in

ನೆಲನೆಲ್ಲಿಯಲ್ಲಿದೆ ಅಧ್ಭುತ ಔಷಧಿ ಗುಣ

ನೆಲನೆಲ್ಲಿಯಲ್ಲಿದೆ ಅಧ್ಭುತ ಔಷಧಿ ಗುಣ
ನೆಲನೆಲ್ಲಿಯಲ್ಲಿದೆ ಅಧ್ಭುತ ಔಷಧಿ ಗುಣ

ನೆಲ್ಲಿಯ ಎಲೆಗಳನ್ನೇ ಹೋಲುವುದರ ಜೊತೆಗೆ, ನೆಲ್ಲಿ ಕಾಯಿಯನ್ನು ಹೋಲುವ, ಸಾಸಿವೆ ಗಾತ್ರದ ಕಾಳುಗಳು ಎಲೆಯ ಹಿಂಬದಿಗೆ ಅಂಟಿ ಕೊಂಡಿರುತ್ತವೆ. ಹಾಗಾಗಿ, ಈ ಗಿಡಕ್ಕೆ ನೆಲ ನೆಲ್ಲಿ ಎಂಬ ಹೆಸರು. ಹಸಿರು-ಕೆಂಪು ಮಿಶ್ರಿತ ಕಾಂಡದ ಈ ಗಿಡವು ಸಂಸ್ಕೃತದಲ್ಲಿ ಭೂಮ್ಯಾಮಲಕ, ಹಿಂದಿಯಲ್ಲಿ ಭೂ ಆಮ್ಲ ಎಂದು ಕರೆಸಿಕೊಳ್ಳುತ್ತದೆ

ಭಾರತದೆಲ್ಲೆಡೆ ಕಂಡುಬರುವ ನೆಲನೆಲ್ಲಿಯನ್ನು ಕಿರುನೆಲ್ಲಿಯೆಂದೂ ಕರೆಯಲಾಗುತ್ತದೆ. ಇದು ಕಳೆಗಿಡವಾಗಿದ್ದರೂ ಔಷಧೀಯ ಗುಣಗಳ ಭಂಡಾರವಾಗಿದೆ. ಮಳೆಗಾಳದಲ್ಲಿ ಅಧಿಕವಾಗಿ ಕಂಡುಬರುವಂತಹುದಾಗಿದೆ. ಇದು ಬೆಳೆದು ೫ರಿಂದ ೮ ತಿಂಗಳು ಅಯಸ್ಸು ಪಡೆದು ಜನಸಾಮನ್ಯರ ಕಾಯಿಲೆಗಳಿಗೆ ಔಷಧಿಯಾಗಿ ಉಪಯುಕ್ತವಾಗಿದೆ.

ನೆಲನೆಲ್ಲಿಯ ಎಲೆಗಳು ಚಿಕ್ಕದಾಗಿದ್ದು ನೆಲ್ಲಿಗಿಡದ ಎಲೆಗಳನ್ನೇ ಹೋಲುತ್ತವಾದ್ದರಿಂದ ಮತ್ತು ಹಣ್ಣುಗಳು ಪುಟ್ಟದಾಗಿದ್ದು ಚಿಕ್ಕಚಿಕ್ಕ ಎಲೆಗಳ ಹಿಂಬದಿಯಲ್ಲಿ ಜೋಡಣೆಗೊಂಡಿದ್ದು ನೆಲ್ಲಿಕಾಯಿಯಂತೆ ಕಾಣುತ್ತವಾದ್ದರಿಂದ ಆ ಹೆಸರು ಬಂದಿದೆ. ನೆಲನೆಲ್ಲಿಯು ಯುಫೋರ್ಬಿಯೇಸಿ ಕುಟುಂಬಕ್ಕೆ ಸೇರಿದೆ. ಸಣ್ಣ ಮೂಲಿಕೆ ಜಾತಿಗೆ ಸೇರಿದ, ಒಂದು ಅಡಿ ಎತ್ತರ ಬೆಳೆಯುವ ಪುಟ್ಟ ಏಕವಾರ್ಷಿಕ ಸಸ್ಯ. ಕಾಂಡವು ಮೃದುವಾಗಿದ್ದು, ಕೆಂಪು ಮಿಶ್ರಿತ ಹಸಿರು ಬಣ್ಣದಲ್ಲಿದೆ. ಕಾಂಡದ ಮೇಲೆ ಅರ್ಧ ಅಂಗುಲ ಅಂತರದಲ್ಲಿ ಹಸಿರು ಬಣ್ಣದ ಎಲೆಗಳು ಪರ್ಯಾಯವಾಗಿ ಜೋಡಣೆಗೊಂಡಿರುತ್ತವೆ. ಎಲೆ ಕಂಕುಳಲ್ಲಿ ಹಸಿರು ಮಿಶ್ರಿತ ಹಳದಿ ಬಣ್ಣದ ಹೂಗಳು ಕಾಣಿಸಿಕೊಳ್ಳುತ್ತವೆ. ಕಾಯಿ ಹಸಿರು ಬಣ್ಣದ್ದಾಗಿದ್ದು ಸಾಸಿವೆ ಗಾತ್ರದಷ್ಟು ಇರುತ್ತದೆ.

