ನೀಲಗಿರಿಯು ಮಿರ್ಟ್‌ಲ್ ಕುಟುಂಬವಾದ ಮಿರ್ಟೇಸಿಯಲ್ಲಿನ ಹೂಬಿಡುವ ಮರಗಳ ಒಂದು ಬಹುವಿಧದ ಕುಲವಾಗಿದೆ. ಈ ಕುಲದ ಸದಸ್ಯ ಮರಗಳನ್ನು ಆಸ್ಟ್ರೇಲಿಯಾದ ಮರದ ಸಸ್ಯಸಂಪತ್ತು ವ್ಯಾಪಿಸಿದೆ. ಬಹುತೇಕವಾಗಿ ಆಸ್ಟ್ರೇಲಿಯಾದ ಸ್ಥಳೀಯ ಸಸ್ಯವಾಗಿರುವ ನೀಲಗಿರಿ ಯ ೭೦೦ಕ್ಕೂ ಹೆಚ್ಚು ಜಾತಿಗಳು ಅಸ್ತಿತ್ವದಲ್ಲಿವೆ, ಮತ್ತು ಅತ್ಯಂತ ಚಿಕ್ಕ ಸಂಖ್ಯೆಯಲ್ಲಿ ಇವು ನ್ಯೂಗಿನಿಯಾ ಮತ್ತು ಇಂಡೋನೇಷ್ಯಾದ ಮಗ್ಗುಲಿನ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತವೆ ಹಾಗೂ ಫಿಲಿಪ್ಪೀನ್ ದ್ವೀಪಸಮೂಹದಷ್ಟು ದೂರದ ಉತ್ತರ ಭಾಗದಲ್ಲಿ ಒಂದು ಜಾತಿಯು ಕಾಣಿಸಿಕೊಳ್ಳುತ್ತದೆ. ಕೇವಲ ೧೫ ಜಾತಿಗಳು ಆಸ್ಟ್ರೇಲಿಯಾದಿಂದ ಆಚೆಗೆ ಕಾಣಿಸಿಕೊಳ್ಳುತ್ತವೆ, ಮತ್ತು ಕೇವಲ ೯ ಜಾತಿಗಳು ಆಸ್ಟ್ರೇಲಿಯಾದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅಮೆರಿಕಾ ಖಂಡಗಳು, ಯುರೋಪ್, ಆಫ್ರಿಕಾ, ಮೆಡಿಟರೇನಿಯನ್ ನೆಲಸುತ್ತು ರೇವು, ಮಧ್ಯಪ್ರಾಚ್ಯ, ಚೀನಾ ಹಾಗೂ ಭಾರತದ ಉಪಖಂಡವನ್ನು ಒಳಗೊಂಡಂತೆ ಉಷ್ಣವಲಯ ಹಾಗೂ ಉಪೋಷ್ಣವಲಯದಾದ್ಯಂತ ನೀಲಗಿರಿಯ ಜಾತಿಗಳನ್ನು ಬೆಳೆಸಲಾಗುತ್ತದೆ.
ನೀಲಗಿರಿ ತೈಲವನ್ನು ಅದರ ಎಲೆಗಳಿಂದ ಅನಾಯಾಸವಾಗಿ ಆವಿ ಬಟ್ಟಿ ಇಳಿಸಲಾಗುತ್ತದೆ ಮತ್ತು ಈ ತೈಲವನ್ನು ಶುದ್ಧೀಕರಣ, ವಾಸನೆಯನ್ನು ಕಳೆಯುವಿಕೆ ಮೊದಲಾದವುಗಳಿಗಾಗಿ ಬಳಸಬಹುದಾಗಿದೆ. ಅಷ್ಟೇ ಅಲ್ಲ, ಆಹಾರದ ಪೂರಕಗಳಲ್ಲಿ, ಅದರಲ್ಲೂ ವಿಶೇಷವಾಗಿ ಸಿಹಿತಿಂಡಿಗಳು, ಕೆಮ್ಮಿನ ಪೆಪ್ಪರ್‌ಮೆಂಟುಗಳಲ್ಲಿ ಹಾಗೂ ರಕ್ತ/ಮೂಗು ಕಟ್ಟಿರುವಿಕೆಯನ್ನು ನಿವಾರಿಸುವ ಔಷಧಿಗಳಲ್ಲಿ ಅತ್ಯಂತ ಅಲ್ಪ ಪ್ರಮಾಣದಲ್ಲಿ ನೀಲಗಿರಿ ತೈಲವನ್ನು ಬಳಸಲಾಗುತ್ತದೆ.
