಲ್ಲಿದೆ ಹಾಗೂ ಹಾಸನ ಮತ್ತು ಮೈಸೂರು ರೈಲ್ವೆ ದಾರಿಯ ಪೂರ್ವವಲಯದಲ್ಲಿದೆ. ಹೊಳೆನರಸೀಪುರವು ದಕ್ಷಿಣಾಭಿಮುಖವಾಗಿ ಅಭಿವೃದ್ಧಿ ಹೊಂದಿದೆ. ಈ ಪಟ್ಟಣವು ಮೂರು ನಗರ ವಲಯಗಳನ್ನು ಹೊಂದಿದೆ. ಕೋಟೆ ಪ್ರದೇಶ ಜತೆಗೆ ದೇವಾಲಯ ಕೇಂದ್ರಬಿಂದುವಾಗಿದೆ. ಉತ್ತರದ ಕೋಟೆಯು ಮತ್ತು ರೈಲ್ವೆದಾರಿಯ ಮಧ್ಯೆ ಅಭಿವೃದ್ದಿಯಾಗಿದೆ. ಶ್ರೀರಾಮದೇವರಕಟ್ಟೆಯ ನೀರಾವರಿ ಕೆಲಸಗಳಿಗೆ ಅನುಕೂಲಕರವಾಗಿದೆ. ಹೊಳೆನರಸೀಪುರದ ಈಗಿನ ಜನಸಂಖ್ಯೆ ೨೭,೦೨೪ ಇದ್ದು, ಇದು ೨೦೧೧ರ ವೇಳೆಗೆ ೬೫೦೦೦ ಮುಟ್ಟುವ ಸಾಧ್ಯತೆಯಿದೆ.

ಭಾರತದ ಮಾಜಿ ಪ್ರಧಾನಿ ದೇವೇಗೌಡರ ಹುಟ್ಟೂರು ಹರದನಹಳ್ಳಿಯು ಹಳೇಕೋಟೆ ಹೋಬಳಿಯಲ್ಲಿದೆ. ಹಳೇಕೋಟೆಯ ಪಕ್ಕದಲ್ಲಿಯೇ ಇರುವ ಮಾವಿನಕೆರೆಯು ಪುಣ್ಯಕ್ಷೇತ್ರವಾಗಿದ್ದು, ಮಾವಿನಕೆರೆ ರಂಗನಾಥನಬೆಟ್ಟಕ್ಕೆ ಇತ್ತೀಚೆಗೆ ರಸ್ತೆ ಮಾಡಲಾಗಿದೆ. ಹರಿಹರಪುರವು ಇದೇ ಹೋಬಳಿಗೆ ಸೇರಿದ ಪ್ರಮುಖ ಪಂಚಾಯಿತಿ ಕೇಂದ್ರವಾಗಿದ್ದು, ಹರಿಹರಪುರದ ಗ್ರಾಮದೇವತೆ ಉಡುಸಲಮ್ಮ-ದುರ್ಗಾಪರಮೇಶ್ವರಿ ದೇವತೆಗಳಿಗೆ ಹೊರರಾಜ್ಯದಲ್ಲೂ ಭಕ್ತರಿದ್ದಾರೆ.

ಹೊಳೆನರಸೀಪುರದ ಪೌರಾಣಿಕ ಇತಿಹಾಸ ಕೇಳಿ
ಮಾಜಿ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ದೇವೇಗೌಡರು

ಹೊಳೆನರಸೀಪುರದ ಹಿರೇಬೆಳಗುಲಿಯ ಗ್ರಾಮದ ಚರಿತ್ರೆ : ಕೋಟ್ಯಂತರ ವರ್ಷಗಳ ಹಿಂದೆ ನಭೋ ಮಂಡಲದಲ್ಲಿ ಒಂದು ಮಹಾಸ್ಪೋಟ ಉಂಟಾಗಿ ಆಕಾಶ ಕಾಯವು ಛಿದ್ರಗೊಂಡು ಆಕಾಶ, ಗಾಳಿ, ನೀರು, ಭೂಮಿ, ಸೂರ್ಯ ಎಂಬ ಪಂಚ ಭೂತಗಳು ಸೃಷ್ಟಿಯಾಗಿದೆ ಎಂದು ಖಗೋಳ ವಿಜ್ಞಾನಿಗಳ ಅಭಿಪ್ರಾಯವಾಗಿದೆ. ಹೀಗೆ ಪ್ರಪಂಚ ಸೃಷ್ಟಿ ಯಾದ ನಂತರದಲ್ಲಿ ಶಾಖ, ನೀರು, ಗಾಳಿ ಇವುಗಳ ಸಂಯೋಜನೆಯಿಂದ ಭೂಮಿಯ ಬಂಡೆಗಳ ಮೇಲೆ ‘ಪಾಚಿ ಶೀಲಾವಲ್ಕಗಳೆಂಬ’ ಜೀವ ಕೋಶಗಳು ಹುಟ್ಟಿ ಕೊಳುತ್ತವೆ. ಇದರಿಂದ ಪ್ರಾರಂಭವಾದ ಜೀವಿಗಳ ಪರಿವರ್ತನೆಯು ಸಾವಿರಾರು ವರ್ಷಗಳ ಕಾಲ ವಿಕಾಸ ಹೊಂದಿ ವಿವಿಧ ಜೀವಿಗಳ ಮೂಲದಿಂದ ಅಂತಿಮವಾಗಿ ಮಾನವನ ಉಗಮವಾಗಿದೆ ಎಂಬುದು ಇತಿಹಾಸ ಮೂಲಗಳಿಂದ ತಿಳಿದು ಬಂದಿರುತ್ತದೆ. ಮಾನವನ ವಿಕಾಸವು ಸಿಂಧು ನದಿ ಕಣಿವೆಯ ನಾಗರಿಕತೆಯಿಂದ ಪ್ರಾರಂಭವಾಗಿದ್ದರಿಂದ ಹಿಂದೂದೇಶವೆಂದು ರೂಪುಗೊಂಡು ಇಲ್ಲಿನ ನಿವಾಸಿಗಳು ಹಿಂದೂಗಳೆಂದು ಕರೆಯಲ್ಪಡುತ್ತಾರೆ.

