in ,

ಕೇಸರಿ ಸೇವಿಸುವುದರಿಂದ ಆಗುವ ಪ್ರಯೋಜನಗಳು

ಕೇಸರಿ ಸೇವಿಸುವುದರಿಂದ ಆಗುವ ಪ್ರಯೋಜನಗಳು
ಕೇಸರಿ ಸೇವಿಸುವುದರಿಂದ ಆಗುವ ಪ್ರಯೋಜನಗಳು

ಕೇಸರಿಯು ಒಂದು ಮಸಾಲೆ ಪದಾರ್ಥವಾಗಿದ್ದು ಇರಿಡೇಸೇಯ ಕ್ರೋಕಸ್ ಜಾತಿಗೆ ಸೇರಿದಂತಹ ಸ್ಯಾಫ್ರನ್ ಕ್ರೋಕಸ್ ಗಿಡದ ಒಂದು ಹೂವು. ಒಂದು ಸಿ. ಸ್ಯಾಟಿವಸ್ ಹೂವು, ಪ್ರತಿ ಶಲಾಕೆಯ ತುದಿಗೆ ಮೂರು ಕೇಸರಗಳನ್ನು ಹೊಂದಿರುತ್ತದೆ. ಅವುಗಳ ಕಂಠಗಳು ದಂಟುಗಳನ್ನು ಅವುಗಳ ಆಥಿತೇಯ ಸಸ್ಯಗಳ-ಕೇಸರಗಳಿಗೆ ಸೇರಿಸುವ ಕೇಸರಗಳನ್ನು ಒಣಗಿಸಿ ಅವನ್ನು ಆಹಾರಕ್ಕೆ ಬಣ್ಣ ನೀಡುವುದಕ್ಕಾಗಿ ಬಳಸುತ್ತಾರೆ. ನೈಋತ್ಯ ಏಷ್ಯಾದಲ್ಲಿ ಬೆಳೆಯುವ ಕೇಸರಿಯು ವಿಶ್ವದ ಅತ್ಯಂತ ಬೆಲೆಬಾಳುವ ಮಸಾಲೆ ಪದಾರ್ಥವಾಗಿದೆ.

ಕೇಸರಿಯ ವೈಜ್ಞಾನಿಕ ಹೆಸರು “ಸ್ಯಾಫ್ರಾನ್ ಕ್ರೋಕಸ್” ಕ್ರೋಕಸ್ ಸ್ಯಾಟಿವಸ್ ಎಂಬ ಸುಂದರವಾದ ಹೂವಿನಿಂದ ಬಂದಿದೆ. ಪ್ರತಿ ಹೂವು 3 ಕೇಸರಗಳ್ನು ಹೊಂದಿರುತ್ತದೆ. ಹೂವುಗಳನ್ನು ಕೊಯ್ಲು ಮಾಡಿದ ನಂತರ ಈ ಕೇಸರಿಗಳನ್ನು ಸುಮಾರು 12 ಗಂಟೆಗಳ ಕಾಲ ಒಣಗಿಸಬೇಕು.

‘ಕೇಸರಿ’ ಭಾರತೀಯ ಅಡಿಗೆಯಲ್ಲಿ ಅತ್ಯಂತ ಪ್ರಸಿದ್ಧವಾಗಿದ್ದು ದುಬಾರಿ ಮಸಾಲೆ ಪದಾರ್ಥವಾಗಿದೆ. ಕೇಸರಿ ಬೆರೆಸಿದ ಹಾಲು ಅಥವಾ ಕೇಸರಿ ಹಾಲನ್ನು ಪ್ರತಿದಿನ ಕುಡಿಯುವುದರಿಂದ ಜೀರ್ಣಶಕ್ತಿ ಮತ್ತು ಹಸಿವು ಸುಧಾರಿಸುವುದಷ್ಟೇ ಅಲ್ಲದೇ, ನಿಮಗೆ ಆರೋಗ್ಯ ಮತ್ತು ಹೊಳೆಯುವ ಚರ್ಮವನ್ನೂ ನೀಡುತ್ತದೆ. ಇದರೊಂದಿಗೆ, ಕೇಸರಿ ಹಾಲನ್ನು ನಿಯಮಿತವಾಗಿ ಕುಡಿಯುವುದರಿಂದ ವ್ಯಕ್ತಿಯ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ನಿದ್ರಾಹೀನತೆಯಿಂದ ಬಳಲುವವರಿಗೆ ಇದು ಅತ್ಯಂತ ಪ್ರಮುಖ ಪೇಯವಾಗಿದ್ದು ಇದು ಉತ್ತಮವಾಗಿ ನಿದ್ರಿಸಲು ನೆರವಾಗುತ್ತದೆ. ಕೇಸರಿ ಹಾಲನ್ನು ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಶಿಫಾರಸು ಮಾಡಲಾಗುತ್ತದೆ.

