in ,

‘ಜಯ ಭಾರತ ಜನನಿಯ ತನುಜಾತೆ’ ಜನವರಿ ೬ ರಂದು ರಾಜ್ಯ ಸರ್ಕಾರ ‘ನಾಡಗೀತೆ’ಯಾಗಿ ಅಧಿಕೃತಗೊಳಿಸಿತು

ಜಯ ಭಾರತ ಜನನಿಯ ತನುಜಾತೆ
ಜಯ ಭಾರತ ಜನನಿಯ ತನುಜಾತೆ

ರಾಷ್ಟ್ರಕವಿ ಕುವೆಂಪು ರಚಿಸಿದ ‘ಜಯ ಭಾರತ ಜನನಿಯ ತನುಜಾತೆ’ ಕವನವು ಅವರ ಕೈಯಲ್ಲೇ ಮುಂದೆ ಸಣ್ಣಪುಟ್ಟ ಮಾರ್ಪಾಡು­ಗಳನ್ನು ಪಡೆಯಿತು. 2004ರ ಜನವರಿ ೬ ರಂದು ರಾಜ್ಯ ಸರ್ಕಾರ ಅದನ್ನು ‘ನಾಡಗೀತೆ’ಯಾಗಿ ಗೌರವಿಸಿ ಅದಕ್ಕೊಂದು ವಿಶೇಷ ಸ್ಥಾನ ನೀಡಿತು.

ರಾಷ್ಟ್ರಕವಿ ಕುವೆಂಪು ವಿರಚಿತ ಜಯ ಭಾರತ ಜನನಿಯ ತನುಜಾತೆ| ಜಯ ಹೇ ಕರ್ನಾಟಕ ಮಾತೆ ಗೀತೆಯನ್ನು ಕರ್ನಾಟಕದ ನಾಡಗೀತೆಯನ್ನಾಗಿ ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಕೆ ವಿ ಪುಟ್ಟಪ್ಪ, ಈ ಪದ್ಯವನ್ನು ೧೯೨೪ರಲ್ಲಿ ‘ಕಿಶೋರಚಂದ್ರವಾಣಿ’ ಎಂಬ ಕಾವ್ಯನಾಮದಡಿ ಬರೆದರು. ೨೦೦೪ರಲ್ಲಿ ಕುವೆಂಪು ಜನ್ಮ ಶತಮಾನೋತ್ಸವದ ಸಮಯದಲ್ಲಿ ಕರ್ನಾಟಕ ಸರ್ಕಾರ ಈ ಗೀತೆಯನ್ನು ಅಧಿಕೃತ ನಾಡ ಗೀತೆಯನ್ನಾಗಿ ಮಾಡಲು ನಿರ್ಧರಿಸಿತು.

‘ಜಯ ಭಾರತ ಜನನಿಯ ತನುಜಾತೆ’ ಜನವರಿ ೬ ರಂದು ರಾಜ್ಯ ಸರ್ಕಾರ ‘ನಾಡಗೀತೆ’ಯಾಗಿ ಅಧಿಕೃತಗೊಳಿಸಿತು
ಕರ್ನಾಟಕ ಮಾತೆ

ಹಲವಾರು ವಿವಾದಗಳು ಹುಟ್ಟಿಕೊಂಡಿತ್ತು :

