ಐತಿಹಾಸಿಕ ಸ್ಥಳ, ಸ್ಮಾರಕಗಳು, ದೇವಾಲಯಗಳು ಮತ್ತು ಧಾರ್ಮಿಕ ಸ್ಥಳಗಳನ್ನು ಒಳಗೊಂಡಂತೆ ಹಲವಾರು ಪ್ರವಾಸಿ ಆಕರ್ಷಣೆಗಳಿಗೆ ಕರ್ನಾಟಕ ಹೆಸರುವಾಸಿಯಾಗಿದೆ. ರಾಜ್ಯವು ಪ್ರವಾಸೋದ್ಯಮಕ್ಕಾಗಿ ಭಾರತದಲ್ಲಿ ಐದನೇ ಸ್ಥಾನದಲ್ಲಿದೆ ಮತ್ತು ದೇಶಕ್ಕೆ 3600 ಸಂರಕ್ಷಿತ ಸ್ಮಾರಕಗಳನ್ನು ಕೊಡುಗೆಯಾಗಿ ನೀಡಿದೆ,
ಕರ್ನಾಟಕವು ವಸಾಹತು ಅವಧಿಯಲ್ಲಿ ಹಲವಾರು ಮಹತ್ವದ ಘಟನೆಗಳನ್ನು ಕಂಡಿದೆ ಅಲ್ಲದೆ ವಿದೇಶೀ ಸಂಸ್ಕೃತಿಗಳೊಂದಿಗೆ ಸಹಬಾಳ್ವೆ ನಡೆಸಿರುವ ಇದು ಕಾಲಾನಂತರದಲ್ಲಿ ನಮಗೆ ಈಗ ತಿಳಿದಿರುವ ಒಂದು ಉತ್ತಮ ರಾಜ್ಯವಾಗಿ ಮಾರ್ಪಟ್ಟಿತು. ಇತಿಹಾಸದಲ್ಲಿ ಕರ್ನಾಟಕ ರಾಜ್ಯವು ಐತಿಹಾಸಿಕ ಸ್ಮಾರಕಗಳ ಸ್ವರ್ಗ ಎಂದರೆ ತಪ್ಪಾಗಲಾರದು.
ಹಲವಾರು ಕೋಟೆಗಳು, ದೇವಾಲಯಗಳು, ಬರಹಗಳು, ಸ್ಮಾರಕಗಳು ಮತ್ತು ಸಾಂಸ್ಕೃತಿಕ ಕಲೆಗಳು ಇತ್ಯಾದಿಗಳು ಕರ್ನಾಟಕದ ಇತಿಹಾಸದ ಮುಡಿಯಲ್ಲಿ ಕಾಣಸಿಗುತ್ತದೆ. ಇತಿಹಾಸದ ಬಗ್ಗೆ ತಿಳಿಯುವ ಕನಸುಳ್ಳ ಪ್ರತಿಯೊಬ್ಬ ಇತಿಹಾಸಕಾರನಿಗೂ ಕರ್ನಾಟಕ್ಕೆ ಭೇಟಿ ಕೊಡುವುದು ಸ್ವರ್ಗವೇ ಸರಿ.
ಊಟಿ
ನೀಲಗಿರಿ ಬೆಟ್ಟಗಳ ನಡುವೆ ನೆಲೆಸಿರುವ ಊಟಿಯನ್ನು ‘ಉದಕಮಂಡಲಂ’ ಎಂದೂ ಕೂಡ ಕರೆಯುತ್ತಾರೆ. ಇದು ತಮಿಳುನಾಡು ರಾಜ್ಯದಲ್ಲಿರುವ ಒಂದು ಸುಂದರವಾದ ಗಿರಿಧಾಮವಾಗಿದೆ. ಭಾರತದ ಪ್ರವಾಸೋದ್ಯಮದಲ್ಲಿ ಊಟಿ ತನ್ನದೇ ಆದ ಸ್ಥಾನವನ್ನು ಮುಡಿಗೇರಿಸಿಕೊಂಡಿದೆ.
