in ,

ಕಿವಿ ಹಣ್ಣು ತಿಂದರೆ ಏನು ಲಾಭ ಇದೆ?

ಕಿವಿ ಹಣ್ಣು
ಕಿವಿ ಹಣ್ಣು

ಪ್ರಪಂಚದ ಬಹಳ ಭಾಗಗಳಲ್ಲಿ ಕೀವಿ ಹಣ್ಣನ್ನು ಕೀವಿ ಎಂದು ಚಿಕ್ಕದಾಗಿ ಕರೆಯುತ್ತಾರೆ, ಎಕ್ಟಿಂಡಿಯ ಡೆಲಿಸಿಯೊಸ ತಳಿಯ ಕಾಡು ಬಳ್ಳಿಯ ಬೆರಿ ಗುಂಪಿಗೆ ಸೇರಿದ ಖಾದ್ಯ ಮತ್ತು ಎಕ್ವಿಂಡಿಯ ಗುಂಪಿನ ಇತರ ವರ್ಗಗಳು ಮತ್ತು ಇದರ ಮಧ್ಯೆ ಹೈಬ್ರೀಡ್ ಮಾಡಲಾಗಿದೆ. ಎಕ್ಟಿಂಡಿಯ ಉತ್ತರ ಪೂರ್ವ ಏಷ್ಯಾಕ್ಕೆ ಸ್ಥಳೀಯವಾಗಿದೆ, ವಿಶೇಷವಾಗಿ ಚೀನಾದ ದಕ್ಷಿಣಕ್ಕೆ ಕೀವಿಹಣ್ಣಿನ ಹೆಚ್ಚು ಸಾಮಾನ್ಯವಾದ ತಳಿಗಳು ಅಂಡಾಕೃತಿಯದಾಗಿವೆ, ಸುಮಾರು ದೊಡ್ಡ ಕೋಳಿ ಮೊಟ್ಟೆಯ ಅಳತೆಯಲ್ಲಿರುತ್ತವೆ. ಇದು ನಾರಿನಂಶವನ್ನು ಹೊಂದಿದೆ, ಮಾಸಲು ಕಂದು-ಹಸಿರು ಬಣ್ಣದ ಸಿಪ್ಪೆ ಮತ್ತು ಹೊಳೆಯುವ ಹಸಿರು ಬಣ್ಣ ಅಥವಾ ಬಂಗಾರ ಬಣ್ಣದ ತಿರುಳುಗಳ ಜೊತೆ ಸಾಲಾಗಿರುವ ಚಿಕ್ಕದಾದ ಕಪ್ಪು ಬಣ್ಣದ ತಿನ್ನಬಹುದಾದ ಬೀಜಗಳು. ಹಣ್ಣು ಮೃದುವಾದ ಮೇಲ್ಮೈ ಮತ್ತು ವಿಶಿಷ್ಟವಾದ ಸುವಾಸನೆಯನ್ನು ಹೊಂದಿದೆ, ಮತ್ತು ಈಗ ಇದು ಬಹಳ ದೇಶಗಳಲ್ಲಿ ವ್ಯಾಪಾರದ ಬೆಳೆಯಾಗಿದೆ, ಮುಖ್ಯವಾಗಿ ಇಟಲಿ, ಚೀನಾ, ಮತ್ತು ನ್ಯೂಜಿಲೆಂಡ್ ಗಳಲ್ಲಿ. ಚೀನಾದ ಗೂಸ್‌ ಬೆರ್ರಿ ಎಂದು ಸಹ ಕರೆಯುವರು,1950ರ ದಶಕದಲ್ಲಿ ಮಾರುಕಟ್ಟೆಯಲ್ಲಿ ರಫ್ತು ಮಾಡುವ ಕಾರಣಗಳಿಗಾಗಿ ಮರುನಾಮಕರಣ ಮಾಡಿದ್ದರು. ಮೆಲೋನೆಟ್ ಎಂದು ಚಿಕ್ಕದಾಗಿ, ನ್ಯೂಜಿಲೆಂಡಿನ ರಫ್ತುಗಾರರು ಕೀವಿಹಣ್ಣು ಎಂದು ಕರೆದರು. ಕಂದು ಬಣ್ಣದ ಹಾರಲಾರದ ಹಕ್ಕಿ ಮತ್ತು ನ್ಯೂಜಿಲೆಂಡಿನ ರಾಷ್ಟ್ರೀಯ ಚಿಹ್ನೆ ಕೀವಿಯಿಂದ ಈ ಕೊನೆಯ ಹೆಸರು ಬಂತು, ಮತ್ತು ನ್ಯೂಜಿಲೆಂಡಿನ ಜನರಿಗೆ ಇದು ಒಂದು ಆಡುಮಾತಿನ ಹೆಸರು ಸಹ ಆಗಿದೆ.