ಕೇಸರಿ ವಿವಿಧ ಸಸ್ಯ ಸಂಯುಕ್ತಗಳನ್ನು ಹೊಂದಿದೆ. ಇದು ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತದೆ. ಈ ಉತ್ಕರ್ಷಣ ನಿರೋಧಕಗಳಲ್ಲಿ ಕ್ರೋಸಿನ್, ಕ್ರೋಸೆಟಿನ್, ಸಫ್ರಾನಾಲ್ ಮತ್ತು ಕೆಂಪ್ಫೆರಾಲ್ ಸೇರಿವೆ. ಒತ್ತಡ ಮತ್ತು ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡಿ ಕೋಶಗಳನ್ನು ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತವೆ.

ಒಂದು ಲೋಟ ಹಾಲಿನೊಂದಿಗೆ ಒಂದು ದಳ ಕೇಸರಿ ಸೇರಿಸುವುದು ಶರೀರ ಮತ್ತು ಮನಸ್ಸಿನ ಮೇಲೆ ಅದ್ಭುತ ಪರಿಣಾಮಗಳನ್ನು ನೀಡುತ್ತದೆ.

ಕೇಸರಿ ಸೇವಿಸುವುದರಿಂದ ಆಗುವ ಪ್ರಯೋಜನಗಳು
ಕೇಸರಿ ಹಾಲು

ಒಂದು ದಳ ಕೇಸರಿಯನ್ನು ಹಾಲಿನಲ್ಲಿ ಸೇರಿಸುವುದರಿಂದ ಅದು ನಿಮ್ಮ ಹೃದಯಕ್ಕೆ ಅದ್ಭುತವಾಗಿರುತ್ತದೆ. ’ಗುಣಕಾರಕ ಆಹಾರಗಳು’ ಎನ್ನುವ ಪುಸ್ತಕದ ಪ್ರಕಾರ ಇದು ರಕ್ತ ಪರಿಚಲನೆಯನ್ನು ಪ್ರಚೋದಿಸುತ್ತದೆ, ರಕ್ತನಾಳಗಳು ಗಟ್ಟಿಯಾಗುವುದನ್ನು ತಡೆಯುತ್ತದೆ. ಇದು ಕ್ರೊಸೆಟಿನ್ ಎನ್ನುವ ಸಕ್ರಿಯ ಸಂಯುಕ್ತ ಪದಾರ್ಥವನ್ನು ಹೊಂದಿದ್ದು, ಇದು ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಹೃದಯ ಸಂಬಂಧಿ ರೋಗಗಳನ್ನು ತಡೆಗಟ್ಟಲು ನೆರವಾಗುತ್ತದೆ.

ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಮತ್ತು ಋತು ಬದಲಾವಣೆಯಲ್ಲಿ ಕಾಡುವ ಸಾಮಾನ್ಯ ಶೀತ ಜ್ವರವನ್ನು ದೂರವಿರಿಸಲು ಸಹಾಯ ಮಾಡುತ್ತದೆ. ಒಂದು ಅಧ್ಯಯನದಲ್ಲಿ ಕೇಸರಿಯಲ್ಲಿರುವ ಕ್ಯಾರೊಟಿನಾಯ್ಡ್‌ಗಳು ಈ ಕಾರ್ಯಕ್ಕೆ ಕಾರಣವಾಗಿರಬಹುದು ಮತ್ತು ಹ್ಯೂಮರಲ್ ಮತ್ತು ಸೆಲ್ಯುಲಾರ್ ಇಮ್ಯುನಿಟಿ ಕಾರ್ಯಗಳ ಮೇಲೆ ಪರಿಣಾಮ ಬೀರಬಹುದು ಎಂದು ತಿಳಿಸಲಾಗಿದೆ.

ಕೇಸರಿಯ ನಿಯಮಿತ ಸೇವನೆಯು ಆಲ್ಝೈಮರ್ನ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಸಾಬೀತು ಮಾಡಿದೆ.. 2015 ರ ಅಧ್ಯಯನವು ಮೆದುಳಿನಲ್ಲಿ ಉರಿಯೂತ ಮತ್ತು ಆಕ್ಸಿಡೇಟಿವ್ ಹಾನಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಕಂಡುಹಿಡಿದಿದೆ, ಜೊತೆಗೆ ಕೆಲವು ನರಮಂಡಲದ ಹಾನಿಯನ್ನು ತಡೆಯುತ್ತದೆ.

ಪ್ರತಿದಿನ ಕೇಸರಿ ಬೆರೆಸಿದ ಹಾಲನ್ನು ಕುಡಿಯುವುದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಕೇಸರಿ ಅತ್ಯುತ್ತಮವಾದ ನೆನಪಿನ ಶಕ್ತಿ ಪ್ರಚೋದಕವಾಗಿದೆ. ಅಧ್ಯಯನವೊಂದರ ಪ್ರಕಾರ ಇದು ಆಲ್ಜೀಮರ್ಸ್ ರೋಗದ ಲಕ್ಷಣಗಳನ್ನು ಕಡಿಮೆ ಮಾಡಲು ಮತ್ತು ತಡೆಗಟ್ಟಲು ಪ್ರಾಕೃತಿಕ ಪರಿಹಾರವಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ. ಕೇಸರಿ ಹಿಪ್ಪೋಕ್ಯಾಂಪಸ್ ನಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ತಡೆಯುವ ಮೂಲಕ, ನೆನಪಿನ ಶಕ್ತಿ ಹೆಚ್ಚಿಸುತ್ತದೆ.

ನಾರಿನಾಂಶ ಜೀರ್ಣಕ್ರಿಯೆಯಲ್ಲಿನ ಸಮಸ್ಯೆಯನ್ನು ದೂರ ಮಾಡಿದರೆ. ವಿಟಮಿನ್ ಎ ಕಣ್ಣಿನ ಆರೋಗ್ಯ ಸುಧಾರಿಸುತ್ತದೆ. ನಿಯಾಸಿನ್, ಪಿರಿಡಾಕ್ಸಿನ್, ರಿಬೋಪ್ಲಾವಿನ್ ಮತ್ತು ಪೋಲಿಕ್ ಆಮ್ಲವಿದೆ. ವಿಟಮಿನ್ ಸಿ ಕೂಡ ಇದ್ದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಸ್ಮರಣಶಕ್ತಿಯನ್ನು ಸುಧಾರಿಸುತ್ತದೆ ಕೇಸರಿಯಲ್ಲಿ ಕಂಡುಬರುವ ಕ್ರೋಸಿನ್ ಮತ್ತು ಕ್ರೋಸೆಟಿನ್ ರಾಸಾಯನಿಕ ಸಂಯುಕ್ತಗಳು ಜ್ಞಾಪಕಶಕ್ತಿ ಮತ್ತು ಮೆದುಳಿನ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಕೇಸರಿ ಸೇವಿಸುವುದರಿಂದ ಆಗುವ ಪ್ರಯೋಜನಗಳು
ಕೇಸರಿ ಬೆಳೆ

