in

ನಿದ್ರಾಹೀನತೆ ಸಮಸ್ಯೆ

ನಿದ್ರಾಹೀನತೆ ಸಮಸ್ಯೆ
ನಿದ್ರಾಹೀನತೆ ಸಮಸ್ಯೆ

ನಿದ್ರಾಹೀನತೆಯು ನಿದ್ರೆ, ವೈದ್ಯಕೀಯ ಮತ್ತು ಅನೇಕ ಮನೋವೈದ್ಯಶಾಸ್ತ್ರದ ಕಾಯಿಲೆಗಳೊಂದಿಗೆ ಜತೆಗೂಡಿರುವ ಒಂದು ರೋಗಲಕ್ಷಣವಾಗಿದೆ. ಅನುಕೂಲ ಸಂದರ್ಭದಲ್ಲೂ ನಿರಂತರವಾಗಿ ನಿದ್ದೆ ಮಾಡಲಾಗದಿರುವುದು ಅಥವಾ ಬಹುಕಾಲ ನಿದ್ರೆಯಲ್ಲಿರಲು ಸಾಧ್ಯವಾಗದಿರುವುದು ಇದರ ಪ್ರಮುಖ ಲಕ್ಷಣ. ನಿದ್ರಾಹೀನತೆಯು ಎಚ್ಚರವಾದ ನಂತರ ಚಟುವಟಿಕೆಯಿಂದ ಕೆಲಸ ಮಾಡುವ ಸಾಮರ್ಥ್ಯ ಕುಗ್ಗಿಸುತ್ತದೆ. ದೈಹಿಕ ಮತ್ತು ದೈಹಿಕವಲ್ಲದ ನಿದ್ರಾಹೀನತೆಗಳೆರಡೂ ಬೇರೆ ಕಾರಣವಿಲ್ಲದೆ ನಿದ್ರಾರೋಗಕ್ಕೆ, ಪ್ರಾಥಮಿಕ ನಿದ್ರಾಹೀನತೆಗೆ, ಕಾರಣವಾಗುತ್ತದೆ. ನಿದ್ರಾಹೀನತೆಯ ಒಂದು ಅರ್ಥನಿರೂಪಣೆ ಎಂದರೆ – “ಹಗಲಿನ ಕಾರ್ಯಚಟುವಟಿಕೆಯನ್ನು ಹಾಳುಮಾಡುವ ಅಥವಾ 1 ತಿಂಗಳಿಗಿಂತಲೂ ಹೆಚ್ಚು ಸಮಯ ತೀರ ಆಯಾಸವಿರುವ ಗುಣಲಕ್ಷಣಗಳೊಂದಿಗೆ ನಿದ್ರೆ ಶುರುಮಾಡುವಲ್ಲಿನ ಸಮಸ್ಯೆ ಮತ್ತು ನಿದ್ರಿಸುತ್ತಾ ಇರುವಲ್ಲಿನ ತೊಂದರೆ.”

ತೂಕಡಿಸುತ್ತಿರುತ್ತಾರೆ, ನಿದ್ರೆಯಲ್ಲಿ ಉಸಿರುಕಟ್ಟುವಿಕೆಯು ಕೇಂದ್ರ ನರಮಂಡಲದ ಸಾಮಾನ್ಯವಾಗಿ ಉಸಿರಾಡುವ ಪ್ರೇರಕ ಕ್ರಿಯೆಯನ್ನು ಅಡ್ಡಿಪಡಿಸುತ್ತದೆ. ಆದ್ದರಿಂದ ಆ ವ್ಯಕ್ತಿಯು ಉಸಿರಾಟವನ್ನು ಪುನರಾರಂಭಿಸುವುದಕ್ಕಾಗಿ ಎಚ್ಚರಗೊಳ್ಳುತ್ತಾನೆ. ಈ ರೀತಿಯ ಉಸಿರುಕಟ್ಟುವಿಕೆಯು ಹೆಚ್ಚಾಗಿ ಮಿದುಳಿನ ನರಮಂಡಲ ವ್ಯವಸ್ಥೆಗೆ, ರಕ್ತಸಂಚಯದಿಂದಾಗುವ ಹೃದಯಾಘಾತಕ್ಕೆ ಮತ್ತು ಬೇಗನೆ ವಯಸ್ಸಾಗುವುದಕ್ಕೆ ಕಾರಣವಾಗಬಹುದು.

