ನಮ್ಮ ಆರೋಗ್ಯಕ್ಕೆ ಆದಷ್ಟೂ ಹಸಿ ತರಕಾರಿಗಳು ಒಳ್ಳೆಯದು. ಮನೆಯ ತೋಟದಲ್ಲಿ ತರಕಾರಿ ಬೆಳೆಯುವವರು ಅಡುಗೆಗೆ ಮುನ್ನವೇ ಅದನ್ನು ಗಿಡದಿಂದ ತೆಗೆದು ಬಳಸಬೇಕು. ಹಸಿರು ಸೊಪ್ಪುಗಳ ಸೇವನೆಯು ಆರೋಗ್ಯಕರ ಶರೀರವನ್ನು ನೀಡುತ್ತದೆ.
ಅತಿಯಾಗಿ ಮಸಾಲೆ ಇರುವಂತಹ ಆಹಾರಗಳನ್ನು ತಿನ್ನುವ ಬದಲು ದೇಹವನ್ನು ತಂಪಾಗಿ ಇಡುವತ್ತ ಗಮಹರಿಸಿದರೆ ತುಂಬಾ ಒಳ್ಳೆಯದು. ಹೊರಗಿನ ತಾಪಮಾನವನ್ನು ಹಿಡಿತದಲ್ಲಿ ಇಡಲು ನಮಗೆ ಸಾಧ್ಯವಾಗದೆ ಇದ್ದರೂ ದೇಹವನ್ನು ತಂಪಾಗಿಡುವಂತಹ ಕೆಲಸ ಮಾಡಬಹುದು.
ದಿನನಿತ್ಯ ಅಡುಗೆಗಳಲ್ಲಿ ಬಳಸುವ ಮತ್ತು ಮಾರುಕಟ್ಟೆಗಳಲ್ಲಿ ಸುಲಭವಾಗಿ ಸಿಗುವ ತರಕಾರಿಗ ಮತ್ತು ಸೊಪ್ಪುಗಳಿಂದಲೇ ಇಮ್ಯೂನಿಟಿಯನ್ನು ಹೆಚ್ಚಿಸಿಕೊಳ್ಳಬಹುದು. ವಿಟಮಿನ್ ಸಿ ಸತ್ವ ಹೆಚ್ಚಿರುವ ತರಕಾರಿ, ಹಣ್ಣು ಮತ್ತು ಸೊಪ್ಪು ಇಮ್ಯೂನಿಟಿಯನ್ನು ಹೆಚ್ಚಿಸುತ್ತದೆ.
ಕ್ಯಾರೆಟ್
ರಕ್ತವನ್ನು ಶುದ್ಧಿಗೊಳಿಸಿ ರೋಗಾಣುಗಳನ್ನು ನಾಶ ಮಾಡುತ್ತದೆ ಮತ್ತು ಕರುಳು, ಯಕೃತ್ತು ಮೊದಲಾದ ಜೀರ್ಣಾಂಗಗಳನ್ನು ಸದೃಢಗೊಳಿಸುತ್ತದೆ ಹಾಗೂ ದೃಷ್ಟಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಸಾಮಾನ್ಯವಾಗಿ ತರಕಾರಿಗಳಲ್ಲಿ ಕ್ಯಾರೆಟ್ ಪ್ರಥಮ ಸ್ಥಾನವನ್ನು ನೀಡಲಾಗಿದೆ. ಇದು ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಇದರಲ್ಲಿ ಕ್ಯಾಲಿಸಿಯಂ, ವಿಟಮಿನ್ ಕೆ, ವಿಟಮಿನ್ ಎ, ಕಬ್ಬಿನಾಂಶ, ಪೋಟ್ಯಾಷಿಯಮ್, ಮೇಗ್ನಿಷಿಯಮ್, ಮ್ಯಾಂಗನೀಸ್ ಮತ್ತು ಸತು ಇರುತ್ತದೆ.
ಟೊಮೆಟೊ
ಇದು ಒಂದು ಹಣ್ಣಾಗಿದ್ದರೂ ಹೆಚ್ಚಾಗಿ ತರಕಾರಿಯಾಗಿ ಬಳಕೆ ಮಾಡಲಾಗುತ್ತದೆ. ಟೊಮೆಟೊವನ್ನು ಭಾರತೀಯರು ಹೆಚ್ಚಿನ ಆಹಾರ ಕ್ರಮಗಳಲ್ಲಿ ಬಳಸುವರು. ಇದನ್ನು ಸಲಾಡ್, ಜ್ಯೂಸ್, ಖಾದ್ಯ ಮತ್ತು ಸಾಸ್ ರೂಪದಲ್ಲಿ ಸೇವನೆ ಮಾಡಬಹುದು. ಇದು ಬೇಸಗೆಯನ್ನು ತಂಪು ನೀಡುವುದು.
