ಅನನಾಸು ಎಂಬುದು ಪೈನ್ಆಪಲ್ ಎಂದು ಕರೆಯಲ್ಪಡುವ ಹಣ್ಣು. ಇದು ಉಷ್ಣವಲಯದ ಸಸ್ಯವಾಗಿದ್ದು, ಬ್ರೊಮೆಲಿಯಾಸಿಯ ಕುಟುಂಬದಲ್ಲಿ ಅತ್ಯಂತ ಆರ್ಥಿಕವಾಗಿ ಗಮನಾರ್ಹ ಸಸ್ಯವಾಗಿದೆ. ಅನನಾಸು ಹಣ್ಣುಗಳ ಕಿರೀಟವನ್ನು ಕತ್ತರಿಸಿ ನೆಟ್ಟು ಬೆಳೆಸಬಹುದು. ಅನಾನಸುಗಳು ಸುಗ್ಗಿಯ ನಂತರ ಗಮನಾರ್ಹವಾಗಿ ಹಣ್ಣಾಗುತ್ತವೆ. ಅನನಾಸು ಹಣ್ಣುಗಳ ತಾಜಾ ಅಥವಾ ಬೇಯಿಸಿದ ರಸವನ್ನು ಸಂರಕ್ಷಿಸಿಡಬಹುದು. ಅವುಗಳು ವ್ಯಾಪಕ ಪಾಕಪದ್ಧತಿಗಳಲ್ಲಿ ಕಂಡುಬರುತ್ತವೆ. ಬಳಕೆಗೆ ಹೆಚ್ಚುವರಿಯಾಗಿ, ಅನನಾಸುಗಳ ಎಲೆಗಳನ್ನು ಫಿಲಿಪೈನ್ಸ್ನ ಜವಳಿ ಫೈಬರ್ ಪಿನಾವನ್ನು ತಯಾರಿಸಲು ಬಳಸಲಾಗುತ್ತದೆ. ಸಾಮಾನ್ಯವಾಗಿ ಬರೊಂಗ್ ಟ್ಯಾಗಗ್ಗರ್ ಮತ್ತು ಬರೊಟ್ ಸಾಯಾ ದೇಶಗಳಲ್ಲಿ ಫಾರ್ಮಲ್ ಧರಿಸುವುದಕ್ಕಾಗಿ ಇದನ್ನು ಬಳಸಲಾಗುತ್ತದೆ. ಫೈಬರ್ ಅನ್ನು ವಾಲ್ಪೇಪರ್ ಮತ್ತು ಇತರ ಪೀಠೋಪಕರಣಗಳಿಗೆ ಒಂದು ಘಟಕವಾಗಿ ಬಳಸಲಾಗುತ್ತದೆ. ಇದನ್ನು ಪರಂಗಿ ಹಣ್ಣು ಎಂದು ಕರೆಯತ್ತಾರೆ.
ಅನೇಕ ಉಷ್ಣವಲಯದ ದೇಶಗಳಲ್ಲಿ ಪೈನ್ಆಪಲ್ ಅನ್ನು ಸಲಾಡ್ನಂತೆ ರಸ್ತೆ ಬದಿಯಲ್ಲಿ ತಯಾರಿಸಲಾಗುತ್ತದೆ ಮತ್ತು ಮಾರಾಟ ಮಾಡಲಾಗುತ್ತದೆ. ಚೆರ್ರಿಯೊಂದಿಗೆ ಚೂರು ಮಾಡಿದ ಅನನಾಸು ಚೂರುಗಳು ಪಶ್ಚಿಮದಲ್ಲಿ ಹ್ಯಾಮ್ಗಳ ಮೇಲೆ ಸಾಮಾನ್ಯ ಅಲಂಕರಣವಾಗಿದೆ. ಅನಾನಸು ತುಂಡುಗಳನ್ನು ಹಣ್ಣು ಸಲಾಡ್ನಂತಹ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಪಿಜ್ಜಾ ಮೇಲೋಗರಗಳಾಗಿ ಅಥವಾ ಹ್ಯಾಂಬರ್ಗರ್ನಲ್ಲಿ ಸುಟ್ಟ ರಿಂಗ್ನಂತಹ ಕೆಲವು ಖಾರದ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಪುಡಿಮಾಡಿದ ಅನಾನಸ್ ಅನ್ನು ಮೊಸರು, ಜಾಮ್, ಸಿಹಿತಿಂಡಿಗಳಲ್ಲಿ ಬಳಸಲಾಗುತ್ತದೆ. ಅನಾನಸ್ ರಸವನ್ನು ಪಾನೀಯವಾಗಿ ಸೇವಿಸಲಾಗುತ್ತದೆ ಮತ್ತು ಇದು ಪಿನಾ ಕೊಲಾಡ ಮತ್ತು ಪಾನೀಯ ಟಿಪೆಚೆಯಲ್ಲಿನ ಕಾಕ್ಟೇಲ್ಗಳಲ್ಲಿ ಮುಖ್ಯವಾದ ಘಟಕಾಂಶವಾಗಿದೆ.