ಬೆಟ್ಟಗಳ ರಾಣಿಯು ಒಂದು ಸುಂದರವಾದ ವಿಹಾರ ಸ್ಥಳವಾಗಿದೆ. ಇಲ್ಲಿನ ಪ್ರಶಾಂತವಾದ ವಾತಾವರಣ, ಚಹಾ ತೋಟಗಳು, ಜಲಪಾತಗಳು, ಆಕರ್ಷಕ ವಸಾಹತುಶಾಹಿ ವಾಸ್ತುಶಿಲ್ಪಗಳು ಪರಿಪೂರ್ಣವಾದ ವಿಶ್ರಾಂತಿಗೆ ಇದು ಸೂಕ್ತವಾದ ಸ್ಥಳವಾಗಿದೆ.
ಮೈಸೂರು ಅರಮನೆ-ಮೈಸೂರು
ಮೈಸೂರಿನ ಹೃದಯಭಾಗದಲ್ಲಿ ಚಾಮುಂಡಿ ಬೆಟ್ಟಕ್ಕೆ ಪೂರ್ವಾಭಿಮುಖವಾಗಿ ಈ ರಾಜಮನೆತನದ ಮೈಸೂರು ಅರಮನೆ ಇದೆ. ಇದು ಒಡೆಯರ್ ರಾಜವಂಶದ ಅಧಿಕೃತ ನಿವಾಸ ಹಾಗೂ ಕರ್ನಾಟಕದ ಅತ್ಯಂತ ಪ್ರಸಿದ್ದ ಐತಿಹಾಸಿಕ ಸ್ಮಾರಕಗಳಲ್ಲಿ ಒಂದಾಗಿದೆ. ಇದಕ್ಕೆ ಪ್ರತೀವರ್ಷ ಸುಮಾರು 8 ಮಿಲಿಯನ್ ಪ್ರಯಾಣಿಕರು ಭೇಟಿ ನೀಡುತ್ತಾರೆ.
ಹೊಯ್ಸಳೇಶ್ವರ
ಹೊಯ್ಸಳೇಶ್ವರ ದೇವಸ್ಥಾನವು ಹಿಂದೂ ದೇವರಾದ ಶಿವನಿಗೆ ಸಮರ್ಪಿತವಾಗಿದೆ. ಇದು ಹೊರ ಗೋಡೆಯ ಉದ್ದಕ್ಕೂ ಚಲಿಸುವ ಶಿಲ್ಪಗಳಿಗೆ ಹೆಸರುವಾಸಿಯಾಗಿದೆ. ಹೊಯ್ಸಳೇಶ್ವರ ದೇವಸ್ಥಾನ ಮತ್ತು ಕೇದಾರೇಶ್ವರ ದೇವಸ್ಥಾನ ಸಂಕೀರ್ಣವು ಕರ್ನಾಟಕದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.
ಬೀದರ್ ಕೋಟೆ- ಬೀದರ್
ಕರ್ನಾಟಕದ ಪ್ರಾಚೀನ ರಾಜವಂಶದ ಅಧಿಕೃತ ವಾಸ್ತು ಶಿಲ್ಪದ ಭವ್ಯತೆಯನ್ನು ಹೊಂದಿರುವ ಐತಿಹಾಸಿಕ ಹೆಗ್ಗುರುತಾಗಿರುವ ಹಾಗೂ ದಕ್ಷಿಣಭಾರತದ ರಾಜವಂಶಗಳ ಹೆಮ್ಮೆಯ ಪ್ರತಿರೂಪಗಳಲ್ಲಿ ಬೀದರ್ ಕೋಟೆಯೂ ಒಂದು. ಈ ಕೋಟೆಯನ್ನು ಈಗ ಭಾರತದ ಒಂದು ಅಪರೂಪದ ಸ್ಥಳವೆಂದು ಪರಿಗಣಿಸಲಾಗಿದೆ. ಬೀದರ್ ಕೋಟೆಯು ತನ್ನ ಮೂಲರೂಪವನ್ನು ಕಳೆದುಕೊಂಡಿದ್ದರೂ ಕೂಡ ಈ ಭವ್ಯವಾದ ಕೋಟೆಯು ಅನೇಕ ರೋಮಾಂಚಕ ಇತಿಹಾಸವನ್ನು ಹೊಂದಿದೆ. ಅಲ್ಲದೆ ಕಾಕತೀಯರು, ಚಾಲುಕ್ಯರು, ಸತ್ವವಾಹನರು, ಮತ್ತು ಯಾದವರು ಸೇರಿದಂತೆ ಹಲವಾರು ರಾಜವಂಶಗಳ ಏಳು ಬೀಳುಗಳನ್ನು ಕಂಡಿದೆ ಇವರ ಪತನದ ನಂತರ ಇದು ಮೊಘಲರು ಮತ್ತು ನಿಜಾಮರಿಂದ ಆಳಲ್ಪಟ್ಟಿತು.