ಅತೀ ಹೆಚ್ಚಿನ ಒತ್ತಡದಿಂದಾಗಿ ಹೈಪೊಥಲಾಮಿಕ್-ಪಿಟ್ಯೂಟರಿ-ಅಡ್ರೀನಲ್ ಆಕ್ಸಿಸ್ನ ಕಾರ್ಯದಲ್ಲಿ ಬದಲಾವಣೆಯುಂಟಾಗುವುದರಿಂದ ಹೆಚ್ಚಿನ ಪ್ರಮಾಣ ಕೋರ್ಟಿಸೋಲ್‌ ಬಿಡುಗಡೆಯಾಗುತ್ತದೆ. ಇದು ಕಡಿಮೆ ಮಟ್ಟದ ನಿದ್ರೆಗೆ ಕಾರಣವಾಗುತ್ತದೆ.

ರಾತ್ರಿಯಲ್ಲಿ ಹೆಚ್ಚಾಗಿ ಮೂತ್ರ ವಿಸರ್ಜನೆ ಮಾಡುವುದು ನಿದ್ರೆಗೆ ಭಂಗತರುವ ಪ್ರಮುಖ ಅಂಶವಾಗಿದೆ.

ನೇರವಾಗಿ ನಿಂದಿಸುವುದು ಅಥವಾ ನಿದ್ರೆಗಾಗಿ ಬಳಸುವ ಸಹಾಯಕ ವಸ್ತುಗಳೂ ಸಹ ನಿರಂತರ ನಿದ್ರಾಹೀನತೆಯನ್ನು ಉಂಟುಮಾಡಬಹುದು.

ನಿದ್ರೆ ಕಡಿಮೆ ಮಾಡುವ ಅಂಶಗಳು – ಉದಾ : ಗದ್ದಲ, ಶಬ್ದ ಮಾಲಿನ್ಯ ಇತ್ಯಾದಿ.
ಪ್ಯಾರಸೋಮ್ನಿಯ – ಇದು ದುಃಸ್ವಪ್ನ, ನಿದ್ರೆಯಲ್ಲಿ ನಡೆಯುವುದು, ನಿದ್ರಿಸುವಾಗ ರೋಷಾವೇಶದ ವರ್ತನೆ ಮತ್ತು REM ನಡವಳಿಕೆಯ ಕಾಯಿಲೆ ಮೊದಲಾದ ನಿದ್ದೆಗೆ ಅಡ್ಡಿಪಡಿಸುವ ಸಂಗತಿಗಳನ್ನು ಒಳಗೊಂಡಿದೆ. ಈ REM ನಡವಳಿಕೆಯ ರೋಗದಲ್ಲಿ ನಿದ್ರಿಸುತ್ತಿರುವವರು ಕನಸಿನ ಘಟನೆಗಳಿಗೆ ಅನುಗುಣವಾಗಿ ತಮ್ಮ ದೇಹದ ಅಂಗಾಂಗಳನ್ನು ಅತ್ತಿಂದಿತ್ತ ಹೊರಳಿಸುತ್ತಿರುತ್ತಾರೆ.

ಅತಿವಿರಳ ಆನುವಂಶಿಕ ಸ್ಥಿತಿಯು ಪ್ರಿಯಾನ್‌-ಆಧಾರಿತ, ಶಾಶ್ವತ ಮತ್ತು ಅಂತಿಮವಾಗಿ ಮಾರಕವಾಗುವ ಪರಿಣಮಿಸುವ ನಿದ್ರಾಹೀನತೆಯನ್ನು ಉಂಟುಮಾಡುತ್ತದೆ. ಇದನ್ನು ಮಾರಕ ಆನುವಂಶಿಕ ನಿದ್ರಾಹೀನತೆ ಎನ್ನುತ್ತಾರೆ.