ಬೀಟ್‍ರೂಟ್
ಬೀಟ್‍ರೂಟ್‍ನಿಂದ ರೋಗನಿರೋಧಕ ಶಕ್ತಿ. ಕ್ಯಾರೆಟ್‍ನಂತೆ ಬೀಟ್‍ರೂಟ್ ಕೂಡ ಹೆಚ್ಚು ಪರಿಣಾಮಕಾರಿಯಾದ ತರಕಾರಿಯಾಗಿದೆ. ಇದರಲ್ಲಿ ಫಾಲಟೆ, ವಿಟಮಿನ್ ಸಿ, ಬೀಟೈನ್, ಮ್ಯಾಂಗನೀಸ್, ಪೊಟಾಶಿಯಂ, ಕಬ್ಬಿನಾಂಶ, ಕ್ಯಾಲ್ಸಿಯಂ, ತಾಮ್ರ ಮತ್ತು ವಿಟಮಿನ್ ಬಿ6 ಸೇರಿದಂತೆ ಅನೇಕ ಪೌಷ್ಠಿಕಾಂಶಗಳನ್ನು ಒಳಗೊಂಡಿದೆ.
ಬೆಂಡೆಕಾಯಿ
ಫಾಲೆಟ್, ವಿಟಮಿನ್ ಬಿ ಮತ್ತು ಸಿ ಹೆಚ್ಚಿರುವ ಈ ತರಕಾರಿ ರೋಗ ನಿರೋಧಕ ಶಕ್ತಿ ಹೆಚ್ಚಲು ಸಹಕಾರಿಯಾಗಿದೆ. ಇದು ಕೊಬ್ಬಿನ ಅಂಶ ಕಡಿಮೆ ಮಾಡುವುದು ಸೇರಿದಂತೆ ರಕ್ತಕಣಗಳನ್ನು ಅಧಿಕ ಪ್ರಮಾಣದಲ್ಲಿಉತ್ಪಾದಿಸುತ್ತದೆ. ಉರಿಯೂತ, ಅಸ್ತಮಾ ಶಮನಗೊಳಿಸುತ್ತದೆ ಮತ್ತು ದೇಹದಲ್ಲಿಇನ್ಸುಲಿನ್ ಉತ್ಪಾದಿಸುತ್ತದೆ.
ಸೋರೆಕಾಯಿ
ಸೋರೆಕಾಯಿಯು ದೇಹಕ್ಕೆ ತಂಪು ನೀಡುವಂತಹ ಪ್ರಮುಖ ತರಕಾರಿಯ ಪಟ್ಟಿಯಲ್ಲಿದೆ. ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳಿದ್ದು, ಒಳ್ಳೆಯ ರುಚಿ ಕೂಡ ಹೊಂದಿದೆ. ಇದನ್ನು ಹಲವಾರು ರೀತಿಯ ಖಾದ್ಯಗಳನ್ನಾಗಿ ಮಾಡಿಕೊಂಡು ಸೇವಿಸಲಾಗುತ್ತದೆ.ಅತ್ಯಧಿಕ ನೀರಿನಾಂಶವನ್ನು ಒಳಗೊಂಡಿರುವ ಸೋರೆಕಾಯಿಯು ಅತ್ಯಧಿಕ ಮಟ್ಟದ ಕ್ಯಾಲ್ಸಿಯಂ ಕೂಡ ಹೊಂದಿದೆ. ಇದು ಮೂಳೆಗಳಿಗೆ ಒಳ್ಳೆಯದು. ಹೊಟ್ಟೆಯ ಸಮಸ್ಯೆ, ಅಧಿಕ ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಇದು ಸಹಕಾರಿ.
