in ,

ಶುಭ ಕಾರ್ಯಗಳಿಂದ ಹಿಡಿದು ಆರೋಗ್ಯದಲ್ಲಿ ಕೂಡ ವೀಳ್ಯದೆಲೆ ಒಳ್ಳೆಯದು

ಆರೋಗ್ಯದಲ್ಲಿ ಕೂಡ ವೀಳ್ಯದೆಲೆ ಒಳ್ಳೆಯದು
ಆರೋಗ್ಯದಲ್ಲಿ ಕೂಡ ವೀಳ್ಯದೆಲೆ ಒಳ್ಳೆಯದು

ವೀಳ್ಯದೆಲೆ ಪಾಚಿ ಹಸುರಿನ, ತೆಳುವಿನ, ತಣ್ಣಗಿನ,ರಸಭರಿತವಾದ ಒಂದು ಎಲೆ. ಅಡಿಕೆ ಮತ್ತು ಸುಣ್ಣದ ಸಾಂಗತ್ಯದಿಂದ ತಾಂಬೂಲವೆಂದು ಕರೆಯಲ್ಪಡುತ್ತದೆ. ಆಸ್ಟೆಯೋಪೋರೋಸಿಸ್ ಎಂಬ ಮೂಳೆ ಸಂಬಂಧಿ ರೋಗಕ್ಕೆ ವೀಳ್ಯದೆಲೆ ಮದ್ದು. ವೀಳ್ಯದ ರಸ ಸುಣ್ಣದಲ್ಲಿರುವ ಕ್ಯಾಲ್ಶಿಯಮ್ ಅಂಶಕ್ಕೆ ಬೆರೆತು ದೇಹದಲ್ಲಿ ಬಹುಬೇಗ ಹರಡಲ್ಪಡುವುದೇ ಇದಕ್ಕೆ ಕಾರಣ. 

ಚಿಗುರು ವೀಳ್ಯದೆಲೆ, ವಾತಹರ, ಉದರ ವಾಯುಹರ ಮತ್ತು ಉತ್ತೇಜನಕಾರಿ. ಇದು ಕಾಮೋತ್ತೇಜಕವಾಗಿದ್ದು ಸೋಂಕನ್ನು ತಡೆಗಟ್ಟುವ ಗುಣವನ್ನೂ ಹೊಂದಿದೆ. ಸಣ್ಣ ಮಕ್ಕಳಲ್ಲಿ ಉಸಿರಾಟದ ತೊಂದರೆಯಾದಾಗ ಎಣ್ಣೆ ಸವರಿ, ಬಾಣಲೆಯಲ್ಲಿ ಬೆಚ್ಚಗೆ ಮಾಡಿದ ವೀಳ್ಯದೆಲೆಯನ್ನು ಎದೆಯ ಮೇಲಿಡುವುದು ಪ್ರಯೋಜನಕಾರಿ.

ವೀಳ್ಯೆದೆಲೆಗೆ ಭಾರತೀಯ ಸಂಪ್ರದಾಯದಲ್ಲಿ ಅತಿ ಹೆಚ್ಚಿನ ಮಹತ್ವವಿದೆ. ಶುಭ ಕಾರ್ಯಗಳಿಂದ ಹಿಡಿದು ಎಲ್ಲಾ ರೀತಿಯ ಸಮಾರಂಭಗಳಲ್ಲೂ ವೀಳ್ಯದೆಲೆ ಬಳಕೆ ಕಡ್ಡಾಯವಾಗಿ ಇರುತ್ತದೆ. ದೇವರ ಪೂಜೆಯ ಜೊತೆಗೆ ತಾಂಬೂಲಕ್ಕೂ ವೀಳ್ಯದೆಲೆಯನ್ನು ಬಳಸುತ್ತೇವೆ. ಅಡಿಕೆ ಸುಣ್ಣ ಹಾಕಿ ತಿನ್ನುವ ವೀಳ್ಯದೆಲೆಯಿಂದ ಅತಿ ಹೆಚ್ಚಿನ ಉಪಯೋಗಗಳು ದೊರೆಯುತ್ತವೆ.