ಕೇಸರಿ ಹಾಲು ಜ್ವರ ಮತ್ತು ನೆಗಡಿಯನ್ನು ಗುಣಪಡಿಸಲು ಪರಿಣಾಮಕಾರಿ ಪೇಯವಾಗಿದೆ. ಆರೋಗ್ಯ ತಜ್ಞರ ಪ್ರಕಾರ, ನಾವು ಹಣೆಯ ಮೇಲೆ ಕೇಸರಿ ಬೆರೆಸಿದ ಹಾಲನ್ನು ಹಚ್ಚುವುದರಿಂದ ಶೀಘ್ರವಾಗಿ ನೆಗಡಿಯಿಂದ ಉಪಶಮನ ದೊರೆಯುತ್ತದೆ. ಕೇಸರಿ ಹಾಲು ಅನೇಕ ಗುಣಕಾರಕ ಲಕ್ಷಣಗಳನ್ನು ಹೊಂದಿದ್ದು, ಇದು ನೆಗಡಿ ಉಂಟಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

​ಕೇಸರಿಯು ಬಹಳ ಪ್ರಸಿದ್ಧವಾದ ಮತ್ತು ಪುರಾತನವಾದ ಕಾಮೋತ್ತೇಜಕ ಮೂಲಿಕೆಯಾಗಿದೆ. ಇದರ ಸೇವನೆ ಲೈಂಗಿಕ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಕೇಸರಿಯು ವೀರ್ಯಾಣುಗಳ ಬಲಿಷ್ಠತೆ ಮತ್ತು ಸಂಖ್ಯೆಯನ್ನು ಹೆಚ್ಚಿಸುತ್ತದೆ. ಕೇಸರಿಯು ಬಂಜೆತನಕ್ಕೆ ಚಿಕಿತ್ಸೆ ನೀಡಲು ಸಹ ಸಹಾಯ ಮಾಡುತ್ತದೆ.

ತೂಕವನ್ನು ಕಳೆದುಕೊಳ್ಳಲು ಇದು ಸಹಾಯ ಮಾಡುತ್ತದೆ. ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಜಂಕ್ ಫುಡ್ ಅನ್ನು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ ಮತ್ತು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ಸಾಬೀತಾಗಿದೆ.

ಕೇಸರಿ ಹಾಲು ಸರಿಯಾಗಿ ನಿದ್ರಿಸಲು ಕಷ್ಟಪಡುವ ವ್ಯಕ್ತಿಗಳಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇದು ಸ್ಯಾಫ್ರನಾಲ್, ಪೈಕ್ರೋಕ್ರೋಸಿನ್ ಮತ್ತು ಕ್ರೋಸಿನ್ ನಂತಹ ಸಂಭಾವ್ಯ ಆಂಟಿ ಆಕ್ಸಿಡೆಂಟ್ ಗಳನ್ನು ಹೊಂದಿರುವುದರಿಂದ ನಿಮ್ಮ ಆರೋಗ್ಯ ಸಮಸ್ಯೆಗಳನ್ನು ದೂರದಲ್ಲಿಡುತ್ತದೆ. ಕೇಸರಿ ಬೆರೆಸಿದ ಹಾಲು ಅಥವಾ ಟೀ ನಿದ್ರಾಹೀನತೆಯನ್ನು ಗುಣಪಡಿಸಿ, ಖಿನ್ನತೆಗೂ ಉಪಶಮನ ನೀಡುತ್ತದೆ. ಈ ಮಸಾಲೆ ಮ್ಯಾಂಗನೀಸ್ ಅನ್ನು ಸಮೃದ್ಧವಾಗಿ ಹೊಂದಿದ್ದು, ಇದು ನಿದ್ರೆಯನ್ನು ಪ್ರಚೋದಿಸಲು ಅಲ್ಪ ಮಂಪರುಕಾರಕ ಗುಣವನ್ನು ಹೊಂದಿದೆ.

ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ ಡಿಸಾರ್ಡ ಸಮಸ್ಯೆ ಇರುವವರಲ್ಲಿ ಕೇಸರಿಯು ದೃಷ್ಟಿಯನ್ನು ಪರಿಷ್ಕರಿಸುತ್ತದೆ ಎಂದು ಹಲವಾರು ಅಧ್ಯಯನಗಳು ತಿಳಿಸಿವೆ. ಇದಲ್ಲದೆ, ಕೇಸರಿಯಲ್ಲಿರುವ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಎಎಮ್‌ಡಿಗೆ ಸಂಬಂಧಿಸಿದ ಸ್ವತಂತ್ರ ರಾಡಿಕಲ್ ಹಾನಿಯಿಂದ ರಕ್ಷಿಸುತ್ತದೆ.

ಋತುಸ್ರಾವದ ಅವಧಿಯ ನೋವನ್ನು ಕಡಿಮೆ ಮಾಡುತ್ತದೆ. ಬೆಚ್ಚಗಿನ ಕೇಸರಿ ಹಾಲು ಮಹಿಳೆಯರಿಗೆ ಹೊಟ್ಟೆನೋವು ಮತ್ತು ಋತುಸ್ರಾವದ ನುಲಿತಗಳಿಂದ ಉಪಶಮನ ನೀಡುತ್ತದೆ.

ಕೇಸರಿಯು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ. ಇದು ವಿನಾಶಕಾರಿ ಸ್ವತಂತ್ರ ರಾಡಿಕಲ್ಗಳನ್ನು ತಟಸ್ಥಗೊಳಿಸುತ್ತದೆ. ಈ ಸ್ವತಂತ್ರ ರಾಡಿಕಲ್ಗಳು ಗೆಡ್ಡೆಗಳ ಉತ್ಪಾದನೆಗೆ ಕಾರಣವಾಗುತ್ತವೆ, ಇದು ಕ್ಯಾನ್ಸರ್ಗೆ ಕಾರಣವಾಗಬಹುದು. ಕೇಸರಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಕ್ಯಾನ್ಸರ್ ಕೋಶಗಳನ್ನು ವಿಶೇಷವಾಗಿ ಕರುಳು, ಚರ್ಮ, ಪ್ರಾಸ್ಟೇಟ್, ಶ್ವಾಸಕೋಶ ಮುಂತಾದ ಕ್ಯಾನ್ಸರ್ಗಳಿಂದ ರಕ್ಷಿಸುತ್ತದೆ.

ಕೇಸರಿ ಸೇವಿಸುವುದರಿಂದ ಆಗುವ ಪ್ರಯೋಜನಗಳು
ಕೇಸರಿಯ ವಿವಿಧ ಸೌಂದರ್ಯ ಪ್ರಯೋಜನ

ಕೇಸರಿಯು ವಿವಿಧ ಸೌಂದರ್ಯ ಪ್ರಯೋಜನಗಳನ್ನು ಹೊಂದಿದೆ. ಹಲವಾರು ಸೌಂದರ್ಯವರ್ಧಕ ಕ್ರೀಮ್‌ಗಳು ಮತ್ತು ಇತರ ಸೌಂದರ್ಯವರ್ಧಕ ಉತ್ಪನ್ನಗಳು ಕೇಸರಿಯನ್ನು ತಮ್ಮ ಪ್ರಾಥಮಿಕ ಘಟಕಾಂಶವಾಗಿ ಬಳಸುತ್ತವೆ. ಇದು ಚರ್ಮಕ್ಕೆ ಹೊಳೆಯುವ ಸ್ಪರ್ಶವನ್ನು ನೀಡುತ್ತದೆ ಮತ್ತು ಮೃದುಗೊಳಿಸುತ್ತದೆ.