ಭೂಮಿಯ ಮೇಲೆ ಆದಿ ಮಾನವನ ಜೀವನ ಕ್ರಮವು ಪ್ರಾರಂಭವಾಗುವುದಕ್ಕೂ ಮುನ್ನ ಅಲ್ಲಲ್ಲಿ ಕೆಲವು ರಾಕ್ಷಸರು ಹುಟ್ಟಿಕೊಂಡು ಮಾನವನ ಕುಲದ ವಿಕಾಸಕ್ಕೆ ಕಂಟಕ ಪ್ರಾಯವಾಗುತ್ತದೆ ಇದರಿಂದ ಭಕ್ತಿಗೆ ನೆಲೆಯಿಲ್ಲದಂತಾಗುತ್ತದೆ ಮತ್ತು ಮನುಕುಲವು ವಿನಾಶದ ಹಾದಿ ಹಿಡಿಯುತ್ತದೆ. ಇದರಿಂದ ಆತಂಕಗೊಂಡ ವೈಕುಂಠಪತಿಯಾದ ಶ್ರೀ ವಿಷ್ಣು ಬೇರೆ ಬೇರೆ ಯುಗಗಳಲ್ಲಿ ವಿವಿಧ ಅವತಾರಗಳನೆತ್ತಿ ದುಷ್ಟ ಸಂಹಾರ ಮಾಡಿದ್ದನ್ನು ‘ಋಷಿ’ ಮುನಿಗಳಿಂದ ರಚಿತವಾಗಿರುವ ಪುರಾಣ ಕಥೆಗಳಿಂದ ತಿಳಿದು ಬಂದಿರುತ್ತದೆ : ದುಷ್ಟ ಸಂಹಾರವಾದ ನಂತರದಲ್ಲಿ ಭೂಮಿಯ ಮೇಲೆ ಮಾನವನ ಸಂತತಿಯು ಉಳಿದು ಬೆಳೆಯಲು ನಾಂದಿಯಾಗುತ್ತದೆ. ಇವರುಗಳು ತಮ್ಮ ಕಷ್ಟ ತೊಂದರೆಗಳಿಗೆಲ್ಲ ಹೆಚ್ಚಾಗಿ ಶ್ರೀ ಪಾರ್ವತಿ ದೇವಿಯನ್ನು ವಿವಿಧ ರೂಪದಲ್ಲಿ ತಮ್ಮ ಶಕ್ತಿ ದೇವತೆಯಾಗಿ ನಂಬಿಕೆ ಭಕ್ತಿಯಿಂದ ಆರಾಧಿಸಿರುತ್ತಾರೆ. ವೈಕುಂಠಪತಿಯಿಂದ ದುಷ್ಟ ಸಂಹಾರವಾದರೂ ಸಹ, ಮಾನವರಲ್ಲಿ ಹೆಚ್ಚಾಗಿ ಹಿಂದೂಗಳಲ್ಲಿ ಸಾಮೂಹಿಕ ಪಿಡುಗು ಗಳಾದ ಅಧರ್ಮ, ಅಜ್ಞಾನ, ಅನಾಚಾರ, ದರಿದ್ರ್ಯ, ಮೂಡನಂಬಿಕೆ ಮತ್ತು ಸಾಂಕ್ರಾಮಿಕ ರೋಗಗಳೆಂಬ ಧೈತ್ಯ ಸಮಸ್ಯೆಗಳು ಜೀವಂತವಾಗಿ ಉಳಿದು ಕೊಂಡಿರುತ್ತದೆ. ಇದರಿಂದ ದೈವದ ಮೇಲೆ ಭಕ್ತಿ ಕಡಿಮೆಯಾಗಿ ಜನರಲ್ಲಿ ಲೌಕಿಕ ವಿಕಾಸವು ನಿಂತ ನೀರಾಗುತ್ತದೆ. ಆದ ಕಾರಣ ಮಾನವ ಸಂತತಿಯು ವಿನಾಶದ ಹಾದಿ ಹಿಡಿದಿರುವ ಪರಿಸ್ಥಿತಿಯನ್ನು ತಿಳಿದ ಪರಶಿವನು, ರಾಣಿಯಾದ ಶ್ರೀ ಪಾರ್ವತಿ ದೇವಿಯವರು ಮಾನವರಲ್ಲಿ ಈ ಜ್ವಲಂತ ಸಮಸ್ಯೆಗಳಿಗೆ ಆತಂಕಪಟ್ಟು ದೈವ ಭಕ್ತಿ, ಶಾಂತಿ, ನೆಮ್ಮದಿ, ಉತ್ಸಾಹದಿಂದ ಜೀವನ ಮಾಡುವ ಅವಕಾಶಗಳನ್ನು ಕಲ್ಪಿಸುವ ಸಂಕಲ್ಪ ಮಾಡಿ, ತಮ್ಮ ಪರಿಚಾರಿಕೆಯರ ಪೈಕಿ ಅರ್ಹರಾದ ೭ ಜನ ಕನ್ಯೆಯರಿಗೆ ಸರ್ವಶಕ್ತಿಯನ್ನು ಕೊಟ್ಟು ಸಪ್ತ ಮಾತೃಕೇಯರನ್ನು ಸೃಷ್ಟಿ ಮಾಡಿ, ನೀವುಗಳು ಭೂಲೋಕಕ್ಕೆ ಹೋಗಿ ಸ್ಥಳ, ಸನ್ನಿವೇಶ ಅಲ್ಲಿನ ಮಾನವರಲ್ಲಿರುವ ಆಚಾರ, ವಿಚಾರ, ನಂಬಿಕೆ ಪದ್ದತಿಗೆ ಅನುಸಾರವಾಗಿ ಬೇರೆ ಬೇರೆ ಹೆಸರುಗಳಿಂದ ಶಿಲಾ ರೂಪದಲ್ಲಿ ನೆಲೆಯಾಗಿ, ಆರಾಧಿಸಿಕೊಳ್ಳುತ್ತಾ ಅಲ್ಲಿನ ಎಲ್ಲಾ ಸಮಸ್ಯೆ ತೊಂದರೆಗಳಿಗೆ ಸ್ಪಂದಿಸುತ್ತಿರಬೇಕೆಂದು ಆದೇಶ ಮಾಡಿ, ಅಂಬಿಕಾ ಎಂಬ ಕನ್ಯಾಮಣಿಯನ್ನು ಮುಂದಿಟ್ಟು ಉಳಿದ ಆರು ಜನರನ್ನು ಈಕೆಯ ಸಂಗಡ ಕಳುಹಿಸಿಕೊಟ್ಟ ಮೇರೆಗೆ ಏಳು ಜ್ಯೋತಿ ರೂಪ ದಲ್ಲಿ ಇಹಲೋಕಾಭಿಮುಖವಾಗಿ ಹೊರಡುತ್ತಾರೆ.