ಬಸವಕಲ್ಯಾಣ ಕೋಟೆ
ಬೀದರ್ ಜಿಲ್ಲೆಯಲ್ಲಿರುವ ಬಸವಕಲ್ಯಾಣ ಕೋಟೆಯು ಏಳು ದ್ವಾರಗಳು ಮತ್ತು ಸ್ಮಾರಕಗಳನ್ನು ಹೊಂದಿದೆ ಮತ್ತು ಬಸವಣ್ಣನವರ ಕರ್ಮಭೂಮಿ ಎಂದೂ ಸಹ ಪ್ರಸಿದ್ಧವಾಗಿದೆ. ಬಸವಕಲ್ಯಾಣ ಕೆಲವು ಇಸ್ಲಾಮಿಕ್ ಸ್ಮಾರಕಗಳಾದ ಮೋತಿ ಮಹಲ್, ಹೈದರಿ ಮಹಲ್, ಪೀರನ್ ದುರ್ಗಾ ಮತ್ತು ಈ ಕೋಟೆಯ ಗೋಡೆಗಳ ಮೇಲೆ ಜೈನ ಚಿತ್ರಗಳನ್ನು ಮತ್ತು ನಾರಾಯಣಪುರದಲ್ಲಿ ಶಿವವ ದೇವಸ್ಥಾನವನ್ನೂ ಸಹ ಹೊಂದಿದೆ.
ಬಾದಾಮಿ – ಬಾಗಲಕೋಟೆ
ಬಾದಾಮಿಯು ಗುಹಾಂತರ ದೇವಾಲಯಗಳ ಸಂಕೀರ್ಣವಾಗಿದ್ದುಇದು ನೋಡುಗರ ಗಮನ ಸೆಳೆಯುತ್ತದೆ. ಇಲ್ಲಿ ಹಿಂದುಗಳ 4 ಗುಹಾಂತಾರ ದೇವಾಲಯಗಳು ಇವೆ. ಇದನ್ನು 7ನೇ ಶತಮಾನದ ಹಿಂದಿನ ಬಾದಾಮಿ ಚಾಲುಕ್ಯ ವಾಸ್ತುಶಿಲ್ಪ ಶೈಲಿಯ ಒಂದು ಅದ್ಭುತ ಮಾದರಿಯೆಂದು ಪರಿಗಣಿಸಲಾಗಿದೆ. ಈ ಎಲ್ಲಾ ನಾಲ್ಕು ದೇವಾಲಯಗಳಲ್ಲಿಯೂ ವಿಭಿನ್ನ ಮಾದರಿಯ ವಿಷಯಗಳು ಮತ್ತು ಹಿಂದುಗಳ ದೇವತೆಗಳ ಶಿಲ್ಪಗಳನ್ನು ಹೊಂದಿದ್ದು ಅನ್ವೇಷಣೆ ಮಾಡಬಯಸುವವರಿಗೆ ಬೇಕಾದಷ್ಟು ಸಂಗತಿಗಳನ್ನು ಇದು ಒದಗಿಸುತ್ತದೆ.