ಹಲವಾರು ರೀತಿಯ ತೈಲಗಳನ್ನು ನಾವು ಬಳಸಿಕೊಳ್ಳುತ್ತೇವೆ. ಒಂದೊಂದು ರೀತಿಯ ತೈಲಗಳು ಹಲವಾರು ಲಾಭಗಳನ್ನು ನೀಡುವುದು. ತೆಂಗಿನ ಎಣ್ಣೆ, ಬಾದಾಮಿ ಎಣ್ಣೆ, ಆಲಿವ್ ತೈಲ ಇನ್ನು ಹಲವಾರು ಎಣ್ಣೆಗಳು ಇವೆ. ಇದರಲ್ಲಿ ನೀಲಗಿರಿ ಎಣ್ಣೆ ಕೂಡ ತನ್ನಲ್ಲಿರುವಂತಹ ಆರೋಗ್ಯ ಗುಣಗಳಿಂದಾಗಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ನೀಲಗಿರಿ ಸಾರಭೂತ ತೈಲವು ಆಸ್ಟ್ರೇಲಿಯಾದಲ್ಲಿ ಬೆಳೆಯುವ ನೀಲಗಿರಿ ಮರಗಳಿಂದ ತಯಾರಿಸಲ್ಪಡುತ್ತದೆ. ಇದು ಅತ್ಯಂತ ಜನಪ್ರಿಯ ಸಾರಭೂತ ತೈಲಗಳಲ್ಲಿ ಒಂದಾಗಿದೆ. ಈ ಮರದ ಎಲೆಗಳನ್ನು ಒಣಗಿಸಿ, ಅದನ್ನು ಪುಡಿ ಮಾಡಿ, ಬಳಿಕ ಬಟ್ಟಿ ಇಳಿಸಿಕೊಂಡು ಎಣ್ಣೆ ತೆಗೆಯಲಾಗುತ್ತದೆ.
ನೀಲಗಿರಿ ಎಣ್ಣೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ಇದು ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈ ಎಣ್ಣೆಯು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಉತ್ತಮ ನಂಜು ನಿರೋಧಕವಾಗಿಯೂ ಕೆಲಸ ಮಾಡುತ್ತದೆ. ನೀಲಗಿರಿ ಎಣ್ಣೆಯನ್ನು ತಲೆನೋವು, ಸ್ನಾಯು ನೋವಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬಳಸಲಾಗುತ್ತದೆ.
ಮೂಗು ಕಟ್ಟಿದ ಸಮಸ್ಯೆಯಿದ್ದರೆ, ಅದರಿಂದ ತಲೆನೋವಿನ ಸಮಸ್ಯೆಯು ಬರಬಹುದು. ಕಫವು ದಪ್ಪವಾಗಿ ಅದು ವಾಯುನಾಳದಲ್ಲಿ ಜಮೆ ಆದ ವೇಳೆ ಮೂಗು ಕಟ್ಟುವಿಕೆ ಸಮಸ್ಯೆಯು ಕಂಡುಬರುವುದು.
