in

ಪಪ್ಪಾಯದಷ್ಟೆ ಉಪಯೋಗಿ ಪಪ್ಪಾಯ ಎಲೆಗಳು

ಪಪ್ಪಾಯದಷ್ಟೆ ಉಪಯೋಗಿ ಪಪ್ಪಾಯ ಎಲೆಗಳು
ಪಪ್ಪಾಯದಷ್ಟೆ ಉಪಯೋಗಿ ಪಪ್ಪಾಯ ಎಲೆಗಳು

ಸಾಮಾನ್ಯವಾಗಿ ಪಪ್ಪಾಯಿ ಅಥವಾ ಪಪಾಯಾ ಎಂದು ಕರೆಯಲ್ಪಡುವ ಕ್ಯಾರಿಕಾ ಪಪ್ಪಾಯ ಎಂಬ ಸಸ್ಯವನ್ನು ಉಷ್ಣವಲಯದ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ ಮತ್ತು ಇದು ಅತ್ಯಂತ ಪ್ರಿಯವಾದ ಹಣ್ಣುಗಳಲ್ಲಿ ಒಂದಾಗಿದೆ. ಈ ಹಳದಿ ಬಣ್ಣದ ಕಿತ್ತಳೆಯ ರುಚಿ ಹೊಂದಿರುವ ಹಣ್ಣು ಪೋಷಕಾಂಶಗಳಿಂದ ಕೂಡಿದ್ದು, ಇದು ನಮ್ಮ ಆರೋಗ್ಯಕ್ಕೆ ಅದ್ಭುತವಾದ ಪೋಷಣೆಯನ್ನು ಒದಗಿಸುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ ಮತ್ತು ಪಪ್ಪಾಯಿ ಸಸ್ಯದ ಪ್ರತಿಯೊಂದು ಭಾಗವನ್ನೂ ಒಂದಲ್ಲಾ ಒಂದು ರೀತಿಯಲ್ಲಿ ಔಷಧಿಯಾಗಿ ಬಳಸಬಹುದು.

ಪಪ್ಪಾಯಿ ಎಲೆಗಳೂ ಔಷಧಿಯ ರೂಪದಲ್ಲಿ ಅದ್ಭುತವಾಗಿವೆ ಎಂಬುದು ನಮಗೆ ಗೊತ್ತಾಗಿದ್ದೇ ಸುಮಾರು 2019 ರ ಸಮಯದಲ್ಲಿ. ಪಪ್ಪಾಯಿ ಎಲೆಗಳಲ್ಲಿರುವ ಅಸಿಟೋಜೆನಿನ್ ಎಂಬ ಪೋಷಕಾಂಶಕ್ಕೆ ಮಲೇರಿಯಾ ಮತ್ತು ಡೆಂಘಿ ಜ್ವರದ ವೈರಾಣುಗಳ ವಿರುದ್ದ ಹೋರಾಡುವ ಶಕ್ತಿ ಇದೆ. ಅಷ್ಟೇ ಅಲ್ಲ, ಪಪ್ಪಾಯಿ ಎಲೆಗಳ ರಸ ಇತರ ಬಗೆಗಳಲ್ಲಿಯೂ ಆರೋಗ್ಯನ್ನು ವೃದ್ದಿಸುತ್ತದೆ.