ಕಿವಿ ಹಣ್ಣು ತಿಂದರೆ ಏನು ಲಾಭ ಇದೆ?
ಕಿವಿ ಹಣ್ಣು

ಈ ಹಣ್ಣು ಕೀವಿಹಣ್ಣು ಎಂದು ವ್ಯಾವಹಾರಿಕವಾಗಿ ಬಳಕೆಗೆ ಬರುವ ಮೊದಲು ದೀರ್ಘ ಇತಿಹಾಸವನ್ನು ಹೊಂದಿತ್ತು ಮತ್ತು ಆದ್ದರಿಂದ ಇದು ಬಹಳ ಹಳೆಯ ಹೆಸರುಗಳನ್ನೂ ಹೊಂದಿದೆ.

ನ್ಯೂಜಿಲೆಂಡಿನ ಹೆಚ್ಚು ಕೀವಿಹಣ್ಣುಗಳು ಜೆಸ್ಪ್ರಿ ಹೆಸರಿಮುದ್ರೆಯ ಅಡಿಯಲ್ಲಿ ಮಾರಾಟವಾಗುತ್ತದೆ ಇದು ಜೆಸ್ಪ್ರಿ ಇಂಟರ‍್ನ್ಯಾಷನಲ್ ಎನ್ನುವ ನ್ಯೂಜಿಲೆಂಡಿನಲ್ಲಿರುವ ವ್ಯಾಪಾರ ಕಂಪನಿಯ ಟ್ರೇಡ್‍ಮಾರ್ಕ್ ಆಗಿದೆ. ಬ್ರಾಂಡಿಂಗ್ ಮಾಡುವ ಯೋಜನೆಯು ಸಹಾ ನ್ಯೂಜಿಲೆಂಡ್ ಕೀವಿ ಹಣ್ಣನ್ನು, ಆಗಿನ್ನೂ ಟ್ರೇಡ್‌ಮಾರ್ಕ್ ಮಾಡಿರದಿದ್ದ “ಕೀವಿ” ಹೆಸರಿನಿಂದ ಹಣ ಮಾಡಲು ಬಯಸಿದ್ದ ಇತರ ದೇಶಗಳಲ್ಲಿ ಉತ್ಪಾದಿಸಲಾದ ಕೀವಿ ಹಣ್ಣುಗಳಿಂದ ಪ್ರತ್ಯೇಕವಾಗಿಸಿತು.

