in

ದೇಹದಲ್ಲಿನ ರಕ್ತ ಕಣಗಳು

ರಕ್ತ ಕಣಗಳು
ರಕ್ತ ಕಣಗಳು

ಮಾನವ ರಕ್ತ ಕಣಗಳು – ಎರಿಥ್ರೋಸೈಟ್ಸ್ ; ನ್ಯೂಟ್ರೋಫಿಲ್ ; ಎಸಿನೋಫಿಲ್ ; ಲಿಂಫೋಸೈಟ್ ‘ರಕ್ತ’ ದೇಹವೆಂಬ ವಾಹನದಲ್ಲಿ ಜೀವಕಣಗಳನ್ನು ಹೊತ್ತೊಯ್ಯುವ ರಕ್ತವೇ ಎಲ್ಲಾ ಜೀವಿಗಳ ಪೋಷಕ ಶಕ್ತಿ. ಒಂದು ಅಮೂಲ್ಯ ಜೀವದ್ರವ. ಅದಕ್ಕೆ ರಕ್ತವನ್ನು ಒಂದು ವಿಶಿಷ್ಟ ವರ್ಗಕ್ಕೆ ಸೇರಿದ, “ಕನೆಕ್ಟೀವ್ ಟಿಶ್ಯೂ” ಎನ್ನುತ್ತಾರೆ. ಇಂತಹ ರಕ್ತದ ಬಹುಮುಖಿ ಮಹತ್ವವನ್ನು ಸರಿಯಾಗಿ ತಜ್ಞರಿಂದ ಅರಿತು, ಸಮತೋಲನದ ಆಹಾರವನ್ನು ಸೇವಿಸಿ, ಕಾಯಿಲೆಗಳಿಗೆ ದಾಸರಾಗುವುದನ್ನು ಕಡಿಮೆಮಾಡಬಹುದು.

ರಕ್ತ ಪ್ಲಾಸ್ಮ ಎಂಬ ಜೀವರಸದಿಂದ ಕೂಡಿದ್ದು, ಅದರಲ್ಲಿ ವ್ಯವಸ್ಥಿತ ಪ್ರಮಾಣದಲ್ಲಿ
*ಕೆಂಪು ರಕ್ತಕಣಗಳು
*ಬಿಳಿರಕ್ತಕಣಗಳು, ಮತ್ತು
*ಪ್ಲೇಟ್ ಲೆಟ್ ಎಂಬ ಜೀವಕೋಶಗಳು ತೇಲುತ್ತಿರುತ್ತವೆ.

ಆ ಕೆಂಪುರಕ್ತ ಕಣಗಳು ಸುಮಾರು ೨೦ ಬಗೆಯ ಬ್ಲಡ್ ಗ್ರೂಪ್ ನ್ನು ಹೊಂದಿದ್ದು, ಎ, ಬಿ, ಎಬಿ ಹಗೂ ಓ ಅವುಗಳಲ್ಲಿ ಮುಖ್ಯವಾದದ್ದು. ಹಿಮೋಗ್ಲೋಬಿನ್ ಅಂಶ ತೀರಾ ಕುಸಿದರೆ, (೧೮ ಗ್ರಾಮ್ ಇರಬೇಕು) ಮೂರ್ನಾಲ್ಕು ಆದಾಗ, ರೋಗಿಗೆ ರಕ್ತವನ್ನು ಮರುಪೂರಣ ಮಾಡಬೇಕಾಗುತ್ತದೆ.