ಬೊಕ್ಕೆ ನಿವಾರಣೆ ಮಾಡುವುದು
ದೇಹದ ಯಾವುದೇ ಭಾಗದಲ್ಲಿ ಬೊಕ್ಕೆ ಮೂಡಿದ್ದರೆ ನೀವು ಇದನ್ನು ನೀಲಗಿರಿ ಎಣ್ಣೆಯಿಂದ ನಿವಾರಣೆ ಮಾಡಬಹುದು. ಇದರಲ್ಲಿ ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಇದು ಬೊಕ್ಕೆ ಉಂಟು ಮಾಡುವಂತಹ ಕೆಲವೊಂದು ಬ್ಯಾಕ್ಟೀರಿಯಾವನ್ನು ತಡೆಯುವುದು. ಇದರಿಂದ ನೀಲಗಿರಿ ಎಣ್ಣೆಯು ಮೂಲ ಸಮಸ್ಯೆ ನಿವಾರಣೆ ಮಾಡುವುದು. ಇದು ಬೇಗನೆ ಶಮನ ನೀಡುವುದು ಮತ್ತು ಸೋಂಕು ಹೆಚ್ಚದಂತೆ ತಡೆಯುವುದು.
ನೀಲಗಿರಿ ಎಣ್ಣೆಯು ತಲೆನೋವಿಗೆ ತುಂಬಾ ಪರಿಣಾಮಕಾರಿ ಯಾಗಿರುವುದು. ಸೈನಸ್ ನಿಂದಾಗಿ ಕಾಡುವಂತಹ ತಲೆನೋವಿಗೆ ಇದು ತುಂಬಾ ಒಳ್ಳೆಯದು. ಕೆಲವೊಂದು ಸಲ ಸೈನಸ್ ನ ಉರಿಯೂತದಿಂದ ತಲೆನೋವು ಕಾಡುವುದು. ಇದು ಕಟ್ಟಿರುವಂತಹ ಸೈನಸ್ ನ್ನು ಬಿಡುಗಡೆ ಮಾಡುವುದು ಮತ್ತು ತಲೆನೋವು ನಿವಾರಿಸುವುದು. ಇದು ತುಂಬಾ ಪರಿಣಾಮಕಾರಿ ನೋವು ನಿವಾರಕವಾಗಿ ಕೆಲಸ ಮಾಡುವುದು. 2013ರಲ್ಲಿ ಎವಿಡೆನ್ಸ್ ಬೇಸಡ್ ಕಾಂಪ್ಲಿಮೆಂಟರಿ ಆ್ಯಂಡ್ ಆಲ್ಟರ್ನೇಟಿವ್ ಮೆಡಿಸಿನ್ ನಲ್ಲಿ ಪ್ರಕಟಗೊಂಡಿರುವ ವರದಿಯ ಪ್ರಕಾರ ನೀಲಗಿರಿ ಎಣ್ಣೆಯನ್ನು ಮೂಗಿನ ಮೂಲಕ ಎಳೆದುಕೊಂಡರೆ ಆಗ ನೋವು ನಿವಾರಣೆ ಮತ್ತು ಉರಿಯೂತ ಕೂಡ ಶಮನವಾಗುವುದು.
ಕೆಮ್ಮು ನಿವಾರಣೆ ಮಾಡುವುದು
ನೀಲಗಿರಿ ಎಣ್ಣೆಯಲ್ಲಿ ಇರುವಂತಹ ಯೂಕಲಿಪ್ಟಾಲ್ ಎನ್ನುವ ಅಂಶವು ಕೆಮ್ಮು ನಿವಾರಣೆ ಮಾಡುವುದು. ಕೆಮ್ಮು ನಿವಾರಣೆ ಮಾಡುವಂತಹ ಹಲವಾರು ರೀತಿಯ ಔಷಧಿಗಳಲ್ಲಿ ನೀಲಗಿರಿ ಎಣ್ಣೆಯು ಒಂದು ಪ್ರಮುಖ ಅಂಶವನ್ನಾಗಿ ಬಳಸಲಾಗುತ್ತದೆ. ಉದಾಹರಣೆಗೆ ವಿಕ್ಸ್ ವಿಪೊರಬ್ ನಲ್ಲಿ 1.2 ಶೇಕಡದಷ್ಟು ನೀಲಗಿರಿ ಎಣ್ಣೆಯ ಅಂಶವಿದೆ. ಬೇರೆ ಬೇರೆ ರೀತಿಯ ಕೆಮ್ಮಿನ ಔಷಧಿಗಳಲ್ಲಿ ಇದರ ಪ್ರಮಾಣ ವ್ಯತ್ಯಾಸವಿರಬಹುದು. ಕೆಮ್ಮು ನಿವಾರಣೆ ಮಾಡುವ ಜತೆಗೆ ನೀಲಗಿರಿ ಎಣ್ಣೆಯು ಉಸಿರಾಟದ ಕೆಲವು ಸಮಸ್ಯೆಗಳನ್ನು ನಿವಾರಿಸುವುದು. ಇದರಲ್ಲಿ ಮುಖ್ಯವಾಗಿ ಅಸ್ತಮಾ, ಬ್ರಾಂಕೈಟಿಸ್, ದೀರ್ಘಕಾಲದ ಪ್ರತಿಬಂಧಕ ಶ್ವಾಸಕೋಶ ದ ರೋಗ (ಸಿಒಪಿಡಿ), ನ್ಯೂಮೋನಿಯಾ ಮತ್ತು ಕ್ಷಯರೋಗವನ್ನು ಇದು ಕಡಿಮೆ ಮಾಡುವುದು.