ಹೋಳಾದ ಬಂಗಾರದ ಕೀವಿಹಣ್ಣು
ಹೊಂಬಣ್ಣದ ಕೀವಿಹಣ್ಣು ಅಥವಾ “ಹಿನೆಬಲ್”, ಜೊತೆಗೆ ಹಳದಿ ತಿರುಳು ಮತ್ತು ಸಿಹಿಯಾಗಿರುವ, ಕಡಿಮೆ ಆಮ್ಲೀಯ ಸ್ವಾದದ ಹಣ್ಣಿನ ಮಿಶ್ರಣ ಮಾಡಬಹುದು, ಈ ಹೊಸ ತಳಿಯನ್ನು ಕ್ರೌನ್ ಶೋಧನಾ ಸಂಸ್ಥೆ, ಹೊರ್ಟ್ ರಿಸರ್ಚ್ ಶೋಧಿಸಿತು ಮತ್ತು ಹೆಚ್ಚುತ್ತಿರುವ ಪ್ರಮಾಣದಲ್ಲಿ ವಿಶ್ವದ ತುಂಬೆಲ್ಲಾ ಮಾರಾಟವಾಯಿತು. ಭಾರತದ ಕೆಲವು ಕಾಡು ಬಳ್ಳಿಗಳು ಹಳದಿ ಹಣ್ಣನ್ನು ಹೊಂದಿರುತ್ತವೆ ಆದರೆ ಅವು ಸಣ್ಣದಾಗಿವೆ ಮತ್ತು ವಾಣಿಜ್ಯವಾಗಿ ಉಳಿಯುವಂತಹುಗಳು. 1987ರಲ್ಲಿ ಈ ಗಿಡಗಳ ಬೀಜಗಳನ್ನು ನ್ಯೂಜಿಲೆಂಡಿನಿಂದ ಆಮದು ಮಾಡಿಕೊಳ್ಳಲಾಯಿತು ಮತ್ತು ಭಿನ್ನ ತಳಿಗಳ ಪರಾಗಸ್ಪರ್ಶ ಮತ್ತು ಹಸಿರು ಕೀವಿಹಣ್ಣಿನ ವೈನುಗಳನ್ನು ಕಸಿ ಮಾಡುವುದರ ಮೂಲಕ ಹೊಸ ಹಣ್ಣನ್ನು ವಿಕಾಸಗೊಳಿಸಲು ಕಂಪನಿ 11 ವರ್ಷ ತೆಗೆದುಕೊಂಡಿತು. ಹೊಂಬಣ್ಣದ ಕೀವಿಹಣ್ಣು ಮೃದುವಾದ ಕಂದು ಬಣ್ಣದ ಸಿಪ್ಪೆ, ಒಂದು ತುದಿಯಲ್ಲಿ ಕ್ಯಾಪ್, ಮತ್ತು ಕಡಿಮೆ ಒಗರಿರುವ ಭಿನ್ನವಾದ ಹೊನ್ನಿನ ಹಳದಿ ತಿರುಳು ಮತ್ತು ಹಸಿರು ಕೀವಿಹಣ್ಣಿಗಿಂತ ಹೆಚ್ಚಿನ ಸ್ವಾದಗಳನ್ನು ಹೊಂದಿರುತ್ತದೆ. ಇದರ ಮಾರಾಟ ಬೆಲೆ ಕೀವಿಹಣ್ಣಿಗಿಂತ ಹೆಚ್ಚಾಗಿದೆ. ಹಸಿರು ತಳಿಗಳಿಗಿಂತ ಇದು ಹೆಚ್ಚು ನವಿರಾಗಿದೆ, ಆದ್ದರಿಂದ ಹಗುರಾದ ಹೊದಿಕೆಯಂತಿರುವ ಸಿಪ್ಪೆಯನ್ನು ಉಜ್ಜಿಕೊಂಡು ಪೂರ್ತಿ ಹಣ್ಣನ್ನು ತಿನ್ನಬಹುದು. ಕೆಲವೊಮ್ಮೆ ಕೊಡುವ ಮೊದಲು ಕೀವಿಹಣ್ಣಿನ ಸಿಪ್ಪೆಯನ್ನು ತೆಗೆದಿಟ್ಟಾಗ ಇದನ್ನು ಪೂರ್ತಿಯಾಗಿ ತಿನ್ನಬಹುದಾಗಿದೆ.

ಕಿವಿ ಹಣ್ಣು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುವುದು ಮತ್ತು ರಕ್ತದೊತ್ತಡವನ್ನು ಸಮತೋಲನ ದಲ್ಲಿಟ್ಟುಕೊಂಡು ರಕ್ತದಲ್ಲಿನ ಕೊಬ್ಬು ಕಡಿಮೆ ಮಾಡುವುದು.

