in ,

ಪೇರಳೆ ಹಣ್ಣು ಇದರ ಮಹತ್ವ ಏನಿದೆ?

ಪೇರಳೆ ಹಣ್ಣು
ಪೇರಳೆ ಹಣ್ಣು

ಪೇರಳೆ ಅಥವಾ ಸೀಬೆಹಣ್ಣು ತುಂಬಾ ಅಗ್ಗ ಹಾಗೂ ಸುಲಭವಾಗಿ ಸಿಗುವಂತಹ ಹಣ್ಣು. ಇದರಲ್ಲಿ ಇರುವಂತಹ ವಿಟಮಿನ್ ಗಳು ಹಾಗೂ ಖನಿಜಾಂಶಗಳು ನಮ್ಮ ಆರೋಗ್ಯಕ್ಕೆ ತುಂಬಾ ಲಾಭಕಾರಿ.ಸಾಮಾನ್ಯವಾಗಿ ಪೇರಳೆ ಹಣ್ಣು ಪೌಷ್ಟಿಕ ಹಣ್ಣಾಗಿದ್ದು ಇದು ಕಡಿಮೆ ಕ್ಯಾಲೊರಿ ಮತ್ತು ಫೈಬರ್ ಅಂಶ ಅಧಿಕವಾಗಿರುವ ಹಣ್ಣಾಗಿದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜಕಾರಿಯೂ ಹೌದು. ಪೇರಳೆ ಹಣ್ಣು ಮಾತ್ರವಲ್ಲ ಅದರ ಎಲೆಗಳೂ ಸಹ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. ಪೇರಳೆ ಎಲೆಗಳು ಹೃದಯ, ಜೀರ್ಣಕ್ರಿಯೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಆದರೆ ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಹಣ್ಣನ್ನು ಸೇವಿಸದಿರುವುದು ಉತ್ತಮ.

ಒಂದು ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್ ‘ಸಿ’ ಯ ನಾಲ್ಕು ಪಟ್ಟು ಮತ್ತು ಅನಾನಸು ಹಣ್ಣಿನಲ್ಲಿರುವ ನಾರು ಹಾಗೂ ಪ್ರೊಟೀನ್‍ನ ಮೂರು ಪಟ್ಟು ಹೆಚ್ಚು ಅಂಶ ಪೇರಳೆಯಲ್ಲಿ ಇರುತ್ತದೆ ಹಾಗೂ ಬಾಳೆಹಣ್ಣಿನಲ್ಲಿರುವ ಪೊಟ್ಯಾಸಿಯಂಗಿಂತ ಎರಡು ಪಟ್ಟು ಹೆಚ್ಚು ಪೇರಳೆಯಲ್ಲಿ ಇರುತ್ತದೆ.

ಪೇರಳೆ ಹಣ್ಣು ಇದರ ಮಹತ್ವ ಏನಿದೆ?
ಪೇರಳೆ ಹಣ್ಣು

ಹೆಚ್ಚಿನ ಜನರು ಪೇರಳೆ ಹಣ್ಣು ತಿಂದಲ್ಲಿ ಶೀತ ಆಗುತ್ತದೆ ಎಂಬ ತಪ್ಪು ಕಲ್ಪನೆ ಹೊಂದಿದ್ದಾರೆ. ಅತೀ ಹೆಚ್ಚು ವಿಟಮಿನ್, ನಾರು ಅಂಶ ಹೊಂದಿರುವ ಈ ಹಣ್ಣನ್ನು ಪರಿಪೂರ್ಣ ಹಣ್ಣು ಎಂದೂ ಪರಿಗಣಿಸಲಾಗಿದೆ. ಅನಾನಸು ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುತ್ತಿದ್ದು, ಪೇರಳೆ ಹಣ್ಣನ್ನು ಹಣ್ಣುಗಳ ರಾಣಿ ಎಂದೂ ಸಂಭೋಧಿಸಲಾಗುತ್ತದೆ. ಪೇರಳೆ ಹಣ್ಣಿನಲ್ಲಿರುವ ಹೇರಳ ವಿಟಮಿನ್ ‘ಸಿ’ ಮತ್ತು ನಾರುಗಳು ಅತೀ ಹೆಚ್ಚು ಆಂಟಿ ಆಕ್ಸಿಡೆಂಟ್ ಗುಣ ಹೊಂದಿರುವ ಕಾರಣದಿಂದ ಕ್ಯಾನ್ಸರ್ ಮುಂತಾದ ರೋಗಗಳಿಂದಲೂ ರಕ್ಷಿಸುತ್ತದೆ.