ಇವು ಡೆಂಗಿ ಅಥವಾ ಡೆಂಗ್ಯೂ ಜ್ವರ, ಕ್ಯಾನ್ಸರ್ ಸಹಿತ ಹಲವು ಕಾಯಿಲೆಗಳಿಗೆ ಸಿದ್ಧೌಷಧದ ರೂಪದಲ್ಲಿ ಕೆಲಸ ಮಾಡುತ್ತವೆ. ವಿಶೇಷವಾಗಿ ಇದರ ಎಲೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಪಪಾಯಿನ್ ಎಂಬ ಒಂದು ಪೋಷಕಾಂಶ ಹಾಗೂ ಇತರ ಆಲ್ಕಲಾಯ್ಡ್‌ಗಳೂ ಮತ್ತು ಇತರ ಫಿನಾಲಿಕ್ ಸಂಯುಕ್ತಗಳು ದೇಹದಲ್ಲಿ ಪ್ರೋಟೀನುಗಳನ್ನು ಜೀರ್ಣಿಸಿಕೊಳ್ಳಲು ನೆರವಾಗುತ್ತದೆ ಹಾಗೂ ಇತರ ಜೀರ್ಣಕ್ರಿಯೆಯ ತೊಂದರೆಗಳನ್ನು ನಿವಾರಿಸುತ್ತದೆ. ಡೆಂಗ್ಯೂ ಜ್ವರದ ಹತೋಟಿಗೆ ಪಪ್ಪಾಯಿ ಗಿಡದ ಎಲೆಗಳೇ ಸಾಕು ಪಪ್ಪಾಯಿಯಲಿರುವ ಕಾರ್ಪಾಯ್ನ್ ಎಂಬ ಹೆಸರಿನ ಒಂದು ವಿಶಿಷ್ಟ ಆಲ್ಕಲಾಯ್ಡು ಕ್ಯಾನ್ಸರ್ ಕಾಯಿಲೆಗೆ ನೀಡಲಾಗುವ ಔಷಧಿಗಳ ಅಡ್ಡಪರಿಣಾಮಗಳಿಂದ ರಕ್ಷಿಸುತ್ತದೆ.

ಪಪ್ಪಾಯಿ ಎಲೆಯ ರಸ ಕಹಿಯಾಗಿರಬಹುದು, ಆದರೆ ಇದರ ಗುಣಗಳು ಇನ್ನೂ ಬೇಕಾದಷ್ಟಿವೆ. ಪಪ್ಪಾಯಿ ಎಲೆಗಳನ್ನು ಅರೆದು ಸಂಗ್ರಹಿಸಿದ ರಸವನ್ನು ಕುಡಿಯುವ ಮೂಲಕ ರಕ್ತದಲ್ಲಿರುವ ಪ್ಲೇಟ್ಲೆಟ್ ಅಥವಾ ಕಿರುತಟ್ಟೆಗಳ ಸಂಖ್ಯೆ ವೃದ್ದಿಸುತ್ತದೆ.

ಪಪ್ಪಾಯದಷ್ಟೆ ಉಪಯೋಗಿ ಪಪ್ಪಾಯ ಎಲೆಗಳು
ಡೆಂಘೀ ಜ್ವರ

ರಕ್ತಹೀನತೆಗೆ ಭಾರತದಲ್ಲಿ ಈ ವಿಧಾನವನ್ನು ಹಳ್ಳಿಗಳಲ್ಲಿ ಅನುಸರಿಸಲಾಗುತ್ತದೆ. ಇದರ ಆರೋಗ್ಯಕರ ಪರಿಣಾಮಗಳನ್ನು ಕಂಡ ಬಳಿಕ ಈಗ ಈ ರಸದ ಪ್ರಾಮುಖ್ಯತೆಯನ್ನು ಅರಿಯಲಾಗಿದೆ ಹಾಗೂ ಇದರ ಸಾರ ಇರುವ ಔಷಧಿ ಮತ್ತು ಪೂರಕ ಔಷಧಿಗಳೂ ಮಾರುಕಟ್ಟೆಯಲ್ಲಿ ಲಭ್ಯವಿವೆ.

ಪಪ್ಪಾಯ ಎಲೆ ರಸದಲ್ಲಿರುವ ಆಂಟಿ ಆಕ್ಸಿಡೆಂಟುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಹಾಗೂ ತನ್ಮೂಲಕ ಹೃದಯ ಮತ್ತು ರಕ್ತಪರಿಚಲನಾ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡಲು ನೆರವಾಗುತ್ತದೆ. ಈ ಗುಣವೂ ಪಪ್ಪಾಯಿ ರಸದ ಅತ್ಯುತ್ತಮ ಗುಣಗಳಲ್ಲೊಂದಾಗಿದೆ.