ಶುಭ ಕಾರ್ಯಗಳಿಂದ ಹಿಡಿದು ಆರೋಗ್ಯದಲ್ಲಿ ಕೂಡ ವೀಳ್ಯದೆಲೆ ಒಳ್ಳೆಯದು
ತಾಂಬೂಲದಲ್ಲಿ ವೀಳ್ಯದೆಲೆ

ವೀಳ್ಯದೆಲೆಯಿಂದ ಆನೇಕ ರೀತಿಯ ಲಾಭ ಪಡೆಯಿರಿ :

*ವೀಳ್ಯದೆಲೆ ಜೀರ್ಣಶಕ್ತಿ ಹೆಚ್ಚಿಸಿ, ಧ್ವನಿ ಸರಿಪಡಿಸಿ, ಗ್ಯಾಸ್ಟ್ರಿಕ್ ಟ್ರಬಲ್ ನ್ನು ಬಹುಮಟ್ಟಿಗೆ ಗುಣಪಡಿಸುತ್ತದೆ. ಮಕ್ಕಳಲ್ಲಿನ ಕೆಮ್ಮು ಮತ್ತು ಅಜೀರ್ಣಕ್ಕೆ ಈ ಎಲೆಯ ರಸ ಉಪಯೋಗ.

*ವೀಳ್ಯದೆಲೆಯನ್ನು ಕಾವಲಿಯ ಮೇಲೆ ಬೆಚ್ಚಗೆ ಮಾಡಿ, ಅದಕ್ಕೆ ಕರ್ಪೂರ ಬೆರೆಸಿದ ಕೊಬ್ಬರಿ ಎಣ್ಣೆಯನ್ನು ಲೇಪಿಸಿ, ಹಣೆಗೆ ಶಾಖ ನೀಡಿದರೆ ತಲೆನೋವು ಪರಿಹಾರವಾಗುತ್ತದೆ.

*ವೀಳ್ಯದೆಲೆಯ ರಸದಲ್ಲಿ ಮಗುವಿನ ವಯಸ್ಸಿಗೆ ತಕ್ಕಂತೆ ಗೋರೋಚನವನ್ನು ಬೆರೆಸಿ ನೀಡಿದರೆ ಮಕ್ಕಳ ಜ್ವರ, ನೆಗಡಿ, ಕೆಮ್ಮು ಪರಿಹಾರವಾಗುತ್ತದೆ.ಅಥವಾ ಸೊಂಟನೋವು ಹಾಗೂ ಸೊಂಟದ ಭಾಗದಿಂದ ಹೊಟ್ಟೆಯನ್ನು ಆವರಿಸಿ ಕಾಲುಗಳಿಗೆ ಹಬ್ಬುವಂಥ ನೋವು ಉಂಟಾದರೆ ತಕ್ಷಣ ತಜ್ಞ ವೈದ್ಯರಿಂದ ತಪಾಸಿಸುವುದು ಅಗತ್ಯ. ಇದರಿಂದ ಅವಧಿಪೂರ್ವ ರಕ್ತಸ್ರಾವವನ್ನು ನಿಲ್ಲಿಸಿ, ಗರ್ಭಸ್ರಾವ ಅಥವಾ ಗರ್ಭಪಾತವನ್ನು ತಪ್ಪಿಸಬಹುದು.