ಇತ್ತ ಭೂಲೋಕದ ದಕ್ಷಿಣ ಕರಾವಳಿ ತೀರದ ಕೊಂಕಣ ಸೀಮೆಯಲ್ಲಿ ಒಬ್ಬ ಬೇಡನು ಹುಟ್ಟಿಕೊಂಡು ಮೂಢನಂಬಿಕೆಯಿಂದ, ಸಿಕ್ಕಿದ ಜನರನ್ನು ಕೊಲ್ಲುವುದು, ಅವರಿಂದ ದೋಚಿಕೊಂಡು ತಂದು ಜೀವನ ಮಾಡುತ್ತಿರುತ್ತಾನೆ. ಈತನ ತೊಂದರೆಯನ್ನು ಸಹಿಸಲಾರದೆ ನಿಗ್ರಹಕ್ಕಾಗಿ ಪ್ರತಿ ದಿನವೂ ಶಕ್ತಿ ದೇವತೆಗೆ ಮೊರೆಯಿಡುತ್ತಾರೆ. ಇದೇ ಸಂಧರ್ಭದಲ್ಲಿ ಕೈಲಾಸದಿಂದ ಹೊರಟ ಸಪ್ತಮಾತೃಕೆಯರುಗಳು ಮೊದಲು ಈ ಸ್ಥಳಕ್ಕೆ ಬಂದು ತಲುಪುತ್ತಾರೆ. ಇಲ್ಲಿಗೆ ಬಂದ ನಂತರ ಮೊದಲು ಬೇಡನನ್ನು ಬೇಟಿ ಮಾಡಿದ ಅಂಬಿಕಾ ದೇವಿಯು ಬಗೆ ಬಗೆಯಾಗಿ ಉಪದೇಶ ಮಾಡಿ ಕ್ರಮೇಣ ಪರಮ ಭಕ್ತನನ್ನಾಗಿ ಪರಿವರ್ತಿಸಿ ಹಿಂಸಾ ಮಾರ್ಗವನ್ನು ಬಿಟ್ಟು ಮನುಷ್ಯನಾಗುತ್ತಾನೆ. ಇದರಿಂದ ಈತನ ಆತಂಕ ತಪ್ಪುತ್ತದೆ. ಈ ಕಾರಣಕ್ಕೆ ಕೊಲ್ಲುತ್ತಿದ್ದ ಊರು ‘ಕೊಲ್ಲೂರು’ ಎಂದು ಕರೆದಿರುತ್ತಾರೆ. ದುಶ್ಚಟವನ್ನು ಪರಿವರ್ತನೆ ಮಾಡಿದ ಪ್ರೇರಣೆಯಿಂದ ಮೂಕ+ಅಂಬಿಕೆ = ಮೂಕಾಂಬಿಕೆ ಎಂತಲೂ ನೆಲೆಸಿ ಪ್ರಸಿದ್ದಿಯನ್ನು ಪಡೆದು, ಇಂದಿನ ಈ ಭಾಗದ ಜನರ, ರಾಜಕಾರಣಿಗಳ, ಕಲಾವಿದರ, ಆರಾಧ್ಯ ಧೈವವಾಗಿ ನೆಲೆಸಿರುತ್ತಾಳೆ.

ಹೊಳೆನರಸೀಪುರದ ಪೌರಾಣಿಕ ಇತಿಹಾಸ ಕೇಳಿ
ಗ್ರಾಮ ದೇವತೆ ನರಸಿಂಹ ಸ್ವಾಮಿ

ಇದಾದ ನಂತರ ಉಳಿದ ಆರು ಜನ ಮಾತೃಕೆಯರು ಕರ್ನಾಟಕದ ಆರು ದಿಕ್ಕುಗಳನ್ನು ಹಿಡಿದು ಹೊರಟು ಸ್ತ್ರೀ ಹೆಸರಿನ ಮುಖ್ಯ ನದಿ ಪಾತ್ರದ ಮುಖ ಜಾಲ ಸೀಮೆಗಳಲ್ಲಿ ನೆಲೆಯಾಗಿ ತಮ್ಮ ಶಕ್ತಿ ಪವಾಡಗಳಿಂದ ಆ ಸ್ಥಳದ ಜನರ ಎಲ್ಲಾ ತೊಂದರೆ, ಕಷ್ಟ ಗಳನ್ನು, ಪರಿಹಾರ ಮಾಡಿ ನಂಬಿಕೆ, ಧೈವ ಭಕ್ತಿ ನೆಲೆಯಾಗುವಂತೆ ಸಂಕಲ್ಪ ಮಾಡಿ ಹೊರಟವರಲ್ಲಿ ಮೂರನೇ ಮಾತೃಕೆಯು ಅಲ್ಲಿಂದ ಉತ್ತರಾಭಿಮುಖವಾಗಿ ಹೊರಟು ಹೇಮಾವತಿ ನದಿ ತೀರದ ಈಗಿನ ಹಿರೇಬೆಳಗುಲಿ ಎಂಬ ಗ್ರಾಮದ ಊರಿನ ಗಡಿ ಪ್ರದೇಶಕ್ಕೆ ಬಂದ ನಂತರ ಗ್ರಾಮದ ಒಳಕ್ಕೆ ಪ್ರವೇಶ ಮಾಡಿದ ಕ್ರಮವು ಬಹಳ ಕುತೂಹಲ ಕಾರಿಯಾಗಿರುವ ಬಗ್ಗೆ ವಿವರವಾಗಿ ತಿಳಿಸಲಾಗಿರುತ್ತದೆ.