ಪಪ್ಪಾಯಿ ಎಲೆಗಳನ್ನು ಒಣಗಿಸಿದ ಪುಡಿಯಿಂದ ಚಹಾ, ಸಾರ, ರಸ ಮತ್ತು ಮಾತ್ರೆಗಳನ್ನು ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಮತ್ತು ಆರೋಗ್ಯವನ್ನು ಉತ್ತೇಜಿಸಲು ಹೆಚ್ಚಾಗಿ ಬಳಸಲಾಗುತ್ತದೆ. ಪಪ್ಪಾಯಿ ಎಲೆಯಲ್ಲಿ ಅಸಿಟೋಜೀನಿನ್ ಎಂಬ ಸಂಯುಕ್ತವಿದೆ, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಮಲೇರಿಯಾ, ಡೆಂಗಿ ಜ್ವರ ಹಾಗೂ ಕ್ಯಾನ್ಸರ್ ಕಾಯಿಲೆಗಳನ್ನು ಆವರಿಸುವ ಸಾಧ್ಯತೆಯನ್ನು ಅಪಾರವಾಗಿ ಕಡಿಮೆಗೊಳಿಸುತ್ತದೆ.

ಡೆಂಗ್ಯೂ ಎಂದು ಹೆಚ್ಚಿನವರು ತಪ್ಪಾಗಿ ಉಚ್ಛರಿಸುತ್ತಾರೆ. ವೈದ್ಯವಿಜ್ಞಾನದ ಪ್ರಕಾರ ಡೆಂಘಿ ಎನ್ನುವುದೇ ಸರಿಯಾದ ಉಚ್ಛಾರಣೆಯಾಗಿದೆ ಎದುರಾದರೆ ಪಪ್ಪಾಯಿ ಎಲೆಗಳ ರಸವನ್ನು ಕುಡಿದು ವಿಶ್ರಾಂತಿ ಪಡೆದರೆ ಸಾಕು, ಜ್ವರ ಶೀಘ್ರವೇ ಕಡಿಮೆಯಾಗುತ್ತದೆ. ಈ ಜ್ವರದ ಲಕ್ಷಣಗಳಾದ ಜ್ವರ, ಸುಸ್ತು, ತಲೆನೋವು, ವಾಕರಿಕೆ, ಚರ್ಮದಲ್ಲಿ ಕೆಂಪು ಗೀರುಗಳಾಗುವುದು ಹಾಗೂ ವಾಂತಿ ಮೊದಲಾದವುಗಳು ಪಪ್ಪಾಯಿ ಎಲೆಯ ರಸವನ್ನು ಕುಡಿದ ಬಳಿಕ ಶೀಘ್ರವೇ ಇಲ್ಲವಾಗುತ್ತವೆ. ಕೆಲವು ಸಂದರ್ಭಗಳಲ್ಲಿ ಡೆಂಘಿ ಜ್ವರ ಪೀಡಿತ ವ್ಯಕ್ತಿಯ ರಕ್ತದಲ್ಲಿ ಪ್ಲೇಟ್ಲೆಟ್ ಗಳು ಅತಿ ಕಡಿಮೆಯಾಗುತ್ತವೆ ಹಾಗೂ ಇದರಿಂದ ರಕ್ತ ಹೆಪ್ಪುಗಟ್ಟುವಿಕೆ ಅತಿ ನಿಧಾನವಾಗುತ್ತದೆ. ಪ್ಲೇಟ್ಲೆಟ್ ಗಳು ಗಾಳಿಯ ಸಂಪರ್ಕಕ್ಕೆ ಬಂದ ತಕ್ಷಣ ಒಂದಕ್ಕೊಂದು ಅಂಟಿಕೊಂಡು ಗೋಡೆಯನ್ನು ರಚಿಸಿ ರಕ್ತ ನಷ್ಟವಾಗದಂತೆ ತಡೆಯುತ್ತವೆ.