ನೀಲಗಿರಿ ಎಣ್ಣೆ ಉಸಿರಾಟ ಕ್ರಿಯೆಯನ್ನು ಸರಾಗಗೊಳಿಸುತ್ತದೆ. ಇದು ಶ್ವಾಸಕೋಶ ಸಂಬಂಧಿ ಖಾಯಿಲೆ, ಅಸ್ತಮಾ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಈ ಎಣ್ಣೆಯು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ ಹಾಗಾಗಿ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ನೀಲಗಿರಿ ಎಣ್ಣೆ ಒತ್ತಡ ಅಥವಾ ಬಳಲಿಕೆಯಿಂದ ಉಂಟಾಗುವ ತಲೆನೋವಿನ ವಿರುದ್ಧ ಹೋರಾಡಲು ಸಹಾಯಕವಾಗಿದೆ.
ಶೀತ ಮತ್ತು ಕಫ ಕಟ್ಟುವಿಕೆ ನಿವಾರಣೆ
ನೀಲಗಿರಿ ಎಣ್ಣೆಯಲ್ಲಿ ವೈರಸ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಇದು ಶೀತ ಮತ್ತು ಕಫ ಕಟ್ಟಿರುವುದನ್ನು ನಿವಾರಣೆ ಮಾಡಲು ನೆರವಾಗುವುದು. ಸಿನೋಲ್ ಎನ್ನುವಂತಹ ಅಂಶವು ನೀಲಗಿರಿ ಎಣ್ಣೆಯಲ್ಲಿ ಇರುವ ಕಾರಣದಿಂದಾಗಿ ಇದು ಸೂಕ್ಷ್ಮಾಣು ವಿರೋಧಿಯಾಗಿ ಕೆಲಸ ಮಾಡಿ, ಹಲವಾರು ರೀತಿಯಬ್ಯಾಕ್ಟೀರಿಯಾ, ವೈರಸ್, ಶಿಲೀಂಧ್ರ ನಿವಾರಣೆ ಮಾಡುವುದು. ನೀಲಗಿರಿ ಎಣ್ಣೆಯ ಸುಗಂಧವನ್ನು ಮೂಗಿನ ಮೂಲಕ ಎಳೆದುಕೊಳ್ಳುವ ಮೂಲಕ ಕಫವು ತೆಳುವಾಗುವುದು ಮತ್ತು ಕಟ್ಟಿದ ಮೂಗಿನ ಸಮಸ್ಯೆಯು ನಿವಾರಣೆಯಾಗುವುದು. ಇದರಿಂದ ಶೀತ ಮತ್ತು ಜ್ವರ ಕಡಿಮೆ ಆಗುವುದು. ಇದು ಪ್ರತಿರೋಧಕ ಉತ್ತೇಜಕ, ಉರಿಯೂತ ಶಮನಕಾರಿ, ಆ್ಯಂಟಿಆಕ್ಸಿಡೆಂಡ್, ನೋವು ನಿವಾರಕ ಮತ್ತು ಸ್ಪಾಸ್ಮೋಲಿಟಿಕ್ ಗುಣಗಳು ಇವೆ ಮತ್ತು ಇದು ಶೀತ ನಿವಾರಣೆ ಮಾಡುವುದು ಮತ್ತು ವಿವಿಧ ರೀತಿಯ ಲಕ್ಷಣಗಳನ್ನು ನಿವಾರಣೆ ಮಾಡುವುದು.