ಈ ಸಸ್ಯವು ಎಲ್ಲಾ ವಿಧವಾದ ಮಣ್ಣುಗಳಲ್ಲಿ ಬೆಳೆಯಬಹುದಾದರೂ, ನೀರು ಬಸಿದು ಹೋಗುವ ಗೋಡು ಮಣ್ಣಿನಲ್ಲಿ ಉತ್ತಮವಾಗಿ ಬೆಳೆಯಲು ಸಾಧ್ಯ.

ಸಸ್ಯವು ಉಷ್ಣವಲಯ ಮತ್ತು ಅತಿ ಹೆಚ್ಚಿನ ಮಳೆಯಾಗುವ ಪ್ರದೇಶಗಳಲ್ಲಿ ಕಂಡುಬರುತ್ತದೆ. ಅತಿ ಒಣಪ್ರದೇಶ ಮತ್ತು ನೀರು ನಿಂತ ಪ್ರದೇಶಗಳು ಈ ಸಸ್ಯಕ್ಕೆ ಲಾಭದಾಯಕವಲ್ಲ.

ನೆಲನೆಲ್ಲಿಯಲ್ಲಿದೆ ಅಧ್ಭುತ ಔಷಧಿ ಗುಣ
ನೆಲನೆಲ್ಲಿಯ ಸಸ್ಯ

ಈ ಸಸ್ಯವನ್ನು ಬೀಜದಿಂದ ವೃದ್ಧಿ ಮಾಡಬಹುದಾಗಿದೆ. ಸಸಿಗಳನ್ನು ಮೊದಲು ಸಸಿನಡಿಗಳಲ್ಲಿ ಬೆಳೆಸಬೇಕು. ಬೀಜವು ಅತಿ ಸಣ್ಣವಾದ್ದರಿಂದ ಬೀಜದೊಂದಿಗೆ ಮರಳು ಬೆರೆಸಿ ಸಸಿನಡಿಯಲ್ಲಿ ಸಮನಾಗಿ ಹರಡಿ ಬಿತ್ತಬಹುದು. ಏಪ್ರಿಲ್ ಕೊನೆಯ ವಾರದವರಗೆ ಬೀಜ ಬಿತ್ತಲು ಸೂಕ್ತ ಸಮಯ.

ಸಾಮಾನ್ಯವಾಗಿ ೩೫ರಿಂದ ೪೦ ದಿನಗಳ ಪ್ರಾಯದ ೧೦-೧೫ ಸೆಂ.ಮೀ. ಎತ್ತರದ ಸಸಿಗಳನ್ನು ೧೫×೧೦ ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬೇಕು . ನಾಟಿ ಮಾಡಿದ ತಕ್ಷಣ ನೀರು ಹಾಯಿಸುವುದರಿಂದ ಸಸಿಗಳು ಬಾಡುವುದು ಅಥವಾ ಬಾಗುವುದು ಅತಿ ಕಡಿಮೆ.