ಡೆಂಘಿ ಜ್ವರ ಪೀಡಿತ ವ್ಯಕ್ತಿಗೆ ಅಕಸ್ಮಾತ್ ಗಾಯವಾದರೆ ರಕ್ತಸ್ರಾವ ವಿಪರೀತವಾಗಿ ಗಂಭೀರ ಸ್ಥಿತಿ ಎದುರಾಗಬಹುದು. ಸಧ್ಯಕ್ಕೆ ಡೆಂಘಿ ಜ್ವರಕ್ಕೆ ಯಾವುದೇ ಔಷಧಿಯನ್ನು ಕಂಡುಹಿಡಿದಿಲ್ಲ. ಅದುವರೆಗೂ ಪಪ್ಪಾಯಿ ರಸವೇ ದಿವ್ಯ ಔಷಧಿ ಎಂದೇ ಪರಿಗಣಿಸಬಹುದು.

ಪಪ್ಪಾಯದಷ್ಟೆ ಉಪಯೋಗಿ ಪಪ್ಪಾಯ ಎಲೆಗಳು
ಪಪ್ಪಾಯ ಎಲೆಗಳು

ಪಪ್ಪಾಯಿ ಎಲೆಗಳಲ್ಲಿ ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಇ, ವಿಟಮಿನ್ ಬಿ ಮತ್ತು ವಿಟಮಿನ್-ಕೆ ಸಮೃದ್ಧವಾಗಿದೆ. ಇದರೊಂದಿಗೆ, ಪರಂಗಿಯು ಪ್ಯಾಪೈನ್, ಚೈಮೊಪಪೈನ್, ಆಲ್ಕಲಾಯ್ಡ್ ಸಂಯುಕ್ತಗಳಂತಹ ಗುಣಗಳನ್ನು ಹೊಂದಿದೆ.

ಪಪ್ಪಾಯಿ ಎಲೆಗಳ ರಸವನ್ನು ತಯಾರಿಸಲು, ಎಲೆಗಳನ್ನು ತೊಳೆದು ತುಂಡುಗಳಿಂದ ಕತ್ತರಿಸಿ. ಇದರ ನಂತರ, ಬ್ಲೆಂಡರ್‌ನಲ್ಲಿ ಸ್ವಲ್ಪ ನೀರು ಸೇರಿಸಿ ಮತ್ತು ಅವುಗಳನ್ನು ಮಿಶ್ರಣ ಮಾಡಿ. ನಿಮಗೆ ಅಗತ್ಯವಿದ್ದರೆ ಉಪ್ಪು ಅಥವಾ ಸಕ್ಕರೆ ಸೇರಿಸಿ ಸೇವಿಸಬಹುದು.

ಪಪ್ಪಾಯಿ ಎಲೆಗಳ ರಸವನ್ನು ಹೆಚ್ಚಾಗಿ ಮಧುಮೇಹಕ್ಕೆ ಚಿಕಿತ್ಸೆ ನೀಡಲು ನೈಸರ್ಗಿಕ ಔಷಧಿಯಾಗಿ ಬಳಸಲಾಗುತ್ತದೆ ಮತ್ತು ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.​​ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ನೆರವಾಗಬಹುದು.

ಪಪ್ಪಾಯಿ ರಸದ ಸೇವನೆಯಿಂದ ರಕ್ತದಲ್ಲಿ ಇನ್ಸುಲಿನ್ ಸುಲಭವಾಗಿ ಹಾನಿಗೊಳಗಾಗುವ ಸಾಧ್ಯತೆಯನ್ನು ಕಡಿಮೆಗೊಳಿಸುವ ಮೂಲಕ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ. ಇದು ಮಧುಮೇಹವನ್ನು ತಡೆಗಟ್ಟಲು ತುಂಬಾ ನೆರವಾಗುತ್ತದೆ.