ಇದರಿಂದಾಗಿ ರೋಗಿಗಾಗುವ ಆಘಾತ ಹಾಗೂ ರಕ್ತನಾಳಗಳ ಕುಸಿತವನ್ನು ತಪ್ಪಿಸಬಹುದು. ರಕ್ತದಲ್ಲಿ ಒಂದು ಬಿಳಿರಕ್ತಕಣಕ್ಕೆದುರಾಗಿ ೭೦೦ ಕೆಂಪುರಕ್ತ ಕಣಗಳಿರುತ್ತವೆ (ಅಂದರೆ, ೧ : ೭೦೦) ಅನುಪಾತದಲ್ಲಿರುತ್ತವೆ. ಬಿಳಿರಕ್ತಕಣಗಳಲ್ಲಿ ಹಲವು ವಿಧಗಳಿವೆ. ಇವೆಲ್ಲಾ ದೇಹವನ್ನು ಸದಾಕಾಲವೂ ರಕ್ಷಿಸುವ ಸಿಪಾಯಿಗಳಂತೆ ವರ್ತಿಸುತ್ತವೆ.
ಅವುಗಳು:
*ನ್ಯೂಟ್ರೋಫಿಲ್
*ಇಯೋಸಿನೋಫಿಲ್
*ಬೆಸೋಫಿಲ್
*ಲಿಂಪೋಸೈಟ್
*ಮಾನೋಸೈಟ್
ಕೆಂಪು ಗಿಂತ ದೊಡ್ಡದಿದ್ದು ಬೀಜಾಣುವನ್ನು ಹೊಂದಿರುತ್ತವೆ. ಪಾರದರ್ಶಕವಾಗಿರುವುದರಿಂದ ಬಿಳಿಯ ರಕ್ತಕಣಗಳೆಂದು ಕರೆಯಲ್ಪಡುತ್ತವೆ. ಇವುಗಳ ಆಯುಸ್ಸು, ೩-೬ ದಿನಗಳು. ರಕ್ತದಲ್ಲಿ ಇವುಗಳ ಸಂಖ್ಯೆ ಕೆಂಪು ಗಳಿಗಿಂತ ಕಡಿಮೆ. ೪,೦೦೦-೧೧,೦೦೦ ಕ್ಯು. ಮಿ. ಮೀ ನಷ್ಟಿರುವ ಬಿಳಿರಕ್ತ ಕಣಗಳು ೪,೦೦೦ ಕ್ಯು. ಮಿ/ಮೀ ಗಿಂತ ಕಡಿಮೆ ಇರಬಾರದು.

ದೇಹದಲ್ಲಿನ ರಕ್ತ ಕಣಗಳು
ಒಬ್ಬ ಸಾಮಾನ್ಯ ವ್ಯಕ್ತಿಯಲ್ಲಿ ಸುಮಾರು ೫ ಲೀಟರ್ ನಷ್ಟು ರಕ್ತವಿರುತ್ತದೆ

ಸೋಂಕುಬಲಿತು, ದೇಹಕ್ಕೆ, ಅತೀವ ತೊಂದರೆಯುಂಟಾಗುತ್ತದೆ. ಸೋಂಕಿನಿಂದ ಬೆರೆತ ರಕ್ತದಲ್ಲಿ ಹೆಚ್ಚಾಗುವ ಸ್ಥಿತಿ ರಕ್ತಕೆಟ್ಟಿದೆ. ಬಿಳಿ ರಕ್ತಕಣಗಳಲ್ಲಿ ಹಿಮೋಗ್ಲೋಬಿನ್ ಹೊಂದಿರುವುದಿಲ್ಲ. ನ್ಯೂಟ್ರೋಫಿಲ್ ಬಿ ಗಲು ೧೦-೧೨ ಮೈಕ್ರಾನ್ ನಷ್ಟಿದ್ದು, ಫಾಸ್ಫಟೇಸ್, ಪ್ರೋಟಿಯೇಸ್, ಅಮೈಲೇಸ್, ಮುಂತಾದ ಕಿಣ್ವಗಳನ್ನು ಹೊಂದಿರುತ್ತವೆ. ದೇಹದಮೇಲೆ ದಾಳಿಮಾಡುವ ವಿಷಕ್ರಿಮಿಗಳನ್ನು ನುಂಗಿ ಅರಗಿಸುವ ಕೆಲಸಮಾಡುತ್ತವೆ. ಅಂತಿಮವಾಗಿ ಹೋರಾಟದಲ್ಲಿ ಸಾಯುತ್ತವೆ. ಕೀವಾಗಿ ನಮಗೆ ಕಾಣಿಸಿಕೊಳ್ಳುವುದು, ಸೋಂಕನ್ನೂ ಸೋಂಕಿನಭಾಗವನ್ನೂ ಅರಗಿಸಿ ಹೊರದೂಡುವ ಕ್ರಮ. ಇಯೋಸಿನೋಫಿಲ್ ರಕ್ತಕಣಗಳು, ೧೦-೧೨ ಮೈಕ್ರಾನ್ ನಷ್ಟಿದ್ದು, ದೇಹಕ್ಕೆ ಅಲರ್ಜಿಯಾಗುವುದನ್ನು ತಪ್ಪಿಸಲು ಹೋರಾಟ ನಡೆಸುತ್ತವೆ. ಇವುಗಳಲ್ಲಿ ಹಿಸ್ಟಮಿನ್ ದಂಡಿಯಾಗಿದೆ. ಚರ್ಮದ ಅಲರ್ಜಿ, ಹಾಗೂ ಅಸ್ತಮಾ ಮುಂತಾದ ಶ್ವಾಸಕೋಶದ ಸೋಂಕಿನಲ್ಲಿ ಇವುಗಳ ಸಂಖ್ಯೆ ವೃದ್ಧಿಸುವುದು. ಬೆಸೋಫಿಲ್, ೮-೧೦ ಮೈಕ್ರಾನ್ಸ್, ಹಿಸ್ಟಮಿನ್ ಮತ್ತು ಹಿಪಾರಿನ್ ಗಳನ್ನು ಹೊಂದಿದೆ. ರಕ್ತನಾಳದೊಳಗೆ ಹೆಪ್ಪುಗಟ್ಟದಂತೆ ಇವು ಜಾಗ್ರತೆವಹಿಸುತ್ತವೆ. ದೇಹದ ವಿಷಕ್ರಿಮಿಗಳನ್ನು ನಾಶಮಾಡಲು, ಮಾನೋಸೈಟ್ ಗಳು ಸಹಾಯಮಾಡುತ್ತವೆ.