ಹಿರೇಬೆಳಗುಲಿಗೆ ಮೂರನೇ ಮಾತೃಕೆಯ ಪ್ರವೇಶ : ಹನ್ನೊಂದನೇ ಶತಮಾನದ ಆದಿ ಭಾಗದಲ್ಲಿ ನಮ್ಮ ಗ್ರಾಮಕ್ಕೆ ಯಾವಾಗಲೂ ಕ್ಷಾಮ, ಅಭಾವಗಳು, ಸಾಂಕ್ರಾಮಿಕ ರೋಗಗಳು ಮನುಷ್ಯರನ್ನು ಮತ್ತು ಜಾನುವಾರುಗಳನ್ನು ಬಲಿ ತೆಗೆದುಕೊಳ್ಳುತ್ತಿದ್ದೆವು. ಆವತ್ತಿನ ರೋಗಿಗಳಿಗೆ ಸರಿಯಾದ ಚಿಕಿತ್ಸೆ, ಮದ್ದುಗಳು ಇನ್ನೂ ಆವಿಷ್ಕಾರ ಗೊಂಡಿರ ಲಿಲ್ಲದ ಕಾರಣ ಜನರು ಮೂಢನಂಬಿಕೆಯಿಂದ ಹಾದಿ ಬೀದಿಯ ಮಾರಿ ಮಸಣಿಯರನ್ನು ಕರೆದು ಬೇವಿನ ಸೊಪ್ಪಿನಿಂದ ಮಂತ್ರ ಹಾಕಿಸುವುದು, ಶಾಸ್ತ್ರ ಕೇಳಿ ಪೂಜೆ ಹಾಕಿಸುವುದು ಮಾಡುತ್ತಿದ್ದರಿಂದ ತೊಂದರೆಗಳು, ರೋಗಗಳು ನಿಯಂತ್ರಣಕ್ಕೆ ಬಾರದೆ, ಹೆಚ್ಚಿನ ಸಂಖ್ಯೆಯಲ್ಲಿ ಜನ, ಜಾನುವಾರುಗಳು ಸಾವಿಗೆ ತುತ್ತಾಗುತ್ತಿದ್ದವು. ಇದರಿಂದ ಪ್ರಕೃತಿಯ ಸಮತೋಲನವು ತಪ್ಪುತ್ತಾ ಬರುತ್ತದೆ. ಈ ಪರಿಸ್ಥಿತಿಯಲ್ಲಿ ಜನರಲ್ಲಿ ಭಯ, ಭೀತಿ, ಧಾರಿದ್ರ್ಯ ಹೆಚ್ಚಾಗುತ್ತದೆ. ನೆಮ್ಮದಿಯಾಗಿ ಜೀವನ ಮಾಡಲು ಆಸೆ, ಉತ್ಸಾಹಗಳು ಇರುತ್ತಿರಲಿಲ್ಲವಾದ ಕಾರಣ ಕೆಲವರು ಉದ್ಯೋಗವನ್ನು ಹುಡುಕಿಕೊಂಡು ಬೇರೆ ಕಡೆಗೆ ವಲಸೆ ಹೋಗುತ್ತಿದ್ದರು. ದೈರ್ಯ ಮಾಡಿ ಉಳಿದವರು ಕೂಲಿ ಸಣ್ಣ ಪುಟ್ಟ ವ್ಯಾಪಾರವನ್ನು ಮಾಡಿಕೊಂಡು ಜೀವನವನ್ನು ಸಾಗಿಸುವುದು ಅನಿವಾರ್ಯವಾಗಿದ್ದಿತ್ತು. ಆಗಿನ ಕಾಲದಲ್ಲಿ ಹತ್ತಿರದಲ್ಲಿ ಅಂಗಡಿಗಳಾಗಲಿ, ಪೇಟೆಗಳಾಗಲಿ ಇರುತ್ತಿರಲಿಲ್ಲದ ಕಾರಣ, ತಾವು ಬೆಳೆದ ರಾಗಿ ನವಣೆ, ಹುರುಳಿ, ಮುಂತಾದ ಕೃಷಿ ಉತ್ಪನ್ನಗಳನ್ನು ಅಲ್ಲಲ್ಲಿ ಸೇರುತ್ತಿದ್ದ ವಾರದ ಸಂತೆಗಳಲ್ಲಿ ಸರಕು ವಿನಿಮಯ ಮಾಡಿಕೊಳ್ಳುವುದು ಸಾಗಿಕೊಂಡು ಬರುತ್ತಿತ್ತು.