*ವೀಳ್ಯದೆಲೆ ಅಲ್ಲಿ ಆಯುರ್ವೇದದ ಅಂಶಗಳು ಅಡಗಿವೆ ಇದರಲ್ಲಿ ಇರುವ ಔಷಧಿಯ ಗುಣಗಳನ್ನು ನಾವು ತಿಳಿದು ಕೊಳ್ಳಲೆ ಬೇಕು. ವೀಳ್ಯದೆಲೆ ಅನ್ನು ಚೆನ್ನಾಗಿ ಅರೆದು ಅದರ ರಸವನ್ನು ತೆಗೆದು ಕೊಂಡು ಅದಕ್ಕೆ ಸ್ವಲ್ಪ ಜೇನು ತುಪ್ಪ ಸೇರಿಸಿ ಮಕ್ಕಳಿಗೆ ಕುಡಿಸಿದ ರೆ ಎಂತಹ ಕೆಮ್ಮು. ಕಫ ಇದ್ದರೂ ಎಲ್ಲವೂ ದೂರ ಆಗುತ್ತದೆ. ಹಾಗೆಯೇ ಮಕ್ಕಳಿಗೆ ದೃಷ್ಟಿ ಆಗಿದ್ದಾಗ ವೀಳ್ಯದೆಲೆ ಅಲ್ಲಿ ಮೂರು ತೂತು ಮಾಡಿ ಮಕ್ಕಳಿಗೆ ನಿವಾಳಿಸಿ ಹೊರಗೆ ಎಸೆಯುತ್ತಾರೆ ಆಗ ಮಕ್ಕಳಿಗೆ ಯಾವುದೇ ರೀತಿಯ ದೃಷ್ಟಿ ಆಗಿದ್ದರು ಎಲ್ಲವೂ ಹೋಗುತ್ತದೆ. ಹಾಗೆಯೇ ಊಟ ಅದ ಮೇಲೆ ವಿಲ್ಯೆದೇಳೆ ಅಡಿಕೆ ಹಾಕಿಕೊಳ್ಳುವುದರಿಂದ ನಾವು ಸೇವಿಸಿದ ಆಹಾರ ಸುಲಭವಾಗಿ ಜೀರ್ಣ ಆಗುತ್ತದೆ.

*ಪುಟ್ಟ ಮಕ್ಕಳಲ್ಲಿ ಹೊಟ್ಟೆ ಉಬ್ಬರ ಉಂಟಾಗಿ ಅಳುತ್ತಿದ್ದರೆ, ವೀಳ್ಯದೆಲೆಗೆ ಹರಳೆಣ್ಣೆ ಸವರಿ ಬೆಚ್ಚಗೆ ಮಾಡಿ ಅದರಿಂದ ಮಗುವಿನ ಹೊಟ್ಟೆಗೆ ಶಾಖ ನೀಡಿದರೆ ಹೊಟ್ಟೆನೋವು, ಹೊಟ್ಟೆ ಉಬ್ಬರ ಗುಣವಾಗುತ್ತದೆ.

*ಒಂದು ಚಮಚದಷ್ಟು ವೀಳ್ಯದೆಲೆಯ ರಸವನ್ನು ಮಕ್ಕಳಿಗೆ ಕೊಡುವುದರಿಂದ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸಬಹುದು. ವೀಳ್ಯದೆಲೆಯನ್ನು ಎಳ್ಳೆಣ್ಣೆಯಲ್ಲಿ ನೆನೆಸಿ ಸ್ವಲ್ಪ ಬಿಸಿ ಮಾಡಿ ಮಕ್ಕಳ ಎದೆ ಮೇಲೆ ಉಜ್ಜಿದರೆ ಅಯಾಸ, ಕೆಮ್ಮಿನಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ.

*ಕಾಲರಾ ರೋಗದಲ್ಲಿ ಉಂಟಾಗುವ ತೀವ್ರತಮ ಮೀನಖಂಡಗಳ ನೋವು ಗುಣಮುಖವಾಗಲು ವೀಳ್ಯದೆಲೆಗೆ ಬೇವಿನ ಎಣ್ಣೆ ಸವರಿ ಜಗಿದು ರಸ ನುಂಗಬೇಕು. ವೀಳ್ಯದೆಲೆಯ ರಸದಲ್ಲಿ ಕರ್ಪೂರ ಬೆರೆಸಿ ಕಾಲುಗಳಿಗೆ ಮಾಲೀಶು ಮಾಡಬೇಕು.