ಲಕ್ಕುಂಡಿ ದೇವಸ್ಥಾನಗಳು
ಗದಗ ಜಿಲ್ಲೆಯ ಲಕ್ಕುಂಡಿಯು ಸಂಪೂರ್ಣವಾಗಿ ಪಾಳುಬಿದ್ದ ದೇವಾಲಯಗಳಿಂದ ಕೂಡಿದೆ. ಲಕುಂಡಿ ಗ್ರಾಮವು ಪಾಳುಬಿದ್ದ ದೇವಸ್ಥಾನಗಳಿಂದ ತುಂಬಿಹೋಗಿದೆ, ಇದು ಹಾಳು ಬಾವಿಗಳು, 50 ದೇವಾಲಯಗಳು ಮತ್ತು ಶಾಸನಗಳುಳ್ಳ ಪ್ರಾಚೀನ ಆಸಕ್ತಿಯ ಸ್ಥಳವಾಗಿದೆ. ಹಂಪಿಗೆ ಹೋಗುವ ದಾರಿಯಲ್ಲಿ ಸಣ್ಣ ಗ್ರಾಮವು ದೇವಸ್ಥಾನದ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ.
ಹಂಪಿ – ಬಳ್ಳಾರಿ
ಪುರಾತತ್ವದ ಅನೇಕ ವಿಷಯಗಳನ್ನು ಒಳಗೊಂಡಿರುವ ಹಂಪೆಯನ್ನು ಅನ್ವೇಷಿಸಲು ಒಂದು ದಿನ ಸಾಕಾಗದು. ಇಲ್ಲಿಯ ಸ್ಮಾರಕಗಳನ್ನು ಹಿಂದೂ, ಮುಸಲ್ಮಾನರು ಮತ್ತು ಜೈನ ಎಂದು ವಿಂಗಡಿಸಲಾಗಿದೆ. ಇವುಗಳಲ್ಲಿ ದೇವಾಲಯಗಳು, ಬೆಟ್ಟ ಗೋಪುರಗಳು, ಆನೆಯ ಆಶ್ರಯಗಳು, ಮಸೀದಿಗಳು ಮತ್ತು ಸಮಾಧಿಗಳು, ಸ್ಮಾರಕಗಳು, ನೀರಿನ ಸಂಗ್ರಹಗಳು, ಕಾರಂಜಿಗಳು ಮತ್ತು ಸಮುದಾಯ ಅಡುಗೆಮನೆಗಳು ಇತ್ಯಾದಿಗಳನ್ನು ಒಳಗೊಂಡಿದೆ.
ಪಟ್ಟದಕಲ್- ಬಾಗಲಕೋಟೆ
ಪಟ್ಟದಕಲ್ ‘ ಮಾಣಿಕ್ಯಗಳ ನಗರ’ ಎಂಬ ಹೆಮ್ಮೆಗೆ ಪಾತ್ರವಾಗಿರುವ ಕರ್ನಾಟಕದ ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿದೆ. ಅಲ್ಲದೆ ಚಾಲುಕ್ಯ ಸ್ಮಾರಕಗಳಿಗೆ ಸಾಕ್ಷಿಯಾಗಿರುವ ಈ ಸ್ಥಳವು ವಿಶ್ವ ಪರಂಪರೆಯ ತಾಣವೂ ಹೌದು. ಈ ಸ್ಥಳವು ಮಲಪ್ರಭಾ ನದಿ ದಡದಲ್ಲಿರುವ ಒಂದು ಹಳ್ಳಿಯಾಗಿದ್ದು ಇಲ್ಲಿ ಹತ್ತು ದೇವಾಲಯಗಳ ನೆಲೆಯಾಗಿದೆ. ಮತ್ತು ಪ್ರತಿಯೊಂದೂ ತನ್ನದೇ ಆದ ಭವ್ಯತೆಯನ್ನು ಪ್ರದರ್ಶಿಸುತ್ತದೆ.
ಮೇಲುಕೋಟೆ- ಮಂಡ್ಯ
ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿರುವ ಮೇಲುಕೋಟೆಯು ಒಂದು ಪವಿತ್ರ ಸ್ಥಳವಾಗಿದೆ. ಯದುಗಿರಿ ಕಲ್ಲಿನ ಬೆಟ್ಟಗಳ ಮೇಲೆ ಇರುವ ಮೇಲುಕೋಟೆಯಲ್ಲಿ ಚೆಲುವನಾರಾಯಣ ದೇವಾಲಯವಿದೆ. ಈ ಪಟ್ಟಣವು ವಿವಿಧ ಕೊಳಗಳು, ಮತ್ತು ದೇವಾಲಯಗಳ ನೆಲೆಯಾಗಿದೆ. ಅಲ್ಲದೆ ಇಲ್ಲಿ ಸಂಸ್ಕೃತ ಅಕಾಡಮಿಯನ್ನು ಹೊಂದಿದ್ದು, ಇಲ್ಲಿ ಸಾವಿರಾರು ಸಂಸ್ಕೃತ ಮತ್ತು ವೈದಿಕ ಹಸ್ತಪ್ರತಿಗಳ ಸಂಗ್ರಹವನ್ನು ಕಾಣಬಹುದಾಗಿದೆ.