ಪಪ್ಪಾಯಿ ಎಲೆಯ ಸಾರದಲ್ಲಿ ಉತ್ಕರ್ಷಣ ನಿರೋಧಕ ಅಥವಾ ಆಂಟಿ ಆಕ್ಸಿಡೆಂಟುಗಳು ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟಗಳನ್ನು ಕಡಿಮೆ ಮಾಡುವ ಪರಿಣಾಮಗಳಿಂದ ಕೂಡಿದೆ ಎಂದು ಕಂಡುಕೊಳ್ಳಲಾಗಿದೆ. ಮೇದೋಜೀರಕ ಗ್ರಂಥಿಯಲ್ಲಿನ ಇನ್ಸುಲಿನ್ ಉತ್ಪಾದಿಸುವ ಕೋಶಗಳನ್ನು ಹಾನಿ ಮತ್ತು ಅಕಾಲಿಕ ಮರಣದಿಂದ ರಕ್ಷಿಸುವ ಮೂಲಕ ಇದು ಸಹಾಯ ಮಾಡುತ್ತದೆ.ಪಪ್ಪಾಯಿ ಎಲೆಗಳ ಚಹಾಗಳನ್ನು ಜೀರ್ಣಾಂಗ ವ್ಯವಸ್ಥೆಯ ತೊಂದರೆಗಳಾದ ಅಪಾನವಾಯು, ಹೊಟ್ಟೆ ಉಬ್ಬರಿಕೆ ಮತ್ತು ಎದೆಯುರಿ ಮೊದಲಾದ ತೊಂದರೆಗಳನ್ನು ನಿವಾರಿಸಲು ಬಳಸಲಾಗುತ್ತದೆ. ಪಪ್ಪಾಯಿ ಎಲೆಯಲ್ಲಿ ಉತ್ತಮ ಪ್ರಮಾಣದ ಕರಗದ ನಾರಿನಂಶವಿದೆ. ಇದು ಜೀರ್ಣಂಗಗಳ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಇದು ದೊಡ್ಡ ಪ್ರೋಟೀನ್‌ಗಳನ್ನು ಚಿಕ್ಕದಾಗಿ ಮತ್ತು ಪ್ರೋಟೀನ್ ಮತ್ತು ಅಮೈನೋ ಆಮ್ಲಗಳನ್ನು ಜೀರ್ಣಿಸಿಕೊಳ್ಳುವುದನ್ನು ಸುಲಭವಾಗಿಸುತ್ತದೆ. ಕರುಳಿನ ಉರಿಯೂತದ ಕಾರಣದಿಂದ ಎದುರಾಗುವ ಕರುಳಿನ ಹುಣ್ಣು,

ಮಲಬದ್ದತೆ ಮೊದಲಾದ ತೊಂದರೆಗಳನ್ನು ನಿವಾರಿಸಲೂ ನೆರವಾಗುತ್ತದೆ.ಕ್ಯಾನ್ಸರ್ ನಿರೋಧಕ ಗುಣಗಳನ್ನು ಹೊಂದಿದೆ.ಪಪ್ಪಾಯಿ ಎಲೆಯನ್ನು ಕೆಲವು ಬಗೆಯ ಕ್ಯಾನ್ಸರ್ ಗಳನ್ನು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಸಾಂಪ್ರದಾಯಿಕ ಔಷಧಿ ಪದ್ಧತಿಗಳಲ್ಲಿ ಬಳಸಲಾಗುತ್ತದೆ. ಆದರೆ ಅದನ್ನು ದೃಢೀಕರಿಸಲು ಇನ್ನೂ ಹೆಚ್ಚಿನ ಸಂಶೋಧನೆಗಳ ಅಗತ್ಯವಿದೆ. ಟೆಸ್ಟ್-ಟ್ಯೂಬ್ ಅಧ್ಯಯನಗಳಲ್ಲಿ ಪ್ರಾಸ್ಟೇಟ್ ಮತ್ತು ಸ್ತನ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುವ ಶಕ್ತಿಯನ್ನು ಈ ರಸವನ್ನು ತೋರಿಸಿದೆ.ಪಪ್ಪಾಯಿಯ ರಸದ ಸೇವನೆಯಿಂದ ದೇಹದ ಒಳಗೆ ಉರಿಯೂತ ನಿವಾರಕ ಗುಣಗಳನ್ನು ಪಡೆಯಬಹುದು ಹಾಗೂ ಸ್ನಾಯುಗಳ ನೋವು ಮತ್ತು ಮೂಳೆಸಂಧುಗಳ ನೋವನ್ನೂ ಕಡಿಮೆ ಮಾಡಬಹುದು.