ಮಳೆ ಚೆನ್ನಾಗಿ ಬರುವ ಪ್ರದೇಶದಲ್ಲಿ ನೀರಿನ ಅವಶ್ಯಕತೆ ಇರುವುದಿಲ್ಲ. ಆದರೂ ಹವಾಗುಣಕ್ಕೆ ತಕ್ಕಂತೆ ನೀರು ನೀಡಿದಲ್ಲಿ ಉತ್ತಮ ಇಳುವರಿ ಪಡೆಯಲ್ಲು ಸಾಧ್ಯ.

ಇನ್ನು ಸಸ್ಯವು ಸಣ್ಣಗಿದ್ದು ಹಾಗೂ ಮೃದುವಾದ್ದರಿಂದ ಕಳೆ ಬೆಳೆಯುವಿಕೆ ಸಹಜ. ಕಳೆಯನ್ನು ೧೫ ದಿವಸಕ್ಕೊಮ್ಮೆ ತೆಗೆದರೆ ಒಳ್ಳೆಯದು.

ನೆಲ ನೆಲ್ಲಿಯ ಔಷಧಿ ಗುಣ ಹೀಗಿದೆ :

ಕಾಮಾಲೆಗೆ ನೆಲನೆಲ್ಲಿ ಅತ್ಯುತ್ತಮ ಔಷಧಿ. ಸಿದ್ಧ ವೈದ್ಯ ಪದ್ಧತಿಯಲ್ಲಿ ನೆಲನೆಲ್ಲಿಯನ್ನು ದಶಕಗಳ ಕಾಲದಿಂದಲೂ ಔಷಧಿಯಾಗಿ ಬಳಸಲಾಗುತ್ತದೆ.

ಗಾಯಗಳಿಗೆ ಮತ್ತು ಕಜ್ಜಿಗಳಿಗೆ ಈ ಗಿಡವನ್ನು ಬೇರು ಸಹಿತ ಜಜ್ಜಿ ರಸವನ್ನು ಲೇಪಿಸುವುದರಿಂದ ಗುಣವನ್ನು ಕಾಣಬಹುದು.

ನೆಲನೆಲ್ಲಿಯ ಎಲೆಗಳನ್ನು ಉಪ್ಪಿನೊಂದಿಗೆ ರುಬ್ಬಿ ಲೇಪಿಸುವುದರಿಂದ ಚರ್ಮರೋಗಗಳು ಗುಣವಾಗುತ್ತದೆ.

ಅಜೀರ್ಣ ಸಮಸ್ಯೆ ಇದ್ದರೆ ನೆಲನೆಲ್ಲಿ ಕಷಾಯಕ್ಕೆ, ಚಿಟಿಕೆ ಇಂಗನ್ನು ತುಪ್ಪದಲ್ಲಿ ಹುರಿದು ಬೆರೆಸಿ ಕುಡಿಯುವುದರಿಂದ ಪರಿಹಾರ ಕಾಣಬಹುದು.

ನೆಲನಲ್ಲಿ ಸಸ್ಯದ ಕಷಾಯವನ್ನು ದಿನಕ್ಕೆ ಮೂರ್ನಾಲ್ಕು ಬಾರಿ ಸೇವಿಸಿದರೆ ಅತಿಸಾರ ಭೇದಿ ನಿಲ್ಲುತ್ತದೆ.

ನೆಲನೆಲ್ಲಿಯಲ್ಲಿದೆ ಅಧ್ಭುತ ಔಷಧಿ ಗುಣ
ನೆಲನೆಲ್ಲಿ ಕಷಾಯ

ನೆಲನೆಲ್ಲಿ ಸಸ್ಯದ ರಸವನ್ನು ಹಾಲು ಅಥವಾ ಮಜ್ಜಿಗೆಯೊಂದಿಗೆ ಬೆರೆಸಿ ಸೇವಿಸುವುದರಿಂದ ಕಾಮಾಲೆ ರೋಗ ನಿಯಂತ್ರಣಕ್ಕೆ ಬರುತ್ತದೆ.ಜಾಸ್ತಿ ಇದ್ದರೆ ವೈದ್ಯರನ್ನು ಬೇಟಿ ನೀಡಿ.