ನೀಲಗಿರಿ ಎಣ್ಣೆಯು ದೇಹದಲ್ಲಿ ರಕ್ತ ಸಂಚಾರವನ್ನು ಉತ್ತಮಪಡಿಸುವುದು. ಅದೇ ರೀತಿಯಾಗಿ ಬ್ಯಾಕ್ಟೀರಿಯಾದ ಕೋಶಗಳನ್ನು ನಾಶ ಮಾಡುವುದು. ಇದರಿಂದಾಗಿ ಕಫ ನಿವಾರಣೆ ಆಗಿ, ವಾಯುನಾಳಕ್ಕೆ ಆರಾಮ ಸಿಗುವುದು.
ತಲೆ ಹೇನು ಕೊಲ್ಲುವುದು
ನೀಲಗಿರಿ ಎಣ್ಣೆಯು ತಲೆ ಹೇನು ಮತ್ತು ತುರಿಕೆ ನಿವಾರಣೆ ಮಾಡುವುದು. ನೈಸರ್ಗಿಕವಾಗಿ ಕೀಟನಾಶಕಾರಿ ಆಗಿರುವಂತಹ ನೀಲಗಿರಿ ಎಣ್ಣೆಯು ಹೇನು ಕೊಲ್ಲುವುದು ಮತ್ತು ಅದರ ಮೊಟ್ಟೆಗಳನ್ನು ಕೂಡ. ಮಾರುಕಟ್ಟೆಯಲ್ಲಿ ಸಿಗುವಂತಹ ಹಲವಾರು ರೀತಿಯ ಹೇನು ಕೊಲ್ಲುವಂತಹ ಸ್ಪ್ರೇಗಳಲ್ಲಿ ನೀಲಗಿರಿ ಎಣ್ಣೆಯನ್ನು ಪ್ರಮುಖವಾಗಿ ಬಳಸಿಕೊಳ್ಳುವರು.
ತುರಿಕೆ ಉಂಟು ಮಾಡುವ ತಲೆಬುರುಡೆಗೆ ಪರಿಹಾರ
ತಲೆಬುರುಡೆಯ ತುರಿಕೆಗೆ ನೀಲಗಿರಿ ಎಣ್ಣೆಯು ತುಂಬಾ ಪರಿಣಾಮಕಾರಿ. ತಲೆಹೊಟ್ಟು ಮತ್ತು ಇತರ ಕೆಲವು ಸಮಸ್ಯೆಗಳಿಂದಾಗಿ ತಲೆಯಲ್ಲಿ ತುರಿಕೆ ಕಾಣಿಸಿಕೊಳ್ಳುವುದು. ನೀಲಗಿರಿ ಎಣ್ಣೆಯಲ್ಲಿ ಶಿಲೀಂಧ್ರ ವಿರೋಧಿ ಗುಣಗಳು ಸಮೃದ್ಧವಾಗಿದ್ದು, ಇದು ಸೋಂಕು ನಿವಾರಣೆ ಮಾಡುವುದು ಮತ್ತು ಕಲ್ಮಶವು ಅಲ್ಲಿ ಜಮೆಯಾಗದಂತೆ ತಡೆಯುವುದು.
ಸೋಂಕು ದೂರವಿಡಬೇಕಿದ್ದರೆ, ಆಗ ನೀವು ನೀಲಗಿರಿ ಎಣ್ಣೆಯನ್ನು ಬಳಸಬೇಕು. ಇದರಲ್ಲಿ ಪ್ರತಿರೋಧಕ ಶಕ್ತಿ ವೃದ್ಧಿ ಮಾಡುವಂತಹ ಗುಣಗಳು ಕೂಡ ಇವೆ ಎಂದು ಅಧ್ಯಯನಗಳು ಹೇಳಿವೆ. ಇದು ಸೋಂಕಿನ ವಿರುದ್ಧ ಹೋರಾಡಲು ದೇಹಕ್ಕೆ ನೆರವಾಗುವುದು.