ಸುಮಾರು ೭೦ ಕಿ. ತೂಗುವ ಒಬ್ಬ ಸಾಮಾನ್ಯ ವ್ಯಕ್ತಿಯಲ್ಲಿ ಸುಮಾರು ೫ ಲೀಟರ್ ನಷ್ಟು ರಕ್ತವಿರುತ್ತದೆ. (ಒಟ್ಟುತೂಕದ ಶೇ. ೯%) ಎಲುಬಿನ ಮಜ್ಜೆ ರಕ್ತತಯಾರಿಸುವ ಕಾರ್ಖಾನೆ. ಇದು ದೇಹದ ಮೂಳೆಯೊಳಗಿನ ಟೊಳ್ಳುಭಾಗದಲ್ಲಿ ಅಡಗಿ ಕುಳಿತಿರುತ್ತದೆ. ಹುಟ್ಟುವಾಗ ಸುಮಾರು ೭೦ ಮಿ. ಲೀಟರ್ ತೂಗುವ ಮಜ್ಜೆ, ವಯಸ್ಕರಲ್ಲಿ ಸುಮಾರು, ೪ ಲೀಟರ್ ನಷ್ಟಾಗುತ್ತದೆ.

ಮಜ್ಜೆಯಲ್ಲಿನ ಎರಡು ವಿಧಗಳು

1.ಕೆಂಪುಮಜ್ಜೆ

ಇಲ್ಲಿ ಕೆಂಪುರಕ್ತಕಣಗಳು ತಯಾರಾಗುತ್ತವೆ. ಭ್ರೂಣಾವಸ್ಥೆಯಲ್ಲಿ ಎಲ್ಲಾಮೂಳೆಗಳೂ ಕೆಂಪು ಮಜ್ಜೆಯನ್ನು ಹೊಂದಿದ್ದು, ವಯಸ್ಸಾದಂತೆ ಕಡಿಮೆಯಾಗುತ್ತಾ ಹೋಗುತ್ತವೆ. ಕಾಲಿನ ಉದ್ದನೆಯ ಮೂಳೆಗಳತುದಿಯಲ್ಲಿ, ಎದೆ ಮೂಳೆಗಳಲ್ಲಿ, ಪಕ್ಕೆಲುಬಿನ ಮೂಳೆಗಳಲ್ಲಿ, ತಲೆಬುರುದೆಮೂಳೆಗಳಲ್ಲಿ, ಹಾಗೂ ಪೃಷ್ಯದ ಮೂಳೆಗಳಲ್ಲಿಮಾತ್ರ ಕಾಣಸಿಗುತ್ತವೆ.
ಉಳಿದವು ಹಳದಿ ಮಜ್ಜೆಯಾಗಿ ಮಾರ್ಪಾಟಾಗಿ ಕೆಲಸಕ್ಕೆ ಬಾರದಂತಾಗುತ್ತವೆ. ೭೦ ನೆಯ ವಯಸ್ಸಿನಲ್ಲಿ ಸುಮಾರು ೭೦ ರಿಂದ ೮೦ ರಷ್ಟು ಭಾಗ ಹಳದಿ ಮಜ್ಜೆಯಾಗಿ, ರಕ್ತ ತಯಾರಿಕೆ ಕುಂಟುತ್ತಾ ಸಾಗುತ್ತದೆ.