ಅತೀ ಕಡಿಮೆ ಕ್ಯಾಲೋರಿ ಅಂಶಗಳನ್ನು ಹೊಂದಿರು ಹಣ್ಣಾಗಿರುವ ಇದು, ಅತ್ಯಂತ ಹೆಚ್ಚು ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಒಂದು ಕಪ್ ಹೆಚ್ಚಿದ ಅನಾನಸ್ ಸೇವನೆಯಿಂದಾಗಿ ಹಲವಾರು ನ್ಯೂಟ್ರಿಯಂಟ್ ಗಳು ಲಭ್ಯವಾಗುತ್ತದೆ ಅವುಗಳೆಂದರೆ ಪ್ರೋಟೀನ್, ಕಾರ್ಬೋಹೈಡ್ರೇಟ್ಸ್, ಫೈಬರ್, ಮ್ಯಾಂದನೀಸ್, ನಿಯಾಸಿನ್, ಪೊಟಾಷಿಯಂ, ಕೊಬ್ಬಿನಾಂಶ, ವಿಟಮಿನ್ ಸಿ, ತಾಮ್ರ, ಥೈಯಾಮಿನ್, ರಿಬೋಪ್ಲೇವಿನ್, ಕಬ್ಬಿಣಾಂಶ ಮತ್ತು ಇತರೆ ಹಲವಾರು ಅಂಶಗಳು. ಅನಾನಸ್ ನಲ್ಲಿ ವಿಟಮಿನ್ ಕೆ, ಎ ಅದರ ಜೊತೆಗೆ ಸತುವು, ಕ್ಯಾಲ್ಸಿಯಂ ಮತ್ತು ಪಾಸ್ಪರಸ್ ಗಳು ಕೂಡ ಇರುತ್ತದೆ. ವಿಟಮಿನ್ ಸಿ ಗಳ ಖಣಜವಾಗಿರುವ ಅನಾನಸ್ ನಿಮ್ಮ ಒಟ್ಟಾರೆ ಬೆಳವಣಿಗೆಗೆ ನೆರವಾಗುತ್ತದೆ. ಇದು ಆಹಾರದಿಂದ ಕಬ್ಬಿಣದ ಅಂಶವನ್ನು ಹೀರಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ ಮತ್ತು ಇವುಗಳು ಆರೋಗ್ಯಕರ ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸುತ್ತವೆ.
ಇದರಲ್ಲಿ ಜೀರೋ ಕೊಲೆಸ್ಟ್ರಾಲ್, ವಿಟಮಿನ್ ಎ, ಬಿ, ಸಿ, ಪೊಟಾಷ್ಯಿಯಂ, ಮ್ಯಾಂಗನೀಸ್, ಸತು ಹಾಗೂ ದೇಹಕ್ಕೆ ಅಗ್ಯತವಾದ ಇತರ ಖನಿಜಾಂಶಗಳಿದ್ದು ಇದನ್ನು ತಿನ್ನುವುದರಿಂದ ಅನೇಕ ಆರೋಗ್ಯಕರ ಗುಣಗಳನ್ನು ಪಡೆಯಬಹುದಾಗಿದ್ದು ಇಲ್ಲಿ ಅನಾನಸ್‌ನ 22 ಆರೋಗ್ಯವರ್ಧಕ ಗುಣ.