ಮಧ್ವಾಚಾರ್ಯರ ಹೆಸರು ಸೇರ್ಪಡೆ ಮತ್ತು ಶಂಕರಾಚಾರ್ಯ, ರಾಮಾನುಜಾಚಾರ್ಯ ಮತ್ತು ಬಸವೇಶ್ವರರ ಹೆಸರು ಕೈ ಬಿಡಬೇಕೆಂಬ ವಿಚಾರಗಳ ಕುರಿತು ಧರ್ಮ ಗುರುಗಳು, ಸಾಹಿತಿಗಳು ಮತ್ತು ರಾಜಕಾರಣಿಗಳ ನಡುವೆ ತೀವ್ರ ಚರ್ಚೆ ನಡೆದು ವಿಷಯ ವಿವಾದ ಸ್ವರೂಪ ಪಡೆಯಿತು. ಕೆಲವರು ಈ ಗೀತೆ ನಾಡ ಗೀತೆಯಾಗಲು ಅರ್ಹವಾಗಿಲ್ಲವೆಂದು ಕೂಡ ವಾದಿಸಿದರು. ಪಾಟೀಲ ಪುಟ್ಟಪ್ಪ ಅವರು ಈ ಗೀತೆಯಲ್ಲಿ ಮಹಿಳೆಯರಿಗೆ ಸ್ಥಾನವಿಲ್ಲ ಕಿತ್ತೂರು ಚೆನ್ನಮ್ಮಳ ಹೆಸರು ಬರಬೇಕು ಎಂದು ವಾದಿಸಿದರು. ಮೂಲ ಕೃತಿಯ ೨೩ ಸಾಲುಗಳು ಮಾತ್ರ ನಾಡ ಗೀತೆಯಲ್ಲಿರುವುದು ಎಂದಾಗಿತ್ತು ಆದರೆ ಕೊನೆಯಲ್ಲಿ ಕರ್ನಾಟಕ ಸರ್ಕಾರ ಗೀತೆಗೆ ಯಾವುದೆ ಬದಲಾವಣೆ ಮಾಡದೆ ಕವಿ ಬರೆದ ಮೂಲ ಕೃತಿಯನ್ನು ಹಾಗೆ ಉಳಿಸಿಕೊಂಡಿತು.

ಕುವೆಂಪು ವಿರಚಿತ ಗೀತೆಗೆ ಮೊಟ್ಟ ಮೊದಲ ಬಾರಿಗೆ ಮೈಸೂರು ಅನಂತಸ್ವಾಮಿ ಅವರು ರಾಗ ಸಂಯೋಜನೆ ಮಾಡಿದರು. ನಂತರದ ದಿನಗಳಲ್ಲಿ ಸಿ. ಅಶ್ವಥ್ ಅವರ ಸಂಯೋಜನೆ ಜನಪ್ರಿಯತೆ ಗಳಿಸಿತು. ಯಾರ ರಾಗ ಸಂಯೋಜನೆ ಬಳಸಬೇಕು ಎಂಬುದರ ಬಗ್ಗೆ ಕೂಡಾ ವಿವಾದ ಉಂಟಾಗಿತ್ತು. ಪ್ರೊ. ಶಿವರುದ್ರಪ್ಪ ಅವರ ಸಮಿತಿ ಮೈಸೂರು ಅನಂತಸ್ವಾಮಿ ಅವರ ಸ್ವರ ಸಂಯೋಜನೆಯನ್ನು ಶಿಫಾರಸು ಮಾಡಿತ್ತು.

1956ರಲ್ಲಿ ರಾಜ್ಯ ಏಕೀಕರಣಗೊಂಡರೂ ಕರ್ನಾಟಕ ಸರ್ಕಾರ ಕುವೆಂಪು ಅವರ ಜನ್ಮಶತಮಾನೋತ್ಸವದ ನೆನಪಿಗಾಗಿ 2003ರಲ್ಲಿ ಅವರ ಕವನ ‘ಜಯ ಭಾರತ ಜನನಿಯ ತನುಜಾತೆ’ಯನ್ನು ‘ನಾಡಗೀತೆ’ ಎಂದು ಘೋಷಿಸಿತು. ಆ ಕವನದ ಏಳು ಪದ್ಯ ಖಂಡಗಳಲ್ಲಿ ನಾಲ್ಕು ಪದ್ಯ ಖಂಡಗಳನ್ನು ಉಳಿಸಿಕೊಂಡಿತು. ‘ಜಯ ಹೇ ಕರ್ನಾಟಕ ಮಾತೆ…’, ‘ಜನನಿಯ ಜೋಗುಳ ವೇದದ ಘೋಷ…’, ‘ಸರ್ವ ಜನಾಂಗದ ಶಾಂತಿಯ ತೋಟ…’, ‘ಕನ್ನಡ ನುಡಿ ಕುಣಿದಾಡುವ ಗೇಹ…’ ಎಂದು ಆರಂಭವಾಗುತ್ತವೆ ಆ ಪದ್ಯ ಭಾಗಗಳು.