ಇಂದಿಗೆ ಇಪ್ಪತೊಂದನೆ ತಲೆಮಾರಿನವರಾದ ಈ ಗ್ರಾಮದ ಹಿರಿಯರಾಗಿದ್ದ ಶ್ರೀ ಹಲಗೇಗೌಡ ಎಂಬುವವರು ಇದ್ದವರ ಪೈಕಿ ಧೃಡ ಕಾಯಾಕರು, ದೈವ ಭಕ್ಟರು, ವ್ಯವಹಾರ ಚತುರರು ಆಗಿದ್ದರು. ಆ ಕಾಲದಲ್ಲಿ ಇಲ್ಲಿ ಬೆಳೆಯುತ್ತಿದ್ದ ರಾಗಿ, ಹುರುಳಿ, ನವಣೆ, ಅವರೇ ಮುಂತಾದ ಧಾನ್ಯ ಗಳನ್ನು ವ್ಯಾಪಾರ ಮಾಡಿಕೊಂಡು ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ಮಾಮೂಲಿನಂತೆ ಒಂದು ಗುರುವಾರ ದಿನ, ಇಲ್ಲಿಗೆ ನಾಲ್ಕು ಮೈಲಿ ದೂರದ ಗುಡ್ಡದ ತಪ್ಪಲಿನ ಈಗಿನ ಕುಂಚೇವು ಎಂಬ ಗ್ರಾಮದ ಹತ್ತಿರ ವಿಶಾಲವಾದ ಮೈದಾನದಲ್ಲಿ ಸೇರುತ್ತಿದ್ದ ಸಂತೆಗೆ ಕಾಲುನಡಿಗೆಯಲ್ಲಿ ರಾಗಿ ಚೀಲವನ್ನು ಹೊತ್ತುಕೊಂಡು ಹೋಗುತಿದ್ದರು. ಆ ಕಾಲದಲ್ಲಿ ಎತ್ತಿನ ಗಾಡಿಗಳಾಗಲಿ, ಇತರೆ ವಾಹನಗಳು ಆವಿಷ್ಕಾರ ಗೊಂಡಿರಲಿಲ್ಲವಾದ್ದರಿಂದ ಕಾಲ್ನಡಿಗೆ ಅನಿವಾರ್ಯವಾಗಿತ್ತು. ಆ ದಿನದ ಸಂತೆಯಲ್ಲಿ ಗೌಡರ ಮಾಲು ಪೂರ ಖರ್ಚಾಗದೆ ಉಳಿದು ಬಿಡುತ್ತದೆ. ಉಳಿದಿದ್ದ ರಾಗಿ ಚೀಲವನ್ನು ಹೊತ್ತುಕೊಂಡು ಊರು ಕಡೆಗೆ ವಾಪಸ್ಸು ಬರಲು ಸ್ವಲ್ಪ ತಡವಾಗುತ್ತದೆ. ನಮ್ಮ ಗ್ರಾಮಕ್ಕೆ ಹತ್ತಿರದ ಈಗಿನ ಕೆರೆಕೋಡಿ ಇರುವ ಜಾಗವು ತುಂಬಾ ತಗ್ಗು ಪ್ರದೇಶವಾಗಿತ್ತು. ಆಗ ಕೆರೆ ಇರಲಿಲ್ಲ ಬೆಟ್ಟದ ತಪ್ಪಲಿನಿಂದ ಹುಟ್ಟಿದ ಒಂದು ನೀರಿನ ಹಳ್ಳ ಹರಿಯುತಲಿದ್ದಿತ್ತು. ಈ ಜಾಗಕ್ಕೆ ಹಲಗೆ ಗೌಡರು ರಾಗಿ ಚೀಲವನ್ನು ಕೆಳಕ್ಕೆ ಇಟ್ಟು ಬಹಿರ್ದೆಶೆಗೆ ಹೋಗಿ ಬಂದು ದೇಹಶೌಚ ಮಾಡಿಕೊಂಡು ಹಳ್ಳದ ಸ್ವಲ್ಪ ಮೇಲುಭಾಗಕ್ಕೆ ಹೋಗಿ ಮುಖ ಕೈಕಾಲು ತೊಳೆದು ಕೊಂಡು ನೀರನ್ನು ತಲೆ ಮೇಲಕ್ಕೆ ಪ್ರೋಕ್ಷಣೆ ಮಾಡಿಕೊಂಡು ಮನೆಕಡೆಗೆ ಹೊರಡುವುದು ಇವರ ಮಾಮೂಲಿ ಪದ್ದತಿಯಾಗಿತ್ತು.