ಅನಾನಸ್ ಹಣ್ಣಿನಲ್ಲಿ ಅಮೈನೋ ಆಮ್ಲಗಳು ಮತ್ತು ಸಣ್ಣ ಪ್ರಮಾಣದ ಪೆಪ್ಟೈಡ್ ಅಂಶಗಳು ಹೆಚ್ಚಾಗಿ ಕಂಡುಬರುವುದರಿಂದ, ಜೀರ್ಣಕ್ರಿಯೆ ಸಮಸ್ಯೆ ನಿವಾರಿಸುವಲ್ಲಿ ತುಂಬಾನೇ ಉಪಯುಕ್ತಕ್ಕೆ ಬರುತ್ತದೆ.
ಅಷ್ಟೇ ಅಲ್ಲದೇ ಜೀರ್ಣಾಂಗ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಕಾಪಾಡಿ, ನಾವು ಸೇವನೆ ಮಾಡಿದ ಆಹಾರವನ್ನು ಚೆನ್ನಾಗಿ ಜೀರ್ಣ ಮಾಡಿ ಮಲಬದ್ಧತೆ ಸಮಸ್ಯೆಯನ್ನು ತಡೆಯುತ್ತದೆ.
ಮೂಗು ಕಟ್ಟಿ ತಲೆನೋವು ಕಾಣಿಸಿಕೊಂಡಿದ್ದರೆ ಇದನ್ನು ಹೋಗಲಾಡಿಸಲು ಪೈನಾಪಲ್ ತಿನ್ನಿ. ಇದರಲ್ಲಿರುವ ಬ್ರೊಮೆಲೈನ್ ಮೂಗುಕಟ್ಟುವುದನ್ನು ತಡೆಗಟ್ಟಿ ತಲೆನೋವು ಉಂಟಾಗದಂತೆ ತಡೆಯುತ್ತದೆ.
ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುತ್ತದೆ ಮತ್ತು ಸರಿಯಾದ ಆಕಾರವನ್ನು ಪಡೆಯಲು ಸಹಾಯ ಮಾಡುತ್ತದೆ. ಅಲ್ಲದೆ ದೌರ್ಬಲ್ಯ ಮತ್ತು ಆಯಾಸವನ್ನು ತೆಗೆದುಹಾಕಲಾಗುತ್ತದೆ, ದೇಹವು ದಿನವಿಡೀ ಫ್ರೆಶ್ ಆಗಿರುತ್ತದೆ.
ಅನಾನಸ್ ಇತರ ಸಿಹಿ ತಿನಿಸುಗಳಿಗಿಂತ ಕಡಿಮೆ ಕ್ಯಾಲೋರಿ ಹೊಂದಿದೆ. ಅನಾನಸ್‌ನಿಂದ ಮಾಡಿದ ಐಸ್ ಕ್ರೀಂ, ಕೇಕ್ ಮೊದಲಾದವುಗಳನ್ನು ತಿನ್ನುವುದರಿಂದ ನೀವು ಕಡಿಮೆ ಕ್ಯಾಲೊರಿಗಳನ್ನು ಸೇವಿಸಿದಂತಾಗುತ್ತದೆ. ಇದು ತೂಕ ಕಳೆದುಕೊಳ್ಳಲು ನೆರವಾಗುತ್ತದೆ. ಅಲ್ಲದೆ, ಅನಾನಸ್ ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಟ್ರಾನ್ಸ್ ಕೊಬ್ಬುಗಳನ್ನು ಒಳಗೊಂಡಿರುವುದಿಲ್ಲ, ಅಲ್ಲದೆ ಈ ಹಣ್ಣು ಜೀವಸತ್ವಗಳು ಮತ್ತು ಖನಿಜಗಳ ಸಮೃದ್ಧ ಮೂಲವಾಗಿರುವುದರಿಂದ, ಫೀನಾಲಿಕ್ ಆಮ್ಲಗಳು ಮತ್ತು ಫ್ಲೇವನಾಯ್ಡ್‌ಗಳಂತಹ ಉತ್ಕರ್ಷಣ ನಿರೋಧಕಗಳನ್ನು ಸಹ ಒಳಗೊಂಡಿದೆ.
ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟುತ್ತದೆ
ಪೈನಾಪಲ್ ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇನ್ನು ರಕ್ತ ಹೆಪ್ಪುಗಟ್ಟದ ಸಮಸ್ಯೆ ಇರುವವರು ಈ ಹಣ್ಣು ತಿನ್ನಲು ಹೋಗಬೇಡಿ.
ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಆಯಾಸದ ಸಮಸ್ಯೆ, ದೌರ್ಬಲ್ಯವನ್ನು ತೆಗೆದುಹಾಕಲಾಗುತ್ತದೆ, ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನಾವು ಪಡೆಯುತ್ತೇವೆ.
ಅನಾನಸ್ ಗಳನ್ನು ಸೇವಿಸುವುದರಿಂದಾಗಿ ಸರ್ಜರಿಯ ನಂತರ ಗುಣಮುಖವಾಗಲು ಬೇಗನೆ ನೆರವಾಗುತ್ತದೆ. ಅಷ್ಟೇ ಅಲ್ಲ, ಸರ್ಜರಿಯ ನಂತರ ನೀವು ಕಳೆದುಕೊಂಡಿರುವ ಶಕ್ತಿಯ ಪ್ರಮಾಣವನ್ನು ಪುನಃ ಪಡೆಯಲು ಇದು ಸಹಕಾರಿಯಾಗಿರುತ್ತದೆ. ಬ್ರೋಮೆಲಿನ್ ಉರಿಯೂತದ ಗುಣಲಕ್ಷಣಗಳನ್ನು ವಿರೋಧಿಸಲು ಇದು ಕಾರಣವಾಗುತ್ತದೆ
ಶಸ್ತ್ರಚಿಕಿತ್ಸೆ ನಂತರ ಉಂಟಾಗುವ ಊತ, ಏಟುಗಳು, ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಬ್ರೊಮೆಲಿನ್ ಹೊಂದಿರುತ್ತದೆ. ಈ ಬ್ರೊಮೆಲಿನ್ ಆಂಟಿ ಇನ್ಲಮೇಟರಿ ಗುಣವು ಟಿಶ್ಯೂಗಳಲ್ಲಿ ಕಾಣಿಸಿಕೊಳ್ಳುವ ಉರಿಯೂತವನ್ನು ಬಹಳ ದೊಡ್ಡ ಮಟ್ಟದಲ್ಲಿ ಕಡಿಮೆ ಮಾಡಲು ಸಹಾಯಕವಾಗಿದೆ.
ಅನಾನಸ್‌ನಲ್ಲಿ ವಿಟಮಿನ್ ಸಿ ಜತೆಗೆ ಸಾಕಷ್ಟು ಪ್ರಮಾಣದಲ್ಲಿ ಮ್ಯಾಂಗನೀಸ್ ಇರುವುದರಿಂದ ಮೂಳೆಗಳ ಬಲವನ್ನು ಹೆಚ್ಚಿಸುತ್ತದೆ ಹಾಗೂ ಅದಕ್ಕೆ ಸಂಬಂಧಿಸಿದ ನರಗಳು ಹಾಣಿಯಾಗದಂತೆ ತಡೆಯುತ್ತದೆ. ಮೆನೋಪಾಸ್ ಬಳಿಕ ಮಹಿಳೆಯರಲ್ಲಿ ಮಂಡಿನೋವಿನ ಸಮಸ್ಯೆ ಕಂಡು ಬರುತ್ತದೆ, ಇದನ್ನು ತಡೆಗಟ್ಟುವಲ್ಲಿ ಮ್ಯಾಂಗನೀಸ್ ಸಹಕಾರಿ.
ದೇಹಕ್ಕೆ ಅಗ್ಯತವಿರುವ ಮ್ಯಾಂಗನೀಸ್‌ನಲ್ಲಿ ಸೇ.70ರಷ್ಟು ಖನಿಜಾಂಶ ಒಂದು ಕಪ್ ಅನಾನಸ್ ರಸ ಕುಡಿಯುವುದರಿಂದ ದೊರೆಯುವುದು. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ದಿನಾ ಸ್ವಲ್ಪ ಪೈನಾಪಲ್ ತಿನ್ನುವುದು ಒಳ್ಳೆಯದು.
ಧನ್ಯವಾದಗಳು.
GIPHY App Key not set. Please check settings