ಪೇರಳೆ ಹಣ್ಣಿನಲ್ಲಿ ಇರವಂತಹ ಮೆಗ್ನಿಶಿಯಂ ಅಂಶವು ದೇಹದಲ್ಲಿನ ನರ ಮತ್ತು ಸ್ನಾಯುಗಳಿಗೆ ಆರಾಮ ನೀಡುವುದು. ಇದು ಒತ್ತಡ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಮೆಗ್ನಿಶಿಯಂ ಒತ್ತಡವನ್ನು ನಿವಾರಣೆ ಮಾಡುವುದು ಎಂದು ಅಧ್ಯಯನಗಳು ಕೂಡ ಕಂಡುಕೊಂಡಿವೆ.

ಪೇರಲೆ ಹಣ್ಣಿನಲ್ಲಿ ನಾರಿನಾಂಶ ಹೆಚ್ಚಾಗಿರುವುದರಿಂದ ಮಲಬದ್ಧತೆಯನ್ನು ನಿವಾರಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಆದರೆ ಅತಿಯಾದ ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆಗೆ ಹಾನಿಯುಂಟಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಅದರಲ್ಲಿಯೂ ಮುಖ್ಯವಾಗಿ ಕರುಳಿನ ಸಿಂಡ್ರೋಮ್​ನಿಂದ ಬಳಲುತ್ತಿದ್ದರೆ ಮಿತವಾಗಿ ಪೇರಲ ಹಣ್ಣು ಸೇವಿಸುವುದು ಉತ್ತಮ.

ಥೈರಾಯ್ಡ್ ಆರೋಗ್ಯ ಕಾಪಾಡಲು ಪ್ರಮುಖವಾಗಿ ಬೇಕಾಗಿರುವ ಅಂಶ ತಾಮ್ರ. ಥೈರಾಯ್ಡ್ ಹಾರ್ಮೋನ್ ಮತ್ತು ಅಂಗಾಂಗಗಳ ಕಾರ್ಯವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ತಾಮ್ರವು ಹಾರ್ಮೋನ್ ಉತ್ಪತ್ತಿ ಮತ್ತು ಹೀರಿಕೊಳ್ಳುವಿಕೆ ನಿಯಂತ್ರಿಸಲು ನೆರವಾಗುವುದು. ಇದು ಥೈರಾಯ್ಡ್ ಕಾರ್ಯವನ್ನು ನಿಯಂತ್ರಣ ಮಾಡುವುದು. ಪೇರಳೆಯಲ್ಲಿ ಪೊಟಾಶಿಯಂ ಮತ್ತು ಪ್ರಬಲ ಉರಿಯೂತ ಶಮನಕಾರಿ ಗುಣಗಳು ಇರುವ ಕಾರಣದಿಂದ ಥೈರಾಯ್ಡ್ ಕಾರ್ಯವನ್ನು ಸುಧಾರಣೆ ಮಾಡುವುದು.