ಈ ದಿನವೂ ಅದೇ ನಿಯಮಗಳನ್ನೆಲ್ಲ ಮಾಡಿಕೊಂಡು ಚೀಲವನ್ನು ಹೆಗಲಿಗೇರಿಸಿ ಹೊರಡಲು ಸಿದ್ದರಾದಾಗ ‘ನಾನು ಬರುತ್ತೇನೆ’ ಎಂಬ ಅಶರೀರವಾಣಿಯು ಕೇಳಿ ಬರುತ್ತದೆ. ಹಿಂದಿನ ವಾರಗಳಲ್ಲಿ ಈ ಜಾಗಕ್ಕೆ ಬಂದಾಗ ಈ ಅನುಭವ ಆಗಿರುವುದಿಲ್ಲ; ಈಗ ಗೌಡರು ಸ್ವಲ್ಪ ಧೈರ್ಯಗೆಡುತ್ತಾರೆ. ಸುತ್ತಲೂ ಕತ್ತಲು ಆವರಿಸಿದೆ ನರ ಸಂಚಾರವಿಲ್ಲ ಅಲ್ಲಲ್ಲಿ ಜೀರುಂಡೆಗಳ ಜೂಕರ, ನರಿಗಳು ಗುಳಿಡುವಿಕೆ, ಗೂಬೆಗಳು ಉಲಿಯುವಿಕೆ ಮರಗಳ ಮೇಲೆ ಬಾವುಲಿಗಳ ನಲಿಯುವಿಕೆ. ಇವುಗಳು ಮಾಮೂಲಿನ ಶಕುನಗಳು; ಆದರೆ ಈ ದಿನ ಈ ವಿಸ್ಮಯದಿಂದ ಭಯವುಂಟಾಗುತ್ತದೆ. ಸ್ವಲ್ಪ ಕಣ್ಣು ಕವಿದಂತಾಗುತ್ತದೆ. ಮೈ ಬೆವರುತ್ತದೆ. ಪುನಃ ಅದೇ ಅಶರಿರವಾಣಿಯು ಹಳ್ಳದ ಮೇಲುಭಾಗದಿಂದ ಕೇಳಿ ಬರುತ್ತದೆ.ಇವರ ಪರಿಸ್ಥಿತಿಯನ್ನು ಅರಿತ ಆಗಂತಕರು, ಗೌಡರೇ ಹೆದರ ಬೇಡಿ ನಾನು ಒಬ್ಬ ರಕ್ಷಾದೇವತೆ ಕೊಂಕಣ ದೇಶದಿಂದ ಇಲ್ಲಿಗೆ ಬಂದಿರುತ್ತೇನೆ. ಈ ಮದ್ಯೆ ಎಲ್ಲೂ ಸರಿಯಾದ ನೆಲೆ ಸಿಗದೆ ಹೋದ ಕಾರಣ ಶರಣರು ಮುಟ್ಟಿದ ನಿಮ್ಮ ಗ್ರಾಮವು ಪವಿತ್ರ ತಾಣವೆಂದು ಇಲ್ಲಿಗೆ ಬಂದಿ ರುತ್ತೇನೆ. ಹರಿಯುತ್ತಿರುವ ಹಳ್ಳದ ಬಲಭಾಗದ ನೀರಿನ ದಡದ ಮೇಲೆ ಮೂರು ರೂಪಿತ ಕಪ್ಪು ಶಿಲೆಗಳೊಳಗೆ ಜ್ಯೋತಿ ರೂಪದಲ್ಲಿ ಲೀನಳಾಗಿರುತ್ತೇನೆ. ಬಹಳ ಹೊತ್ತಿನಿಂದ ಇಲ್ಲಿಗೆ ಬಂದು ಕಾದು ಕುಳಿತ್ತಿದ್ದೇನೆ. ಈ ಮುಂಚೆ ಈ ಸ್ಥಳಕ್ಕೆ ಬಂದು ಹೋದ ಯಾವ ದಾರಿಹೋಕನು ನಿಮ್ಮ ಹಾಗೆ ಸಂಧ್ಯಾವಿಧಿಗಳನ್ನು ಮಾಡಲಿಲ್ಲ. ನಿಮ್ಮ ನಿಯಮಗಳಿಂದ ಆಚಾರವಂತರು, ದೈವ ಭಕ್ತರು ಆಗಿರುವುದನ್ನು ಮನಗಂಡು ನಿಮ್ಮ ಮುಖಾಂತರ ಗ್ರಾಮದ ಒಳಗೆ ಪ್ರವೇಶಿಸಿ ನೆಲೆಯಾಗಿರಲು ಆಪೇಕ್ಷೇಪಟ್ಟು ಬಂದಿರುತ್ತೇನೆ.ನಿಮ್ಮ ಗ್ರಾಮವು ಪವಿತ್ರ ನದಿ ಉತ್ತಮ ಪರಿಸರ ಋಷಿ ಮುನಿಗಳ ತಪೋಭೂಮಿಯಾಗಿರುವುದರಿಂದ ಭಕ್ತರ ಸಂಖ್ಯೆ ಹೆಚ್ಚಗಿರಬಹುದು ಹಾಗೂ ಶಾಂತಿ ಪ್ರೀಯರೆಂದು ಊಹಿಸಿರುತ್ತೇನೆ; ಆದ್ದರಿಂದ ಇಲ್ಲಿ ನೆಲಸಿ ಜನ, ಜಾನುವಾರುಗಳ ನೆಮ್ಮದಿಗೆ ಮಾರಕವಾಗಿರುವ ದುಷ್ಟಮಾರಿಗಳನೆಲ್ಲ ಹೊರಕ್ಕೆ ಹಾಕಿ, ದಾರಿದ್ರ್ಯವನ್ನು ದೂರ ಮಾಡಿ ಗ್ರಾಮದಲ್ಲಿ ಸುಖ, ಶಾಂತಿ ನೆಲಸುವಂತೆ ಮಾಡುವ ಸಂಕಲ್ಪದಿಂದ ಬಂದಿರುತ್ತೇನೆ. ನನ್ನ ವಿವಿಧ ಶಕ್ತಿಗಳ ಸಂಕೇತವಾಗಿರುವ ಈ ಮೂರು ಶೀಲಾಮೂರ್ತಿಗಳನ್ನು ಸಂತೆಯಿಂದ ಉಳಿದು ತಂದಿರುವ ರಾಗಿ ಚೀಲದೊಳಕ್ಕೆ ಇಟ್ಟು, ತೆಗೆದು ಕೊಂಡು ಹೋಗಿ ನಿಮ್ಮ ಮನೆಯಲ್ಲಿ ಅದೇ ಚೀಲದ ಒಳಗಡೆ ಇಡಬೇಕು. ಈ ವಿಚಾರ ರಾತ್ರಿ ಇಡೀ ಗುಪ್ತವಾಗಿರಬೇಕು. ನಂತರ ನನ್ನಲಿರುವ ಮೂರು ಶಕ್ತಿಗಳ ಮಹತ್ವವನ್ನು ತಿಳಿಸುತ್ತೇನೆ ಎಂಬ ಅಭಯವಾಣಿ ಕೇಳಿ ಬಂದ ಮೇಲೆ ದೈವ ಪ್ರೇರಣೆಯಾದಂತೆ ಧೈರ್ಯ, ಭಕ್ತಿ ಉಂಟಾಗುತ್ತದೆ.