ಇಡೀ ಕವನವನ್ನು ನಾಡಗೀತೆ­ಯಾಗಿ ಘೋಷಿಸಬೇಕು ಎಂದು ಕೆಲವರು ಒತ್ತಡ ಹಾಕಿದ್ದರಿಂದ 2004­ರಲ್ಲಿ ಇಡೀ ಕವನವನ್ನು ‘ನಾಡಗೀತೆ’ಯಾಗಿ ಘೋಷಿಸಲಾಯಿತು.

‘ಜಯ ಭಾರತ ಜನನಿಯ ತನುಜಾತೆ’ ಜನವರಿ ೬ ರಂದು ರಾಜ್ಯ ಸರ್ಕಾರ ‘ನಾಡಗೀತೆ’ಯಾಗಿ ಅಧಿಕೃತಗೊಳಿಸಿತು
ಶಾಲೆಗಳಲ್ಲಿ ದೈನಂದಿನ ಚಟುವಟಿಕೆಗಳ ಮುನ್ನ ರಾಷ್ಟ್ರಗೀತೆ ಕಡ್ಡಾಯವಾಯಿತು

ನಾಡ­ಗೀತೆಯನ್ನು ಹಾಡು­ವಾಗ ಈ ಕೆಳಕಂಡ ಮಾರ್ಗ­ಸೂಚಿಗಳನ್ನು ಅಳವಡಿಸಿ­ಕೊಳ್ಳಬೇಕು :

*ಜಯಭಾರತ ಜನನಿಯ ತನುಜಾತೆ ಕವನದ ಅನುಬಂಧ-–೧ರಲ್ಲಿ ವಿವರಿಸಿದ ಆಯ್ದ ಭಾಗವನ್ನು ನಾಡಗೀತೆಯಾಗಿ ಪರಿ­ಗಣಿಸಿ ಅಳವಡಿಸಿಕೊಳ್ಳುವುದು.

*ಈ ಹಾಡಿನ ಪ್ರಾರಂಭದಿಂದ ಗೀತೆಯು ಮುಗಿಯುವ ತನಕ ಎದ್ದುನಿಂತು ಗೌರವವನ್ನು ಸಲ್ಲಿಸುವದು.

*ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟು­ವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಎಲ್ಲಾ ಸಾಂಸ್ಕೃ­ತಿಕ, ಸಾಹಿತ್ಯಕ ಹಾಗೂ ಇತರೆ ಅಧಿಕೃತ ಕಾರ್ಯಕ್ರಮ­ಗಳಲ್ಲಿ ಹಾಡುವದು’.

*೧೯೮೮-–೮೯ ರ ಸಾಲಿನಲ್ಲಿ ರಾಜ್ಯದ ಎಲ್ಲ ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆಯಾಗಿ ನಾಡಗೀತೆಯನ್ನು ಕಡ್ಡಾಯವಾಗಿ ಹಾಡಿ­ಸುವ ಬಗೆಗೆ ಕರ್ನಾಟಕ ಸರ್ಕಾರವು ಆಯು­ಕ್ತರ ಕಚೇರಿಗೆ ಆದೇಶಿಸಿತು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಪರಶುರಾಮರು ತನ್ನ ಕೊಡಲಿಯನ್ನು ತೊಳೆದ ಸ್ಥಳ ಪರಶುರಾಮ ಕುಂಡ

ಪರಶುರಾಮರು ತನ್ನ ಕೊಡಲಿಯನ್ನು ತೊಳೆದ ಸ್ಥಳ ಪರಶುರಾಮ ಕುಂಡ ಎಂದು ಪ್ರಸಿದ್ಧಿ ಪಡೆದಿದೆ

ಬೇಲದ ಹಣ್ಣಿನ ಆರೋಗ್ಯ ಉಪಯೋಗ

ಬೇಲದ ಹಣ್ಣಿನ ಆರೋಗ್ಯ ಉಪಯೋಗ