ನಿದ್ರಾಹೀನತೆ ಸಮಸ್ಯೆ
ನಿದ್ರಾಹೀನತೆ

ದೈಹಿಕ ವ್ಯಾಯಾಮಗಳು : ವ್ಯಾಯಾಮದ ಆಯಾಸದಿಂದ ಬರುವ ನಿದ್ರಾಹೀನತೆಯು ಕ್ರೀಡಾಪಟುಗಳಲ್ಲಿ ಸಾಮಾನ್ಯವಾಗಿರುತ್ತದೆ. ಇದು ನಿದ್ರೆ ಆರಂಭವಾಗುವ ಸುಪ್ತತೆಯನ್ನು ಸುದೀರ್ಘಗೊಳಿಸುತ್ತದೆ.

ನಿದ್ರಾಹೀನತೆಯಿರುವವರಲ್ಲಿ ರಾತ್ರಿಯಲ್ಲಿ ಕೋರ್ಟಿಸೋಲ್‌ ಮತ್ತು ಅಡ್ರೀನೊಕೋರ್ಟಿಕೊಟ್ರೋಪಿಕ್‌ ಹಾರ್ಮೋನುಗಳ ಪರಿಚಲನೆಯು ಹೆಚ್ಚಾಗಿರುತ್ತದೆ ಎಂದು ಪಾಲಿಸೋಮ್ನೊಗ್ರಫಿಯನ್ನು ಬಳಸಿ ಮಾಡಿದ ನಿದ್ರೆಬಗೆಗಿನ ಅಧ್ಯಯನಗಳು ಸೂಚಿಸಿವೆ.

ಚಯಾಪಚಯ ಕ್ರಿಯೆಯ ಪ್ರಮಾಣವೂ ಇವರಲ್ಲಿ ಹೆಚ್ಚಾಗಿರುತ್ತದೆ. ಇದು ನಿದ್ರಾಹೀನತೆ ಇಲ್ಲದವರಲ್ಲಿ ಕಂಡುಬರುವುದಿಲ್ಲ ಆದರೆ ನಿದ್ರೆಯ ಅಧ್ಯಯನ ಮಾಡುವ ಸಂದರ್ಭದಲ್ಲಿ ಅವರ ನಿದ್ದೆಗೆ ಉದ್ದೇಶಪೂರ್ವಕವಾಗಿ ಅಡ್ಡಿಯಾಗುತ್ತದೆ. ಚಯಾಪಚಯ (ಜೀವರಾಸಾಯನಿಕ)ಕ್ರಿಯೆಯ ಪ್ರಮಾಣವು ರಾತ್ರಿ ಮತ್ತು ಹಗಲು ಎರಡೂ ಹೊತ್ತು ನಿದ್ರಾಹೀನತೆ ಇರುವವರಲ್ಲಿ ಹೆಚ್ಚಾಗಿರುತ್ತದೆ, ಎಂದು ಪಾಸಿಟ್ರಾನ್ ಎಮಿಶನ್ ಟೋಮೊಗ್ರಫಿ ಸ್ಕ್ಯಾನ್‌ಗಳನ್ನು ಬಳಸಿಕೊಂಡು ನಡೆಸಿದ ಮಿದುಳಿನ ಚಯಾಪಚಯ ಕ್ರಿಯೆಯ ಅಧ್ಯಯನಗಳು ತೋರಿಸಿಕೊಟ್ಟಿವೆ. ಈ ಬದಲಾವಣೆಗಳು ದೀರ್ಘಕಾಲದ-ನಿದ್ರಾಹೀನತೆಯ ಕಾರಣಗಳೊ ಅಥವಾ ಪರಿಣಾಮಗಳೊ ಎಂಬ ಪ್ರಶ್ನೆ ಮಾತ್ರ ಹಾಗೆ ಉಳಿದಿದೆ.