*ನಿಯಮಿತವಾಗಿ ವೀಳ್ಯದೆಲೆ ಸೇವಿಸುತ್ತಾ ಬಂದರೆ ಮಧುಮೇಹದ ಸಮಸ್ಯೆ ಕಡಿಮೆ ಆಗುತ್ತದೆ. ವೀಳ್ಯದೆಲೆಯ ರಸದ ಜೊತೆಗೆ ಜೇನು ತುಪ್ಪ ಸೇರಿಸಿ ಕುಡಿದರೆ ನರಗಳ ದೌರ್ಬಲ್ಯ ಕಡಿಮೆ ಆಗುತ್ತದೆ ಜೊತೆಗೆ ಮೂಳೆಗಳು ಗಟ್ಟಿ ಆಗುತ್ತದೆ. ವೀಳ್ಯದೆಲೆಯ ರಸದ ಜೊತೆಗೆ ಹಾಲನ್ನು ಸೇರಿಸಿ ಕುಡಿಯುತ್ತಾ ಬಂದರೆ ಮೂಲವ್ಯಾಧಿ ಸಮಸ್ಯೆಗಳು ದೂರ ಆಗುತ್ತದೆ.

*2 ಎಳೆಯ ವೀಳ್ಯದೆಲೆಯಲ್ಲಿ ಅಡಿಕೆಯನ್ನಿಟ್ಟು , ಕಾಚಿನ ಹುಡಿ ಬೆರೆಸಿ ಜಗಿಯುತ್ತಿದ್ದರೆ ವಸಡಿನಲ್ಲಿ ಉಂಟಾಗುವ ರಕ್ತಸ್ರಾವ ನಿವಾರಣೆಯಾಗುತ್ತದೆ.

*2 ಕಪ್‌ ಕೊಬ್ಬರಿ ಎಣ್ಣೆಗೆ ಅರ್ಧ ಕಪ್‌ ವೀಳ್ಯದೆಲೆಯ ರಸ ಮತ್ತು ಅರ್ಧ ಕಪ್‌ ಒಂದೆಲಗದ ರಸ ಬೆರೆಸಿ ಚೆನ್ನಾಗಿ ಕುದಿಸಿ ನಿತ್ಯ ತಲೆಯ ಕೂದಲಿಗೆ ಹಚ್ಚಿ ಮಾಲೀಶು ಮಾಡಬೇಕು. ಇದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ. ಹೊಟ್ಟು ಉದುರುವುದು, ಕೂದಲು ಉದುರುವುದು ನಿವಾರಣೆಯಾಗುತ್ತದೆ.

*ವೀಳ್ಯದೆಲೆಯನ್ನು ಅರೆದು ತೆಗೆದ ರಸವನ್ನು ಗಾಯಗಳಿಗೆ ಹಚ್ಚಿದರೆ ಗಾಯಗಳು ಶೀಘ್ರ ಗುಣವಾಗುತ್ತದೆ.

ಶುಭ ಕಾರ್ಯಗಳಿಂದ ಹಿಡಿದು ಆರೋಗ್ಯದಲ್ಲಿ ಕೂಡ ವೀಳ್ಯದೆಲೆ ಒಳ್ಳೆಯದು
ಎಲೆ ಅಡಿಕೆ ತಟ್ಟೆ

*ವೀಳ್ಯದೆಲೆಗೆ ಲವಂಗವನ್ನು ಸೇರಿಸಿ ತಿನ್ನುವುದರಿಂದ ಗಂಟಲು ಕೆರೆತ, ಒಣ ಕೆಮ್ಮು ಹೊಟ್ಟೆ ಉಬ್ಬರ ಎಲ್ಲವೂ ದೂರ ಆಗುತ್ತದೆ. ಗರ್ಭಿಣಿ ಮಹಿಳೆಯರು ವಾಕರಿಕೆ, ವಾಂತಿ ಬಿಕ್ಕಳಿಕೆ ಬರುವ ಸಮಯದಲ್ಲಿ ವೀಳ್ಯದೆಲೆಗೆ ಸ್ವಲ್ಪ ಅಡಿಕೆಯ ಚೂರನ್ನು ಸೇರಿಸಿ ಅದಕ್ಕೆ ಏಲಕ್ಕಿ ಸೇರಿಸಿ ತಿಂದರೆ ಸಮಸ್ಯೆ ಗುಣ ಆಗುತ್ತದೆ.