2.ಹಳದಿಮಜ್ಜೆ

ಮೂಳೆಗಳೆ ಕೆಂಪು ಮಜ್ಜೆಯಿಂದಾಗಿ, ಮೂತ್ರಪಿಂಡ ತಯಾರಿಸುವ, ಎರಿತ್ರೋ ಪಾಯಿಟಿನ್ ಎಂಬಹಾರ್ಮೋನ್ ನ ಉತ್ತೇಜನದಿಂದ, ಉತ್ಪತ್ತಿಯಾಗುವ ಕೆಂಪು ರಕ್ತ ಕಣಗಳು ಕೆಂಪಾಗಿ ಕಾಣಲು ಅದರಲ್ಲಿ ಹುದುಗಿಕೊಂಡಿರುವ ಹಿಮೋಗ್ಲೋಬಿನ್ ಕಾರಣ. ಕೆಂಪುರಕ್ತ ಕಣಗಳು ಸುಮಾರು ೪ ತಿಂಗಳು ಬದುಕುತ್ತವೆ.
ಹಿಮೋಗ್ಲೋಬಿನ್ ೯೬%, ಗ್ಲೋಬಿನ್ ಎಂಬ ಪ್ರೋಟೀನ್ ನಿಂದ ಆಗಿದ್ದು, ಉಳಿದ ೪% ಹೀಮ್ ಎಂಬ ಕಬ್ಬಿಣದಂಶದ ಜೊತೆ ಸೇರಿಕೊಂಡಿದೆ. ಈ ಬಣ್ಣಕ ಆಮ್ಲಜನಕದ ಜೊತೆಗೆ ಬಹುಸುಲಭವಾಗಿ ಬೆರೆತು, ಅಷ್ಟೇ ಸುಲಭವಾಗಿ ಬಿಟ್ಟುಕೊಡುವ ಸ್ವಭಾವ ಹೊಂದಿದೆ.
೧೦೦ ಮಿ. ಲೀಟರ್ ನೀರು, ಒಂದು ಮಿಲಿಲೀಟರ್ ನ ಮೂರನೆಯ ಒಂದು ಭಾಗದಷ್ಟು ಆಮ್ಲಜನಕವನ್ನು ಹೀರಿದರೆ, ಹಿಮಾಗ್ಲೋಬಿನ್ ೨೦ ಮಿಲ್. ಲೀಟರ್ ನಷ್ಟು, ಹೀರುವ ಶಕ್ತಿ ಪಡೆದಿದೆ. ಈ ಗುಣದಿಂದಾಗಿಯೇ ಮಾನವದೇಹಕ್ಕೆ ಅತ್ಯವಶ್ಯಕವಾದ ಆಮ್ಲಜನಕವನ್ನು ದೇಹದ ಎಲ್ಲಾ ಭಾಗಗಳಿಗೂ ತಲುಪಿಸುವ ವಾಹನದಂತೆ ಕಾರ್ಯನಿರ್ವಹಿಸುತ್ತದೆ.