ಬಾಯಿಯ ಆರೋಗ್ಯಕ್ಕೆ ಒಳ್ಳೆಯದು
ನೀಲಗಿರಿ ಎಣ್ಣೆಯು ಬಾಯಿಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿರುವ ಇದು ದಂತಕುಳಿ, ಜಿಂಗೈವಿಟಿಸ್ ಮತ್ತು ದಂತಪದರ ನಿವಾರಣೆ ಮಾಡುವುದು. ಇದರಲ್ಲಿ ಇರುವಂತಹ ಸುಗಂಧವು ಉಸಿರಿನ ದುರ್ವಾಸನೆ ತಡೆಯುವುದು ಮತ್ತು ಬಾಯಿಯು ತಾಜಾವಾಗಿರಲು ನೆರವಾಗುವುದು.
ಕೀಟನಾಶಕವಾಗಿ ಬಳಸಿಕೊಳ್ಳಬಹುದು
ನೀಲಗಿರಿ ಎಣ್ಣೆಯನ್ನು ಹೆಚ್ಚಾಗಿ ಕೀಟನಾಶಕವಾಗಿ ಬಳಸಿಕೊಳ್ಳಲಾಗುತ್ತದೆ. ಇದರಲ್ಲಿ ಇರುವಂತಹ ಸುಗಂಧವು ನೈಸರ್ಗಿಕವಾಗಿ ಕೀಟನಾಶಕವಾಗಿ ಕಾರ್ಯನಿರ್ವಹಿಸುವುದು ಮತ್ತು ಮನೆಯಲ್ಲಿ ಸೊಳ್ಳೆ, ನೊಣ ಮತ್ತು ಇತರ ಕೀಟಗಳಿಂದ ಮುಕ್ತಿ ನೀಡುವುದು. ಇದನ್ನು ಬಳಸುವುದು ತುಂಬಾ ಸುರಕ್ಷಿತ ಮತ್ತು ಮಕ್ಕಳ ಮೇಲೆ ಯಾವುದೇ ಪರಿಣಾಮ ಬೀರದು.
ಗಾಯ ಒಣಗಿಸುವುದು
ಆಸ್ಟ್ರೇಲಿಯಾದಲ್ಲಿ ಹೆಚ್ಚಾಗಿ ನೀಲಗಿರಿ ಎಲೆಗಳನ್ನು ಬಳಸಿಕೊಂಡು ಗಾಯ ಗುಣಪಡಿಸಲಾಗುತ್ತದೆ ಮತ್ತು ಸೋಂಕು ತಡೆಯಲಾಗುತ್ತದೆ. ಸಣ್ಣ ಗಾಯಗಳಿಗೆ ಚಿಕಿತ್ಸೆಗೆ ಒಂದು ಬಾಟಲಿ ನೀಲಗಿರಿ ಎಣ್ಣೆ ಯನ್ನು ಜತೆಗೆ ಇಟ್ಟುಕೊಂಡರೆ ತುಂಬಾ ಒಳ್ಳೆಯದು, ತರುಚಿದ ಗಾಯ, ಚಾಕುವಿನ ಸಣ್ಣ ಇರಿತ ಇತ್ಯಾದಿಗಳಿಗೆ ಇದು ತುಂಬಾ ಪರಿಣಾಮಕಾರಿ. ನೀಲಗಿರಿ ಎಣ್ಣೆಯಿಂದಾಗಿ ಉರಿಯೂತ ನಿವಾರಣೆ ಮಾಡಬಹುದು ಮತ್ತು ಇದು ಗಾಯ ಶಮನವಾಗುವುದು. ಇದು ನೈಸರ್ಗಿಕ ನೋವು ನಿವಾರಕವಾಗಿಯೂ ಕೆಲಸ ಮಾಡುವುದು.
ಧನ್ಯವಾದಗಳು.
モンスターハンター(V2.2)
いつも新しい知識を得られる、本当に素敵なブログです。