ಬ್ರೊಕೊಲಿ
ಬ್ರೊಕೊಲಿಯು ಸಹ ಒಂದು ಉತ್ತಮ ಆಹಾರ ಪದಾರ್ಥವಾಗಿದೆ. ಇದ ಸಹ ಪ್ರೋಟೀನ್, ಫೈಬರ್, ಪೊಟ್ಯಾಸಿಯಮ್, ಮತ್ತು ವಿಟಮಿನ್ ಸಿ ಸೇರಿದಂತೆ ಅನೇಕ ಖನಿಜಾಂಶ ಮತ್ತು ಪೌಷ್ಠಿಕಾಂಶಗಳನ್ನು ಒಳಗೊಂಡಿದೆ. ನೂರು ಗ್ರಾಂ ಬ್ರೊಕೊಲಿಯಲ್ಲಿ 90 ಎಂಜಿ ವಿಟಮಿನ್ ಸಿ ಸತ್ವ ದೊರೆಯುತ್ತದೆ. ಇದನ್ನು ಸಹ ನಿಮ್ಮ ಆಹಾರದ ಕ್ರಮದಲ್ಲಿ ಸೇರಿಸಿಕೊಳ್ಳಬಹುದಾಗಿದೆ
ಕುಂಬಳಕಾಯಿ
ಕುಂಬಳಕಾಯಿಯಲ್ಲಿ ವಿಟಮಿನ್ ಎ ಸಮೃದ್ಧವಾಗಿದ್ದು, ಇದು ಪ್ರತಿರೋಧಕ ಶಕ್ತಿ ವೃದ್ಧಿಸಿ, ಕಾಯಿಲೆಗಳನ್ನು ದೂರವಿಡುವುದು. ಕುಂಬಳಕಾಯಿಯಲ್ಲಿ ಆಂಟಿಆಕ್ಸಿಡೆಂಟ್, ಬೆಟಾ ಕ್ಯಾರೋಟಿನ್ ಅಂಶವಿದ್ದು, ಇದು ಹೃದಯದ ಕಾಯಿಲೆ ದೂರ ಮಾಡುವುದು ಮತ್ತು ದೇಹದ ತಾಪಮಾನ ಕಾಪಾಡುವುದು.
ಸೌತೆಕಾಯಿ
ಸೌತೆಕಾಯಿಯಲ್ಲಿ ಅತ್ಯಧಿಕ ಪ್ರಮಾಣದ ನೀರಿನಾಂಶವಿದ್ದು, ಇದು ಬೇಸಗೆಗೆ ತುಂಬಾ ಒಳ್ಳೆಯದು. ಇದರೊಂದಿಗೆ ಅಧಿಕ ಮಟ್ಟದ ಆಂಟಿಆಕ್ಸಿಡೆಂಟ್, ವಿಟಮಿನ್ ಕೆ ಮತ್ತು ಸಿ ಇದೆ. ಶೇ.96ರಷ್ಟು ನೀರಿನಾಂಶವು ಇದರಲ್ಲಿದ್ದು, ದೇಹವನ್ನು ಹೈಡ್ರೇಟ್ ಆಗಿಡುವುದು.
ನುಗ್ಗೆ ಕಾಯಿ, ಸೊಪ್ಪು
ಹೆಚ್ಚು ಹೆಚ್ಚು ಹಸಿರಿನಿಂದ ಕೂಡಿರುವ ಪದಾರ್ಥಗಳನ್ನು ಸೇವಿಸುವುದರಿಂದ ವೈರಸ್ ವಿರುದ್ಧ ಹೋರಾಡಬಹುದಾಗಿದೆ. ನುಗ್ಗೆ ಮರವು ವಿಟಮಿನ್ ಮಾತ್ರೆಗಳಿಗಿಂತಲೂ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತದೆ. ಈ ನುಗ್ಗೆ ಸೊಪ್ಪಿನಲ್ಲಿ ಅಧಿಕವಾಗಿ ಸಿ ಜೀವಸತ್ವವಿರುತ್ತದೆ.ಉತ್ತಮ ಜೀರ್ಣ ಶಕ್ತಿ ವರ್ಧಕವಾಗಿರುವ ಈ ತರಕಾರಿಯ ಸೇವನೆಯಿಂದ ಯಾವುದೇ ನೋವು, ಚರ್ಮ ರೋಗ ಮತ್ತು ದಮ್ಮು ಶೀಘ್ರ ಶಮನವಾಗುತ್ತದೆ.
ಹಾಗಲಕಾಯಿ
ಹಾಗಲಕಾಯಿಯು ಹಲವಾರು ರೀತಿಯ ಪೋಷಕಾಂಶ ಮೌಲ್ಯಗಳನ್ನು ಹೊಂದಿದ್ದು, ಕಾಯಿಲೆಗಳನ್ನು ಕೂಡ ದೂರವಿಡುವ ಶಕ್ತಿಯು ಇದರಲ್ಲಿದೆ. ಹಾಗಲಕಾಯಿಯನ್ನು ಹೊಟ್ಟೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಬಳಕೆ ಮಾಡಬಹುದು. ಇದು ತುಂಬಾ ಕಹಿಯಾಗಿರುವ ಕಾರಣದಿಂದಾಗಿ ಹೆಚ್ಚಿನ ಜನರು ಇದನ್ನು ಇಷ್ಟಪಡುವುದಿಲ್ಲ. ಆದರೆ ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳಾಗಿರುವ ಕ್ಯಾಲ್ಸಿಯಂ, ವಿಟಮಿನ್ ಸಿ, ಕಬ್ಬಿಣಾಂಶ ಮತ್ತು ಪೊಟಾಶಿಯಂ ಇದೆ. ಇದು ಜೀರ್ಣಕ್ರಿಯೆಗೆ ಸಹಕಾರಿ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು. ಇದರಿಂದ ದೇಹವನ್ನು ತಂಪಾಗಿ ಇಡಬಹುದು.