ಕಿವಿ ಹಣ್ಣು ತಿಂದರೆ ಏನು ಲಾಭ ಇದೆ?
ಕಿವಿ ಹಣ್ಣು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.

ಕಿವಿ ಹಣ್ಣಿನ ಸೇವನೆಯಿಂದ ಹೃದಯವೂ ಆರೋಗ್ಯಕರವಾಗಿರುತ್ತದೆ. ಇದರಲ್ಲಿರುವ ಪೊಟ್ಯಾಸಿಯಮ್ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಅದೇ ಸಮಯದಲ್ಲಿ, ಫೈಬರ್ ಮತ್ತು ವಿಟಮಿನ್ಗಳ ಪ್ರಮಾಣವು ಅಪಧಮನಿಗಳನ್ನು ಬಲವಾಗಿ ಇಡುತ್ತದೆ.

ಕಿವಿ ಹಣ್ಣು ತಿನ್ನುವುದರಿಂದ ರಕ್ತದ ಪ್ಲೇಟ್ ಲೆಟ್ ಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತದೆ. ಹೀಗಾಗಿ ಕಿವಿ ಹಣ್ಣು ತಿನ್ನುವುದರಿಂದ ಡೆಂಗ್ಯೂ ಮತ್ತು ಕಾಮಾಲೆಯ ರೋಗದಿಂದ ದೂರವಿರಬಹುದು.
ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ಪ್ರಮಾಣವು ಹೇರಳವಾಗಿದ್ದು ಇದು ಜೀವಕೋಶಗಳು ನಿರ್ನಾಮವಾಗದಂತೆ ತಡೆಯುವುದರ ಜೊತೆಗೆ ದೇಹದ ಉರಿಯೂತವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ

ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್ ಅಂಶವು ಅಸ್ತಮಾದ ಲಕ್ಷಣಗಳನ್ನು ಕಡಿಮೆ ಮಾಡುವುದು. ಕಿವಿ ಹಣ್ಣನ್ನು ನಿಯಮಿತವಾಗಿ ಸೇವನೆ ಮಾಡಿದವರಲ್ಲಿ ಶ್ವಾಸಕೋಶದ ಕಾರ್ಯವು ಸುಧಾರಣೆ ಆಗುವುದು ತಿಳಿದುಬಂದಿದೆ.

ಹಣ್ಣಿನಲ್ಲಿರುವ ವಿಟಮಿನ್ ಸಿ ಆಂಟಿಆಕ್ಸಿಡೆಂಟ್‌ಗಳು, ಫೈಬರ್ ಮತ್ತು ಪೊಟ್ಯಾಸಿಯಮ್‌ನಂತಹ ಅಂಶಗಳು ಅನೇಕ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಡೆಂಗ್ಯೂ ಜ್ವರದಿಂದಾಗಿ, ರಕ್ತದ ಪ್ಲೇಟ್‌ಲೆಟ್‌ಗಳ ಸಂಖ್ಯೆಯು ಬಹಳ ವೇಗವಾಗಿ ಕುಸಿಯಲು ಪ್ರಾರಂಭಿಸುತ್ತದೆ. ಕಿವಿ ಹಣ್ಣಿನ ಸೇವನೆಯು ಪ್ಲೇಟ್‌ಲೆಟ್‌ಗಳು ಕಡಿಮೆಯಾಗದಂತೆ ತಡೆಯಲು ಸಹಾಯ ಮಾಡುತ್ತದೆ.

ಕಿವಿ ಹಣ್ಣು ತಿಂದರೆ ಏನು ಲಾಭ ಇದೆ?
ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ಪ್ರಮಾಣವು ಹೇರಳವಾರುತ್ತದೆ

ಪ್ರೋಟೀನ್ ನ್ನು ಇದು ಸುಲಭವಾಗಿ ವಿಘಟಿಸಲು ನೆರವಾಗುವುದು ಮತ್ತು ಹೊಟ್ಟೆಯಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ಉಬ್ಬರ ಕಡಿಮೆ ಮಾಡುವುದು. ಇದರಲ್ಲಿ ಹಗುರವಾದ ವಿರೇಚಕ ಗುಣವಿರುವ ಕಾರಣದಿಂದಾಗಿ ಇದು ಜೀರ್ಣಕ್ರಿಯೆ ನಿಧಾನವಾಗಿ ಆಗುವಂತೆ ಮಾಡುವುದು.