ಕೂದಲ ಬೆಳವಣಿಗೆಗೂ ನೆರವಾಗಬಹುದು.ನೆತ್ತಿಯ ಮೇಲೆ ಪಪ್ಪಾಯಿ ಎಲೆಗಳ ರಸವನ್ನು ಹಚ್ಚಿಕೊಳ್ಳುವ ಮೂಲಕ ನೆತ್ತಿಯ ತ್ವಚೆಗೆ ಉತ್ತಮ ಪೋಷಣೆ ದೊರೆತು ಕೂದಲ ಬೆಳವಣಿಗೆ ಉತ್ತಮಗೊಳ್ಳುತ್ತದೆ ಎಂದು ಹೇಳಲಾಗುತ್ತದೆ.

ಪಪ್ಪಾಯಿ ಎಲೆಯನ್ನು ಔಷಧಿಯಾಗಿ ದ್ರವರೂಪದಲ್ಲಿ ಸೇವಿಸಸಬಹುದು ಮತ್ತು ಮೃದುವಾದ ಮತ್ತು ಕಾಂತಿಯುಕ್ತ ತ್ವಚೆಗಾಗಿ ಚರ್ಮದ ಮೇಲೆ ನೇರವಾಗಿ ಹಚ್ಚಲೂಬಹುದು. ಇದರಲ್ಲಿರುವ ಪಪಾಯಿನ್ ಎಂಬ ಪ್ರೋಟೀನ್ ಕರಗುವ ಕಿಣ್ವವನ್ನು ಹೊಂದಿದ್ದು ಅದು ಸತ್ತ ಜೀವಕೋಶಗಳನ್ನು ನಿವಾರಿಸಲು ನೆರವಾಗುತ್ತದೆ. ಈ ಮೂಲಕ ತ್ವಚೆಯ ಮೇಲೆ ಕುಳಿತಿದ್ದ ಧೂಳು ಮತ್ತು ಸತ್ತ ಚರ್ಮದ ಕೋಶಗಳು ಸುಲಭವಾಗಿ ನಿವಾರಣೆಯಾಗುತ್ತವೆ. ತನ್ಮೂಲಕ ಮುಚ್ಚಿಹೋಗಿದ್ದ ಸೂಕ್ಷ್ಮರಂಧ್ರಗಳು, ಒಳಮುಖ ಬೆಳವಣಿಗೆ ಪಡೆದ ಕೂದಲು ಮತ್ತು ಮೊಡವೆಗಳ ಸಂಭವವನ್ನು ಕಡಿಮೆ ಮಾಡಲು ಸಹ ಇದು ಸಹಾಯ ಮಾಡುತ್ತದೆ.