ರಕ್ತಹೀನತೆಯ ಸಾಮಾನ್ಯ ಲಕ್ಶಣಗಳು

ದೇಹದಲ್ಲಿನ ರಕ್ತ ಕಣಗಳು
ರಕ್ತಹೀನತೆ

ಆಯಾಸ, ನಿರುತ್ಸಾಹ, ಸ್ವಲ್ಪಕೆಲಸಮಾಡಿದರೂ ಏದುಸಿರು ಬರುವುದು.
ಎದೆಬಡಿತ ಹೆಚ್ಚಾಗಿ, ದಬ-ದಬಗುಟ್ಟುವುದು
ಹಸಿವು ಮಾಯವಾಗಿ, ತಲೆಸುತ್ತುವುದು.
ಕಣ್ಣು ಮಂಜಾಗುವುದು
ನಿದ್ರೆಬಾರದೆ ಕಾಲುಗಳು ಪದೇ ಪದೇ ಜೋಮುಹಿಡಿಯುವುದು.
ಕಾಲುಗಳು ಊದಿಕೊಂಡು, ಹೃದಯ ದೊಡ್ಡದಾಗಿ ಸಾವು ಸಂಭವಿಸುವ ಅಪಾಯವಿದೆ.
ಬಾಯಿನ ಮೂಲೆಗಳು ಸೀಳಿಕೊಳ್ಳುವುದು. ಬಾಯಿಹುಣ್ಣಾಗುವುದು.
ಕೈಕಾಲಿನ ಉಗುರುಗಳು ಚಮಚದಂತೆ ಗುಳಿಬೀಳುವುದು.
ಪೈಕ, ಎನ್ನುವ ವಿಚಿತ್ರ ಬಯಕೆಯಾಗುವುದು. ಇಲ್ಲಿ ರೋಗಿ, ಇದ್ದಿಲು, ಮಣ್ಣು, ಗೋಡೆಯ ಸುಣ್ಣ ಇಲ್ಲವೇ ಒಂದೇ ಬಗೆಯ ತರಕಾರಿಗಳನ್ನು ಮಿತಿಮೀರಿತಿನ್ನುತ್ತಲೇ ಇರುವುದು. ಸಾಮನ್ಯವಾದ ಕುರುಹುಗಳು.

ರಕ್ತದಲ್ಲಿ ಹಿಮಾಗ್ಲೋಬಿನ್ ಅಂಶ, ೧೮ ಗ್ರಾಮ್ ಮೀರಿದರೂ, ಅದು ದೇಹಕ್ಕೆ ಒಳ್ಳೆಯದಲ್ಲ. ಅಪಾಯಕಾರಿ. ಈಸ್ಥಿತಿಯನ್ನು “ಪಾಲಿಸೈಥೆಮಿಯ ವೀರ” ಎನ್ನುತ್ತೇವೆ. ಈ ಕೊರತೆ ಸಾಮಾನ್ಯವಾಗಿ, ೪೦ ವರ್ಷದ ಮೇಲಿನ ಪ್ರಾಯದ ಜನರಲ್ಲಿ ಕಾಣಿಸಿಕೊಳ್ಳುವುದು ಸ್ವಾಭಾವಿಕ.

ಇದರ ಲಕ್ಷಣಗಳು
ನಿರುತ್ಸಾಹ,
ಏಕಾಗ್ರತೆಯ ಕೊರತೆ,
ತಲೆನೋವು, ತಲೆಸುತ್ತು,
ಜ್ಞಾನ ತಪ್ಪುವುದು,
ಮೈಕಡಿತ,
ಅಜೀರ್ಣ,
ರಕ್ತನಾಳಗಳತೊಂದರೆಯಿಂದಾಗಿ, ಕಾಲುಗಳು ಅನೇಕಬಾರಿ, ಜೋಮುಹಿಡಿಯುವುದು, ಇವೇ ಮುಂತಾದ ರೋಗಲಕ್ಷಣಗಳು ತಲೆದೋರುತ್ತವೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಅಮೀಬಾ

ಒಂದೇ ಜೀವಕೋಶ ಹೊಂದಿರುವ ಪ್ರಾಣಿ ಅಮೀಬಾ

ಪೈಠಣಿ ಸೀರೆ

ಪುರಾತನ ಇತಿಹಾಸ ಹೊಂದಿರುವ ಪೈಠಣಿ ಸೀರೆ