ಕೇಸರಿಯು ಮಾನಸಿಕ ಆರೋಗ್ಯವನ್ನು ಸುಧಾರಿಸುವಲ್ಲಿ ಮತ್ತು ಒತ್ತಡವನ್ನು ನಿವಾರಿಸುವಲ್ಲಿ ಪಾತ್ರವನ್ನು ವಹಿಸುತ್ತದೆ. ಇತರ ಮೆದುಳಿನ ಹಾರ್ಮೋನುಗಳ ಮಟ್ಟವನ್ನು ಬದಲಾಯಿಸದೆಯೇ ಕೇಸರಿ ಸಾರವು ಮೆದುಳಿನಲ್ಲಿ ಡೋಪಮೈನ್ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಒಂದು ಅಧ್ಯಯನವು ಕಂಡುಹಿಡಿದಿದೆ.

ಒಂದು ಲೋಟ ಕೇಸರಿ ಹಾಲು ಕೀಲು ನೋವು, ಅಸ್ತಮಾ ಮತ್ತು ಕೆಲವು ಅಲ್ಪಪ್ರಮಾಣದ ಹವಾಮಾನ ಸಂಬಂಧಿತ ಅಲರ್ಜಿಗಳನ್ನು ಉಪಶಮನ ಮಾಡುತ್ತದೆ. ಆದ್ದರಿಂದ ನಿಯಮಿತವಾಗಿ ಕೇಸರಿ ಹಾಲು ಸೇವಿಸುವವರು ಕೀಲುನೋವು, ಅಸ್ತಮಾ ಮತ್ತು ಅಲ್ಪ ಪ್ರಮಾಣದ ಅಲರ್ಜಿಗಳಿಗೆ ಒಳಗಾಗುವುದಿಲ್ಲ.

ಉತ್ಕರ್ಷಣ ನಿರೋಧಕಗಳು ಮತ್ತು ಪೊಟ್ಯಾಸಿಯಮ್‌ನಿಂದ ತುಂಬಿರುವ ಈ ಕೇಸರಿಯ ಎಳೆಗಳು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಅಪಧಮನಿಗಳಲ್ಲಿನ ಯಾವುದೇ ಅಡೆತಡೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹೀಗಾಗಿ ಅಧಿಕ ರಕ್ತದೊತ್ತಡ ಮತ್ತು ಹೃದಯಾಘಾತದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಕೇಸರಿಯ ಬಗ್ಗೆ ನಿಮಗೆ ಗೊತ್ತಾ? 

​ 1 ಕೆಜಿ ಕೇಸರಿ ಎಳೆಗಳನ್ನು ಉತ್ಪಾದಿಸಲು ಸರಿಸುಮಾರು 16000 ಹೂವುಗಳು ಬೇಕಾಗುತ್ತವೆ. ಅದಕ್ಕಾಗಿಯೇ ಕೇಸರಿ ಅತ್ಯಂತ ಹೆಚ್ಚು ಬೆಲೆಯುಳ್ಳ ಮತ್ತು ಐಷಾರಾಮಿ ಪದಾರ್ಥವಾಗಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಚೆಸ್ ಆಟಗಾರ ವಿಶ್ವನಾಥನ್ ಹುಟ್ಟಿದ ದಿನ

ಭಾರತೀಯ ಚೆಸ್ ಆಟಗಾರ ವಿಶ್ವನಾಥನ್ ಹುಟ್ಟಿದ ದಿನ

ಹಿಂದೂ ಧರ್ಮದಲ್ಲಿ ವಿವಾಹದಲ್ಲಿ ಅನುಸರಿಸುವ ಪದ್ಧತಿಗಳಿಗೆ ವೈಜ್ಞಾನಿಕ ಕಾರಣಗಳು

ಹಿಂದೂ ಧರ್ಮದಲ್ಲಿ ವಿವಾಹದಲ್ಲಿ ಅನುಸರಿಸುವ ಪದ್ಧತಿಗಳಿಗೆ ವೈಜ್ಞಾನಿಕ ಕಾರಣಗಳು ಇವೆ