ಹೊಳೆನರಸೀಪುರದ ಪೌರಾಣಿಕ ಇತಿಹಾಸ ಕೇಳಿ
ನರಸಿಂಹ ಸ್ವಾಮಿ ದೇಗುಲದ ಗೋಪುರ

ಆ ದಿನ ಜೇಷ್ಠ ಮಾಸದ ಶುಕ್ಲಪಕ್ಷ ಷಷ್ಠಿ ದಿನವಾಗಿದ್ದರಿಂದ ಚಂದ್ರನ ಹೊಂಬೆಳಕಿನೊಂದಿಗೆ ಪ್ರಕಾಶಿಸುತ್ತಿದ್ದ ನಕ್ಷತ್ರಗಳ ಕುಡಿಬೆಳಕಿನಲ್ಲಿ ಮಿಣುಕು ಹುಳಗಳ ತುಣುಕು ಬೆಳಕಿನಂತೆ ಹೊಳೆಯುತ್ತಿದ್ದ ಶಿಲಾರೂಪದಲ್ಲಿದ್ದ ದೇವಿಯ ಹತ್ತಿರಕ್ಕೆ ಬಂದು ಭಕ್ತಿಯಿಂದ ನಮಸ್ಕರಿಸಿ ಅಪ್ಪಣೆಯಾಗಿದ್ದಂತೆ ಮೂರು ಪ್ರತಿಮೆಗಳನ್ನು ಮೇಲಕ್ಕೆತ್ತಿ ರಾಗಿ ಚೀಲದಲ್ಲಿ ಇಟ್ಟುಕೊಂಡು ತಮ್ಮ ಮನೆಗೆ ಆಹ್ವಾನಿಸುತ್ತಾರೆ ಮತ್ತು ಬೆಳಕಾಗುವವರೆಗೂ ಈ ವಿಚಾರವನ್ನು ನಿಗೂಢವಾಗಿ ಇಡುತ್ತಾರೆ. ಮನೆಗೆ ಬಂದ ನಂತರ ಶ್ರೀ ಹಲಗೇಗೌಡರಿಗೆ ಭಯ, ಆತಂಕ ಹಾಗೂ ದಿಗುಲು ಉಂಟಾಗುತ್ತದೆ, ಕಾರಣ ದಾರಿಯಲ್ಲಿ ಹೋಗುತ್ತಿದ್ದ ಯಾವನೋ (ಮಾರಿಯನ್ನು ಮನೆಗೆ ಕರೆದುಕೊಂಡು ಬಂದಿರುವುದರಿಂದ ಮುಂದೆ ಏನೋ ಎಂತೋ ?) ಎಂಬ ಸಂಶಯ ಕಾಡುತ್ತದೆ. ರಾತ್ರಿ ಊಟವನ್ನು ಮಾಡಲಿಲ್ಲ ಆವೇಶ ಬಂದವರಂತೆ ಮೌನವಹಿಸುತ್ತಾರೆ ಮಡದಿ ಶಿವಮ್ಮನಿಗೆ ಅನುಮಾನ ಬಂದು ವಿಚಾರಿಸಲಾಗಿ ನನಗೆ ಹಸಿವಿಲ್ಲ ಸಂತೆಯಲ್ಲಿ ಪಾಲಾಹಾರ ಸೇವಿಸಿ ಬಂದಿದ್ದೇನೆ ಈ ದಿನ ಒಂಟಿಯಾಗಿ ಮಲಗಲು ಬಿಡಿ ತುಂಬಾ ಆಯಾಸವಾಗಿದೆ ಎಂದು ಹೇಳಿ ತಾವು ಮಲಗುತ್ತಿದ್ದ ಕೊಣೆಗೆ ಹೋಗಿ ಚಾಪೆಯ ಮೇಲೆ ಮಲಗಿ ಬಿಡುತ್ತಾರೆ; ಆದರೂ ಮನಸ್ಸಿಗೆ ಬಹಳ ದುಗುಡವುಂಟಾಗಿದ್ದರಿಂದ ನಿದ್ರೆ ಹತ್ತಲಿಲ್ಲ ಹಾಗೇ ಯೋಚಿಸುತ್ತಾ ಭಾವನಾಲೂಕದಲ್ಲಿ ಲೀನರಾಗಿದ್ದಾಗ ಸ್ವಲ್ಪ ಜೊಂಪುಬರುತ್ತದೆ. ಆಗ ಶ್ರೀ ದೇವಿಯವರು ಛಾಯಾ ರೂಪದಲ್ಲಿ ಗೌಡರ ಮನಸ್ಸಿನ ಮೇಲೆ ಬಂದು ಹೇಳಿದಂತೆ ನಾನು ಜಗನ್ಮಾತೆ ಪಾರ್ವತಿದೇವಿಯವರ ವರಕನ್ಯೆ ಧೈವ ಸಂಕೇತವಾದ ಆಕಾರಗೊಂಡಿರುವ ಮೂರು ಕಪ್ಪು ಶೀಲಾ ಪ್ರತಿಮೆ ರೂಪದಲ್ಲಿ ಈ ಗ್ರಾಮಕ್ಕೆ ನೆಲಸುವ ಆಕಾಂಕ್ಷಿಯಾಗಿ ಬಂದಿರುತ್ತೇನೆ.ನೀವು ಹಳ್ಳದ ನೀರಿನಲ್ಲಿ ಉತ್ತರಕ್ಕೆ ಮುಖ ಮಾಡಿ ನಿಂತಿದ್ದಾಗ ಮಧ್ಯಭಾಗದಲ್ಲಿ ಹೊಳೆಯುತ್ತಿದ್ದ ದೊಡ್ಡ ಪ್ರತಿಮೆಯೊಳಗೆ ಲೀನಗೊಂಡಿರುವ ನನ್ನ ಮೂಲ ನಾಮಧೇಯ ಶ್ರೀ ಉಡಿಶೀಲಮ್ಮ ನೆಂದು ನನ್ನ ಬಲಭಾಗಕ್ಕೆ ಇದ್ದ ಪ್ರತಿಮೆಯೊಳಗೆ ನನ್ನ ಇಷ್ಟೊಂದು ಶಕ್ತಿ ಮಾರಿಕಾಂಬೆ ಎಂಬುದಾಗಿಯೂ ಮತ್ತು ನನ್ನ ಎಡಭಾಗಕ್ಕೆ ಇರುವ ಪ್ರತಿಮೆಯೊಳಗೆ ಮೂರನೆ ಶಕ್ತಿಯಾಗಿ ಶ್ರೀ ದೇವಿರಮ್ಮನೆಂತಲೂ, ಜ್ಯೋತಿ ರೂಪದಲ್ಲಿ ಲೀನಗೊಂಡಿರುವ; ಈ ಮೂರು ವಿವಿಧ ಶಕ್ತಿಯನ್ನು ಹೊಂದಿದ್ದು ನಿಮ್ಮ ಗ್ರಾಮದಲ್ಲಿ ಗ್ರಾಮದೇವತೆ ಎಂಬ ನಾಮಸ್ಮರಣೆಯಿಂದ ಕರೆಸಿ ಕೊಳ್ಳುತ್ತೇನೆ.