ಪ್ರೀತಿಪಾತ್ರರನ್ನು ಕಳೆದುಕೊಂಡರೆ, ಅವರು ಅಸಮಧಾನ ತರುವ ರೀತಿಯಲ್ಲಿ ಸಾವನ್ನಪ್ಪಿದ್ದರೆ ಅವರು ಮಡಿದ ವರ್ಷಗಳ ಅಥವಾ ದಶಕಗಳ ನಂತರವೂ ನಿದ್ರಾಹೀನತೆಯು ಸಾಮಾನ್ಯವಾಗಿರುತ್ತದೆ. ಅವರ ಭಾವನೆಗಳ ತೀವ್ರತೆಯ ಲಕ್ಷಣಗಳು ಮತ್ತು ಪ್ರಮಾಣವು ಪ್ರತಿಯೊಬ್ಬರ ಮಾನಸಿಕ ಆರೋಗ್ಯ, ದೈಹಿಕ ಸ್ಥಿತಿಗತಿ ಮತ್ತು ವರ್ತನೆ ಅಥವಾ ವ್ಯಕ್ತಿತ್ವವನ್ನು ಅವಲಂಬಿಸಿ ವಿವಿಧ ರೀತಿಯಲ್ಲಿ ಪರಿಣಾಮ ಬೀರುತ್ತದೆ.

ವಯಸ್ಸಾದಂತೆ ಅಗತ್ಯವಾಗಿರುವ ನಿದ್ರೆಯ ಪ್ರಮಾಣವು ಕಡಿಮೆಯಾಗುತ್ತಾ ಹೋಗುತ್ತದೆ ಎಂಬ ತಪ್ಪುಗ್ರಹಿಕೆ ಇದೆ. ವಯಸ್ಸಾದಂತೆ ದೀರ್ಘಕಾಲ ನಿದ್ರಿಸುವ ಸಾಮರ್ಥ್ಯವು ಕಡಿಮೆಯಾಗುತ್ತದೆಯೇ ಹೊರತು ಅವಶ್ಯಕವಾಗಿರುವ ನಿದ್ದೆಯ ಪ್ರಮಾಣವಲ್ಲ. ನಿದ್ರಾಹೀನತೆ ಹೊಂದಿರುವ ಕೆಲವು ಹಿರಿಯರು ರಾತ್ರಿಯಲ್ಲಿ ಹಾಸಿಗೆಯಲ್ಲಿ ಅತ್ತಿತ್ತ ಹೊರಳಾಡಿ ಹಾಗೂ ಕೆಲವೊಮ್ಮೆ ಹಾಸಿಗೆಯಿಂದ ಕೆಳಗೆ ಬಿದ್ದು, ಅವರಿಗೆ ಸಾಮಾನ್ಯವಾಗಿ ಬರುವ ನಿದ್ದೆಯ ಪ್ರಮಾಣವನ್ನೂ ಕಡಿಮೆ ಮಾಡಿಕೊಳ್ಳುತ್ತಾರೆ.

ಬೆಳಿಗ್ಗೆ ಬೇಗ ಎಚ್ಚರವಾಗುವವರಿಗೆ ಅವರ ಸಹಜ ನಿದ್ರಾ ಆವರ್ತವನ್ನು ಮತ್ತೆ ಮುಂದುವರಿಸಿಕೊಂಡು ಹೋಗುವುದಕ್ಕಾಗಿ ‘ಪ್ರಕಾಶಮಾನ ಬೆಳಕಿನ ಚಿಕಿತ್ಸೆ’ಯನ್ನು ಬಳಸಲಾಗುತ್ತದೆ, ಇದನ್ನು ‘ನಿದ್ರೆ-ಪರಿಮಿತಿಗೊಳಿಸುವ ಚಿಕಿತ್ಸೆ’ಯೊಂದಿಗೂ ಹೊಸ ಏಳುವ-ವೇಳಾಪಟ್ಟಿಯನ್ನು ವಿಧಿಸುವುದಕ್ಕಾಗಿ ಉಪಯೋಗಿಸಲಾಗುತ್ತದೆ. ಆದರೂ ಈ ವಿಧಾನವನ್ನು ದೃಢತೆಯಿಂದ ಬಳಸುವುದು ಕಷ್ಟ, ಇದು ಪ್ರೇರಕವಾಗಿರುವ-ರೋಗಿಗಳಲ್ಲಿ ನಿದ್ರಾಹೀನತೆ ಪ್ರಚೋದಿಸುವ ಗುಣಾತ್ಮಕ ಪರಿಣಾಮ ಬೀರಬಹುದು.