ಮಲಬದ್ಧತೆ ಇರುವಂತವರು, ಕಿವಿ ಹಣ್ಣನ್ನು ತಿಂಗಳಿಗೆ 8-10 ಬಾರಿ ಬಳಸಬೇಕು. ದೀರ್ಘಕಾಲದ ಮಲಬದ್ಧತೆ ನಿವಾರಣೆಗೆ ಇದು ತುಂಬಾ ಪರಿಣಾಮಕಾರಿಯಾಗಿದೆ.

ಇದರಲ್ಲಿ ಇರುವಂತಹ ವಿಟಮಿನ್ ಸಿ ಅಂಶವು ಚರ್ಮಕ್ಕೆ ತುಂಬಾ ಅದ್ಭುತವಾಗಿ ಕೆಲಸ ಮಾಡುವುದು. ಕಿವಿ ಹಣ್ಣನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಅದರಿಂದ ಹೆಚ್ಚಿನ ಲಾಭವಾಗಲಿದೆ. ವಿಟಮಿನ್ ಸಿ ಚರ್ಮದ ಅಂಗಾಂಶಗಳನ್ನು ಸರಿಪಡಿಸುವುದು ಮತ್ತು ದೇಹವನ್ನು ಹೈಡ್ರೇಟ್ ಆಗಿಡುವುದು.

ಕಿವಿಯಲ್ಲಿ ಸಿರೊಟೋನಿನ್ ಇದ್ದು ಇದು ಸಂತೋಷದ ಹಾರ್ಮೋನ್ ಅನ್ನು ಹೆಚ್ಚಿಸುತ್ತದೆ. ಉತ್ತಮ ನಿದ್ರೆಗಾಗಿ, ರಾತ್ರಿ ಮಲಗುವ ಕನಿಷ್ಠ ಒಂದು ಗಂಟೆ ಮೊದಲು ನೀವು ಕಿವಿ ಹಣ್ಣನ್ನು ಸೇವಿಸುವುದರಿಂದ ಪರಿಹಾರ ಪಡೆಯಬಹುದು.

ಕಿವಿ ಹಣ್ಣನ್ನು ಸೇವಿಸುವುದರಿಂದ ನಾವು ಸಿರೊಟೋನಿನ್ ಎಂಬ ಅಂಶವನ್ನು ಪಡೆಯುತ್ತೇವೆ ಅದು ಉತ್ತಮ ಹಾರ್ಮೋನ್ ಆಗಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಜೂನ್ 7 ಮಂಗಳವಾರ ಹೇಳು ರಾಶಿಯವರಿಗೆ ರಾಜಯೋಗ ಶುರು ಬಾರಿ ಅದೃಷ್ಟ.

ಜೂನ್ 7 ಮಂಗಳವಾರ ಹೇಳು ರಾಶಿಯವರಿಗೆ ರಾಜಯೋಗ ಶುರು ಬಾರಿ ಅದೃಷ್ಟ.

2022ರಿಂದ 2072ರ ವರೆಗೂ 8 ರಾಶಿಯವರು ಆಗರ್ಭ ಶ್ರೀಮಂತರು ಕೋಟಿ ಕೋಟಿ ಹಣ ಸುರಿಯುತ್ತೆ

2022ರಿಂದ 2072ರ ವರೆಗೂ 8 ರಾಶಿಯವರು ಆಗರ್ಭ ಶ್ರೀಮಂತರು ಕೋಟಿ ಕೋಟಿ ಹಣ ಸುರಿಯುತ್ತೆ