ಹೂಕೋಸು
ಹೂಕೋಸಿನಲ್ಲಿ ಕಂಡು ಬರುವ ಪೋಷಕಾಂಶಗಳು ಅತ್ಯಂತ ಪ್ರಯೋಜನಕಾರಿಯಾಗಿವೆ. ಸೋಡಿಯಂ,ಪೊಟ್ಯಾಸಿಯಮ್, ಫೈಬರ್, ಕ್ಯಾಲ್ಸಿಯಣ, ಕಬ್ಬಿಣ, ವಿಟಮಿನ್ ಸಿ, ಮೆಗ್ನೀಶಿಯಂ ಸೇರಿದಂತೆ ಅನೇಕ ಪೋಷಕಾಂಶಗಳನ್ನು ಒಳಗೊಂಡಿದ್ದು ದೇಹದ ಆರೋಗ್ಯಕ್ಕೆ ಉತ್ತೇಜನ ನೀಡುತ್ತದೆ.
ಈರುಳ್ಳಿ
ಕ್ಯಾಲ್ಷಿಯಂ, ಸೋಡಿಯಂ, ಪೋಟಾಷಿಯಂ, ಸೆಲೆನಿಯಂ ಮತ್ತು ರಂಜಕಗಳಿರುವ ಇದರ ಸೇವನೆಯಿಂದ ದೇಹದ ಕ್ರಿಮಿಗಳು ನಾಶವಾಗಿ ಉದರದ ಹುಣ್ಣು ವಾಸಿಯಾಗುತ್ತದೆ. ಅಸ್ತಮಾ,ಅಲರ್ಜಿ, ನೆಗಡಿ ಮತ್ತು ಕಣ್ಣಿಗೆ ಸಂಬಂಧಿಸಿದ ತೊಂದರೆಗಳನ್ನು ಗುಣಪಡಿಸುತ್ತದೆ.
ಮೆಂತ್ಯೆ ಸೊಪ್ಪು
ಮೆಂತ್ಯೆ ಸೊಪ್ಪಿ ಆಯುರ್ವೇದದಲ್ಲಿ ವಿಶೇಷ ಸ್ಥಾನವಿದೆ. ಅನಾದಿ ಕಾಲದಿಂದಲೂ ನಮ್ಮ ಹಿರಿಯರು, ಪಂಡಿತರು ಮೆಂತ್ಯ ಎಲೆಗಳನ್ನು ಮಧುಮೇಹ, ಮಲಬದ್ಧತೆ ಮತ್ತು ಮೂತ್ರಪಿಂಡದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುತ್ತಿದ್ದಾರೆ. ಹೊಟ್ಟೆ ನೋವು, ಪಿತ್ತ, ಅಜೀರ್ಣ, ಗ್ಯಾಸ್ ಹಾಗೂ ತ್ವಚೆಯ ಸಮಸ್ಯೆ ಸೇರಿದಂತೆ ಇನ್ನೂ ಅನೇಕ ತೊಂದರೆಗಳಿಗೆ ಮೆಂತ್ಯೆ ಒಳ್ಳೆಯ ಮನೆ ಮದ್ದಾಗಿದೆ.ಪ್ರೋಟೀನ್, ಕೊಬ್ಬು, ಕ್ಯಾಲ್ಸಿಯಂ, ಸೋಡಿಯಂ, ಪೊಟ್ಯಾಸಿಯಮ್, ಕಬ್ಬಿಣ, ವಿಟಮಿನ್ ಬಿ6, ಮೆಗ್ನೀಸಿಯಮ್ ಸೇರಿದಂತೆ ಅನೇಕ ಜೀವಸತ್ವಗಳನ್ನು ಹೊಂದಿದೆ.