ಹಳ್ಳದ ನೀರಿನ ದಡದಲ್ಲಿ ಯಾವ ರೀತಿಯಲ್ಲಿ ಕುಳಿತ್ತಿದ್ದಾನೋ ಹಾಗೆ ಶ್ರೀ ಉಡಿಶೀಲಮ್ಮ ಎಂಬ ನಾಮೋಂಕಿತದ ದೊಡ್ಡದಾಗಿರುವ ಶೀಲಾ ಪ್ರತಿಮೆಯನ್ನು ಮಧ್ಯಭಾಗಕ್ಕೂ ಗ್ರಾಮದಲ್ಲಿನ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸಲು ಅನುಕೂಲವಾಗಿರುವ ಹಾಗೆ ತಲೆಯ ಭಾಗವು ಮತ್ತವಾಗಿರುವ ನನ್ನ ಎರಡನೇ ಶಕ್ತಿ ಶೀಲಾ ಪ್ರತಿಮೆಯನ್ನು ನನ್ನ ಬಲಭಾಗಕ್ಕೂ ನನ್ನ ಕರುಣೆ ತೀಕ್ಷ್ಣ ದೃಷ್ಠಿಯ ಸಂಕೇತವಾಗಿರುವ ತಲೆಯ ಭಾಗವು ಸ್ವಲ್ಪ ನನ್ನ ಕರುಣೆ, ತೀಕ್ಷ್ಣ ದೃಷ್ಟಿಯ ಸಂಕೇತವಾಗಿ ತಲೆಯ ಭಾಗವು ಸ್ವಲ್ಪ ಮೊನಚಾಗಿರುವ ಮೂರನೇ ಶಕ್ತಿಯ ಶೀಲಾ ಪ್ರತಿಮೆಯನ್ನು ಎಡ ಭಾಗಕ್ಕೂ, ಗ್ರಾಮದ ಮೂರು ರಸ್ತೆಗಳು ಕೂಡುವ ಜಾಗದಲ್ಲಿ ಬೆಳೆದು ನಿಂತಿರುವ ವಿಶಾಲವಾದ ವಟವೃಕ್ಷ (ಆಲದಮರ) ದ ಕೆಳಕ್ಕೆ ನಿಮ್ಮ ಅನುಭವದಲ್ಲಿರುವ ದೇವರ ಬನದಲ್ಲಿ ಪೂರ್ವಾಭಿಮುಖವಾಗಿ ಸ್ಥಾಪನೆ ಮಾಡಬೇಕು. ನಾಳೆಯಿಂದ ಜೇಷ್ಠ ಮಾಸದ ಸಪ್ತಮಿ ತಿಥಿ ರೋಹಿಣಿ ನಕ್ಷತ್ರವಿದ್ದು ಶುದ್ಧ ಶುಕ್ರವಾರ ವಿರುವುದರಿಂದ ಬಹಳ ಶುಭವಾಗಿರುತ್ತದೆ. ಈ ದಿನ ಉದಯ ವೇಳೆಯಲ್ಲಿ ಸೂರ್ಯ ದೇವನ ಹೊಂಗಿರಣಗಳು, ನನ್ನ ಪ್ರತಿಮೆಗಳ ಮೇಲೆ ಬೀಳುವುದರಿಂದ ಇನ್ನೂ ಹೆಚ್ಚಿನ ಯೋಗಶಕ್ತಿಲಭಿಸುತ್ತದೆ ಹಾಗೂ ಸೌಂದರ್ಯ ಪ್ರಭಾವಗಳು ಮೈಗೂಡಿಕೊಳ್ಳುತ್ತದೆ, ಎಂದು ಆದೇಶವಾಗುತ್ತದೆ.

ಈ ಊರನ್ನು ಹಿಂದೆ ನರಸಿಂಹ ನಾಯಕ ಎಂಬ ರಾಜನು ಆಳ್ವಿಕೆ ನಡೆಸಿದ್ದನು. ಗ್ರಾಮ ದೇವತೆ ನರಸಿಂಹ ಸ್ವಾಮಿ ಆಗಿರುವುದರಿಂದ ಮತ್ತು ಹೊಳೆಯ ದಂಡೆಯಲ್ಲಿ ಈ ಪಟ್ಟಣ ಇರುವುದರಿಂದ ಈ ಪಟ್ಟಣಕ್ಕೆ ಹೊಳೆನರಸೀಪುರ ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ. ತಾಲೂಕಿನ ಅತಿ ದೊಡ್ಡ ಗ್ರಾಮ ತಾತನಹಳ್ಳಿ. ಇದು ಹೊಳೆನರಸೀಪುರದಿ೦ದ ಸುಮಾರು ೮ ಕಿಮಿ ದೂರ ಇದೆ. ಇಲ್ಲಿಯ ಮುಖ್ಯ ದೇವಾಲಯ ಶ್ರಿ ಲಕ್ಷ್ಮಿ ತಾತೇಶ್ವರ ದೇವಾಲಯ. ಇಲ್ಲಿ ಪ್ರತಿ ವರುಶ ಯುಗಾದಿ ಕಳೆದ ೯ ನೆಯ ದಿನ ದೇವಿಯ ವೈಭವದ ಜಾತ್ರೆ ನಡೆಯುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಅನ್ನಪೂರ್ಣೆಶ್ವರಿ ದೇವಾಲಯ

ಅನ್ನಪೂರ್ಣೆಶ್ವರಿ ದೇವಾಲಯ, ಕೊಡ್ಯಡ್ಕ

ಯುನೈಟೆಡ್ ಕಿಂಗ್‌ಡಂನ ಪ್ರಧಾನ ಮಂತ್ರಿ ನಮ್ಮ ಭಾರತೀಯ ರಿಷಿ ಸುನಕ್

ಯುನೈಟೆಡ್ ಕಿಂಗ್‌ಡಂನ ಪ್ರಧಾನ ಮಂತ್ರಿ ನಮ್ಮ ಭಾರತೀಯ ರಿಷಿ ಸುನಕ್