ಯುನಾನಿ ವೈದ್ಯಪದ್ಧತಿಯಲ್ಲಿ ಗಾಯ, ಕಜ್ಜಿ ಮತ್ತು ಜಂತುಹುಳುಗಳ ನಿವಾರಣೆಗೆ ನೆಲನೆಲ್ಲಿಯನ್ನು ಬಳಸಲಾಗುತ್ತದೆ.

ಭೇದಿಯಾಗುತ್ತಿದ್ದಲ್ಲಿ ನೆಲನೆಲ್ಲಿಯ ಎಳೆಯ ಕಾಂಡವನ್ನು ಜಜ್ಜಿ ರಸ ತೆಗೆದು ನಾಲ್ಕು ಗಂಟೆಗಳಿಗೊಂದು ಬಾರಿ ಕುಡಿಯಬೇಕು ಇಲ್ಲವೇ ಹಾಗೆಯೇ ತಿನ್ನಬಹುದು.
ಗಾಯಗಳಾಗಿದ್ದಲ್ಲಿ ಈ ಗಿಡವನ್ನು ಬೇರು ಸಹಿತ ಜಜ್ಜಿ ಲೇಪಿಸಬೇಕು.

ಚರ್ಮರೋಗಗಳಲ್ಲಿ ನೆಲನೆಲ್ಲಿಯ ಎಲೆಗಳನ್ನು ಉಪ್ಪಿನೊಂದಿಗೆ ಅರೆದು ಲೇಪಿಸುವುದರಿಂದ ನವೆ ಕಡಿಮೆಯಾಗುತ್ತದೆ.

ನೆಲನೆಲ್ಲಿಯು ಕುಷ್ಠ, ಆಸ್ತಮಾ, ಬಿಕ್ಕಳಿಕೆ ನಿವಾರಣೆಯಲ್ಲಿಯೂ ಉಪಯುಕ್ತ ಔಷಧಿಯಾಗಿದೆ.

ಹೊಟ್ಟೆನೋವು : ಅಜೀರ್ಣದಿಂದ ಹೊಟ್ಟೆನೋವು ಉಂಟಾಗಿದ್ದಲ್ಲಿ ನೆಲನೆಲ್ಲಿ ಸೊಪ್ಪಿನ ಕಷಾಯ ತಯಾರಿಸಿ ಅದಕ್ಕೆ ತುಪ್ಪದಲ್ಲಿ ಹುರಿದ ಇಂಗಿನ ಪುಡಿಯನ್ನು ಒಂದು ಚಿಟಿಕೆ ಬೆರೆಸಿ ಕುಡಿಯಬೇಕು.

ಅತಿರಕ್ತಸ್ರಾವ : ಮಾಸಿಕಸ್ರಾವದ ಸಮಯದಲ್ಲಿ ಅತಿರಕ್ತಸ್ರಾವವಾಗುತ್ತಿದ್ದಲ್ಲಿ ನೆಲನೆಲ್ಲಿಯ ಚಟ್ನಿಯನ್ನು ಆಹಾರದಲ್ಲಿ ಸೇವಿಸುವುದಲ್ಲದೇ ನೆಲನೆಲ್ಲಿ ಕಷಾಯ ತಯಾರಿಸಿ ದಿನಕ್ಕೆ ಮೂರು ಬಾರಿ ಕುಡಿಯಬೇಕು.

ರೋಗನಿರೋಧಕ ಶಕ್ತಿ : ನೆಲನೆಲ್ಲಿಯ ರಸವನ್ನು ಇಲ್ಲವೇ ಕಷಾಯವನ್ನು ಸೇವನೆ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಕಾಲರ, ಚಿಕುನ್‍ಗುನ್ಯಾ, ಡೆಂಗೆ ಮುಂತಾದ ಕಾಯಿಲೆಗಳು ಹರಡಿದ್ದ ಸಮಯದಲ್ಲಿ ಆರೋಗ್ಯವಂತರು ನೆಲನೆಲ್ಲಿಯ ಕಷಾಯ ಇಲ್ಲವೇ ರಸ ಕುಡಿಯುವುದರಿಂದ ಕಾಯಿಲೆ ಬಾರದಂತೆ ತಡೆಯಬಹುದು.