‘ಸಹಜವಲ್ಲದ ಭಾವನೆ’ಯು ರಾತ್ರಿಯಲ್ಲಿ ನಿದ್ರಿಸಲು ಪ್ರಯತ್ನಿಸುವುದನ್ನು ಬಿಟ್ಟು ಎಚ್ಚರವಾಗಿರಲು ಎಲ್ಲಾ ಪ್ರಯತ್ನಗಳನ್ನು ಮಾಡುವವ ನಿದ್ರಾಹೀನತೆ ಇರುವವರಲ್ಲಿ ಅರಿವಿನ ಪುನಃರೂಪಿಸುವ ವಿಧಾನವಾಗಿದೆ. ಈ ವಿಧಾನವು ಉದ್ಧೇಶಪೂರ್ವಕವಾಗಿ ನಿದ್ರಿಸುವಂತೆ ಮಾಡದೆ ನಿದ್ರಿಸಬೇಕಾದ ಅವಶ್ಯಕತೆ ಅಥವಾ ಅಗತ್ಯತೆಯಿಂದ ಕಾಣಿಸಿಕೊಳ್ಳುವ ಆತಂಕವನ್ನು ದೂರಮಾಡುತ್ತದೆ. ಇದನ್ನು ‘ಪ್ರತಿಭಟಿಸದ ಕ್ರಿಯೆ’ ಎನ್ನುತ್ತಾರೆ, ಎಂದು ಒಂದು ಅಧ್ಯಯನ ಈ ವಿಧಾನದ ಪರಿಣಾಮಕಾರಿತ್ವವನ್ನು ವಿವರಿಸಿದೆ. ಈ ವಿಧಾನವು ನಿದ್ರಿಸಲು ಮಾಡುವ ಪ್ರಯತ್ನ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ, ಹಾಗೂ ನಿದ್ರೆ ಬರುವುದು ತಡವಾಗುವುದೆಂಬ ಮಾನಸಿಕ ನಿರ್ಣಯವನ್ನು ಮತ್ತು ನಿದ್ರೆಯ ಕೊರತೆಯ ಬಗ್ಗೆ ಅತಿಯಾಗಿ ಅಂದಾಜು ಮಾಡುವುದನ್ನು (ಹೆಚ್ಚಿನ ನಿದ್ರಾಹೀನತೆಯಿರುವವರಲ್ಲಿ ಕಂಡುಬರುವ ಗುಣ) ತಗ್ಗಿಸುತ್ತದೆ.