ಪಪ್ಪಾಯದಷ್ಟೆ ಉಪಯೋಗಿ ಪಪ್ಪಾಯ ಎಲೆಗಳು
ಪಪ್ಪಾಯ ಎಲೆ ರಸ

​ಪಪ್ಪಾಯಿ ಎಲೆಗಳ ರಸವನ್ನು ತಯಾರಿಸುವ ವಿಧಾನ : ಪಪ್ಪಾಯಿ ಎಲೆಗಳ ರಸವನ್ನು ತಯಾರಿಸಲು ಅಗತ್ಯವಿರುವ ಸಾಮಾಗ್ರಿಗಳು ಎಂದರೆ ಕೆಲವು ತಾಜಾ ಪಪ್ಪಾಯಿ ಎಲೆಗಳು ಕೊಂಚ ನೀರು ಅಷ್ಟೇ. ಇದರ ತೊಟ್ಟನ್ನು ಕತ್ತರಿಸಿ ಕೇವಲ ಹಸಿರು ಭಾಗವನ್ನು ಸಂಗ್ರಹಿಸಿ. ಈಗ ಎಲೆಗಳನ್ನು ಮಡಿಕೆಗಳಾಗಿ ಮಡಚಿ ಚಿಕ್ಕದಾಗಿ ಕತ್ತರಿಸಿ. ಎಲೆಕೋಸನ್ನು ಕತ್ತರಿಸಿದಂತೆ ಈ ಎಲೆಗಳನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಬಳಿಕ ಈ ಎಲೆಗಳನ್ನು ಮಿಕ್ಸಿಯ ಬ್ಲೆಂಡರಿನಲ್ಲಿ ಹಾಕಿ ಕೊಂಚ ನೀರು ಬೆರೆಸಿ. ಈಗ ಬ್ಲೆಂಡರನ್ನು ನಡೆಸಿ ಎಲೆಗಳನ್ನು ನುಣ್ಣಗೆ ಅರೆಯಿರಿ. ಈ ರಸವನ್ನು ಸೋಸದೇ ಹಾಗೇ ಕುಡಿಯಬಹುದು. ಡೆಂಗಿ ರೋಗಕ್ಕೆ ಚಿಕಿತ್ಸೆ ನೀಡಲು ಹಗಲಿನಲ್ಲಿ ದಿನಕ್ಕೆ ಮೂರು ಬಾರಿ ತಲಾ 100 ಮಿಲಿಲೀಟರ್ ನಷ್ಟು ಪಪ್ಪಾಯಿ ಎಲೆಗಳ ರಸವನ್ನು ಸೇವಿಸಬಹುದು. ಈ ರಸ ಅತಿ ಕಹಿಯಾಗಿರುವ ಕಾರಣ ಇದರ ರುಚಿಯನ್ನು ಸಹ್ಯಗೊಳಿಸಲು ನೀವು ಸ್ವಲ್ಪ ಉಪ್ಪು ಅಥವಾ ಜೇನನ್ನು ಬೆರೆಸಬಹುದು.

ಪಪ್ಪಾಯ ಎಲೆ ರಸವನ್ನು ನಿಯಮಿತವಾಗಿ ಕುಡಿಯುತ್ತಾ ಬರುವ ಮಹಿಳೆಯರಲ್ಲಿ ಮಾಸಿಕ ದಿನಗಳು ಕ್ರಮಬದ್ಧವಾಗಿರಲು ಹಾಗೂ ನಂತರದ ದಿನಗಳ ನೋವು ಹಾಗೂ ಮಾನಸಿಕ ವಿಕ್ಷೋಭೆ ಕಡಿಮೆಯಾಗಲು ನೆರವಾಗುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ವೀಣೆ ಶೇಷಣ್ಣ

ವೀಣೆ ಶೇಷಣ್ಣ : ಕರ್ನಾಟಕ ಸಂಗೀತ ಪದ್ಧತಿಯ ಪ್ರಸಿದ್ಧ ವೈಣಿಕರು

ಭಾಯಿ ದೂಜ್

ಭಾಯಿ ದೂಜ್: ಈ ದಿನದ ಆಚರಣೆಗಳು ರಕ್ಷಾ ಬಂಧನದ ಹಬ್ಬವನ್ನು ಹೋಲುತ್ತದೆ