ಕಣ್ಣಿನ ದೃಷ್ಟಿ ಉತ್ತಮವಾಗಿ ಇರಬೇಕಾದರೆ ಆಗ ವಿಟಮಿನ್ ಎ ಅಂಶವು ಅತೀ ಅಗತ್ಯವಾಗಿರುವುದು. ವಿಟಮಿನ್ ಎ ಅಂಶವು ಪೇರಳೆ ಹಣ್ಣಿನಲ್ಲಿ ಅತ್ಯಧಿಕ ಮಟ್ಟದಲ್ಲಿ ಇರುವ ಕಾರಣದಿಂದಾಗಿ ಇದು ತುಂಬಾ ನೆರವಾಗುವುದು. ವಿಟಮಿನ್ ಎ ಆರೋಗ್ಯಕಾರಿ ಕಾರ್ನಿಯಾವನ್ನು ಕಾಪಾಡುವುದು ಮತ್ತು ಕಣ್ಣಿನ ಅಂಗಾಂಶಗಳನ್ನು ರಕ್ಷಿಸುವುದು. ವಿಟಮಿನ್ ಎ ಕೊರತೆ ಇದ್ದರೆ ಆಗ ರಾತ್ರಿ ವೇಳೆ ದೃಷ್ಟಿ ಮಂದವಾಗಬಹುದು. ವಿಟಮಿನ್ ಸಿ ಕೂಡ ಇದರಲ್ಲಿ ಇರುವ ಕಾರಣದಿಂದಾಗಿ ಲೋಮನಾಳಗಳ ಆರೋಗ್ಯ ಕಾಪಾಡುವುದು ಮತ್ತು ರೆಟಿನಾದ ಅಂಗಾಂಶಗಳು ಸರಿಯಾಗಿ ಕೆಲಸ ಮಾಡುವಂತೆ ನೆರವಾಗುವುದು. ನಿಯಮಿತವಾಗಿ ಈ ಹಣ್ಣಿನ ಸೇವನೆ ಮಾಡಿದರೆ ಕಣ್ಣಿನ ದೃಷ್ಟಿ ಸುಧಾರಿಸಬಹುದು. ವಯಸ್ಸಾಗುತ್ತಾ ಇರುವಂತೆ ಕಾಡುವಂತಹ ಕಣ್ಣಿನ ಪೊರೆ ಬೆಳೆಯುವುದನ್ನು ಮತ್ತು ಅಕ್ಷಿಪಟಲದ ಅವನತಿಯನ್ನು ಇದು ತಡೆಯುವುದು. ಕಣ್ಣಿನ ದೃಷ್ಟಿ ಉತ್ತಮವಾಗಿ ಇಡಲು ನೀವು ತಾಜಾ ಪೇರಳೆ ಅಥವಾ ಅದರ ಜ್ಯೂಸ್ ನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು.

ಪೇರಳೆ ಹಣ್ಣು ಇದರ ಮಹತ್ವ ಏನಿದೆ?
ಪೇರಳೆ ಹಣ್ಣು

​ಋತುಚಕ್ರದ ಸಮಯದ ಸಮಸ್ಯೆ ನಿವಾರಿಸುವುದು
ಋತುಚಕ್ರದ ವೇಳೆ ತೀವ್ರ ನೋವನ್ನು ಅನುಭವಿಸುವಂತಹ ಸುಮಾರು 197 ಮಂದಿ ಮಹಿಳೆಯರಿಗೆ ಪೇರಳೆ ಸಾರ ಹೊಂದಿರುವ ಮಾತ್ರೆಗಳನ್ನು ನೀಡಿದ ವೇಳೆ ಅವರಿಗೆ ಇದರಿಂದ ಪರಿಹಾರ ಸಿಕ್ಕಿದೆ ಎಂದು ಕಂಡುಕೊಳ್ಳಲಾಗಿದೆ. ಈ ಸಾರವು ಸೆಳೆತ ನಿವಾರಣೆ ಮಾಡುವುದು.

ಪೇರಳೆಯಲ್ಲಿ ಅತೀ ಹೆಚ್ಚು ಪೋಟಾಸಿಯಂ ಇರುವ ಕಾರಣ ರಕ್ತದೊತ್ತಡ ನಿಯಂತ್ರಿಸುವಲ್ಲಿ ಬಹುಮುಖ್ಯ ಭೂಮಿಕೆ ವಹಿಸುತ್ತದೆ.ಪೇರಳೆಯಲ್ಲಿ 20 ಶೇಕಡಾ ಪೋಲೇಟ್ ಎಂಬ ಪೋಷಕಾಂಶ ಇದ್ದು, ಗರ್ಭಿಣಿಯರಲ್ಲಿ ಗರ್ಭದಲ್ಲಿನ ಶಿಶುವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಪೇರಳೆ ಹಣ್ಣಿನಲ್ಲಿ ಅಧಿಕ ಮಟ್ಟದ ಆಹಾರದ ನಾರಿನಾಂಶವಿರುವ ಕಾರನದಿಂದಾಗಿ ಇದು ಹೃದಯದ ಆರೋಗ್ಯ ಕಾಪಾಡುವುದು. ನಾರಿನಾಂಶವು ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುವುದು ಮತ್ತು ಹೃದಯದ ಕಾಯಿಲೆಗಳು ಬರದಂತೆ ತಡೆಯುವುದು. ಇದರಲ್ಲಿ ಇರುವಂತಹ ಪೊಟಾಶಿಯಂ ರಕ್ತದೊತ್ತಡವನ್ನು ಕಡಿಮೆ ಮಾಡಲು ನೆರವಾಗುವುದು.