ನಿದ್ರಾಹೀನತೆ ಸಮಸ್ಯೆ
ನಿದ್ರಿಸಲು ಮಾಡುವ ಪ್ರಯತ್ನ

ದೀರ್ಘಕಾಲದ ಪರಿಣಾಮದ ಲಕ್ಷಣಗಳನ್ನು ಕಡಿಮೆಮಾಡಿದೆ ಎಂದು ದೃಢಪಡಿಸಿದೆ. ಈ ಅಪಾಯಗಳೆಂದರೆ – ಅವಲಂಬನೆ, ಆಘಾತಗಳು ಮತ್ತು ಇತರ ಪ್ರತಿಕೂಲ ಪರಿಣಾಮಗಳು. ನಿದ್ದೆ ಬರಿಸುವ ಔಷಧಗಳನ್ನು ಸುದೀರ್ಘಕಾಲ ಉಪಯೋಗಿಸುವವರಲ್ಲಿ ಅವುಗಳ ಬಳಕೆಯನ್ನು ಸ್ವಲ್ಪಸ್ವಲ್ಪವೇ ಕಡಿಮೆಮಾಡುವ ಮೂಲಕ ನಿದ್ರೆ ಹಾಳುಮಾಡದೆ ಆರೋಗ್ಯವನ್ನು ಸುಧಾರಿಸಬಹುದು. ಮೇಲಾಗಿ ನಿದ್ದೆ ಬರಿಸುವವುಗಳನ್ನು ಕಡಿಮೆ ಪ್ರಮಾಣದಲ್ಲಿ ಕೆಲವು ದಿನಗಳಿಗೆ ಮಾತ್ರ ಸೂಚಿಸಬೇಕಲ್ಲದೇ ವಯಸ್ಸಾದವರು ಸಾಧ್ಯವಾದರೆ ಅದರಿಂದ ಸಂಪೂರ್ಣವಾಗಿ ದೂರವಿರಬೇಕು.

ನಿದ್ರಾಹೀನತೆಗೆ ಅಲ್ಪಕಾಲ ಕ್ರಿಯೆ ನಡೆಸುವ ನಿದ್ರಾಜನಕಗಳನ್ನು ನಿಯಮಿತವಾಗಿ ಬಳಸುವುದರಿಂದ ಉಂಟಾಗುವ ಮತ್ತೊಂದು ತೊಂದರೆ ಎಂದರೆ ಹಗಲಿನಲ್ಲಿ ಮರುಕಳಿಸುವ ಆತಂಕ ಕಾಣಿಸಿಕೊಳ್ಳಬಹುದು. ಬೆಂಜೊಡಿಯಜೆಪೈನ್‌ಗಳು ನಿದ್ರೆಯನ್ನು ಆರಂಭಿಸಲು ಮತ್ತು ಹೆಚ್ಚಿಸಲು ಸಹಾಯ ಮಾಡುತ್ತವೆ, ಅಲ್ಲದೆ ಇವು ಗಾಢ ನಿದ್ರೆಯನ್ನೂ ಕಡಿಮೆ ಮಾಡುತ್ತವೆ ಮತ್ತು ನಸುನಿದ್ರೆಯನ್ನು ಹೆಚ್ಚಿಸುತ್ತವೆ. ಆದರೂ ನಿದ್ರಾಹೀನತೆಗೆ ಬೆಂಜೊಡಿಯಜೆಪೈನ್‌ಗಳ ಬಳಕೆಯಿಂದ ಪ್ರಯೋಜನ ಇರುವುದರ ಬಗ್ಗೆ ಯಾವುದೇ ಆಧಾರವಿಲ್ಲ ಮತ್ತು ಇದರಿಂದ ಉಂಟಾಗುವ ಹಾನಿಕಾರಕ ಪರಿಣಾಮವೇ ಹೆಚ್ಚಾಗಿದೆ. ಹೆಚ್ಚಿನ ಜನರಲ್ಲಿ ನಿದ್ರಾಹೀನತೆಗೆ ಬೆಂಜೊಡಿಯಜೆಪೈನ್‌ಗಳನ್ನು ದೀರ್ಘಕಾಲ ಬಳಸುವುದು ಸಮಂಜವಾದುದಲ್ಲ. ಯಾಕೆಂದರೆ ಬೆಂಜೊಡಿಯಜೆಪೈನ್‌ಗಳ ದೀರ್ಘಕಾಲ ಬಳಕೆಯಿಂದ ಪ್ರತಿಕೂಲ ಪರಿಣಾಮಗಳು ಉಂಟಾಗುವುದರಿಂದ ಅವುಗಳನ್ನು ಸ್ವಲ್ಪ ಸ್ವಲ್ಪವೇ ಕಡಿಮೆ ಮಾಡುವುದು ಒಳಿತು. ಅದಲ್ಲದೇ ಅವಶ್ಯವಿದ್ದಾಗ ಮಾತ್ರ ಸಲಹೆ ನೀಡಬೇಕೆಂಬ ಸಾರ್ವತ್ರಿಕ ಎಚ್ಚರಿಕೆ ಇದೆ.