ನೆಲನೆಲ್ಲಿ ಸೊಪ್ಪಿನ ಕಷಾಯಕ್ಕೆ, ಚಿಟಿಕೆ ಇಂಗನ್ನು ತುಪ್ಪದಲ್ಲಿ ಹುರಿದು ಬೆರೆಸಿ ಕುಡಿದರೆ ಅಜೀರ್ಣ ಸಮಸ್ಯೆ ಕಾಡುವುದಿಲ್ಲ.

ನೆಲ ನೆಲ್ಲಿ ಕಷಾಯ : ನೆಲನೆಲ್ಲಿಯ ಬೇರು , ಕಾಂಡ ಎಲೆ ಎಲ್ಲವನ್ನೂ ಕಷಾಯಕ್ಕೆ ಬಳಸಬಹುದು. ನೆಲನೆಲ್ಲಿ ಗಿಡವನ್ನು ಚೆನ್ನಾಗಿ ತೊಳೆದು ಇಟ್ಟುಕೊಳ್ಳಬೇಕು. ಒಂದು ಪಾತ್ರೆಯಲ್ಲಿ 4 ಲೋಟ ನೀರು ತೆಗೆದುಕೊಂಡು ಬಿಸಿ ಆಗಲು ಇಡಬೇಕು. ಸ್ವಲ್ಪ ನೀರು ಬಿಸಿ ಆದಮೇಲೆ ಒಂದು ನೆಲನೆಲ್ಲಿ ಗಿಡವನ್ನು ಬೇರು ಸಮೇತ ನೀರಿಗೆ ಹಾಕಿ ಕುದಿಸಬೇಕು. ಸೊಪ್ಪು ಸಿಗದೆ ಇದ್ದರೆ ಇದರ ಪೌಡರ್ ಅನ್ನು ತಂದುಕೊಂಡು 4 ಲೋಟ ನೀರಿಗೆ ಒಂದು ಚಮಚ ಪೌಡರ್ ಬಳಸಬೇಕು. ನಾಲ್ಕು ಲೋಟ ನೀರು ಕುಡಿಯುತ್ತಾ ಒಂದು ಲೋಟ ನೀರಿಗೆ ಕುದಿಸಬೇಕು. ಒಂದು ಲೋಟಕ್ಕೆ ಬಂದ ನಂತರ ಇದನ್ನು ಶೋಧಿಸಿಕೊಂಡು ಕುಡಿಯಬೇಕು. ಒಂದು ದಿನಕ್ಕೆ ಒಬ್ಬ ಮನುಷ್ಯ ಈ ಕಷಾಯವನ್ನು ಕಾಲು ಲೋಟದಷ್ಟು ಮಾತ್ರ ತೆಗೆದುಕೊಳ್ಳಬೇಕು. ಇದನ್ನು ಸಪ್ಪೆಯಾಗಿ ಕುಡಿಯಲು ಇಷ್ಟ ಪಡದೇ ಇರುವವರು ಬೆಲ್ಲವನ್ನು ಸೇರಿಸಿಕೊಂಡು ಕುಡಿಯಬಹುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಅರ್ಜುನ ಮರದ ಔಷಧಿ ಗುಣಗಳು

ಅರ್ಜುನ ಮರದ ಔಷಧಿ ಗುಣಗಳು

ಹೆರಿಗೆಯ ನಂತರ ಕೂದಲು ಉದುರುವಿಕೆ

ಪ್ರತೀ ಮಹಿಳೆಯಲ್ಲಿ ಕಾಣುವ ಸಮಸ್ಯೆ : ಹೆರಿಗೆಯ ನಂತರ ಕೂದಲು ಉದುರುವುದು