ಬಾಳೆದಿಂಡು
ಇದರ ಚಟ್ನಿ ಅಥವಾ ಪಲ್ಯ ಸೇವಿಸುವುದರಿಂದ ಶರೀರದ ವಿಷಕಾರಿ ವಸ್ತುಗಳು ಹೊರ ಹೋಗುತ್ತವೆ ಮತ್ತು ಪಿತ್ತಕೋಶದಲ್ಲಿಉಂಟಾಗುವ ಕಲ್ಲುಗಳು ಕರಗುತ್ತವೆ. ಇದರ ಇನ್ನೊಂದು ಮುಖ್ಯ ಉಪಯೋಗಗಳು ಏನೆಂದ್ರೆ, ಮೂತ್ರ ಪಿಂಡದಲ್ಲಿ ಉಂಟಾದ ಕಲ್ಲುಗಳ ರೀತಿಯ ಘನ ವಸ್ತುಗಳನ್ನು ಕರಗಿಸುವ ಅದ್ಬುತ ಶಕ್ತಿಯಿದೆ. ಹೇಗೆಂದರೆ ಬಾಳೆದಿಂಡಿನ ರಸದೊಂದಿಗೆ ಸುಣ್ಣವನ್ನು ಬೆರೆಸಿ ಕುಡಿಯುತ್ತಾ ಬಂದರೆ ಕಿಡ್ನಿಯಲ್ಲಿ ಉಂಟಾಗಿರುವ ಎಂತಹದೇ ಕಲ್ಲುಗಳಾದರೂ ಸಹ ಕರಗಿಹೋಗುತ್ತವೆ. ಅಂದರೆ ಕಿಡ್ನಿ ಕಲ್ಲುಗಳ ಸಮಸ್ಯೆಗೆ ಇದಕ್ಕಿಂತ ಔಷಧಿ ಬೇರೊಂದಿಲ್ಲ.
ದೊಣ್ಣೆ ಮೆಣಸು
ಕ್ಯಾಲ್ಸಿಕಂನಲ್ಲಿ ಪೈಥೋಕೆಮಿಕಲ್ ಅತ್ಯಧಿಕ ಪ್ರಮಾಣದಲ್ಲಿದ್ದು, ಇದು ಖಾರ ಮತ್ತು ವಿಶೇಷ ರುಚಿ ನೀಡುವುದು. ಈ ರಾಸಾಯನಿಕವು ಚಯಾಪಚಯ ಸುಧಾರಿಸುವುದು, ಜೀರ್ಣಕ್ರಿಯೆ ಉತ್ತಮಪಡಿಸುವುದು ಮತ್ತು ತೂಕ ಇಳಿಸಲು ಇದು ಸಹಕಾರಿ ಹಾಗೂ ನೋವು ನಿವಾರಿಸುವುದು. ಇದರಲ್ಲಿ ವಿಟಮಿನ್ ಗಳು ಮತ್ತು ಆಂಟಿಆಕ್ಸಿಡೆಂಟ್ ಗಳಿದ್ದು, ಇದು ಬೇಸಗೆಗೆ ಒಳ್ಳೆಯ ಆಹಾರವಾಗಿದೆ.
ಹಸಿರು ಬೀನ್ಸ್
ಹಸಿರು ಬೀನ್ಸ್ ನ್ನು ಭಾರತೀಯ ಅಡುಗೆಯಲ್ಲಿ ಹೆಚ್ಚಾಗಿ ಬಳಕೆ ಮಾಡುವರು. ಇದು ತುಂಬಾ ಜನಪ್ರಿಯ ತರಕಾರಿಯಾಗಿದ್ದು, ಹಲವಾರು ರೀತಿಯ ಆರೋಗ್ಯ ಗುಣಗಳನ್ನು ಹೊಂದಿದೆ ಮತ್ತು ತೂಕ ಇಳಿಸಲು ಇದು ಸಹಕಾರಿ. ಇದನ್ನು ವರ್ಷವಿಡಿ ಬೆಳೆಯುವ ಕಾರಣದಿಂದಾಗಿ ಇದು ಯಾವ ಸಮಯದಲ್ಲೂ ಲಭ್ಯವಿರುವುದು. ಎಳೆ ಹುರುಳಿಕಾಯಿಯನ್ನು ತಿನ್ನುವುದರಿಂದ ಯಕೃತ್ತಿನಲ್ಲಿಉದ್ಭವಿಸುವ ಅಧಿಕ ಉಷ್ಣತೆ ಕರಗಿ ಮೂಳೆ ಮತ್ತು ನರಗಳು ಸದೃಢವಾಗುತ್ತವೆ.
ಧನ್ಯವಾದಗಳು.
GIPHY App Key not set. Please check settings