ಮದ್ಯಸಾರವನ್ನು ಹೆಚ್ಚಾಗಿ ನಿದ್ರಾಹೀನತೆಗೆ ಸ್ವಂತ-ಚಿಕಿತ್ಸೆಯಾಗಿ, ನಿದ್ರೆಬರಲು ಬಳಸುತ್ತಾರೆ. ಆದರೆ ನಿದ್ರೆ ಬರಿಸಲು ಬಳಸುವ ಮದ್ಯಸಾರವು ನಿದ್ರಾಹೀನತೆಗೆ ಕಾರಣವಾಗಬಹುದು. ದೀರ್ಘಕಾಲ ಮದ್ಯಪಾನ ಮಾಡುವುದರಿಂದ NREM ಹಂತ 3 ಮತ್ತು 4ರ ನಿದ್ರೆಯು ಕಡಿಮೆಯಾಗುತ್ತದೆ. ಅದಲ್ಲದೇ REM ನಿದ್ರೆಯು ತಡೆಗಟ್ಟಲ್ಪಟ್ಟು ಛಿದ್ರಗೊಳ್ಳುತ್ತದೆ. ತಲೆನೋವು ಮತ್ತು ವಿಪರೀತ ಬೆವರುವಿಕೆಯಿಂದ ಎಚ್ಚರವಾಗುವುದರೊಂದಿಗೆ ನಿದ್ರೆಯ ಹಂತಗಳ ಮಧ್ಯೆ ಮೇಲಿಂದಮೇಲೆ ಅಡಚಣೆಗಳು ಕಂಡುಬರುತ್ತವೆ. ಅತಿಹೆಚ್ಚು ಮದ್ಯಪಾನ ಮಾಡುವುದನ್ನು ನಿಲ್ಲಿಸುವುದರಿಂದಲೂ ಸ್ಪಷ್ಟ ಕನಸುಗಳೊಂದಿಗೆ ತೀವ್ರ ನಿದ್ರಾಹೀನತೆಗೆ ಕಾರಣವಾಗುತ್ತದೆ. ಮದ್ಯಪಾನ ಬಿಟ್ಟುಬಿಟ್ಟರೆ ಮರುಕಳಿಸುವ ಪರಿಣಾಮವಾಗಿ REM ನಿದ್ರೆ ಕಡಿಮೆಯಾಗುವುದು ಅತಿಯಾಗುತ್ತದೆ.

ಓಪಿಯಾಡ್‌ಗಳ ನೋವು ಶಾಮಕ ಗುಣಕ್ಷಣಗಳು ಮತ್ತು ನಿದ್ದೆ ಬರಿಸುವ ಪರಿಣಾಮಗಳಿಂದಾಗಿ ಅವುಗಳನ್ನು ನೋವಿನಿಂದ ಉಂಟಾಗುವ ನಿದ್ರಾಹೀನತೆಯ ಪರಿಹಾರಕ್ಕೆ ಬಳಸಲಾಗುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಚುಂಚನಕಟ್ಟೆ ಜಲಪಾತ

ಚುಂಚನಕಟ್ಟೆ ಜಲಪಾತ

ಭಾರತ ಮತ್ತು ಆಸ್ಟ್ರೇಲಿಯಾ ಟಿ 20 ಪಂದ್ಯ ಸಿದ್ಧತೆ

ಇಂದು ಭಾರತ ಮತ್ತು ಆಸ್ಟ್ರೇಲಿಯಾ ಟಿ 20 ಪಂದ್ಯ ಸಿದ್ಧತೆ