*ಅಸ್ತಮಾ, ಕೆಮ್ಮು, ಕಫ‌ದಿಂದ ಬಳಲುವವರು, ವೀಳ್ಯದೆಲೆಯ ರಸ, ಬಿಳಿ ಈರುಳ್ಳಿಯ ರಸ ಹಾಗೂ ಜೇನುತುಪ್ಪ ಬೆರೆಸಿ, ಅದರಲ್ಲಿ ಶುದ್ಧ ಇಂಗನ್ನು ಕದಡಿ ದಿನಕ್ಕೆ 3-4 ಬಾರಿ ಸೇವಿಸಿದರೆ ತುಂಬಾ ಪರಿಣಾಮಕಾರಿ.

*ಮೊಡವೆ, ಕಜ್ಜಿತುರಿ ಈ ರೀತಿಯ ಚರ್ಮದ ಸಮಸ್ಯೆಗಳು ಇದ್ದರೆ ಅದಕ್ಕೆ ವಿಲ್ಯೆದೆಳೆ ರಸ ಮತ್ತು ತುಳಸಿ ರಸವನ್ನು ಮಿಶ್ರಣ ಮಾಡಿ ಹಚ್ಚಿಕೊಳ್ಳಬೇಕು. ಸ್ವಲ್ಪ ಹರಳೆಣ್ಣೆ ತೆಗೆದುಕೊಂಡು ಅದಕ್ಕೆ ವಿಲ್ಯೆದೆಲೆ ಯನ್ನು ಸೇರಿಸಿ ಚೆನ್ನಾಗಿ ಕುದಿಸಿ ಅದನ್ನು ಕೂದಲಿಗೆ ಹಚ್ಚಿಕೊಂಡರೆ ಬಿಳಿ ಕೂದಲು ಕಪ್ಪು ಆಗುತ್ತದೆ.

*ಒಂದು ವೀಳ್ಯದೆಲೆ, ಸ್ವಲ್ಪ ತುಳಸಿ ಹಾಗೂ ಒಂದು ಲವಂಗವನ್ನು ಅರೆದು ದಿನಕ್ಕೆ 2 ಬಾರಿ ಸೇವಿಸಿದರೆ ಕೆಮ್ಮು ಕಡಿಮೆಯಾಗುವುದು.

*ವೀಳ್ಯದೆಲೆ ‘ಕೊಲೆಸ್ಟ್ರಾಲ್’ಮತ್ತು ಗಂಟಲಿನಲ್ಲಿನ ಅಂಟು ಕಫವನ್ನು ತೆಗೆದುಹಾಕುತ್ತದೆ. ಅನ್ನಜೀರ್ಣವಾಗಲು ಬೇಕಾಗುವ ನಾರುಮಯ ಹಾಗೂ ಗೆರೆಗಳಿರುವ ಪದಾರ್ಥವು ಈ ಎಲೆಯಿಂದ ಸಿಗುತ್ತದೆ. ಎಲೆಯಲ್ಲಿನ ಕ್ಷಾರತನವು ಜಂತುಗಳನ್ನು ನಾಶಪಡಿಸುತ್ತದೆ.

*ವೀಳ್ಯದ ಎಲೆಗಳನ್ನು ಕತ್ತರಿಸಿ ನೀರಿನಲ್ಲಿ ಹಾಕಿ ಕುದಿಸಿ, ಬಳಿಕ ಸೋಸಿ ಈ ಕಷಾಯಕ್ಕೆ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸಿದರೆ ವಸಡಿನ ನೋವು, ಊತ ಗುಣವಾಗುತ್ತದೆ.