ಬಿಜಾಪುರ ಕೋಟೆ- ಬಿಜಾಪುರ
ಬಿಜಾಪುರವು ದಕ್ಷಿಣ ಭಾರತದ ಆಗ್ರಾವೆಂದು ಪ್ರಸಿದ್ದಿ ಪಡೆದಿದ್ದು, ಇದು ಕರ್ನಾಟಕದ ಹೆಸರುವಾಸಿಯಾಗಿರುವ ಐತಿಹಾಸಿಕ ಸ್ಥಳಗಳ ನೆಲೆಗಳಲ್ಲಿ ಒಂದೆನಿಸಿದೆ. ಅವುಗಳಲ್ಲಿ ಕರ್ನಾಟಕದ ಬಿಜಾಪುರ ನಗರದಲ್ಲಿ ಭವ್ಯವಾಗಿ ತಲೆ ಎತ್ತಿ ನಿಂತಿರುವ ಬಿಜಾಪುರ ಕೋಟೆಯೂ ಒಂದು. ಇದನ್ನು 1566 ರ ಆದಿಲ್ ಷಾ ಆಡಳಿತದ ಅವಧಿಯಲ್ಲಿ ನಿರ್ಮಿಸಲಾಯಿತು. ಈ ಕೋಟೆಯು ವಿಶಾಲವಾದ ವಿಸ್ತಾರದಲ್ಲಿ ಹರಡಿದೆ ಮತ್ತು 50 ಅಡಿ ದೊಡ್ಡ ಕಂದಕದೊಳಗೆ ಸುತ್ತುವರೆದಿದೆ.
ಬೆಳವಾಡಿ- ಚಿಕ್ಕಮಗಳೂರು
ಬೆಳವಾಡಿಯು ಕರ್ನಾಟಕದ ಚಿಕ್ಕಮಗಳೂರಿನಲ್ಲಿದೆ. ಸಣ್ಣ ಪಟ್ಟಣವಾದ ಈ ಸ್ಥಳವು ಅನೇಕ ಮನಮೋಹಕ ದೇವಾಲಯಗಳನ್ನು ಹೊಂದಿದೆ. ಬೆಳವಾಡಿಯ ಆಸುಪಾಸಿನಲ್ಲಿರುವ ಎಲ್ಲಾ ದೇವಾಲಯಗಳು ಹೊಯ್ಸಳ ವಾಸ್ತುಶಿಲ್ಪದಲ್ಲಿ ನಿರ್ಮಿಸಲ್ಪಟ್ಟಿವೆ ಮತ್ತು ಚಕ್ರವ್ಯೂಹ ಕೆತ್ತನೆಗಳನ್ನು ಹೊಂದಿವೆ. ವಿಷ್ಣುವಿಗೆ ಅರ್ಪಿತವಾದ ವೀರನಾರಾಯಣ ದೇವಾಲಯವು ಇಲ್ಲಿನ ಅತ್ಯಂತ ಪ್ರಸಿದ್ಧ ರಚನೆಯಾಗಿದೆ. ಈ ದೇವಾಲಯದ ಒಂದು ಕುತೂಹಲಕಾರಿ ಸಂಗತಿಯೆಂದರೆ, ಪ್ರತೀ ವರ್ಷ ಮಾರ್ಚ್ 23ರಂದು ಸೂರ್ಯನ ಕಿರಣಗಳು ನೇರವಾಗಿ ದೇವಾಲಯದ ಗರ್ಭ ಗುಡಿಯನ್ನು ಪ್ರವೇಶಿಸುತ್ತದೆ.
ಧನ್ಯವಾದಗಳು.
GIPHY App Key not set. Please check settings