ದೇಹಕ್ಕೆ ಬೇಕಾದ ಉತ್ತಮ ಪೌಷ್ಟಿಕಾಂಶಗಳು ಪೇರಲೆ ಹಣ್ಣಿನಲ್ಲಿ ಸಿಗುತ್ತವೆ. ಇದರಲ್ಲಿ ಫೋಲೇಟ್, ಬೀಟಾ ಕ್ಯಾರಟಿನ್​ನಂತಹ ಪೌಷ್ಠಿಕಾಂಶದ ಅಂಶಗಳು ಕಂಡು ಬರುತ್ತವೆ. ಆದರೆ ಕೆಲವು ಆರೋಗ್ಯ ಸಮಸ್ಯೆ ಹೊಂದಿರುವವರು ಅತಿಯಾದ ಪೇರಲೆ ಹಣ್ಣಿನ ಸೇವನೆಯನ್ನು ತಪ್ಪಿಸುವುದು ಮುಖ್ಯ.

ಪೇರಳೆ ಎಲೆಯನ್ನು ಜಗಿಯುವುದರಿಂದ ಹಲ್ಲಿನ ನೋವು ತಾತ್ಕಾಲಿಕವಾಗಿ ಶಮನವಾಗುತ್ತದೆ ಮತ್ತು ಬಾಯಿ ಹುಣ್ಣು ಇದ್ದಲ್ಲಿ ಅದರ ನೋವು ಶಮನ ಮಾಡುತ್ತದೆ.

ವಿಟಮಿನ ಸಿ ಯಿಂದ ಸಮೃದ್ಧವಾಗಿರುವಂತಹ ಪೇರಳೆ ಹಣ್ಣು ದೇಹವನ್ನು ಉರಿಯೂತ ಮತ್ತು ಸೋಂಕಿನಿಂದ ಕಾಪಾಡುವುದು. ಪೇರಳೆಯಲ್ಲಿ ಇರುವಂತಹ ಉರಿಯೂತ ನಿವಾರಕ ಗುಣಗಳು ಪ್ರೊಸ್ಟಗ್ಲಾಂಡಿನ್‌ಗಳಂತಹ ಅಣುಗಳನ್ನು ದೂರ ಮಾಡಿಕೊಂಡು ರೋಗಗಳಿಂದ ಮುಕ್ತ ಮಾಡುವುದು.

ಶೀತ ಮತ್ತು ಕೆಮ್ಮು ನಿಯಂತ್ರಣದಲ್ಲಿಯೂ ಪೇರಳೆ ಉಪಕಾರಿ ಎಂದೂ ತಿಳಿದು ಬಂದಿದೆ. ಅತೀಹೆಚ್ಚು ವಿಟಮಿನ್ ‘ಸಿ’, ಕಬ್ಬಿಣದ ಅಂಶ ಮತ್ತು ಪ್ರೊಟೀನ್ ಅಂಶದಿಂದ ಶ್ವಾಸಕೋಶ ಸೋಂಕು ಬರದಂತೆ ಪೇರಳೆ ನಿಯಂತ್ರಿಸುತ್ತದೆ ಎಂದು ಹೇಳಬಹುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಜೂನ್ 3 ಶುಕ್ರವಾರದಿಂದ 5 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ. ರಾಜಯೋಗ ಗುರುಬಲ.

ಜೂನ್ 3 ಶುಕ್ರವಾರದಿಂದ 5 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ. ರಾಜಯೋಗ ಗುರುಬಲ.

ಜೊತೆ ಜೊತೆಯಲಿ ಸೀರಿಯಲ್ ನಟ ರಘುಪತಿ ಹೆಂಡ್ತಿ ಯಾರು ಗೊತ್ತೆ.

ಜೊತೆ ಜೊತೆಯಲಿ ಸೀರಿಯಲ್ ನಟ ರಘುಪತಿ ಹೆಂಡ್ತಿ ಯಾರು ಗೊತ್ತೆ.