*ವೀಳ್ಯದೆಲೆಯಲ್ಲಿ ಕಾಚು, ಲವಂಗ, ಪಚ್ಚ ಕರ್ಪೂರ ಬೆರೆಸಿ ಜಗಿದು ಸೇವಿಸಿದರೆ ಹಲ್ಲುನೋವು, ಬಾವು ಪರಿಹಾರವಾಗುತ್ತದೆ.

* ವೀಳ್ಯದೆಲೆಯಲ್ಲಿ ಲವಂಗ ಮತ್ತು ಕಲ್ಲುಪ್ಪು ಇರಿಸಿ ಮಡಚಿ, ಬಾಯಲ್ಲಿಟ್ಟು ರಸ ಹೀರುವುದರಿಂದ ಗಂಟಲು ಕೆರೆತ, ಒಣಕೆಮ್ಮು ಗಂಟಲು ನೋವು ಗುಣವಾಗುತ್ತದೆ.

*ಒಂದೆರೆಡು ಚಮಚ ವೀಳ್ಯದೆಲೆ ರಸಕ್ಕೆ ಸ್ವಲ್ಪ ಜೇನು ತುಪ್ಪ ಬೆರೆಸಿ ದಿನಕ್ಕೆ 3 ಬಾರಿ ಸೇವಿಸುತ್ತಾ ಬಂದರೆ ಶ್ವಾಸಕೋಶಕ್ಕೆ ಸಂಬಂಧಿಸಿ ರೋಗಗಳು ನಿವಾರಣೆಯಾಗುವುದು.

*ಸಂದಿಗಳಲ್ಲಿ ಗಂಟು ನೋವು ಕಾಣಿಸಿಕೊಂಡಾಗ 2 ವೀಳ್ಯದೆಲೆಯನ್ನು ಸ್ವಲ್ಪ ಮಂದ ಜ್ವಾಲೆಯಲ್ಲಿ ಬಿಸಿ ಮಾಡಿ ಅದಕ್ಕೆ ಸ್ವಲ್ಪ ಸಾಸಿವೆ ಎಣ್ಣೆ ಹಚ್ಚಿ ಅದರೊಳಗೆ ಎಣ್ಣೆ ಮಿಶ್ರಿತ ಬಿಸಿ ಮಾಡಿದ ಅರಸಿನ ಹುಡಿಯನ್ನು ದಪ್ಪಗೆ ಸವರಿ ಒಂದರ ಮೇಲೆ ಒಂದು ಎಲೆಯನ್ನು ಮುಚ್ಚಿ ಗಂಟುಗಳ ಮೇಲಿಟ್ಟು ಶಾಖ ಕೊಡಿ. ಹೀಗೆ ಒಂದೆರಡು ಬಾರಿ ಬಿಸಿ ಮಾಡಿ ಪುನರಾವರ್ತಿಸಿ ಬಟ್ಟೆಯಿಂದ ಸುತ್ತಿ ಕಟ್ಟಿ. ಹೀಗೆ ಇದನ್ನು 4-5 ತಿಂಗಳು ಮಾಡುತ್ತಾ ಬಂದರೆ ಗಂಟುನೋವು ಕಡಿಮೆಯಾಗುವುದು.

*ವೀಳ್ಯದೆಲೆಯಲ್ಲಿ ಎಳೆಯ ಅಡಿಕೆಯ ಚೂರುಗಳನ್ನು ಇರಿಸಿ ಜಗಿದು ನುಂಗಬೇಕು. ಹೀಗೆ ದಿನಕ್ಕೆ 2-3 ಬಾರಿ ಸೇವಿಸಿದರೆ ಆಮಶಂಕೆ ನಿವಾರಣೆಯಾಗುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಅಂತರರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ

ಅಂತರರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ

ರಾಜ್ಯದಲ್ಲಿಯೇ ಎರಡನೇ ದೊಡ್ಡ ವನ್ಯಜೀವಿಧಾಮ

ದಾಂಡೇಲಿ : ರಾಜ್ಯದಲ್ಲಿಯೇ ಎರಡನೇ ದೊಡ್ಡ ವನ್ಯಜೀವಿಧಾಮ